Tuesday, August 26, 2014

ಸಾವು ಪ್ರತಿಯೊಬ್ಬನಿಗೂ ನಿಶ್ಚಿತ.


ಸಾವು ಪ್ರತಿಯೊಬ್ಬನಿಗೂ ನಿಶ್ಚಿತ. ಆದರೆ ಬದುಕಿನುದ್ದಕ್ಕೂ ಮಾಡುವ ಬದುಕಿನ ರೀತಿ ನೀತಿಗಳೆ ನಮ್ಮ ಸಾವಿನ ನಂತರವೂ ಕಾಡುವ ಪರಿ ಇದೆಯಲ್ಲ ಅದು ಬಹುಶ: ಆತ್ಮ ಎನ್ನುವುದಿದ್ದರೆ ಅದರ ಅರಿವಿಗೆ ಬಂದೀತು. ಕಾರಣ ಸಾಮಾಜಿಕ ಧೋರಣೆಯನ್ನು ರೂಪಿಸುವವರ ಮೇಲೆ ಕೆಲವು ನೈತಿಕ ಮತ್ತು ಸಾಮಾಜಿಕ ಜವಾಬ್ದಾರಿಗಳು ಇರುತ್ತವೆ ಮತ್ತದರಿಂದಾಗುವ ಪ್ರಗತಿ ಅಥವಾ ಅನಾಹುತ ಎರಡಕ್ಕೂ ಅವರೆ ಹೊಣೆಗಾರರು ಆಗಿರುತ್ತಾರೆ. 
ಕಾರಣ ಇವತ್ತು ಸಂಪೂರ್ಣ ಮೈನಾರಿಟಿಯಾಗಿರುವ ಮತ್ತು ಯಾವ ರೀತಿಯಲ್ಲೂ ಬಲವನ್ನು ಹೊಂದಿಲ್ಲದ, ಯಾವ ರೀತಿಯ ಮೀಸಲಾತಿ ಇಲ್ಲದೆ, ಯಾವ ಸೌಲಭ್ಯಗಳಿಗೂ ಈಡಾಗದೆ ಇನ್ನಷ್ಟು ಜಾರುತ್ತಲೆ ಇರುವ ಸಮುದಾಯ ಬ್ರಾಹ್ಮಣರದ್ದು.  ವಿನಾಶದಂಚಿಗೆ ಜಾರುತ್ತಿರುವ ಇಂಥಾ ಸಮುದಾಯಕ್ಕೆ ಸಂಪೂರ್ಣ ನಷ್ಟವನ್ನುಂಟುಮಾಡುವಂತಹ ಪ್ರಗತಿಪರತೆ ತೋರಿದ ಕಾರಣವೇ ಸಂಪೂರ್ಣ ಬ್ರಾಹ್ಮಣರ ವಿರುದ್ಧ ಇವತ್ತು ಭೌದ್ಧಿಕವಾಗಿ ಮತ್ತು ಸಾಮಾಜಿಕವಾಗಿ ಪರೋಕ್ಷ ಯುದ್ಧದಂತೆ ಭಾವಿಸುವ ಪರಿಸ್ಥಿತಿಯಿದೆ. ಪುರೋಹಿತಶಾಹಿಯ ವೈರುಧ್ಯಗಳೇನೆ ಇದ್ದರೂ ಯಾವತ್ತೂ ಈ ಸಮುದಾಯ ಸಮಾಜ ಮುಖಿಯಾಗದೆ ಉಳಿದಿಲ್ಲ. 
ಪುರೋಹಿತಶಾಹಿ ಅಥವಾ ಬ್ರಾಹ್ಮಣ್ಯದ ವಿರೋಧ ಕಲ್ಪನೆಯನ್ನು ಹರಿಬಿಡುವ ಸಂದರ್ಭದಲ್ಲಿ ಗಮನಿಸಬೇಕಾದದ್ದು "ಯಾವತ್ತೂ ಬ್ರಾಹ್ಮಣ ಸಮುದಾಯ ಸಾಮಾಜಿಕ ಹಿಡಿತಕ್ಕಾಗಿ ಲಾಬಿ" ಗಳನ್ನು ನಡೆಸಿಲ್ಲ.( ಇವತ್ತೀಗೂ ಉ.ಭಾ.ದಲ್ಲಿ ಶೇ 63 ರಷ್ಟು ರಿಕ್ಷಾದಿಂದ ಜಾಡಮಾಲಿಗಳವರೆಗೂ ಬ್ರಾಹ್ಮಣರೇ ಇದ್ದಾರೆ) ಆದರೆ ಪರಂಪರಾನುಗತ ವೈಪರಿತ್ಯಗಳಲ್ಲಿ ಸರ್ವ ಸಮುದಾಯದಲ್ಲೂ ಆದ ಬದಲಾವಣೆ ಅವರಲ್ಲೂ ಅಗಿದೆ ಅಷ್ಟೆ. ಪ್ರಸ್ತುತದಲ್ಲೂ ಎಲ್ಲರಿಗೂ ಆಗುತ್ತಿರುವ ಸಾಮಾಜಿಕ ಮತ್ತು ರಾಜಕೀಯ ಸೇರಿದಂತೆ ಸರ್ವ ರೀತಿಯ ವೈಪರಿತ್ಯದಲ್ಲಿ ಅವರೂ ಬದುಕುತ್ತಿದ್ದಾರೆ. ಆದರೆ ಉಳಿದವರಿಗೆ ಇವತ್ತು ಸರಕಾರ ಸೇರಿದಂತೆ ಜಾಗತಿಕವಾಗಿ ಅವರ ಆರ್ಥಿಕ/ ಸಾಮಾಜಿಕ/ ರಾಜಕೀಯ ಪರಿಸ್ಥಿತಿಗಳ ಹೊರತು ಪಡಿಸಿಯೂ ಬೆಂಬಲ ಅವ್ಯಾಹತವಾಗಿ ದಕ್ಕುತ್ತಿದ್ದರೆ ಯಾವುದೇ ರೀತಿಯ ಬೆಂಬಲವಿಲ್ಲದೆ ಮತ್ತು ಮಿನಿಯೆಚ್‍ರ್ ಆಗುತ್ತಿರುವ ಕುಟುಂಬಗಳ ಆಸ್ತಿತ್ವದ ಹುಡುಕಾಟಕ್ಕಿಳಿಯಬೇಕಾದ ಪರಿಸ್ಥಿತಿಯಲ್ಲಿ ಬ್ರಾಹ್ಮಣರಿದ್ದಾರೆ.(ಒಂದು ಕಾಲದಲ್ಲಿ ಇಂಥಾ ಲೇಖನಗಳ ಪ್ರಕಟಣೆಗೂ ಯಾವುದೇ ಪತ್ರಿಕಾಲಯದಲ್ಲಿ ಜಾಗವಿರಲಿಲ್ಲ)
ಅಂಥದರಲ್ಲಿ ಅದೇ ಸಮುದಾಯದ ಸರ್ವಸಾರವನ್ನು ತನ್ನ ಬೆಳವಣಿಗೆಗೆ ಬಳಸಿಕೊಂಡು ನಂತರ ತನ್ನ ತಲುಬಿಗೆ ಉನ್ನತ ಸ್ತರದ ವ್ಯಕ್ತಿಯೊಬ್ಬರು ತಿರುಗಿ ಬಿದ್ದರೆ ಹೇಗಾಗಬೇಡ..? ಅಷ್ಟಿದ್ದರೆ ಮೊದಲೇ ಸಮುದಾಯ ತೊರೆದು ತಮ್ಮತನ ಸಾಬೀತು ಪಡಿಸಬೇಕಿತ್ತು...? ಅಸಲಿಗೆ ಹೀಗೆ ಹಿಂದುತ್ವ ಮತ್ತು ಬ್ರಾಹ್ಮಣ್ಯ ವಿರೋಧಿ ಪ್ರಗತಿಪರತೆ ತೋರುವವರು ಲೋಕದ ಹಲವು ಸಮುದಾಯದಲ್ಲಿ ಹಲವು ರೀತಿಯ ವೈರುಧ್ಯಗಳಿವೆಯಲ್ಲ ಅವನ್ನೇಕೆ ಎತ್ತಿ ತಿದ್ದುವ ಸೈದ್ಧಾಂತಿಕತೆ ತೋರಿಸಲಿಲ್ಲ. ಕಾರಣ ಬ್ರಾಹ್ಮಣರು ಅಸಂಘಟಿತರು, ಅಸಹಾಯಕರು, ಬಾಹುಬಲ ನಂಬಿಕೊಂಡು ಬೀದಿಗಿಳಿಯದ, ಹಸಿವೆ ಇದ್ದರೂ ಬಾಯ್ಬಿಡದ ಅತೀವ(?) ಸ್ವಾಭಿಮಾನಿಗಳು, ಎನೇ ಮಾಡಿದರೂ ಅದುಮಿಕೊಂಡಿರುತ್ತಾರೆ ಎನ್ನುವ ಪಾರಂಪರಾಗತ ನಂಬಿಕೆ ಇಂಥಾ ಧೈರ್ಯ ನೀಡುತ್ತದೆ. 
ಸಾಮಾಜಿಕ ಅಭಿಪ್ರಾಯವಾಗಿ ತಮ್ಮ ಚಿಂತನೆಯನ್ನು ರೂಪಿಸುವಾಗ, ಒಂದು ತಲೆಮಾರಿನ ಜನರ ಸ್ಥಿತಿಗತಿಗೆ ನಾನು ಕಾರಣನಾಗುತ್ತಿದ್ದೇನೆ ಎನ್ನುವ "ಸಾಕ್ಷಿಪ್ರಜ್ಞೆ" ಖಂಡಿತ ಇರಲೇಬೇಕು. ಅಲ್ಲಿ ವೈಯಕ್ತಿಕ ಹಿತಾಸಕ್ತಿಗಿಂತಲೂ ಬದ್ಧತೆ ಮುಖ್ಯ.  ಧೊರಣೆ ವ್ಯಕ್ತಪಡಿಸುವಾಗ ಇರುವ ಉತ್ಸಾಹ ಫಲಿತಾಂಶದ ಹೊತ್ತಿಗೆ "ಮೌನಿ"ಯಾಗಬಾರದು. ಕಾರಣ ಅವರು ತೆಗೆದುಕೊಳ್ಳುವ ಮತ್ತು ಸೂಚಿಸುವ ಸಲಹೆಗಳ ಆಧಾರದ ಮೇಲೆಯೇ ಸಾಮಾಜಿಕ ಜನಜೀವನದ ಸಾಮರಸ್ಯ ಕೂಡಾ ರೂಪಿತಗೊಳ್ಳುತ್ತದೆ ಎನ್ನುವ ಅವಗಾಹನೆ ಖಂಡಿತವಾಗಿರಬೇಕು. ಬದುಕಿದ್ದಾಗಲೂ, ಸತ್ತ ಮೇಲೂ ಯಾವ ರೀತಿ ಇರಬೇಕೆನ್ನುವುದು ಅವರ ಸ್ವಯಂ ಆಸಕ್ತಿ. ಅದೊಂದು ಸಾಮಾಜಿಕ ಹೊರೆಯಾಗದ ರೀತಿಯಲ್ಲಿರಬೇಕೆನ್ನುವುದು ಮಾತ್ರ ಮಾನವೀಯ ಸಹಜ ದರ್ಮವಾಗುತ್ತದೆ. 
ಸ್ವಯಂ "ಸಂಸ್ಕಾರ"ದ ಬುನಾದಿಯ ಮೇಲೆ ಬೆಳೆದ ವ್ಯಕ್ತಿತ್ವ ಅದನ್ನೆ ಧಿಕ್ಕರಿಸಿ ಶಭಾಶ್‍ಗಿರಿ ಗಿಟ್ಟಿಸುವುದಿದೆಯಲ್ಲ ಅದು ಸುಲಭವಲ್ಲ. ಗಿಟ್ಟಿಸಿದ ನಂತರವೂ ಏಣಿ ಒದೆಯುವ ಸೂತ್ರವೇ ನೈತಿಕ ಅಧಪತನಕ್ಕೆ ಕಾರಣವಾಗುತ್ತದೆ. ಕಾರಣ ವ್ಯಕ್ತಿಯೊಬ್ಬನ ವೈಯಕ್ತಿಕವಾದ ದಿಕ್ಕಾರ, ನಡೆ ನುಡಿಗಳಿಂದ ಸಾಮಾಜಿಕವಾಗಿ ಒಂದು ಜನಾಂಗದ ಮೇಲೆ ಯಾವ ಪರಿಣಾಮವೂ ಬೀಳಲಾರದು. ಆದರೆ ಸಾಮಾಜಿಕವಾಗಿ ಬುದ್ಧಿಜೀವಿಯಾಗಿ, ಬ್ರಾಹ್ಮಣ್ಯವನ್ನು ಸಾರಾಸಾಗಾಟಾಗಿ ಧಿಕ್ಕರಿಸಿದ ವ್ಯಕ್ತಿ, ಉನ್ನತ ಸ್ತರದಲ್ಲಿದ್ದು ತೋರ್ಪಡಿಸುವ ನಡವಳಿಕೆ ಯಾವ ಸಂಬಂಧವೂ ಇಲ್ಲದ ಒಂದು ಜನಾಂಗದ ತುಳಿಯುವಿಕೆಗೆ ಕಾರಣವಾಗುವಾಗ ಯಾವ ನ್ಯಾಯದ ಪರೀಧಿಯಲ್ಲಿ ನಿಂತು ನ್ಯಾಯ ಕೇಳೋಣ..? ಎರಡ್ಮೂರು ದಶಕಗಳ ಈ ಸ್ವಯಂಸಮುದಾಯ ಶೊಷಣೆಯಿಂದ ಯಾವ ಸೈದ್ಧಾಂತಿಕ ಬದ್ಧತೆಯೂ ಇಲ್ಲದ ಲೆಟೆರ್ ಹೆಡ್ ಪಾರ್ಟಿಗಳೂ ಕೂಡಾ ಬ್ರಾಹ್ಮಣ್ಯವನ್ನು ವಿರೋಧಿಸುವ, ಮಾತೆತ್ತಿದರೆ ಪುರೋಹಿತಶಾಹಿ ಎಂದು ಕಿರುಚುವ ಹಂತಕ್ಕೆ ಬಂತಲ್ಲ ಈ ಸಾಮಾಜಿಕ ಅವಮಾನ ಮತ್ತು ಎದುರಿಸಲಾಗದ ಅಸಂಘಟಿತರ ಪರವಾಗಿ ಈಗ ಯಾರು ನಿಲ್ಲುತ್ತಾರೆ..? ಮತ್ತಿದರ ಹೊಣೆ ಯಾರದ್ದು..?
ಯಾವುದೇ ಬುದ್ಧಿ ಜೀವಿ ಇವತ್ತು ಇತರೆ ಸಮುದಾಯ ಎದುರು ಬಿದ್ದು ಬದುಕಲಿ ನೋಡೊಣ...? ವಿಚಿತ್ರ ಎಂದರೆ ಇಷ್ಟು ವರ್ಷಗಳ ನೋವಿಗಾಗಿ ಈಗ ನಾವು ಅವರನ್ನು ಸಹಿಸಿಕೊಳ್ಳಬೇಕು ಎನ್ನುವ ಫಾರ್ಮಾನು ಹೊರಡಿಸುವ ಫೇಸ್‍ಬುಕ್ ಅಂಕಣಗಾರ್ತಿಗೆ ತನ್ನ ಮನೆಯಲ್ಲೇ ಮೊದಲು ಬದಲಾವಣೆ ತರಬೇಕೆನ್ನುವ ತಲೆಬೇಡವಾ..? ಅಥವಾ ಒಳಗೊಳಗೆ ಎನೇ ಇದ್ದರೂ ಸಾಮಾಜಿಕ ಸಮೂಹ ಸನ್ನಿಯ ಉಪಯೋಗ ಪಡೆಯೋಣ ಎಂದೆ..? ಇವತ್ತಿಗೂ ಯಾವ ದರ್ಮದಲ್ಲೂ, ಜಾತಿಯಲ್ಲೂ ಸಮುದಾಯದಲ್ಲೂ ಬದಲಾವಣೆ ಎಂದರೆ ನೀನು ನಿನ್ನವರ ವಿರುದ್ಧ ತಿರುಗಿ ಬೀಳು ಎಂದು ಹೇಳಿ ಕೊಡುವುದಿಲ್ಲ. ಆದರೆ ಸುಲಭಕ್ಕೆ ಅಂದು ದಕ್ಕಿಸಿಕೊಳ್ಳಬಹುದಾದ ಧರ್ಮ ಮತ್ತು ಸಮುದಾಯವಾಗಿ, ಹಿಂದೂ ಮತ್ತು ಬ್ರಾಹ್ಮಣರ ಕುರಿತಾಗಿ ಯಾರೂ ಆಡಿಕೊಳ್ಳುವಂತಾಗಿದೆ. ಕಾರಣ ಅವರಿವತ್ತಿಗೂ ಯಾವದೇ ರಾಜಕೀಯ ಪಕ್ಷಗಳ ವೋಟ್‍ಬ್ಯಾಂಕ್ ಅಲ್ಲ. ಯಾವನನ್ನಾದರೂ ಗೆಲ್ಲಿಸಬಲ್ಲ ಅಧ್ಬುತ ಸಂಘಟಿತ ಜನಾಂಗವೂ ಅಲ್ಲ.(ಸಂಘಟಿತರಾಗಬೇಡಿ ಎಂದಿದ್ವಾ ಎನ್ನುವ ವಿತಂಡ ವಾದಬೇಡ. ಹೊಟ್ಟೆಹೊರೆಯಲೇ ಕಷ್ಟಪಡುವ ಬಡ ಬ್ರಾಹ್ಮಣ ಅದ್ಯಾವ ಸಂಘಟನೆಗೆ ತೊಡಗಿಯಾನು..?) 
ನಿಮ್ಮ ವಿಗ್ರಹವೊಂದರ ಮೇಲೆ ಮೂತ್ರ ಮಾಡುತ್ತೇನೆ ಎಂದು ವಿಚಾರವಾದ ಪೂತ್ಕರಿಸಿ ಬದುಕಿಕೊಳ್ಳುವ ಧಾಷ್ಟ್ರ್ಯ ಯಾರಿಗಾದರೂ ಈಗಲಾದರೂ ಬೇರೆ ಸಮುದಾಯದಲ್ಲಿ ಇದೆಯೇ..? ಹೋಗಲಿ ಅವರವರ ಸಮುದಾಯದಲ್ಲೇ ಇದೆಯೇ. ಪೂಜಿಸಲ್ಪಡುವ ಮೂರ್ತಿ ಕೇವಲ ಬ್ರಾಹ್ಮಣರದ್ದೇನೂ ಆಗಿರಲಿಲ್ಲ. ಆದರೂ ಅವರನ್ನು ಸಹಿಸಿಕೊಂಡಿದ್ದು ಸರ್ವ ಸಮುದಾಯಗಳೂ ಕೂಡಾ. ಆದರೆ ಇಂಥಾ ಸಂದರ್ಭದಲ್ಲಿ ಆಗುವ ನೋವು, ಅವಮಾನ ಮತ್ತು ಅದನ್ನು ವಿರೋಧಿಸಿ ಎದುರು ಹಾಕಿಕೊಂಡು ಬದುಕಲಾಗದ ಅಭದ್ರ ಭಾವಗಳೆ ಮನುಶ್ಯನ ಪರ್ವಕಾಲದಲ್ಲಿ ಅವನ ಒಳಸುಳಿಯ ಮೃಗೀಯ ಎಚ್ಚರಕ್ಕೆ ಕಾರಣವಾಗುತ್ತವೆ ಮತ್ತು ಅಂಥಾ ಎಚ್ಚರವಾಗುವಿಕೆಯ ಕಾರಣ ತನ್ನ ಸಂಕಟವನ್ನು ಹೊರಹಾಕಲು ವಿಪ್ಲವಕಾರಿ ಸಮಯಕ್ಕಾಗಿ ಕಾಯುವುದು ಅಸಹಾಯಕತೆಯ ಸಂಕೇತವಾಗುತ್ತದೆ.
ಪರಿಪೂರ್ಣ ವ್ಯಕ್ತಿತ್ವದವರೇ ಬದುಕಿನ ಅಗತ್ಯತೆಗಳಿಗೆ ಸಾಮಾಜಿಕ ಬದ್ಧತೆ ಕಳೆದುಕೊಂಡಾಗ ಜನ ಸಾಮಾನ್ಯನ ನಡವಳಿಕೆಗಳನ್ನು ಹೇಗೆ ಅರ್ಥೈಸಿದರೂ ತಪ್ಪೇ. ಲೋಕದಲ್ಲಿ ಸಾವು ನಿಶ್ಚಿತ. ಆದರೆ ತೀರಿದ ನಂತರವೂ ಬರುವ ಅಭಿಪ್ರಾಯಗಳು ಮನುಷ್ಯ ಬದುಕಿದ್ದಾಗ ನಡೆದುಕೊಂಡ ನಡೆಯನ್ನು ಸೂಚಿಸುತ್ತವೆ. ಯಾವ ಮನುಷ್ಯನೂ ಹುಟ್ಟಿನಿಂದ ಸಂತನೂ ಅಲ್ಲ. ಪರಿಪೂಣ೯ನೂ ಅಲ್ಲ. ಆದರೆ ಕಳೆದುಕೊಳ್ಳುತ್ತಿರುವ ನೆಲೆಯನ್ನು ಭದ್ರಪಡಿಸಿಕೊಳ್ಳುವ ಆತುರದಲ್ಲಿ, ಭವಿಷ್ಯತ್ತಿನ ಸಂಪೂರ್ಣ ನೆಲೆಯನ್ನು ಕಳೆದುಕೊಂಡು ಬಿಡುವ ಅಪಾಯವನ್ನು ಅರಿವಿದ್ದೋ, ಇಲ್ಲದೆಯೂ ಮೈಮೇಲೆ ಎಳೆದುಕೊಳ್ಳುವುದಿದೆಯಲ್ಲ ಅದರಿಂದ ಕೊನೆಗೆ, ಬದುಕಿದ್ದಾಗಲಂತೂ ಆಯಿತು ತೀರಿದ ನಂತರವೂ... ಮುಕ್ತಿ ಇರುವುದಿಲ್ಲ. ಯಾರ ಸಾವು ಸಂಭ್ರಮಿಸುವಂಥಹದ್ದಲ್ಲ. ಹಾಗಂತ ಇನ್ನೊಬ್ಬನ ಗೆಲುವನ್ನು ಅಷ್ಟೇ ಸಮಚಿತ್ತದಿ ತೆಗೆದುಕೊಳ್ಳದಿರುವ ಹೆರಾಪ್ಹೆರಿತನ ಮನುಷ್ಯನ ಬಣ್ಣಗಳನ್ನು ಬಯಲು ಮಾಡುತ್ತದೆ. ಸಾವಿನ ಸಂಭ್ರಮ ನಾನೂ ವಿರೋಧಿಸುತ್ತೇನೆ.. ಆದರೆ ಪರಿಪೂರ್ಣ ಎನ್ನುವ ವ್ಯಕ್ತಿತ್ವದವರೇ ಬದುಕಿನ ಅಗತ್ಯತೆಗಳಿಗೆ ಸಾಮಾಜಿಕ ಬದ್ಧತೆ ಕಳೆದುಕೊಂಡಾಗ ಜನ ಸಾಮಾನ್ಯನ ನಡವಳಿಕೆಗಳಲ್ಲಿ ಕಂಡು ಬರುವ ನೋವು , ವಿಷಾದ , ಸಂತೋಷ ಎಲ್ಲವೂ ಅವನ ಅಸಹಾಯಕತನದ ನಡವಳಿಕೆಗಳೇ ವಿನಹ ಇನ್ನೇನಲ್ಲ ಅನ್ನಿಸುತ್ತದೆ ನನಗೆ.
ಮೋದಿ ಪ್ರಧಾನಿಯಾಗುವುದು ಖಚಿತವಾದಾಗ " ಪೂರ್ತಿ ದೇಶಕ್ಕೆ " (ಖiಠಿ Iಟಿಜiಚಿ) ಸಂತಾಪ ಸೂಚಿಸಿದವರೂ ಇದ್ದಾರೆ " ಈ ನಡವಳಿಕೆಯನ್ನು " ಹೇಗೆ ಅರ್ಥೈಸುವುದು ..? ಅಂದರೆ ಸಾವಿನಲ್ಲಿ ವ್ಯಕ್ತಿಯ ಎಲ್ಲಾ ಸರಿ ತಪ್ಪುಗಳು ಮಾಫಿಯಾಗುತ್ತವೆ ಎಂದಾಗುವುದಾದರೆ ನಾವ್ಯಾಕೆ ಇವತ್ತಿಗೂ ಗಾಂಧಿಜೀಯಿಂದ ಹಿಡಿದು ಸಾವರ್ಕರ್ವರೆಗೂ ಮಾತಾಡುತ್ತೇವೆ ... ? ಚೀನಾದ ಬಾಯಿಗೆ ಭಾರತವನ್ನು ಬಲಿ ನೀಡಿದ ನೆಹರೂವನ್ಯಾಕೆ ಬಿಡುತ್ತಿಲ್ಲ..? ವ್ಯಕ್ತಿ ತೀರ ಸಾಮಾನ್ಯನಂತೆ ಬದುಕಿದ್ದರೂ, ಕೊನೆಗೆ ಅಲ್ಲಲ್ಲಿ ಅಷ್ಟಿಷ್ಟು ಕಂಟಕನಾಗಿದ್ದರೂ ಸಾವಿನ ಹೊತ್ತಿಗೆ ಒಂದಿಷ್ಟು ಕರುಣೆಗೆ ಅರ್ಹನಾಗಿಬಿಡುವುದಿದೆಯಲ್ಲ ಅದು ಮನುಷ್ಯ ತನ್ನ ತಪ್ಪುಗಳ ಹಾದಿಯಲ್ಲಿ ಬದಲಾವಣೆಯ ಸೂಚನೆಯಾಗಿರುತ್ತದೆ. ಆದರೆ ತನ್ನ ಅಗತ್ಯತೆಗಳಿಗೆ ಒಂದು ಕಾಲಮಾನದ ಜನ ಸಾಮಾನ್ಯರ ಭಾವನೆಗಳನ್ನು ಘಾಸಿ ಮಾಡುವ ಮತ್ತು ಆ ಮೂಲಕ ತನ್ನ ಅಗತ್ಯತೆಗಳನ್ನು ಪೂರೈಸಿಕೊಳ್ಳುವ ಧಾವಂತಕ್ಕೆ ಇಳಿದು ಬಿಡುವ ವ್ಯಕ್ತಿತ್ವ ಸಹಜವಾಗೇ ಮಾನವನಲ್ಲಿಯ ಮೃಗೀಯ ಎಚ್ಚರಕ್ಕೆ ಕಾರಣವಾಗುತ್ತಾನೆ...ಅಂಥಹ ಒಂದು ಜೀವಂತ ಉದಾ. ಗೆ ನಾವಿವತ್ತು ಸಾಕ್ಷಿ ಅಷ್ಟೇ. ಹೀಗಿದ್ದಾಗ ಸಾವಿನಾ ನಂತರವೂ ಹೇಗಿರಬೇಕು ಎನ್ನುವುದನ್ನು ಜನರೇ ಪ್ರಾತ್ಯಕ್ಷಿಕರಾಗುವಾಗ ಯಾರಿಗೆ ಸರಿ ತಪ್ಪು ಎನ್ನೋಣ...? ಅಸಲಿಗೆ ಬದುಕಿದ್ದಾಗ ಬದುಕುವ ಬದುಕೇ ಸತ್ತ ನಂತರವೂ ಪ್ರತಿಫಲಿಸುತ್ತದೆ ಎನ್ನುವುದನ್ನು ಎಂಥವನೂ ಒಪ್ಪಲೇ ಬೇಕಲ್ಲವಾ ..? ... 

Friday, August 22, 2014

" ಬದುಕಿದ್ದಾಗ ಬದುಕುವ ಬದುಕೇ ಸಾವಿನ ನಂತರವೂ ಪ್ರತಿಫಲಿಸುತ್ತದೆ "

" ಬದುಕಿದ್ದಾಗ ಬದುಕುವ ಬದುಕೇ ಸಾವಿನ ನಂತರವೂ ಪ್ರತಿಫಲಿಸುತ್ತದೆ "
" ಪರಿಪೂರ್ಣ ವ್ಯಕ್ತಿತ್ವದವರೇ ಬದುಕಿನ ಅಗತ್ಯತೆಗಳಿಗೆ ಸಾಮಾಜಿಕ ಬದ್ಧತೆ ಕಳೆದುಕೊಂಡಾಗ ಜನ ಸಾಮಾನ್ಯನ ನಡವಳಿಕೆಗಳನ್ನು ಹೇಗೆ ಅರ್ಥೈಸಿದರೂ ತಪ್ಪೇ " (  ಮೋದಿ ಪ್ರಧಾನಿಯೆಂದು ಖಚಿತವಾದಾಗ " ದೇಶಕ್ಕೆ ಸಂತಾಪ " ಸೂಚಿಸಿದವರೂ ಇದ್ದಾರೆ.. ಮುಂದೆ ಓದಿ )
ಲೋಕದಲ್ಲಿ ಸಾವು ನಿಶ್ಚಿತ .. ಆದರೆ ತೀರಿದ ನಂತರವೂ ಬರುವ ಅಭಿಪ್ರಾಯಗಳು ಮನುಷ್ಯ ಬದುಕಿದ್ದಾಗ ನಡೆದುಕೊಂಡ ನಡೆಯನ್ನು ಸೂಚಿಸುತ್ತವೆ. ಯಾವ ಮನುಷ್ಯನೂ ಹುಟ್ಟಿನಿಂದ ಸಂತನೂ ಅಲ್ಲ. ಪರಿಪೂಣ೯ನೂ ಅಲ್ಲ. ಆದರೆ ಕಳೆದುಕೊಳ್ಳುತ್ತಿರುವ ನೆಲೆಯನ್ನು ಭದ್ರಪಡಿಸಿಕೊಳ್ಳುವ ಆತುರದಲ್ಲಿ, ಭವಿಷ್ಯತ್ತಿನ ಸಂಪೂರ್ಣ ನೆಲೆಯನ್ನು ಕಳೆದುಕೊಂಡು ಬಿಡುವ ಅಪಾಯವನ್ನು ಅರಿವಿದ್ದೋ, ಇಲ್ಲದೆಯೂ ಮೈಮೇಲೆ ಎಳೆದುಕೊಳ್ಳುವುದಿದೆಯಲ್ಲ ಅದರಿಂದ ಕೊನೆಗೆ, ಬದುಕಿದ್ದಾಗಲಂತೂ ಆಯಿತು ತೀರಿದ ನಂತರವೂ... ಮುಕ್ತಿ ಇರುವುದಿಲ್ಲ.
ಯಾರ ಸಾವು ಸಂಭ್ರಮಿಸುವಂಥಹದ್ದಲ್ಲ. ಹಾಗಂತ ಇನ್ನೊಬ್ಬನ ಗೆಲುವನ್ನು ಅಷ್ಟೇ ಸಮಚಿತ್ತದಿ ತೆಗೆದುಕೊಳ್ಳದಿರುವ ಹೆರಾಪ್ಹೆರಿತನ ಮನುಷ್ಯನ ಬಣ್ಣಗಳನ್ನು ಬಯಲು ಮಾಡುತ್ತದೆ. ( ಹಿರಿಯ ಶಿವರಾಮ ಕಾರಂತರಿಂದ ಹಿಡಿದು ಇತ್ತೀಚಿನ ಸ್ನೇಹಿತ ನಟರಾಜ್ ಕಾನಗೋಡುವರೆಗೂ ಯಾರು ಹೋದಾಗಲೂ ಎಲ್ಲೂ ಯಾರೂ ಸಂಭ್ರಮಾಚರಿಸಿರಲಿಲ್ಲ ಎನ್ನುವುದನ್ನೂ ಗಮನಿಸಬೇಕಾಗುತ್ತದೆ.) ಸಾವಿನ ಸಂಭ್ರಮ ನಾನೂ ವಿರೋಧಿಸುತ್ತೇನೆ.. ಆದರೆ ಪರಿಪೂರ್ಣ ಎನ್ನುವ ವ್ಯಕ್ತಿತ್ವದವರೇ ಬದುಕಿನ ಅಗತ್ಯತೆಗಳಿಗೆ ಸಾಮಾಜಿಕ ಬದ್ಧತೆ ಕಳೆದುಕೊಂಡಾಗ ಜನ ಸಾಮಾನ್ಯನ ನಡವಳಿಕೆಗಳಲ್ಲಿ ಕಂಡು ಬರುವ ನೋವು , ವಿಷಾದ , ಸಂತೋಷ ಎಲ್ಲವೂ ಅವನ ಅಸಹಾಯಕತನದ ನಡವಳಿಕೆಗಳೇ ವಿನಹ ಇನ್ನೇನಲ್ಲ ಅನ್ನಿಸುತ್ತದೆ ನನಗೆ.
ಮೋದಿ ಪ್ರಧಾನಿಯಾಗುವುದು ಖಚಿತವಾದಾಗ " ಪೂರ್ತಿ ದೇಶಕ್ಕೆ " (Rip India)  ಸಂತಾಪ ಸೂಚಿಸಿದವರೂ ಇದ್ದಾರೆ " ಈ ನಡವಳಿಕೆಯನ್ನು " ಹೇಗೆ ಅರ್ಥೈಸುವುದು ..?  ಅಂದರೆ ಸಾವಿನಲ್ಲಿ ವ್ಯಕ್ತಿಯ ಎಲ್ಲಾ ಸರಿ ತಪ್ಪುಗಳು ಮಾಫಿಯಾಗುತ್ತವೆ ಎಂದಾಗುವುದಾದರೆ ನಾವ್ಯಾಕೆ ಇವತ್ತಿಗೂ ಗಾಂಧಿಜೀಯಿಂದ ಹಿಡಿದು ಸಾವರ್ಕರ್ವರೆಗೂ ಮಾತಾಡುತ್ತೇವೆ ... ? ಚೀನಾದ ಬಾಯಿಗೆ ಭಾರತವನ್ನು ಬಲಿ ನೀಡಿದ ನೆಹರೂವನ್ಯಾಕೆ ಬಿಡುತ್ತಿಲ್ಲ..?  ವ್ಯಕ್ತಿ ತೀರ ಸಾಮಾನ್ಯನಂತೆ ಬದುಕಿದ್ದರೂ, ಕೊನೆಗೆ ಅಲ್ಲಲ್ಲಿ ಅಷ್ಟಿಷ್ಟು ಕಂಟಕನಾಗಿದ್ದರೂ ಸಾವಿನ ಹೊತ್ತಿಗೆ ಒಂದಿಷ್ಟು ಕರುಣೆಗೆ ಅರ್ಹನಾಗಿಬಿಡುವುದಿದೆಯಲ್ಲ ಅದು ಮನುಷ್ಯ ತನ್ನ ತಪ್ಪುಗಳ ಹಾದಿಯಲ್ಲಿ ಬದಲಾವಣೆಯ ಸೂಚನೆಯಾಗಿರುತ್ತದೆ. ಆದರೆ ತನ್ನ ಅಗತ್ಯತೆಗಳಿಗೆ ಒಂದು ಕಾಲಮಾನದ ಜನ ಸಾಮಾನ್ಯರ ಭಾವನೆಗಳನ್ನು ಘಾಸಿ ಮಾಡುವ ಮತ್ತು ಆ ಮೂಲಕ ತನ್ನ ಅಗತ್ಯತೆಗಳನ್ನು ಪೂರೈಸಿಕೊಳ್ಳುವ ಧಾವಂತಕ್ಕೆ ಇಳಿದು ಬಿಡುವ ವ್ಯಕ್ತಿತ್ವ ಸಹಜವಾಗೇ ಮಾನವನಲ್ಲಿಯ ಮೃಗೀಯ ಎಚ್ಚರಕ್ಕೆ ಕಾರಣವಾಗುತ್ತಾನೆ...ಅಂಥಹ ಒಂದು ಜೀವಂತ ಉದಾ. ಗೆ ನಾವಿವತ್ತು ಸಾಕ್ಷಿ ಅಷ್ಟೇ. ಹೀಗಿದ್ದಾಗ ಸಾವಿನಾ ನಂತರವೂ ಹೇಗಿರಬೇಕು ಎನ್ನುವುದನ್ನು ಜನರೇ ಪ್ರಾತ್ಯಕ್ಷಿಕರಾಗುವಾಗ ಯಾರಿಗೆ ಸರಿ ತಪ್ಪು ಎನ್ನೋಣ...? ಅಸಲಿಗೆ ಬದುಕಿದ್ದಾಗ ಬದುಕುವ ಬದುಕೇ ಸತ್ತ ನಂತರವೂ ಪ್ರತಿಫಲಿಸುತ್ತದೆ  ಎನ್ನುವುದನ್ನು ಎಂಥವನೂ ಒಪ್ಪಲೇ ಬೇಕಲ್ಲವಾ ..? ................... (ಸಂಜೆ...!!!)

Sunday, August 3, 2014

ಯಾವುದೋ ಘಳಿಗೇಲಿ ಸ್ವಾರ್ಥಕ್ಕಾಗಿ ಕೈ ಕೊಟ್ಟರೆ ಭೂಮಿ ಬಾಯ್ಬಿಡುವುದೊಂದೇ ಅವರಿಗುಳಿಯುವ ದಾರಿ..........

ನಿಮ್ಮೆಲ್ಲರ ಹಾರೈಕೆ ನಾನು ಸ್ಥಬ್ಧ ಸ್ಥಬ್ಧ... 
ಇವತ್ತೀಗೂ ಪೂರ್ತಿ ಸಂದೇಶಗಳನ್ನು / ಲೈಕುಗಳನ್ನು / ಶೇರಿಂಗ್ ಚಿತ್ರಗಳಲ್ಲಿ ಅಭಿಪ್ರಾಯಗಳಿಗೆ ಉತ್ತರಿಸಲು ಆಗಿಲ್ಲ.. ಆಗುತ್ತಿಲ್ಲ.. ಪೂರ್ತಿ ಒಂದು ದಿನ ಬೇಕಾ ಅಂತಾ.. ಅದಕ್ಕೆ ಎಲ್ಲರಿಗೂ ಹೀಗೆ .. ವರ್ಷ ಎಷ್ಟಾದರೂ ಬದುಕಿರಲಿ " ಸಂತೋಷ " ವಾಗೆ ಬದುಕಿರು ಎಂದು ಹಾರೈಸಿದ್ದಕ್ಕೆ....ಲೈಕು ಒತ್ತಿದ್ದಕ್ಕೆ.. ಫೋಟೋ ಹಾಕಿದ್ದಕ್ಕೆ.. ಮುಲಾಜಿಲ್ಲದೆ.. ನಿಮ್ಮ ನಿಮ್ಮ ಅಭಿಪ್ರಾಯ ಹೇಳಿದ್ದಕ್ಕೆ. ... ಅದೆಲ್ಲದರ ಜೊತೆಗೆ ಮನಪೂರ್ವಕ ಪ್ರೀತಿ ತೋರ್ಸಿದ್ದಕ್ಕೆ ಬರೀ ಧನ್ಯವಾದಗಳು ಎಂದರೆ ಸೂಕ್ತ ಅಲ್ಲ..
ಆದರೆ ಪ್ರೀತಿಯಿಂದ ಇಷ್ಟು ಮಾತ್ರ ಹೇಳಬಲ್ಲೆ.. ನನ್ನ ಸ್ನೇಹಿತೆ (ಟೈಮ್ ಲೈನ್ ನಲ್ಲಿ ) ಹೇಳಿದಂತೆ.. ಫ್ರೆಂಡ್ಸ್ ಇವತ್ತೀಗೂ ನನ್ನ ಅತಿ ದೊಡ್ಡ ಆಸ್ತಿ. ಭಾರತದ ಉದ್ದಗಲಕ್ಕೂ ಆಟೋ ರಿಕ್ಷ / ಛಾಯ ವಾಲ / ಜುವೆಲರಿ ಶಾಪ್ ಹುಡುಗ ಮತ್ತದರ ಓನ್ನರು.. / ಕುದುರೆ ಸವಾರಿ ಮಾಡಿಸೋ ಅಂಕಲ್ಲು / ಹಿಮಾಚಲದ ಹಲ್ವಾವಾಲ / ಚಾಮರಾಜ್ ಪೇಟೆ ಶೈಲಮ್ಮ / ಲೋನಾವಲದ ಉಡುಪಿ ಶೆಟ್ಟರು / ಗುಜರಾತಿನ ಪಟೆಲ್ ಭಾಯಿ ಗಳು / ಅಂಕೋಲೆ ಕೂರ್ವೆಯ ಬೆಸ್ತರ ದೋಸ್ತ../ ಗೋವೆಯ ಬಾರ್ ನ ಪೆದ್ರೊ ಫರ್ನಾ೦ದೀಸ್ / ರತ್ನಾಗಿರಿಯ ಶೆನಕರ್ ದಾದಾ ( ಈಗ ೭೯ ವರ್ಷ... ಇನ್ನಷ್ಟು ವರ್ಷ ಬದುಕಿರಲಿ )
/ ನನಗೆ ಮದ್ದು ಮಾಡುವ ವೈದ್ಯ ಮಿತ್ರರು.. ( ದುಡ್ಡು ಕೊಡಲು ಹೋದರೆ ದೋಸ್ತಿ ಕಟ್ ಎನ್ನುತ್ತಾರೆ ) / ಮದ್ಯ ಪ್ರದೇಶ ದ (ಇಂದೋರ್ ) ಅನೀಶ್ ಮತ್ತು ಕುಟುಂಬ / ದ.ಕ. ಅಂಗಡಿ ಮಾಲಿಕೆ ಲಕ್ಷ್ಮಮ್ಮ ( ಪಾನ್ ಅಂಗಡಿ ) / ಅಮೃತಸರದ ಸೈಕಲ್ ರಮಣ ಕುಮಾರ / ಕಾಶ್ಮೀರದ ಡ್ರೈ ಪುಟ್ ಅಂಗಡಿಯಾವ / ನನ್ನ ಬುಡಕ್ಕೆ ಕುರ ಆದಾಗ ಮನೆಗೆ ಬಂದು ಪಾಠ ಮಾಡಿ ನಂತರ ಮಿತ್ರರಾದ ನಾಯಕ್ ಮಾಸ್ತರು /.. ಹೀಗೆ ಬರೆಯುತ್ತಾ ಹೋದರೆ ಪೇಜು ಸಾಲಲ್ಲ. ಆದರೆ ಸ್ನೇಹಿತರ ಜೊತೆ ವಿಶ್ವಾಸಕ್ಕೆ ಧಕ್ಕೆ ತಂದಿಲ್ಲ. ಅದಕ್ಕಾಗೆ ಎಲ್ಲ ಕಡಿಯಿಂದನೂ ಇವತ್ತು ಹೀಗೆ ಈ ಜನ್ಮಕ್ಕಾಗುವಷ್ಟು ವಿಷಸ್ ಮಾಡಿದ್ದೀರಿ. 
ಒಂದೇ ಮಾತು ... ಯಾವ ಬಂಧವೂ ನೀಡದ ಸೌಖ್ಯ ... ತೀರ ಬದುಕು ಅಸಹನೀಯ ಆದಾಗ ಆಸರೆಯಾಗುವ ಹೆಗಲು ಫ್ರೆಂಡ್ಸ್ ದು. ಇಂಥಾ ಪವಿತ್ರ ಸಂಬಂಧ ಕ್ಕೆ ಯಾವುದೋ ಘಳಿಗೇಲಿ ಸ್ವಾರ್ಥಕ್ಕಾಗಿ ಕೈ ಕೊಟ್ಟರೆ ಭೂಮಿ ಬಾಯ್ಬಿಡುವುದೊಂದೇ ಅವರಿಗುಳಿಯುವ ದಾರಿ. ಕಾರಣ ದೇವರೂ ಕೈ ಬಿಟ್ಟರೂ ಕೈ ಬಿಡಲಾಗದ ಬಂಧ ಸ್ನೇಹಿತ / ಸ್ನೇಹಿತೆಯದ್ದು. ಸರಿ ಸುಮಾರು ಎರಡು ದಶಕದ ಸಿಹಿ - ಕಹಿ ಅನುಭವಗಳು ಈ ಬರಹದ ಬೆನ್ನಿಗಿದೆ.. ಇನ್ನುಳಿದದ್ದು ನಿಮಗೆ ಬಿಟ್ಟಿದ್ದೇನೆ... ಅಷ್ಟು ಹೇಳುವಷ್ಟು ಪ್ರಾಜ್ಞ ನಾನಲ್ಲ... ಆದರೆ ಮಿತ್ರರಿಗೆ ಕೈಕೊಡುವ ಜಾಯಮಾನ ನನ್ನದಲ್ಲ.. ಅಷ್ಟೇ ... ಸರ್ವೇ ಜನ ಸುಖಿ ನೋ ಭವಂತು ... ( ನೀವೆಲ್ಲ ಯಾವತ್ತಿದ್ದರೂ ಎಲ್ಲಿದ್ದರೂ ನನ್ನ ಸಾತ್ ಇದ್ದೇ ಇದೆ ... ಆಗೀಗ ಸಿಗೋಣ.. ಇರುವುದೊಂದೇ ಬದುಕಿನ ಖುಷಿ ಸಂಪೂರ್ಣ ಅನುಭವಿಸೋಣ... Let us frect out ) .. (ಸಂಜೆ .....!!!)

Saturday, August 2, 2014

ಕನಿಷ್ಠ ಬೆರಳೆಣಿಕೆಯಶ್ತಾದರೂ ಜನರಿಗೆ ...

" ನೆನಪಾದಾಗೆಲ್ಲ ಇಂಥವನೊಬ್ಬ ಬೇಕಿತ್ತು ಎನ್ನಿಸುತ್ತಲೇ.. ಒಂದು ಸಣ್ಣ ಜಾಜಿಯಂತಹ ನಗು ನಿಮ್ಮ ತುಟಿ ಮೇಲೆ ಅರಳಿದಲ್ಲಿ ಅದಕ್ಕಿಂತ ದೊಡ್ಡ ಸಾರ್ಥಕತೆ ನನ್ನ ಬದುಕಿಗೆ ಬೇಕಿಲ್ಲ.. " ....................... - ಸ್ಯಾಮ್ .....
   ಸ್ನೇಹಿತರ ದಿನ... ಯಾರ್ಯಾರನ್ನು ನೆನೆಯಲಿ... ಆದರೆ ಅವರನ್ನು ನೆನಪಿಸಿಕೊಳ್ಳುವುದಕ್ಕಿಂತ ಬೆರಳ ಸಂದಿನಲ್ಲಿ ಮರಳಿನಂತೆ ಜಾರಿ ಹೋಗುವ ಬದುಕಿನಲ್ಲಿ.. ದಿನವೂ ಬದುಕಿ ನನ್ನಿಷ್ಟದಂತೆ ಬಿಡಬೇಕೆನ್ನುವ ಆದಮ್ಯ ಉತ್ಸಾಹ ತುಂಬುವ ದೂರ ದೂರದೂರಿನ ಗೆಳೆಯರು ಬಹುಷ: ಈ ಜಗತ್ತಿನ ಅತಿ ದೊಡ್ಡ ವಿಸ್ಮಯ .. ನನ್ನ ಬದುಕಿನಲ್ಲೂ...ಭೂಮಿಯ ಮೇಲೂ  
ನಾನು ಏನಾಗುತ್ತೇನೋ... ಏನು ಮಾಡುತ್ತೇನೋ ಗೊತ್ತಿಲ್ಲ. ಆದರೆ ಯಾರೊಂದಿಗೆ ಕೆಲವು ಘಳಿಗೆಗಳನ್ನು ಕಳೆದರೂ ಅಷ್ಟೇ ಹೊತ್ತಿನಲ್ಲೊಂದು ಚೆಂದನೆಯ ಸಮಯ ಸೃಷ್ಟಿಯಾಗಬೇಕೆನುವವನು ನಾನು ... 
ನಾವು ಬಹುಶ: ಯಾರ ಬದುಕಿನಲ್ಲೀ ಏನೂ ಆಗಲಾರೆವು.. ಆದರೆ ಯಾವತ್ತು ನನ್ನನ್ನು ನೆನೆಸಿಕೊಂಡರೂ ಅವರ ಮುಖದಲ್ಲೊಂದು ಸಣ್ಣನೆಯ ನಗುವರಳಿ ಹೋದರೆ ಈ ಭೂಮಿ ಕಂಡ ಅಧ್ಬುತ ಜಗತ್ತಿನ ಜೀವಿತದ ಸಾರಥಕತೆ ನನ್ನದು.. 
ಕಾರಣ ನಾವು ಸಾವಿರ ಜನರಿಗೆ ಉತ್ತರ ದಾಯಿತ್ವ ಗಳಾಗಬೇಕಿಲ್ಲ.. 
ಬೆರಳಣಿಕೆಯಷ್ಟು ಜನರಿಗೆ ಪ್ರತಿ ಸಂತೋಷದ ಸಂದರ್ಬದಲ್ಲೂ ..".. ಅವನಿರಬೇಕಿತ್ತು " ಅನ್ನಿಸುವಂತೆ..  ಕುಟುಂಬದ ಸದಸ್ಯರು ಕೊನೆಯ ತುತ್ತು ಬಾಯಿಗಿಡುವಾಗ ಚಕ್ಕನೆ "..ಇವತ್ತು ಅವನಿರಬೇಕಿತ್ತು ನಮ್ಮೊಂದಿಗೆ ಈ ತುತ್ತಿಗೆ..." ಎನಿಸುವಂತೆ.. ಎಲ್ಲೋ ಸ್ನೇಹಿತನೊಬ್ಬ ಕೊನೆಯ ಗುಕ್ಕು ಬಾಯಿಗೆ ಸುರಿದುಕೊಳ್ಳುವ ಮುಂಚೆ ನೆಲಕ್ಕೆ ನಾಲ್ಕು ಹನಿ ಚಿಮ್ಮಿಸಿ .. " ಅರೆ ತು ನಹಿ ಹೈ ರೆ ಸ್ಯಾಮ್ .... ಮಗರ್ ಏ ತೋ ತೆರೆ ನಾಮ ಸೆ.." ಎಂದು ನೆನೆಸಿಕೊಂಡು ಬಿಡುವುದಿದೆಯಲ್ಲ.. ಮನೆಯಲ್ಲೊಮ್ಮೆ ಅಪರೂಪಕ್ಕೆ ಖುಷಿ ಚಿಮ್ಮಿ ಅವಗಾಹನೆಗೂ ನಿಲುಕದ ಅಚಿವ್ ಮೆಂಟು ಅಂತಾ ಆಗಿ ಬಿಟ್ಟಾಗ ನನಗೂ ..ಒಂದು ಕರೆ ಮಾಡಿ " ಏ ಹಿಂಗಾತೋ .. ಮಾರಾಯ ನಿನ್ನ ನೆನಸಿಕೊಂಡವಿ ನೋಡ... " ಎನ್ನುತ್ತಾ ಅಲ್ಲೀಂದಲೇ " ನೀ ಇಲ್ಲ ಬಿಡಲೇ ಎಂಥಾ ಚಲೋ ಹೋಳಿಗ ಮಾಡಿದ್ವಿ.... " ಎಂದು ಬಿಡುವುದಿದೆಯಲ್ಲ.. " ತಪ್ಪಿ ಘಟಿಸಿ ಬಿಡುವ ಅವಘಡದ ಸಂದರ್ಭದಲ್ಲೂ - ಅವನಿದ್ದರೆ ಏನಾದರೂ ಒಂಥರಾ ಜೊತೆಗೆ ನಿಲ್ತಿದ್ದ .. " ಎಂದು ನಾನೇನು ಮಾಡದಿದ್ದರೂ ಜೊತೆಗಿರುವ ಸಾಂತ್ವನಕ್ಕಾಗಿ ನನ್ನ ಪ್ರಸ್ತುತಿ ಬಯಸಿದರೆನ್ನುವ ಕಾರಣಕ್ಕೆ....ಆಗೆಲ್ಲಾ ಒಂದು ಸಣ್ಣ ನಗುವರಳಿ ಸಂಬ್ರಮಿಸುವುದಿದೆಯಲ್ಲ ಇದಕ್ಕಿಂತ ದೊಡ್ಡ ಸಾರ್ಥಕತೆ ನನ್ನ ಬದುಕಿನಲ್ಲಿ ಬೇಕಾಗಿಲ್ಲ. ಅಷ್ಟೇ .. ಇದಕ್ಕಿಂತ ಬದುಕಿನ ಸಾರ್ಥಕತೆ ಬೇರೆ...ಬೇಕಾಗೆ ಇಲ್ಲ.. 
ಅಷ್ಟೇ .. ಬದುಕು ಮರಳಿನಂತೆ ಜಾರುವ ಮುನ್ನ ಅಲ್ಲಲ್ಲೇ.. ನಿಂತು ಬಿಡುವ ಸಣ್ಣ ಬಂಗಾರದ ಕಣದಂತೆ ಎಲ್ಲೆಲ್ಲೋ ಇರುವ ನನ್ನೆಲ್ಲಾ ಸ್ನೇಹಿತ / ಸ್ನೇಹಿತೆಯರಿಗೆ ಇವತ್ತು .. ಅದೇ ಒಂದು ಜಾಜಿ ನಗೆಯ ...ಸ್ಮೈಲಿ ... :) ಅವರೆಲ್ಲರ ಬದುಕೂ ತಣ್ಣಗಿರಲಿ .. ನಾನೂ ಅವರೊಂದಿಗೆ ಸುಖಿಸಿಯೇನು .... ಕಾರಣ ನಾವು ಏನೂ ಕೊಡಲಾರೆವು ..ಆದರೆ ಬೇಕಿದ್ದ ಕ್ಷಣದಲ್ಲಿ ಯಾರಿಲ್ಲದಿದ್ದರೂ ತಬ್ಬಿ ಅಳಲಿಕ್ಕೊಂದು ಹೆಗಲು... ಖುಶಿಯಲ್ಲಿ ಹಾಡಿ ಕೊಳ್ಳಲ್ಲಿಕ್ಕೊಂದು ಕಂಠವಾಗುವ ಭರವಸೆ ಹುಟ್ಟಿಸುವುದಿದೆಯಲ್ಲ.. ಬದುಕು ಏನೇ ಆದರೂ ಜೋತೆಗೊಬ್ಬನಿದ್ದಾನೆ ಎನ್ನಿಸಲು ಮನಸ್ಸಲ್ಲೇ ಹುಟ್ಟಿಸುವ ಕಾನ್ಫಿ ಡೆನ್ಸು ಬಹುಶ:  ಅದು ದೇವರೂ ಕೊಡಲಾರದ ವರ... ಅಂಥಾ ಸ್ನೇಹಿತ ನಾನಾಗಬೇಕು.. ಕನಿಷ್ಠ ಬೆರಳೆಣಿಕೆಯಶ್ತಾದರೂ ಜನರಿಗೆ ...
ಅಷ್ಟು ಸಾಕು ಈ ಬದುಕಿಗೆ...  (ಸಂಜೆ...)

Friday, August 1, 2014

" ಒಂಚೂರು ಸಮಯ ಬೇಕು ಪ್ಲೀಸ್.... ಪ್ಲೀಸ್.. ........."

" ಒಂಚೂರು ಸಮಯ ಬೇಕು ಪ್ಲೀಸ್.... ಪ್ಲೀಸ್..  ........."            ಬರೀ ತಿರುಗುತ್ತಿ... ಬರಿತಿರ್ತಿಯಾ ಅದಕ್ಕೆ ಹಿಂಗೆ.. ಟ್ರೆಕ್ ಕಡಿಮೆ ಮಾಡು... ಊರು ಯಾಕೆ ಸುತ್ತಬೇಕು ..? ಅಷ್ಟೊಂದು ಫ್ರೆಂಡ್ಸ್ ಬೇಕಾ.. ? ಪ್ರತಿ ಊರಿನ ಮೂಲೆಗೂ ನಿನಗ್ಯಾಕೆ ಜನ ಬೇಕು ..?.. ಕೂತಲ್ಲಿಂದಲೇ ಎಲಾ ನಿರ್ವಹಿಸೋದ್ಯಾಕೆ.. ಅರಾಮಾಗಿರೋಕೆ ಆಗಲ್ವಾ..? ಹೀಗೆ ತರಹೇವಾರಿ ಪ್ರಶ್ನೆಗಳಿಂದ ನನ್ನ ಪ್ರಶ್ನಿಸುವವರ ಹಿಂದಿರುವ ಉದ್ದೇಶ ಒಂದೇ.. ಅವರ ಸ್ನೇಹಿತನಾಗಿ ಅವರ ಕಡೆಗೆ ಗಮನ ಹರಿಸುತ್ತಿಲ್ಲ ಎಂದೇ..? ಗೊತ್ತಿಲ್ಲ. ಆದರೆನನ್ನ ವಲಯ ದೊಡ್ಡದು.. ಗುಂಪು ನನ್ನ ಜಾಯಮಾನ... ಸಹಾಯಕ್ಕೆ ಧಾವಿಸೋದು.. ಕೌನ್ಸೆಲ್ಲಿಂಗ್.. ಪ್ಲಾನಿಂಗ್ .. ಬರೆಯೋದು.. ಪೇಂಟಿಂಗ್ ... ಟ್ರೆಕ್... ದಿನವಹಿ ನನ್ನ ನೌಕರಿ... ನನ್ನದೇ ಒತ್ತಾಸೆಗಳು ....ಫೋಟೋಗ್ರಾಫಿ...ಡ್ರೈವಿಂಗು ....ಸ್ನೇಹಿತರ ಜೊತೆಗೆ ರಾತ್ರಿಯಿಡಿ ಹರಟೆಗಳು... ಜಾಗತಿಕ ವಿದ್ಯಾಮಾನಗಳ ಮೇಲೆ ಬರವಣಿಗೆ.... ಆಗೀಗ ನನ್ನದೇ ಪ್ರವಾಸ.. ಮತ್ತು ಭೇಟಿ..ಕರೆದಲ್ಲಿ ಭಾಷಣ...ಇನಾರದ್ದೋ ಪುಸ್ತಕ...ಮಿತ್ರನೊಬ್ಬನ ಸೂತಕಕ್ಕೆ ಹೆಗಲು.... ಹೀಗೆ ಇದೆ ಜೀವನದಲ್ಲಿ ಬದುಕಿಬಿಡಬೇಕೆನ್ನುವ ನನ್ನ ಹುಕಿಗಳ ಪಟ್ಟಿ ದೊಡ್ಡದು... ಜೋತೆಗಿದ್ದವರನ್ನೂ ಬದುಕಿ ಎಂದು ಜೋತೆಗೆಳೆದು ಕೊಳ್ಳುವ ಇರಾದೆಗೆ ಕೊನೆ ಮೊದಲಿಲ್ಲ ...ಮಾತು ಮಾತು ಮಾತು.....ಇನಾರದ್ದೋ ಮನೆಯಲ್ಲಿ ಹಬ್ಬದ ಊಟ... ರುಚಿ ರುಚಿ ಆಯಾ ಸಿಜ್ಯನ್ ತಿಂಡಿ ..ಅದಕ್ಕಾಗಿ ನೂರಾರು ಕಿ.ಮಿ. ಪಯಣಿಸಿ ಹೋಗುವ ಹುಚ್ಚು ಯೋಜನೆಗಳು.. ಇನ್ಯಾರೋ ಸ್ನೇಹಿತರು ಕರೆದಿರುತ್ತಾರೆ.. ಅತ್ತ ಹೋದಾಗ ಅವರೊಂದಿಗೆ ಐದು ನಿಮಿಷವಾದರೂ ಕಳೆಯದೆ ಹಿ೦ದಿರುಗಿದ್ದಿಲ್ಲ...( ನನ್ನ ಮನೆಯ ಮೂಲೆಗೆ ಬಂದು ಅವರ್ಯಾರು ತಲುಪಲಾರರು ಈ ಕಾಡಿಗೆ.. ಅದಕೆ ನಾನೇ ಸಿಕ್ಕಿರುತ್ತೇನೆ ಅವಕಾಶ ಇದ್ದಾಗ ) ಇವೆಲ್ಲವೂ ನನ್ನ ಫ್ಯಾಶನ್ ...ಅವೆಲ್ಲದಕ್ಕೆ ಕಾರಣ ನನ್ನೊಂದಿಗೆ ನನ್ನೆಲ್ಲಾ ಉಮೇದಿಗೆ ಇಂಬುಕೊಡುವ ಸ್ನೇಹಿತರು ಮತ್ತು ಅವರದ್ದೇ ಕಾರಣಗಳು .ಇವನ್ನು ನಾನು ಹಿಂದೆಗೆಯಲಾರೆ.. ( ಮೌಂಟ್ ಎವರೆಸ್ಟ್ ನನ್ನ ಕನಸು ... ) ಇದೆಲ್ಲಾ ನನ್ನ ಸ್ವಬಹು ಪರಾಕ್ ಯಾಕೆ ಬರೆಯ ಬೇಕಾಯಿತೆಂದರೆ..
           ಸ್ನೇಹಿತರೆ... ದಯವಿಟ್ಟು ಕ್ಷಮಿಸಿ.. ದಿನವಹಿ ಸಿಗುವ ಸಮಯದಲ್ಲಿ ನನಗೆ ನೇರವಾಗಿ ಎಲ್ಲ ಪೋಸ್ಟು / ಲೈಕು / ಕಮೆಂಟು ಇತ್ಯಾದಿ ನೋಡಿ .. ವಿಷದೀಕರಿಸಿ ಉತ್ತರಿಸಲಾಗುತ್ತಿಲ್ಲ.. ದಿನವೂ ಅವುಗಳ ಸಂಖ್ಯೆ ಕಮ್ಮಿ ಆಗುವುದೇ ಇಲ್ಲ... ಕನಿಷ್ಠ ನನ್ನ ಸ್ನೇಹಿತರ ಪೋಸ್ಟುಗಳಿಗಾದರೂ ಒಂದು ಲೈಕ್ ಆದರೂ ಒತ್ತಬೇಕೆನ್ನುವ ನನ್ನ ಒತ್ತಾಸೆಯೂ ಪೂರೈಸಲಾಗುತ್ತಿಲ್ಲ... ಅದರಿಂದಾಗಿ ನನ್ನ ಇನ್ ಬಾಕ್ಸ್ ನಲ್ಲಿ ಕಂಪ್ಲೇಂಟು ಜಾಸ್ತಿ ಆಗುತ್ತಲೇ ಇದೆ.. ಏನು ಮಾಡಲಿ ಸಮಯದ ಅಭಾವ.. ಇಡಿ ಒ೦ದಿನ ಕೂತು ಎಲ್ಲಾ ನೋಡುತ್ತೇನೆ .. ಪ್ಲೀಸ್ ಪ್ಲೀಸ್ಸ್.... ಒಂಚೂರು ಸಮಯ ಕೊಡಿ.... ಅಷ್ಟಕ್ಕೂ ನಿಮ್ಮೆಲ್ಲರ ಅದೇ ವಿಶ್ವಾಸದಿಂದ ನಾನು ಏನೇನೋ ಮಾಡುತ್ತಿರುತ್ತೇನೆ..... ಇಲ್ಲದಿದ್ದರೆ ಹಿಗಿರೋಕೆ ಆಗುತ್ತಿತ್ತಾ....? ಅದಕ್ಕೆ ಪ್ಲೀಸ್ ಪ್ಲೀಸ್.. ಬೈಯ್ಕೋ ಬೇಡಿ ........................ (ಸಂಜೆ...!!!)