ಬದುಕಿನ ನ೦ಬುಗೆ ಕದಲಿಸುವ ಹೆಣ್ಣುಗಳು...
ಯಾವಾಗ ಹಸಿವು ಬಡತನವೆನ್ನುವ ವಾಸ್ತವ ಹೆಬ್ಬಾಗಿಲಿನಿ೦ದ ಒಳಬರುತ್ತದೋ, ಪ್ರೀತಿ, ಪ್ರೇಮ ಎನ್ನುವ ನಳನಳಿಕೆ ಕಿಟಕಿಯಿ೦ದ ಆಚೆ ಹೋಗಿದ್ದು ಗೊತ್ತೇ ಆಗಿರುವುದಿಲ್ಲ. ಅಸಲಿಗೆ ಎ೦ಥದ್ದೇ ಬದುಕು ಹರಳುಗಟ್ಟುವುದೇ ಹೊಟ್ಟೆ ತು೦ಬಿದ ಮೇಲೆ.
ಪ್ರೀತಿಸಿ ಮದುವೆಯಾಗುವುದರಲ್ಲಿ ಆಗುವ ಅನಾಹುತಗಳೇ ಇ೦ತಹವು. ಅದರಲ್ಲೂ ಅನ್ಯಜಾತಿ ಮದುವೆ, ಸಾಮಾಜಿಕ ನ್ಯಾಯ, ಸುಧಾರಣೆ ಎ೦ಬೆಲ್ಲ ವಿಷಯದಲ್ಲಿ ಇ೦ತಹ ಹೆಜ್ಜೆಗಳು ಎಷ್ಟು ಚೆ೦ದವೋ ವಾಸ್ತವದಲ್ಲಿ ಅಷ್ಟೇ ಕsæೂೀರ ಕೂಡ. ಎಲ್ಲವೂ ತೀವ್ರಗಾಮಿ ಧೋರಣೆಯಲ್ಲಿ ಸರಿಹೋಗಿಬಿಟ್ಟರೆ ಅವರ ಹೆಜ್ಜೆ ನಿಜಕ್ಕೂ ಕೇಳುವವರಿಗೂ, ಪ್ರಗತಿಪರರಿಗೂ, ಅವಿವೇಕಿ ಫೆಮಿನಿಸ್ಟುಗಳಿಗೂ ಅದ್ಬುತ ಎನ್ನಿಸುತ್ತದೆ. ಎಲ್ಲೆಡೆ ಚೆ೦ದದ ವರದಿಗಳೇ. ಆದರೆ, ಹೆಚ್ಚಿನ ಕೇಸುಗಳಲ್ಲಿ ವಾಸ್ತವ ಬೇರೆಯದೇ ಇರುತ್ತದೆ. ನಿಜವಾಗಿಯೂ ಅದಕ್ಕೆ ಈಡಾಗಿ ಬದುಕು ಅನುಭವಿಸುತ್ತಿರುವವರಿಗಿ೦ತ ಹೀಗೊ೦ದು ಅ೦ತಧ೯ಮೀ೯ಯ ವಿವಾಹಕ್ಕೀ ಡಾಗಿ ಹೋದ ಕುಟು೦ಬಗಳ ಸದಸ್ಯರು ಸಮಾಜದಲ್ಲಿ ಅನುಭವಿಸುವ ಮಾನಸಿಕ ಒತ್ತಡದ ಚಿತ್ರವೇ ಬೇರೆಯದ್ದು. ಅದರಲ್ಲೂ ಬೆ೦ಗಳೂರು ಕೇ೦ದ್ರೀಕೃತ ಜಗತ್ತು ಬಿಟ್ಟು ವಿವೇಚಿಸುವುದಾದರೆ ಶೇ.85ಕ್ಕೂ ಹೆಚ್ಚು ಈಗಲೂ ಹಳ್ಳಿಗಳೇ ಬದುಕಿಗೆ ಆಧಾರವಾಗಿರೋದು. ಬೆರಳೆಣಿಕೆಯ ಊರುಗಳಷ್ಟೆ ಫೆೀಸ್‍ಬುಕ್ಕಿನ ಪುಟದಲ್ಲಿ ರಾಜ್ಯಭಾರ ಮಾಡುತ್ತಿವೆ ಎನ್ನುವುದು ಕೂಡ ಮಾನದ೦ಡವಾಗಿ ಪರಿಗಣನೆಯಾಗುತ್ತಿದೆ.
ನಾನು ನೋಡಿದ೦ತೆ ಓದು ಮತ್ತು ಕೌಟು೦ಬಿಕವಾಗಿಯೂ ಸಾಕಷ್ಟು ಅನುಕೂಲಕರವಾಗಿದ್ದು ಚೆ೦ದಚೆ೦ದ ಎನ್ನಿಸುವ೦ತೆ ಓಡಾಡಿಕೊ೦ಡಿದ್ದ ಹುಡುಗಿ ಸುವಣ೯, ಹುಡುಗರು ಹಾಕುವ ಕಾಳಿಗೆ ಹು೦ಬತನದಲ್ಲಿ ಬಿದ್ದು ಹೋದಾಳೆ೦ದು ಎಣಿಸದ ಹೊತ್ತಿನಲ್ಲಿ ಆಕಸ್ಮಿಕವಾಗಿ ಮನೆಯವರ ವಿರುದ್ಧ ತಿರುಗಿ ಬಿದ್ದಿದ್ದಳು. ಕಾರಣ ಫೆೀಸ್‍ಬುಕ್ಕಿನಲ್ಲಿ ಪರಿಚಯವಾಗಿ ಅಲ್ಲೆಲ್ಲೊೀ ಬೆ೦ಗಳೂರಿನ ಮೂಲೆಯಲ್ಲಿ ಬಿಸಿನೆಸ್ಸು ಮಾಡುತ್ತಿರುವವನೊಬ್ಬನ ಕಾಳು ಹೆಕ್ಕಿಬಿಟ್ಟಿದ್ದಾಳೆ. ಏನೂ ಗೊತ್ತಿಲ್ಲದೆ ಪಡಪೋಶಿ ಫೆೀಸ್‍ಬುಕ್ಕಿನ ಮುಖ ನ೦ಬಿಕೊ೦ಡು ಅದ್ಯಾವ ಅಪ್ಪ ಹೂ೦.. ಎ೦ದಾನು. ಭಯಾನಕ ವಾಗ್ವಾದಗಳು ನಡೆದಿವೆ. ಸುವಣ೯ಳ ಅಣ್ಣ ಶ೦ಕರ ನನಗೆ ತೀರಾ ವಾರಿಗಿಯ ದೋಸ್ತ. ಮಧ್ಯಸ್ಥಿಕೆ ವಹಿಸಿ ಇಬ್ಬರನ್ನೂ ಸಮಾಧಾನಿಸಿ, ಆಕೆಯ ಸ೦ಗಡ ಬೆ೦ಗಳೂರಿಗೆ ಹೋಗಿ ಅವನನ್ನು ಭೇಟಿಯಾಗಿ ಮದುವೆ ಮಾಡುವ ಯೋಜನೆಗಿಳಿದು ಹೇಗೋ ಹುಡುಗಿಯ ಬದುಕು ಸುರುಳಿತ ಆಗಲಿ ಎ೦ದುಕೊ೦ಡರೆ ಕಾಳು ಹಾಕಿದ್ದ ಹುಡುಗನ ಮನಸ್ಸಿನಲ್ಲಿ ಏನಿತ್ತೋ ಕ್ಯಾತೆ ತೆಗೆಯಬೇಕೆ? ಅದಕ್ಕೆ ಸರಿಯಾಗಿ ಸುವಣ೯ ಅಪ್ಪಟ ಫೆೀಮಿನಿಸ್‍೦ನ ಡೈಲಾಗುಗಳೊ೦ದಿಗೆ, ತೀವ್ರ ಪ್ರಗತಿಪರ ಧೋರಣೆ ತೋರುತ್ತಾ ಕೊನೆಗೆ ಅಪ್ಪ-ಅಮ್ಮ ಸೇರಿದ೦ತೆ ಎಲ್ಲರೊ೦ದಿಗೆ ತನ್ನೆರಡು ದಶಕಗಳ ಸ೦ಬ೦ಧಗಳನ್ನು ಕಡಿದುಕೊ೦ಡಿದ್ದಳು.
ಆಕೆಯನ್ನು ಇನ್ನಿಲ್ಲದ೦ತೆ ಪ್ರೀತಿಸುತ್ತಿದ್ದ ಶ೦ಕರಣ್ಣ ಕೊನೆಕೊನೆಗೆ ಆಕೆಯ ವಿಷಯ ಮಾತಾಡುವುದನ್ನೂ ಬಿಟ್ಟುಬಿಟ್ಟ. ಮದುವೆಯಾದ ಹೊಸ ಹೊಸದರಲ್ಲಿ ಆಕೆ ಎಲ್ಲರ೦ತೆ ಸ೦ಭ್ರಮಿಸಿ ಬದುಕು ಸವಿಸುತ್ತಿದ್ದುದೇನೋ ಸರಿನೇ. ಆದರೆ ಯಾವಾಗ ಆತ ಇಸ್ಲಾ೦ಗೆ ಮತಾ೦ತರಿಸಿದನೋ ಎರಡೂ ಕಡೆಯಲ್ಲಿ ಎದ್ದಿದ್ದ ಗೋಡೆ ಇನ್ನಷ್ಟು ಏರಿತ್ತು. ನಮ್ಮಲ್ಲಿ ಉಳಿದದ್ದು ಏನೇ ಆದರೂ ಜನ ಸುಮ್ಮನಾಗಿ ಬಿಡುತ್ತಾರೆ. ಆದರೆ ಜಾತಿ, ಧಮ೯ ಸಮಸ್ಯೆಗಳಿಗೆ ತಳಕು ಹಾಕಿಕೊ೦ಡರೆ ಅದರಷ್ಟು ಗೋಜಲು ಇನ್ನಾವುದೂ ಇಲ್ಲ. ಹೀಗಿದ್ದಾಗ ಸುವಣ೯ಳ ಅಪ್ಪ, ಶ೦ಕರಣ್ಣ ಇಬ್ಬರೂ ಸಾಮೂಹಿಕವಾಗಿ ಆಕೆಯನ್ನು ತಮ್ಮ ಸಮುದಾಯದಿ೦ದ ಹೊರಹಾಕಿದ್ದೇವೆ೦ದು ಘೋಷಿಸಿ ತಮ್ಮ ಶೇಷ ಬದುಕನ್ನಾದರೂ ಸಮಾಧಾನವಾಗಿ ತ೦ತಮ್ಮ ತೃಪ್ತಿಯ೦ತೆ ಕಳೆಯಲು ಯೋಜಿಸಿದ್ದೇನೋ ಸರಿ. ಹಾಗೆಯೇ ಕೊ೦ಚ ಶಾ೦ತಿಯೂ ನೆಲೆಸಿತ್ತು. ಆದರೆ ಗ೦ಡನ ಮಾತು ಕೇಳಿ ಸುವಣ೯ ಸ್ವತಃ ಅಪ್ಪ-ಅಮ್ಮ-ಅಣ್ಣನ ಮೇಲೆ ದೂರು ದಾಖಲಿಸಿಬಿಟ್ಟಿದ್ದಳು. ತಾನು ಅ೦ತಜಾ೯ತಿ ಮದುವೆ ಆಗಿದ್ದರಿ೦ದ ತನಗೆ ಪ್ರಾಣ ಬೆದರಿಕೆ ಹಾಕಿದ್ದಾರೆ೦ದೂ, ತನಗೆ ಬದುಕು ನಡೆಸಲು ಕಾನೂನಾತ್ಮಕ ರಕ್ಷಣೆ ಬೇಕೆ೦ದು ದಾವೆ ಹೂಡಿ ಎಲ್ಲರನ್ನೂ ಕಟಕಟೆಗೆ ಹತ್ತಿಸಿಬಿಟ್ಟಿದ್ದಳು. ತೀರಾ ಬೇಡದ ಗೋಜಲಿಗೆ ಶ೦ಕರಣ್ಣ ಸಿಗೇ ಬಿದ್ದಿದ್ದ.
ನಾನು ಮತ್ತು ಸ್ನೇಹಿತರಾಗಿದ್ದ ಅ˜ಕಾರಿಯೊಬ್ಬರು ಸತತವಾಗಿ ಎರಡ್ಮೂರು ದಿನ ಸ೦ಧಾನ ನಡೆಸಿ, ಅದನ್ನು ಉದ್ದೇಶಪೂವ೯ಕ ದೂರು ಎ೦ದು ಸುಧಾರಿಸುವ ಹೊತ್ತಿಗೆ ಸಾಕುಸಾಕಾಗಿತ್ತು. ಪ್ರಸ್ತುತದಲ್ಲಿ ಕಾನೂನೂ ಅವರ ಕಡೆಗೇ ಇದೆಯಲ್ಲ. ಅ೦ತೂ ಕೇಸು ನಿಕಾಲಿಯಾಗಿತ್ತು. ಆದರೆ "ತಿನ್ಲಿಲ್ಲ ಉಣ್ಲಿಲ್ಲ... ಬ೦ದು ತಲೀಗ್ ಹೊಡೀತು' ಎನ್ನುವ೦ತೆ ಶ೦ಕರಣ್ಣ ಅನಾವಶ್ಯಕವಾಗಿ ಪೊಲೀಸ್ ದಾಖಲೆಯಲ್ಲಿ ಸೇಪ೯ಡೆಯಾಗಿದ್ದ. ಕುಟು೦ಬದ ಮಯಾ೯ದೆ ಬೀದಿಪಾಲಾಗಿತ್ತು. ಕುಟು೦ಬದ ಮನಸ್ಸುಗಳು ಅದ್ಯಾವ ಪರಿಯಲ್ಲಿ ಘಾಸಿಗೊ೦ಡಿದ್ದವೆ೦ದರೆ ಹೆಣ್ಣು ಹಡೆದದ್ದೇ ತಪ್ಪು ಎ೦ದು ಸಮಾಜಕ್ಕೆ ಸ೦ದೇಶ ರವಾನೆಯಾಗುವ೦ತೆ ವತಿ೯ಸಿಬಿಟ್ಟಿದ್ದಳು ಸುವಣ೯. ಕಾಲ ನಿಲ್ಲುವುದಿಲ್ಲ. ಒ೦ದು ಮಗು ಕೈಗೆ ಬರುವವರೆಗೆ ಸರಿಯಾಗಿದ್ದ ಹುಡುಗ, ಹಾಸಿಗೆ ಹಳೆಯದಾಗುತ್ತಿದ್ದ೦ತೆ ಕುಡಿತ, ಬಡಿತ ಆರ೦ಭವಾಗಿ ಬದುಕು ಎಕ್ಕುಟ್ಟಿ ಹೋಗಿದೆ. ಮದುವೆಯಾದ ಆರನೇ ವಷ೯ಕ್ಕೇ ಆವತ್ತು ಓಡಿ ಹೋಗಿ, ಪೊಲೀಸ್ ಸ್ಟೇಷನ್ನಿನಲ್ಲಿ ತಾರಾಮಾರು ಮಾಡಿದ ಹುಡುಗಿನೇನಾ ಇವಳು ಎನ್ನುವ೦ತಾಗಿದ್ದಳು ಸುವಣ೯. ಅದಾದ ಕೆಲವೇ ದಿನದಲ್ಲಿ ತೀವ್ರ ಕಾಯಿಲೆಗೀಡಾಗಿ ಗ೦ಡ ತೀರಿ ಹೋಗಿದ್ದಾನೆ. ಬದುಕು ಅನಾಮತ್ತಾಗಿ ತಿರುಗಿ ನಿ೦ತಿತ್ತು. ಈಗ ಬದುಕಿಗೇನಾದರೂ ಮಾಡೋಣ ಎ೦ದರೆ, ಓದಿ ಗಟ್ಟಿಯಾಗುವ ಮೊದಲೇ ಮೊಬ್ಯೆಲು ಮತ್ತು ಹುಡುಗನ ಕಾಳಿನ ಗೀಳಿಗೆ ಬಿದ್ದ ಸುವಣ೯ಗೆ ಯಾವ ಡಿಗ್ರಿಯೂ ಇರದಿದ್ದುದರಿ೦ದ ಹೆ೦ಗೋ ಬದುಕಲು ಸಾಕು ಎನ್ನುವ ಕೆಲಸ ಕೂಡ ಸಿಗುತ್ತಿಲ್ಲ. ಮನುಷ್ಯ ಹೇಗೆಲ್ಲ ವತಿ೯ಸುತ್ತಾನೆ ಎನ್ನುವುದಕ್ಕೆ ಬಹುಶಃ ಸುವಣ೯ ಅಪ್ಪಟ ಉದಾಹರಣೆ. ಎಲ್ಲಿ೦ದಾದರೂ ಒ೦ದಿಷ್ಟು ಆಸ್ತೀ ಎ೦ತಾದರೆ ಸಾಕು ಬದುಕು ಸಾಗಿಸಬಹುದೇನೋ ಎ೦ದುಕೊ೦ಡು "ಹೆಣ್ಣುಮಕ್ಕಳಿಗೂ ಅಪ್ಪನ ಆಸ್ತೀಯಲ್ಲಿ ಪಾಲು ಎನ್ನುವ ಕಾಯಿದೆ ಹಿಡಿದು ದಾವೆ ಹಾಕಲಾ' ಎ೦ದು ಸಹಾಯ ಕೇಳಿ ಬ೦ದು ಕೂತಿದ್ದಾಳೆ. ಆದರೆ, ಆಕೆಯ ಅಪ್ಪನದ್ದು ಎಲ್ಲವೂ ಸ್ವಯಾಜಿ೯ತವೇ ಆಗಿದ್ದರಿ೦ದ ಕೋಟು೯ ಹೆಲು³ ಮಾಡುತ್ತಾ? ಎನ್ನುತ್ತಿದ್ದಾಳೆ.
ತೀರಾ ಮನೆ ಬಾಗಿಲಿಗೆ ಬರುವವರು ಎ೦ಥ ದುರುಳರೇ ಆದರೂ ಆ ಕ್ಷಣಕ್ಕೇ ಅಲ್ಲಿ೦ದಲೇ ಹೊರದಬುºವ ಮನಸ್ಥಿತಿ ನನ್ನದಲ್ಲ. ಇತಿಹಾಸ ಗೊತ್ತಿದರೂ ಮನುಷ್ಯನಿಗೆ ಬದಲಾಗಲು ಒ೦ದು ಅವಕಾಶ ಬೇಕೆ ಇರುತ್ತದೆ ಎನ್ನುವುದನ್ನು ನಾನು ಇವತ್ತಿಗೂ ನ೦ಬುತ್ತೇನೆ. ಹೇಗೋ ಏನೋ ಬದುಕು ನಡೆಸಲು ಸಹಾಯ ಕೇಳುವುದು ಬೇರೆ, ನೌಕರಿಗೆ ಶಿಫಾ ರಸು ಮಾಡಿ ಎನ್ನುವುದು ಬೇರೆ. ಆದರೆ ಕೆಲಸವಾಗುತ್ತಿದ್ದ೦ತೆ "ನನ್ನ ಬದುಕು ಇಷ್ಟು ಬೇಗ ಅರಳೀತು ಎ೦ದುಕೊ೦ಡಿರಲಿಲ್ಲ' ಎನ್ನುವ ತಮಾಷೆಗಳನ್ನು ಗಮನಿಸುತ್ತಲೇ ದಾರಿ ಸವೆಸುವ ನನಗೆ ಸುವಣ೯ನ ಕೇಸು ಅಚ್ಚರಿಯೇನೂ ಮೂಡಿಸಲಿಲ್ಲ. ಕಾರಣ, ಬದಲಾದ ತಲಾ೦ತರದಲ್ಲಿ ಹೆಣ್ಣು ಬದಲಾಗಿದ್ದು ಪ್ರತಿಯೊಬ್ಬರನ್ನು ಘಾಸಿಮಾಡುತ್ತಿದೆ. ಆದರೆ, ಸುವಣ೯ "ಅಪ್ಪ ಅಮ್ಮನ ಮೇಲೆ ಆಸ್ತೀಗಾಗಿ ಕೇಸು ಹಾಕಲಾ' ಎನ್ನುವಲ್ಲಿಗೆ ಬ೦ದು ನಿ೦ತಿದ್ದು ಆಘಾತಕಾರಿ. ಬೇಡದ ರಗಳೆ ಮಾಡಿಕೊ೦ಡು, ಹಿ೦ದೊಮ್ಮೆ ಅನವಶ್ಯಕ ದೆ್ವೀಷ ಸಾ˜ಸಿದವಳು ಈಗ ಮತ್ತೆ ಅಪ್ಪನ ಆಸ್ತೀಯಲ್ಲಿ ಪಾಲು ಕೇಳಲು ದಾವೆ ಹಾಕುವ ಹ೦ತಕ್ಕೆ ನಿ೦ತಿರುವ ಹುಡುಗಿಯೊ೦ದಿಗೆ ಯಾವ ಮಾತೂ ಆಡಲು ಮನಸ್ಸು ಒಲ್ಲೇ ಎ೦ದಿತ್ತು. "
"ನೋಡಮ್ಮ ನೀನು ಯಾವ ರೀತಿಯಲ್ಲೂ ಆಸ್ತೀ ಅಥವಾ ರಕ್ಷಣೆ ಕೇಳಲು ಅಹ೯ಳಾಗಿ ಉಳಿದಿಲ್ಲ. ಅಕಸ್ಮಾತ್ ಕೇಳಿದರೂ ಅಪ್ಪ ಮತ್ತು ಶ೦ಕರಣ್ಣ ನಿನ್ನನ್ನು ಕ್ಷಮಿಸಿ ಪಾಸಿಟಿವ್ ಆಗಿ ರಿಯಾಕ್ಟ್ ಮಾಡ್ತಾರೆ ಅ೦ತ ನನಗನ್ನಿಸುತ್ತಿಲ್ಲ. ಕಾರಣ ಸರಿಯಾಗಿ ನೆತ್ತಿ ಮಾಸು ಹಾರುವ ಮೊದಲೇ ಅವರ ಬದುಕಿನ ಬಣ್ಣಗಳನ್ನು ಕದಡಿದೋಳು ನೀನು. ಅದರಲ್ಲೂ ಶ೦ಕರಣ್ಣ ಒರಟನಾದರೂ ಅತ್ತಿಗೆನಾ ಮಯಾ೯ದೆಯಿ೦ದಲೂ, ಅದಕ್ಕೂ ಮಿಗಿಲಾದ ಪ್ರೀತಿಯಿ೦ದಲೂ ಹೆಣ್ಣಿಗೆ ಕೊಡುವ ಗೌರವದ ಪರಿಚಯ ಮಾಡಿಸುತ್ತಾ ಬದುಕಿದ್ದಕ್ಕೆ ನಾನೇ ಸಾಕ್ಷಿ. ಕನಸಲ್ಲೂ ಊಹಿಸಲಾಗದ೦ತೆ ಅದ್ಯಾವನೋ ಹಾಕಿದ ಕಾಳಿಗೆ ಬಿದ್ದು ನೀನು, ಅವರಿಬ್ಬರನ್ನು ಪೊಲೀಸ್ ಸ್ಟೇಷನ್ ಹತ್ತಿಸಿದ ದಿವಸವೇ ಅವರ ಪಾಲಿಗೆ ಮುಗಿದು ಹೋಗಿದ್ದಿ. ಅವನಾಗಿದ್ದಕ್ಕೆ ಅಣ್ಣ ಅನ್ನೋ ಕಕ್ಕುಲಾತಿಯಿ೦ದ ಸುಮ್ಮನೆ ಉಳಿದಿರಬೇಕು. ನಾನಾಗಿದ್ದರೆ.. ಬೇಡ ಬಿಡು. ಹೋಗುವಾಗ ಕಾಫಿ ಕುಡಿದು ಹೋಗು'' ಎ೦ದು ಎದ್ದುಹೋಗಿದ್ದೆ.
ಮನಸ್ಸು ಯಾಕೋ ಕಸಿವಿಸಿ. ಹುಡುಗಿ ನೊ೦ದಿದ್ದಾಳೆ ತಪ್ಪಿನರಿವಾಗಿದೆ ಒ೦ದಿಷ್ಟು ಸಹಾಯಕ್ಕಾಗಿ ಶ೦ಕ್ರಣ್ಣ ಮತ್ತು ಅಪ್ಪಯ್ಯನ ಹತ್ತಿರ ನಾನು ಮಧ್ಯಸ್ಥಿಕೆ ವಹಿಸಲೂಬಹುದಿತ್ತು. ಆದರೆ, ಬರುವ ಮುನ್ನವೇ "ನಾನು ಕೋಟಿ೯ಗೆ ಹೋಗಿ ಆಸ್ತೀ ಕೇಳಬೇಕು' ಎ೦ದು ಲೆಕ್ಕಿಸಿಕೊ೦ಡಿರುವ ತೇವರಿದೆಯಲ್ಲ. ಅದು ನನ್ನನ್ನು ಯಾವತ್ತೂ ಪಾಪ ಎನ್ನಿಸಿಕೊಡಲಿಲ್ಲ. ಆವತ್ತು ಶ೦ಕರಣ್ಣ ಆಕೆಗೆ ಮೊಬ್ಯೆಲು ತೆಕ್ಕೊಟ್ಟು ತಪ್ಪು ಮಾಡಿದ್ದನೋ ಇಲ್ಲವೋ ಗೊತ್ತಿಲ್ಲ. ಆದರೆ ಮತ್ತೊಮ್ಮೆ ಅವನ ಕಾಲಿಗೆ ಬೀಳಿಸಿ, ಇನ್ನೇನಾದರೂ ಆಗಬಹುದಾದ ಅನಾಹುತಕ್ಕೆ ಕಾರಣನಾಗಲು ನಾನು ಅಜಿಬಾತ್ ತಯಾರಿರಲಿಲ್ಲ. ಕಾರಣ ಇ೦ತಹ ಹೆಣ್ಣುಮಕ್ಕಳು ಸುಧಾರಿಸಿಯಾರೆ೦ಬ ಭರವಸೆ ಅಪೂಟು ಸೋರಿಹೋಗಿತ್ತು. ಅಷ್ಟಕ್ಕೂ ಶ೦ಕ್ರಣ್ಣ ಮತ್ತು ಅಪ್ಪಯ್ಯ ಬದುಕಿದ್ದರಾದರೂ ಎಲ್ಲಿ? ಸುಮ್ಮನೆ ದೇಹವನ್ನು ನಡೆಸುತ್ತಿದ್ದಾರೆ. ಅವು ಉಸಿರೆಳೆದುಕೊ೦ಡು ಬದುಕುತ್ತಿವೆ. ಮನಸ್ಸುಗಳು ಯಾವತ್ತೋ ಸತ್ತು ಹೋಗಿವೆಯಲ್ಲ ಇನ್ನೇನಾಗುತ್ತದೆ. ಯಾವ ಅಪ್ಪ ಅಮ್ಮ೦ದಿರು ಮಗಳು ಎನ್ನುವ ಸದರ ಕೊಡಬಾರದಾ? ಅಮ್ಮ ಜೀವಚ್ಛವವಾಗಿ ಆರು ವಷ೯ ಕಳೆದಿವೆ. ಕಾರಣ ಅವಳು ಎ೦ದರೆ...
(ಲೇಖಕರು ಕಥೆ-ಕಾದ೦ಬರಿಕಾರರು)
No comments:
Post a Comment