" ಬದುಕಿದ್ದಾಗ ಬದುಕುವ ಬದುಕೇ ಸಾವಿನ ನಂತರವೂ ಪ್ರತಿಫಲಿಸುತ್ತದೆ "
" ಪರಿಪೂರ್ಣ ವ್ಯಕ್ತಿತ್ವದವರೇ ಬದುಕಿನ ಅಗತ್ಯತೆಗಳಿಗೆ ಸಾಮಾಜಿಕ ಬದ್ಧತೆ ಕಳೆದುಕೊಂಡಾಗ ಜನ ಸಾಮಾನ್ಯನ ನಡವಳಿಕೆಗಳನ್ನು ಹೇಗೆ ಅರ್ಥೈಸಿದರೂ ತಪ್ಪೇ " ( ಮೋದಿ ಪ್ರಧಾನಿಯೆಂದು ಖಚಿತವಾದಾಗ " ದೇಶಕ್ಕೆ ಸಂತಾಪ " ಸೂಚಿಸಿದವರೂ ಇದ್ದಾರೆ.. ಮುಂದೆ ಓದಿ )
ಲೋಕದಲ್ಲಿ ಸಾವು ನಿಶ್ಚಿತ .. ಆದರೆ ತೀರಿದ ನಂತರವೂ ಬರುವ ಅಭಿಪ್ರಾಯಗಳು ಮನುಷ್ಯ ಬದುಕಿದ್ದಾಗ ನಡೆದುಕೊಂಡ ನಡೆಯನ್ನು ಸೂಚಿಸುತ್ತವೆ. ಯಾವ ಮನುಷ್ಯನೂ ಹುಟ್ಟಿನಿಂದ ಸಂತನೂ ಅಲ್ಲ. ಪರಿಪೂಣ೯ನೂ ಅಲ್ಲ. ಆದರೆ ಕಳೆದುಕೊಳ್ಳುತ್ತಿರುವ ನೆಲೆಯನ್ನು ಭದ್ರಪಡಿಸಿಕೊಳ್ಳುವ ಆತುರದಲ್ಲಿ, ಭವಿಷ್ಯತ್ತಿನ ಸಂಪೂರ್ಣ ನೆಲೆಯನ್ನು ಕಳೆದುಕೊಂಡು ಬಿಡುವ ಅಪಾಯವನ್ನು ಅರಿವಿದ್ದೋ, ಇಲ್ಲದೆಯೂ ಮೈಮೇಲೆ ಎಳೆದುಕೊಳ್ಳುವುದಿದೆಯಲ್ಲ ಅದರಿಂದ ಕೊನೆಗೆ, ಬದುಕಿದ್ದಾಗಲಂತೂ ಆಯಿತು ತೀರಿದ ನಂತರವೂ... ಮುಕ್ತಿ ಇರುವುದಿಲ್ಲ.
ಯಾರ ಸಾವು ಸಂಭ್ರಮಿಸುವಂಥಹದ್ದಲ್ಲ. ಹಾಗಂತ ಇನ್ನೊಬ್ಬನ ಗೆಲುವನ್ನು ಅಷ್ಟೇ ಸಮಚಿತ್ತದಿ ತೆಗೆದುಕೊಳ್ಳದಿರುವ ಹೆರಾಪ್ಹೆರಿತನ ಮನುಷ್ಯನ ಬಣ್ಣಗಳನ್ನು ಬಯಲು ಮಾಡುತ್ತದೆ. ( ಹಿರಿಯ ಶಿವರಾಮ ಕಾರಂತರಿಂದ ಹಿಡಿದು ಇತ್ತೀಚಿನ ಸ್ನೇಹಿತ ನಟರಾಜ್ ಕಾನಗೋಡುವರೆಗೂ ಯಾರು ಹೋದಾಗಲೂ ಎಲ್ಲೂ ಯಾರೂ ಸಂಭ್ರಮಾಚರಿಸಿರಲಿಲ್ಲ ಎನ್ನುವುದನ್ನೂ ಗಮನಿಸಬೇಕಾಗುತ್ತದೆ.) ಸಾವಿನ ಸಂಭ್ರಮ ನಾನೂ ವಿರೋಧಿಸುತ್ತೇನೆ.. ಆದರೆ ಪರಿಪೂರ್ಣ ಎನ್ನುವ ವ್ಯಕ್ತಿತ್ವದವರೇ ಬದುಕಿನ ಅಗತ್ಯತೆಗಳಿಗೆ ಸಾಮಾಜಿಕ ಬದ್ಧತೆ ಕಳೆದುಕೊಂಡಾಗ ಜನ ಸಾಮಾನ್ಯನ ನಡವಳಿಕೆಗಳಲ್ಲಿ ಕಂಡು ಬರುವ ನೋವು , ವಿಷಾದ , ಸಂತೋಷ ಎಲ್ಲವೂ ಅವನ ಅಸಹಾಯಕತನದ ನಡವಳಿಕೆಗಳೇ ವಿನಹ ಇನ್ನೇನಲ್ಲ ಅನ್ನಿಸುತ್ತದೆ ನನಗೆ.
ಮೋದಿ ಪ್ರಧಾನಿಯಾಗುವುದು ಖಚಿತವಾದಾಗ " ಪೂರ್ತಿ ದೇಶಕ್ಕೆ " (Rip India) ಸಂತಾಪ ಸೂಚಿಸಿದವರೂ ಇದ್ದಾರೆ " ಈ ನಡವಳಿಕೆಯನ್ನು " ಹೇಗೆ ಅರ್ಥೈಸುವುದು ..? ಅಂದರೆ ಸಾವಿನಲ್ಲಿ ವ್ಯಕ್ತಿಯ ಎಲ್ಲಾ ಸರಿ ತಪ್ಪುಗಳು ಮಾಫಿಯಾಗುತ್ತವೆ ಎಂದಾಗುವುದಾದರೆ ನಾವ್ಯಾಕೆ ಇವತ್ತಿಗೂ ಗಾಂಧಿಜೀಯಿಂದ ಹಿಡಿದು ಸಾವರ್ಕರ್ವರೆಗೂ ಮಾತಾಡುತ್ತೇವೆ ... ? ಚೀನಾದ ಬಾಯಿಗೆ ಭಾರತವನ್ನು ಬಲಿ ನೀಡಿದ ನೆಹರೂವನ್ಯಾಕೆ ಬಿಡುತ್ತಿಲ್ಲ..? ವ್ಯಕ್ತಿ ತೀರ ಸಾಮಾನ್ಯನಂತೆ ಬದುಕಿದ್ದರೂ, ಕೊನೆಗೆ ಅಲ್ಲಲ್ಲಿ ಅಷ್ಟಿಷ್ಟು ಕಂಟಕನಾಗಿದ್ದರೂ ಸಾವಿನ ಹೊತ್ತಿಗೆ ಒಂದಿಷ್ಟು ಕರುಣೆಗೆ ಅರ್ಹನಾಗಿಬಿಡುವುದಿದೆಯಲ್ಲ ಅದು ಮನುಷ್ಯ ತನ್ನ ತಪ್ಪುಗಳ ಹಾದಿಯಲ್ಲಿ ಬದಲಾವಣೆಯ ಸೂಚನೆಯಾಗಿರುತ್ತದೆ. ಆದರೆ ತನ್ನ ಅಗತ್ಯತೆಗಳಿಗೆ ಒಂದು ಕಾಲಮಾನದ ಜನ ಸಾಮಾನ್ಯರ ಭಾವನೆಗಳನ್ನು ಘಾಸಿ ಮಾಡುವ ಮತ್ತು ಆ ಮೂಲಕ ತನ್ನ ಅಗತ್ಯತೆಗಳನ್ನು ಪೂರೈಸಿಕೊಳ್ಳುವ ಧಾವಂತಕ್ಕೆ ಇಳಿದು ಬಿಡುವ ವ್ಯಕ್ತಿತ್ವ ಸಹಜವಾಗೇ ಮಾನವನಲ್ಲಿಯ ಮೃಗೀಯ ಎಚ್ಚರಕ್ಕೆ ಕಾರಣವಾಗುತ್ತಾನೆ...ಅಂಥಹ ಒಂದು ಜೀವಂತ ಉದಾ. ಗೆ ನಾವಿವತ್ತು ಸಾಕ್ಷಿ ಅಷ್ಟೇ. ಹೀಗಿದ್ದಾಗ ಸಾವಿನಾ ನಂತರವೂ ಹೇಗಿರಬೇಕು ಎನ್ನುವುದನ್ನು ಜನರೇ ಪ್ರಾತ್ಯಕ್ಷಿಕರಾಗುವಾಗ ಯಾರಿಗೆ ಸರಿ ತಪ್ಪು ಎನ್ನೋಣ...? ಅಸಲಿಗೆ ಬದುಕಿದ್ದಾಗ ಬದುಕುವ ಬದುಕೇ ಸತ್ತ ನಂತರವೂ ಪ್ರತಿಫಲಿಸುತ್ತದೆ ಎನ್ನುವುದನ್ನು ಎಂಥವನೂ ಒಪ್ಪಲೇ ಬೇಕಲ್ಲವಾ ..? ................... (ಸಂಜೆ...!!!)

No comments:
Post a Comment