Tuesday, August 26, 2014

ಸಾವು ಪ್ರತಿಯೊಬ್ಬನಿಗೂ ನಿಶ್ಚಿತ.


ಸಾವು ಪ್ರತಿಯೊಬ್ಬನಿಗೂ ನಿಶ್ಚಿತ. ಆದರೆ ಬದುಕಿನುದ್ದಕ್ಕೂ ಮಾಡುವ ಬದುಕಿನ ರೀತಿ ನೀತಿಗಳೆ ನಮ್ಮ ಸಾವಿನ ನಂತರವೂ ಕಾಡುವ ಪರಿ ಇದೆಯಲ್ಲ ಅದು ಬಹುಶ: ಆತ್ಮ ಎನ್ನುವುದಿದ್ದರೆ ಅದರ ಅರಿವಿಗೆ ಬಂದೀತು. ಕಾರಣ ಸಾಮಾಜಿಕ ಧೋರಣೆಯನ್ನು ರೂಪಿಸುವವರ ಮೇಲೆ ಕೆಲವು ನೈತಿಕ ಮತ್ತು ಸಾಮಾಜಿಕ ಜವಾಬ್ದಾರಿಗಳು ಇರುತ್ತವೆ ಮತ್ತದರಿಂದಾಗುವ ಪ್ರಗತಿ ಅಥವಾ ಅನಾಹುತ ಎರಡಕ್ಕೂ ಅವರೆ ಹೊಣೆಗಾರರು ಆಗಿರುತ್ತಾರೆ. 
ಕಾರಣ ಇವತ್ತು ಸಂಪೂರ್ಣ ಮೈನಾರಿಟಿಯಾಗಿರುವ ಮತ್ತು ಯಾವ ರೀತಿಯಲ್ಲೂ ಬಲವನ್ನು ಹೊಂದಿಲ್ಲದ, ಯಾವ ರೀತಿಯ ಮೀಸಲಾತಿ ಇಲ್ಲದೆ, ಯಾವ ಸೌಲಭ್ಯಗಳಿಗೂ ಈಡಾಗದೆ ಇನ್ನಷ್ಟು ಜಾರುತ್ತಲೆ ಇರುವ ಸಮುದಾಯ ಬ್ರಾಹ್ಮಣರದ್ದು.  ವಿನಾಶದಂಚಿಗೆ ಜಾರುತ್ತಿರುವ ಇಂಥಾ ಸಮುದಾಯಕ್ಕೆ ಸಂಪೂರ್ಣ ನಷ್ಟವನ್ನುಂಟುಮಾಡುವಂತಹ ಪ್ರಗತಿಪರತೆ ತೋರಿದ ಕಾರಣವೇ ಸಂಪೂರ್ಣ ಬ್ರಾಹ್ಮಣರ ವಿರುದ್ಧ ಇವತ್ತು ಭೌದ್ಧಿಕವಾಗಿ ಮತ್ತು ಸಾಮಾಜಿಕವಾಗಿ ಪರೋಕ್ಷ ಯುದ್ಧದಂತೆ ಭಾವಿಸುವ ಪರಿಸ್ಥಿತಿಯಿದೆ. ಪುರೋಹಿತಶಾಹಿಯ ವೈರುಧ್ಯಗಳೇನೆ ಇದ್ದರೂ ಯಾವತ್ತೂ ಈ ಸಮುದಾಯ ಸಮಾಜ ಮುಖಿಯಾಗದೆ ಉಳಿದಿಲ್ಲ. 
ಪುರೋಹಿತಶಾಹಿ ಅಥವಾ ಬ್ರಾಹ್ಮಣ್ಯದ ವಿರೋಧ ಕಲ್ಪನೆಯನ್ನು ಹರಿಬಿಡುವ ಸಂದರ್ಭದಲ್ಲಿ ಗಮನಿಸಬೇಕಾದದ್ದು "ಯಾವತ್ತೂ ಬ್ರಾಹ್ಮಣ ಸಮುದಾಯ ಸಾಮಾಜಿಕ ಹಿಡಿತಕ್ಕಾಗಿ ಲಾಬಿ" ಗಳನ್ನು ನಡೆಸಿಲ್ಲ.( ಇವತ್ತೀಗೂ ಉ.ಭಾ.ದಲ್ಲಿ ಶೇ 63 ರಷ್ಟು ರಿಕ್ಷಾದಿಂದ ಜಾಡಮಾಲಿಗಳವರೆಗೂ ಬ್ರಾಹ್ಮಣರೇ ಇದ್ದಾರೆ) ಆದರೆ ಪರಂಪರಾನುಗತ ವೈಪರಿತ್ಯಗಳಲ್ಲಿ ಸರ್ವ ಸಮುದಾಯದಲ್ಲೂ ಆದ ಬದಲಾವಣೆ ಅವರಲ್ಲೂ ಅಗಿದೆ ಅಷ್ಟೆ. ಪ್ರಸ್ತುತದಲ್ಲೂ ಎಲ್ಲರಿಗೂ ಆಗುತ್ತಿರುವ ಸಾಮಾಜಿಕ ಮತ್ತು ರಾಜಕೀಯ ಸೇರಿದಂತೆ ಸರ್ವ ರೀತಿಯ ವೈಪರಿತ್ಯದಲ್ಲಿ ಅವರೂ ಬದುಕುತ್ತಿದ್ದಾರೆ. ಆದರೆ ಉಳಿದವರಿಗೆ ಇವತ್ತು ಸರಕಾರ ಸೇರಿದಂತೆ ಜಾಗತಿಕವಾಗಿ ಅವರ ಆರ್ಥಿಕ/ ಸಾಮಾಜಿಕ/ ರಾಜಕೀಯ ಪರಿಸ್ಥಿತಿಗಳ ಹೊರತು ಪಡಿಸಿಯೂ ಬೆಂಬಲ ಅವ್ಯಾಹತವಾಗಿ ದಕ್ಕುತ್ತಿದ್ದರೆ ಯಾವುದೇ ರೀತಿಯ ಬೆಂಬಲವಿಲ್ಲದೆ ಮತ್ತು ಮಿನಿಯೆಚ್‍ರ್ ಆಗುತ್ತಿರುವ ಕುಟುಂಬಗಳ ಆಸ್ತಿತ್ವದ ಹುಡುಕಾಟಕ್ಕಿಳಿಯಬೇಕಾದ ಪರಿಸ್ಥಿತಿಯಲ್ಲಿ ಬ್ರಾಹ್ಮಣರಿದ್ದಾರೆ.(ಒಂದು ಕಾಲದಲ್ಲಿ ಇಂಥಾ ಲೇಖನಗಳ ಪ್ರಕಟಣೆಗೂ ಯಾವುದೇ ಪತ್ರಿಕಾಲಯದಲ್ಲಿ ಜಾಗವಿರಲಿಲ್ಲ)
ಅಂಥದರಲ್ಲಿ ಅದೇ ಸಮುದಾಯದ ಸರ್ವಸಾರವನ್ನು ತನ್ನ ಬೆಳವಣಿಗೆಗೆ ಬಳಸಿಕೊಂಡು ನಂತರ ತನ್ನ ತಲುಬಿಗೆ ಉನ್ನತ ಸ್ತರದ ವ್ಯಕ್ತಿಯೊಬ್ಬರು ತಿರುಗಿ ಬಿದ್ದರೆ ಹೇಗಾಗಬೇಡ..? ಅಷ್ಟಿದ್ದರೆ ಮೊದಲೇ ಸಮುದಾಯ ತೊರೆದು ತಮ್ಮತನ ಸಾಬೀತು ಪಡಿಸಬೇಕಿತ್ತು...? ಅಸಲಿಗೆ ಹೀಗೆ ಹಿಂದುತ್ವ ಮತ್ತು ಬ್ರಾಹ್ಮಣ್ಯ ವಿರೋಧಿ ಪ್ರಗತಿಪರತೆ ತೋರುವವರು ಲೋಕದ ಹಲವು ಸಮುದಾಯದಲ್ಲಿ ಹಲವು ರೀತಿಯ ವೈರುಧ್ಯಗಳಿವೆಯಲ್ಲ ಅವನ್ನೇಕೆ ಎತ್ತಿ ತಿದ್ದುವ ಸೈದ್ಧಾಂತಿಕತೆ ತೋರಿಸಲಿಲ್ಲ. ಕಾರಣ ಬ್ರಾಹ್ಮಣರು ಅಸಂಘಟಿತರು, ಅಸಹಾಯಕರು, ಬಾಹುಬಲ ನಂಬಿಕೊಂಡು ಬೀದಿಗಿಳಿಯದ, ಹಸಿವೆ ಇದ್ದರೂ ಬಾಯ್ಬಿಡದ ಅತೀವ(?) ಸ್ವಾಭಿಮಾನಿಗಳು, ಎನೇ ಮಾಡಿದರೂ ಅದುಮಿಕೊಂಡಿರುತ್ತಾರೆ ಎನ್ನುವ ಪಾರಂಪರಾಗತ ನಂಬಿಕೆ ಇಂಥಾ ಧೈರ್ಯ ನೀಡುತ್ತದೆ. 
ಸಾಮಾಜಿಕ ಅಭಿಪ್ರಾಯವಾಗಿ ತಮ್ಮ ಚಿಂತನೆಯನ್ನು ರೂಪಿಸುವಾಗ, ಒಂದು ತಲೆಮಾರಿನ ಜನರ ಸ್ಥಿತಿಗತಿಗೆ ನಾನು ಕಾರಣನಾಗುತ್ತಿದ್ದೇನೆ ಎನ್ನುವ "ಸಾಕ್ಷಿಪ್ರಜ್ಞೆ" ಖಂಡಿತ ಇರಲೇಬೇಕು. ಅಲ್ಲಿ ವೈಯಕ್ತಿಕ ಹಿತಾಸಕ್ತಿಗಿಂತಲೂ ಬದ್ಧತೆ ಮುಖ್ಯ.  ಧೊರಣೆ ವ್ಯಕ್ತಪಡಿಸುವಾಗ ಇರುವ ಉತ್ಸಾಹ ಫಲಿತಾಂಶದ ಹೊತ್ತಿಗೆ "ಮೌನಿ"ಯಾಗಬಾರದು. ಕಾರಣ ಅವರು ತೆಗೆದುಕೊಳ್ಳುವ ಮತ್ತು ಸೂಚಿಸುವ ಸಲಹೆಗಳ ಆಧಾರದ ಮೇಲೆಯೇ ಸಾಮಾಜಿಕ ಜನಜೀವನದ ಸಾಮರಸ್ಯ ಕೂಡಾ ರೂಪಿತಗೊಳ್ಳುತ್ತದೆ ಎನ್ನುವ ಅವಗಾಹನೆ ಖಂಡಿತವಾಗಿರಬೇಕು. ಬದುಕಿದ್ದಾಗಲೂ, ಸತ್ತ ಮೇಲೂ ಯಾವ ರೀತಿ ಇರಬೇಕೆನ್ನುವುದು ಅವರ ಸ್ವಯಂ ಆಸಕ್ತಿ. ಅದೊಂದು ಸಾಮಾಜಿಕ ಹೊರೆಯಾಗದ ರೀತಿಯಲ್ಲಿರಬೇಕೆನ್ನುವುದು ಮಾತ್ರ ಮಾನವೀಯ ಸಹಜ ದರ್ಮವಾಗುತ್ತದೆ. 
ಸ್ವಯಂ "ಸಂಸ್ಕಾರ"ದ ಬುನಾದಿಯ ಮೇಲೆ ಬೆಳೆದ ವ್ಯಕ್ತಿತ್ವ ಅದನ್ನೆ ಧಿಕ್ಕರಿಸಿ ಶಭಾಶ್‍ಗಿರಿ ಗಿಟ್ಟಿಸುವುದಿದೆಯಲ್ಲ ಅದು ಸುಲಭವಲ್ಲ. ಗಿಟ್ಟಿಸಿದ ನಂತರವೂ ಏಣಿ ಒದೆಯುವ ಸೂತ್ರವೇ ನೈತಿಕ ಅಧಪತನಕ್ಕೆ ಕಾರಣವಾಗುತ್ತದೆ. ಕಾರಣ ವ್ಯಕ್ತಿಯೊಬ್ಬನ ವೈಯಕ್ತಿಕವಾದ ದಿಕ್ಕಾರ, ನಡೆ ನುಡಿಗಳಿಂದ ಸಾಮಾಜಿಕವಾಗಿ ಒಂದು ಜನಾಂಗದ ಮೇಲೆ ಯಾವ ಪರಿಣಾಮವೂ ಬೀಳಲಾರದು. ಆದರೆ ಸಾಮಾಜಿಕವಾಗಿ ಬುದ್ಧಿಜೀವಿಯಾಗಿ, ಬ್ರಾಹ್ಮಣ್ಯವನ್ನು ಸಾರಾಸಾಗಾಟಾಗಿ ಧಿಕ್ಕರಿಸಿದ ವ್ಯಕ್ತಿ, ಉನ್ನತ ಸ್ತರದಲ್ಲಿದ್ದು ತೋರ್ಪಡಿಸುವ ನಡವಳಿಕೆ ಯಾವ ಸಂಬಂಧವೂ ಇಲ್ಲದ ಒಂದು ಜನಾಂಗದ ತುಳಿಯುವಿಕೆಗೆ ಕಾರಣವಾಗುವಾಗ ಯಾವ ನ್ಯಾಯದ ಪರೀಧಿಯಲ್ಲಿ ನಿಂತು ನ್ಯಾಯ ಕೇಳೋಣ..? ಎರಡ್ಮೂರು ದಶಕಗಳ ಈ ಸ್ವಯಂಸಮುದಾಯ ಶೊಷಣೆಯಿಂದ ಯಾವ ಸೈದ್ಧಾಂತಿಕ ಬದ್ಧತೆಯೂ ಇಲ್ಲದ ಲೆಟೆರ್ ಹೆಡ್ ಪಾರ್ಟಿಗಳೂ ಕೂಡಾ ಬ್ರಾಹ್ಮಣ್ಯವನ್ನು ವಿರೋಧಿಸುವ, ಮಾತೆತ್ತಿದರೆ ಪುರೋಹಿತಶಾಹಿ ಎಂದು ಕಿರುಚುವ ಹಂತಕ್ಕೆ ಬಂತಲ್ಲ ಈ ಸಾಮಾಜಿಕ ಅವಮಾನ ಮತ್ತು ಎದುರಿಸಲಾಗದ ಅಸಂಘಟಿತರ ಪರವಾಗಿ ಈಗ ಯಾರು ನಿಲ್ಲುತ್ತಾರೆ..? ಮತ್ತಿದರ ಹೊಣೆ ಯಾರದ್ದು..?
ಯಾವುದೇ ಬುದ್ಧಿ ಜೀವಿ ಇವತ್ತು ಇತರೆ ಸಮುದಾಯ ಎದುರು ಬಿದ್ದು ಬದುಕಲಿ ನೋಡೊಣ...? ವಿಚಿತ್ರ ಎಂದರೆ ಇಷ್ಟು ವರ್ಷಗಳ ನೋವಿಗಾಗಿ ಈಗ ನಾವು ಅವರನ್ನು ಸಹಿಸಿಕೊಳ್ಳಬೇಕು ಎನ್ನುವ ಫಾರ್ಮಾನು ಹೊರಡಿಸುವ ಫೇಸ್‍ಬುಕ್ ಅಂಕಣಗಾರ್ತಿಗೆ ತನ್ನ ಮನೆಯಲ್ಲೇ ಮೊದಲು ಬದಲಾವಣೆ ತರಬೇಕೆನ್ನುವ ತಲೆಬೇಡವಾ..? ಅಥವಾ ಒಳಗೊಳಗೆ ಎನೇ ಇದ್ದರೂ ಸಾಮಾಜಿಕ ಸಮೂಹ ಸನ್ನಿಯ ಉಪಯೋಗ ಪಡೆಯೋಣ ಎಂದೆ..? ಇವತ್ತಿಗೂ ಯಾವ ದರ್ಮದಲ್ಲೂ, ಜಾತಿಯಲ್ಲೂ ಸಮುದಾಯದಲ್ಲೂ ಬದಲಾವಣೆ ಎಂದರೆ ನೀನು ನಿನ್ನವರ ವಿರುದ್ಧ ತಿರುಗಿ ಬೀಳು ಎಂದು ಹೇಳಿ ಕೊಡುವುದಿಲ್ಲ. ಆದರೆ ಸುಲಭಕ್ಕೆ ಅಂದು ದಕ್ಕಿಸಿಕೊಳ್ಳಬಹುದಾದ ಧರ್ಮ ಮತ್ತು ಸಮುದಾಯವಾಗಿ, ಹಿಂದೂ ಮತ್ತು ಬ್ರಾಹ್ಮಣರ ಕುರಿತಾಗಿ ಯಾರೂ ಆಡಿಕೊಳ್ಳುವಂತಾಗಿದೆ. ಕಾರಣ ಅವರಿವತ್ತಿಗೂ ಯಾವದೇ ರಾಜಕೀಯ ಪಕ್ಷಗಳ ವೋಟ್‍ಬ್ಯಾಂಕ್ ಅಲ್ಲ. ಯಾವನನ್ನಾದರೂ ಗೆಲ್ಲಿಸಬಲ್ಲ ಅಧ್ಬುತ ಸಂಘಟಿತ ಜನಾಂಗವೂ ಅಲ್ಲ.(ಸಂಘಟಿತರಾಗಬೇಡಿ ಎಂದಿದ್ವಾ ಎನ್ನುವ ವಿತಂಡ ವಾದಬೇಡ. ಹೊಟ್ಟೆಹೊರೆಯಲೇ ಕಷ್ಟಪಡುವ ಬಡ ಬ್ರಾಹ್ಮಣ ಅದ್ಯಾವ ಸಂಘಟನೆಗೆ ತೊಡಗಿಯಾನು..?) 
ನಿಮ್ಮ ವಿಗ್ರಹವೊಂದರ ಮೇಲೆ ಮೂತ್ರ ಮಾಡುತ್ತೇನೆ ಎಂದು ವಿಚಾರವಾದ ಪೂತ್ಕರಿಸಿ ಬದುಕಿಕೊಳ್ಳುವ ಧಾಷ್ಟ್ರ್ಯ ಯಾರಿಗಾದರೂ ಈಗಲಾದರೂ ಬೇರೆ ಸಮುದಾಯದಲ್ಲಿ ಇದೆಯೇ..? ಹೋಗಲಿ ಅವರವರ ಸಮುದಾಯದಲ್ಲೇ ಇದೆಯೇ. ಪೂಜಿಸಲ್ಪಡುವ ಮೂರ್ತಿ ಕೇವಲ ಬ್ರಾಹ್ಮಣರದ್ದೇನೂ ಆಗಿರಲಿಲ್ಲ. ಆದರೂ ಅವರನ್ನು ಸಹಿಸಿಕೊಂಡಿದ್ದು ಸರ್ವ ಸಮುದಾಯಗಳೂ ಕೂಡಾ. ಆದರೆ ಇಂಥಾ ಸಂದರ್ಭದಲ್ಲಿ ಆಗುವ ನೋವು, ಅವಮಾನ ಮತ್ತು ಅದನ್ನು ವಿರೋಧಿಸಿ ಎದುರು ಹಾಕಿಕೊಂಡು ಬದುಕಲಾಗದ ಅಭದ್ರ ಭಾವಗಳೆ ಮನುಶ್ಯನ ಪರ್ವಕಾಲದಲ್ಲಿ ಅವನ ಒಳಸುಳಿಯ ಮೃಗೀಯ ಎಚ್ಚರಕ್ಕೆ ಕಾರಣವಾಗುತ್ತವೆ ಮತ್ತು ಅಂಥಾ ಎಚ್ಚರವಾಗುವಿಕೆಯ ಕಾರಣ ತನ್ನ ಸಂಕಟವನ್ನು ಹೊರಹಾಕಲು ವಿಪ್ಲವಕಾರಿ ಸಮಯಕ್ಕಾಗಿ ಕಾಯುವುದು ಅಸಹಾಯಕತೆಯ ಸಂಕೇತವಾಗುತ್ತದೆ.
ಪರಿಪೂರ್ಣ ವ್ಯಕ್ತಿತ್ವದವರೇ ಬದುಕಿನ ಅಗತ್ಯತೆಗಳಿಗೆ ಸಾಮಾಜಿಕ ಬದ್ಧತೆ ಕಳೆದುಕೊಂಡಾಗ ಜನ ಸಾಮಾನ್ಯನ ನಡವಳಿಕೆಗಳನ್ನು ಹೇಗೆ ಅರ್ಥೈಸಿದರೂ ತಪ್ಪೇ. ಲೋಕದಲ್ಲಿ ಸಾವು ನಿಶ್ಚಿತ. ಆದರೆ ತೀರಿದ ನಂತರವೂ ಬರುವ ಅಭಿಪ್ರಾಯಗಳು ಮನುಷ್ಯ ಬದುಕಿದ್ದಾಗ ನಡೆದುಕೊಂಡ ನಡೆಯನ್ನು ಸೂಚಿಸುತ್ತವೆ. ಯಾವ ಮನುಷ್ಯನೂ ಹುಟ್ಟಿನಿಂದ ಸಂತನೂ ಅಲ್ಲ. ಪರಿಪೂಣ೯ನೂ ಅಲ್ಲ. ಆದರೆ ಕಳೆದುಕೊಳ್ಳುತ್ತಿರುವ ನೆಲೆಯನ್ನು ಭದ್ರಪಡಿಸಿಕೊಳ್ಳುವ ಆತುರದಲ್ಲಿ, ಭವಿಷ್ಯತ್ತಿನ ಸಂಪೂರ್ಣ ನೆಲೆಯನ್ನು ಕಳೆದುಕೊಂಡು ಬಿಡುವ ಅಪಾಯವನ್ನು ಅರಿವಿದ್ದೋ, ಇಲ್ಲದೆಯೂ ಮೈಮೇಲೆ ಎಳೆದುಕೊಳ್ಳುವುದಿದೆಯಲ್ಲ ಅದರಿಂದ ಕೊನೆಗೆ, ಬದುಕಿದ್ದಾಗಲಂತೂ ಆಯಿತು ತೀರಿದ ನಂತರವೂ... ಮುಕ್ತಿ ಇರುವುದಿಲ್ಲ. ಯಾರ ಸಾವು ಸಂಭ್ರಮಿಸುವಂಥಹದ್ದಲ್ಲ. ಹಾಗಂತ ಇನ್ನೊಬ್ಬನ ಗೆಲುವನ್ನು ಅಷ್ಟೇ ಸಮಚಿತ್ತದಿ ತೆಗೆದುಕೊಳ್ಳದಿರುವ ಹೆರಾಪ್ಹೆರಿತನ ಮನುಷ್ಯನ ಬಣ್ಣಗಳನ್ನು ಬಯಲು ಮಾಡುತ್ತದೆ. ಸಾವಿನ ಸಂಭ್ರಮ ನಾನೂ ವಿರೋಧಿಸುತ್ತೇನೆ.. ಆದರೆ ಪರಿಪೂರ್ಣ ಎನ್ನುವ ವ್ಯಕ್ತಿತ್ವದವರೇ ಬದುಕಿನ ಅಗತ್ಯತೆಗಳಿಗೆ ಸಾಮಾಜಿಕ ಬದ್ಧತೆ ಕಳೆದುಕೊಂಡಾಗ ಜನ ಸಾಮಾನ್ಯನ ನಡವಳಿಕೆಗಳಲ್ಲಿ ಕಂಡು ಬರುವ ನೋವು , ವಿಷಾದ , ಸಂತೋಷ ಎಲ್ಲವೂ ಅವನ ಅಸಹಾಯಕತನದ ನಡವಳಿಕೆಗಳೇ ವಿನಹ ಇನ್ನೇನಲ್ಲ ಅನ್ನಿಸುತ್ತದೆ ನನಗೆ.
ಮೋದಿ ಪ್ರಧಾನಿಯಾಗುವುದು ಖಚಿತವಾದಾಗ " ಪೂರ್ತಿ ದೇಶಕ್ಕೆ " (ಖiಠಿ Iಟಿಜiಚಿ) ಸಂತಾಪ ಸೂಚಿಸಿದವರೂ ಇದ್ದಾರೆ " ಈ ನಡವಳಿಕೆಯನ್ನು " ಹೇಗೆ ಅರ್ಥೈಸುವುದು ..? ಅಂದರೆ ಸಾವಿನಲ್ಲಿ ವ್ಯಕ್ತಿಯ ಎಲ್ಲಾ ಸರಿ ತಪ್ಪುಗಳು ಮಾಫಿಯಾಗುತ್ತವೆ ಎಂದಾಗುವುದಾದರೆ ನಾವ್ಯಾಕೆ ಇವತ್ತಿಗೂ ಗಾಂಧಿಜೀಯಿಂದ ಹಿಡಿದು ಸಾವರ್ಕರ್ವರೆಗೂ ಮಾತಾಡುತ್ತೇವೆ ... ? ಚೀನಾದ ಬಾಯಿಗೆ ಭಾರತವನ್ನು ಬಲಿ ನೀಡಿದ ನೆಹರೂವನ್ಯಾಕೆ ಬಿಡುತ್ತಿಲ್ಲ..? ವ್ಯಕ್ತಿ ತೀರ ಸಾಮಾನ್ಯನಂತೆ ಬದುಕಿದ್ದರೂ, ಕೊನೆಗೆ ಅಲ್ಲಲ್ಲಿ ಅಷ್ಟಿಷ್ಟು ಕಂಟಕನಾಗಿದ್ದರೂ ಸಾವಿನ ಹೊತ್ತಿಗೆ ಒಂದಿಷ್ಟು ಕರುಣೆಗೆ ಅರ್ಹನಾಗಿಬಿಡುವುದಿದೆಯಲ್ಲ ಅದು ಮನುಷ್ಯ ತನ್ನ ತಪ್ಪುಗಳ ಹಾದಿಯಲ್ಲಿ ಬದಲಾವಣೆಯ ಸೂಚನೆಯಾಗಿರುತ್ತದೆ. ಆದರೆ ತನ್ನ ಅಗತ್ಯತೆಗಳಿಗೆ ಒಂದು ಕಾಲಮಾನದ ಜನ ಸಾಮಾನ್ಯರ ಭಾವನೆಗಳನ್ನು ಘಾಸಿ ಮಾಡುವ ಮತ್ತು ಆ ಮೂಲಕ ತನ್ನ ಅಗತ್ಯತೆಗಳನ್ನು ಪೂರೈಸಿಕೊಳ್ಳುವ ಧಾವಂತಕ್ಕೆ ಇಳಿದು ಬಿಡುವ ವ್ಯಕ್ತಿತ್ವ ಸಹಜವಾಗೇ ಮಾನವನಲ್ಲಿಯ ಮೃಗೀಯ ಎಚ್ಚರಕ್ಕೆ ಕಾರಣವಾಗುತ್ತಾನೆ...ಅಂಥಹ ಒಂದು ಜೀವಂತ ಉದಾ. ಗೆ ನಾವಿವತ್ತು ಸಾಕ್ಷಿ ಅಷ್ಟೇ. ಹೀಗಿದ್ದಾಗ ಸಾವಿನಾ ನಂತರವೂ ಹೇಗಿರಬೇಕು ಎನ್ನುವುದನ್ನು ಜನರೇ ಪ್ರಾತ್ಯಕ್ಷಿಕರಾಗುವಾಗ ಯಾರಿಗೆ ಸರಿ ತಪ್ಪು ಎನ್ನೋಣ...? ಅಸಲಿಗೆ ಬದುಕಿದ್ದಾಗ ಬದುಕುವ ಬದುಕೇ ಸತ್ತ ನಂತರವೂ ಪ್ರತಿಫಲಿಸುತ್ತದೆ ಎನ್ನುವುದನ್ನು ಎಂಥವನೂ ಒಪ್ಪಲೇ ಬೇಕಲ್ಲವಾ ..? ... 

1 comment:

  1. D bad memories left by d deceased person due to his misdeeds & irritating utterances hurting others sentiments is d monument d society builds on d burial place of d person.

    ReplyDelete