Saturday, March 26, 2016

ದಾಕ್ಷಿಣ್ಯದ ಬದುಕಿಗೆ ತೆತ್ತ ಕಂದಾಯ...
ನಮ್ಮ ಹೆಣ್ಣುಮಕ್ಕಳ ದೌರ್ಭಾಗ್ಯವದು. ದಾಕ್ಷಿಣ್ಯದ, ಋಣಭಾರದ, ಕೃತಜ್ಞತೆಯ ಕಟ್ಟುಪಾಡಿಗೆ ಸಿಕ್ಕು ಏನೆಲ್ಲ ಮಾಡಿಕೊಂಡು ಬಿಡುತ್ತಾರೆಂದರೆ ಸ್ವತಃ ಸೂರೆ ಹೋಗುತ್ತಿದ್ದರೂ ಏನು ಮಾಡಬೇಕೋ ಗೊತ್ತಾಗದೆ ಉಳಿದುಬಿಡುವ ಪಾಪತನವಿದೆಯಲ್ಲ, ಅದು ನಿಜಕ್ಕೂ ಆಘಾತಕಾರಿ. ನತದೃಷ್ಟಳೊಬ್ಬಳ ವಿಷಯದಲ್ಲಿ ಆಗಿದ್ದೂ ಅದೇ. ಆದರೆ ಸರಿಪಡಿಸೋದು ಹೇಗೆ..?
ಎಲ್ಲರೂ ಅವರವರ ಪಾಡಿಗಿದ್ದು ಬಿಟ್ಟರೆ ಯಾವ ಸಮಸ್ಯೆಯೂ ಬೆಳೆಯುವುದೇ ಇಲ್ಲ. ಆದರೆ, ಅನಗತ್ಯವಾಗಿ ಮಾತಾಡಿ ಅದ್ಯಾವ ಮಟ್ಟಕ್ಕೆ ಇನ್ನೊಬ್ಬರ ಬದುಕನ್ನು ಹಾಳು ಮಾಡಿಬಿಡುತ್ತಾರೆಂದರೆ ಅದಿನ್ಯಾವತ್ತೂ ರಿಪೇರಿಗೆ ಬಾರದ ಸ್ಥಿತಿಗೆ ತಲುಪಿಸಿ ಬಿಡುತ್ತಾರೆ. ಅದರಲ್ಲೂ ಮಹಿಳೆಯರ ವೈಯಕ್ತಿಕ ಸರಕುಗಳನ್ನು ಅವರ ಸ್ನೇಹಿತೆಯರೇ ಹಾಳುಗೆಡುವಿರುತ್ತಾರೆ. ಬೆಳಗ್ಗೆ ವಾಕಿಂಗ್‌ನಿಂದ, ಸಂಜೆ ಸಂಕಷ್ಟಿಯ ಪೂಜೆಯಲ್ಲೂ ತಮಗೆ ಬೇಕಾದಂತೆ ಕತೆಗಳನ್ನು ಕಟ್ಟಿ, ಸ್ವತಃ ಕಂಡವರಂತೆ ಆಡಿಕೊಳ್ಳುವ ಗೃಹಿಣಿಯರ ಲೆಕ್ಕದ ಹೆಂಗಸರು ಖಾಸಾ ಸ್ನೇಹಿತೆಯರ ಬದುಕನ್ನೂ ಮೂರಾಬಟ್ಟೆ ಮಾಡಿರುತ್ತಾರೆ. ಗಂಡಂದಿರನ್ನು ನೌಕರಿಗೆ ಕಳುಹಿಸಿ ಆಡಿಕೊಳ್ಳುವುದಿದೆಯಲ್ಲ ಅದರಿಂದ ಬದುಕೇ ಎಕ್ಕುಟಿ ಹೋಗುತ್ತದೆಂದೇಕೆ ಅರಿವಾಗುವುದಿಲ್ಲವೋ..? ಅಸಲಿಗೆ ಮನಸಾರೆ ಒಪ್ಪದೆ ಯಾವೊಬ್ಬ ಹೆಣ್ಣೂ ಮಂಚಕ್ಕೆ ಬರಲಾರಳು ಎನ್ನುವುದೇ ಈಗಲೂ ಅಪೂರ್ವ ಗೌರವ ಉಳಿದುಕೊಳ್ಳಲು ಕಾರಣವಾಗಿರುವ ಅಂಶ.
ವಿದ್ಯಾವತಿಗೆ ಹುಡುಗ ಪ್ರಕಾಶ ಸುಲಭವಾಗಿ ಒಲಿದಿದ್ದಾನೆ. ಕೂಡಲೇ ಒಪ್ಪಿಗೆಯಾಗದಿದ್ದರೂ ಕ್ರಮೇಣ ಅವನ ಮೇಲೊಂದು ಅಕ್ಕರಾಸ್ಥೆ ಆಕೆಗೆ ಬೆಳೆದಿದೆ. ನಾಲ್ಕಾರು ವರ್ಷದಿಂದ ಒಂದೇ ಮನೆಯಲ್ಲೂ ಆಗೀಗ ಗಾಡಿ ಮೇಲೆ ಓಡಾಟ ಇತ್ಯಾದಿ ಇದ್ದಾಗ ಇವೆಲ್ಲ ಸುಲಭಕ್ಕೆ ಸಾಧ್ಯವಾಗುತ್ತದೆ. ಅದರಲ್ಲೂ ಅಪ್ಪನಷ್ಟು ಮಗ ಕುಶಲಿಯಂತೂ ಮೊದಲೇ ಅಲ್ಲ. ಹಾಗಾಗೇ ಅತೀವ ಓದು ಮತ್ತು ಬುದ್ಧಿವಂತಿಕೆಯಿಂದಿದ್ದ ಅಪ್ಪನ ಎದಿರು ಮಗ ಅಷ್ಟಾಗಿ ಯಾವ ವಾದಕ್ಕೂ ಇಳಿಯುತ್ತಿರಲಿಲ್ಲ. ಅಂಥವನ ಬದುಕಿನಲ್ಲಿ ಬುದ್ಧಿವಂತಳೂ, ನೌಕರಿಯಲ್ಲಿರುವ ಸೊಸೆಯನ್ನು ತರುವುದು ಅವರಪ್ಪನಿಗೆ ಸುಲಭವೇ ಆಯಿತು. ಇತ್ತ ಅವನೊಂದಿಗೆ ಮನಸ್ಸು ಸೇರುತ್ತಿದ್ದಂತೆ ಅದೂ ಒಂದೇ ಮನೆಯಲ್ಲಿದ್ದಾಗ ಏನಾಗಬೇಕೋ ಆದಾಗಿ ಹೋಗಿದೆ. ಸುಲಭದಲ್ಲಿ ಬಸಿರಾಗಿದ್ದಾಳೆ ಹುಡುಗಿ.
ಚಿಕ್ಕದೊಂದು ವ್ಯವಹಾರ ಇಟ್ಟುಕೊಂಡು, ಅಷ್ಟಿಷ್ಟೆ ಸೆಟ್ಲಾಗುತ್ತಿದ್ದ ಮದುವೆ ವಯಸ್ಸಿನ ಹುಡುಗ ಸುಲಭಕ್ಕೆ ಆಕೆಯ ಜೊತೆಗೆ ಪ್ರೀತಿಗಿಳಿದಿದ್ದಾನೆ. ಹಾಗಾಗಿ ದೂರದ ಸಂಬಂಧಿಕ ಯಜಮಾನ, ವಧು ಕೋರಿ ವಾಸ್ತವದೊಂದಿಗೆ ಬರುತ್ತಿದ್ದಂತೆ ಅಷ್ಟಕ್ಕಷ್ಟೆ ಎನ್ನುವಂತಿದ್ದ ವಿದ್ಯಾವತಿಯ ಅಪ್ಪ-ಅಮ್ಮಂದಿರು ಸಮ್ಮತಿಸಿದ್ದಾರೆ. ಶೀಘ್ರವಾಗಿ ಮದುವೆಯೂ ನಡೆದು ಹೋಗಿದೆ. ಪ್ರಕಾಶ ತೀರಾ ಸಂತಸವನ್ನೂ ವ್ಯಕ್ತಪಡಿಸಲಿಲ್ಲ. ಬಂದಂತೆ ಬದುಕು ಎನ್ನುವಂತಿದ್ದುದು, ವಿದ್ಯಾ ಮದುವೆ ಎನ್ನುವ ಶಾಸ ಮುಗಿಸಿ ಎದ್ದು ಹೋದದ್ದು, ಸಮಯಕ್ಕೂ ಮೊದಲೇ ಮಗು ಹಡೆದದ್ದೂ ಸೂಕ್ಷ್ಮವಾಗಿ ಗಮನಿಸುವವರ ಕಣ್ಣಿಗೆ ಬೀಳದಿರುತ್ತದೆಯೇ..? ಅವಳಿಗರಿವಿಲ್ಲದೆ ಅಥವಾ ಕಂಡು ಕಾಣದಂತೆ ಸುಮ್ಮನಿದ್ದಳಾ ಗೊತ್ತಿಲ್ಲ. ಪುಂಖಾನುಪುಂಖವಾಗಿ ಕತೆಗಳು ಅವಳಿಗಿಂತಲೂ ಮೊದಲು ಆಕೆಯ ಕೆಲಸದ ಕಚೇರಿ ತಲುಪಿ ಹಿಂಸೆಗೀಡು ಮಾಡತೊಡಗಿದವು. ವರ್ಷಾನುಗತಿಯಲ್ಲಿ ಮತ್ತೊಂದು ಗಂಡು ಮಗುವಿಗೂ ವಿದ್ಯಾ ಜನ್ಮ ಕೊಟ್ಟಳು. ಕತೆ ಹೊಸ ತಿರುವು ಪಡೆಯಲಾರಂಭಿಸಿದ್ದೇ ಆವಾಗ.
ಅದು ಅಪೂಟು ಪ್ರಕಾಶನಂತೆ ಪೆದ್ದು ಪೆದ್ದಾಗಿತ್ತು. ಮೊದಲ ಮಗಳು ಅದ್ಭುತ ಎನ್ನುವಂತೆ ಬುದ್ಧಿವಂತಿಕೆಯಿಂದ ಬೆಳೆಯತೊಡಗಿದ್ದಳು. ಜೊತೆಗೆ ಯಾವ ಲೆಕ್ಕದಲ್ಲೂ ಅದು ಇವರಿಬ್ಬರನ್ನೂ ಹೋಲುತ್ತಿರಲಿಲ್ಲ. ಅಂಥದ್ದಾಂದು ದೈಹಿಕ ಸಾಮ್ಯತೆಯ ವ್ಯತ್ಯಾಸ ಈಗೀಗ ತೀರಾ ಸ್ಪಷ್ಟವಾಗಿ ಎದ್ದು ಕಾಣತೊಡಗಿತ್ತು. ವಿದ್ಯಾಳ ಬದುಕು ತೋಪೆದ್ದು ಹೋಗಿತ್ತು. ಮನೆಯಲ್ಲಿ ಅತ್ತೆ ಮಾತೇ ಆಡುತ್ತಿರಲಿಲ್ಲ. ಪ್ರಕಾಶ ಮನೆ ಬಿಟ್ಟರೆ ವಾರಕ್ಕೊಮ್ಮೆ ಬರುತ್ತಿದ್ದ. ಕೆಲಸದ ಸ್ಥಳದಲ್ಲೂ ಕುಹಕದ ನೋಟಕ್ಕೀಡಾಗಿ ಇನ್ನಿಲ್ಲದಂತೆ ಹಿಂಸೆ ಅನುಭವಿಸುತ್ತಿದ್ದಳು. ಕತೆಯ ತಿರುವಿನಲ್ಲಿದ್ದ ಹುಡುಗಿ ಹೊರಳು ದಾರಿಯಲ್ಲಿ ನಿಂತಿದ್ದರೆ, ಕತೆ ಕೇಳಿದ ಶಾಕ್‌ನಲ್ಲಿ ನಾನು,
‘ಎಲ್ಲ ಸರಿ ಆದರೆ ಎಲ್ಲ ಗೊತ್ತಿದ್ದೂ ಪ್ರಕಾಶ ಯಾಕೆ ಈ ಮದುವೆಗೆ ಒಪ್ಪಿಕೊಂಡ? ಅಷ್ಟಕ್ಕೂ ಅವನಿಗಂತಹ ದರ್ದೇನಿತ್ತು ? ನೀನು ಇಲ್ಲಿವರೆಗೆ ಎರಡನ್ನೂ ಹೇಗೆ ಸೈರಿಸಿದೆ ಮಾರಾಯ್ತಿ’ ಎನ್ನುತ್ತಿದ್ದರೆ ತಲೆ ತಗ್ಗಿಸಿದ್ದಳು ವಿದ್ಯಾ. ನಮ್ಮ ಹೆಣ್ಣುಮಕ್ಕಳ ದೌರ್ಭಾಗ್ಯವದು. ದಾಕ್ಷಿಣ್ಯದ, ಋಣಭಾರದ, ಕೃತಜ್ಞತೆಯ ಕಟ್ಟುಪಾಡಿಗೆ ಬಲುಬೇಗ ಬೀಳುತ್ತವೆ. ಹಾಗಾಗಿ ಆ ಭಾರಕ್ಕೆ ಸಿಕ್ಕು ಏನೆಲ್ಲ ಮಾಡಿಕೊಂಡು ಬಿಡುತ್ತಾರೆಂದರೆ ಸ್ವತಃ ಸೂರೆ ಹೋಗುತ್ತಿದ್ದರೂ ಏನು ಮಾಡಬೇಕೋ ಗೊತ್ತಾಗದೆ ಉಳಿದುಬಿಡುವ ಆ ಪಾಪದ ಪರಮಾವಧಿಯಿದೆಯಲ್ಲ ಅದು ನಿಜಕ್ಕೂ ಆಘಾತಕಾರಿ. ವಿದ್ಯಾಳ ವಿಷಯದಲ್ಲಿ ಆದದ್ದೂ ಅದೇ. ಸ್ವತಃ ಓದುವ, ಕೆಲಸಕ್ಕೆ ಸೇರುವ ಇಚ್ಛೆಯಿಂದ ಸಂಬಂಧಿಕರ ಮನೆ ಸೇರಿದಳೇನೋ ಸರಿನೇ. ಆದರೆ, ಆ ಕಾರಣಕ್ಕೆ ಮುಲಾಜಿಗೆ ಬಿದ್ದು ಆ ಮನೆಯ ಮತ್ತು ಮನೆಯವರೊಂದಿಗೆ ಆ ಯಜಮಾನನೊಡನೆ ಒಂದು ಸಲುಗೆ ಬೆಳೆಯಿತಲ್ಲ ಅದು ಗೌರವ ರೂಪಕವಾಗಿದ್ದೇನೋ ಸರಿ. ಆದರೆ ಹೆಚ್ಚಿನ ಸಂದರ್ಭದಲ್ಲಿ ಅದರ ದುರ್ಬಳಕೆಯಾಗಿ ಬಿಡುತ್ತದೆ. ಗೌರವ ಕಾಳಜಿ ಎಲ್ಲ ಬಂಧನಕ್ಕೊಳಪಡಿಸುತ್ತದೆ. ಪಡೆದ ಸಹಾಯಕ್ಕೆ ಬದುಕೇ ಕಂದಾಯವಾಗಿಬಿಡುತ್ತದೆ. ಜೀವನ ತಿರುಗಣಿಗೆ ಸಿಕ್ಕಿ ತೋಪೆದ್ದು ಹೋಗುವುದೇ ಆವಾಗ. ವಿದ್ಯಾಳ ಬದುಕಲಾದದ್ದೂ ಅದೇ.
ಕೆಲವೇ ಸಮಯದಲ್ಲಿ ಯಜಮಾನ ವಿದ್ಯಾಳನ್ನು ಗೌಪ್ಯವಾಗಿ ಬಳಸಿಕೊಳ್ಳತೊಡಗಿದ್ದಾನೆ. ವರ್ಷಾವಧಿಯಲ್ಲಿ ಇದು ಸೂಕ್ಷ್ಮವಾಗಿ ನಡೆಯುತ್ತಿದ್ದುದು, ಮಗ ಪ್ರಕಾಶ ಕೂಡಾ ಈ ಹುಡುಗಿಯನ್ನು ಇಷ್ಟಪಡುತ್ತಾನೆ ಎನ್ನುವ ಸುಳಿವು ಸಿಗುತ್ತಿದ್ದಂತೆ ಮನೆಯಲ್ಲಿ ಚಾಣಾಕ್ಷ ನಡೆ ನಡೆಸಿದನಾ..? ಗೊತ್ತಿಲ್ಲ. ಆದರೆ ಅಪ್ಪನ ಈ ನಡೆಗಿಂತಲೂ ವೇಗವಾಗಿ ವಿದ್ಯಾಳಿಗೆ ತಗುಲಿಕೊಂಡಿದ್ದ ಪ್ರಕಾಶ ಹೇಗೂ ಮನೆಯ ಹುಡುಗಿ, ಅಪ್ಪನೂ ಬೇಡ ಎನ್ನಲಿಕ್ಕಿಲ್ಲ ತನ್ನಂತಹ ಅರೆಬರೆ ಓದುಗನಿಗೆ ಅವಳಿಗಿಂತ ಒಳ್ಳೆಯ ಕನ್ಯೆ ಹುಡುಕಿದರೂ ಸಿಗಲಿಕ್ಕಿಲ್ಲ. ಅವಸರಕ್ಕೆ ಬಿದ್ದು ತಾನೂ ಹುಡುಗಿಯನ್ನು ಕೂಡಿ ಬಿಟ್ಟಿದ್ದಾನೆ. ಆ ಹೊತ್ತಿಗೆ ಮದುವೆ ಪ್ರಸ್ತಾಪವಾಗಿದ್ದು. ಆದರೆ ಗೊಂದಲವಿದ್ದುದು ಹುಡುಗಿಗೆ ‘ಮಗುವಿನ ಅಪ್ಪ ಯಾರು..?’ ಅಕಸ್ಮಾತ ಅದಲು ಬದಲಾದರೆ ಅಪ್ಪ-ಅಜ್ಜ ಇಬ್ಬರೂ ಒಬ್ನೆ ಇದೆಂಗೆ? ಮಾತು, ಚರ್ಚೆ, ಸಮಸ್ಯೆ ಇತ್ಯಾದಿಗಳ ಸಂವೇದನೆಯನ್ನೂ ಮೀರಿ ಕಾಲ ಮದುವೆಯ ಬಂಧನಕ್ಕೆ ಅವಳನ್ನು ನೂಕಿತ್ತು. ಅಲ್ಲಿಂದ ಆರಂಭವಾದ ಸಂಕಟ ಮೊದಲನೆಯ ಮಗು ಆದಾಗ ಅಷ್ಟಾಗಿ ಬಾಧಿಸಿಲ್ಲ. ಎರಡನೆಯ ಮಗು ಮತ್ತು ಪ್ರಕಾಶನ ನಡವಳಿಕೆಯಲ್ಲಿ ಮೊದಲಿನಿಂದಲೂ ಇದ್ದ ಮುಗ್ಗುಮ್ಮುತನ ಕನ್ ಫಾರ್ಮ್ ಆದದ್ದು ಎರಡೂ ಮಕ್ಕಳೂ ಸಾಕಷ್ಟು ದೊಡ್ಡವಾದಾಗ, ನಡವಳಿಕೆ ಮತ್ತು ಹೋಲಿಕೆಯಲ್ಲಿ ವ್ಯತ್ಯಾಸವಾದಾಗ.
ಈಗ ಅತ್ತೆ ಮುಖ ಕೊಡುವುದಿಲ್ಲ. ಮೊದಲನೆಯ ಮಗುವಿನ ಅಪ್ಪನಿಗೆ ಈಗವಳ ರಗಳೆಗಳೆಲ್ಲ ಬೇಕಿಲ್ಲ. ಆಗೀಗ ಮನೆಯಲ್ಲಿ ನಡೆಯುತ್ತಿರುವ ರಾಮಾಯಣದಿಂದಾಗಿ, ಮಕ್ಕಳ ಬುದ್ಧಿವಂತಿಕೆ ಚಹರೆಯ ವ್ಯತ್ಯಾಸದಿಂದಾಗಿ ಕತೆ ನಿಧಾನಕ್ಕೆ ಬೀದಿಗೆ ಬಂದಿದೆ. ಮರ್ಯಾದೆಯ ಪ್ರಶ್ನೆಯಾಗಿ ಬಾಯಿ ಬಿಡದಿದ್ದರೂ ಪ್ರಕಾಶ ಈಗ ಮನೆಗೆ ಬರುವುದನ್ನೇ ನಿಲ್ಲಿಸಿದ್ದಾನೆ. ಅವನಾಯಿತು, ಅವನ ವ್ಯವಹಾರವಾಯಿತು.ಈ ಬಗ್ಗೆ  ಜಾಸ್ತಿ ಚರ್ಚೆಗಿಳಿದರೆ ಅಪ್ಪನ ಆಸ್ತಿ ಕೈ ತಪ್ಪುತ್ತದೆ. ಅದನ್ನು ನೇರ ಕೇಳಿ ದಕ್ಕಿಸಿಕೊಳ್ಳುವ ಧೈರ್ಯ ಅವನಿಗಿಲ್ಲ.
‘ಏನು ಮಾಡಲಿ ಸರ್. ಪ್ರಕಾಶಂಗೆ ಮೊದಲೆ ಗೊತ್ತಿದ್ರೂ ಹೂಂ ಅಂದ್ನಾ? ಅಪ್ಪನ ಮರ್ಯಾದೆ ಉಳಿಸೋಕೋಸ್ಕರ ಹಿಂಗೆ ಮಾಡಿದನಾ? ಒಟ್ಟಾರೆ ನಾನು ಬಲಿಯಾದೆ. ಈಗ ಏನು ಮಾಡಲಿ? ಪ್ರಕಾಶ ಇನ್ನೊಬ್ಬಳೊಂದಿಗೆ ಸೆಟ್ಲಾಗ್ತಿದ್ದಾನೆ. ಯಾಕೆ ಏನು ಕೇಳಿದರೆ ಹುಳ್ಳಗೇ ನಗುತ್ತಾನೆ. ‘ನಾನೇ ಹೇಳ್ಬೇಕಾ?’ ಅಂತ. ಮನೆಯಲ್ಲಿ ಎಲ್ಲರ ಮುಖಗಳೂ ಗೋಡೆ ಕಡೆಗೆ. ದೂರದೂರಿಗೆ ಇಲ್ಲಿಂದ ಹೋಗುವ ಹಾಗೂ ಇಲ್ಲ ಸರ್. ಇರೋ ನಾಲ್ಕಾರು ಬ್ರಾಂಚ್‌ನ ನೌಕರಿ ಮಾಡ್ಬೇಕಿದೆ. ಬೇರೆ ಮನೆ ಮಾಡೋಣ ಎಂದರೆ ಅದಕ್ಕೂ ಬಿಡಲ್ಲ. ಮರ್ಯಾದೆ ಪ್ರಶ್ನೆ ಅಂತೆ. ಇದೆಂಥಾ ಮರ್ಯಾದೆ ಸರ್? ಎಲ್ಲ ಸೇರಿ ನನ್ನ ಬದುಕು ಮೂರಾಬಟ್ಟೆ ಮಾಡಿದ್ದಾರೆ. ಅಪ್ಪ, ಅಮ್ಮನಿಗೆ ಹೇಳಿದರೆ ನೊಂದ್ಕೊತಾರೆ’.
ಇತ್ತ ವಿದ್ಯಾಳ ಮಕ್ಕಳಿಗೆ ಮನೆಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಗೊತ್ತಾಗುತ್ತಿದೆ. ಸುಮ್ಮನೆ ಅವಳ ಹಿಂದೆ ಸುತ್ತುತ್ತವೆ. ಯಾವುದೋ ಸಂಕಟದಲ್ಲಿದ್ದಂಗೆ ಇರ್ತಾವೆ. ಅಪ್ಪ ಯಾಕೆ ಬರ್ತಿಲ್ಲ ಅಂತಾ ಕೇಳೋದನ್ನು ನಿಲ್ಲಿಸಿವೆ. ‘ಅವಕ್ಕೆಲ್ಲ ಈಗ ಅರ್ಥ ಆಗೋ ವಯಸ್ಸು. ಮೊದಲನೆಯವಳು ತುಂಬಾ ಬುದ್ಧಿವಂತಳು. ಎಡೆ ಅವಹೇಳನವಾಗುವುದನ್ನು ತಪ್ಪಿಸಲು ಎರಡನ್ನೂ  ಹಾಸ್ಟೆಲ್‌ನಲ್ಲಿ ಬಿಟ್ಟಿದಿನಿ. ಸರ್’ ವಿದ್ಯಾ ಮಾತಾಡುತ್ತಿದ್ದರೆ ನಾನು ಮತ್ತು ಸ್ನೇಹಿತೆ ತೆಪ್ಪಗೆ ಕುಳಿತುಬಿಟ್ಟಿದ್ದಾವು.  ಆದ ಕತೆಯ ಆಘಾತಕ್ಕಿಂತಲೂ, ಪ್ರಕಾಶ ಅಗತ್ಯ ಮತ್ತು ಅವಕಾಶ ಬಳಸಿಕೊಳ್ಳುತ್ತ ತನ್ನ ಬದುಕು ಕಟ್ಟಿಕೊಂಡಿದ್ದಾನೆ. ಅಪ್ಪನ ಮರ್ಯಾದೆ ಉಳಿಸಬೇಕಿತ್ತು ಎನ್ನುತ್ತಲೇ ಇನ್ನೊಬ್ಬಳೊಂದಿಗೆ ನಿಸೂರಾಗುತ್ತಿದ್ದಾನೆ. ಮನೆ, ಅಂಗಡಿ, ಹೊಸ ಹೆಂಡತಿ ಎಲ್ಲ ಇದೆ. ಅದರೆ ಎಲ್ಲ ಇದ್ದೂ ಏನೂ ಇಲ್ಲದಂತಾಗಿ ಮಾತಾಡಿಕೊಳ್ಳುವವರ ಬಾಯಿಗೆ ಸುಲಭಕ್ಕೆ ಒಂದು ದಶಕದಿಂದ ಸಿಕ್ಕಿ ನರಳುತ್ತಿರುವ ವಿದ್ಯಾ ಎರಡು ಬಾರಿ ಅತ್ಮಹತ್ಯೆಯಿಂದ ಬಚಾವ್. ತನ್ನದಂತೂ ಬದುಕು ಮುಗಿದು ಹೋಗಿದೆ ಇನ್ನು ಮೇಲೆ ಮಕ್ಕಳಿಗಾಗಿಯಾದರೂ ಬದುಕಬೇಕು ಎನ್ನುವ ಹಂತದ ಕೊನೆಯ ವೈರಾಗ್ಯವನ್ನು ಭರಿಸುತ್ತಿದ್ದಾಳೆ. ಬದುಕು ಜೀವಂತ ನರಕ ಎಂದರೆ ಇದೇನಾ? ಉತ್ತರಿಸಬೇಕಾದ ಹೆಣ್ಣುಮಕ್ಕಳ ಧ್ವನಿ ಒತ್ತಲಾಗಿದೆ. ಅದಕ್ಕೂ ಮೊದಲೇ ನಮ್ಮದೂ... ಕಾರಣ ಅವಳು ಎಂದರೆ...
(ಲೇಖಕರು ಕಥೆ-ಕಾದ೦ಬರಿಕಾರರು)

Saturday, March 19, 2016

ಮಾನವೀಯತೆ ಕೊಲ್ಲುವ ಅತಾಕಿ೯ಕ ಸ೦ಬ೦ಧಗಳು...

ಬೇರೇನೂ ಇಲ್ಲದಿದ್ದರೂ ಕೊನೆಗೆ ತೀರಾ ಒ೦ದೇ ಹೊತ್ತಿನ ಊಟವಾದರೂ ಪರ್ವಾಗಿಲ್ಲ. ಹೆಣ್ಣುಮಕ್ಕಳು ಯಾವ ಮುಲಾಜಿಗೆ ಬೀಳದೆ ಬದುಕು ಕಟ್ಟಿಕೊಳ್ಳುತ್ತಿರುತ್ತಾರೆ. ಅದೇ, ಹೋದಲ್ಲಿ ಬ೦ದಲ್ಲಿ ಯಾವುದಾದರೊ೦ದು ಕಥೆಗೀಡಾದರೆ, ಅನಿವಾಯ೯ವಾಗಿಯಾದರೂ ಮುಜುಗರಕ್ಕೀ ಡಾಗುತ್ತ ಉತ್ತರಿಸುವ ದದಿ೯ಗೆ ಬಿದ್ದರೆ ಬದುಕಿನ ಚಿತ್ರಣವೇ ಬದಲಾಗಿ ಬಿಡುತ್ತದೆ.
ನನ್ನ ಮಗನಿಗೆ ಅಪ್ಪ ಯಾರು ಅ೦ತಾನೆ ಗೊತ್ತಿಲ್ಲ ಸಾರ್..' ಎ೦ದು ಕರೆಯ ಮೊದಲ ಮಾತಿಗೆ ಹೀಗ೦ದುಬಿಟ್ಟಾಗ ಒಮ್ಮೆ ಮ್ಯೆ ಜು೦ ಎ೦ದುಬಿಟ್ಟಿತು. ಕಾರಣ ಕುಟು೦ಬದ ಒಳಗೊಳಗೇ, ಅರಿವಿಗೆ ಬಾರದೆ ನಡೆಯುವ ಲ್ಯೆ೦ಗಿಕ ದೌಜ೯ನ್ಯಕ್ಕೀ ಡಾಗುವ ಹೆಣ್ಣುಮಕ್ಕಳಿಗೇನೂ ಕಮ್ಮಿಯಿಲ್ಲ ಇವತ್ತು. ಪ್ರಸ್ತುತ ಶೇ.70ರಷ್ಟು ಲ್ಯೆ೦ಗಿಕ ದೌಜ೯ನ್ಯಗಳು ನಮ್ಮ ಅರಿವಿಗೆ ಬಾರದಿರಲು ಕಾರಣ ಅದು "ಬಾ೦ಧವ್ಯ'ದಲ್ಲೇ ಆಗಿರುತ್ತದೆ. ಆದರೆ ಹೀಗೆ ಉಗುಳಲೂ ನು೦ಗಲೂ ಆಗದ ಘಟನೆಗಳಿವೆಯಲ್ಲ, ಅವು ನಮ್ಮನ್ನು ನಾಗರಿಕರಾ...? ಎನ್ನುವ ಸ೦ಶಯಕ್ಕೀ ಡು ಮಾಡುತ್ತಿವೆ. ಆದರೆ ಆವತ್ತು ಮಾತಾಡಿದ ವಿದ್ಯಾವತಿ ಎನ್ನುವ ಹೆಣ್ಣುಮಗಳು, ತಾನು ಕೆಲಸ ಮಾಡುತ್ತಿದ್ದ ಬ್ಯಾ೦ಕಿನ ಅವ˜ಯಲ್ಲೇ ಮಧ್ಯೆ ಹೊರಗೆ ಬ೦ದು ನಿ೦ತು, "ಯಾವಾಗಲೂ ಮಾತಾಡಕ್ಕೆ ಆಗಲ್ಲ ಸರ್. ಅದಕ್ಕೆ ಈಗ ಕೆಲಸದ ಮಧ್ಯೆ ಸಣ್ಣ ಬಿಡುವು ತೊಗೊ೦ಡು ಮಾತಾಡ್ತಿದ್ದೀನಿ. ಹತ್ತಾರು ಬ್ರಾ೦ಚ್, ಆರೇಳು ತಾಲೂಕು, ಮೂರು ಜಿಲ್ಲೆ ಬದಲಿಸಿದರೂ ಜನ ಕಣ್ಣಲ್ಲೇ ತಿವಿಯುತ್ತಾರೆ. ಪ್ರತಿಯೊಬ್ಬರ ಕಣ್ಣಲ್ಲೂ ಪ್ರಶ್ನೆಗಳಿತಾ೯ವೆ. ನನ್ನ ಪಾಡಿಗೆ ಇರೋಣ ಎ೦ದರೂ ನನಗಿ೦ತಲೂ ಮೊದಲೇ ನನ್ನ ಜೀವನದ ಕಥೆ ಪ್ರತಿಕಡೆಯೂ ತಲುಪಿರುತ್ತದ್ದಲ್ಲ. ಜನರಿಗೆ ಅವರವರ ಪಾಡಿಗೆ ಇರೋಕಾಗಲ್ವಾ? ಅದರಿ೦ದ ಆಗೋ ಹಿ೦ಸೆಯನ್ನು ಪ್ರತಿ ಕಣ್ಣಲ್ಲೂ ನೋಡಿ ನೋಡಿ ಬದುಕೋದು ಕಲಿತುಬಿಟ್ಟಿದ್ದೀನಿ. ಅದರ ಬಗ್ಗೆ ನನಗೆ ಬೇಸರವಿಲ್ಲ. ಆದರೆ ಒ೦ದೇ ಪ್ರಶ್ನೆ ಸರ್' ಎ೦ದಿದ್ದಳು. "ಆಯ್ತು ಹೇಳಮ್ಮ' ಎನ್ನುತ್ತಿದ್ದರೆ ಆಕೆ ಮೇಲಿನ೦ತೆ "ನನ್ನ ಮಗನಿಗೆ ಅಪ್ಪ ಯಾರು ಅ೦ತಾನೆ ಗೊತ್ತಿಲ್ಲ ಸರ್. ನನ್ನ ಮಗನಿಗೆ ಯಾವ ಉತ್ತರ ಹೇಳಲಿ?' ಎ೦ದು ಹೇಳಿ ನಿಲ್ಲಿಸಿಬಿಟ್ಟಾಗ, ಎ೦ಥ ಪರಿಸ್ಥಿತಿಯಲ್ಲೂ ಗಲಗಲ ಮಾತಾಡುವ, ಅದರಲ್ಲೂ ಹೀಗೆ ಕೆಲವೊ೦ದು ಸ್ವ೦ತದ ತೆವಲಿಗೆ ಮಾಡಿಕೊಳ್ಳುವ ಜೀವನದ ಎಡವಟ್ಟುಗಳಿಗೆ ಯಾವ ಮುಲಾಜೂ ಇಲ್ಲದೆ ಎದುರಿನವರನ್ನು "ನಿಮ್ಮ ಕಮ೯ಕ್ಕೆ ನೀವೇ ಜವಾಬ್ದಾರರು ಹೋಗ್ರಿ..' ಎ೦ದು ಜಾಲಾಡಿಬಿಡುವ ನನ್ನ ಶಬ್ದಗಳ ಶಬ್ದವೂ ಆ ಕ್ಷಣಕ್ಕೆ ಅಡರಿಹೋಗಿತ್ತು.
         "ಸರ್, ನನ್ನದೂ ಕಥೆ ಹೇಳಬೇಕು' ಹೀಗೆ ಕೇಳಿಕೊ೦ಡು ಬರುವ ಕರೆ, ಮಿ೦ಚ೦ಚೆ ಮತ್ತು ಮನವಿಗಳಿಗೆ ಲೆಕ್ಕವಿಲ್ಲ. ಹಾಗ೦ತ ಹೇಳಿಕೊಳ್ಳುವ ಎಲ್ಲ ಕಥೆಗಳು ಸುಳ್ಳೂ ಅಲ್ಲ. ಇತ್ತ ಎಲ್ಲವನ್ನೂ ಬರೆದು ಪ್ರಕಟಿಸಿ ಮೋಕ್ಷ ದೊರಕಿಸುವುದೂ ಸಾಧ್ಯವಿಲ್ಲ. ಕಾರಣ ಹೆಚ್ಚಿನ ಕಥೆಗಳಿಗೆ ಸಾಮ್ಯತೆ ಜಾಸ್ತೀ. ಒ೦ದೇ ತೆರನಾದ ಆದರೆ ವ್ಯಕ್ತಿ ಮಾತ್ರ ಭೀನ್ನ. ಇದನ್ನು ಅಗಾಗ ಸ್ಪಷ್ಟಪಡಿಸುತ್ತಲೇ ಇರುತ್ತೇನೆ. ದಾರುಣ್ಯತೆಯ ಮತ್ತು ಹೆಚ್ಚಿನ೦ಶ ಆಥಿ೯ಕ ಕಷ್ಟಗಳಿಗೀಡಾಗಿ ಹೇಗೋ ಬದುಕು ಸಾಗಿಸುವ ಹೆಣ್ಣುಮಕ್ಕಳ ಜೀವನದ ಕಥಾನಕಗಳು, ಅವುಗಳ ಅ೦ತ್ಯ ವಿಭೀನ್ನವಾಗಿದ್ದರೂ ಅನುಭವಿಸಿದ ಮತ್ತು ಅನುಭವಿಸುತ್ತಿರುವ ಪರಿಸ್ಥಿತಿಗಳಿಗೆ ವ್ಯತ್ಯಾಸ ಇರುವುದಿಲ್ಲ. ಹೆಚ್ಚಿನ ಹೆಣ್ಣುಮಕ್ಕಳು ಒ೦ದಲ್ಲ ಒ೦ದು ರೀತಿಯಲ್ಲಿ ಕೌಟು೦ಬಿಕ ಮತ್ತು ಲ್ಯೆ೦ಗಿಕ ದೌಜ೯ನ್ಯಕ್ಕೀ ಡಾದವರೇ. ಹಾಗಾಗಿ ಸಾಮ್ಯತೆ ಇದೆ. ಹೊಸತೇನೂ ಇಲ್ಲ ಎನ್ನಿಸಿದಾಗ ಅಥವಾ ಮಾಡಬಹುದಾದ ಸಹಾಯಕ್ಕೆ ಅಲ್ಲೇ ವ್ಯವಸ್ಥೆ ಸೂಚಿಸುವಾಗ ಒ೦ದೆರಡು ಮಾತಾಡಿ ಮುಗಿಸಿಬಿಡುತ್ತೇನೆ. ಆದರೆ ಈ ಕರೆ ನನ್ನನ್ನು ಅ ಲ್ಲಾ ಡಿಸಿಬಿಟ್ಟಿತ್ತು.
      ಹಾಗಾಗಿ "ಸಮಯಾನುಕೂಲ ನೋಡಿಕೊ೦ಡು ಕರೆ ಮಾಡಿ ಸಮಯವಿದ್ದರೆ ಸಿಗುತ್ತೇನೆ' ಎ೦ದು ಆವತ್ತಿಗೆ ವಿದ್ಯಾವತಿಯ ಜೊತೆಗಿನ ಮಾತು ಮುಗಿಸಿದ್ದೆ. ಆದರೆ, ಆಕೆ ಹೇಳುವಾಗಿನ ಧ್ವನಿಯಲ್ಲಿನ ಕಾಠಿಣ್ಯತೆಗಿ೦ತ,"ನನ್ನದು ಇ೦ಥ ಪರಿಸ್ಥಿತಿ ಏನು ಮಾಡಲಿ ಎನ್ನುವ ಯೋಚನೆ ಮತ್ತು ಇನ್ನಿದು ಬದಲಾಗುವ ಬದುಕಲ್ಲ' ಎನ್ನುವ ವಾಸ್ತವ ಒಪ್ಪಿಕೊ೦ಡ ನ೦ತರವೂ ಆಕೆಯ ಧ್ವನಿಯಲ್ಲಿ ಒಳಗೊಳಗೇ ಧ್ವನಿಸುತ್ತಿದ್ದ ಛೇ.. ಎನ್ನುವ ವಿಷಾದವಿದೆಯಲ್ಲ ಅದು ನನ್ನನ್ನು ಗಾಢವಾಗಿ ಕದಲಿಸಿದ್ದು ಮತ್ತು ಸುಮ್ಮನಿರದ೦ತೆ ತಟ್ಟಿದ್ದು.
      ಹಾಗಾಗಿ ತೀರಾ ತಕ್ಷಣಕ್ಕೆ ಸಿಗಲಾಗದಿದ್ದರೂ ಆಗೀಗ ಮೆಸೇಜು ಮಾಡಿ, ಶಿವಮೊಗ್ಗೆಯತ್ತ ಹೊರಟವನು ಇ೦ಥಾ ದಿನ ಬರುತ್ತಿದ್ದೇನೆ ಎ೦ದು ಎಟುಕಿಸಿಕೊ೦ಡು ಮಾತಿಗೆ ಕೂತಿದ್ದೆ. ವಿಚಿತ್ರ ಎ೦ದರೆ ಹೀಗೆ ನು೦ಗಲೂ ಆಗದ, ಉಗುಳಲೂ ಆಗದ, ಆದರೆ ಕೆಲ ನಿದಿ೯ಷ್ಟ ವಿಷಯಗಳಿಗೆ ಮಾತ್ರ ಸಮಾಜ, ವ್ಯವಸ್ಥೆ ಎಲ್ಲದಕ್ಕೂ ಸವಾಲೆಸೆದು ಬದುಕುವ ಛಾತಿಯ ಹುಡುಗಿಯರಿಗೆ ಹೇಳಿಕೊಳ್ಳಲು ಸರಿಯಾದ ಪ್ರೆ„ವೇಸಿ ಬಿಡಿ, ತನ್ನದೇ ಆದ ಒ೦ದು ಗಟ್ಟಿ ಸ್ನೇಹಿತರ ವಲಯವೂ ಇರುವುದಿಲ್ಲ. ಜತೆಗೆ ಹೆಚ್ಚಿನ ಸ೦ದಭ೯ದಲ್ಲಿ ನ೦ಬಿಗಸ್ಥ ಸ್ನೇಹಿತೆಯರೇ ನಡು ಮುರಿದಿರುತ್ತಾರೆ. ಹೀಗಾಗಿ ಇ೦ಥಾ ಸ೦ದಿಗಟ್ಧತೆಯಲ್ಲಿರುವವರು ಯಾರನ್ನೂ ನ೦ಬುವ ಪರಿಸ್ಥಿತಿಯಲ್ಲಿಯೂ ಇರುವುದಿಲ್ಲ.ಕಾರಣ ಎಲ್ಲರಿಗೂ ಹೀಗೆ ಮಾತಾಡುತ್ತ ನಿದಾ೯ಕ್ಷಿಣ್ಯವಾಗಿ ಬದುಕಬೇಕಾದ ಪರಿಸ್ಥಿತಿಯಲ್ಲಿ ಅವರಿಗರಿವಿಲ್ಲದೆ ಆಗಿ ಹೋಗುವ ಮಾತಿನ ಆಘಾತಗಳಲ್ಲಿ ಸ್ನೇಹದ ತ೦ತುಗಳೂ ಕಡಿದು ಹೋಗಿರುತ್ತವೆ. ಆಕೆ ಕೆಲಸ ಮಾಡುತ್ತಿದ್ದ ಬ್ಯಾ೦ಕ್, ಮನೆ ಎಲ್ಲಿಯೂ ಕೂತು, ನಿ೦ತು ಮಾತಾಡುವ ಪರಿಸ್ಥಿತಿಯೂ ಇರಲಿಲ್ಲ.           ಕರೆದೊಯ್ಯಲು ಸ್ನೇಹಿತೆಯರ ಮನೆಯೂ ಇರಲಿಲ್ಲ. ಇ೦ಥ ಐನ್‍ಟೈಮಿನಲ್ಲಿ ನೆರವಾಗುವ ನನ್ನ ಸ್ನೇಹಿತೆಯರ ನೆರವಿನೊ೦ದಿಗೆ ಮಾತಿಗೆ ಕೂತರೆ ವಿದ್ಯಾವತಿ ಎನ್ನುವ ಮಧ್ಯವಯಸ್ಕ ಹೆಣ್ಣುಮಗಳು ಇನ್ನು ಬದುಕೆಲ್ಲ ಹೇಗೆ ತೆಗೆಯುತ್ತಾಳೋ ಎನ್ನಿಸಿದ್ದು ಊಹೆಗೂ ಮೀರಿದ್ದಾಗಿತ್ತು.
      ಕಾರಣ, ಹಳ್ಳಿ ಕಡೆಯಿ೦ದ ಕೂಡು ಕುಟು೦ಬದಲ್ಲಿ ಬೆಳೆದು ಬ೦ದ ಹುಡುಗಿ ಹ್ಯೆಸ್ಕೂಲಿಗೆ ಬರುವ ಹೊತ್ತಿಗೆ ಅಪ್ಪ ಇದ್ದ ಬದ್ದ ದಾಯಾದಿಗಳೊ೦ದಿಗೆ ಅರೆಬರೆ ಹ೦ಚಿಕೆಯಲ್ಲಿ ಬರಿಗೈಯಾಗಿ, ಹಳೆಯ ಮನೆಯಲ್ಲೇ ತಡಿಕೆ ಪಾಟಿ೯ಷನ್‍ನೊ೦ದಿಗೆ ತನ್ನದೇ ಎನ್ನುವ ಹೊಸ ಮನೆಯ ಲೆಕ್ಕದಲ್ಲಿ ಕುಟು೦ಬ ಸ್ಥಾಪಿಸಿಕೊ೦ಡಿದ್ದ. ಇ೦ಥವು ಹಳ್ಳಿಗಳಲ್ಲಿ ಮತ್ತು ಅವಿಭಕ್ತ ಕುಟು೦ಬಗಳು ಒಡೆದು ಹೋದಾಗ ಆಗುವ ಸಹಜ ಸ್ಥಿತಿಯಾದ್ದರಿ೦ದ ಮತ್ತದಕ್ಕೆ ಕುಟು೦ಬಗಳು ಮೊದಲ ದಿನವೇ ಏನೆಲ್ಲ ಅನುಭವಿಸಬೇಕಾಗುತ್ತದೆ ಎನ್ನುವುದಕ್ಕವರು ಮಾನಸಿಕವಾಗಿ ಸಿದ್ಧರಾಗಿಯೂ ಇರುವುದರಿ೦ದ ಇವೆಲ್ಲ ಹೇಗೋ ನಡೆದುಹೋಗುತ್ತದೆ ಕೂಡ.       
      ಕಾಲೇಜು ಮುಗಿಸಿದ ವಿದ್ಯಾ ಹಳ್ಳಿಯಿ೦ದ ಓಡಾಡಿಕೊ೦ಡೇ ಹೆಚ್ಚಿನ ಡಿಗ್ರಿಯನ್ನೂ ಕ೦ಪ್ಯೂಟರ್ ಇತ್ಯಾದಿ ಅಗತ್ಯದ ವಿಶೇಷ ಕೋಸ್‍೯ಗಳನ್ನೂ ತೆಕ್ಕೆಗೆ ತೆಗೆದುಕೊ೦ಡಿದ್ದಳು. ಅದಕ್ಕೆ ಸರಿಯಾಗಿ ಬ್ಯಾ೦ಕ್‍ವೊ೦ದರಲ್ಲಿ ಅವಕಾಶ ಒದಗಿಬರುತ್ತಿದ್ದ೦ತೆ ಮಗಳನ್ನು ಎಲ್ಲಿ ಬಿಡುವುದೋ ಎನ್ನುವ ಚಿ೦ತೆಗೆ ಬಿದ್ದಿದ್ದರು. ತಕ್ಕಮಟ್ಟಿಗಿನ ಸ೦ಬ೦˜ಯೊಬ್ಬರ ಮನೆಯಲ್ಲಿ ಉಳಿದು ನೌಕರಿಗೆ ಸೇರಿದ್ದಾಳೆ ವಿದ್ಯಾ. ಆಯಾಕಾಲಕ್ಕೆ ತಕ್ಕ೦ತೆ ಚೆ೦ದದ ದಿರಿಸು, ಕೆಲಸದಲ್ಲಿ ಪ್ರಗತಿ ಇತ್ಯಾದಿ ಸಾ˜ಸುತ್ತ ಅಮ್ಮನಿಗೆ ಆಗೀಗ ಸುದ್ದಿ ಕೊಡುತ್ತ "ಮಗಳು ಸೆಟ್ಲಾದಳು ಇನ್ನೇನು ಮದುವೆ ಮಾಡೋಣ' ಎನ್ನುವಾಗಲೇ ಅದು ಘಟಿಸಿತ್ತು.
      ಮನೆಯಲ್ಲಿದ್ದ ವಿದ್ಯಾವತಿ ಪ್ರೊಬೇಷನ್ ಮುಗಿಯುವ ಹೊತ್ತಿಗೆ ಹತ್ತಿರ ಊರಿಗೆ ಪೋಸ್ಟಿ೦ಗ್ ಆಗಿದೆ. ಹದಿನೈದೇ ಕಿ.ಮೀ. ದೂರದಲ್ಲಿ ಮನೆ ಮಾಡುವುದು, ಹೆಣ್ಣುಮಗಳು ಬೇರೆ ಹೀಗಾಗಿ ಆ ಊರಿನಲ್ಲಿದ್ದ ಸ೦ಬ೦˜ಕರೊಬ್ಬರು,"ಇಲ್ಲಿ೦ದಲೇ ಓಡಾಡಿಕೊ೦ಡಿರಮ್ಮ. ಬೇಕಿದ್ದರೆ ಕ೦ತಿನಲ್ಲಿ ಒ೦ದು ಗಾಡಿ ಇಟ್ಕೊ. ಆಗೀಗ ನಾನು ಇಲ್ಲವೆ೦ದರೆ ಪ್ರಕಾಶ ಯಾರಾದರೂ ಹೋಗುವಾಗಲೂ ಡ್ರಾಪ್ ಕೊಡ್ತೀವಿ. ಬೇರೆ ಮನೆ ಮಾಡೋ ರಿಸ್ಕ್ ಎಲ್ಲ ಬೇಡಾ' ಎನ್ನುತ್ತ ಅವಳ ವಸತಿ ಸಮಸ್ಯೆ ಬಗೆಹರಿಸಿದ್ದಾರೆ. ಹುಡುಗಿ ಅವರ ಮನೇಲಿ ಸೆಟ್ಲಾಗಿದ್ದಾಳೆ. ಇ೦ಥದೊ೦ದು ಮನೆಯಷ್ಟು ಬೆಚ್ಚನೆಯ ಗೂಡು ಅಲ್ಲದಿದ್ದರೂ ನೆಮ್ಮದಿಯ ಜಾಗ ಮತ್ತು ಸುರಕ್ಷಿತ ನೆಲೆ ದೊರಕಿದಾಗ ಹೆಚ್ಚಿನ ಹೆಣ್ಣು ಮಕ್ಕಳಿಗೆ ಆ ಕುಟು೦ಬ ಅಥವಾ ಮನೆತನಗಳ ಮೇಲೆ ಒ೦ದು ಋಣ ಉಳಿದು ಹೋಗಿರುತ್ತದೆ.
    ಹಾಗೆಯೇ ಸಮಯಕ್ಕಾದ ಸಹಾಯದಿ೦ದ ಮರೆಯದೇ ಅವರೂ ಒ೦ದು ರೀತಿಯಲ್ಲಿ ತಮ್ಮದೇ ಮನೆ ಎನ್ನುವ೦ತಹ ಮಾನಸಿಕ ಮತ್ತು ಸಾಮಾಜಿಕ ಚೆ೦ದದ ಸ೦ಬ೦ಧ ಬೆಳೆಸಿಕೊ೦ಡುಬಿಟ್ಟಿರುತ್ತಾರೆ. ಅ೦ತಹ ಮನೆಗಳು ನಿಜಕ್ಕೂ ಚೆ೦ದ ಎನ್ನುವ೦ತಿರುತ್ತವೆ. ಅದರಲ್ಲೂ ಹೆಣ್ಣುಮಕ್ಕಳಿಲ್ಲದ ಮನೆಯನ್ನು ಒಮ್ಮೆ ನೋಡಿ. ಹೇಗೆ ಏನೋ ಒ೦ದು ಪರಿಪೂಣ೯ತೆ ಇಲ್ಲದ ಭಾವ ಸರಕ್ಕನೆ ಕಾಲಿಡುತ್ತಿದ್ದ೦ತೆ ಅಡರಿಕೊಳ್ಳುತ್ತದೆ. ಮನೆಯ ಲವಲವಿಕೆಯಲ್ಲಿ ಹೆಣ್ಣುಮಕ್ಕಳು ಸ್ಥಾಪಿಸುವ ಅನುಬ೦ಧವೇ ಬೇರೆ. ಹಾಗಾಗಿ ಹೆಣ್ಣುಮಕ್ಕಳಿಲ್ಲದ ಮನೆಯಲ್ಲಿ ವಿದ್ಯಾವತಿ ಅವರಮ್ಮನೊ೦ದಿಗೂ ನಾಲ್ಕಾರು ವಷ೯ ಯಾವ ತಕರಾರುಗಳಿಲ್ಲದೆ ಕಳೆದುಬಿಟ್ಟಿದ್ದಾಳೆ. ಇತ್ತ ಅವಳಮ್ಮನೂ ಆಗೀಗ ಬ೦ದು ಹೋಗಿ ಮಾಡುತ್ತಲೂ, ರಜಾ ಬಿದ್ದಾಗ ಹುಡುಗಿ ಮನೆಗೆ ಬ೦ದು ಹೋಗುತ್ತಲೂ ಒ೦ದು ದಿವಿನಾದ ವ್ಯವಸ್ಥೆಗೆ ಹೊ೦ದಿಕೊ೦ಡು ಬಿಟ್ಟಿದ್ದಾಳೆ.
        ಆದರೆ ಇದ್ದಕ್ಕಿದ್ದ೦ತೆ ಪ್ರಕಾಶನ ಅಪ್ಪ ಒಮ್ಮೆಲೇ ಮನೆಗೆ ಬ೦ದ್ದಾಗಲೇ ಎಲ್ಲೊೀ ಏನೋ ಎಡವಟ್ಟಾದ ವಾಸನೆ ಬಡಿದಿದೆ. ವಿದ್ಯಾ ಗಭ೯ವತಿ. ವಿಷಯ ಗೊತ್ತಾಗುವ ಹೊತ್ತಿಗೆ ಪರಿಸ್ಥಿತಿ ಕೈಮೀರುತ್ತಿದೆ ಎನ್ನುತ್ತಿದ್ದ೦ತೆ ಮಗನ ಬದುಕನ್ನು ಹರಾಜಿಗಿಡುವ ಬದಲಿಗೆ ನೇರ ವಿಷಯ ಇತ್ಯಥ೯ಕ್ಕೆ ಅವನಪ್ಪ ದೌಡಾಯಿಸಿದ್ದಾನೆ. ಇಷ್ಟಪಟ್ಟವನೊ೦ದಿಗೆ ಮದುವೆಗೆ ಸಮ್ಮತಿಯಾದರೂ, ಮದುವೆಗೆ ಮುನ್ನವೇ ಗಭ೯ಕ್ಕೀ ಡಾಗಿದ್ದರೂ ಹಿರಿಯರೂ ಯಾವುದೇ ತಕರಾರಿಗೆ ಇಳಿಯದಿದ್ದರೂ ಆಕೆ ಮಾತ್ರ ಮನಃಪೂವ೯ಕವಾಗಿ ಈ ಮದುವೆಗೆ ಸಿದ್ಧವಿರಲಿಲ್ಲ. ಕಾರಣ ಮಗು ಹುಟ್ಟುವ ಮೊದಲೇ ಆಕೆ ಗೊ೦ದಲಕ್ಕೆ ಬಿದ್ದಾಗಿತ್ತು. ಇದರ ಅಪ್ಪ ಯಾರು? ಉಳಿದದ್ದು ಮು೦ದಿನ ವಾರಕ್ಕಿರಲಿ. ಕಾರಣ ಅವಳು ಎ೦ದರೆ...
    (ಲೇಖಕರು ಕಥೆಕಾದ೦ಬರಿಕಾರರು)

Saturday, March 12, 2016

ಅವಳದ್ದು ನೂರು ಪ್ರಶ್ನೆಗಳ ಸ್ವಾತಂತ್ರ್ಯ...!
ತುಂಬ ವ್ಯವಸ್ಥಿತವಾಗಿ ಮತ್ತು ನಿಯತ್ತಾಗಿ ಒಂದು ಕಡೆಯಲ್ಲಿ ಕೂತು ಕೆಲಸ ಮಾಡುವ ವಿಷಯದಲ್ಲಿ ಹೆಚ್ಚಿನ ಕ್ರೆಡಿಟ್ಟು ಹೆಣ್ಣುಮಕ್ಕಳದ್ದೇ. ಕಾರಣ ಗಂಡಸರಂತೆ ಆಗಿಷ್ಟು ಈಗಿಷ್ಟು ಎಂದು ಅರ್ಧಗಂಟೆಗೊಮ್ಮೆ ಕಾಫಿ, ಸಿಗರೇಟು, ಗಂಟೆಗೊಮ್ಮೆ ಬಾತ್‌ರೂಮು, ಆಗೀಗ ಕಳ್ಳ-ನು, ಮಸಾಲೆ ವಿಡಿಯೋ, ಗುಟಕಾಕ್ಕೊಂದು ಜಾಗ ಹೀಗೆ ಎದ್ದು ಹೋಗಲು ಮತ್ತು ಮಾತುಕತೆಯಾಡಲು ಹಲವು ಕಾರಣಗಳು ಮಹಿಳೆಯರಿಗಿಲ್ಲ.ಅವರದ್ದೇನಿದ್ದರೂ ದಿನಕ್ಕೆರಡು ಬಾರಿ ಕಾಫಿ, ಅದೂ ಕೂತಲ್ಲೇ ತಂದುಕೊಡುವವರಿದ್ದರೆ ಅಕ್ಕಪಕ್ಕ ಅಲ್ಲೇ ಕುರ್ಚಿ ಜರುಗಿಸಿ ಐದು ನಿಮಿಷ ಗುಸುಗುಸು ಮಾಡುತ್ತಾ ಕಳೆದಾರು. ಬಾಕಿ ಇನ್ನೇನಿದ್ದರೂ ನಿನ್ನೆ ಆನ್‌ಲೈನ್‌ನಲ್ಲಿ ಕೊಂಡ ಚೂಡಿದಾರ್ ಟಾಪು, ಬಾರ್ಡರಿಲ್ಲದ ಹೊಸ ಸೀರೆ, ವಾಟರ್‌ಪ್ರೂ- ಸಾರಿ ಬಗ್ಗೆ (ಒಗೆಯುವ ಗೋಜಿಲ್ಲದ)ಆಶ್ಚರ್ಯದ ಮಾತುಕತೆ, ಟಾಪ್ ಚೆನ್ನಾಗಿದೆಯೆಂದು ಮ್ಯಾಚಿಂಗ್ ಟೈಟ್ಸು ತೊಗೊಂಡು ತಾವೇ ಮಾಡಿಕೊಳ್ಳುವ ಹೊಸ ಕಾಂಬಿನೇಶನ್ನು, ಎರಡೂ ಇಲ್ಲದೆ ಸುಮ್ಮನೆ ಮೂಲೆಯಲ್ಲಿ ಮುಚ್ಚಟೆಯಿಂದ ಎತ್ತಿಟ್ಟಿದ್ದ ದುಪ್ಪಟಾ ಮೆತ್ತಗಿದೆಯೆನ್ನುವ ಕಾರಣಕ್ಕಾಗೆ ಅದಕ್ಕೊಂದು ಟಾಪು, ಪ್ಯಾಂಟುಕೊಂಡೆ ನೋಡ್ರಿ ಎನ್ನುವಲ್ಲಿಗೆ ಹೆಚ್ಚಿನ ಹೆಣ್ಣುಮಕ್ಕಳ ಸರಕು ಮುಕ್ತಾಯವಾಗುತ್ತದೆ (ಹಾಗಂತ ಎಲ್ಲ ಹೆಣ್ಣುಮಕ್ಕಳು ನಿಯತ್ತಾಗಿ ದುಡಿಯುತ್ತಾರೆಂದಲ್ಲ).

ಅದಕ್ಕೂ ಮೀರಿದ್ದೆಂದರೆ, ತಿಂಗಳಿಗೊಮ್ಮೆ ಒಕ್ಕರಿಸುವ ಪಿರಿಯಡ್ಡಿನ ಸಮಯದಲ್ಲಿ ಒಂದಷ್ಟು ಖಾಸಗಿಯಾಗಿ ಪದೇಪದೆ ಬಾತ್‌ರೂಮಿಗೆ ಓಡುವುದೋ, ಆ ಹೊತ್ತಿಗೆ ಮನಸ್ಸಿನ ನೆಮ್ಮದಿಗಾಗಿ ಒಂದಷ್ಟು ಏಕಾಂತ ಮತ್ತು ಸೋಮಾರಿಯಾಗಿರಲು ಅವಕಾಶವಿದೆಯೆಂತಾದರೆ ಹೆಚ್ಚಿನದೇನೂ ಬೇಕಿರಲಿಕ್ಕಿಲ್ಲ. ಅಕಸ್ಮಾತ ಅದಕ್ಕೂ ಬಾಸ್ ಕಿರಿಕಿರಿ ಮಾಡಿದ್ದೇ ಆದರೆ ‘ಈ ನನ್ಮಗನಿಗೂ ವರ್ಷಕ್ಕೊಮ್ಮೆಯಾದರೂ ಪಿರಿಯಡ್ಡಾಗಬೇಕು ಆಗ ಗೊತ್ತಾಗುತ್ತದೆ..’ ಎಂದು ಒಳಗೊಳಗೆ ಬೈದು ನಗೆಯಾಡಿಕೊಳ್ಳುವುದು ಬಿಟ್ಟರೆ ಕೆಲಸದಲ್ಲಿ ಸೋಮಾರಿಯಾಗುವುದು ಕಮ್ಮಿನೇ. ಅದರಲ್ಲೂ ಬುದ್ಧಿವಂತಿಕೆ ಮತ್ತು ಪಗಾರ ಎರಡೂ ಚೆನ್ನಾಗಿರುವ ಹೆಣ್ಣುಮಕ್ಕಳಿಗೆ ನೌಕರಿಯ ಬಗೆಗಿನ ಆಸ್ಥೆಯೇ ಬೇರೆ.ಹಾಗೇ ಒಳ್ಳೆಯ ಸಂಬಳದ ಕೆಲಸದಲ್ಲಿದ್ದು, ಸ್ವಂತಕ್ಕೊಂದು ಕಾರು ಇರಿಸಿಕೊಂಡಿರುವ ದೀಪಾ, ನಾನು ಸಿಕ್ಕಿದಾಗ ಬೆಂಗಳೂರಿನಲ್ಲಿ ಆಗಷ್ಟೆ ಕಣ್ಬಿಡುತ್ತಿದ್ದ ಬರಿಸ್ಟಾಗೆ ಕರೆದೊಯ್ದು ಅದರ ರುಚಿ ತೋರಿಸಿದ್ದವಳು. ಒಂದು ಕಾಫಿಗೇ ಇಷ್ಟು ದುಡ್ಡಾ ಎಂದು ನಾನು ಪಿಳಿಪಿಳಿ ಆಡುತ್ತಿದ್ದರೆ, ‘ಹಾಂ.. ಇವತ್ತು ಕಿಶೋರ್‌ಗೆ ಹೇಳಿ ಒಂದು ಗಂಟೆ ಪರ್ಮಿಶನ್ ತೊಗೊಂಡು ಬಂದಿದ್ದೀನಿ, ಕಾಫಿಗೆ ನೀನು ಬರ್ತೀದಿಯಾ ಅಂತಾ..’ ಇತ್ಯಾದಿ ಮಾತುಕತೆಯೊಂದಿಗೆ ನಮ್ಮ ಭೇಟಿ ಮುಗಿದಿತ್ತು.ಅದಾದ ಮೇಲೂ ಒಂದೆರಡು ಬಾರಿ ನನ್ನೊಂದಿಗೆ ಊರು ಸುತ್ತೋಕೆ ಜೊತೆಯಾಗುವ ಮಾತು ನಡೆದಿತ್ತು. ಹತ್ತಾರು ಸಾವಿರದ ಖರ್ಚು, ಎರಡ್ಮೂರು ದಿನದ ಟ್ರಿಪ್ಪು ಎಂದೆಲ್ಲ ಲೆಕ್ಕಿಸುವಾಗ, ಪ್ರತಿ ಬಾರಿಯೂ ದೀಪಾ ಇದಕ್ಕೆಷ್ಟಾಗುತ್ತೆ, ಅದಕ್ಕೆಷ್ಟಾಗುತ್ತೆ ಎಂದು ಬಾಕಿ ಎಲ್ಲದಕ್ಕಿಂತ ಲೆಕ್ಕಾಚಾರದ ಬಗ್ಗೆಯೇ ಹೆಚ್ಚು ಕಾಳಜಿವಹಿಸಿದ್ದು ಕೊನೆಗೆ ‘ನಂದು ನಾಳೆ ಹೇಳ್ತೀನಿ’ ಎಂದಿದ್ದಳು. ಆದರೆ ಅವತ್ತೇ ರಾತ್ರಿ ಗ್ರೂಪ್‌ಚಾಟ್ ಬಾಕ್ಸಿಗೆ ಮೆಸೇಜು ಮೇಲೆ ಮೆಸೇಜು ತೂರಿಬಿಡತೊಡಗಿದ್ದಳು.‘ನಂಗೆ ಪರ್ಮಿಶನ್ ಸಿಕ್ತು. ಆದ್ರೆ ಕರೆಕ್ಟಾಗಿ ಹೇಳಿದ ಟೈಂಗೆ ವಾಪಸ್ಸು ಬರ್ಬೇಕಂತೆ. ಹೂಂ ಅಂದು ಬಿಟ್ಟಿದಿನಿ. ಉಳಿದದ್ದು ಆಮೇಲೆ.. ಟೆನ್ಶನ್ ಫ್ರೀ. ಕಿಶೋರ್ ಯಾಕೋ.. ಒಂದೇ ಸಲಕ್ಕೆ ಹೂಂ ಅಂದ..’ಇತ್ಯಾದಿ. ಚಾಟ್ ಮುಚ್ಚಿಟ್ಟು ಕೂತವನು ಗೊಂದಲಕ್ಕೆ ಬಿದ್ದೆ. ಏನಿದು ಎಲ್ಲದಕ್ಕೂ ಪರ್ಮಿಶನ್ನಿನ ಗೋಜಲು?ಆಫೀಸಿನಲ್ಲಿ ಇದ್ದಕ್ಕಿದ್ದಂತೆ ಸ್ನೇಹಿತರೆಲ್ಲಾ ಗುಂಡು ಪಾರ್ಟಿಯ ಯೋಜನೆ ರೂಪಿಸಿದರೆ ಹೇಗಿರುತ್ತೆ? ವೀಕೆಂಡ್‌ಗೆ ಇಂತಲ್ಲಿ ಸೇರೋದು, ಯಾರು ಯಾರನ್ನು ಪಿಕ್ ಮಾಡ್ತಾರೆ, ಎಲ್ಲಿ ಸೇರುವುದು? ಬರುವಾಗ ಏನು ವ್ಯವಸ್ಥೆ, ಯಾವ ಹೋಟೆಲ್ ಬೆಟರ್ರು? ಕುಡಿಯದೇ ಡ್ರೈವಿಂಗ್ ಮಾಡುವವರು ಯಾರು? ಅಕಸ್ಮಾತ್ ಟ್ರಿಪ್ ಅಂತಾದರೆ ಹೋಟೆಲ್ ಬುಕಿಂಗ್, ಗಾಡಿ, ಕ್ಯಾಶಿಯರ್, ಮೆಡಿಕಲ್ ಲೀವ್ ಯಾರದ್ದು, ಹೆಂಡತಿ ಎಲ್ಲಿಯಾದರೂ ಹೋಗುವವಳಿದ್ದರೆ ಅದಕ್ಕೆ ಏನು ಅಲ್ಟರ್‌ನೇಶನ್ನು? ಮಗುವನ್ನು ಎಲ್ಲಿ ಬಿಡ್ಬೇಕು? ಇಲ್ಲವೆಂದರೆ ಇನ್ನೊಬ್ಬನ ಅಕ್ಕನ ಮನೆ ಇಲ್ಲೆ ಇದ್ಯಂತೆ ಅಲ್ಲಿ ಒಂದಿನದ ಮಟ್ಟಿಗೆ ಹೆಂಡತಿಯನ್ನು ಬಿಡೋದು, ಎಲ್ಲ ಡಿಷ್ಕಶನ್ನಿಗೆ ಒಂದು ಗ್ರೂಪ್‌ಚಾಟ್ ಮಾಡ್ಬೇಕು.. ಹೀಗೆ ಏನೇನು ಆಗ್ಬೇಕು, ಮಾಡ್ಬೇಕು ಚರ್ಚೆಯಾಗುತ್ತಲೇ ಪ್ರೋಗ್ರಾಂ ಫಿಕ್ಸೂ ಆಗಿಬಿಡುತ್ತದೆ. ಆದರೆ ಒಬ್ಬನೇ ಒಬ್ಬನೂ ‘ನಾನೊಮ್ಮೆ ಹೆಂಡ್ತೀನ ಕೇಳಿ ನಾಳೆ ಹೇಳ್ತೀನಿ’ ಅಂದದ್ದಾಗಲಿ, ಅಲ್ಲೇ ಒಂದು ಮೆಸೇಜ್ ಮಾಡಿದ್ದಾಗಲಿ ಕಾಣುವುದಿಲ್ಲ. ಎಲ್ಲರಿಗೂ ಅದು ಗ್ರಾಂಟೆಡ್. ಯಾರ ಪರ್ಮಿಷನ್ ಬೇಕೇ ಆಗಿಲ್ಲ. ಬೇಕು ಎಂದ ಕೂಡಲೇ ಹೊರಡೋದೇ. ಹೆಚ್ಚೆಂದರೆ ರಾತ್ರಿಪಾರ್ಟಿ ಇದ್ದಲ್ಲಿ ‘ಬರೋದು ಲೇಟ್..’ ಎಂದು ಒಂದು ಮೆಸೇಜು ಅಷ್ಟೇ. ಅದರ ನಂತರ ರಾತ್ರಿ ಹನ್ನೆರಡರ ಮೊದಲು ಮಾತುಕತೆ ಇದ್ದರೆ ಕೇಳಿ.ಬಹುಶಃ ನಾ ಕಂಡ ಮತ್ತು ಎಲ್ಲ ಹೆಣ್ಣುಮಕ್ಕಳೂ ಅನುಭವಿಸುತ್ತಿರುವ ಸಿಹಿಯಾದ ಶೋಷಣೆ ಇದು. ಸ್ವತಂತ್ರವಾಗಿದ್ದು, ಭೋಗವೇ ಜೀವನ, ಖರ್ಚಿಗೆ, ಮಸಾಲೆ ತಿನಿಸಿಗೆ, ಬುಲೆಟ್‌ರೈಡ್‌ಗೆ ಕೊನೆಗೆ ಅವನೂ ಬರಕತ್ತಾಗದಿದ್ದಾಗ ವರ್ಷಕ್ಕೊಬ್ಬ, ಅವನಿಲ್ಲದಿದ್ದರೆ ಅವನ -ಂಡು ಹೀಗೆ ಮಜಕ್ಕಾಗೇ ಒಂಟಿಯಾಗಿರುತ್ತಾ, ಗಂಡನನ್ನೂ ಬಿಟ್ಟು ಬೇರೆ ಮನೆ ಮಾಡಿಕೊಂಡು, ಅಪ್ಪ ಅಮ್ಮಂದಿರನ್ನೂ ದೂರ ಇಟ್ಟು ಬದುಕುತ್ತಿರುವ ಹೆಂಗಸರ ಲೆಕ್ಕದಲ್ಲಿ ಸ್ವಾತಂತ್ರ್ಯ ಎಂದರೆ ಬೇರೇನೆ. ಅವರು ಈ ವಿಷಯದಲ್ಲಿ ಬರಲ್ಲ.ಇವತ್ತು ಗಂಡನಂತೆ ಲಕ್ಷ ಸಂಪಾದಿಸುವ ದೀಪಾ ಗಳಿಗೆಗೊಮ್ಮೆ ಲೆಕ್ಕ ಕೇಳುತ್ತಿದ್ದುದು ಮತ್ತು ಎಲ್ಲಾ ಆದ ಮೇಲೂ ಅದಕ್ಕೆ ಒಂದಿಷ್ಟು ಐನೂರು ಜಾಸ್ತಿ ಸೇರಿಸಿ ಲೆಕ್ಕ ಕೊಡುವುದರ ಹಿಂದಿನದ್ದು ಮರ್ಮ ಎನ್ನುವುದಕ್ಕಿಂತಲೂ ಜರೂರತ್ತು ಎಂದೇ ನನಗನ್ನಿಸಿದ್ದು ಅದರಲ್ಲಿ ಯಾವ ತಪ್ಪೂ ಇರಲಿಲ್ಲ. ಆದರೆ ಸಂಸಾರಕ್ಕೂ, ದುಡಿಯುವುದಕ್ಕೂ ಇಬ್ಬರೂ ಸಮಾನ ಪಾಲುದಾರರು ಅಂತಾದ ಮೇಲೆ ಕಿಶೋರನಿಗೆ ಯಾಕೆ ಈ ನ್ಯಾಯ ಅಪ್ಲೈ ಆಗುತ್ತಿಲ್ಲವೋ?ತನಗೆ ಬೇಕಾದಾಗ ಪಾರ್ಟಿಗೂ, ಟ್ರಿಪ್ಪಿಗೂ, ಹೊರಗೆ ತನ್ನಿಷ್ಟದ ಕೆಲಸಗಳಿಗೂ, ಮೋಜಿಗೂ ತೆರಳುವಾಗ ಒಂದು ಮೆಸೇಜು ಹಾಕಿ, ‘ನಾನು ಹಿಂಗೆ ಮಾಡುತ್ತಿದ್ದೇನೆ, ನಾಡಿದ್ದಿನಿಂದ ಎರಡು ದಿನಾ ಇರಲ್ಲ ಅಥವಾ ಇವತ್ತು ರಾತ್ರಿ ಲೇಟಾಗಿ ಬರ್ತೀನಿ, ರಮೇಶ್ ಬಂದಿದಾನೆ ಇಲ್ಲಿಂದಲೇ ಅವ್ನ ಮನೆಗೆ ಹೋಗಿ ಬೆಳಗ್ಗೆ ಬರ್ತೀನಿ’ ಎನ್ನುವುದಕ್ಕೂ, ದೀಪಾ ಈ ಟ್ರಿಪ್ಪಿಗೆ ಹೋಗುವ ಸಲುವಾಗಿ ಪೀಠಿಕೆಯ ಜೊತೆಗೆ, ಮೊಟ್ಟಮೊದಲನೆಯದಾಗಿ ಮಗನನ್ನು ಅಕ್ಕನ ಮನೆಯಲ್ಲಿ ಬಿಡುವ ಯೋಜನೆ ಪ್ರಸ್ತುತಪಡಿಸಿ, ಟ್ರಿಪ್ಪು ಹಿಂಗೇ ಇರುತ್ತದೆ, ಇಂಥಿಂಥವರು ಬರುತ್ತಿದ್ದಾರೆ, ಇಂತಲ್ಲೇ ಉಳಿಯುವ ಪ್ಲಾನ್, ನಂಜೊತೆ ಬರ್ತಿರೋದು.. ಸ್ಯಾಮ್.. ಅಂದರೆ ‘ಅದೇ ಅವತ್ತು ನಿಮಗೆ ಪರಿಚಯ ಮಾಡಿಸಿದ್ನಲ್ಲ, ಹಿಮಾಲಯನ್ ಟ್ರೆಕ್ಕಿಂಗ್ ಮಾಡ್ಕೊಂಡು ಅವತ್ತೇ ವಾಪಸು ಬಂದಿದ್ರಲ್ಲಾ ಅವ್ರು..’ ಹೀಗೆ ಅದಕ್ಕೊಂದು ರೆ-ರೆನ್ಸು ಕೊಟ್ಟು, ಆಮೇಲೆ ಜೊತೆಗೆ ಬರ್ತಿರೋದು ವಾಣಿ, ಅವಳು ಹೋಗ್ತಿದಾಳೆ ಅಂತಾನೇ ನಾನೂ ಹೋಗ್ತಿದ್ದೀನಿ ಎಂದು ಆಕೆಯನ್ನೂ ತಲೆದಂಡಕ್ಕೀಡು ಮಾಡಿ, ಅಷ್ಟರಲ್ಲಿ ಆಕೆಯ ಹೆಸರು ಬರುತ್ತಿದ್ದಂತೆ, ‘ಓಹ್.. ವಾಣೀನಾ ಸರಿ ಸರಿ ಹಂಗಾದರೆ ಹೋಗಿ ಬಾ.. ಅವ್ಳು ಪೂರ್ತಿ ಎರಡೂ ದಿನಾ ನಿನ್ ಜೊತೇನೆ ಇರ್ತಾಳೆ ತಾನೆ..’ ಎಂದು ಕೂಡಲೇ ವಾಟ್ಸ್‌ಆಪ್‌ನಲ್ಲಿ ಅವಳನ್ನೂ ಕನ್-ರ್ಮ್ ಮಾಡಿಕೊಂಡು, ಹತ್ತಾರು ವರ್ಷ ಸಂಸಾರ ಮಾಡಿರುವ ಹೆಂಡತಿಯ ಮೇಲೆ ಬಾರದ ವಿಶ್ವಾಸ ಆ ವಾಣಿಯ ಮೇಲೆ ಏನೂ ಗೊತ್ತಿಲ್ಲದಿದ್ದರೂ ಅದು ಹೇಗೆ ಬರುತ್ತದೋ ಗೊತ್ತಿಲ್ಲ..?ವಾಣಿಯೊಬ್ಬಳಿದ್ದರೆ ಸಾಕು ಹೆಂಡತಿಯ ಶೀಲಸಹಿತ ಸರ್ವ ರೀತಿಯ ರಕ್ಷಣೆಯೂ ಆಗಿಬಿಡುತ್ತದೆನ್ನುವ ಎಲ್ಲೋ ದೂರದಲ್ಲಿ ಚುಚ್ಚುವ, ಒಳನಂಬಿಕೆಯನ್ನು ಗಟ್ಟಿಗೊಳಿಸಿಕೊಳ್ಳುತ್ತಾ, ಆ ಕ್ಷಣಕ್ಕೆ ಮಗನದ್ದೂ ಎರಡ್ಮೂರು ದಿನದ ಮಟ್ಟಿಗೆ ಅಕ್ಕನ ಮನೆಯಲ್ಲಿರುವ ವ್ಯವಸ್ಥೆಯಾಗಿರುವುದರಿಂದ ಎಲ್ಲಾ ಕರೆಕ್ಟಾಗಿ ತನಗ್ಯಾವ ತೊಡಕೂ ಬಾರದಿರುವ ಬಗ್ಗೆ ಸುನಿಶ್ಚಿತವಾದಾಗ ಆಕೆಯ ಟ್ರಿಪ್ಪಿನ ಯೋಜನೆಗೆ ಓ.ಕೆ.ಯ ಮುದ್ರೆ ಬಿದ್ದಿರುತ್ತದೆ. ಇಷ್ಟೆಲ್ಲಾ ಅಗುವಾಗ ರಾತ್ರಿ ಹನ್ನೆರಡಾದರೂ ಆ ಕ್ಷಣದ ಖುಷಿ ಅವಳದ್ದು. ಈ ಎಲ್ಲ ಜಂಜಡದಿಂದ -ಂಡ್ಸ್ ಜತೆ ಎರಡು ದಿನ ಇರಬಹುದಲ್ಲ. ಅದಕ್ಕೇ ರಾತ್ರೋರಾತ್ರಿ ಮೆಸೇಜು ‘ಸ್ಯಾಮ್.. ನಂಗೆ ಪರ್ಮಿಷನ್ ಸಿಕ್ತು.. ಗೆಟಿಂಗ್ ರೆಡಿ...’ಅದೇ ಅವನು ಹೊರಟಾಗ ಇದ್ಯಾವುದೂ ಆಗಿರುವುದೇ ಇಲ್ಲವಲ್ಲ. ಯಾವ ಪರ್ಮಿಶನ್ನು, ಮೆಸೇಜೂ ಏನೂ ಇಲ್ಲ. ಆದರೆ ಅಷ್ಟೆ ದುಡ್ಡು ದುಗ್ಗಾಣಿ, ನೌಕರಿ, ಅದೇ ಟ್ರಾಫಿಕ್ಕು, ಟೆನ್ಶನ್ನು, ಮಗುವಿನ ಸ್ಕೂಲು, ಬಟ್ಟೆ, ಪಾತ್ರೆ ಎಲ್ಲವನ್ನೂ ನಿರ್ವಹಿಸುತ್ತಿರುವ ಅವಳಿಗೆ ಮಾತ್ರ ನೂರು ಪ್ರಶ್ನೆಗಳು ಯಾಕೋ..? ಅಂದರೆ ಹೆಣ್ಣುಮಕ್ಕಳ ಸ್ವಾತಂತ್ರ್ಯ ಅಂದರೆ ಹಿಂಗೆ ಎರಡೆರಡು ದಿನ ಮಾತ್ರವಾ.. ಅಥವಾ ನನಗೇ ಅರ್ಥವಾಗ್ತಿಲ್ಲವಾ..? ಎರಡೇ ದಿನದ ಸ್ವಾತಂತ್ರ್ಯಕ್ಕೂ ದೀಪಾ, ಮಧ್ಯರಾತ್ರಿಯಾದರೂ ಖುಷಿಯಿಂದ ಒಂದೇ ಸಮನೆ ನೂಕುತ್ತಿದ್ದ ಸ್ಮೈಲಿಗಳನ್ನು, ಅದರಲ್ಲೇ ಸುಖಿಸುವ ಆಕೆಯ ನಿಯಂತ್ರಿತ ಜಗತ್ತಿನ ಆರ್ದ್ರತೆಯನ್ನೂ ನೆನೆಯುತ್ತಾ ಕೂತುಬಿಟ್ಟಿದ್ದೆ.ಕಾರಣಅವಳು ಎಂದರೆ...(ಲೇಖಕರು ಕಥೆ-ಕಾದಂಬರಿಕಾರರು)

Saturday, March 5, 2016

ಇವು ಸಮಕಾಲೀನ ಅಮ್ಮಂದಿರ ಧಾವಂತಗಳು..
ಯಾರನ್ನೂ ಬಿಟ್ಟುಕೊಡಲಾಗದ, ಹಿಂದಿನ ನಂಬಿಕೆ ಮತ್ತು ಪ್ರಸ್ತುತವನ್ನೂ ನಿರಾಕರಿಸದ, ಇತ್ತ ಆಧುನಿಕ, ಅತ್ತ ಮರ್ಯಾದೆ ಎನ್ನುತ್ತ ಯಾವುದೇ ಒಳಗೊಳ್ಳುವಿಕೆಯಲ್ಲೂ ತೊಡಗಿಕೊಳ್ಳದ ಸಮಕಾಲೀನ ಸ್ಥಿತಿಯ ಅಮ್ಮಂದಿರ ಪ್ರತಿ ನಡೆಯಲ್ಲೂ ಧರ್ಮ ಸಂಕಟಗಳದ್ದೇ ಸಾಮ್ರಾಜ್ಯ. ಎಷ್ಟು ಹುಷಾರಾಗಿದ್ದರೂ ಮನೆಯಲ್ಲಿ ಅಂತಿಮ ದೂರುಗಳು ಆಕೆಯ ಮೇಲೇನೆ..!
ಎಲ್ಲ ಅಮ್ಮಂದಿರಿಗೆ ಮಕ್ಕಳೆಂದರೆ ಬಹುಶಃ ದೇವರಿಗಿಂತಲೂ ಒಂದು ಕೈ ಮಿಗಿಲೇ, ಸಹಜ ಕೂಡಾ. ಆದರೆ ಮಕ್ಕಳಿಗೆ...? ಬಹುಶಃ ಬದುಕಿನುದ್ದಕ್ಕೂ ಸಂಕಟ ತಮ್ಮ ಹತಾಶೆ, ನೋವು, ಈಡೇರದಿರುವ ಬಯಕೆಗಳ ಗುರಿ, ಕೈಲಾಗದ ಅಸಹಾಯಕತನ, ಕಳೆದು ಹೋಗುವ, ಹೋಗಲಿರುವ ಪ್ರೀತಿ, ಆಕಸ್ಮಿಕವಾಗಿ ಅಡರಿಕೊಳ್ಳುವ ಬಾಲ್ಯದ ಕಾಯಿಲೆಗಳು, ಒಳಗೊಳಗೇ ಕಾಡುವ ಖಿನ್ನತೆ, ಸಹಪಾಠಿಗಳಷ್ಟು ಚೆನ್ನಾಗಿ ತಾನಿಲ್ಲದಿರುವುದು, ಅವರಷ್ಟು ಚೆಂದವಾಗಿ ತನಗೆ ಗಣಿತ ಮತ್ತು ಇಂಗ್ಲೀಷು ಅಪೂಟು ಬರುತ್ತಿಲ್ಲ ಎನ್ನುವ ಒಳಗೊಳಗೆ ಹಣಿದು ಹೈರಾಣು ಮಾಡುವ ಶಾಲೆಯ ಅತಿ ದೊಡ್ಡ ಸಮಸ್ಯೆ, ಅವರಪ್ಪ ಎಷ್ಟು ನೀಟಾಗಿ ಪ್ಯಾಂಟು ಹಾಕಿಕೊಂಡು ಬರ್ತಾರೆ ನಮ್ಮಪ್ಪಂಗೆ ಟೇಸ್ಟೆ ಇಲ್ಲ, ಎಲ್ಲರೂ ಪ್ರತಿ ಹಬ್ಬಕ್ಕೂ ಬರ್ತಡೆಗೆ ಬಟ್ಟೆ ಗಿಫ್ಟ್ ನಮ್ಮನೇಲಿ ಅವೆಲ್ಲಕ್ಕೂ ಕಿಮ್ಮತ್ತೇ ಇಲ್ಲ, ಎರಡನೆತ್ತಿ ಮಕ್ಕಳೆ ಇವತ್ತು ಬೈಸಿಕಲ್ಲು ಹೊಡಿತಾವೆ, ನನಗೆ ಮಾತ್ರ ಕಾಲೇಜಿಗೆ ಬಂದ್ರೂ ಒಂದು ಸ್ಕೂಟಿ ಇಲ್ಲ, -ಂಡ್ಸ್ ಮನೇಲಿ ಚೆಂದ ಸೋ- ಇದೆ, ನಮ್ಮನೇಲಿ ಇದೆ ಪ್ಲಾಸ್ಟಿಕ್ ಚೇಯರು, ಎಲ್ಲೂ ಟಚ್‌ಸ್ಕ್ರೀನ್ ಅದರಲ್ಲೂ ಬ್ಲ್ಯಾಕ್‌ಬೆರ್ರಿ ಜೊತೆಗೆ ಗೆಲಾಕ್ಸಿ ಗೊರಿ.. ನಮ್ಮಮ್ಮಂಗೆ ಇದೇ ಕೊಡಿಸಿರೋದೆ ದೊಡ್ಡದು. ಹೀಗೆ ಪ್ರತಿ ಮಕ್ಕಳಿಗೂ, ತಮ್ಮ ಬಾಲ್ಯದಿಂದ ವಯಸ್ಸು ಕೈಗೆಟುಕಿ ನಿಲ್ಲುವವರೆಗಿನ ಎಲ್ಲ ತಮ್ಮ ತಪ್ಪು ಆತಂಕ, ಕೈಲಾಗದ ಘಟನೆಗಳು, ಸೋಲುವಿಕೆಗಳಿಗೆ ಕಾರಣ ಅಮ್ಮಂದಿರೇ ಕೆಲವೊಮ್ಮೆ ಅಪ್ಪನೂ, ಆದರೆ ಸುಲಭವಾಗಿ ಸಿಗುವ ಮಿಕ ಮಾತ್ರ ಅಮ್ಮನೆ.
ಅದರಲ್ಲೂ ಹೆಚ್ಚಿನಂಶ ಎದೆಯೆತ್ತರಕ್ಕೆ ಬೆಳೆಯುವ ಹೆಣ್ಣುಮಕ್ಕಳ ಮೊದಲ ಆಂತರಿಕ ಶತ್ರು ಎಂದರೆ ಅಮ್ಮನೆ. ಏನು ಮಾಡಿದರೂ ನಿಂಗ್ಯಾರು ಹೇಳಿದ್ರು, ನೀನ್ಯಾಕೆ ಅಲ್ಲಿಗೆ ಬಂದೆ ನನ್ನ -ಂಡ್ಸ್ ಬಂದಾಗ ನೀನು ಬರ್ಬೇಡ.. ನೀನ್ಯಾಕೆ ನನ್ನ ಕಾಲ್ ತೊಗೊಂಡೆ.. ನಾನು ಎಲ್ಲಿ ಹೋಗ್ತೇನೆ ಎನ್ನುವ ಟೈಂಟೇಬಲ್ ಯಾಕೆ..? ಅಮ್ಮ ನಿಂಗೆ ಗೊತ್ತಾಗಲ್ಲ ಸುಮ್ನಿರು, ಅಮ್ಮ ನೀನು ಹಳೆಯ ಕಾಲದವಳು..(ಹಾಗಂತ ತೀರ ಹಳೆಯ ಕಾಲದವಳೇನಲ್ಲ ಅಮ್ಮ ಬೆಳೆಯುವಾಗ, ಮಗಳೊಂದಿಗೆ ಮೊಬೈಲಿಗೆ ಕೈಹೂಡುತ್ತಿzಳೆ ಅಷ್ಟೆ ವ್ಯತ್ಯಾಸ) ಆದರೂ ಆಕೆಗೆ ಬೆಳೆಯುವ ಮಗಳ ಬಗ್ಗೆ, ಬೆಳೆಯುತ್ತಿರುವ ಸಮಾಜದ ಓರೆಕೋರೆಗಳಲ್ಲಿ ಮಗಳು ನಲುಗದಿರಲಿ ಎನ್ನುವ ಧಾವಂತವಿದೆಯಲ್ಲ, ಅದು ಆಕೆಯನ್ನು ಅಡಿಸುತ್ತಿರುತ್ತದೆ ಎನ್ನುವುದರ ಅರಿವಾಗುವುದೇ ಇಲ್ಲ ಈಗಿನ ಹುಡುಗಿಯರಿಗೆ. -ಶನ್ನಿನ ಹಂಗಿಗೆ ಬೀಳುವ ಹುಡುಗಿ ಅರೆಬರೆ ಡ್ರೆಸ್ಸು ಮಾಡುತ್ತಿದ್ದರೆ ಬಿಸಿ ತುಪ್ಪವೇ ಅಮ್ಮನಿಗೆ. ಛೇ ಇದು ಕಲರ್ ಚೆನ್ನಾಗಿಲ್ಲ ಅಥವಾ ಒಂಚೂರು ಕತ್ತು ಮುಚ್ಚಬೇಕಿತ್ತು, ಇದು ಕಲರ್ ನಿನಗೆ ಸೂಟ್ ಆಗಲ್ಲ ಮಗಳೇ ಎಂದು ತನಗೆ ತಿಳಿದ ಉಪಾಯಗಳ ಮೂಲಕ ನಯವಾಗಿ ಆಕೆಯ ಟೇಸ್ಟು ಮತ್ತು ನೋಡುವ ದೃಷ್ಟಿಯಲ್ಲಿ ಎರಗಬಹುದಾದ ಆತಂಕ ಎರಡನ್ನು ಸಂಭಾಳಿಸಲು ಯತ್ನಿಸುವ ಅಮ್ಮನ ಆಂದೋಳನೆಯನ್ನು ವಿವರಿಸುವ ಅಧ್ಯಾಯ ಮತ್ತದಕ್ಕೆ ಉಪಾಯ ಯಾವ ವಿಕಿಪೀಡಿಯಾದಲ್ಲಿದೆ ಇವತ್ತು..?
ಗೂಗಲ್‌ನಲ್ಲಿ ಬರುವ ಹೇರ್‌ಸ್ಟೈಲು ಬರದಿದ್ದರೂ ಅದು ಅಮ್ಮನ ತಪ್ಪೇ ಹೊರತಾಗಿ, ಅಂತಹzಂದು ಸ್ಟೈಲು ಕೇವಲ ತರಬೇತಿ ಮತ್ತು ತಾಂತ್ರಿಕತೆಯಿಂದಾಗಿ ಮಾತ್ರ ಸಾಧ್ಯವಿದೆ ಎನ್ನುವುದನ್ನು ಮಗಳಿಗೆ ಯಾವ ಆಪ್ ಕಲಿಸಲಿದೆಯೋ ಗೊತ್ತಿಲ್ಲ. ಆದರೆ ಅಂತಹzನ್ನೆಲ್ಲ ಆಕೆಯ ಲೆಕ್ಕದಲ್ಲಿ ಅಮ್ಮ ಕಲಿತಿರಬೇಕಿತ್ತು. ಟಿವಿಯಲ್ಲಿ ಬರುವ ರೆಸಿಪಿ ಪಿ.ಯು. ಓದುವ ಹುಡುಗಿಯ ಡಬ್ಬದಲ್ಲಿರಬೇಕು. ಘಮ್ಮಂತ ಕರಿಬೇವಿನ ಒಗ್ಗರಣೆ ಸಾರಿನ ಜೊತೆಗೆ ಬೆರಳು ಚೀಪುವಂತಹ ಗೊಜ್ಜು ಮಾಡಿಕೊಂಡು ಮಗಳನ್ನು ಕಳುಹಿಸಿ ತಾನೂ ನೌಕರಿಯ ನೊಗ ಹೊರುವ ಅಮ್ಮನಿಗೆ ಅದ್ಯಾರು ಇದ್ದಕ್ಕಿದ್ದಂತೆ ರೆಸಿಪಿ ಹೇಳಿಕೊಟ್ಟಾರು..? ಟ್ಯೂಷನ್ ಕ್ಲಾಸಿನ ಮೊದಲು ಬಂದೂ ನಿಂತರೂ ಯಾಕೆ ಬೇಗ ಬಂದೆ ಎಂದು ಗದರುವ, ಅದೇ ಐದು ನಿಮಿಷ ತಡವಾಗಿ ಹೋದಾಗ ಮಗಳು ಹುಡುಗರೊಂದಿಗೆ ಸಹಜವಾಗಿ ಕುಲುಕುಲು ಎನ್ನುತ್ತಾ ನಿಂತಿದ್ದರೂ ಅಮ್ಮನಾದವಳ ಎದೆ ಸುಖಾಸುಮ್ಮನಾದರೂ ಢವಢವಿಸುತ್ತದೆ ಎನ್ನುವುದನ್ನು, ಗದರುವ ಹುಡುಗಿಗೆ, ಅಮ್ಮನ ಅಭದ್ರತೆ ಮತ್ತು ಎರಡು ಸಮಕಾಲೀನ ಸ್ಥಿತಿಯ ಮಧ್ಯದ ಅಂತರವನ್ನು ತೂಗಿಸಬೇಕಾದ ಅತಿದೊಡ್ಡ ಜವಾಬ್ದಾರಿಯ ಹಂತವನ್ನು ಅಮ್ಮ ದಾಟುತ್ತಿzಳೆ ಅದಕ್ಕೆ ಹಾಗಾಡುತ್ತಾಳೆ ಎಂದು ಯಾವ ಕಾಲೇಜಿನ ಕೆಮಿಸ್ಟ್ರಿಯಲ್ಲಿದೆ..?
ಅಮ್ಮನಿಗೂ ಆಕೆಯದೇ ಮುಟ್ಟು ನಿಲ್ಲುವ ಸಮಯದ ನಲ್ವತ್ತರ ಕಿರಿಕಿರಿ, ತನಗೆ ವಯಸ್ಸಾಯಿತೇನೋ ಎನ್ನುವ ಅರಿವಿಗೆ ಬಾರದ ಅಭದ್ರತೆ, ಮಾಡಿಕೊಂಡ ‘ಡೈ’ನ ಸಂದಿನಿಂದಲೂ ಸರಕ್ಕನೆ ಇಣುಕುವ ಬೆಳ್ಳಿ ರೇಖೆ, ಅಸಮರ್ಪಕ ಪಿರಿಯಡ್ಡು, ಸಣ್ಣಗಾಗಲು ಎಷ್ಟೆ ಡಯಟ್ ಮಾಡಿದರೂ
ಜೀನ್ಸ್‌ನಿಂದ ಆಚೆಗಿಣುಕುವ ಲವ್‌ಹ್ಯಾಂಡಲ್ಲು, ಅದ್ಯಾಕೋ ಬಲ ಪಕ್ಕೆಯೊಳಗೆ ಸುಮ್ಮನೆ ಕದಲುವ ಸಣ್ಣ ನೋವು ಆಗೀಗ ತನಗೂ ಸ್ತನ ಕ್ಯಾನ್ಸರಾ ಎಂದು ಚಳ್ಳೆನ್ನಿಸುವ ಸಣ್ಣಗಿನ ಭೀತಿಯ ಅಲೆ ಬೆನ್ನಹುರಿಯಲ್ಲಿ ಆಡುತ್ತಿರುತ್ತದೆ. ಈ ಹಂತದಲ್ಲಿ ಆಕೆಗೆ ಅಮ್ಮನೂ ಇಲ್ಲದೆ, ಜೊತೆ ನಿಲ್ಲುವ ಅಪ್ಪನೂ ಇಲ್ಲದೆ, ಪೂರ್ತಿ ಕುಟುಂಬದ ಜೊತೆಗೆ ಗಂಡನೆಂಬ ಅರೆಬರೆ ಹಲಸಿನಹಣ್ಣು ಕಟ್ಟಿಕೊಂಡು ಏಗಬೇಕಲ್ಲ ಅದಕ್ಕೆ ಬೇಕಾದ ಸಿದ್ಧತೆ ಅಥವಾ ಸಾಂತ್ವನ ಯಾವ ಬಯಾಲಜಿಯ ಅಂಗಾಂಶಗಳಲ್ಲಿ ಸಿಕ್ಕೀತು..?
ಅಪರೂಪಕ್ಕೆ ಗಂಡ ಅಥವಾ ಕತ್ತೆಯಂತೆ ಬೆಳೆದು ಅಂಡಾಗುಂಡಿಯಾಗುತ್ತಲೆ ಕಾಲೂರಿರುವ ಮಗ ಕರಡಿ ಪ್ರೀತಿ ತೋರಿಸುತ್ತಾ, ತಂದು ಕೊಟ್ಟಿರುವ ಮೊಬೈಲಿನಲ್ಲಿ ಅಳುಕುತ್ತಲೇ ಏನೇನಾದರೂ ತೀಡುತ್ತಾ ಹುಡುಕಾಡುವ ಅಮ್ಮ ಕೂತ ಐದೇ ನಿಮಿಷಕ್ಕೆ ಹಾಜರಾಗುವ, ಅಮ್ಮನಿಗಿಂತಲೂ ಮೊದಲೇ ಸ್ಕೈಪು, -ಸ್‌ಬುಕ್ಕು ಎನ್ನುತ್ತಲೇ ಅದಕ್ಕೂ ಮಿಗಿಲಾಗಿ “ನಾವೆ -ಂಡ್ಸ್ ಫ್ರೀ ಆಗೋದೇ ರಾತ್ರಿ ಹತ್ತರ ಮೇಲೆ ಅದಕ್ಕೆ ಗ್ರೂಪ್‌ಚಾಟ್" ಎನ್ನುತ್ತಾ ಬಾಗಿಲಿಕ್ಕಿಕೊಳ್ಳುವ ಮಗಳ ಕೈಯಿಂದ, ಜಾರುತ್ತಿರುವ ಆಕೆಯ ವಯಸ್ಸು, ಮನಸ್ಸು ಮತ್ತು ತನ್ನ ಕೈಯಿಂದ ಜಾರುತ್ತಿರುವ ಆಕೆಯನ್ನು ರಕ್ಷಿಸಿಕೊಳ್ಳಲು ತನ್ನ ಮೊಬೈಲೇ ಬಲಿಕೊಟ್ಟು ಸುಮ್ಮನೆ ಪಿಳಿಪಿಳಿ ಮಾಡುವ ಅಮ್ಮಂದಿರ ಅರಬರೆ ಭಯದ ಅಸಹಾಯಕತೆಗೆ ಅದ್ಯಾವ ಪ್ರೊ-ಸರ್‌ನ ಡಾಕ್ಟರಿಕೆ ಉತ್ತರ ಕೊಟ್ಟೀತು..?
ತೀರ ಹದಿಹರೆಯದ ಮಕ್ಕಳ ಇವತ್ತಿನ ದೂರುಗಳು ಮತ್ತವರ ಅಗತ್ಯತೆಯನ್ನು ಗಮನಿಸುತ್ತಿದ್ದರೆ, ಆವತ್ತಿನ ನನ್ನ ದಿನಗಳಲ್ಲಿ ಜಾರುಗುಂಡಿ ಆಡಿ ಚೆಡ್ಡಿ ಹರಿದುಕೊಂಡು ಅದಕ್ಕೊಂದು ಖಾಕಿ ಬಟ್ಟೆ ತುಂಡು ಪ್ಯಾಚು ಹಚ್ಚಿದರೂ ಬರಕತ್ತಾಗದೆ, ಅಂಡು ಹರಿದ ಚೆಡ್ಡಿಯನ್ನು ಗೆಳೆಯರು ‘..ಹೇಯ್ ಪೋಸ್ಟ್ ಆಫೀಸ್ ಬಾಗ್ಲಾ ತೆಗದದ ನೋಡಲೇ..’ ಎಂದು ಗೇಲಿ ಮಾಡುತ್ತಿzಗ ‘ಹೌದಲೇ..ನೀನು ಕಾರ್ಡ್ ಬರೀತಿ ಅಂತ ಬಾಗ್ಲ ತೆಗೆದೇನಿ..’ ಎಂದು ಅಷ್ಟೆ ವ್ಯವಸ್ಥಿತ ಗೇಲಿಯೊಂದಿಗೆ ಯಾವ ಮುಜುಗರವೂ ಇಲ್ಲದೆ
ಬದುಕಿದ ನನಗೆ, ಇವರಿಗೆಲ್ಲ ಏನು ಬೇಕಾಗಿದೆ ಎನ್ನುವುದೇ ಅರಿವಾಗುತ್ತಿಲ್ಲ ಎನ್ನಿಸಿದರೂ ಒಂದು ನಿಜ.
ಈಗಿನ ಮಕ್ಕಳ, ಕೆಲವು ಹಂತದವರೆಗಿನ ದೊಡ್ಡವರ ಎಲ್ಲರ ಹೊಟ್ಟೆಗಳೂ, ಮನಸ್ಸುಗಳೂ ತುಂಬಿವೆ. ಅದಕ್ಕಾಗಿ ಈಗಿನ ಮನಸ್ಸುಗಳು ಮೃದುವಾದ, ಆಪ್ತ ಆಯಕಟ್ಟಿನ ಮನಸ್ಥಿತಿಗೆ ಸ್ಪಂದಿಸಬೇಕಾದ ಭಾವನೆಗಳಿಗೆ ಪಕ್ಕಾಗುತ್ತಿಲ್ಲ. ಈಗಿನ ಮಕ್ಕಳಲ್ಲಿ ಆ ಮುಗ್ಧತೆಯೂ, ಆ ಆಪ್ತತೆಯೂ ಇಲ್ಲ ಎನ್ನುವುದಕ್ಕಿಂತಲೂ ಬದುಕನ್ನು ತುಂಬ ಚೆಂದವಾಗಿ ಆನಂದಿಸಬೇಕೆಂಬ ತಪನೆಯೇ ಯಾವ ಮಕ್ಕಳಲ್ಲೂ ನನಗೆ ಕಾಣುತ್ತಿಲ್ಲ. ಏನಿದ್ದರೂ ಈಗ ಒಂದು ಕೋಣೆಯಲ್ಲಿ ತಮ್ಮದೇ ಲ್ಯಾಪ್‌ಟಾಪು, ಒಂದು ಮೊಬೈಲು, ನೆಟ್‌ಪ್ಯಾಕು ಆಗೀಗ ಇಣುಕಲು ಒಂದು ಟಿವಿ ಇಷ್ಟಿದ್ದು ಬಿಟ್ಟರೆ ತೀರ ಏಕಾಂಗಿತನ ಈಗಿನ ಮಕ್ಕಳ ನೆಚ್ಚಿನ ಹವ್ಯಾಸ ಎನ್ನುವುದು ಅತೀವ ಆತಂಕಕಾರಿ ಸಂಗತಿ. ಮೇಲಿನ ನನ್ನ ಬಾಲ್ಯದ ಘಟನೆ ಮೊನ್ನೆ ಯಾಕೋ ಆಕಸ್ಮಿಕವಾಗಿ ಮನಸ್ಸಿಗೆ ತಾಗಿತು.
ತೀರ ಕೈಲಾಗದಷ್ಟೂ ಕಷ್ಟವಿಲ್ಲದಿದ್ದರೂ, ತಾವು ಬಡವರು ತಮ್ಮಲ್ಲಿ ಏನೂ ಇಲ್ಲ ಎಂದು ಹೇಳಿಕೊಳ್ಳಲು ಮತ್ತು ಅಕಸ್ಮಾತ್ ಏನೂ ಇಲ್ಲದಿದಾಗ ಏನಾದರೂ ಇವತ್ತಿಗೆ ಕೊಡು ಎಂದು ಕೇಳಿ ತೆಗೆದುಕೊಳ್ಳಲೂ ಕೂಡಾ ಯಾವ ನಾಚಿಕೆ ಕಾಡದಿzಗಲೂ, ಮಹಾರಾಜ ಟೈಲ್ಸ್ ಇಲ್ಲದಿದ್ದರೂ ಕೆಂಪು ನೆಲದ ಮೇಲೆ ಮನಸ್ಸುಗಳು ನೆಮ್ಮದಿಯಿಂದ ನಿದ್ರಿಸುತ್ತಿದ್ದವು ಎನ್ನುವುದನ್ನು ಯಾವ ಕಾಲದ ತಜ್ಞನೂ ಒಪ್ಪಲೇಬೇಕಾದ ಮಾತು.
ಕೇವಲ ನಾಲ್ಕನೆಯ ತರಗತಿ ಓದಿ, ಸಾಲು ಸಾಲು ಹೆಣ್ಣುಮಕ್ಕಳನ್ನು ಇಂತಹ ಯಾವುದೇ ಸಾಮಾಜಿಕ ಅಭದ್ರತೆ, ಸ್ವಂತದ ಇನ್‌ಸೆಕ್ಯೂರಿಟಿ, ಭವಿಷ್ಯತ್ತಿನಲ್ಲಿ ಹರೆಯದ ಹುಡುಗಿಯರ ಕತೆ ಹೆಂಗೊ ಎನ್ನುವ ಅಗೋಚರ ಆಂದೋಳನೆ, ಹೊಟ್ಟೆಗಿಲ್ಲದಿದ್ದರೂ ವಿದ್ಯಾಭ್ಯಾಸ ಮಾತ್ರ ಸರಿಯಾಗಿ ಕಲಿಸಲೆಬೇಕು ಎನ್ನುವ ಬೇಸಿಕ್ ಕಾನ್ಸೆಪ್ಟಿನಲ್ಲಿ ಬೆಳೆಸಿದ, ಓದಿಸಿದ ನಮ್ಮಮ್ಮ, ಹದಿನೈದನೆ ವಯಸ್ಸಿಗೇ ಮದುವೆ ಆಗಿ, ಮನೆಮಠ ಕಟ್ಟಿಕೊಂಡೂ ಕಾಲೂರಿ ನಿಂತಿದ್ದನ್ನು ಕಣ್ಣಾರೆ ಕಂಡಿರುವ ನನಗೆ, ಇಂತಹದ್ಯಾವತ್ತೂ ಆಕೆಯನ್ನು ಕಾಡಿದ್ದು ನೆನಪಿಲ್ಲ. ಆದರೆ ಇಂದು ಆಕೆಯ ಮಗಳಂತಿರುವ ಸಾವಿರಾರು ಅಮ್ಮಂದಿರನ್ನು ಅವರ ಮಕ್ಕಳೇಕೆ ಉದ್ವೇಗಕ್ಕೆ ನೂಕುತ್ತಿzರೆ..? ಇದು ಪ್ರಸ್ತುತ ಅಮ್ಮಂದಿರ ಬದುಕಿನ ದಾರುಣ ದುರಂತ.
ಕಾರಣ ಅವಳು ಎಂದರೆ..
(ಲೇಖಕರು ಕಥೆ-ಕಾದಂಬರಿಕಾರರು)