Saturday, March 5, 2016

ಇವು ಸಮಕಾಲೀನ ಅಮ್ಮಂದಿರ ಧಾವಂತಗಳು..
ಯಾರನ್ನೂ ಬಿಟ್ಟುಕೊಡಲಾಗದ, ಹಿಂದಿನ ನಂಬಿಕೆ ಮತ್ತು ಪ್ರಸ್ತುತವನ್ನೂ ನಿರಾಕರಿಸದ, ಇತ್ತ ಆಧುನಿಕ, ಅತ್ತ ಮರ್ಯಾದೆ ಎನ್ನುತ್ತ ಯಾವುದೇ ಒಳಗೊಳ್ಳುವಿಕೆಯಲ್ಲೂ ತೊಡಗಿಕೊಳ್ಳದ ಸಮಕಾಲೀನ ಸ್ಥಿತಿಯ ಅಮ್ಮಂದಿರ ಪ್ರತಿ ನಡೆಯಲ್ಲೂ ಧರ್ಮ ಸಂಕಟಗಳದ್ದೇ ಸಾಮ್ರಾಜ್ಯ. ಎಷ್ಟು ಹುಷಾರಾಗಿದ್ದರೂ ಮನೆಯಲ್ಲಿ ಅಂತಿಮ ದೂರುಗಳು ಆಕೆಯ ಮೇಲೇನೆ..!
ಎಲ್ಲ ಅಮ್ಮಂದಿರಿಗೆ ಮಕ್ಕಳೆಂದರೆ ಬಹುಶಃ ದೇವರಿಗಿಂತಲೂ ಒಂದು ಕೈ ಮಿಗಿಲೇ, ಸಹಜ ಕೂಡಾ. ಆದರೆ ಮಕ್ಕಳಿಗೆ...? ಬಹುಶಃ ಬದುಕಿನುದ್ದಕ್ಕೂ ಸಂಕಟ ತಮ್ಮ ಹತಾಶೆ, ನೋವು, ಈಡೇರದಿರುವ ಬಯಕೆಗಳ ಗುರಿ, ಕೈಲಾಗದ ಅಸಹಾಯಕತನ, ಕಳೆದು ಹೋಗುವ, ಹೋಗಲಿರುವ ಪ್ರೀತಿ, ಆಕಸ್ಮಿಕವಾಗಿ ಅಡರಿಕೊಳ್ಳುವ ಬಾಲ್ಯದ ಕಾಯಿಲೆಗಳು, ಒಳಗೊಳಗೇ ಕಾಡುವ ಖಿನ್ನತೆ, ಸಹಪಾಠಿಗಳಷ್ಟು ಚೆನ್ನಾಗಿ ತಾನಿಲ್ಲದಿರುವುದು, ಅವರಷ್ಟು ಚೆಂದವಾಗಿ ತನಗೆ ಗಣಿತ ಮತ್ತು ಇಂಗ್ಲೀಷು ಅಪೂಟು ಬರುತ್ತಿಲ್ಲ ಎನ್ನುವ ಒಳಗೊಳಗೆ ಹಣಿದು ಹೈರಾಣು ಮಾಡುವ ಶಾಲೆಯ ಅತಿ ದೊಡ್ಡ ಸಮಸ್ಯೆ, ಅವರಪ್ಪ ಎಷ್ಟು ನೀಟಾಗಿ ಪ್ಯಾಂಟು ಹಾಕಿಕೊಂಡು ಬರ್ತಾರೆ ನಮ್ಮಪ್ಪಂಗೆ ಟೇಸ್ಟೆ ಇಲ್ಲ, ಎಲ್ಲರೂ ಪ್ರತಿ ಹಬ್ಬಕ್ಕೂ ಬರ್ತಡೆಗೆ ಬಟ್ಟೆ ಗಿಫ್ಟ್ ನಮ್ಮನೇಲಿ ಅವೆಲ್ಲಕ್ಕೂ ಕಿಮ್ಮತ್ತೇ ಇಲ್ಲ, ಎರಡನೆತ್ತಿ ಮಕ್ಕಳೆ ಇವತ್ತು ಬೈಸಿಕಲ್ಲು ಹೊಡಿತಾವೆ, ನನಗೆ ಮಾತ್ರ ಕಾಲೇಜಿಗೆ ಬಂದ್ರೂ ಒಂದು ಸ್ಕೂಟಿ ಇಲ್ಲ, -ಂಡ್ಸ್ ಮನೇಲಿ ಚೆಂದ ಸೋ- ಇದೆ, ನಮ್ಮನೇಲಿ ಇದೆ ಪ್ಲಾಸ್ಟಿಕ್ ಚೇಯರು, ಎಲ್ಲೂ ಟಚ್‌ಸ್ಕ್ರೀನ್ ಅದರಲ್ಲೂ ಬ್ಲ್ಯಾಕ್‌ಬೆರ್ರಿ ಜೊತೆಗೆ ಗೆಲಾಕ್ಸಿ ಗೊರಿ.. ನಮ್ಮಮ್ಮಂಗೆ ಇದೇ ಕೊಡಿಸಿರೋದೆ ದೊಡ್ಡದು. ಹೀಗೆ ಪ್ರತಿ ಮಕ್ಕಳಿಗೂ, ತಮ್ಮ ಬಾಲ್ಯದಿಂದ ವಯಸ್ಸು ಕೈಗೆಟುಕಿ ನಿಲ್ಲುವವರೆಗಿನ ಎಲ್ಲ ತಮ್ಮ ತಪ್ಪು ಆತಂಕ, ಕೈಲಾಗದ ಘಟನೆಗಳು, ಸೋಲುವಿಕೆಗಳಿಗೆ ಕಾರಣ ಅಮ್ಮಂದಿರೇ ಕೆಲವೊಮ್ಮೆ ಅಪ್ಪನೂ, ಆದರೆ ಸುಲಭವಾಗಿ ಸಿಗುವ ಮಿಕ ಮಾತ್ರ ಅಮ್ಮನೆ.
ಅದರಲ್ಲೂ ಹೆಚ್ಚಿನಂಶ ಎದೆಯೆತ್ತರಕ್ಕೆ ಬೆಳೆಯುವ ಹೆಣ್ಣುಮಕ್ಕಳ ಮೊದಲ ಆಂತರಿಕ ಶತ್ರು ಎಂದರೆ ಅಮ್ಮನೆ. ಏನು ಮಾಡಿದರೂ ನಿಂಗ್ಯಾರು ಹೇಳಿದ್ರು, ನೀನ್ಯಾಕೆ ಅಲ್ಲಿಗೆ ಬಂದೆ ನನ್ನ -ಂಡ್ಸ್ ಬಂದಾಗ ನೀನು ಬರ್ಬೇಡ.. ನೀನ್ಯಾಕೆ ನನ್ನ ಕಾಲ್ ತೊಗೊಂಡೆ.. ನಾನು ಎಲ್ಲಿ ಹೋಗ್ತೇನೆ ಎನ್ನುವ ಟೈಂಟೇಬಲ್ ಯಾಕೆ..? ಅಮ್ಮ ನಿಂಗೆ ಗೊತ್ತಾಗಲ್ಲ ಸುಮ್ನಿರು, ಅಮ್ಮ ನೀನು ಹಳೆಯ ಕಾಲದವಳು..(ಹಾಗಂತ ತೀರ ಹಳೆಯ ಕಾಲದವಳೇನಲ್ಲ ಅಮ್ಮ ಬೆಳೆಯುವಾಗ, ಮಗಳೊಂದಿಗೆ ಮೊಬೈಲಿಗೆ ಕೈಹೂಡುತ್ತಿzಳೆ ಅಷ್ಟೆ ವ್ಯತ್ಯಾಸ) ಆದರೂ ಆಕೆಗೆ ಬೆಳೆಯುವ ಮಗಳ ಬಗ್ಗೆ, ಬೆಳೆಯುತ್ತಿರುವ ಸಮಾಜದ ಓರೆಕೋರೆಗಳಲ್ಲಿ ಮಗಳು ನಲುಗದಿರಲಿ ಎನ್ನುವ ಧಾವಂತವಿದೆಯಲ್ಲ, ಅದು ಆಕೆಯನ್ನು ಅಡಿಸುತ್ತಿರುತ್ತದೆ ಎನ್ನುವುದರ ಅರಿವಾಗುವುದೇ ಇಲ್ಲ ಈಗಿನ ಹುಡುಗಿಯರಿಗೆ. -ಶನ್ನಿನ ಹಂಗಿಗೆ ಬೀಳುವ ಹುಡುಗಿ ಅರೆಬರೆ ಡ್ರೆಸ್ಸು ಮಾಡುತ್ತಿದ್ದರೆ ಬಿಸಿ ತುಪ್ಪವೇ ಅಮ್ಮನಿಗೆ. ಛೇ ಇದು ಕಲರ್ ಚೆನ್ನಾಗಿಲ್ಲ ಅಥವಾ ಒಂಚೂರು ಕತ್ತು ಮುಚ್ಚಬೇಕಿತ್ತು, ಇದು ಕಲರ್ ನಿನಗೆ ಸೂಟ್ ಆಗಲ್ಲ ಮಗಳೇ ಎಂದು ತನಗೆ ತಿಳಿದ ಉಪಾಯಗಳ ಮೂಲಕ ನಯವಾಗಿ ಆಕೆಯ ಟೇಸ್ಟು ಮತ್ತು ನೋಡುವ ದೃಷ್ಟಿಯಲ್ಲಿ ಎರಗಬಹುದಾದ ಆತಂಕ ಎರಡನ್ನು ಸಂಭಾಳಿಸಲು ಯತ್ನಿಸುವ ಅಮ್ಮನ ಆಂದೋಳನೆಯನ್ನು ವಿವರಿಸುವ ಅಧ್ಯಾಯ ಮತ್ತದಕ್ಕೆ ಉಪಾಯ ಯಾವ ವಿಕಿಪೀಡಿಯಾದಲ್ಲಿದೆ ಇವತ್ತು..?
ಗೂಗಲ್‌ನಲ್ಲಿ ಬರುವ ಹೇರ್‌ಸ್ಟೈಲು ಬರದಿದ್ದರೂ ಅದು ಅಮ್ಮನ ತಪ್ಪೇ ಹೊರತಾಗಿ, ಅಂತಹzಂದು ಸ್ಟೈಲು ಕೇವಲ ತರಬೇತಿ ಮತ್ತು ತಾಂತ್ರಿಕತೆಯಿಂದಾಗಿ ಮಾತ್ರ ಸಾಧ್ಯವಿದೆ ಎನ್ನುವುದನ್ನು ಮಗಳಿಗೆ ಯಾವ ಆಪ್ ಕಲಿಸಲಿದೆಯೋ ಗೊತ್ತಿಲ್ಲ. ಆದರೆ ಅಂತಹzನ್ನೆಲ್ಲ ಆಕೆಯ ಲೆಕ್ಕದಲ್ಲಿ ಅಮ್ಮ ಕಲಿತಿರಬೇಕಿತ್ತು. ಟಿವಿಯಲ್ಲಿ ಬರುವ ರೆಸಿಪಿ ಪಿ.ಯು. ಓದುವ ಹುಡುಗಿಯ ಡಬ್ಬದಲ್ಲಿರಬೇಕು. ಘಮ್ಮಂತ ಕರಿಬೇವಿನ ಒಗ್ಗರಣೆ ಸಾರಿನ ಜೊತೆಗೆ ಬೆರಳು ಚೀಪುವಂತಹ ಗೊಜ್ಜು ಮಾಡಿಕೊಂಡು ಮಗಳನ್ನು ಕಳುಹಿಸಿ ತಾನೂ ನೌಕರಿಯ ನೊಗ ಹೊರುವ ಅಮ್ಮನಿಗೆ ಅದ್ಯಾರು ಇದ್ದಕ್ಕಿದ್ದಂತೆ ರೆಸಿಪಿ ಹೇಳಿಕೊಟ್ಟಾರು..? ಟ್ಯೂಷನ್ ಕ್ಲಾಸಿನ ಮೊದಲು ಬಂದೂ ನಿಂತರೂ ಯಾಕೆ ಬೇಗ ಬಂದೆ ಎಂದು ಗದರುವ, ಅದೇ ಐದು ನಿಮಿಷ ತಡವಾಗಿ ಹೋದಾಗ ಮಗಳು ಹುಡುಗರೊಂದಿಗೆ ಸಹಜವಾಗಿ ಕುಲುಕುಲು ಎನ್ನುತ್ತಾ ನಿಂತಿದ್ದರೂ ಅಮ್ಮನಾದವಳ ಎದೆ ಸುಖಾಸುಮ್ಮನಾದರೂ ಢವಢವಿಸುತ್ತದೆ ಎನ್ನುವುದನ್ನು, ಗದರುವ ಹುಡುಗಿಗೆ, ಅಮ್ಮನ ಅಭದ್ರತೆ ಮತ್ತು ಎರಡು ಸಮಕಾಲೀನ ಸ್ಥಿತಿಯ ಮಧ್ಯದ ಅಂತರವನ್ನು ತೂಗಿಸಬೇಕಾದ ಅತಿದೊಡ್ಡ ಜವಾಬ್ದಾರಿಯ ಹಂತವನ್ನು ಅಮ್ಮ ದಾಟುತ್ತಿzಳೆ ಅದಕ್ಕೆ ಹಾಗಾಡುತ್ತಾಳೆ ಎಂದು ಯಾವ ಕಾಲೇಜಿನ ಕೆಮಿಸ್ಟ್ರಿಯಲ್ಲಿದೆ..?
ಅಮ್ಮನಿಗೂ ಆಕೆಯದೇ ಮುಟ್ಟು ನಿಲ್ಲುವ ಸಮಯದ ನಲ್ವತ್ತರ ಕಿರಿಕಿರಿ, ತನಗೆ ವಯಸ್ಸಾಯಿತೇನೋ ಎನ್ನುವ ಅರಿವಿಗೆ ಬಾರದ ಅಭದ್ರತೆ, ಮಾಡಿಕೊಂಡ ‘ಡೈ’ನ ಸಂದಿನಿಂದಲೂ ಸರಕ್ಕನೆ ಇಣುಕುವ ಬೆಳ್ಳಿ ರೇಖೆ, ಅಸಮರ್ಪಕ ಪಿರಿಯಡ್ಡು, ಸಣ್ಣಗಾಗಲು ಎಷ್ಟೆ ಡಯಟ್ ಮಾಡಿದರೂ
ಜೀನ್ಸ್‌ನಿಂದ ಆಚೆಗಿಣುಕುವ ಲವ್‌ಹ್ಯಾಂಡಲ್ಲು, ಅದ್ಯಾಕೋ ಬಲ ಪಕ್ಕೆಯೊಳಗೆ ಸುಮ್ಮನೆ ಕದಲುವ ಸಣ್ಣ ನೋವು ಆಗೀಗ ತನಗೂ ಸ್ತನ ಕ್ಯಾನ್ಸರಾ ಎಂದು ಚಳ್ಳೆನ್ನಿಸುವ ಸಣ್ಣಗಿನ ಭೀತಿಯ ಅಲೆ ಬೆನ್ನಹುರಿಯಲ್ಲಿ ಆಡುತ್ತಿರುತ್ತದೆ. ಈ ಹಂತದಲ್ಲಿ ಆಕೆಗೆ ಅಮ್ಮನೂ ಇಲ್ಲದೆ, ಜೊತೆ ನಿಲ್ಲುವ ಅಪ್ಪನೂ ಇಲ್ಲದೆ, ಪೂರ್ತಿ ಕುಟುಂಬದ ಜೊತೆಗೆ ಗಂಡನೆಂಬ ಅರೆಬರೆ ಹಲಸಿನಹಣ್ಣು ಕಟ್ಟಿಕೊಂಡು ಏಗಬೇಕಲ್ಲ ಅದಕ್ಕೆ ಬೇಕಾದ ಸಿದ್ಧತೆ ಅಥವಾ ಸಾಂತ್ವನ ಯಾವ ಬಯಾಲಜಿಯ ಅಂಗಾಂಶಗಳಲ್ಲಿ ಸಿಕ್ಕೀತು..?
ಅಪರೂಪಕ್ಕೆ ಗಂಡ ಅಥವಾ ಕತ್ತೆಯಂತೆ ಬೆಳೆದು ಅಂಡಾಗುಂಡಿಯಾಗುತ್ತಲೆ ಕಾಲೂರಿರುವ ಮಗ ಕರಡಿ ಪ್ರೀತಿ ತೋರಿಸುತ್ತಾ, ತಂದು ಕೊಟ್ಟಿರುವ ಮೊಬೈಲಿನಲ್ಲಿ ಅಳುಕುತ್ತಲೇ ಏನೇನಾದರೂ ತೀಡುತ್ತಾ ಹುಡುಕಾಡುವ ಅಮ್ಮ ಕೂತ ಐದೇ ನಿಮಿಷಕ್ಕೆ ಹಾಜರಾಗುವ, ಅಮ್ಮನಿಗಿಂತಲೂ ಮೊದಲೇ ಸ್ಕೈಪು, -ಸ್‌ಬುಕ್ಕು ಎನ್ನುತ್ತಲೇ ಅದಕ್ಕೂ ಮಿಗಿಲಾಗಿ “ನಾವೆ -ಂಡ್ಸ್ ಫ್ರೀ ಆಗೋದೇ ರಾತ್ರಿ ಹತ್ತರ ಮೇಲೆ ಅದಕ್ಕೆ ಗ್ರೂಪ್‌ಚಾಟ್" ಎನ್ನುತ್ತಾ ಬಾಗಿಲಿಕ್ಕಿಕೊಳ್ಳುವ ಮಗಳ ಕೈಯಿಂದ, ಜಾರುತ್ತಿರುವ ಆಕೆಯ ವಯಸ್ಸು, ಮನಸ್ಸು ಮತ್ತು ತನ್ನ ಕೈಯಿಂದ ಜಾರುತ್ತಿರುವ ಆಕೆಯನ್ನು ರಕ್ಷಿಸಿಕೊಳ್ಳಲು ತನ್ನ ಮೊಬೈಲೇ ಬಲಿಕೊಟ್ಟು ಸುಮ್ಮನೆ ಪಿಳಿಪಿಳಿ ಮಾಡುವ ಅಮ್ಮಂದಿರ ಅರಬರೆ ಭಯದ ಅಸಹಾಯಕತೆಗೆ ಅದ್ಯಾವ ಪ್ರೊ-ಸರ್‌ನ ಡಾಕ್ಟರಿಕೆ ಉತ್ತರ ಕೊಟ್ಟೀತು..?
ತೀರ ಹದಿಹರೆಯದ ಮಕ್ಕಳ ಇವತ್ತಿನ ದೂರುಗಳು ಮತ್ತವರ ಅಗತ್ಯತೆಯನ್ನು ಗಮನಿಸುತ್ತಿದ್ದರೆ, ಆವತ್ತಿನ ನನ್ನ ದಿನಗಳಲ್ಲಿ ಜಾರುಗುಂಡಿ ಆಡಿ ಚೆಡ್ಡಿ ಹರಿದುಕೊಂಡು ಅದಕ್ಕೊಂದು ಖಾಕಿ ಬಟ್ಟೆ ತುಂಡು ಪ್ಯಾಚು ಹಚ್ಚಿದರೂ ಬರಕತ್ತಾಗದೆ, ಅಂಡು ಹರಿದ ಚೆಡ್ಡಿಯನ್ನು ಗೆಳೆಯರು ‘..ಹೇಯ್ ಪೋಸ್ಟ್ ಆಫೀಸ್ ಬಾಗ್ಲಾ ತೆಗದದ ನೋಡಲೇ..’ ಎಂದು ಗೇಲಿ ಮಾಡುತ್ತಿzಗ ‘ಹೌದಲೇ..ನೀನು ಕಾರ್ಡ್ ಬರೀತಿ ಅಂತ ಬಾಗ್ಲ ತೆಗೆದೇನಿ..’ ಎಂದು ಅಷ್ಟೆ ವ್ಯವಸ್ಥಿತ ಗೇಲಿಯೊಂದಿಗೆ ಯಾವ ಮುಜುಗರವೂ ಇಲ್ಲದೆ
ಬದುಕಿದ ನನಗೆ, ಇವರಿಗೆಲ್ಲ ಏನು ಬೇಕಾಗಿದೆ ಎನ್ನುವುದೇ ಅರಿವಾಗುತ್ತಿಲ್ಲ ಎನ್ನಿಸಿದರೂ ಒಂದು ನಿಜ.
ಈಗಿನ ಮಕ್ಕಳ, ಕೆಲವು ಹಂತದವರೆಗಿನ ದೊಡ್ಡವರ ಎಲ್ಲರ ಹೊಟ್ಟೆಗಳೂ, ಮನಸ್ಸುಗಳೂ ತುಂಬಿವೆ. ಅದಕ್ಕಾಗಿ ಈಗಿನ ಮನಸ್ಸುಗಳು ಮೃದುವಾದ, ಆಪ್ತ ಆಯಕಟ್ಟಿನ ಮನಸ್ಥಿತಿಗೆ ಸ್ಪಂದಿಸಬೇಕಾದ ಭಾವನೆಗಳಿಗೆ ಪಕ್ಕಾಗುತ್ತಿಲ್ಲ. ಈಗಿನ ಮಕ್ಕಳಲ್ಲಿ ಆ ಮುಗ್ಧತೆಯೂ, ಆ ಆಪ್ತತೆಯೂ ಇಲ್ಲ ಎನ್ನುವುದಕ್ಕಿಂತಲೂ ಬದುಕನ್ನು ತುಂಬ ಚೆಂದವಾಗಿ ಆನಂದಿಸಬೇಕೆಂಬ ತಪನೆಯೇ ಯಾವ ಮಕ್ಕಳಲ್ಲೂ ನನಗೆ ಕಾಣುತ್ತಿಲ್ಲ. ಏನಿದ್ದರೂ ಈಗ ಒಂದು ಕೋಣೆಯಲ್ಲಿ ತಮ್ಮದೇ ಲ್ಯಾಪ್‌ಟಾಪು, ಒಂದು ಮೊಬೈಲು, ನೆಟ್‌ಪ್ಯಾಕು ಆಗೀಗ ಇಣುಕಲು ಒಂದು ಟಿವಿ ಇಷ್ಟಿದ್ದು ಬಿಟ್ಟರೆ ತೀರ ಏಕಾಂಗಿತನ ಈಗಿನ ಮಕ್ಕಳ ನೆಚ್ಚಿನ ಹವ್ಯಾಸ ಎನ್ನುವುದು ಅತೀವ ಆತಂಕಕಾರಿ ಸಂಗತಿ. ಮೇಲಿನ ನನ್ನ ಬಾಲ್ಯದ ಘಟನೆ ಮೊನ್ನೆ ಯಾಕೋ ಆಕಸ್ಮಿಕವಾಗಿ ಮನಸ್ಸಿಗೆ ತಾಗಿತು.
ತೀರ ಕೈಲಾಗದಷ್ಟೂ ಕಷ್ಟವಿಲ್ಲದಿದ್ದರೂ, ತಾವು ಬಡವರು ತಮ್ಮಲ್ಲಿ ಏನೂ ಇಲ್ಲ ಎಂದು ಹೇಳಿಕೊಳ್ಳಲು ಮತ್ತು ಅಕಸ್ಮಾತ್ ಏನೂ ಇಲ್ಲದಿದಾಗ ಏನಾದರೂ ಇವತ್ತಿಗೆ ಕೊಡು ಎಂದು ಕೇಳಿ ತೆಗೆದುಕೊಳ್ಳಲೂ ಕೂಡಾ ಯಾವ ನಾಚಿಕೆ ಕಾಡದಿzಗಲೂ, ಮಹಾರಾಜ ಟೈಲ್ಸ್ ಇಲ್ಲದಿದ್ದರೂ ಕೆಂಪು ನೆಲದ ಮೇಲೆ ಮನಸ್ಸುಗಳು ನೆಮ್ಮದಿಯಿಂದ ನಿದ್ರಿಸುತ್ತಿದ್ದವು ಎನ್ನುವುದನ್ನು ಯಾವ ಕಾಲದ ತಜ್ಞನೂ ಒಪ್ಪಲೇಬೇಕಾದ ಮಾತು.
ಕೇವಲ ನಾಲ್ಕನೆಯ ತರಗತಿ ಓದಿ, ಸಾಲು ಸಾಲು ಹೆಣ್ಣುಮಕ್ಕಳನ್ನು ಇಂತಹ ಯಾವುದೇ ಸಾಮಾಜಿಕ ಅಭದ್ರತೆ, ಸ್ವಂತದ ಇನ್‌ಸೆಕ್ಯೂರಿಟಿ, ಭವಿಷ್ಯತ್ತಿನಲ್ಲಿ ಹರೆಯದ ಹುಡುಗಿಯರ ಕತೆ ಹೆಂಗೊ ಎನ್ನುವ ಅಗೋಚರ ಆಂದೋಳನೆ, ಹೊಟ್ಟೆಗಿಲ್ಲದಿದ್ದರೂ ವಿದ್ಯಾಭ್ಯಾಸ ಮಾತ್ರ ಸರಿಯಾಗಿ ಕಲಿಸಲೆಬೇಕು ಎನ್ನುವ ಬೇಸಿಕ್ ಕಾನ್ಸೆಪ್ಟಿನಲ್ಲಿ ಬೆಳೆಸಿದ, ಓದಿಸಿದ ನಮ್ಮಮ್ಮ, ಹದಿನೈದನೆ ವಯಸ್ಸಿಗೇ ಮದುವೆ ಆಗಿ, ಮನೆಮಠ ಕಟ್ಟಿಕೊಂಡೂ ಕಾಲೂರಿ ನಿಂತಿದ್ದನ್ನು ಕಣ್ಣಾರೆ ಕಂಡಿರುವ ನನಗೆ, ಇಂತಹದ್ಯಾವತ್ತೂ ಆಕೆಯನ್ನು ಕಾಡಿದ್ದು ನೆನಪಿಲ್ಲ. ಆದರೆ ಇಂದು ಆಕೆಯ ಮಗಳಂತಿರುವ ಸಾವಿರಾರು ಅಮ್ಮಂದಿರನ್ನು ಅವರ ಮಕ್ಕಳೇಕೆ ಉದ್ವೇಗಕ್ಕೆ ನೂಕುತ್ತಿzರೆ..? ಇದು ಪ್ರಸ್ತುತ ಅಮ್ಮಂದಿರ ಬದುಕಿನ ದಾರುಣ ದುರಂತ.
ಕಾರಣ ಅವಳು ಎಂದರೆ..
(ಲೇಖಕರು ಕಥೆ-ಕಾದಂಬರಿಕಾರರು)

2 comments: