Tuesday, September 9, 2014

" ಸೆಕ್ಸ್ ಅನ್ನೋದು ಸ್ವಯಂ ಮಾಡಿಕೊಳ್ಳುವ ಅಡುಗೆಯ೦ತಲ್ಲ .. "

" ಸೆಕ್ಸ್ ಅನ್ನೋದು ಸ್ವಯಂ ಮಾಡಿಕೊಳ್ಳುವ ಅಡುಗೆಯಮ್ತಲ್ಲ .. "  

ಪ್ರಶ್ನೆ : " ಅಂಗವೈಕಲ್ಯ, ಇತ್ಯಾದಿ ಕಾರಣಗಳಿಗೆ ಮದುವೆ ವಂಚಿತರಾದವರು ಆಜೀವಪರ್ಯಂತ ಲೈಂಗಿಕತೆಯಿಂದ ವಂಚಿತರಾಗಿಯೇ ಇರಬೇಕೆ? ಇವರಿಗೆ ಏನು ಪರಿಹಾರ ಸೂಚಿಸುತ್ತೀರಿ?... ಕಾಮತೃಷೆಯನ್ನು 'ಅದುಮಿಡಿ' ಎಂದು ಹೇಳುವುದು ಸುಲಭ...
(ನನ್ನ ಉತ್ತರ - )
ಇದರಲ್ಲಿ ಅಂಗ ಸ್ಪರ್ಷತೆ ಸಾಧ್ಯ ಇರುವವರಲ್ಲಿ ಸ್ವಯಂ ತೃಪ್ತಿ ಸಾಧ್ಯತೆ ಇದ್ದೆ ಇದೆ. ಆದರೆ ಸ್ಪಷ೯ದ ಜ್ಞಾನ ಇಲ್ಲದ ಇದ್ದರೂ ( ಇಬ್ಬರಲ್ಲೂ ) ಆದರೆ ಮಾನಸಿಕವಾಗಿ ಲೈಂಗಿಕ ತ್ರುಷೆಗೀಡಾಗುವುದಿದೆಯಲ್ಲ ಅದರ ಪರಿಸ್ಥಿತಿ ಗಂಭೀರ.. ( ಇಂಥಾ ಒಂದು ಕೇಸ್ ಇತ್ತು ಕೌನ್ಸೆಲಿಂಗ್ ನಲ್ಲಿ .. ಆದರೆ ಯಾವ ರೀತಿಯಲ್ಲೂ ತೃಪ್ತಿ ಇಲ್ಲ ಎನ್ನುವವ ಕಾರಣಕ್ಕೆ ಸಮಾಧಾನಿಸುವುದು ಕಷ್ಟವಾಗಿತ್ತು. ಇನ್ನು ಭಾರತೀಯ ಮಡಿವಂತಿಕೆಯಲ್ಲಿ ಸಂಗಾತಿಗೆ ಕೊಡುವ ಸಲಹೆಗಳು, ಪೂರೈಕೆಯಾಗುವ ಸಂಭವನೀಯತೆ ತುಂಬಾ ಕಡಿಮೆ. ಕೆಲವೊಮ್ಮೆ ನಮ್ಮ ಪ್ರಯತ್ನ ಅವರ ಅನುಮಾನಗಳಿಗೆ ಈಡಾಗುತ್ತದೆ) ಇಲ್ಲಿ ಇನ್ನು ಒಂದು ವಿಷಯ... ಕೆಲವೊಮ್ಮೆ.. ಸ್ವಯಂ ಸ್ಪರ್ಶದ ಮತ್ತು ಮಾನಸಿಕ ಜನ್ಯ ಅನುಭವಕ್ಕಿಡಾಗುವ ಬದಲಾಗಿ ಪರಸ್ಪರ ಪಾರಸ್ಪರಿಕತೆಯಲ್ಲಿ ಸುಖ ಕಾಣುವವರೂ ಇದ್ದಾರೆ. ಆದರೆ ಸಂಗಾತಿಯ ನೆರವು ಬೇಕಷ್ಟೇ ..( ಇದು ವೈಯಕ್ತಿಕ ಇಷ್ಟಗಳ ಪರಿಮಿತಿಯಲ್ಲೂ ನಡೆಯುತ್ತದೆ. ಆದರೆ ಅಂಥಾ ಭಾಗ್ಯ ಎಲ್ಲಾ ಪುರುಷ ವಿಕಲ ಚೇತನರಿಗೆ ಲಭ್ಯವಿಲ್ಲ. ಮಹಿಳೆಯಾಗಿದ್ದರಂತೂ ಆ ಸುಖದ ಕಲ್ಪನೆಯಿಂದಾಚೆಗೆ ಹೋಗಿ ಯಾವ ಕಾಲವೋ ಆಗಿರುತ್ತದೆ. ಇದು ಸಾಮಾನ್ಯ. ಕಾರಣ ಸ್ಥಿತಿಗತಿ ಅದಕ್ಕೆ ಇಂಬು ಕೊಡುವುದಿಲ್ಲ..) ಅಲ್ಲಿ ಸಾಮಾನ್ಯವಾಗಿ ನೇರ ದೈಹಿಕ ಮಿಲನ ಸಾಧ್ಯವಿಲ್ಲ. (ದೈಹಿಕ ಸ್ಥಿತಿಯ ಮೇಲೆ ಅವಲಂಬಿಸಿ ಹೇಳಿದ್ದು) ಆದರೆ ಅವರ ಮಟ್ಟದಲ್ಲಿ, ಒಂದು ಹಂತದಲ್ಲಿ ಸುಖ ಕಾಣುತ್ತಾರೆ. ಇನ್ನು ಪುರುಷ ಸಮರ್ಥನಾಗಿದ್ದು ಇನಾವುದೇ ಸಮಸ್ಯೆ ಇದ್ದಾಗ ಸಂಗಾತಿಯೂ ಅರ್ಥೈಸಿಕೊಲ್ಲುವವಳಿದ್ದಾಗ ಸಾಮರಸ್ಯದ ಕೊರತೆ ಇರುವುದಿಲ್ಲ. ( ಅವರವರ ಅನುಕೂಲಕ್ಕೆ ತಕ್ಕತೆ ದೇಹ ಸಹಕರಿಸಿಕೊಳ್ಳುವುದು ಪ್ರಕೃತಿಯ ನಿಯಮ ) ಕೆಲವೊಮ್ಮೆ ಕೊನೆಗೂ ಇದರಲ್ಲಿ ಸಂಗಾತಿಯ ಜೊತೆ ಮತ್ತು ಅಂಡರ್ ಸ್ತ್ಯಾ೦ಡಿಂಗ್ ಇರುವಲ್ಲಿ ಪರಿಸ್ತಿತಿ ಸ್ವಲ್ಪ ವಾಸಿ.. ಕೊನೆಯಲ್ಲಿ ಮಾನಸಿಕ ಬವಣೆ ಜಾಸ್ತಿ. ಒಂದು ಮಾತು ನಿಜ. ಅದು ಅಂಗ ವಿಕಲತೆ ಅಥವಾ ಸಾಮಾನ್ಯ ಲೈಂಗಿಕ ಸುಖ ಇರಲಿ. ಸಾಮಿಪ್ಯದಲ್ಲಿ "ಇಗೋ" ವನ್ನು ಹೊರತು ಪಡಿಸಿದರೆ ಎಂಥಾ ಜೋಡಿ ಕೂಡಾ ಸುಖಿಸುತ್ತಾರೆ. ಆದರೆ ಹೆಚ್ಚಿನ ಸಾಮಾನ್ಯ ಜೋಡಿಗಳಲ್ಲೂ ಪರಿಸ್ಥಿತಿ ಯಾವ ಮಟ್ಟಕ್ಕೆ ಮುಟ್ಟಿದೆ ಎಂದರೆ ಮದುವೆಯಾದ ೫-೬ ವರ್ಷದಲ್ಲಿ ಕಳೆದು ಹೋಗುವ ಆಸಕ್ತಿ ಎರಡು ದಶಕದ ನಂತರ ಅವರಿಗರಿವಿಲ್ಲದೆ ಅತಿ ದೊಡ್ಡ ಕಂದಕವನ್ನು ಸೃಷ್ಟಿಸಿರುತ್ತದೆ. ಇದನ್ನು ಅರ್ಥ ಮಾಡಿಕೊಳ್ಳದ ಸಮಸ್ಯೆ ಇಬ್ಬರಲ್ಲೂ ಇದೆ. ಅದರಲ್ಲೂ ನಾಲ್ಕು ಗೋಡೆಗಳಿಗೆ ಸೀಮಿತವಾಗಿರುವ ಇ ವಿಷಯದಲ್ಲಿ ಚರ್ಚೆಗೆ ಬಂದರೆ ಮದುವೆಯಾದ ತಪ್ಪಿಗೆ ಮತ್ತು ಮಾಡಬೇಕು ಎನ್ನುವ ಕಾರಣಕ್ಕೆ ಸೆಕ್ಸ್ ನಡೆಯುತ್ತಿದೆ ವಿನ ಸೆಕ್ಸ್ ಜೀವನದ ಒಂದು ಸುಂದರ ಬಾಂಧವ್ಯ ಕೂಡಾ ಆಗಬಲ್ಲದು ಎನ್ನುವುದನ್ನು ಸುಲಭಕ್ಕೆ ಯಾರೂ ಅರಿಯಲು ಸಿಧ್ಧರಿಲ್ಲದಿರುವುದು. ( ಇದೆ ಕಾರಣಕ್ಕೆ ಅನೈತಿಕ ( ಹಾಗನ್ನುವುದು ಉಚಿತವಾ - ಯಾಕೆಂದರೆ ಅದು ಅವರಿಬ್ಬರಿಗೂ ಪವಿತ್ರ ) ಸಂಭಂದಲ್ಲಿನ ಸೆಕ್ಸ್ ( ಇಲ್ಲಿ ಯಾವತ್ತೂ ಆರ್ಗ್ಯಾಸ್ಸಂ ತಲುಪದೇ ಇದ್ದವರಲ್ಲೂ ) ಅಧ್ಬುತ ಮಿಲನಕ್ಕೆ ಕಾರಣವಾಗುತ್ತಿದೆ. ( ಹಾಗಂತ ಮದುವೆಯಾಗಿ ಒಂದು ದಶಕದ ನಂತರ ಏನೂ ಇವರಲ್ಲಿ ಹೊಸ ಹರೆಯ ಹುಟ್ಟಿರುವುದಿಲ್ಲ) ಕಾರಣ ( ಸಂಭಂದ ಏನೇ ಇರಲಿ ) ಅಲ್ಲಿ ಮಾನಸಿಕ ಜನ್ಯ ಪ್ರಯತ್ನದಲ್ಲಿ ಪಾರಸ್ಪರಿಕತೆಯ ಸೋತು ಗೆಲ್ಲುವಿಕೆಯ ಮತ್ತು ನಿನಗೆ ಹೇಗೆ ಬೇಕಿದ್ದರೂ ಸರಿ.. ಎನ್ನುವ ಸರಂಡರ್ ನೆಸ್ ( ಇಬ್ಬರಲ್ಲೂ ) ಹೆಚ್ಚಿನ ಮುತುವರ್ಜಿ, ಎದುರಿನ ಸಂಗಾತಿಯ ತೃಪ್ತಿಯ ಕಡೆ ಗಮನ, ಯಾವ ಮುಲಾಜು ಇಲ್ಲದೆ ತೊಡಗಿಕೊಳ್ಳುವ ತನ್ಮಯತೆ, ಸುಖವನ್ನು ಅನುಭವಿಸುತ್ತಿದ್ದೇನೆ ಎನ್ನುವುದಕ್ಕಿಂತ ಕೊಟ್ಟು ಗೆಲ್ಲುವ ಮಾನಸಿಕ ಸಮರ್ಥನೆಯ ಅಂಶಗಳು ಅತೀವ ಉತ್ತುಂಗಕ್ಕೆ ಕಾರಣವಾಗುತ್ತದೆ. ಇದೆ ಎಷ್ಟೋ ಕಡೆಯಲ್ಲ್ಲಿ ಸತಿ ಪತಿಯರಲ್ಲೂ ಇಲ್ಲದಿಲ್ಲ. ( ಇಲ್ಲಿ ಅನೈತಿಕತೆ ಸಮರ್ಥಿಸಿ ಹೇಳುತ್ತಿಲ್ಲ. ಗಂಡನಿಂದ ಹೀಯಾಲಿಸಿಕೊಂಡ ಹೆಂಡತಿ ಹಾಗೆಯೇ ಹೆಂಡತಿಯಿಂದ ಕೈಲಾಗದವ ಎಂದು ಹೇಳಿಸಿಕೊಂಡ ಗಂಡ ಇಬ್ಬರ ಇಂಥಾ ಉದಾ. ನನ್ನೆದುರಿಗೆ ಇದೆ . ) ಹಾಗಾಗಿ ಇದು ಪರಿಸ್ತಿತಿ ಮತ್ತು ಎಲ್ಲವನ್ನು ಮರೆತು ತೊಡಗಿಕೊಳುವಿಕೆ ಹಾಗು ಮಾನಸಿಕವಾಗಿ ಸಿದ್ಧವಾಗುವಿಕೆಯ ಮೇಲೆ ಅವಲಂಬಿತವಾಗಿರುತ್ತದೆಯೇ ಹೊರತಾಗಿ ಮೆಷಿನ್ ವರ್ಕ್ ಆದಂತೆ ಆದರೆ, ಸುಮ್ಮನೆ ಮದುವೆಯಾದ ತಪ್ಪಿಗೆ ಹಾಸಿಗೆ ಪೀಡನೆಯಾಗುತ್ತದೆಯೇ ಹೊರತಾಗಿ ಈದಾಗಲಾರದೆ, ಗಂಡ- ಹೆಂಡತಿ ( ಚೆನ್ನಾಗಿರುವವರಲ್ಲಿಯೇ ) ವರ್ಷಕ್ಕೆ ತುಟ್ಟಿ ಬೀಳುತ್ತಾರೆ. ಇನ್ನು ಪಾಪದ ವಿಕಲ ಚೇತನರು ಏನು ಮಾಡಿಯಾರು ..? .................... ( ಸಂಜೆ
)

No comments:

Post a Comment