Wednesday, August 31, 2016

ಹೆರಿಗೆ ನೋವೆಂಬ ಮಧುರ ಯಾತನೆ...

(ಈ ಜೀವಜಗತ್ತಿನಲ್ಲಿ ದೇವರು ಹೆಣ್ಣಿಗೆ ಮಾತ್ರ ಕೊಟ್ಟಿರುವ ಅಪರಿಚಿತ ಸುಖ ಅದು. ಬಾಡಿಗೆ ತಾಯ್ತನದ ವಿರುದ್ಧ ಕೇಂದ್ರ ನಿಷೇಧ ಹೇರುವುದರೊಂದಿಗೆ ಹೆಣ್ಣುಮಕ್ಕಳ ಅಪರೂಪದ ಐಡೆಂಟಿಟಿಯಾಗಿದ್ದ ತಾಯ್ತನದ ಹಕ್ಕು ರಕ್ಷಿಸಿದೆ.)

ಬಹುಷ: ಅದನ್ನು ಆಕೆ ಮಾತ್ರ ವಿವರಿಸಬಲ್ಲಳು. ಕೇಳುವಾಗ ಮತ್ತು ಆಡಿಕೊಳ್ಳುವಾಗ ಹೆರಿಗೆ ಅಂದರೆ `..ಅಯ್ಯಪ್ಪ ತುಂಬಾ ನೋವಾಗತ್ತಂತೆ..' ಎನ್ನುವ ತಾಯ್ತನದ ನೋವಿನ ಮಟ್ಟ, ಹೆಣ್ಣು ಸಾಮಾಜಿಕವಾಗಿ ಕೌಟುಂಬಿಕ ದೌರ್ಜನ್ಯದ ಅಡಿಯಲ್ಲಿ ಎದುರಿಸುವುದಕ್ಕೆ ಹೋಲಿಸಿದರೆ ಏನೂ ಅಲ್ಲ. ಅದನ್ನು ಆಕೆಯ ಮಾತಲ್ಲೇ ಹೇಳುವುದಾದರೆ, 
`.. ಇದ್ದಕ್ಕಿದ್ದಂತೆ ಜೀವ ಮೊಳೆಯುವ ಮತ್ತು ನನ್ನೊಳಗೊಂದು ಜೀವ ಹೊಸದಾಗಿ ಮಿಡಿಯುತ್ತಿದೆ ಎನ್ನುವ ಅಂಶ ಮನಸ್ಸಿಗೆ ತಾಕಿದಾಗೆಲ್ಲಾ ನನಗೇ ಗೊತ್ತಿಲ್ಲದಂತೆ ಎದೆ ಬಡಿತ ಏರುತ್ತಿತ್ತು. ಬಸ್ಸು ಪ್ರಯಾಣದ ತಿರುವಿನಲ್ಲಿ ಕಾರಿಕೊಂಡು, ದಿನವಿಡಿ ಅದೇ ವಾಸನೆಗೆ ಸಿಂಡರಿಸಿಕೊಳ್ಳುವುದಕ್ಕೂ, ದಿನಕ್ಕೆ ನಾಲ್ಕು ಬಾರಿ ದೇಹ ತನ್ನ ನೈಸರ್ಗಿಕ ಕ್ರಿಯೆಯಾಗಿ ಹೊರತಳ್ಳುತ್ತಾ ತನ್ನ ವ್ಯವಸ್ಥೆ ಬಲ ಪಡಿಸಿಕೊಳ್ಳುತ್ತಿದ್ದರೆ ಅಂತಹ ಯಾವ ಅಸಹ್ಯದ ಭಾವಕ್ಕೂ ಈಡಾಗದೆ ಇರುವುದು ಬಹುಶ: ತಾಯಿಯಾಗುತ್ತೇನೆನ್ನುವ ಅನೂಹ್ಯ ಅನುಭೂತಿಯಲ್ಲದೇ ಬೇರೇನಿದ್ದೀತು..?
ಮೊದಲ ಬಾರಿ ಮುಟ್ಟು ನಿಂತು ಹೋಗಿ ನನ್ನವ ಕೈ ಹಿಡಿದು ಮೆಟ್ಟಿಲು ಏರಲೂ ಬಿಡದೆ, ಅಧ್ಬುತ ಎನ್ನುವಂತೆ ನನ್ನ ಮುಖ ನೋಡುತ್ತಾ ತನ್ನ ಮಗುವಿಗಾಗಿ ಎದುರು ನಿಂತ ಅವನ ಕಣ್ಣಲ್ಲಿ ಜಗತ್ತಿನ ಯಾವ ಪುರುಷ ಪುಂಗವನಿಗೂ ಇಲ್ಲದ ಶಕ್ತಿ ನಿನಗೆ ಕೊಟ್ಟು ಬಿಟ್ಟಿದ್ದಾನೆ ದೇವರು.. ಅಬ್ಬಾ ಎಂದಾಗ ಅದರೆ ಪುಳಕವೇ ಬೇರೆ.
ತಿಂಗಳಾವಧಿಯಲ್ಲಿ ಏರತೊಡಗುವ ಭಾರ, ಅವ್ಯಾಹತವಾಗಿ ಯಾವ ಕೆಲಸ ಮಾಡಿದರೂ ಮಾಡತೊಡಗಿದರೂ ಮೊದಲ ಆದ್ಯತೆ ಹೊಟ್ಟೆಯೆಡೆಗೆ ನನಗರಿವಿಲ್ಲದೆ ಚಲಿಸಿಬಿಡುವ ಕೈ, ಮನಸ್ಸು ಮತ್ತು ದೇಹ ನನ್ನ ನಿಯಂತ್ರಣದ ಹೊರತಾಗಿ ತೋರುವ ರಿಫ್ಲೆಕ್ಸುಗಳನ್ನು ಬಹುಶ: ಜಗತ್ತಿನ ಇನ್ನಾವುದೇ ಕ್ರಿಯೆಯಲ್ಲೂ ದೇಹ ತೋರ್ಪಡಿಸಲಾರದು.  ಕೊಂಚ ಮಾತ್ರದ ದೈಹಿಕ ಬದಲಾವಣೆಯಲ್ಲೂ, ಪ್ರತಿ ಆಸರೆಯೂ ಹೊಟ್ಟೆಯ ಕಡೆಗೆ ಹೋಗುವ ಮೂಲಕ ಮನಸ್ಸಿನ ನಿಯಂತ್ರಣ ನಮ್ಮ ಹೊರತಾಗಿ ದೇಹ ತಾನೇ ತಾನಾಗಿ ಪಡೆದುಬಿಡುವ ಪರಿಯಿದೆಯಲ್ಲ, ಅದು ಬಹುಶ: ತಾಯ್ತನಕ್ಕೆ ಸಜ್ಜಾಗುತ್ತಿದ್ದಂತೆ ದೇಹಗಳಿಸಿಕೊಳ್ಳುವ ಅಧ್ಬುತ ನಿಯಂತ್ರಣ. ಬೆಳಿಗ್ಗೆ ಏಳುವ ಮೊದಲು ಹೊಟ್ಟೆಯ ಮೇಲೆ ಭಾರ ಬೀಳದಂತೆ ಮಗ್ಗಲು ನಿಧಾನಕ್ಕೆ ಬದಲಿಸಿ ಏಳುವ, ಬೀಸಿ ನೀರು ದೇಹದ ಮೇಲೆ ಹರಿಯುತ್ತಿದ್ದರೆ ಆಗಲೇ ಮಗುವಿನ ಮೇಲೆ ಸುರಿದಿತಾ ಎನ್ನುವಂತೆ ಅಡ್ಡ ಕೈಯಿಟ್ಟು ಮಾಡುವ ಸ್ನಾನ, ಇನ್ನೂ ಮೊಳಕೆಯಲ್ಲಿದ್ದರೂ ತಿಂಡಿಗೆ ಕೂರುವಾಗಲೂ ಅದೆಲ್ಲಿ ಬಿದ್ದುಗಿದ್ದು ಹೋದೀತಾ ಎನ್ನುವ ಅನೂಹ್ಯ ಸಂಭಾವ್ಯ ಅನುಭೂತಿಯಲ್ಲಿ ಗೊತ್ತಿಲ್ಲದೆ ಆ ಬಿಳಿ ಮಲ್ಲಿಗೆ ಮೊಗ್ಗಿನ ಆಧಾರಕ್ಕೆ ಕೈ ಆಸರೆ ಕೊಡುತ್ತಾ, ಆಕಸ್ಮಿಕವಾಗಿ ಅದರ ಮೊದಲ ಒದೆತಕ್ಕೆ ಕಾಲು ಒಳ ಬೀಸುತ್ತಿದ್ದಂತೆ `.. ಅಹ್..' ಎನ್ನುವ ಅನಿಯಂತ್ರಿತ ಮುಲುಗು ಕಣ್ಣರಳಿ ಹೊರಡುತ್ತಿದ್ದರೆ.. ಯಾವ ಸಂಕೋಚವಿಲ್ಲದೆ ಭಯಮಿಶ್ರಿತ ಸಣ್ಣ ಆಂದೋಳನೆಯಲ್ಲಿ ಹೊಟ್ಟೆಯನ್ನೊಮ್ಮೆ ನೋಡಿಕೊಂಡು, ಅದು ಆಚೆಯಿಂದ ಈಚೆಗೆ ಒದೆಯಿತಲ್ಲ, ಹಾಗಿದ್ದರೆ ತಲೆ ಮೇಲೆ ಮಾಡಿ ಮುರುಟಿ ಮಲಗಿಕೊಂಡು ಮಗ್ಗಲು ಬದಲಾಯಿಸಿದ್ದಾ..?  ಅಬ್ಬ ಈಗಲೇ ಹಿಂಗೆ ಇನ್ನು ಹಿಡಿಯಲು ಆದೀತಾ..? ಎನ್ನುವ ರಮ್ಯ ರೋಚಕ ಕಲ್ಪನೆಗೆ ಮೈ ನವಿರೆದ್ದು, ಅದನ್ನು ಅಷ್ಟೆ ಆಸ್ಥೆಯಿಂದ, ಈಗಾಗಲೇ ಇಂತಹ ಹಲವು ಮಧುರ ನೋವಿಗೆ ಒಡಲು ಒಡ್ಡಿದ್ದರೂ `..ಹೌದೇನೆ ನೀನು ಹಂಗೆ ತ್ರಾಸು ಕೊಡ್ತಿದ್ದಿ ನೋಡು.' ಎಂದು ಹೊಸದಾಗಿ ಕಣ್ಣರಳಿಸಿ ಕೇಳಿಸಿಕೊಳ್ಳುವ ತಾಯಿ ಜೀವದೆದುರಿಗೆ ಕಣ್ಣು ಬಾಯಿ ಅರಳಿಸಿ ನುಡಿಯುತ್ತಾ,`..ಜಾಸ್ತಿ ಕುಣೀಬೇಡ. ಹೊಟ್ಟೆ ಕುಲುಕುತ್ತೇ.. ಸುಮ್ನೆ ವಾಕಿಂಗ್ ಮಾಡು.. ಟಿ.ವಿ.ಲಿ ಹಾಳುಮೂಳು ನೋಡ್ಬೇಡ. ಮಗು ಬೆಚ್ಚಿ ಬೀಳುತ್ತೆ..' ಎಂದೆಲ್ಲಾ ತಾಕೀತು ಮಾಡಿಸಿಕೊಳ್ಳುತ್ತಾ, ರಾತ್ರಿಯಲ್ಲಿ ಇದ್ದಕ್ಕಿದ್ದಂತೆ ಅದ್ಯಾಕೋ ಹೊಟ್ಟೆ ಸರಸರನೇ ಕುಲುಕಿದಂತಾಗಿ ಸಣ್ಣಗೆ ಆಂದೊಳನೆಯಲ್ಲಿ ಮನಸ್ಸು ಕಲಕಿ, ಇವತ್ತು ಯಾವ ಪಿಕ್ಷರು ನೋಡಿದೆ, ಅದಕ್ಕೆ ಇದು ಭಯ ಬಿತ್ತಾ ಎಂದು ಕೈಗೆ ಸಿಗದ ಅದರ ನೆತ್ತಿ ಸವರುತ್ತಾ, ಪ್ರತಿ ದಿನವೂ ಹೊಸ ಹೊಸ ಅನುಭವಕ್ಕೂ ಹೊಸ ಅನುಭೂತಿಗಳಿಗೂ ಈಡಾಗುತ್ತಾ, ಹತ್ತು ಹಲವು ವೈದ್ಯಕೀಯ ಪರಿಭಾಷೆಯ ಕಾಂಪ್ಲಿಕೇಶನ್ಸ್‍ಗಳೆದುರಾಗುತ್ತಿದ್ದರೂ, ಪಕ್ಕದಲ್ಲಿರುವ ಅನುಭವಿ ಅಮ್ಮನ `.. ಆ ಡಾಕ್ಟ್ರೆಲ್ಲಾ ಹಂಗೇ ಹೇಳ್ತಾರೆ.. ನಂಗೆ ಅಜ್ಜಿ ಬಿಟ್ರೆ ಯಾರಿದ್ದರು.. ಸುಮ್ನಿರು ' ಎನ್ನುವ ಕಾನ್ಫಿಡೆಂಟ್ ಮಾತುಗಳಿಗೆ ಸಮಾಧಾನಗೊಳಿಸಿಕೊಳ್ಳುತ್ತಾ, ನೋಡುನೋಡುತ್ತಲೇ ಇನ್ನೂರೆಪ್ಪತ್ತು ದಿನದ ಆಸುಪಾಸು ಕಳೆದು, ಅದ್ಯಾಕೋ ಭರಿಸಲಸಾಧ್ಯವಾದ ನೋವು, ಎನೋ ಸಂಕಟ ಕೈಕಾಲುಗಳ ಎಳೆತ ಕಿಬ್ಬೊಟ್ಟೆ ಹರಿದೇ ಹೋಗುತ್ತಾ ಎನ್ನುವ ಅಸಹನೀಯ ನೋವಿಗೆ ಮಗು ಆಚೆ ಬಂತಾ ಎಂದು ಊಹಿಸುತ್ತಲೇ ಸರಕ್ಕನೇ.. `.. ಮ್.. ಊಃ.. ' ಎನ್ನುವ ಸಣ್ಣ ಕೀರಲು ದನಿಯ ಸದ್ದಿಗೆ ಎಲ್ಲ ಮರೆತು ಹೋಗುವ ಅಧ್ಬುತ ತಾಯ್ತನದ ಸ್ವರ್ಗ ಸುಖ. ಬಹುಶ: ಜಗತ್ತಿನಲ್ಲಿ ವಿವರಿಸಲಾಗದೆ ಉಳಿದ, ಹೆಣ್ಣು ಮಾತ್ರ ನುಭವಿಸಬಹುದಾದ ಸುಖ ಎಂದರೆ ಇದೊಂದೆ ಇರಬೇಕು. ಅದನ್ನು ಬಾಡಿಗೆಗೆ ಮಕ್ಕಳು ಮಾಡಿಕೊಳ್ಳುವ ಹೆಣ್ಣು, ಬಾಡಿಗೆ ತಾಯಿಯಾಗಬಹುದೇ ಆ ಮಗುವಿಗೆ ಆ ನೋವಿಗೆ ಏಕ ಮಾತ್ರದ ಅಮ್ಮನಾಗಲಾರಳು. ಕಾರಣ ಆ ಸುಖ ಹೆರುವವಳ ಸೊತ್ತು.

- ಸಂಜೆ.

Saturday, August 20, 2016

ಬದುಕಿನ ನ೦ಬುಗೆ ಕದಲಿಸುವ ಹೆಣ್ಣುಗಳು...

ಯಾವಾಗ ಹಸಿವು ಬಡತನವೆನ್ನುವ ವಾಸ್ತವ ಹೆಬ್ಬಾಗಿಲಿನಿ೦ದ ಒಳಬರುತ್ತದೋ, ಪ್ರೀತಿ, ಪ್ರೇಮ ಎನ್ನುವ ನಳನಳಿಕೆ ಕಿಟಕಿಯಿ೦ದ ಆಚೆ ಹೋಗಿದ್ದು ಗೊತ್ತೇ ಆಗಿರುವುದಿಲ್ಲ. ಅಸಲಿಗೆ ಎ೦ಥದ್ದೇ ಬದುಕು ಹರಳುಗಟ್ಟುವುದೇ ಹೊಟ್ಟೆ ತು೦ಬಿದ ಮೇಲೆ.

ಪ್ರೀತಿಸಿ ಮದುವೆಯಾಗುವುದರಲ್ಲಿ ಆಗುವ ಅನಾಹುತಗಳೇ ಇ೦ತಹವು. ಅದರಲ್ಲೂ ಅನ್ಯಜಾತಿ ಮದುವೆ, ಸಾಮಾಜಿಕ ನ್ಯಾಯ, ಸುಧಾರಣೆ ಎ೦ಬೆಲ್ಲ ವಿಷಯದಲ್ಲಿ ಇ೦ತಹ ಹೆಜ್ಜೆಗಳು ಎಷ್ಟು ಚೆ೦ದವೋ ವಾಸ್ತವದಲ್ಲಿ ಅಷ್ಟೇ ಕsæೂೀರ ಕೂಡ. ಎಲ್ಲವೂ ತೀವ್ರಗಾಮಿ ಧೋರಣೆಯಲ್ಲಿ ಸರಿಹೋಗಿಬಿಟ್ಟರೆ ಅವರ ಹೆಜ್ಜೆ ನಿಜಕ್ಕೂ ಕೇಳುವವರಿಗೂ, ಪ್ರಗತಿಪರರಿಗೂ, ಅವಿವೇಕಿ ಫೆಮಿನಿಸ್ಟುಗಳಿಗೂ ಅದ್ಬುತ ಎನ್ನಿಸುತ್ತದೆ. ಎಲ್ಲೆಡೆ ಚೆ೦ದದ ವರದಿಗಳೇ. ಆದರೆ, ಹೆಚ್ಚಿನ ಕೇಸುಗಳಲ್ಲಿ ವಾಸ್ತವ ಬೇರೆಯದೇ ಇರುತ್ತದೆ. ನಿಜವಾಗಿಯೂ ಅದಕ್ಕೆ ಈಡಾಗಿ ಬದುಕು ಅನುಭವಿಸುತ್ತಿರುವವರಿಗಿ೦ತ ಹೀಗೊ೦ದು ಅ೦ತಧ೯ಮೀ೯ಯ ವಿವಾಹಕ್ಕೀ ಡಾಗಿ ಹೋದ ಕುಟು೦ಬಗಳ ಸದಸ್ಯರು ಸಮಾಜದಲ್ಲಿ ಅನುಭವಿಸುವ ಮಾನಸಿಕ ಒತ್ತಡದ ಚಿತ್ರವೇ ಬೇರೆಯದ್ದು. ಅದರಲ್ಲೂ ಬೆ೦ಗಳೂರು ಕೇ೦ದ್ರೀಕೃತ ಜಗತ್ತು ಬಿಟ್ಟು ವಿವೇಚಿಸುವುದಾದರೆ ಶೇ.85ಕ್ಕೂ ಹೆಚ್ಚು ಈಗಲೂ ಹಳ್ಳಿಗಳೇ ಬದುಕಿಗೆ ಆಧಾರವಾಗಿರೋದು. ಬೆರಳೆಣಿಕೆಯ ಊರುಗಳಷ್ಟೆ ಫೆೀಸ್‍ಬುಕ್ಕಿನ ಪುಟದಲ್ಲಿ ರಾಜ್ಯಭಾರ ಮಾಡುತ್ತಿವೆ ಎನ್ನುವುದು ಕೂಡ ಮಾನದ೦ಡವಾಗಿ ಪರಿಗಣನೆಯಾಗುತ್ತಿದೆ.
ನಾನು ನೋಡಿದ೦ತೆ ಓದು ಮತ್ತು ಕೌಟು೦ಬಿಕವಾಗಿಯೂ ಸಾಕಷ್ಟು ಅನುಕೂಲಕರವಾಗಿದ್ದು ಚೆ೦ದಚೆ೦ದ ಎನ್ನಿಸುವ೦ತೆ ಓಡಾಡಿಕೊ೦ಡಿದ್ದ ಹುಡುಗಿ ಸುವಣ೯, ಹುಡುಗರು ಹಾಕುವ ಕಾಳಿಗೆ ಹು೦ಬತನದಲ್ಲಿ ಬಿದ್ದು ಹೋದಾಳೆ೦ದು ಎಣಿಸದ ಹೊತ್ತಿನಲ್ಲಿ ಆಕಸ್ಮಿಕವಾಗಿ ಮನೆಯವರ ವಿರುದ್ಧ ತಿರುಗಿ ಬಿದ್ದಿದ್ದಳು. ಕಾರಣ ಫೆೀಸ್‍ಬುಕ್ಕಿನಲ್ಲಿ ಪರಿಚಯವಾಗಿ ಅಲ್ಲೆಲ್ಲೊೀ ಬೆ೦ಗಳೂರಿನ ಮೂಲೆಯಲ್ಲಿ ಬಿಸಿನೆಸ್ಸು ಮಾಡುತ್ತಿರುವವನೊಬ್ಬನ ಕಾಳು ಹೆಕ್ಕಿಬಿಟ್ಟಿದ್ದಾಳೆ. ಏನೂ ಗೊತ್ತಿಲ್ಲದೆ ಪಡಪೋಶಿ ಫೆೀಸ್‍ಬುಕ್ಕಿನ ಮುಖ ನ೦ಬಿಕೊ೦ಡು ಅದ್ಯಾವ ಅಪ್ಪ ಹೂ೦.. ಎ೦ದಾನು. ಭಯಾನಕ ವಾಗ್ವಾದಗಳು ನಡೆದಿವೆ. ಸುವಣ೯ಳ ಅಣ್ಣ ಶ೦ಕರ ನನಗೆ ತೀರಾ ವಾರಿಗಿಯ ದೋಸ್ತ. ಮಧ್ಯಸ್ಥಿಕೆ ವಹಿಸಿ ಇಬ್ಬರನ್ನೂ ಸಮಾಧಾನಿಸಿ, ಆಕೆಯ ಸ೦ಗಡ ಬೆ೦ಗಳೂರಿಗೆ ಹೋಗಿ ಅವನನ್ನು ಭೇಟಿಯಾಗಿ ಮದುವೆ ಮಾಡುವ ಯೋಜನೆಗಿಳಿದು ಹೇಗೋ ಹುಡುಗಿಯ ಬದುಕು ಸುರುಳಿತ ಆಗಲಿ ಎ೦ದುಕೊ೦ಡರೆ ಕಾಳು ಹಾಕಿದ್ದ ಹುಡುಗನ ಮನಸ್ಸಿನಲ್ಲಿ ಏನಿತ್ತೋ ಕ್ಯಾತೆ ತೆಗೆಯಬೇಕೆ? ಅದಕ್ಕೆ ಸರಿಯಾಗಿ ಸುವಣ೯ ಅಪ್ಪಟ ಫೆೀಮಿನಿಸ್‍೦ನ ಡೈಲಾಗುಗಳೊ೦ದಿಗೆ, ತೀವ್ರ ಪ್ರಗತಿಪರ ಧೋರಣೆ ತೋರುತ್ತಾ ಕೊನೆಗೆ ಅಪ್ಪ-ಅಮ್ಮ ಸೇರಿದ೦ತೆ ಎಲ್ಲರೊ೦ದಿಗೆ ತನ್ನೆರಡು ದಶಕಗಳ ಸ೦ಬ೦ಧಗಳನ್ನು ಕಡಿದುಕೊ೦ಡಿದ್ದಳು.
ಆಕೆಯನ್ನು ಇನ್ನಿಲ್ಲದ೦ತೆ ಪ್ರೀತಿಸುತ್ತಿದ್ದ ಶ೦ಕರಣ್ಣ ಕೊನೆಕೊನೆಗೆ ಆಕೆಯ ವಿಷಯ ಮಾತಾಡುವುದನ್ನೂ ಬಿಟ್ಟುಬಿಟ್ಟ. ಮದುವೆಯಾದ ಹೊಸ ಹೊಸದರಲ್ಲಿ ಆಕೆ ಎಲ್ಲರ೦ತೆ ಸ೦ಭ್ರಮಿಸಿ ಬದುಕು ಸವಿಸುತ್ತಿದ್ದುದೇನೋ ಸರಿನೇ. ಆದರೆ ಯಾವಾಗ ಆತ ಇಸ್ಲಾ೦ಗೆ ಮತಾ೦ತರಿಸಿದನೋ ಎರಡೂ ಕಡೆಯಲ್ಲಿ ಎದ್ದಿದ್ದ ಗೋಡೆ ಇನ್ನಷ್ಟು ಏರಿತ್ತು. ನಮ್ಮಲ್ಲಿ ಉಳಿದದ್ದು ಏನೇ ಆದರೂ ಜನ ಸುಮ್ಮನಾಗಿ ಬಿಡುತ್ತಾರೆ. ಆದರೆ ಜಾತಿ, ಧಮ೯ ಸಮಸ್ಯೆಗಳಿಗೆ ತಳಕು ಹಾಕಿಕೊ೦ಡರೆ ಅದರಷ್ಟು ಗೋಜಲು ಇನ್ನಾವುದೂ ಇಲ್ಲ. ಹೀಗಿದ್ದಾಗ ಸುವಣ೯ಳ ಅಪ್ಪ, ಶ೦ಕರಣ್ಣ ಇಬ್ಬರೂ ಸಾಮೂಹಿಕವಾಗಿ ಆಕೆಯನ್ನು ತಮ್ಮ ಸಮುದಾಯದಿ೦ದ ಹೊರಹಾಕಿದ್ದೇವೆ೦ದು ಘೋಷಿಸಿ ತಮ್ಮ ಶೇಷ ಬದುಕನ್ನಾದರೂ ಸಮಾಧಾನವಾಗಿ ತ೦ತಮ್ಮ ತೃಪ್ತಿಯ೦ತೆ ಕಳೆಯಲು ಯೋಜಿಸಿದ್ದೇನೋ ಸರಿ. ಹಾಗೆಯೇ ಕೊ೦ಚ ಶಾ೦ತಿಯೂ ನೆಲೆಸಿತ್ತು. ಆದರೆ ಗ೦ಡನ ಮಾತು ಕೇಳಿ ಸುವಣ೯ ಸ್ವತಃ ಅಪ್ಪ-ಅಮ್ಮ-ಅಣ್ಣನ ಮೇಲೆ ದೂರು ದಾಖಲಿಸಿಬಿಟ್ಟಿದ್ದಳು. ತಾನು ಅ೦ತಜಾ೯ತಿ ಮದುವೆ ಆಗಿದ್ದರಿ೦ದ ತನಗೆ ಪ್ರಾಣ ಬೆದರಿಕೆ ಹಾಕಿದ್ದಾರೆ೦ದೂ, ತನಗೆ ಬದುಕು ನಡೆಸಲು ಕಾನೂನಾತ್ಮಕ ರಕ್ಷಣೆ ಬೇಕೆ೦ದು ದಾವೆ ಹೂಡಿ ಎಲ್ಲರನ್ನೂ ಕಟಕಟೆಗೆ ಹತ್ತಿಸಿಬಿಟ್ಟಿದ್ದಳು. ತೀರಾ ಬೇಡದ ಗೋಜಲಿಗೆ ಶ೦ಕರಣ್ಣ ಸಿಗೇ ಬಿದ್ದಿದ್ದ.
ನಾನು ಮತ್ತು ಸ್ನೇಹಿತರಾಗಿದ್ದ ಅ˜ಕಾರಿಯೊಬ್ಬರು ಸತತವಾಗಿ ಎರಡ್ಮೂರು ದಿನ ಸ೦ಧಾನ ನಡೆಸಿ, ಅದನ್ನು ಉದ್ದೇಶಪೂವ೯ಕ ದೂರು ಎ೦ದು ಸುಧಾರಿಸುವ ಹೊತ್ತಿಗೆ ಸಾಕುಸಾಕಾಗಿತ್ತು. ಪ್ರಸ್ತುತದಲ್ಲಿ ಕಾನೂನೂ ಅವರ ಕಡೆಗೇ ಇದೆಯಲ್ಲ. ಅ೦ತೂ ಕೇಸು ನಿಕಾಲಿಯಾಗಿತ್ತು. ಆದರೆ "ತಿನ್ಲಿಲ್ಲ ಉಣ್ಲಿಲ್ಲ... ಬ೦ದು ತಲೀಗ್ ಹೊಡೀತು' ಎನ್ನುವ೦ತೆ ಶ೦ಕರಣ್ಣ ಅನಾವಶ್ಯಕವಾಗಿ ಪೊಲೀಸ್ ದಾಖಲೆಯಲ್ಲಿ ಸೇಪ೯ಡೆಯಾಗಿದ್ದ. ಕುಟು೦ಬದ ಮಯಾ೯ದೆ ಬೀದಿಪಾಲಾಗಿತ್ತು. ಕುಟು೦ಬದ ಮನಸ್ಸುಗಳು ಅದ್ಯಾವ ಪರಿಯಲ್ಲಿ ಘಾಸಿಗೊ೦ಡಿದ್ದವೆ೦ದರೆ ಹೆಣ್ಣು ಹಡೆದದ್ದೇ ತಪ್ಪು ಎ೦ದು ಸಮಾಜಕ್ಕೆ ಸ೦ದೇಶ ರವಾನೆಯಾಗುವ೦ತೆ ವತಿ೯ಸಿಬಿಟ್ಟಿದ್ದಳು ಸುವಣ೯. ಕಾಲ ನಿಲ್ಲುವುದಿಲ್ಲ. ಒ೦ದು ಮಗು ಕೈಗೆ ಬರುವವರೆಗೆ ಸರಿಯಾಗಿದ್ದ ಹುಡುಗ, ಹಾಸಿಗೆ ಹಳೆಯದಾಗುತ್ತಿದ್ದ೦ತೆ ಕುಡಿತ, ಬಡಿತ ಆರ೦ಭವಾಗಿ ಬದುಕು ಎಕ್ಕುಟ್ಟಿ ಹೋಗಿದೆ. ಮದುವೆಯಾದ ಆರನೇ ವಷ೯ಕ್ಕೇ ಆವತ್ತು ಓಡಿ ಹೋಗಿ, ಪೊಲೀಸ್ ಸ್ಟೇಷನ್ನಿನಲ್ಲಿ ತಾರಾಮಾರು ಮಾಡಿದ ಹುಡುಗಿನೇನಾ ಇವಳು ಎನ್ನುವ೦ತಾಗಿದ್ದಳು ಸುವಣ೯. ಅದಾದ ಕೆಲವೇ ದಿನದಲ್ಲಿ ತೀವ್ರ ಕಾಯಿಲೆಗೀಡಾಗಿ ಗ೦ಡ ತೀರಿ ಹೋಗಿದ್ದಾನೆ. ಬದುಕು ಅನಾಮತ್ತಾಗಿ ತಿರುಗಿ ನಿ೦ತಿತ್ತು. ಈಗ ಬದುಕಿಗೇನಾದರೂ ಮಾಡೋಣ ಎ೦ದರೆ, ಓದಿ ಗಟ್ಟಿಯಾಗುವ ಮೊದಲೇ ಮೊಬ್ಯೆಲು ಮತ್ತು ಹುಡುಗನ ಕಾಳಿನ ಗೀಳಿಗೆ ಬಿದ್ದ ಸುವಣ೯ಗೆ ಯಾವ ಡಿಗ್ರಿಯೂ ಇರದಿದ್ದುದರಿ೦ದ ಹೆ೦ಗೋ ಬದುಕಲು ಸಾಕು ಎನ್ನುವ ಕೆಲಸ ಕೂಡ ಸಿಗುತ್ತಿಲ್ಲ. ಮನುಷ್ಯ ಹೇಗೆಲ್ಲ ವತಿ೯ಸುತ್ತಾನೆ ಎನ್ನುವುದಕ್ಕೆ ಬಹುಶಃ ಸುವಣ೯ ಅಪ್ಪಟ ಉದಾಹರಣೆ. ಎಲ್ಲಿ೦ದಾದರೂ ಒ೦ದಿಷ್ಟು ಆಸ್ತೀ ಎ೦ತಾದರೆ ಸಾಕು ಬದುಕು ಸಾಗಿಸಬಹುದೇನೋ ಎ೦ದುಕೊ೦ಡು "ಹೆಣ್ಣುಮಕ್ಕಳಿಗೂ ಅಪ್ಪನ ಆಸ್ತೀಯಲ್ಲಿ ಪಾಲು ಎನ್ನುವ ಕಾಯಿದೆ ಹಿಡಿದು ದಾವೆ ಹಾಕಲಾ' ಎ೦ದು ಸಹಾಯ ಕೇಳಿ ಬ೦ದು ಕೂತಿದ್ದಾಳೆ. ಆದರೆ, ಆಕೆಯ ಅಪ್ಪನದ್ದು ಎಲ್ಲವೂ ಸ್ವಯಾಜಿ೯ತವೇ ಆಗಿದ್ದರಿ೦ದ ಕೋಟು೯ ಹೆಲು³ ಮಾಡುತ್ತಾ? ಎನ್ನುತ್ತಿದ್ದಾಳೆ.
ತೀರಾ ಮನೆ ಬಾಗಿಲಿಗೆ ಬರುವವರು ಎ೦ಥ ದುರುಳರೇ ಆದರೂ ಆ ಕ್ಷಣಕ್ಕೇ ಅಲ್ಲಿ೦ದಲೇ ಹೊರದಬುºವ ಮನಸ್ಥಿತಿ ನನ್ನದಲ್ಲ. ಇತಿಹಾಸ ಗೊತ್ತಿದರೂ ಮನುಷ್ಯನಿಗೆ ಬದಲಾಗಲು ಒ೦ದು ಅವಕಾಶ ಬೇಕೆ ಇರುತ್ತದೆ ಎನ್ನುವುದನ್ನು ನಾನು ಇವತ್ತಿಗೂ ನ೦ಬುತ್ತೇನೆ. ಹೇಗೋ ಏನೋ ಬದುಕು ನಡೆಸಲು ಸಹಾಯ ಕೇಳುವುದು ಬೇರೆ, ನೌಕರಿಗೆ ಶಿಫಾ ರಸು ಮಾಡಿ ಎನ್ನುವುದು ಬೇರೆ. ಆದರೆ ಕೆಲಸವಾಗುತ್ತಿದ್ದ೦ತೆ "ನನ್ನ ಬದುಕು ಇಷ್ಟು ಬೇಗ ಅರಳೀತು ಎ೦ದುಕೊ೦ಡಿರಲಿಲ್ಲ' ಎನ್ನುವ ತಮಾಷೆಗಳನ್ನು ಗಮನಿಸುತ್ತಲೇ ದಾರಿ ಸವೆಸುವ ನನಗೆ ಸುವಣ೯ನ ಕೇಸು ಅಚ್ಚರಿಯೇನೂ ಮೂಡಿಸಲಿಲ್ಲ. ಕಾರಣ, ಬದಲಾದ ತಲಾ೦ತರದಲ್ಲಿ ಹೆಣ್ಣು ಬದಲಾಗಿದ್ದು ಪ್ರತಿಯೊಬ್ಬರನ್ನು ಘಾಸಿಮಾಡುತ್ತಿದೆ. ಆದರೆ, ಸುವಣ೯ "ಅಪ್ಪ ಅಮ್ಮನ ಮೇಲೆ ಆಸ್ತೀಗಾಗಿ ಕೇಸು ಹಾಕಲಾ' ಎನ್ನುವಲ್ಲಿಗೆ ಬ೦ದು ನಿ೦ತಿದ್ದು ಆಘಾತಕಾರಿ. ಬೇಡದ ರಗಳೆ ಮಾಡಿಕೊ೦ಡು, ಹಿ೦ದೊಮ್ಮೆ ಅನವಶ್ಯಕ ದೆ್ವೀಷ ಸಾ˜ಸಿದವಳು ಈಗ ಮತ್ತೆ ಅಪ್ಪನ ಆಸ್ತೀಯಲ್ಲಿ ಪಾಲು ಕೇಳಲು ದಾವೆ ಹಾಕುವ ಹ೦ತಕ್ಕೆ ನಿ೦ತಿರುವ ಹುಡುಗಿಯೊ೦ದಿಗೆ ಯಾವ ಮಾತೂ ಆಡಲು ಮನಸ್ಸು ಒಲ್ಲೇ ಎ೦ದಿತ್ತು. "
"ನೋಡಮ್ಮ ನೀನು ಯಾವ ರೀತಿಯಲ್ಲೂ ಆಸ್ತೀ ಅಥವಾ ರಕ್ಷಣೆ ಕೇಳಲು ಅಹ೯ಳಾಗಿ ಉಳಿದಿಲ್ಲ. ಅಕಸ್ಮಾತ್ ಕೇಳಿದರೂ ಅಪ್ಪ ಮತ್ತು ಶ೦ಕರಣ್ಣ ನಿನ್ನನ್ನು ಕ್ಷಮಿಸಿ ಪಾಸಿಟಿವ್ ಆಗಿ ರಿಯಾಕ್ಟ್ ಮಾಡ್ತಾರೆ ಅ೦ತ ನನಗನ್ನಿಸುತ್ತಿಲ್ಲ. ಕಾರಣ ಸರಿಯಾಗಿ ನೆತ್ತಿ ಮಾಸು ಹಾರುವ ಮೊದಲೇ ಅವರ ಬದುಕಿನ ಬಣ್ಣಗಳನ್ನು ಕದಡಿದೋಳು ನೀನು. ಅದರಲ್ಲೂ ಶ೦ಕರಣ್ಣ ಒರಟನಾದರೂ ಅತ್ತಿಗೆನಾ ಮಯಾ೯ದೆಯಿ೦ದಲೂ, ಅದಕ್ಕೂ ಮಿಗಿಲಾದ ಪ್ರೀತಿಯಿ೦ದಲೂ ಹೆಣ್ಣಿಗೆ ಕೊಡುವ ಗೌರವದ ಪರಿಚಯ ಮಾಡಿಸುತ್ತಾ ಬದುಕಿದ್ದಕ್ಕೆ ನಾನೇ ಸಾಕ್ಷಿ. ಕನಸಲ್ಲೂ ಊಹಿಸಲಾಗದ೦ತೆ ಅದ್ಯಾವನೋ ಹಾಕಿದ ಕಾಳಿಗೆ ಬಿದ್ದು ನೀನು, ಅವರಿಬ್ಬರನ್ನು ಪೊಲೀಸ್ ಸ್ಟೇಷನ್ ಹತ್ತಿಸಿದ ದಿವಸವೇ ಅವರ ಪಾಲಿಗೆ ಮುಗಿದು ಹೋಗಿದ್ದಿ. ಅವನಾಗಿದ್ದಕ್ಕೆ ಅಣ್ಣ ಅನ್ನೋ ಕಕ್ಕುಲಾತಿಯಿ೦ದ ಸುಮ್ಮನೆ ಉಳಿದಿರಬೇಕು. ನಾನಾಗಿದ್ದರೆ.. ಬೇಡ ಬಿಡು. ಹೋಗುವಾಗ ಕಾಫಿ ಕುಡಿದು ಹೋಗು'' ಎ೦ದು ಎದ್ದುಹೋಗಿದ್ದೆ.
ಮನಸ್ಸು ಯಾಕೋ ಕಸಿವಿಸಿ. ಹುಡುಗಿ ನೊ೦ದಿದ್ದಾಳೆ ತಪ್ಪಿನರಿವಾಗಿದೆ ಒ೦ದಿಷ್ಟು ಸಹಾಯಕ್ಕಾಗಿ ಶ೦ಕ್ರಣ್ಣ ಮತ್ತು ಅಪ್ಪಯ್ಯನ ಹತ್ತಿರ ನಾನು ಮಧ್ಯಸ್ಥಿಕೆ ವಹಿಸಲೂಬಹುದಿತ್ತು. ಆದರೆ, ಬರುವ ಮುನ್ನವೇ "ನಾನು ಕೋಟಿ೯ಗೆ ಹೋಗಿ ಆಸ್ತೀ ಕೇಳಬೇಕು' ಎ೦ದು ಲೆಕ್ಕಿಸಿಕೊ೦ಡಿರುವ ತೇವರಿದೆಯಲ್ಲ. ಅದು ನನ್ನನ್ನು ಯಾವತ್ತೂ ಪಾಪ ಎನ್ನಿಸಿಕೊಡಲಿಲ್ಲ. ಆವತ್ತು ಶ೦ಕರಣ್ಣ ಆಕೆಗೆ ಮೊಬ್ಯೆಲು ತೆಕ್ಕೊಟ್ಟು ತಪ್ಪು ಮಾಡಿದ್ದನೋ ಇಲ್ಲವೋ ಗೊತ್ತಿಲ್ಲ. ಆದರೆ ಮತ್ತೊಮ್ಮೆ ಅವನ ಕಾಲಿಗೆ ಬೀಳಿಸಿ, ಇನ್ನೇನಾದರೂ ಆಗಬಹುದಾದ ಅನಾಹುತಕ್ಕೆ ಕಾರಣನಾಗಲು ನಾನು ಅಜಿಬಾತ್ ತಯಾರಿರಲಿಲ್ಲ. ಕಾರಣ ಇ೦ತಹ ಹೆಣ್ಣುಮಕ್ಕಳು ಸುಧಾರಿಸಿಯಾರೆ೦ಬ ಭರವಸೆ ಅಪೂಟು ಸೋರಿಹೋಗಿತ್ತು. ಅಷ್ಟಕ್ಕೂ ಶ೦ಕ್ರಣ್ಣ ಮತ್ತು ಅಪ್ಪಯ್ಯ ಬದುಕಿದ್ದರಾದರೂ ಎಲ್ಲಿ? ಸುಮ್ಮನೆ ದೇಹವನ್ನು ನಡೆಸುತ್ತಿದ್ದಾರೆ. ಅವು ಉಸಿರೆಳೆದುಕೊ೦ಡು ಬದುಕುತ್ತಿವೆ. ಮನಸ್ಸುಗಳು ಯಾವತ್ತೋ ಸತ್ತು ಹೋಗಿವೆಯಲ್ಲ ಇನ್ನೇನಾಗುತ್ತದೆ. ಯಾವ ಅಪ್ಪ ಅಮ್ಮ೦ದಿರು ಮಗಳು ಎನ್ನುವ ಸದರ ಕೊಡಬಾರದಾ? ಅಮ್ಮ ಜೀವಚ್ಛವವಾಗಿ ಆರು ವಷ೯ ಕಳೆದಿವೆ. ಕಾರಣ ಅವಳು ಎ೦ದರೆ...
(ಲೇಖಕರು ಕಥೆ-ಕಾದ೦ಬರಿಕಾರರು)

Saturday, August 13, 2016

ಶಮಿ೯ಳಾ ಉಪವಾಸ ಕೂತಿದ್ದೇ ತಪ್ಪಾಯಿತಾ..?

 ಶಮಿ೯ಳಾ ಉಪವಾಸ ಕೂತು ಅಲ್ಲಿಯೇ ಸತ್ತಿದ್ದರೂ ಪರವಾಗಿರಲಿಲ್ಲ, ಆದರೆ ಹೋರಾಟ ಕೈಬಿಡಬಾರದಿತ್ತು ಎನ್ನುವವರು ಯಾವತ್ತಾದರೂ ಹೀಗೆ ಅನ್ನ-ನೀರು, ನಿಗಿನಿಗಿ ಯèವನ ಬಲಿಕೊಡುವ ಯೋಚನೆ ಮಾಡಿದ್ದಾರಾ? ಅಷ್ಟಕ್ಕೂ ಆಕೆ ಮಾತ್ರ ಯಾಕೆ ಸಾಯಬೇಕು?
        "ಇ೦ಥಾ ನೂರಾರು ಶಮಿ೯ಳಾರನ್ನು ನಾವು ಮಣಿಪುರದಲ್ಲಿ ತಯಾರು ಮಾಡುತ್ತೇವೆ. ಆದರೆ ಹೀಗೆ ಸತ್ಯಾಗ್ರಹ ಕೈಬಿಟ್ಟು ಮದುವೆ ಆಗುತ್ತಿರುವಾಕೆಯನ್ನು ವಾಪಸ್ಸು ಕುಟು೦ಬ ಮತ್ತು ನಾವು, ಮನೆ ಅಷ್ಟೇ ಏನು ಸಮಾಜದಲ್ಲೂ ಸೇರಿಸುವುದಿಲ್ಲ...' ಹೀಗೆ೦ದು ಗುಡುಗುತ್ತಾ ಆಕೆಯನ್ನು ಬಹಿಷ್ಕರಿಸುವ ಮಾತನಾಡಿದ್ದು ಸ್ವತಃ ಆಕೆಯ ಹಿ೦ದೆ ನಿ೦ತು ಇಲ್ಲಿವರೆಗೂ ಹೋರಾಟ ಮಾಡಿದ್ದ ಸಹೋದರ ಸಿ೦ಗ್‍ಜೀತ್! ಆಕೆ ಜೈಲಿನಿ೦ದ ಆಚೆಗೆ ಬರುವ ಮೊದಲು ಅವನಾಡಿದ್ದ ಮಾತು ಮೊನ್ನೆ ನಿಜವಾಗಿದೆ. ಆಕೆಯನ್ನು ಯಾವ ಅಮ್ಮ ಆವತ್ತು ಹರಸಿ "ಇನ್ನು ನಮ್ಮ ಭೇಟಿ ಹೋರಾಟ ಮುಗಿದ ಮೇಲೇನೆ' ಎ೦ದಿದ್ದಳೋ, ಅದೇ ಅಮ್ಮ ಇವತ್ತು "ಮಗಳ ಮುಖ ನೋಡಲಾರೆ' ಎ೦ದಿರುವುದು ಆಕೆಯ ಬದುಕಿನ ಕ್ರೂರ ವ್ಯ೦ಗ್ಯ. ಯಾವ ಮಣಿಪುರದ ಸೈದ್ಧಾ೦ತಿಕ ಹೋರಾಟಕ್ಕಾಗಿ ಅನಾಮತ್ತು ಹದಿನಾರು ವಷ೯ ಅನ್ನ-ನೀರು-ನಿದ್ರೆ-ಮ್ಯೆಥುನ-ಸ೦ಗಾತಿ ಕೊನೆಗೆ ತೀರಾ ತನ್ನೆಲ್ಲ
      ಆಸೆ ಆಕಾ೦ಕ್ಷೆಗಳನ್ನು ತೊರೆದು ಕೂತಿದ್ದಳೋ, ಅದೇ ಮಣಿಪುರದ ಜನತೆ ಇವತ್ತು ಆಕೆಗೆ ಒ೦ದ೦ಗುಲ ಜಾಗ ಕೊಡದೆ ಮಣಿಪುರದಿ೦ದಲೇ ಹೊರಹಾಕುವ ಸನ್ನಾಹದಲ್ಲಿದ್ದಾರೆ. ಅಕ್ಷರಶಃ ಅದರ ಮೊದಲ ಪ್ರಕ್ರಿಯೆ ನಿಚ್ಚಳವಾಗಿ ಗೋಚರಿಸಿದೆ. ಹೆಣ್ಣುಮಗಳೊಬ್ಬಳು ಹೋರಾಟಕ್ಕಿಳಿದು ತನ್ನ ನೆಲಕ್ಕಾಗಿ ಏನಾದರೂ ಮಾಡಬೇಕೆನ್ನುವ ಇಚ್ಚೆಗೆ ಸ೦ದ ಪ್ರತಿಫಲ ಇದು. ಇವತ್ತು ಸಕಾ೯ರದ ಪರವಾಗಿ ಮಾತಾಡುತ್ತಾ, ಪ್ರಗತಿಪರ ಧೋರಣೆಯ ಘೋಷಣೆ ಕೂಗುತ್ತಾ, ಪ್ಯಾನ್‍ಹಾಲ್ ಎದುರಿಗೆ ಯಥೇಚ್ಛ ಭೋಜನ ಮಾಡುವ "ಓರಾಟಗಾರರು..' ಯಾವತ್ತಾದರೂ ಹೀಗೆ ಒ೦ದಿನವಾದರೂ ಉಪವಾಸ ಕೂತ ಉದಾಹರಣೆ ಇದೆಯೇ? ಇರಲಿ. ಆದರೆ, ಒ೦ದು ಹೋರಾಟ ಅಥವಾ ಸೈದ್ಧಾ೦ತಿಕ ಬದ್ಧತೆ ಎನ್ನುವುದಕ್ಕೆ ಅದರಲ್ಲೂ ಹೆಣ್ಣುಮಗಳೊಬ್ಬಳಿಗೆ ವ್ಯವಸ್ಥೆ ಅ೦ತಿಮವಾಗಿ ಕೊಡುವ ಮನ್ನಣೆ ಏನು ಎನ್ನುವುದಕ್ಕೆ ಜೀವ೦ತ ಉದಾಹರಣೆ ಇರೋಮ್ ಶಮಿ೯ಳಾ ಚಾನು. ಮಣಿಪುರದ ಕಬ್ಬಿಣದ ಮಹಿಳೆ.
ಆದರೀಗ ಕಬ್ಬಿಣಕ್ಕೆ ತುಕ್ಕು ಹಿಡಿಸುವ ಸನ್ನಾಹಕ್ಕೆ ಆಕೆ ಬಲಿ. ಮಣಿಪುರದಿ೦ದ ಮಿಲಿಟರಿಯನ್ನು ಹೊರಹಾಕಬೇಕೆನ್ನುವ ತನ್ನ ಹೋರಾಟವನ್ನು ಏಕಾ೦ಗಿಯಾಗಿ ಜಯಿಸಲಾರೆನೆನ್ನುವ ಸತ್ಯದ ಅರಿವಾಗುತ್ತಿದ್ದ೦ತೆ ಗಾ೦ಧಿಗಿರಿಯ ಸತ್ಯಾಗ್ರಹ ಬಿಟ್ಟೆದ್ದ ಹುಡುಗಿಗೆ ಸಮಾಜದ ಅನಾಗರಿಕ ವತ೯ನೆ ಘಾಸಿ ಉ೦ಟುಮಾಡಿದೆ. ಗಳಗಳನೆ ಅಳುತ್ತಾ ಕೂರುವುದರ ವಿನಾ ಬೇರೇನೂ ಮಾಡಲಾಗುತ್ತಿಲ್ಲ.
     ಮೊದಲು ಉಪವಾಸ ಕೂರುತ್ತಾಳೆ ಎ೦ದು ರಕ್ಷಣೆಯ ಹೊಣೆಹೊತ್ತಿದ್ದ ಅದೇ ಮಣಿಪುರದ ಸಕಾ೯ರಕ್ಕೀ ಗ ಆಕೆಯನ್ನು ರಕ್ಷಿಸುವ ಸಲುವಾಗಿ ಹೊಣೆಹೊರುವ ಅನಿವಾಯ೯ತೆ. ಹೊರಗೆ ಬ೦ದಷ್ಟೆ ವೇಗವಾಗಿ ಇವತ್ತು ವಾಪಸ್ಸು ಆಸ್ಪತ್ರೆಯ ವಾಡಿ೯ನಲ್ಲಿ ಆಕೆ ಜಾಗ ಪಡೆದಿದ್ದಾಳೆ ಅದೂ ತಾತೂ³ತಿ೯ಕವಾಗಿ. ರೆಡ್‍ಕ್ರಾಸ್ ಸ೦ಸ್ಥೆ ಆಕೆಗೆ ಉಳಿಯಲು ಸ್ಥಳವನ್ನು ಜಿ ಲ್ಲಾ ಅಸ್ಪತ್ರೆಯಲ್ಲಿ ಪುನಃ ಅದೇ ಕೋಣೆಯನ್ನು ಒದಗಿಸುವ ಮೂಲಕ ಮಾನವೀಯತೆ ಮೆರೆದಿದೆ. ಧ್ಯೆೀಯ ಸರಿ ಇತ್ತಾ ಇಲ್ಲವಾ ಅದೆಲ್ಲ ಅತ್ತ ಇರಲಿ. ಮಾನವೀಯತೆಗೂ ಹೊರತಾದ ಇನ್ನಾವುದೇ ಧಮ೯ವಿಲ್ಲ. ಹುಟ್ಟಿದ ಜೀವ ಸ೦ಪೂಣ೯ವಾಗಿ ಬದುಕಬೇಕು ಎನ್ನುವುದನ್ನು ಬಲವಾಗಿ ಪ್ರತಿಪಾದಿಸುವವನು ನಾನು. ಆ ಹಿನ್ನೆಲೆಯಲ್ಲಷ್ಟೆ ಶಮಿ೯ಳಾ ಕೇಸನ್ನು ನೋಡುತ್ತಿದ್ದೇನೆ ಹೊರತಾಗಿ ಆಕೆ ಮಿಲಿಟರಿ ವಿರುದ್ಧ/ದೇಶದ ವಿರುದ್ಧ ಇತ್ಯಾದಿ ವಾದಗಳು ಬದಿಗಿರಲಿ. ಅವೆಲ್ಲದ ರಿ೦ದ ಆಕೆ ಹೊರಬ೦ದು ಯಾವುದೋ ಕಾಲವಾಗಿದೆ. ಮತ್ತದಕ್ಕೆ ಗೆಲವು ದಕ್ಕಲಾರದು ಎ೦ದೂ ಆಕೆಗೆ ತಿಳಿದಿತ್ತು, ಹೊರಗಿನ ಜನರ ವತ೯ನೆಯಿ೦ದಾಗಿ. ತನ್ನ ನೆಲದ ಸ್ವಾಯತ್ತತೆಗಾಗಿ ಹೋರಾಡುತ್ತಾ ಅಖ೦ಡ ಹದಿನಾರು ವಷ೯ ತನ್ನ ನಿಗಿನಿಗಿ ಯವನ ಪಣಕ್ಕಿಟ್ಟಿದ್ದ ಶಮಿ೯ಳಾಗೆ ಸಲ್ಲುತ್ತಿರುವ ಗೌರವ ಮತ್ತು ಸಮ್ಮಾನ ಇದು. ಕಾರಣ ಆಕೆ ಉಪವಾಸ ಬಿಟ್ಟು ಮೇಲೆದ್ದಿದ್ದಾಳೆ. ಹೋರಾಟದಿ೦ದ ಹಿ೦ದೆ ಸರಿದಿದ್ದಾಳೆ.
    ವಾಸ್ತವದಲ್ಲಿ ಹತ್ತಾರು ವಷ೯ಗಳಿ೦ದ ಆಕೆ ಅನ್ನ ನೀರು ಬಿಟ್ಟು ಕೂತಿದ್ದಾಗಲೇ, ಪೂತಿ೯ ರಾಜ್ಯಕ್ಕೆ ರಾಜ್ಯವೇ ಆಕೆಯ ಬೆನ್ನಿಗೆ ನಿ೦ತು ಬೆ೦ಬಲಿಸಿ, ಒ೦ದು ತಾಕಿ೯ಕ ಅ೦ತ್ಯ ಹಾಡಬಹುದಿತ್ತಲ್ಲ. ಅದ್ಯಾಕೆ ಆಗಲಿಲ್ಲ..? ಅ೦ದರೆ ಉಪವಾಸ ಕೂತಿರಲು ಉತ್ಸವ ಮೂತಿ೯ಯ೦ತೆ ಆಕೆ. ಹೊರಗಡೆ ಸಮೋಸಾ, ಪರೋಟಾ ತಿನ್ನುತ್ತಾ ಮೀಟಿ೦ಗು ಮಾಡಲು ನಾವು, ಎನ್ನುವ "ಓರಾಟಗಾರರ' ವತ೯ನೆಯಿ೦ದ ಶಮಿ೯ಳಾ ಘಾಸಿಗೊ೦ಡಿದ್ದಾಳೆ. ಆವತ್ತು ಆಕೆ ಹೀಗೆ ಉಪವಾಸ ಕೂರುತ್ತೇನೆ ಎ೦ದಾಗಲೂ ಯಾರನ್ನೂ ಕೇಳಿ ಕೂತಿರಲಿಲ್ಲ. ಇವತ್ತು ಸತ್ಯಾಗ್ರಹ ನಿಲ್ಲಿಸುತ್ತೇನೆ ಎ೦ದಾಗಲೂ ಆಕೆಯ ಅಗಲು ಬಗಲಿನಲ್ಲಿ ಯಾರೂ ಇರಲಿಲ್ಲ. ಆದರೆ, ಆಕೆಯ ಸುತ್ತಮುತ್ತಲೂ ನಿ೦ತು ತಪ್ಪಿತಸ್ಥರನ್ನಾಗಿಸುತ್ತಾ ಆಕೆಯನ್ನು ಮಾನಸಿಕವಾಗಿ ಕೊನೆಗಾಣಿಸುತ್ತಿದ್ದಾರಲ್ಲ ಅದು ಬಹುಶಃ ಈ ನಾಗರಿಕ ಸಮಾಜದ ಅತಿ ದೊಡ್ಡ ದುರ೦ತ ಮತ್ತು ಮಾನವೀಯತೆಯಿ೦ದ ಮನುಷ್ಯ ವಿಮುಖನಾಗಿರುವುದರ ಸ೦ಕೇತ. ಅಸಲಿಗೆ ಪ್ರತಿಯೊಬ್ಬರಿಗೂ ಆಕೆ ಅಲ್ಲಿಯೇ ಕೂತು ಕೂತೇ ಉಪವಾಸ ಇದ್ದೇ ಸತ್ತು ಹೋಗಿದ್ದರೂ ಪರವಾಗಿರಲಿಲ್ಲ. ಆದರೆ, ಆಕೆ ಹೊರಬ೦ದು "ಎಲ್ಲರ೦ತೆ ನಾನೂ ಮದುವೆ ಆಗುತ್ತೇನೆ' ಎ೦ದು ಎದ್ದು ನಿ೦ತಿದ್ದಕ್ಕೆ, "ನೀನಗಿಲ್ಲಿ ಇನ್ನು ಜಾಗವಿಲ್ಲ' ಎ೦ದು ದಬುºತ್ತಿದ್ದಾರಲ್ಲ ಇದು ನಾಗರಿಕ ಸಮಾಜ ತಲೆತಗ್ಗಿಸಬೇಕಾದ ಭಯಾನಕ ಬೆಳವಣಿಗೆ. ನಿಜ. ಒ೦ದು ಹೋರಾಟ ಯಾವಾಗಲೂ ಗೆದ್ದೇ ಗೆಲ್ಲುತ್ತದೆ ಅಥವಾ ಪ್ರತಿ ಬಾರಿಯೂ ಸೋಲುತ್ತದೆ ಎನ್ನುವುದನ್ನೂ ಯಾವತ್ತೂ ರಾಜಕೀಯ ಮೇಲಾಟದಲ್ಲಿ ನಿಧ೯ರಿಸಲಾಗುವುದಿಲ್ಲ.
       ರಾಷ್ಟ್ರದ ಸುರಕ್ಷತೆಯ ಪ್ರಶ್ನೆ ಬ೦ದಾಗ ಎ೦ಥವರು ಕೂಡ ಕೇ೦ದ್ರದ ನಿಧಾ೯ರ ಸರಿ ಎನ್ನುತ್ತಾರೆ ಮತ್ತು ಅದಕ್ಕಾಗಿ ಮಣಿಪುರ ಇವತ್ತು ನಮ್ಮ ಕೈಯ್ಯಲ್ಲಿ ಉಳಿದಿದೆ. ಆದರೆ, ಅಲ್ಲಿನ ಮಿಲಿಟರಿ ವಿಶೇಷಾ˜ಕಾರ ಕೊನೆಗಾಣಿಸಲು ಶಮಿ೯ಳಾ ಕೈಗೊ೦ಡ ಹೋರಾಟದ ಮಗ್ಗುಲುಗಳೇನೆ ಇರಲಿ. ಆಕೆ ಹೀಗೊ೦ದು ನಿಧಾ೯ರ ಮತ್ತು ಇಷ್ಟು ವಷ೯ಗಳ ದೀಘ೯ ಪಯಣದ ನ೦ತರವೂ ಬರಿಗೈಯಿ೦ದ ಯಾವುದೇ ಸಣ್ಣ ಗೆಲುವೂ ಇಲ್ಲದೆ ಎದ್ದು ಬರುವುದಾದರೆ ಆಕೆಗೆ ಇದಿನ್ನು ಗೆಲ್ಲುವ ಹೋರಾಟದ ದಾರಿಯಲ್ಲ ಎ೦ದರಿವಾಗಿರಲೇ ಬೇಕಲ್ಲ. ಯಾವಾಗ ಮಣಿಪುರದ ಜನತೆ ತ೦ತಮ್ಮ ವ್ಯವಹಾರ, ಮೊಬ್ಯೆಲು, ಲ್ಯಾಪಿ, ಇ೦ಟರ್‍ನೆಟ್ಟು ಎನ್ನುವುದರ ಜತೆಗೆ ಅವ್ಯಾಹತವಾಗಿ ಮಾದಕ ವಸ್ತುಗಳ ಘಮಲಿಗೆ ಆತುಕೊ೦ಡು ಜೈಲಿನಲ್ಲಿ ಉಪವಾಸ ಕೂತಿದ್ದ ಶಮಿ೯ಳಾಳ ಹೋರಾಟವನ್ನು ಪ್ರಿಯಾರಿಟಿಯಿ೦ದ ಹೊರದಬ್ಬಿದ್ದರೋ ಆಗಲೇ ಶಮಿ೯ಳಾ ಎದ್ದು ಬರಬೇಕಿತ್ತು. ಬೇರೆ ಯಾರೇ ಆಗಿದ್ದರೂ ಅದನ್ನೇ ಮಾಡಿರುತ್ತಿದ್ದರು ಬಹುಶಃ. ಆದರೆ ತೀರಾ ಸ೦ಯಮದಿ೦ದ, ಸಹನೆಯಿ೦ದ ತನ್ನ ಹೋರಾಟ ಜಾರಿ ಇಟ್ಟಿದ್ದ ಶಮಿ೯ಳಾಗೆ ಇದರಿ೦ದೇನಾದರೂ ಆದೀತು ಎನ್ನುವ ಭರವಸೆ ಹೊರಟುಹೋದ ಮೇಲೆ ಆಕೆ ಎದ್ದು ಬ೦ದಿದ್ದಾಳೆ. ಅ೦ದಹಾಗೆ ಇದು ಹೊಸದೇನೂ ಅಲ್ಲ. ಆಕೆ ಸರಿಸುಮಾರು ಆರೇಳು ವಷ೯ದ ಹಿ೦ದೆಯೇ ತನ್ನ ಇಚ್ಚೆಯನ್ನು ಬಹಿರ೦ಗವಾಗಿ ಕೋಟಿ೯ನಲ್ಲಿ ಪ್ರಕಟಪಡಿಸಿದ್ದಳು.
   ನ್ಯಾಯಾಧೀಶರೆದುರಿಗೆ ತನಗೂ ಎಲ್ಲರ೦ತೆ ಬದುಕುವ ಅವಕಾಶ, ಊಟ, ಸ೦ಸಾರ ಕಲ್ಪಿಸಿ ಎ೦ದು ಮಾತಾಡಿದ್ದಕ್ಕೂ ದಾಖಲೆಗಳಿವೆ. ಆಗಲೇ ಆಕೆಗೆ ಇದು ಗೆಲ್ಲುವ ಯುದ್ಧವಲ್ಲ ತನ್ನ ಬದುಕು ಮಾತ್ರ ಬರಿದಾಗುತ್ತಿದೆ ಎನ್ನಿಸಿದ್ದು ಸ್ಪಷ್ಟ. ಇವೆಲ್ಲದರ ಆಚೆಗೆ ನಿ೦ತು ಯೋಚಿಸಿ. ಆಕೆ ಹೋರಾಟದ ನೆಪದಲ್ಲಿ ಕಳೆದುಕೊ೦ಡ ಬದುಕಿದೆಯಲ್ಲ ಅದನ್ನು ಮರಳಿ ಕೊಡುವವರಾದರೂ ಯಾರು? ಇವತ್ತು ಹೆ೦ಡತಿ ಸತ್ತ ಆರೇ ತಿ೦ಗಳಿಗೆ ಮದುವೆ ಆಗುವ ಗ೦ಡಸರೂ, ಇದ್ದ ಗ೦ಡನನ್ನೂ ಬಿಟ್ಟು ವಷ೯ಕ್ಕೊ೦ದು ಮನೆ, ಗ೦ಡಸು ಇಬ್ಬರನ್ನೂ ಬದಲಿಸುತ್ತಾ, ಕ೦ಡ ಗ೦ಡಸರ ಬಗಲಿಗೆ ಕೈಹೂಡುತ್ತಾ ಮೆರೆಯುವ ಹೆಣ್ಣುಮಕ್ಕಳು ಎದುರೆದುರಿಗೇ ಇರುವಾಗ ಶಮಿ೯ಳಾ ಬಿದ್ದು ಹೋಗಲಿರುವ ಹೋರಾಟ ಬಿಟ್ಟೆದ್ದು, ಬೆನ್ನಿಗೆ ನಿ೦ತಿರುವ, ಆಕೆಗಾಗೇ ಜೈಲಿಗೂ ಹೋಗಿ ಬ೦ದೂ ಗ೦ಡಸೊಬ್ಬ ನಿರ೦ತರವಾಗಿ ಕಾಯುತ್ತಿದ್ದರೆ, ಅವನೊಡನೆ ಬಾಳುವೆ ನಡೆಸುವ ಕನಸು ಕ೦ಡರೆ ತಪ್ಪೇನಿದೆ? ಅಷ್ಟಕ್ಕೂ, ಆಕೆ ಸತತವಾಗಿ ತನ್ನ ಯವನ, ಬದುಕು, ಹಸಿವು ಅನ್ನಾಹಾರದ ಜತೆಗೆ ಸ೦ಪೂಣ೯ ಬದುಕನ್ನು ಕತ್ತಲೆಯ ನಾಲ್ಕು ಗೋಡೆಯ ಮಧ್ಯೆ ಕಳೆದಾಗಿದೆಯಲ್ಲ ಆಗೆಲ್ಲ ಎಲ್ಲಿದ್ದಿರಿ? ಆಕೆಯನ್ನು ಹೊರತರುವ ಅಥವಾ ಗೆಲುವಿಗಾಗಿ ಪ್ರಯತ್ನಿಸದೆ ಅಲ್ಲಲ್ಲೇ ಸುಮ್ಮನಾದವರು, ಈಗಲೂ ಆಕೆ ಹೋರಾಟ ಮಾಡಬೇಕಿತ್ತು ಉಪವಾಸ ಕೂತೇ ಇರಬೇಕಿತ್ತು ಎನ್ನುತ್ತಾ, ಯಾವ ಮಣಿಪುರಕ್ಕಾಗಿ ಹೋರಾಡಿದ್ದಳೋ ಅದೇ ಜನತೆ ಮತ್ತು ಸಮಾಜ ಇವತ್ತು ಆಕೆ ಜೈಲಿನಿ೦ದ ಹೊರಬ೦ದರೆ ಒ೦ದೇ ಒ೦ದ೦ಗುಲ ಜಾಗ ಕೊಡದೆ ವಾಪಸು ಜೈಲಿಗೆ ದಬ್ಬಿದ್ದಾರೆ. ಮನುಷ್ಯರಾ ಅವರೆಲ್ಲ? ಮಾನವೀಯತೆ ಮೆರೆದ ವೈದ್ಯರೊಬ್ಬರು ಆಕೆಯನ್ನು ರೆಡ್‍ಕ್ರಾಸ್ ಸ೦ಸ್ಥೆಯ ಸಹಾಯದಿ೦ದ ವಾಪಸ್ಸು ವಾಡಿ೯ನಲ್ಲಿ ದಾಖಲಿಸಿಕೊ೦ಡು ತಾತ್ಕಾಲಿಕ ಶೆಡ್ ಒದಗಿಸಿದ್ದಾರೆ.
ಇದು ಹೆಣ್ಣುಮಗಳೊಬ್ಬಳ ಹಠಕ್ಕೆ ದಕ್ಕಿದ ಪ್ರತಿಫಲ. ಆಕೆ ಮಿಲಿಟರಿ ವಿರುದ್ಧ, ಆಕೆ ದೇಶದ ವಿರುದ್ಧ ಎ೦ದೆಲ್ಲ ಮಾತಾಡುವವರು ಒ೦ದರಿಯಬೇಕಿದೆ. ಈ ಜಗತ್ತಿನಲ್ಲಿ ಆಕೆಯ ಹಾಗೆ ಯಾವ ಗ೦ಡಸೂ ತನ್ನೆಲ್ಲ ಸುಖ, ಲೋಲುಪತೆಯನ್ನು ಬಿಟ್ಟು ಹೋರಾಡಲಾರ. ಅದು ಕೇವಲ ಹೆಣ್ಣುಮಗಳೊಬ್ಬಳು ಮಾಡಿದ ಸಾಹಸ ಯಾತ್ರೆ. ಆಕೆಯ ಬದುಕು ಇನ್ನಾದರೂ ನೆಮ್ಮದಿಯಾಗಿರಲಿ.
  ಕಾರಣ ಅವಳು ಎ೦ದರೆ...

Saturday, August 6, 2016

ಹುಂಬತನಕ್ಕೆ ಹಾಳಾಗುವ ಹೊಸ ಹರೆಯ...

ಮನಸ್ಸು ಮತ್ತು ಬುದ್ಧಿ ಎರಡನ್ನೂ ಯಾವ್ಯಾವುದಕ್ಕೋ ಧಾರೆ ಎರೆಯುವ ಹೆಣ್ಣುಮಕ್ಕಳಿಗೆ ಒಂದು ಅರ್ಥವಾಗಬೇಕಿದೆ. ಕಾಳು ಹಿಡಿದು ಓಡಾಡುತ್ತಿರುವ ಪುರುಷರು ಮಾಡುವ ಯೋಜನೆಗಳು ಮತ್ತು ಹಾಕುವ ಸೋಗು ಎರಡೂ ಯಾರ ಅಂದಾಜಿಗೂ ನಿಲುಕದಷ್ಟಿವೆ.

‘ಕಾ ಲೇಜ್ ಶುರು ಆಗೋದು ಆಗಸ್ಟ್ 28ಕ್ಕೆ ಅಂತೆ’ ಎಂದು ಸ್ನೇಹಿತೆಯೊಬ್ಬಳಿಗೆ ಕರೆ ಮಾಡಿ ಮಾತಾಡುತ್ತಿದ್ದರೆ, ಪ್ರಾಣಕ್ಕಿಂತ ಹೆಚ್ಚಾಗಿ ಮಗಳನ್ನು ಪ್ರೀತಿಸುವ ಆಕೆ ಕೇಳಿದ್ದೇನು ಗೊತ್ತೆ? ‘ಅಯ್ಯೋ ಇನ್ನೂ ಎರಡು ತಿಂಗಳು ಇವರನ್ನು ಕಾಯ್ಬೇಕೇನೋ? ಏನು ಮಾಡೋದು ಗೊತ್ತಾಗ್ತಿಲ್ಲ. ನೀ ಏನು ಮಾಡಬೇಕೂಂತಾ ಇದೀಯಾ?’ ಎನ್ನುವ ಮಗಳನ್ನು ಕಾಯುವ ಅವ್ಯಕ್ತ ಭಯ ಆಕೆಯ ಧ್ವನಿ ಮತ್ತು ಉಸಿರು ಎರಡರಲ್ಲೂ ವ್ಯಕ್ತವಾಗುತ್ತಿತ್ತು. ಹೆಚ್ಚಿನ ತಂದೆ ತಾಯಿಯಂದಿರಿಗೆ ಅದೊಂದು ರೀತಿಯ ಅವ್ಯಕ್ತ ಭಯ.ಅದಕ್ಕೆ ಕಾರಣವೂ ಇಲ್ಲದಿಲ್ಲ. ಕುದಿವಯಸ್ಸಿನ ಹುಡುಗಿಯರಿಗೆ ಇದು ಅರ್ಥವಾಗುತ್ತಲೂ ಇಲ್ಲ. ಅವರದ್ದೇನಿದ್ದರೂ ಬಣ್ಣಗಳನ್ನು ಅರಸುವುದೇ ಕೆಲಸ. ಕಾರಣ ಏನಾಗುತ್ತದೆ ಅಥವಾ ಏನಾದರೂ ಆಗಿಹೋಗುತ್ತದೆ ಎನ್ನುವುದರ ಆತಂಕಕ್ಕಿಂತ ಅಯ್ಯೋ ಯಾವ ಘಳಿಗೆಯಲ್ಲಿ ಯಾವ ಹುಡುಗರ ಮನಸ್ಸು ಎಂಥಾ ಯೋಜನೆ ರೂಪಿಸುತ್ತದೋ, ಇಷ್ಟು ದಿವಸ ಹೂವಿನಂತೆ ಸಾಕಿದ ಮಗಳು ಹೊಸ ಹರೆಯದ ಅಲೆಗಳಿಗೆ ಹೇಗೆ ಸ್ಪಂದಿಸುತ್ತಾಳೋ ಎನ್ನುವ ತಲ್ಲಣದ ಜೊತೆಯಲ್ಲಿ ಬದಲಾಗುತ್ತಿರುವ ಸಾಮಾಜಿಕ ಸ್ಥಿತಿಗಳಲ್ಲಿ ಆಕೆ ಸಿಲುಕಿ ಹೋಗಬಹುದಾದ ಪರಿಸ್ಥಿತಿಗೆ ಕಾಳಜಿ ಮತ್ತು ಭಯ ಎರಡೂ ಮಿಳಿತ ಕರುಳಿನ ಸಂಕಟ ಅದು. ಅಸಹಾಯಕತೆ ಅದು. ಹೊರತಾಗಿ ಮಗಳನ್ನು ಸಂಶಯಿಸುವ ಅಥವಾ ಆಕೆಯನ್ನು ಕೂಡಿ ಹಾಕಿ ಕಾಯಬೇಕು ಎನ್ನುವ ಯಾವ ಇರಾದೆಯೂ ಆಕೆಗಿಲ್ಲ. ಆದರೆ ನಿನ್ನೆ ಮೊನ್ನೆಯವರೆಗೂ ಬಾಗಿಲ ಬಳಿ ನಿಂತುಕೊಂಡೆ ಅಮ್ಮನ ಕೈತುತ್ತು ತಿಂದು ಓಡುತ್ತಿದ್ದ ಹುಡುಗಿಯರು ಇವತ್ತು ಅದೇ ಅಮ್ಮನ ಮುಖಕ್ಕೆ ಗುರಾಯಿಸಿ ಬಾಗಿಲಿಕ್ಕಿಕೊಂಡು ಕೂರುತ್ತಿದ್ದಾ ರೆ, ಉಪವಾಸ ಎನ್ನುವುದು ಕಾಮನ್ ಆಗುತ್ತಿದೆ. ಕಾರಣ ಹೊತ್ತಲ್ಲದ ಹೊತ್ತಲ್ಲಿ ಮೇಸೇಜು ಮತ್ತು ಚಾಟ್ ನಡೆಸಲು ಪಾಲಕರು ಅಡ್ಡಿಯಾಗಬಾರದು. ಈ ಘಟನೆ ಕೇವಲ ಆರೆಂಟು ತಿಂಗಳ ಹಿಂದಿನದು. ನಿಮಗೂ ನೆನಪಿರಬಹುದು. ಸಹನಾ ತುಂಬ ಮುದ್ದು ಮುದ್ದಾಗಿ ಬೆಳೆದ ಹುಡುಗಿ. ಓದು, ಹಾಡು, ಡಾನ್ಸು, ಟ್ರೆಕ್ಕಿಂಗು ಹೀಗೆ ಎಲ್ಲದರಲ್ಲಿ ಕ್ಲಾಸು, ಮಾಸು ಎರಡರಲ್ಲೂ ಬೆಳೆದು ನಿಲ್ಲುತ್ತಿದ್ದ ಆಕೆಯ ವೇಗ ಎಂಥವರ ಕಣ್ಣು ಕೊರೈಸುವಂತಹದ್ದು. ಅದಕ್ಕೆ ಸರಿಯಾಗಿ ಸುಮಾರು ಕಾಲದಿಂದಲೂ ಆ ಕುಟುಂಬದ ಬದುಕು, ಸಂಸಾರ ಅಂತೆಲ್ಲ ಅಗೀಗ ಸಮಕಾಲೀನ ಸ್ಥಿತಿಯಲ್ಲಿ ಕಷ್ಟ ಸುಖ ಹಂಚಿಕೊಳ್ಳುತ್ತಲೂ ಆಪ್ತನಾಗಿ ನಾನು ಗಮನಿಸುತ್ತಿರುವ ಚೆಂದದ ಸಂಸಾರದಲ್ಲಿ ಅಷ್ಟೆ ಮುದ್ಮುದ್ದು ಹುಡುಗಿ. ವಿಪರೀತ ಎನ್ನಿಸುವಷ್ಟು ಕ್ರಿಯೇಟಿವಿಟಿಯೇ ಹುಡುಗಿಗೆ ಮುಳುವಾಯಿತಾ ಅಥವಾ ಈಗಿನ ಹುಡುಗರೆನ್ನುವ ಸಂತತಿಯೇ ಹಾದಿ ತಪ್ಪುತ್ತಿದೆಯಾ? ಇತ್ತೀಚೆಗೆ ನನ್ನನ್ನು ತೀವ್ರ ಗೊಂದಲಕ್ಕೀಡು ಮಾಡಿದ ವಿಷಯ. ಹನ್ನೆರಡು-ಹದಿಮೂರು ದಾಟಿದ ಯಾವುದೇ ಹುಡುಗನ ಪ್ರಥಮ ಆಯ್ಕೆ ಸೆಕ್ಸು ಎಂಬಂತಾಗಿದೆ.
ಪ್ರತಿ ಹುಡುಗಿಯರಲ್ಲಿ ಅವನಿಗೊಬ್ಬ ಹೀರೋಯಿನ್ ಕಾಣುತ್ತಿದ್ದಾ ಳೆ. ಅವನ ಮನಸ್ಸಿನಲ್ಲಿ ಅವನದ್ದೇ ಪಿಕ್ಚರು ಶುರು. ಅವನೇ ಅಲ್ಲಿ ಕಬಾಲಿ. ಅವನೇ ಸುಲ್ತಾನು. ಅದಕ್ಕೆ ಸರಿಹೊಂದಿಸಿಕೊಳ್ಳಲು ಹುಡುಗಿ. ಹೀಗೆ ಮನಸ್ಸು ಪಕ್ವಗೊಳ್ಳುವ ಮೊದಲೇ ಹಾದಿತಪ್ಪುವ, ತಪ್ಪುತ್ತಿರುವ ಹುಡುಗರಿಗೆ ತೀವ್ರವಾಗಿ ಕೈಗೆ ಸಿಕ್ಕಿರುವ ಅಸ ಮೊಬೈಲು ಮತ್ತು ಚೆಂದದ ಮಾತುಗಳು. ಶೇ.90ಕ್ಕೂ ಹೆಚ್ಚು ಹುಡುಗರ ಮನಸ್ಥಿತಿ ಇದೇ ಇದ್ದರೂ ಶೇ.60ರಷ್ಟು ಹುಡುಗರಿಗೆ ಪೂರೈಸಿಕೊಳ್ಳುವ ಧೈರ್ಯವಿಲ್ಲದಿರುವುದೂ, ಬಾಹ್ಯ ಬೆದರಿಕೆಯಿಂದಲೂ ತೆಪ್ಪಗಿರುತ್ತಿದ್ದಾ ರೆ ಎನ್ನುತ್ತಿದೆ ಸಮೀಕ್ಷೆ. ಸಹನಾ ಅನ್ನುವ ಹುಡುಗಿ ಅದೆಷ್ಟು ಚೆಂದವಾಗಿ ಇದ್ದಳೋ ಮನೆಯಲ್ಲೂ ಅದ್ಭುತ ಎನ್ನುವ ಕೌಟುಂಬಿಕ ಸಾಂಗತ್ಯ ಆಕೆಗಿತ್ತು. ಆ ಹುಡುಗಿಯ ಬೆಳವಣಿಗೆಗೆ ಮಾರುಹೋಗಿ ಅದ್ಯಾವ ಘಳಿಗೆಯಲ್ಲಿ ಅವರಪ್ಪ ಮೊಬೈಲು ಕೊಡಿಸಿದನೋ ಆಕೆಯ ಬದುಕು ಬರಗೆಡಲು ಅಷ್ಟು ಸಾಕಾಗಿತ್ತು. ಸಮೀರ್ ಎನ್ನುವ ಮೋಟರ್ ಸೈಕಲ್ ಮೇಲೆ ಸರ್ಕಸ್ಸು ಮಾಡುವ ಹುಡುಗ ಆಕೆಯ ಸುತ್ತ ತಿರುಗುತ್ತಿದ್ದುದೇ ಅವನ ಅಂಗಡಿಗೆ ಸರ್ವೀಸ್ಗೆ ಬರುತ್ತಿದ್ದ ಗಾಡಿಗಳ ಮೇಲೆ ಎನ್ನುವುದನ್ನು ಅರಿಯುವ ವೇಳೆಗೆ ತಡವಾಗಿದೆ. ಅದ್ಹೇಗೋ ಆಕೆಯ ಮೊಬೈಲ್ ನಂಬರು ಸಂಪಾದಿಸಿದವನು ಹಗಲು ಹನ್ನೆರಡು ತಾಸು ಆಕೆಯ ಹಿಂದೆ ಬಿದ್ದು ಮೆಸೇಜುಗಳ ಮೇಲೆ ಮೆಸೇಜು ಹಾಕಿದ್ದಾನೆ. ಮೊದಮೊದಲು ನಿರ್ಲಕ್ಷಿಸಿದರೂ ಕ್ರಮೇಣ ಅಪರಿಚಿತ ನಂಬರಿಗೆ ಪ್ರತಿಕ್ರಿಯೆ ಮಾಡಲು ಆರಂಭಿಸಿದ ಸಹನಾ ಚಾಟಿನಲ್ಲಿ ಸಿಲುಕಿದ್ದಾ ಳೆ. ಹುಡುಗ ತೀವ್ರವಾಗಿ ಆಕೆಯ ಮನಸ್ಸಿನ ಮೇಲೆ ಬಣ್ಣಗಳ ಚಿತ್ತಾರ ಬಿಡಿಸಿದ್ದಾ ನೆ. ಅಪ್ಪಟ ಚಿತ್ರಕಥಾನಕದಂತೆ ಬದುಕಿನ ಸುಂದರ ಮುಖವನ್ನಷ್ಟೇ ಇನ್‌ಬಾಕ್ಸಿನಲ್ಲಿ ತೆರೆದಿರಿಸಿದ್ದಾ ನೆ. ಅವನಾರೆಂದು ಗೊತ್ತಾಗುವ ವೇಳೆಗಾಗಲೇ ಆಕೆ ಕದಲಲಾರದಷ್ಟು ಭಾವಗಳಲ್ಲಿ ಆಕೆಯನ್ನು ಬೆಸೆದಾಗಿತ್ತು. ಹುಡುಗಿ ಯಾಮಾರಿದ್ದಾ ಳೆ. ಕದ್ದುಕದ್ದು ಮೊಬೈಲು ಬಳಸತೊಡಗಿದ್ದಾ ಳೆ. ಆದರೆ ಎಷ್ಟೆ ಕದ್ದಾ ಡಿದರೂ ತೀರಾ ಉರಿದುಕೊಳ್ಳುವ ಒಂದು ವರ್ಗವಿರುತ್ತದಲ್ಲ ಅವರು ಇಂತಹ ವಿಷಯದಲ್ಲಿ ಸಮಯ ಕಾಯುತ್ತಿರುತ್ತಾರೆ. ಸಮಯಕ್ಕೆ ಸರಿಯಾಗಿ ಅಪ್ಪನಿಗೆ ಸುದ್ದಿ ಸಿಕ್ಕಿದೆ. ಮನೆಯಲ್ಲಿ ರಂಪಾಟ ಆರಂಭವಾಗಿದೆ. ಬೈದಾಡಿ ಏನು ಮಾಡಿದರೂ ಹುಡುಗಿ ತಕ್ಷಣಕ್ಕೆ ಸುಧಾರಿಸಿಯಾಳು ಎನ್ನುವ ಹಂತವನ್ನಾಕೆ ದಾಟಿ ಹೋಗಿದ್ದಾ ಳೆ ಎನ್ನುವುದು ಆಗ ಅರಿವಾಗಿಲ್ಲ. ಮೇಲ್ಮಾತಿಗೆ ಎ ಸರಿ ಹೋಗಿದೆ ಎನ್ನುವಂತೆ ನಂಬಿಸಿದ್ದಾ ಳೆ.ಎಲ್ಲ ಸರಿ ಹೋಯಿತು ಎಂದುಕೊಂಡರೆ ಕೆಲವೇ ತಿಂಗಳಲ್ಲಿ ಮತ್ತೆ ಅವನ ಜೊತೆ ಕದ್ದು ಕಾಣಿಸಿಕೊಳ್ಳತೊಡಗಿದ್ದಾ ಳೆ. ಈಗ ಪರಿಸ್ಥಿತಿ ಗಂಭೀರವಾಗಿದೆ. ಸರಿಯಾಗಿ ಇನ್ನೂ ನೆತ್ತಿಯ ಮಾಸು ಹಾರದಿದ್ದ ಹುಡುಗಿ ಮನೆಯಲ್ಲಿ ‘ಏನೀಗ’ ಎಂದು ಅವನ ಕುಮ್ಮಕ್ಕಿನಿಂದ ಕಾಲೂರಿದ್ದಾಳೆ. ಅದೆಲ್ಲಿತ್ತೋ ಸಿಟ್ಟು, ಅಲ್ಲಿವರೆಗೂ ಇದ್ದ ಅಸಹನೆ, ಅಷ್ಟೂ ವರ್ಷಗಳ ಮುದ್ದುತನ ಒಮ್ಮೆಲೆ ತನಗೆ ವಿರುದ್ಧವಾಗಿದ್ದು ಎ ಸೇರಿ ರಪರಪನೆ ಬಾರಿಸಿದ್ದಾ ನೆ. ಅಷ್ಟೆ. ಅತ್ತಲಿಂದಹುಡುಗ ಆತ್ಮಹತ್ಯೆಯ ನಾಟಕದ ಐಡಿಯಾ ಕೊಟ್ಟಿದ್ದಾನೆ.
ಕೊಂಚ ಎಡವಟ್ಟಾಗಿ ಹುಡುಗಿ ಅರಳುವ ಮೊದಲೇ ಶಾಶ್ವತವಾಗಿ ಅಪ್ಪ-ಅಮ್ಮಂದಿರನ್ನು ಕಣ್ಣೀರಿನಲ್ಲಿ ಕೈತೊಳೆಯಲು ಬಿಟ್ಟು ಜೀವ ಕಳೆದುಕೊಂಡಿದ್ದಾಳೆ. ಆದರೆ, ಸಹನಾ ಸತ್ತು ಮೂರು ತಿಂಗಳಾಗುವ ಮೊದಲೇ ಆ ಹುಡುಗ ಇನ್ನೊಬ್ಬಳಿಗೆ ಮೆಸೇಜು ರವಾನಿಸತೊಡಗಿದ್ದಾನೆ! ಇದೆಲ್ಲ ಗೊತ್ತಿದ್ದೂ ಅವನ ಜೊತೆಗೆ ಇನ್ನೊಬ್ಬಾಕೆ ಕಾಣಿಸಿಕೊಳ್ಳತೊಡಗಿದ್ದಾ ಳೆ. ಅವನಿಗೆ ಈಗ ಈಕೆಯ ಯಾವ ನೆನಪು ಸಂಕಟ ಏನೂ ಇದ್ದಂತಿಲ್ಲ. ಏನಯ್ಯ ಎಂದು ವಿಚಾರಿಸಿದರೆ ‘ಸುಮ್ನೆ ಒಂದಷ್ಟು ಸುತ್ತಿದ್ವಿ ಎಂದು ಆಕೆಯನ್ನೇ ನೆನಸ್ಕೊಂಡು ಕೂರೋಕಾಗುತ್ತಾ ಅಂಕಲ್. ಈ ವಯಸ್ನಲ್ಲಿ ಇದೆ ಕಾಮನ್’ ಎನ್ನುತ್ತಾ ಅವನು ಸ್ಪ್ಯಾನರ್ ತಿರುವುತ್ತಿದ್ದಾನೆ. ಅವನಿಗೆ ಬದುಕು, ಹುಡುಗಿಯರು ಮತ್ತು ಸಂಬಂಧಗಳು ನಟ್ಟು, ಬೋಲ್ಟು ಬದಲಿಸಿದಷ್ಟೇ ಸಲೀಸು. ‘ಯಾಕ್ರಮ್ಮ ಹಿಂಗೆಲ್ಲ ಮನೆಬಿಟ್ಟು ಓಡಿ ಹೋಗ್ತೀರಿ’ ಎಂದು ಕೆಲ ಹುಡುಗಿಯರನ್ನು ಮಾತನಾಡಿಸಿದಾಗ ಬಂದ ಉತ್ತರ ದಂಗು ಬಡಿಸುವಂತಹದ್ದು. ‘ಸರ್. ಅವರೆಲ್ಲ ದುಬಾರಿ ಗಿಫ್ಟ್ ಕೊಡ್ತಾರೆ. ಒಳ್ಳೆ ಮೊಬೈಲ್ ಕೊಡಿಸ್ತಾರೆ’ ಎನ್ನುವುದು. ‘ಇವೂ ಒಂದು ಕಾರಣವಾ ಓಡಿ ಹೊಗಲು’ ಎಂದರೆ ಪೆದ್ದ ನಗುವಿಗಿಂತ ಬೇರೆ ಉತ್ತರವಿರಲಿಲ್ಲ. ಹೀಗೆ ಮನಸ್ಸು ಮತ್ತು ಬುದ್ಧಿ ಎರಡನ್ನೂ ಯಾವ್ಯಾವುದಕ್ಕೋ ಧಾರೆ ಎರೆಯುವ ಸಹನಾಳಂತಹ ಹುಡುಗಿಯರಿಗೆ ಒಂದು ಅರ್ಥವಾಗಬೇಕಿತ್ತು. ಕಾಳು ಹಿಡಿದು ಓಡಾಡುತ್ತಿರುವವರ ಸಂಖ್ಯೆ ಇವತ್ತು ಅವರ ಕಲ್ಪನೆಗೂ ಮೀರಿದೆ. ಅದಕ್ಕಾಗಿ ಹುಡುಗರು ಮಾಡುವ ಯೋಜನೆಗಳು, ಹಾಕುವ ಸೋಗುಗಳೂ ಯಾರ ಅಂದಾಜಿಗೂ ನಿಲುಕದಷ್ಟಿವೆ. ಅದಕ್ಕೆ ಸರಿಯಾಗಿ ತಾವು ‘ಗುಡ್ ಇನ-’ ಎಂದುಕೊಂಡು ಗುಂಡಿಗೆ ಬೀಳುತ್ತಿರುವ, ಅಲ್ಲಿವರೆಗೂ ಬಳ್ಳಿಯಂತೆ ಎದೆಗಪ್ಪಿ ಸಂತೈಸಿದ ಅಪ್ಪ-ಅಮ್ಮ ಮತ್ತು ಅನಾಮತ್ತಾಗಿ ಬದುಕಿನ ಅಷ್ಟೂ ಸಂಕಟಕ್ಕೆ ಜೊತೆಗೊಡುವ ಸಹೋದರರು ಹೀಗೆ ಎಲ್ಲರ ಬಂಧನಕ್ಕೆ ಎಳ್ಳು ನೀರು ಬಿಡುವ ಹುಡುಗಿಯರು ಸಮಾಜದ ಮತ್ತು ನೋವಿನ ಬದುಕಿಗೆ ಮೂಲವಾಗುತ್ತಿದ್ದಾ ರೆ. ಕನಿಷ್ಠ ಯಾರ ಜತೆಗೆ ಹೋಗಬೇಕು, ಬಾರದು ಎನ್ನುವ ಸಣ್ಣ ವಿವೇಚನೆಯೂ ಮಾಡದೆ ಹುಡುಗಾಟಕ್ಕಿಳಿದು ಎಷ್ಟೋ ಕಡೆಗಳಲ್ಲಿ ಇವತ್ತು ಸಾಮರಸ್ಯ ಸಮಾಜ ಹೋಳಾಗಲು ಕಾರಣವಾಗುತ್ತಿದ್ದಾ ರೆ. ಏನೇ ಆದರೂ ಕೊನೆಯಲ್ಲಿ ಮತ್ತೆ ‘ಸರಿಯಾಗಿ ಮಗಳನ್ನು ನೋಡಿಕೊಳ್ಳಬೇಕಿತ್ತಮ್ಮ’ ಎಂದೆನ್ನಿಸಿಕೊಳ್ಳುವ ಅಮ್ಮ, ಕಳೆದು ಹೋಗಿದ್ದ ಮಗಳು, ಭವಿಷ್ಯದ ಕತ್ತಲೆ ಎರಡಕ್ಕೂ ಈಡಾಗಿ ನಿಡುಸುಯುತ್ತಿದ್ದಾ ಳೆ. ಕಾರಣಅವಳು ಎಂದರೆ...
(ಲೇಖಕರು ಕಥೆ-ಕಾದಂಬರಿಕಾರರು)