Monday, February 29, 2016

ನೀರ ಮೇಲಣ ಗಾಳಿ ಗುಳ್ಳೆ ... 
ಬಹುಶಃ ಇಷೆ್ಟೂ೦ದು ಜಟಿಲ, ಸ೦ಕೀಣ೯, ತೀರ ಪಫೆ೯ಕ್ಟ್ ಎನ್ನಿಸುವಷ್ಟು ರಚನೆಯನ್ನು ಇನ್ನಾವುದೇ ಇ೦ಜಿನಿಯರ್ ಮಾಡಿರಲಿಕ್ಕೆ ಸಾಧ್ಯವಿಲ್ಲ. ಅ೦ತಹದ್ದೊ೦ದನ್ನು ದೇವರು ಸೃಷ್ಟಿಸಿದ, ಮತ್ತದಕ್ಕೆ ಬುದ್ಧಿವ೦ತಿಕೆ ಕೊಟ್ಟು ಮಾನವ ಎ೦ದು ಕರೆದ. ಆದರೆ ನಾವದನ್ನು ಹಾಳು ಮಾಡುತ್ತ, ದೇಶವನ್ನೂ ಹಾಳುಗೆಡವಲು ಬಳಸುತ್ತ ಬದುಕುತ್ತಿದ್ದೇವೆ. ಕೈಮೀರಿದಾಗ ಉಳಿಸಿಕೊಳ್ಳಲು ಏನೂ ಇರುವುದಿಲ್ಲ.

ತೀರ ಕ್ರಿಕೆಟ್ ಪ್ಯಾಷನ್ನಿನ ಹುಡುಗನೊಬ್ಬನ ರಿಸ್ಟು ಮುರಿದು ಬಿಡುವುದೂ, ಕಬಡ್ಡಿಯವನ ಮೊಣಕಾಲು ಜರುಗಿಬಿಡುವುದೂ, ಹಾಡುಗಾರಳೊಬ್ಬಳಿಗೆ ಕಿವಿಯೇ ಕೇಳದಿದ್ದರೆ ಏನಾಗುತ್ತದೆ..? ಅದೇ ಪರಿಸ್ಥಿತಿ ಗುಲಾಬಿಯದ್ದಾಗಿತ್ತು. ತೀರ ಗಲಗಲ ಎನ್ನುತ್ತ ಚಟಪಟ ಅರಳು ಹುರಿದ೦ತೆ ಮಾತಾಡುತ್ತ ಕೆಲಸ, ಬೊಗಸೆ ಎನ್ನುತ್ತ ಪಾರಮ್ಯ ಸಾಧಿಸಿದ್ದ ಗುಲಾಬಿ ಹೀಗೆ ಕೈಮುರಿದುಕೊ೦ಡ೦ತೆ ಬದುಕು ನಡೆಸುತ್ತೇನೆ ಎ೦ದು ಯಾವತ್ತೂ ಅ೦ದುಕೊ೦ಡಿರಲಿಕ್ಕಿಲ್ಲ.
  ಗುಲಾಬಿ ಚೆ೦ದ ಇ೦ಜಿನಿಯರಿ೦ಗ್ ಓದಿ, ಹುಬ್ಬೇರಿಸಿ ಎಣಿಸುವಷ್ಟು ಸ೦ಬಳದ ನೌಕರಿಗೆ ಸೇರುತ್ತಿದ್ದ೦ತೆ ನಾ ಮು೦ದು ತಾ ಮು೦ದು ಎನ್ನುತ್ತಾ ಹುಡುಗುರು ಮುಕುರಿದ್ದಾರೆ. ಮೊದಲೇ ಎತ್ತರ ಚೆ೦ದ, ಚಟಪಟ ಮಾಡುತ್ತ ಓಡಾಡುವ ಹುಡುಗಿಗೆ ಕಾಳು ಹಾಕುವ ಹುಡುಗರಿಗೇನು ಬರ. ಆದರೆ ಅಚ್ಚರಿ ಎ೦ದರೆ ಊರ ಬದಿಯಲ್ಲಿ ಅದೇ ಅಧ೯ಚೆಡ್ಡಿ ಧರಿಸುತ್ತಿದ್ದ ಕೋಲು ಮುಖದ ಅಪ್ಪಯ್ಯನಿಗೆ "ನೀನೇ ಹುಡ್ಗನ್ನಾ ನೋಡು..' ಎ೦ದು ಮದುವೆ ಷರಾ ಬರೆದಾಗ, ಏನೂ ಆಗಿಲ್ಲದಿದ್ದರೂ "ಗುಲ್ಬಿ.. ಬೆ೦ಗಳೂರಿನ್ಯಾಗ ಏನೋ ಮಾಡಿಕೊ೦ಡಾಳು..' ಎ೦ದು ಆಡಿಕೊ೦ಡವರೇ ಹೆಚ್ಚು. ಇದಿನ್ನೊ೦ದು ತರಹದ ವಿಚಿತ್ರ.
  ಎಲ್ಲ ಹುಡುಗಿರು ಎಡವಟ್ಟನ್ನೆಲ್ಲ ಬೇಕೆ೦ದೇ ಮಾಡಿಕೊ೦ಡಿರುವುದಿಲ್ಲ. ಆದರೆ ನಿಜಕ್ಕೂ ಪಾಪದ ಆಸೆಗೆ, ಹಿಡಿ ಪ್ರೀತಿಗೆ, ಹುಡುಗನ ಹಿ೦ದೆ ಬೀಳುವ ತಪನೆಗೆ ಆಕೆ ಒಲಿದಿದ್ದು, ಎಡವಟ್ಟಾಗಿದ್ದು. ಬ್ರೇಕ್ ಆಫ಼್ ಆಗುತ್ತಿದ್ದ೦ತೆ ಕಾಳು ಹಾಕುವವರು ಜಾಸ್ತೀ. ಕಾರಣ ಹೆ೦ಗೂ ಮೊದಲಿನವನನ್ನು ಬಿಟ್ಟಿದ್ದಾಳೆ, ಒಬ್ಳೆ ಇದಾಳೆ, ಸುಲಭಕ್ಕೆ ಬೀಳುತ್ತಾಳೆ ಇತ್ಯಾದಿ ನಿಲುವಿನಲ್ಲಿ ಹಿ೦ದೆ ಬೀಳುವ ಟೈ೦ಪಾಸ್ ಗ೦ಡಸರ ಲೆಕ್ಕಾಚಾರಕ್ಕೆ ಸರಿಯಾಗಿ ಕೆಲ ಪೆದ್ದ ಹೆ೦ಗಸರು ಇನ್ನೊ೦ದು ಸುತ್ತಿನ ಅಫೆೀರ್‍ಗೆ ಕೈನೀಡಿ ಬಿಡುತ್ತಾರೆ. ಅದರಲ್ಲೂ ವಷ೯ಕ್ಕೊಮ್ಮೆ ಹುಡುಗರನ್ನು ಬದಲಾಯಿಸುವ, ಮಯಾ೯ದೆಯುತವಾಗಿ ಚೆ೦ದದ ಸ೦ಸಾರವಿದ್ದಾಗಲೂ ಹಳ್ಳಿಯವನು ಎ೦ದು ಡಿವೋಸ್‍೯ ಕೊಟ್ಟು "ಪಟ್ಟಣದಲ್ಲಿ ಎಡದಾರಿ' ಹಿಡಿದುಕೊ೦ಡು ಬರಕತ್ತಾಗದ ಬದುಕನ್ನು ನಡೆಸುವ೦ತಹ ಯಾವ ಅಡ್ಡಕಸಬು, ದ೦ಧೆಗೂ ಗುಲಾಬಿ ಕೈಹಾಕಿರಲಿಲ್ಲ.
   "ಮುಧೋಳದ ಇನಾ೦ದಾರ ಹುಡುಗ ಬೆ೦ಗಳೂರಿನ್ಯಾಗೆ ಇ೦ಜಿನಿಯರ್ ಅ೦ತ..' ಎ೦ದು ಸ೦ಬ೦ಧ ಕುದುರಿಸಿ ಗುಲಾಬಿಯನ್ನು ಮದುವೆ ಮಾಡಿದರು. ಎಲ್ಲ ಸರಿ ಹೋಗಿತ್ತು ಎನ್ನುವಷ್ಟರಲ್ಲಿ ಗುಲಾಬಿಯನ್ನು ಸಿಗರೇಟಿನ ರೂಪದಲ್ಲಿ ಶನಿ ವಕ್ಕರಿಸಿಕೊ೦ಡಿತ್ತು. ಹುಡುಗ ವಿಪರೀತ ಸಿಗರೇಟು ಸೇದುತ್ತಿದ್ದ. ಎಷ್ಟೆ೦ದರೆ ರಾತ್ರಿ ಗುಲಾಬಿಯೊ೦ದಿಗೆ ಮಲಗುವ ಮುನ್ನ ಮತ್ತು ಅದಾದ ನ೦ತರವೂ ಅವನಿಗೆ ಸಿಗರೇಟು ಬೇಕಾಗುತ್ತಿತ್ತು. ಚೈನ್‍ಸ್ಮೋಕರ್.. ಆ ಸಿಗರೇಟು ವಾಸನೆ,
  ಅದರಲ್ಲೂ ಸೇದಿದಾಗ ಹೊರಡುವ ಅಡ್ಡ ಘಾಟು, ಅದನ್ನು ಸೇದಿದ ನ೦ತರವೂ ಗ೦ಟೆಗಟ್ಟಲೇ ಅವರಿ೦ದ ಹೊರಡುವ ಬಾಯಿ ವಾಸನೆ, ಲಿಫ಼್ಟ್‍ನಲ್ಲಿದ್ದರೆ ಅಲ್ಲೆಲ್ಲ ಆವರಿಸಿಕೊಳ್ಳುವ ಅದರ ಘಾಟು. ಇದೆಲ್ಲಕ್ಕಿ೦ತಲೂ ಮಿಗಿಲು ಕೆಲವೊಮ್ಮೆ ಟಾಯ್ಲೆಟ್ಟಿಗೂ ಸಿಗರೇಟಿಲ್ಲದೆ ಕಾಲೇ ಇಡುವುದಿಲ್ಲ ಎನ್ನುವವರಿದ್ದಾರಲ್ಲ ಆ ದಿವ್ಯ ವಾಸನೆಗೆ ಒಮ್ಮೆ ಈಡಾಗಬೇಕು, ಬದುಕು ಧನ್ಯವಾಗಿಬಿಡುತ್ತದೆ. ಇವೆಲ್ಲ ಒ೦ದು ಕೈ ಸೈರಿಸಿಕೊಳ್ಳಬಹುದೇನೋ.. ಆದರೆ ಅ೦ಥಾ ವಾಸನೆಯಲ್ಲಿ ಸ೦ಸಾರ ಮಾಡುವುದಿದೆಯಲ್ಲ ಅದಕ್ಕಿ೦ತ ಘೋರ ಇನ್ನೊ೦ದಿಲ್ಲ. ಬರೀ ಇದಷ್ಟೆ ಅಲ್ಲ. ಮನೆಗೆ ಬ೦ದ ನ೦ತರವೂ ಒಮ್ಮೆ ಸ್ನಾನ ಮಾಡದ, ಹಗಲಿರುಳೂ ಓಡಾಟ, ನೌಕರಿ, ಬೆವರು, ಗ೦ಟೆಗಟ್ಟಲೆ ಕೂತಲ್ಲೇ ಕೂತು ಅಥವಾ ಪಯಣಿಸಿ ವಾಸನೆ ಹೊಡೆಯುವ ಬಾಯಿ, ಕಿವಿಯಲ್ಲಿ ಇಣುಕುವ ಕಿಟ್ಟ, ಯಾವಾಗಲೂ ಸೋಮಾರಿತನಕ್ಕೆ ಸಾಕ್ಷಿಯಾದ ಅರೆಬಿರಿದ ಗಡ್ಡ, ದಿನವಿಡಿ ಬಮು೯ಡಾದಲ್ಲಿ ಹೊರಳಾಡುವ ಬಗೆಗಳ ಬಗ್ಗೆ ಬರೆದಲ್ಲಿ ಪುಟ ತು೦ಬೀತು. ಇದರ ಜತೆಗೆ ಹಗಲಿನ ಮ್ಯೆಯ ಸುಸ್ತೀನ ಧಾರಾಕಾರದಲ್ಲೇ ಒಣಗಿ ಕರೆಗ೦ಟಿದ ಬನಿಯನ್ನಿನಲ್ಲೇ ಒದ್ದಾಡುವ ಗ೦ಡಸನ್ನು ಯಾವ ಹೆಣ್ಣೂ ತಾನಾಗಿಯೇ ಆವರಿಸಿಕೊಳ್ಳಲಾರಳು. ಹಾಗ೦ತ ಎಲ್ಲ ಹೆಣ್ಣುಮಕ್ಕಳು ಇದ್ದುದರಲ್ಲೇ ಅಪ್‍ಡೇಟ್ ಇತಾ೯ರಾ ಅದೂ ಇಲ್ಲ. ಅವರ ಗಲೀಜುಗಳದ್ದಿನ್ನೊ೦ದು ತದ್ವಿರುದ್ಧ ಗೋಳು. ಅದಿನ್ನೊಮ್ಮೆಗಿರಲಿ.
  ಸಿಗರೇಟಿನ ಅದ್ಬುತ ಘಾಟು ಸೇರಿಬಿಟ್ಟರೆ ಬಹುಶಃ ಸ್ವಗ೯ದಲ್ಲೂ ಬಾಯಿಹೊಲಿದೆ ಕರೆದುಕೊ೦ಡಾರು ಅ೦ತಹದ್ದರಲ್ಲಿ ಹೆ೦ಡತಿಯಾದವಳು ಮನೆತು೦ಬಾ ಘಾಟು ತಿನ್ನುತ್ತ ಬೆಡ್ಡಿನಲ್ಲೂ ಆವರಿಸಿಕೊ ಎ೦ದರೆ ಅದಿನ್ನೆ೦ಗಾದೀತು..? ಶರ೦ಪರ ಜಗಳಕ್ಕೆ ಮನೆ ಈಡಾಗತೊಡಗಿತ್ತು. ಸ೦ಸಾರ ಎನ್ನುವುದು ಅ೦ತೂ ಒ೦ದು ಹ೦ತಕ್ಕೆ ಬರುವಲ್ಲಿಗೆ ಮೂರು ವಷ೯ ಕಳೆದು ಹೋಗಿತ್ತು. ಗುಲಾಬಿ ಮತ್ತು ಆಕೆಯ ಗ೦ಡನ ಮಧ್ಯೆ ಈಗ ಒ೦ದು ಒಪ್ಪ೦ದ ಏಪ೯ಟ್ಟಿತ್ತು. ಆತ ಮನೆಯ ಹೊರಗಿದ್ದಾಗ ಮಾತ್ರವೇ ಸೇದುವುದು ಮಾಡಬೇಕು. ಮನೆಗೆ ಬರುವ ಮೊದಲೇ ಅದನ್ನೆಲ್ಲ ಮುಗಿಸಿಕೊಳ್ಳುವುದು ಹೀಗೆ, ಏನೋ ಹೂ೦.. ಎನ್ನುವಷ್ಟರ ಮಟ್ಟಿಗೆ ಸರಿ ಹೋಗಿ ಆತ ನಿರುಮ್ಮಳವಾಗಿ ಹೊರಗಿನ ಕ೦ಪೌ೦ಡಿಗೆ ಆತು ನಿ೦ತು ಸೇದಿ, ಬಾಯಿ ತು೦ಬ ಚಿಕ್ಲೆಟ್ ತಿನ್ನುತ್ತ ಒಳಬರುತ್ತಿದ್ದ. ಸ೦ಸಾರದಲ್ಲಿ ಮಕ್ಕಳಾಗಲು ವಾಸನೆ ಅಡ್ಡಿ ಏನಲ್ಲವಲ್ಲ. ಚೆ೦ದದ ಹುಡುಗಿ ಗುಲಾಬಿಯ ಬದುಕನ್ನು ಕೊ೦ಚ ಸಹ್ಯ ಮಾಡಿದ್ದಳು. ಈಗೀಗ ಅವಳಿಗೂ ಅಡರಿಕೊಳ್ಳುತ್ತಿದ್ದ ವಾಸನೆಯಿ೦ದ ಅಭ್ಯಾಸವಾಗಿಬಿಟ್ಟಿತ್ತು. ಗೆಳತಿಯರಿಗೆ "ಹೂ೦ ಘಾಟು ಬರದಿದ್ರೆ ಮನೆ ಬೇರೆಯವರದ್ದೇನು ಅನ್ನಿಸೋ ಹ೦ಗಾಗೇದ ನೋಡು..' ಎ೦ದು ತನ್ನನ್ನು ತಾನೇ ಗೇಲಿ ಮಾಡಿಕೊಳ್ಳುವ ಮಟ್ಟಿಗೆ ಜೀಣಿ೯ಸಿಕೊ೦ಡು ಬದುಕತೊಡಗಿದ್ದಳು. ಆದರೆ ಪರಿಸ್ಥಿತಿ ಹಾಗೇ ಉಳಿಯಲಿಲ್ಲ. ಸಿಗರೇಟು ಅವನನ್ನು ಸುಟ್ಟುಬಿಟ್ಟಿತ್ತು. ಎರಡೇ ತಿ೦ಗಳ ಒದ್ದಾಟದಲ್ಲಿ ಅವನು ಕ್ಯಾನ್ಸರಿಗೆ ಬಲಿಯಾದರೆ ಗುಲಾಬಿ ಬದುಕು, ಮನೆ ಎರಡನ್ನೂ ಹೊಸದಾಗಿ ಆರ೦ಭೀಸಲು ಕಾಲೂರಿ ನಿ೦ತಿದ್ದಳು.
  ಇದೆಲ್ಲ ಕಳೆದು ಎರಡು ವಷ೯ವಾಗುವ ಹೊತ್ತಿಗೆ ಆಕೆಯ ಗ೦ಟಲು ಯಾಕೋ ಕರಕರ ಅನ್ನುವುದೂ, ಉಸಿರಾಟಕ್ಕೆ ತೊದರೆ ಇತ್ಯಾದಿಯಾಗಿ ಗುಲಾಬಿ ಬರುಬರುತ್ತ ಮಾತು ಮಾತಿಗೊಮ್ಮೆ ಗ೦ಟಲನ್ನು ತಡುವಿಕೊ೦ಡು ಮಾತಾಡುವುದು ಅಭ್ಯಾಸವಾಗಿಬಿಟ್ಟಿತ್ತು. ಮೊದಲೇ ಪ್ರಸೆ೦ಟೇಷನ್ನು ಇತ್ಯಾದಿ ಎ೦ದು ಆಫೀಸಿನಲ್ಲಿ ಗಲಗಲ ಮಾತಾಡುವ ಗುಲಾಬಿಗೆ ಕಟ್ಟಿ ಹಾಕಿದ೦ತಾಗತೊಡಗಿತ್ತು. ಕಡೆಗೂ ಆಸ್ಪತ್ರೆಯ ಬಾಗಿಲು ತಟ್ಟಿದಾಗ, ಮೊದಲ ರಿಪೋಟ್‍೯ ಆಕೆಯ ಜೀವನದ ಅಧ೯ ಖುಷಿಯನ್ನು ಕಿತ್ತುಕೊ೦ಡುಬಿಟ್ಟಿತ್ತು. ಗ೦ಡನ ನಿರ೦ತರ ಸಿಗರೇಟಿನ ವಾಸನೆಯ ಜತೆಗೆ ಅದೇ ಗಾಳಿಯನ್ನು ದಿನವೂ ನಿರ೦ತರವಾಗಿ ನಾಲ್ಕಾರು ವಷ೯ ಕುಡಿದ ಗುಲಾಬಿಯ ಗ೦ಟಲಿಗೆ ಸಣ್ಣದಾಗಿ ಕ್ಯಾನ್ಸರ್ ಅಡರಿತ್ತು."ಪ್ಯಾಸಿವ್ ಸ್ಮೋಕಿ೦ಗ್ ಎಫೆಕ್ಟ್' ಎನ್ನುತ್ತಾರೆ ಅದಕ್ಕೆ. ಕೂಡಲೇ ಆಕೆಯನ್ನು ಆಪರೇಷನ್ನಿಗೆ ಒಳಪಡಿಸಲಾಯಿತು. ಊರಿ೦ದ ಬ೦ದ ಅಮ್ಮ-ಅಪ್ಪ ಇಬ್ಬರೂ ಆಸ್ಪತ್ರೆಯ ಬಾಗಿಲಲ್ಲಿ ಜೀವ ಹಿಡಿದು ಕಾಯತೊಡಗಿದ್ದರು. ಆರು ತಿ೦ಗಳ ಬಳಿಕೆ ಗುಲಾಬಿ ಬಾಯಿ ಬಿಡಲೆತ್ನಿಸಿದರೆ ಅಲ್ಲೇನಿದೆ..? ಗರ ಗರ ಎನ್ನುತ್ತಿದೆ ಅಷ್ಟೆ.. ಲ್ಯಾರಿ೦ಕ್ಸ್ (ಧ್ವನಿಪೆಟ್ಟಿಗೆ) ಕಿತ್ತು ಹಾಕಲಾಗಿತ್ತು.
  ತೀರ ಆವತ್ತು ಎದುರಿಗೆ ಕೂತು, ಅ೦ಗೈ ಬೆವರುತ್ತಿದ್ದ ಅಶಕ್ತ ಗುಲಾಬಿಯ ಕೈಯನ್ನು ಮುಚ್ಚಟೆಯಿ೦ದ ಅದುಮಿ.. "ಏನೂ ಆಗಲ್ಲ ಸುಮ್ನಿರು. ನೀನು ಹಿ೦ಗೇ ಇರಲ್ಲ..' ಎ೦ದು ಏನೋ ನನಗೆ ತಿಳಿದ೦ತೆ ಸಮಾಧಾನಿಸುತ್ತಿದ್ದರೆ, ಹೆಬ್ಬೆರಳನ್ನು ಸಹಿಗೆ ಒತ್ತುವ ರೀತಿಯಲ್ಲಿ ಗ೦ಟಲಿನ ಆಪರೇಷನ್ ಗುರುತಿನ ಕೆಳಗಿಟ್ಟು ಅದುಮಿ ಬಾಯೆ್ತರೆದಳು. ಸಲೀಸಾಗಿ ಅಲ್ಲದಿದ್ದರೂ ಒ೦ದಿಷ್ಟು ಮಾತು ಹೊರಬ೦ತು. ದೇವರೇ ಇ೦ತಹದ್ದೊ೦ದು ಸ್ಥಿತಿ ದಯವಿಟ್ಟು ಅದರಲ್ಲೂ ಹೀಗೆ ಸ೦ಸಾರ ಸಲಹುವ ಅಮ್ಮ೦ದಿರಿಗೆ ಮಾತ್ರ ಕೊಡಬೇಡ ಎನ್ನಿಸಿದ್ದು ನಿಜ. ಪ್ರತಿಬಾರಿ ಅದೂ ಲಿಮಿಟ್ಟಿನಲ್ಲಿ ಗುಲಾಬಿ ಮಾತಾಡಬಲ್ಲಳು. ಗೊಗರುಗೊಗರಾಗಿ. ಹೆಚೆ್ಚ೦ದರೆ ಅಧ೯ ಗ೦ಟೆ. ಹಾಗೆ ಮಾಡುವಾಗೆಲ್ಲ ಗ೦ಟಲಿನ ಮೇಲೆ ಹೆಬ್ಬೆರಳು ಒತ್ತಿ ಹಿಡಿದು, ಅಲ್ಲಿನ ಕೂರಿಸಿರುವ ಥೆ್ರೂೀಬಿನ ಮೇಲೆ ಒತ್ತಿ ಅದನ್ನು ಧ್ವನಿ ಹೊರಡಿಸುವಾಗ ಚಲಿಸುವ೦ತೆ ಮಾಡುತ್ತ ಮನಸ್ಸಿನಲ್ಲಿ ಮೂಡುವ ಯೋಚನೆಗಳನ್ನು ಧ್ವನಿಯ ರೂಪದಲ್ಲಿ ಪರಿವತಿ೯ಸಿ ಹೊರಕ್ಕೆ ಹಾಕಬೇಕು. ಮನುಷ್ಯನನ್ನು ಎಷ್ಟು ವ್ಯವಸ್ಥಿತವಾಗಿ ಆ ದೇವರು ಡಿಸೈನ್ ಮಾಡಿದ್ದಾನು ಎನ್ನುವುದನ್ನು ಗುಲಾಬಿಯನ್ನು ನೋಡಿದವರು ಒಪ್ಪಲೇಬೇಕು. ಅ೦ತೂ ತಿಪ್ಪರಲಾಗ ಹಾಕಿ ಕೆಲವು ಧ್ವನಿ ಹೊರಡಿಸಲು ಶತಪ್ರಯತ್ನ ಮಾಡುವ ನಮ್ಮ ಪ್ರಯತ್ನದೆದುರಿಗೆ ಮೂಲರಚನೆಯ ಅದ್ಬುತತೆ ಅದಿನ್ನೆ೦ಗಿದ್ದೀತು...?
   "ಆ ಕಡೆಗೆ ಧ್ವನಿ ಇಲ್ಲ. ಈ ಕಡಿಗೆ ಪೂತಿ೯ ವಾಸಿ ಆದರೂ ಹಿ೦ಗೆ ಬದುಕಬೇಕಲ್ಲ ಅನ್ನೋ ಸ೦ಕಟ. ಮಾರಾಯ ಸರಿಯಾಗಿ ಹೊರಗಡೆ ಅ೦ಗಡೀಲಿ ಒ೦ದಿನ ಲಿ೦ಬು ಜ್ಯೂಸ್ ಕುಡಿದಿಲ್ಲ ನಾನು. ಅನವಶ್ಯಕವಾಗಿ ಇದಕ್ಕೆ ತಗುಲಿಕೊ೦ಡೆ ನೋಡು. ಈ ಚೆ೦ದಕ್ಕ ಯಾಕಾರ ಮದುವಿ ಆದೆ ಅನ್ನಿಸ್ತದ ನೋಡು. ಆದರೆ ಯಾವ ಕಾರಣಕ್ಕೂ ಗುದ್ದಾಡದೆ ಬದುಕು ಮುಗಿಯಕ್ಕೆ ಕೊಡಲ್ಲ. ಅದಕ್ಕೆ ಆದಷ್ಟು ಕಡಿಮೆ ಮಾತಾಡ್ತ ಅಷ್ಟಿಷ್ಟು ತಾಕತ್ತು ಉಳಿಸಿಕೊಳ್ತಿದಿನಿ...' ಗುಲಾಬಿ ಮು೦ದೆ ಮಾತಾಡುವುದು ಬೇಡ ಎನ್ನುವ೦ತೆ ಆಕೆಯ ಹೆಬ್ಬೆಟ್ಟನ್ನು ಗ೦ಟಲಿನ ಗುರುತಿನಿ೦ದ ನಿಧಾನಕ್ಕೆ ಕೆಳಗಿಳಿಸಿದೆ. ಗೊರಗೊರ ನಿ೦ತು ಹೋಯಿತು. ಜತೆಗೆ ಒ೦ದು ಜೀವ೦ತ ಖುಷಿಯೂ ಶಾಶ್ವತವಾಗಿ ನಿ೦ತುಹೋಗಿದ್ದು ಕಾಣಿಸುತ್ತಿತ್ತು. ಬದುಕು ಕೈಕೊಡುವುದೆ೦ದರೆ ಇದೇನಾ..? ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಳಾದರೂ ಸ೦ವಹನ ಸಾಧ್ಯತೆ ಇರದಿರುವುದು ಆಕೆಯನ್ನು ಕ೦ಗೆಡಿಸಿದ್ದು ಸ್ಪಷ್ಟ. ಮಗಳಿಗಾಗಿ ಗುಲಾಬಿ ಜೀವ ತೇಯುತ್ತಿದ್ದಾಳೆ. ಗುಲಾಬಿಯ ಹಿ೦ದೆ ವಯಸ್ಕ ಅಮ್ಮ ನಿ೦ತಿದ್ದಾಳೆ ಹಾರಲಿರುವ ತರಗೆಲೆಯಾಗಿ. ಮು೦ದೆ ಗೊತ್ತಿಲ್ಲ.. ಕಾರಣ ಅವಳು ಎ೦ದರೆ...
  (ಲೇಖಕರು ಕಥೆ-ಕಾದ೦ಬರಿಕಾರರು)

Sunday, February 21, 2016

ಕುಟುಂಬದಲ್ಲೂ ಚಿಕ್ಕ ಸ್ಪೇಸ್ ಬೇಕಾಗುತ್ತೆ...


ಮೊಬೈಲು ಅನ್ನೋದು ಬರದೆ ಇದ್ದಿದ್ದರೆ, ಬಹುಶಃ ಆಕೆ ಸಂಪರ್ಕಕ್ಕೇ ಸಿಗುತ್ತಿರಲಿಲ್ಲವೇನೋ.. ಅದು ತೀರ ಕಾಲು ಶತಮಾನದ ನಂತರದ ಭೇಟಿ. ಯಾರ ಹತ್ತಿರವೊ ನಂಬರು ಪಡೆದುಕೊಂಡು ಅದು ನಾನೇ ಅಂತ ಖಾತರಿ ಆದ ಮೇಲೆ ಮೆಸೇಜು ಮಾಡಿದ್ದಾಳೆ. ಹುಡುಗಿಯ ಮುಖ ನೆನಪಿಗೆ ದಕ್ಕುತ್ತಿಲ್ಲವಾದರೂ ಅಷ್ಟು ಸುಲಭಕ್ಕೆ ಆಕೆಯನ್ನು ಮರೆತಿರಲಿಲ್ಲ ಕೂಡಾ.
‘ನಾನು ಗುಲ್ಬಿ.. ಹೆಂಗಿದ್ದಿ..? ಈಗಲೂ ಚಿತ್ರ ಬರೀತಿಯೇನು..?’ ಎಂದು ಮೆಸೇಜು ಬಂದಾಗ ಒಮ್ಮೆ ಇತಿಹಾಸ ಮರುಕಳಿಸಿತ್ತು. ‘..ಎಲ್ಲಿದ್ದಿ..? ಏನು ಕಥೆ.., ಕೇಳೋಣವೆಂದು ರಿಂಗಿಸಿದರೆ -ನೆತ್ತಲಿಲ್ಲ. ಸಾಮಾನ್ಯವಾಗಿ ಉದ್ದುದ್ದ ಟೈಪಿಸುವುದಕ್ಕಿಂತಲೂ ಎರಡು ನಿಮಿಷದಲ್ಲಿ ಎಲ್ಲ ಮಾತಾಡಬಹುದು. ಅದಕ್ಕೆ ಕಾಲ್ ಮಾಡಿದರೆ ಗುಲಾಬಿಯದು ‘ಕಾಲ್ ಬೇಡಾ, ಮೆಸೇಜ್ ಮಾಡು. ಮಾತಾಡಕ್ಕಾಗಲ್ಲ..’ ಎಂದು ಮರುತ್ತರಬಂತು. ಹೆಣ್ಣುಮಕ್ಕಳ ಇಂತಹ ಇಬ್ಬಂದಿತನ ನನಗೆ ಹೊಸದೇನಲ್ಲ. ತೀರ ಮಾತಾಡಬೇಕು, ಮನಸ್ಸಿಗೆ ತೋಚಿದ್ದನ್ನು ಸ್ವಂತದ ಅಕ್ಕ ತಂಗಿಯರಿಗೆ, ಏನಕ್ಕಲ್ಲದಿದ್ದರೂ ಸಂಕಟಕ್ಕೆ ಕಿವಿಯಾಗುವ ಸ್ನೇಹಿತನಿಗೋ, ಪಾಪದ ಸಹೋದ್ಯೋಗಿ ಹತ್ತಿರವೋ ಹೇಳಿಕೊಳ್ಳೋಣ ಎಂದರೂ ಮಾತನಾಡಲಾಗದ ಬಿಗುವಾತಾವರಣ ಇರುತ್ತದೆ.
ತೀರ ಮನೆಯಲ್ಲಿದ್ದವರು ಏನೂ ಹೇಳದಿದ್ದರೂ ಯಾರೋ ಅಪರಿಚಿತರೇನೋ ಎನ್ನುವ ಭಾವವನ್ನು ಕಣ್ಣ ತುಳುಕಿಸಿರುವುದು, ಇನ್ನಿತರ ಪರಿವಾರದೆದುರಿಗೆ ಮಾತನಾಡಲು ಮುಜುಗರವಾಗುವುದು, ಇದ್ಯಾವುದು ಇರದಿದ್ದರೂ ಮಾತಾಡಲು ಆರಂಭಿಸುತ್ತಿದ್ದಂತೆ ಆಚೆ ಬದಿಯವರಿಗೂ ಕೇಳಿಸಿತು ಎನ್ನುವ ಕಾಮನ್‌ಸೆನ್ಸೂ ಇಲ್ಲದೆ ಮನೆಯವರು ‘.. ಯಾರದ್ದು’ ಎಂದು ಬಿಡುವ ಕಿರಿಕಿರಿ. ಗಂಡನಿಗೆ ಹೇಳಲೇಬೇಕಾದ ಅಗತ್ಯತೆಯ ಮಧ್ಯೆ ಹೇಳುವ ರೀತಿ ಮತ್ತು ಧಾಟಿಯಲ್ಲಿ ಮನೆಯಲ್ಲಿ ಸ್ಥಾನ ಪರಿಸ್ಥಿತಿ ಏನು ಎನ್ನುವುದು ಆಚೆ ಬದಿಯವರಿಗೂ ಗೊತ್ತಾಗುತ್ತದಲ್ಲ ಎನ್ನುವ ಭರಿಸಲಾಗದ ಒಳಗುದಿ ಆಕೆಯನ್ನು ಕಾಡುತ್ತಿದ್ದರೆ, ಇತ್ತಲಿನವರ ಧ್ವನಿ ಕೊಂಚ ಗಡುಸಾಗಿದ್ದರೆ ‘..ಯಾರೋ ಗಂಡಸರು ಮಾತಾಡಿದಂಗಿತ್ತು..’ ಎನ್ನುವುದು ಅತ್ತ ಇದ್ದವರಿಗೂ ಕೇಳಿಸಿಬಿಟ್ಟಿರುತ್ತದೆ. ಅದರಲ್ಲಿ ದೊಡ್ಡ ಅವಮಾನ ಅಥವಾ  ರಹಸ್ಯ ಏನೂ ಇರುವುದಿಲ್ಲವಾದರೂ, ಯಾವತ್ತೋ ಯಾರೋ ಮಾಡಿರುವ ಆ ಕಡೆಯ -ನಿನವರಿಗೆ ಇವಳ ಪರಿಸ್ಥಿತಿಯ ಬಗ್ಗೆ ಎಂಥಾ ಭಾವ ಬರಲಿಕ್ಕಿಲ್ಲ..? ಉತ್ತಮ ಸ್ಥಾನಮಾನದಲ್ಲಿದ್ದೂ ಕೂಡು ಕುಟುಂಬದಲ್ಲಿರುವ ಕೆಲ ಮಹಿಳೆಯರಂತೂ ಸಂಜೆಯ ಮೇಲೆ -ನೇ ಎತ್ತುವುದಿಲ್ಲ.
ಏನೇನು ಕಥೆಗಳೊ..?ಹಾಗಾಗಿ ಅಂತಹ ಸುಳಿವು ಲಭ್ಯವಾಗುತ್ತಲೇ ಓಕೆ.. ಓಕೆ.. ಎನ್ನುತ್ತಾ ಇಟ್ಟುಬಿಡುತ್ತೇನೆ. ಆದರೆ ಮನೆಯಲ್ಲಿ ಮಾತಾಡುವ ಹೆಂಡತಿ, ಹುಡುಗಿ ಕನಿಷ್ಠ ಕರೆ ಮುಗಿಸುವವರೆಗಾದರೂ ಕಾಯುವ ಸಹನೆ ಯಾಕೆ ಸಾಯಿಸಿಕೊಂಡಿರುತ್ತಾರೆ..? ಕಾರಣ ಆಕೆ ಮಾತಾಡುವಾಗ ಸ್ನೇಹಿತೆಯ ಜೊತೆಯ ಕುಲುಕುಲು.. ಆಗೆ ಆಕೆಯ ಮುಖದಲ್ಲೂ, ದೇಹ ಭಂಗಿಯಲೂ ಬದಲಾಗುವ ಕದಲಿಕೆಗಳು.. ಸರಕ್ಕನೆ ಕೂತಲ್ಲಿಂದ ಎದ್ದು ಏಕಾಂತ ಬಯಸಿ ಅದರಲ್ಲಿ ಯಾವ ಸರಸ ಸಪ ರಹಸ್ಯ ಇಲ್ಲದಿದ್ದರೂ ವಿರಾಮವಾಗಿ ಕೂತು ಆಚೆ ಬದಿಯಿಂದ ಕೇಳುವ ದನಿಗೆ ಇತ್ತಲಿಂದ ದನಿಯಾಗುವ ಸಂತಸವಿದೆಯಲ್ಲ ಅದನ್ನು ಆಕೆ ಎಲ್ಲರೆದುರು ಮಾಡಲಾರಳು.
ಅಂತಹ ಆರಾಮದಾಯಕ ಸಮಯ ಮತ್ತು ಸ್ವಾತಂತ್ರ್ಯ ತುಂಬಕಮ್ಮಿ ಹೆಣ್ಣುಮಕ್ಕಳಿಗೆ ಲಭ್ಯವಾಗುತ್ತದೆ.
ಅದಕ್ಕಾಗಿ ಮಾತಿನ ಮಧ್ಯದ ‘..ಆಮೇಲೆ ಮಾತಾಡ್ತೇನೆ’ ಎನ್ನುತ್ತಲೋ.. ಇಲ್ಲ ಇದ್ದಕ್ಕಿದ್ದಂತೆ..‘ಮಗ ಸ್ಕೂಲಿಗೆ ಹೋದ್ನಾ.. ಆಗಲೇ ಚಪಾತಿ ಮಾಡಿದ್ಯಾ..? ಇಲ್ಲಿ ಕಾಯಿಪಲ್ಲೆ ಸಿಗ್ತಾಇಲ್ಲ’ ಎನ್ನುವ ಮಾತನ್ನು ಆ ಬದಿಯವರಿಗೆ ಬೇಕಿರಲಿ, ಇಲ್ಲದಿರಲಿ ಮಾತಾಡುತ್ತಾ ರೂಮಿನವರೆಗೆ ಬಂದು..‘ಹೂಂ ಈಗ ಹೇಳು..’ ಎಂದು ಬೇರೆಯದೇ ಆಪ್ತ ಧ್ವನಿಯಲ್ಲಿ ಸಂಭಾಷಣೆಗೆ ಇಳಿಯುವುದೂ ಹೊಸದೇನಲ್ಲ. ಆದರೆ ತೀರ ‘..ಒನ್ಲಿ ಮೆಸೇಜ್..’ ಎನ್ನುವ, ಆಯ್ತು ಎಂದೇನೋ ಮಾತಾಡಿ ಮುಗಿಸುವ ಕರೆಗಳಿಂದ ಸುಲಭಕ್ಕೆ ಆಚೆ ತುದಿಯಲ್ಲಿರುವವರ ಸ್ಥಿತಿಯ ಅರಿವಾಗುತ್ತದೆ. ಆದರೆ ಗುಲಾಬಿ ಮೊದಲಿನಿಂದಲೂ ಅಂಥಾ ವ್ಯವಸ್ಥೆಗೆ ಒಗ್ಗಿಕೊಳ್ಳುವ, ಪಕ್ಕಾಗುವ ಹುಡುಗಿಯಾಗಿರಲಿಲ್ಲ. ಆದರೂ ಇದು ಯಾಕೋ ಸರಿ ಹೋಗ್ತಿಲ್ಲ ಎನ್ನಿಸುತ್ತಿದ್ದಂತೆ ಮೆಸೇಜು ಮಾಡಿದರೆ, ‘..ಮಾತಾಡಕ್ಕಾಗಲ್ಲ. ಸಿಕ್ಕಿದಾಗ ಹೇಳ್ತೀನಿ..’ ಎಂದುಸುರಿದ ರೀತಿಗೆ ಏನೋ ಸರಿ ಇಲ್ಲ ಎನ್ನಿಸಿಬಿಟ್ಟಿತ್ತು. ಮೊದಲಿನಿಂದಲೂ ಗುಲಾಬಿ ಗಲಗಲ ಮಾತಿನ ಹುಡುಗಿ.
ನೀವು ಗಮನಿಸಿರಬಹುದು, ಮೇಷ್ಟ್ರುಗಳ ಮೆಚ್ಚಿನ, ಬುದ್ಧಿವಂತ ಮಕ್ಕಳ ನಡವಳಿಕೆಗಳೆ ಬೇರೆ ಇರುತ್ತದೆ. ಅವು ತೀರ ಅಪ್ಡೇಟೂ, ಪುಸ್ತಕಗಳಿಗೆ ಕಾಲು ತಾಗಿದರೆ ದೇವರಿಗೆ ಒದ್ದಂತೆ ಕೆನ್ನೆ ಬಡಿದುಕೊಳ್ಳುವುದೂ ಮಾಡುತ್ತಿರುತ್ತವೆ. ಕ್ಲಾಸು ನಡೆಯುತ್ತಿದ್ದಷ್ಟೂ ಹೊತ್ತು ಮೇಷ್ಟ್ರ ಮೇಲಿಂದ ಕಣ್ಣು ಆಚೀಚೆ ಕದಲಿಸುವುದಿಲ್ಲ. ಪಾಠ ಮಾಡುತ್ತಿದ್ದಷ್ಟೂ ಹೊತ್ತೂ ನಿರಂತರವಾಗಿ ಕರೆಕ್ಟ್.. ಎನ್ನಿಸುವಂತೆ ಹುಬ್ಬು ಮೇಲೇರಿಸುವುದೂ, ಕಣ್ಣರಳಿಸುವುದೂ, ಹೌದು ಅರ್ಥವಾಯಿತು.. ಆಗೀಗ, ನೀವು ಹೇಳಿದ್ದು ಸರಿ.. ಎಂಬೆ ಅರ್ಥ ಸೂಚಿಸುವಂತೆ ಅಡ್ಡಡ್ಡ ಗೋಣು ಅಡಿಸುವ ಮಕ್ಕಳು ಹೆಚ್ಚಿನಂಶ ಮೊದಲ ಎರಡು ಸಾಲಿನ ಕುಳಿತಿರುತ್ತವೆ.
ಅವರ ನೋಟ್‌ಬುಕ್ಕು, ಮನೆ ಕೆಲಸದ ಪಟ್ಟಿ, ಮರುದಿನಕ್ಕೆ ಏನು ಹೇಳುತ್ತಾರೆ, ಯಾವ ಚಿತ್ರ ಬರೆದು ತರಬೇಕು ಇತ್ಯಾದಿಗಳೆಲ್ಲ ಕೊನೆಯ ಪುಟದಲ್ಲಿ ಬರೆದುಕೊಂಡು, ಮರುದಿನ ನಿಯತ್ತಾಗಿ ವರದಿ ಒಪ್ಪಿಸುವದಷ್ಟೆ ಅಲ್ಲ ಬರುತ್ತಿದ್ದಂತೆ ಒಮ್ಮೆ ಎಲ್ಲರ ಮುಖ, ನೋಟಬುಕ್ಕು ಸರ್ವೆ ಮಾಡಿ ಮೇಷ್ಟ್ರು ಒಳಗೆ ಕಾಲಿಡುತ್ತಿದಂತೆ, ‘ಸರ್.. ಇಂತಿಂಥವರು ಹೋಮ್ ವರ್ಕ್ ಬರೆದಿಲ್ಲ. ಇಂತಿಂಥವರ ಚಿತ್ರ ಅರ್ಧ ಆಗಿದೆ..’ ಹೀಗೆ ಒಂದೇ ಉಸಿರಿನಲ್ಲಿ ಬಾಕಿಯವರ ಚರಮಗೀತೆ ಹಾಡಿ ಕೂತು ಬಿಡುತ್ತಿರುತ್ತವೆ.
ಅಲ್ಲಿಗೆ ನನ್ನಂಥ ಅಕ್ಷರದ್ವೇಷಿಯ ಕಥೆ ಮತ್ತು ಪರಿಸ್ಥಿತಿ ಎರಡೂ ಗಂಭೀರ. ಇಂಥದ್ದೇ ಬುದ್ಧಿವಂತಿಕೆಯ ಗುಲಾಬಿ ಆಗೀಗ ಜೀವಶಾಸದ ಚಿತ್ರಗಳನ್ನೆ ನೀಟಾಗಿ ಬರೆಸಿಕೊಂಡು, ತಮ್ಮ ಕ್ಲಾಸಿನಲ್ಲಿ ಉಳಿದವರ ಬೆಂಡು ತೆಗೆಯುತ್ತಿದ್ದಳು. ನಾವು ಗುಲ್ಬಿ.. ಗುಲ್ಬಿ.. ಎಂದೇ ಕೂಗುತ್ತಿದ್ದೆವು. ಅಷ್ಟಕ್ಕೂ ಊರ ಕಡೆಯಲ್ಲಿ ಯಾರ ಹೆಸರೂ ಪೂರ್ತಿ ಶುದ್ಧವಾಗಿದ್ದುದು ಇವತ್ತಿಗೂ ನನ್ನ ನೆನಪಿನಲ್ಲಿ ಇಲ್ಲ. ಗೋಪ್ಯಾ, ವಮ್ಮಿ, ಚಂದ್ರು ಚಂದ್ರ್ಯಾ, ಪಂಕಜ ಪಂಕಿ, ಅನಿಲ ಅನ್ಯಾ, ಶಂಕರ ಶಂಕ್ರ್ಯಾ, ಸುನಿಲ ಸುನ್ಯಾ, ನಾನು ಸಂತ್ಯಾ... ಹೀಗೆ ಎಲ್ಲವೂ ಅರೆಬರೆ ಹೆಸರುಗಳೆ.
ನಾನು ಓದುವ ಗುಂಪಿನವನಲ್ಲದಿದ್ದರೂ ಗುಲ್ಬಿಯ ಬಳಗದಲ್ಲಿದ್ದಾ. ಹಾಗಂತ ನಾನಂದುಕೊಂಡಿದ್ದಾ. ಕಾರಣ ಕೆಲಸವಿದ್ದಾಗ ಮಾತ್ರ ‘ಸಂತೂ..ನಾನ್ ಚಿತ್ರ ಬರಿಯಾಕ ಆಗವಲ್ದು ನೀನ್ ಭಾಳಾ ಚೆಂದ ಬರ್ಕೊಡ್ತಿ’ ಎಂದು ಪುಸಲಾಯಿಸುತ್ತಿದ್ದರೆ ಹಲ್ಕಿರಿಯುತ್ತಾ ಚಿತ್ರ ಬರೆಯಲು ಕೂರುತ್ತಿದ್ದಾ. ನೀಟಾಗಿ ಪೆನ್ಸಿಲಿನಿಂದ ಬರೆಸಿಕೊಂಡು ಒಂದು ಮೂಲೆಂiಲ್ಲಿ ಚಿತ್ರ ಬರೆದವರು ಎಂದು ಎರಡು ಚುಕ್ಕಿ ಇಡಿಸಿ ನನ್ನ ಹೆಸರು ತಾನೇ ಹೇಳಿ ಬರೆಸಿ ‘..ಈಗ ಚೆಂದಾತು ನೋಡು..’ ಎನ್ನುತ್ತಿದ್ದಳು.
ಜೊತೆಗೆ ಮರುಸಲ ಬಂದಾಗ ‘ಏಯ್.. ನೀನು ಬರ್ಕೊಡೊ ಚಿತ್ರಕ್ಕೆ ಪಂಕಿ ತನ್ನ ಹೆಸರು ಹಾಕ್ಕೊತಾಳೋ.. ಹಂಗೆ ಬೇರೇವ್ರಿಗೆ ಬರ್ಕೊತಾ ಕೂಡಬ್ಯಾಡ. ನಿನ್ನ ಅಭ್ಯಾಸ ಆಗೋದ್ಯಾವಾಗ. ಬಾ ಗಣಿತ ಹೇಳಿಕೊಡ್ತೀನಿ’ ಎಂದು ತಲೆ ಸವರುತ್ತಿದ್ದಳು. ಆದರೆ ಯಾವತ್ತೂ ಗಣಿತವೇನು ಯಾವ ಅಕ್ಷರವನ್ನೂ ಹೇಳಿಕೊಡಲಿಲ್ಲ. ಅದನ್ನು ನಂಬಿಕೊಂಡ ನಾನೂ ಪಂಕಿಯ ನೋಟ್‌ಬುಕ್ಕು ಬರುತ್ತಿದ್ದಂತೆ ರಪ್ಪನೆ ಕುಕ್ಕಿ, ‘..ಚಿತ್ರ ಬರೆದವರು ಅಂತಿರೋ ನನ್ನ ಹೆಸರು ರಬ್ ಮಾಡ್ತಿಯಂತಲ್ಲ ಒಂಚೂರು ಮರ್ಯಾದಿ ಬ್ಯಾಡ ನಿಮಗೆ..’ ಎಂದು ದಭದಭ ಬಾಯಿ ಮಾಡುತ್ತಿದ್ದರೆ ಅವರೆ ಇದ್ಯಾಕೆ ಇವನನ್ನು ತಡುವಿಕೊಂಡೆವು ಎಂದು ಎದ್ದು ಹೋಗಿರುತ್ತಿದ್ದರು.
ಆಹಾ ಚೆಂದದ ಬುದ್ಧಿವಂತ ಹುಡುಗಿಗೆ ಚಿತ್ರಕ್ಕಾಗಿ ನಾನೇ ಬೇಕು, ನನ್ನ ಮೇಲೆ ಡಿಪೆಂಡ್ ಆಗಿದಾಳೆ ಎಂದುಕೊಂಡು ಒಳಗೊಳಗೇ ಖುಷಿಗೆ ಎದೆಯುಬ್ಬಿಸಿ ಅಡ್ಡಾಡುತ್ತಿದ್ದೆನಾದರೂ, ಕೆಲಸದ ಹೊರತುಪಡಿಸಿ ಇನ್ನುಳಿದ ಸಮಯದಲ್ಲಿ ನನ್ನನ್ನು ಕಂಡೂ ಕಾಣದಂತೆ ಇದ್ದು ಬಿಡುತ್ತಿದ್ದುದು, ದೂರವೇ ಇರುತ್ತಿದ್ದುದು ಒಳಗೆ ಕಿರಿಕಿರಿ ಎನ್ನಿಸುತ್ತಿತ್ತು. ಆದರೂ ಹುಷಾರಿ ಹುಡುಗಿ ನನ್ನ ಸಹಾಯ ಪಡೆಯುತ್ತಾಳೆ ಎನ್ನುವುದರ ಮುಂದೆ ಉಳಿದ ಸಂಕಟಗಳು ಮರೆಯಾಗುತ್ತಿದ್ದವು. ಆದರೆ ಇದೆಲ್ಲ ತುಂಬಾ ದಿನ ನಡೆಯಲಿಲ್ಲ.
ಬೇರೆಯವರ ಮೇಲೆ ಗೂಬೆ ಕೂರಿಸಿಯಿದೆ ತೆಗೆದುಕೊಳ್ಳುತ್ತಿದ್ದ ಗುಲ್ಬಿ ತಾನೂ ಅದನ್ನೇ ಮಾಡಿದ್ದಳು. ಪೆನ್ಸಿಲಿನಲ್ಲಿರುತ್ತಿದ್ದ ನನ್ನ ಹೆಸರು ಒರೆಸಿ ಸ್ಕೆಚ್‌ಪೆನ್ನಿಂದ ತನ್ನ ಹೆಸರು ಬರೆದುಕೊಂಡು, ನಾನು ಬಾಯಿ ಮಾಡುವ ಮೊದಲೇ ಜೋರಾಗಿ ‘ಏಯ್.. ಏನೋ ಒಂದೆರಡು ಚಿತ್ರ ಬರ್ಕೊಟ್ಟ ಬಂದ್‌ಬಿಟ್ಟಾ. ಗಣಿತ ಹೇಳ್ಕೊಡ್ತೀನಿ ಅಂದರ ಅಭ್ಯಾಸಕ್ಕ ಕೂರ್ತಾ ಇಲ್ಲ ಅಂತಾ ನಿಮ್ಯಾನಗ ಹೇಳಲೇನು..’ ಎಂದು ರಿವರ್ಸ್ ಬ್ಯ್ಲಾಕ್‌ಮೇಲ್ ಮಾಡಿಸಿಕೊಂಡು ತೆಪ್ಪಗಾಗಿದ್ದಾ. ಬುದ್ಧಿವಂತರು ಊರು ಬಿಡೋದು, ಊರಿಗೆ ಹಿಂದಿರುಗದಿರುವುದೂ ಸಾಮಾನ್ಯ. ಹಾಗೇ ಆಯಿತು ಕೂಡಾ. ಊರುಬಿಟ್ಟು ನೌಕರಿ ಇತ್ಯಾದಿ ಎಂದು ಹೊರಟು ಹೋದ ಗುಲಾಬಿ ಮತ್ತೆ ಯಾವತ್ತೂ ಮಾತಿಗೆ ಇರಲಿ, ಸುದ್ದಿಗೂ ಸಿಕ್ಕಿರಲಿಲ್ಲ.
ಆದರೆ ಗಲಗಲ ಮಾತಿನ ಗುಲ್ಬಿ ಜೀವಮಾನದಲ್ಲಿ ಮೌನವಾಗಿ ಹೋಗಿದ್ದಳು. ಆದರೆ ಅದನ್ನು ನಂಬುವುದೂ ನನಗೆ ಕಷ್ಟವಿತ್ತು. ತೀರ ಒತ್ತಾಯಿಸಿದಾಗ ತಡವಾಗಿ ಮೆಸೇಜು ಬಂದಿತ್ತು. ‘..ನನ್ನ ಧ್ವನಿ ಪೆಟ್ಟಿಗೆತೆಗೆದು ಹಾಕಿದಾರೆ..’ ನನ್ನ ಧ್ವನಿ ಉಡುಗಿ ಬೆನ್ನಿನಾಳದಲ್ಲಿ ಚಳಿ ಅಡರಿತ್ತು. ಉಳಿದದ್ದು ಮುಂದಿನ ವಾರಕ್ಕಿರಲಿ. ಆದರೆ ಗುಲಾಬಿ ಮಾತ್ರ ಧ್ವನಿ ಮತ್ತು ಬದುಕು ಎರಡಕ್ಕೂ ಸವಾಲಾಗಿ ಬದುಕುತ್ತಿದ್ದಳು.ಕಾರಣ  ಅವಳು ಎಂದರೆ..
(ಲೇಖಕರು ಕಥೆ-ಕಾದಂಬರಿಕಾರರು)

Saturday, February 13, 2016

ಖುಷಿ, ನೆಮ್ಮದಿಗಳನ್ನು ರಾತ್ರಿಗಳಲ್ಲೇ ಹುಡುಕಬೇಕೆ...?


ಬೇಕಿದ್ದರೆ ಪಕ್ಕದ ಸೀಟು ಕಾಯ್ದಿರಿಸಿ ತಗುಲಿಸಿ ಕೂತುಕೊಳ್ಳಲು ಕಾಯುವ ಗ೦ಡಸು, ಸುಲಭಕ್ಕೆ ಯಶಸ್ಸಿನ ಮೆಟ್ಟಿಲನ್ನು ಪುಕ್ಕಟೆಯಾಗಿ ಅವಳಿಗೆ ಕೊಡಲಾರ. ಹೊರಗಿನ ಐಡೆ೦ಟಿಟಿಗೆ ಬಡಿದಾಡುವ ಆಕೆಯ ರಾತ್ರಿಗಳಿಗೆ ಅರೆಪಾವಿನಷ್ಟಾದರೂ ಶಕ್ತಿ ಉಳಿದುಕೊಳ್ಳಲು, ಕನಿಷ್ಠ ಅನುಕೂಲವನ್ನಾದರೂ ಕಲ್ಪಿಸಬೇಕೆ೦ದು ಯಾವ ಬ್ಲಾಗೂ ಇವತ್ತಿಗೂ ಬರೆದಿಲ್ಲ.

"ನನ್ನ ಮೊಬ್ಯೆಲ್ ರಿ೦ಗಾಗುತ್ತಿದ್ದಾಗ, ಮೆಸೇಜು ಬ೦ದಾಗಲೂ ಪಿಳ್‍ಪಿಳಿ ಲ್ಯೆಟ್ ಬೀರುವ ಮೇಲ್ಪಟ್ಟಿಯಲ್ಲೊಮ್ಮೆ ಸಣ್ಣ ಕುತೂಹಲದಿ೦ದ ಕಣ್ಣು ಇಣುಕಿಸಿ ಕೈಗೆ ಕೊಡುವುದಕ್ಕಿ೦ತಲೂ, ಮೊರೆಯುವಾಗ ತ೦ದು ಸುಮ್ಮನೆ ಪಕ್ಕದಲ್ಲಿಟ್ಟು ಹೋಗುವ ಕಿರುನ೦ಬಿಕೆಯ ಸ೦ಬ೦ಧವಿದೆಯಲ್ಲ ಅದು, ಗ೦ಡನಾದವನು ದಿನಕೊಮ್ಮೆ ಐ ಲವ್ ಯು ಎನ್ನುವುದಕ್ಕಿ೦ತಲೂ ಸಾವಿರ ಪಾಲು ಮಿಗಿಲಾದ ನ೦ಬಿಕೆಯನ್ನು ಹುಟ್ಟಿಸುತ್ತದೆ ಗೊತ್ತಾ..?' ರಾಜಿ ಬಡ ಬಡ ಮಾತಾಡುತ್ತಿದ್ದರೆ ನಾನು ಅದೇ ಲ್ಯೆಟಿನ೦ತೆ ಪಿಳಿಪಿಳಿ ನೋಡುತ್ತಿದ್ದೆ. 
      ಓದು ಮತ್ತು ಹಿರಿತನದಲ್ಲಿ ನಾಲ್ಕು ವಷ೯ದ ಜತೆ ನಲ್ವತ್ತು ಪಸೆ೯೦ಟು ನನಗಿ೦ತಲೂ ಮೇಲಿದ್ದ ಹುಡುಗಿಗೆ ಅಹ೦ ಎ೦ಬ ಸ್ವಾಭೀಮಾನ ಇದ್ದಿದ್ದು ಸಹಜ. ಆಕೆ ಶೇ.93ಕ್ಕಿ೦ತ ಕಡಿಮೆ ಮಾಕ್ಸ್‍೯ ತೆಗೆದದ್ದೇ ಇಲ್ಲ. ಅದಕ್ಕೆ ಇವತ್ತು ನಾನೆಲ್ಲೊೀ ಕಾಡಿನಲ್ಲಿ ನೌಕರಿ ಮಾಡಿಕೊ೦ಡು, ಅಕ್ಷರ ಲೋಕದಲ್ಲಿ ಜಿದ್ದಿಗೆ ಬಿದ್ದ೦ತೆ ಬರೆಯುತ್ತ ಕೂತಿದ್ದರೆ, ಆಕೆ ಹೊರಗೆ ಕಾಲಿಡುವ ಮೊದಲೇ ಕಾರು ಕಾಯುತ್ತಿರುತ್ತದೆ. ಇವತ್ತಾಕೆಯ ಪ್ರತಿ ಮಾತಿಗೂ ದುಡ್ಡು ಉದುರುತ್ತದೆ. ಗಣಿತ ಲೋಕದ ಚೆ೦ದದ ಇಕೆ್ವೀಷನ್ನುಗಳಿಗೆ ಆಕೆ ಸ್ವತಃ ಕ್ಯಾಲ್ಕುಲೇಟರು. ಜಗತ್ತಿನ ಅಷ್ಟೂ ಬುದ್ಧಿವ೦ತಿಕೆಯನ್ನು ದೇವರು ಮುಲಾಜಿಲ್ಲದೆ ಆಕೆಗೆ ಕೊಟ್ಟಿದ್ದ. ಕಾಲಘಟ್ಟದ ತಿರುಗಣಿಗೆ ಬಿದ್ದು ಬೆ೦ಗಳೂರಿನ ಬೀದಿಗಳಲ್ಲೊಮ್ಮೆ ನನ್ನ ತೇರು ಸಾಗುವಾಗ ಸರಕ್ಕನೆ ಭೇಟಿಯಾದವಳು ರಾಜಿ. ದಿಗಿಲು ಬಡಿಸುವ ತಾರಾ ಹೋಟೆಲಿನ ಕಾರಿಡಾರು ತಮ್ಮದೇ ಮನೆ ಜಗುಲಿ ಎನ್ನುವಷ್ಟು ಸಲೀಸಾಗಿ ಆಕೆ ನನ್ನ ಕೈಹಿಡಿದುಕೊ೦ಡು ಸರಸರ ನಡೆಯುತ್ತಿದ್ದರೆ ನಾನು ದಿಕ್ಕೆಟ್ಟು ಅಷ್ಟದಿಕ್ಕಿಗೂ ಕಣ್ಣಾಡಿಸುತ್ತಿದ್ದೆ. ತೀರ ಬ್ರಹ್ಮನೂ ಬಿದ್ದುಹೋಗುವ೦ತಹ ಶುದ್ಧನೊರೆ ಹಾಲಿನ ಕಾಫಿಯನ್ನು ನಾನು ಸೊರಸೊರ ಶಬ್ದಿಸುತ್ತ ಹೀರುತ್ತಿದ್ದರೆ ಆಕೆ "ಹುಷ್..' ಎ೦ದಿದ್ದಳು. ಹಾಗೆಲ್ಲ ಸಶಬ್ದವಾಗಿ ಕುಡಿಬಾರದು, ಹಿ೦ಗೇನೇ ತಿನ್ನಬೇಕು ಎ೦ಬೆಲ್ಲ ಅತೀ ನಾಜೂಕುತನ ನನ್ನ ಜಾತಕದಲ್ಲೇ ಬರಲಿಲ್ಲವಲ್ಲ. 
      ಇವತ್ತೂ ಮಟ್ಟಸವಾಗಿ ಕಾಲು ಮಡಚಿ ಕೂತು ಕಚಪಚ ಜಗಿದು ಉಣ್ಣುವುದೇ ನನಗೆ ಮಹದಾನ೦ದ. ಆದರೂ ಮತ್ತೆಲ್ಲ ನಿಶ್ಯಬ್ದವಾಗಿ ನಡೆದಿತ್ತು ಆಕೆಯ ಕಣ್ಣ ನಿಗರಾಣಿಯಲ್ಲಿ. ಅಧ೯ ಸಾವಿರ ತೆತ್ತು ಹೊರಬ೦ದಾಗ "ಮಾರಾಯ್ತಿ ಇದರಲ್ಲಿ ಅಧ೯ ತಿ೦ಗಳು ಕಾಫಿ ಬತಿ೯ತ್ತು..' ಎ೦ದು ನೆಗೆಯಾಡಿದ್ದೆ. ಇವತ್ತು ಬುದ್ಧಿವ೦ತರ ಮನೆಯಲ್ಲಿ ಜಗತ್ತಿನ ಅಷ್ಟೂ ಐಶ್ವಯ೯ ಕಾಲು ಮುರಿದುಕೊ೦ಡಿರುವುದು ದೊಡ್ಡದಲ್ಲ. ಆದರೆ ನೆಮ್ಮದಿ..? ಆಕೆ ಕಾಲಿಟ್ಟ ಅಷ್ಟೂ ಕ೦ಪನಿಗಳಲ್ಲಿ ಆಕೆಯ ಮಾತಿಗೆ ಗೆಲುವಿದೆ. ಆಕೆಯ ಆ ನಿಲುವಿಗೆ "ರಾಜಿ, ಪೇಮೆ೦ಟು ಕಮ್ಮಿ ಇದ್ರೂ ಪರ್ವಾಗಿಲ್ಲ. ನಿನ್ನ ಆಫೀಸ್ ಲೆಕ್ಕದಲ್ಲಿ ನನ್ನೂ ಫಾ ರಿನ್ ಗೆ ಕಕೊ೯೦ಡು ಹೋಗುವುದಾರೆ ಮ್ಯಾನೇಜರ್, ಡೆùವರ್, ಗೈಡ್ ಕಮ್ ಬಾಡಿಗಾಡ್‍೯ ಎಲ್ಲ ಆಗಿ ನಾನೇ ಇದ್ದು ಬಿಡ್ತೀನಿ..' ಎ೦ದು ನಾನನ್ನುತ್ತಿದ್ದರೆ "ಮಾರಾಯ ಹ೦ಗಿದ್ದರೂ ಎಷೆ್ಟೂೀ ಸುಖವಾಗಿತಿ೯ದ್ದೆ ಸುಮ್ನಿರು..' ಎನ್ನುವಾಗ ತಾರಾ ಹೋಟೆಲಿನಲ್ಲಿ ಬೀಡುಬೀಸಾಗಿ ನಡೆಯುವಾಗ ಇದ್ದ ದೇಹಭಾಷೆ ಈಗಿರಲಿಲ್ಲ. 
     "ನೋಡು.. ಹೆಣ್ಣು ಸಕೆ್ಸಸ್ ಆಗೋದೇ ಹೆಣ್ಣು ಎನ್ನುವ ಕಾರಣಕ್ಕೆ ಅನ್ನೋದನ್ನು ಎದುರಿಸೋದು ತು೦ಬ ಕಷ್ಟ ಕಣೋ. ಎಷ್ಟೇ ದೊಡ್ಡ ಸಕೆ್ಸಸ್ ಆದರೂ ಸಣ್ಣ ಖುಷಿ ಹೊರತು ಅದನ್ನು ನಾವು ಮನೆಯೊಳಕ್ಕೆ ತರೋದೇ ಇಲ್ಲ. ಹೆಣ್ಣು ಅನ್ನೋ ಕಾರಣಕ್ಕೆ ಯಾವ ಕೆಲಸಾನೂ ಸುಲಭಕ್ಕೆ ಆಗೋದಿಲ್ಲ. ಬೇಕಿದ್ದರೆ ಪಕ್ಕದ ಸೀಟು ಕಾಯ್ದಿರಿಸಿ ತಗುಲಿಸಿ ಕೂತುಕೊಳ್ಳಲು ಕಾಯುವ ಗ೦ಡಸು ಯಶಸ್ಸಿನ ಮೆಟ್ಟಿಲನ್ನು ಪುಕ್ಕಟೆಯಾಗಿ ಕೊಡಲಾರ. ಹೆಣ್ಣಿನಿ೦ದ ಪಡೆಯೋದಿಕ್ಕೆ ಸಾಕಷ್ಟಿದೆ ಅನ್ನೋದು ಜಗವ್ಯಾಪಿ ನ೦ಬಿಕೆ."ನಿಮಗೇನ್ರಿ ಯಾರಾದರೂ ಹೆಲ್³ ಮಾಡ್ತಾರೆ..' ಎ೦ದು ಮೀಸೆಯಡಿ ಸಣ್ಣಗೆ ನಗುವ ಗ೦ಡಸಿನ ಮಾತಿನ ಹಿ೦ದಿನ ಅಥ೯ವೇನೆ೦ದು ಯಾವ ಹೆಣ್ಣಿಗೂ ವಿವರಿಸಬೇಕಿಲ್ಲ. ಇದನ್ನು ಯಾವ ಹಿ೦ಸೆಯ ಕೆಟಗರಿಗೆ ಸೇರಿಸೋಣ..? ಯಾವ ಕಲ೦ ಇದನ್ನು ವಿಶ್ಲೇಷಿಸಬಲ್ಲದು..? ಶೇ.90ರಷ್ಟು ಗ೦ಡಸರಿಗೆ "ಪ್ರತಿ ಹೆಣ್ಣು ಸೌ೦ದಯ೯ವನ್ನೇ ತನ್ನ ಯಶಸ್ಸಿಗೆ ಬ೦ಡವಾಳ ಮಾಡಿಕೊಳ್ಳುತ್ತಾಳೆ ..' ಎನ್ನುವ ಹೊರಗಿನ ಹಿ೦ಸೆಯಾದರೆ, ಮನೆಯೊಳಗೆ ಎಲ್ಲ ಇದ್ದೂ, ಬದುಕು ಅಟ್ಟಣಿಗೆ ಮೇಲೇರಿ ನಿ೦ತು ಅಣುಕಿಸುತ್ತಿರುತ್ತದೆ..' ರಾಜಿ ಬರೆಯಲಾಗದ ಕಹಿಸತ್ಯಗಳನ್ನು ಹಸಿಹಸಿಯಾಗಿ ಎದುರಿಗಿಡುತ್ತಿದ್ದರೆ ನನ್ನಲ್ಲಿ ಧ್ವನಿ ಇರಲಿಲ್ಲ. 
      "ಅದೇನು ಕೆಲಸ ಮುಗಿಸಿ ಬ೦ದ ಮೇಲೂ ಯಾವಾಗಲೂ ಕಾಲ್ ಬತಿ೯ರುತ್ತೆ..?..' ಎ೦ದು ಗೊಣಗುತ್ತಲೇ, "ನಾನೂ ನೌಕರಿ ಮಾಡುತ್ತೇನೆ. ಆದರೆ ನನಗ್ಯಾವತ್ತೂ ಹಿ೦ಗೆ ಕಾಲ್ ಬರಲ್ಲ..' ಎನ್ನುವ ಗ೦ಡನ ಸಣ್ಣ ಕಮೆ೦ಟಿಗಾಗುವ ಹಿ೦ಸೆಯ ಒಳಗಿನ ಒತ್ತಡ, ಎದೆ ಸ೦ದಿ ಕಾಣಿಸದ೦ತೆ ಇಣುಕು ದೃಷ್ಟಿ ತಪ್ಪಿಸಿಕೊಳ್ಳುವ ಸಕ೯ಸ್ಸಿನ ನಡುವೆಯೂ, ಕಣ್ಣುಬಿಟ್ಟು ಬೇರೆಲ್ಲೆಲ್ಲೂ ಹರಿಯುವ ಎದುರಿನವನ ಲಕ್ಷé ಅಲಕ್ಷಿಸುತ್ತ ಇವತ್ತು ಹೊರಗೂ ಐಡೆ೦ಟಿಟಿ ಕಟ್ಟಿಕೊಳ್ಳುವ ಆಕೆ ಮನೆಗೆ ಬರುತ್ತಿದ್ದ೦ತೆ ಕಾಲಿಗಡರುತ್ತಿದ್ದ ಸಾಕ್ಸು, ಸೋಫಾ ಗೆ ನೇತಾಡುವ ಕೈಯೊರೆಸುವ ಟವಲು, ಬೆಳಗ್ಗೆ ಅಧ೯ಕ್ಕೆ ಬಿಟ್ಟಿದ್ದ ಮಷಿನ್ ಗು೦ಡಿಯೊತ್ತಿಟ್ಟು, "ಏನೇ ರೆಡಿಮೇಡ್, ಪ್ಯಾಕ್ಡ್ ಸಾಮಾನು ತ೦ದರೂ ಅದನ್ನು  ಡಬ್ಬಿಗಳಿಗಾದರೂ  ಸೇರಿಸಬೇಕಲ್ಲ..? ಟೇಬಲ್ ಮೇಲೆ ಅಲ್ಲಲ್ಲೆ ಕೂತಿರುವ ಪೊಟ್ಟಣ ಎತ್ತಿಡುತ್ತ, ಕಟ್ಟೆಯ ಮೇಲೆ ಇಲ್ಲದ ಜಾಗಕ್ಕಾಗಿ ಸ೦ದಿನಲ್ಲೇ ಪಾತ್ರೆ ಸರಿಸುತ್ತ, ಜೊತೆಗೆ ರಾತ್ರಿಗೆ ಏನೋ ಒ೦ದು ಮಾಡಿಕೊಳ್ಳೋಣ ಎ೦ದುಕೊ೦ಡರೂ ಅಡುಗೆ ಎನ್ನುವುದಾಗಲೇಬೇಕಲ್ಲ.
      ಈ ಮಧ್ಯೆ ಆಗೀಗ ಬರುವ ಕರೆಗಳಿಗೆ ಉತ್ತರಿಸುತ್ತ, ಇನ್ಯಾವುದೋ ಮೇಲ್‍ಗೆ ರಿಪೆ್ಲ ಮಾಡಿ, ಮನಸ್ಸಿನ ಮದುರುಗಳ೦ತೆ ಬೆಡ್‍ರೂಮ್‍ನ ಮೇಲುಹಾಸನ್ನು ಒಪ್ಪವಾಗಿಸಲೂ ಆಗದೆ, ಕನಿಷ್ಠ ಬಿಸಿಬಿಸಿ ಕಾಫಿಯನ್ನಾದರೂ ಕುಡಿದೇ ಕೆಲ್ಸಕ್ಕೆ ತೊಡಗೋಣ ಎ೦ದರೆ ಅದನ್ನೂ ಇನ್ನಷ್ಟೆ ಹಾಲು ಕಾಯಿಸಿ ಮಾಡಿಕೊಳ್ಳಬೇಕೆನ್ನುವ ಸ೦ಕಟಕ್ಕೆ ಅದನ್ನೂ ಮಾಡಲಾರದೆ, ಹೋಮ್ ವಕಿ೯ಗೆ ಮಧ್ಯೆಮಧ್ಯೆ ಮಗುವಿಗೆ ಕೂಗು ಹಾಕುತ್ತ, ಅದಕ್ಕೆ ಹಾಲು ತಿ೦ಡಿ ಪೂರೈಸುತ್ತ, ಮರುದಿನ ಯೂನಿಫಾ ರ೦ ಎತ್ತಿಟ್ಟು, ಅದರ ಶೂ ಪಾಲಿಶ್ ಹಾಕಿಟ್ಟು, ನಾಳೆಗೆ ಮತ್ತೆ ಡಬ್ಬಿ ಬೇಕೇಬೇಕಲ್ಲ, ಅದಕ್ಕೆ ಅದನ್ನೂ ಈಗಲೇ ನೀಟಾಗಿರಿಸುತ್ತ, ಜಾಗದಲ್ಲಿಲ್ಲದ ಟೈ, ಬೆಲ್ಟುಗಳನ್ನು ಹೊರಗಿನ ಹಾಲ್ ಮೇಲಿನ ಟೀಪಾಯಿಗಿಟ್ಟು, ಅಷ್ಟರಲ್ಲಿ ಇದನ್ನೆಲ್ಲ ದಿನವಿಡೀ ರೂಟಿನ್ ಆಗಿ ಮಾಡಿ ಊಟವಾಗುತ್ತಿದ್ದ೦ತೆ ಮರುದಿನದ ತಯಾರಿಯೂ ಸೇರಿದ೦ತೆ ಮಕ್ಕಳ ಅಡಿಷನಲ್ ಕೆಲಸಗಳನ್ನು ಪೂರೈಸಿ ಬರುವ ಹೊತ್ತಿಗೆ ಒಮ್ಮೆ ಹಾಸಿಗೆ ಅಥವಾ ನಿದ್ರೆಗೆ ಮನಸ್ಸು ಶರಣು ಶರಣು. 
     ಆದರೆ ಅ೦ಥಾ ಹೊತ್ತಿನಲ್ಲಿ "ದಿನಾ ಇದೇ ಆಯ್ತು ಹೆ೦ಡತಿಯರಿಗೆ. ಬೆಡ್ ರೂಮ್‍ಗೆ ಬರುವ ಹೊತ್ತಿಗೆ ಇ೦ಟರೆಸ್ಟೇ ಇರಲ್ಲ ಮಾರಾಯ. ಯಾವಾಗ ನೋಡಿದರೂ ಸುಸ್ತು, ಇಲ್ಲ ಹೆಕ್ಟಿಕ್ ಜಾಬು, ತಲೆನೋವು ಅದೂ ಮೀರಿದರೆ ವಾರಗಟ್ಟಲೇ ಪಿರಿಯಡ್ಡು..' ಎ೦ದು ಗೊಣುಗುವ ಗ೦ಡಸರ, ಬೆಡ್‍ರೂಮಿಗೆ ಮಾತ್ರ ಸೀಮಿತವಾಗುವ ಅತೀವ ಆಸಕ್ತಿಗೆ, ಆಗುವ ಮಾನಸಿಕ ಆದ್ರ೯ತೆಯ ಸ್ರಾವದ ಡೆಫಿನೇಷನ್ ಯಾವ ಸೈನ್ಸು ಅಕ್ಷರದಲ್ಲಿ ಬರೆಯಬಲ್ಲದು..?ಯಾವ ಹೆಣ್ಣು ನೆಮ್ಮದಿಯಾಗಿ ಒದ್ದೆಯಾದಾಳು..?
     "ರಾಜಿ..ಬ೦ದು ಮುಕ್ಕಾಲು ಗ೦ಟೆಯಾಯ್ತು ಇನ್ನು ಕಾಫಿಗಿಟ್ಟಿಲ್ವಾ..' ಎನ್ನುತ್ತ ಲ್ಯಾಪ್‍ಟಾಪ್, ವಾಟ್ಸ್‍ಆ್ಯಪ್‍ನಲ್ಲಿ ಮುಳುಗುವವನಿಗೆ, ಹೆ೦ಡತಿ ರಾತ್ರಿಗೆ ಅರೆಪಾವಿನಷ್ಟಾದರೂ ಶಕ್ತಿ ಉಳಿಸಿಕೊ೦ಡಿರಲಿ ಎ೦ದಾಗಬೇಕಾದರೆ ಅದಕ್ಕೆ ಕನಿಷ್ಠ ಅನುಕೂಲವನ್ನಾದರೂ ಕಲ್ಪಿಸಬೇಕೆನ್ನುವುದನ್ನು ಯಾವ ಬ್ಲಾಗೂ ಇವತ್ತಿಗೂ ಬರೆದಿಲ್ಲ. ಗಲೀಜು ಕೆಲಸಗಳಾಚೆಗಿರಲಿ, ಕನಿಷ್ಠ ತಾನೇ ಮು೦ದಾಗಿ ಇಬ್ಬರಿಗೂ ಕಾಫಿಯನ್ನಾದರೂ ಇಡಬೇಕೆ೦ದೂ, ಅರೆಬರೆ ಚಾಜಾ೯ಗಿರುವ ಹೆ೦ಡತಿಯ ಸೆಲ್‍ನ್ನೂ ತನ್ನದರೊ೦ದಿಗೆ ಪ್ಲಗ್ಗಿಸಬೇಕೆ೦ದೂ, ವಾಸನೆ ಹೊಡೆಯುವ ಸಾಕ್ಸು ಬಿಸಾಕದೆ, ಕೈಯೊರೆಸುವ ಟವಲ್ ಜಾಗಕ್ಕಿರಿಸಿ, ಬೇರೇನೂ ಇಲ್ಲದಿದ್ದರೂ ರಾತ್ರಿ ಅಡುಗೆಗೆ ತಾನು ಟಿವಿ ನೋಡುತ್ತ ಕೂತಲ್ಲೇ ಸಣ್ಣ ಸಹಾಯದ ಆಲೋಚನೆಯಾಗಲಿ, ಮಾಡುವುದ೦ತೂ ದೂರವಿರಲಿ ಕುಡಿದ ಲೋಟ, ತಿ೦ದ ಪೆ್ಲೀಟನ್ನು ಸಿ೦ಕ್‍ನವರೆಗೂ ಸಾಗಿಸದೆ ಸೋಫಾ ಪಕ್ಕದ ಕಾಲಿಗೆ ಆನಿಸಿ ಒಣಗಿ ಕಲೆಯಾಗುವವರೆಗೂ ಬಿಡಬಾರದೆನ್ನುವ ಕಾಮನ್‍ಸೆನ್ಸು, ಬೇಕಿದ್ದ ಸಮಾನು ತರುವುದು ಸಾಯಲಿ ಹೊತ್ತು ತ೦ದಿದ್ದನ್ನಾದರೂ ಜಾಗಕ್ಕೆ ಸೇರಿಸಬೇಕೆನ್ನುವ೦ಥ ಸಣ್ಣ ತಪನೆ ಕೂಡ ಬರುವುದೇ ಇಲ್ಲವಾ..? ಕನಿಷ್ಠ ತಾನು ಬಿಚ್ಚಿದ ಶೂಸ್, ಓದಿದ ಪೇಪರುಗಳನ್ನು ಸರಿಜಾಗಕ್ಕಿಡಬೇಕೆನ್ನುವುದನ್ನು, ಮ೦ಚದ ಕಾಲಿಗೋ ಪಕ್ಕದ ವಾಡ್‍೯ರೋ ಬ್ ಮೊಳೆಗೋ ಪ್ಯಾ೦ಟಿನ ಅ೦ಡು ಮೇಲಾಗಿಸಿ ನೇತಾಡಿಸಬಾರದೆನ್ನುವ ತೀರ ಚಿಕ್ಕ ನಡವಳಿಕೆಗಳಿಗಾಗಿ ಯಾವನೂ ಪ್ರೊಗ್ರಾ೦ ಬರೆಯಲಾರ. ಇದಾವುದೂ ಆಗದ, ತನಗಿ೦ತ ಮೊದಲು ಬ೦ದರೂ ಕನಿಷ್ಠ ಕಾಫಿಯನ್ನೂ ಮಾಡಿಡದ, ಪಿರಿಯಡ್ ಸಮಯದ ಲ್ಲಾ ದರೂ ಪಾಸೆ೯ಲ್ ಫಫುಡ್ಡು ತಾರದ, ಬೆಳಗೆದ್ದು ತನ್ನ ಕಾಫಿ, ಶೇವಿ೦ಗು, ವಾಟ್ಸ್‍ಆ್ಯಪ್‍ನಿ೦ದ ಹೊರಬಾರದ ಗ೦ಡಸಿಗೆ, ರಾತ್ರಿಗಳಲ್ಲಿ ಹೆ೦ಡತಿಗೆ ಮೂಡಿಲ್ಲ "ಆಕೆ ಸರಿ ಇಲ್ಲ..' ಎನ್ನುವ ಮೊದಲು ಒ೦ದು ಅಥ೯ವಾಗಬೇಕಿದೆ.
     ಯಾವ ಹೆಣ್ಣಿಗೂ ತಾನೂ ಸೆಕ್ಸಿಗೆ ಪಕ್ಕಾಬಾರದು, ಸುಖಿಸಬಾರದೆ೦ದೇನೂ ಇಲ್ಲ. ದೈಹಿಕವಾಗಿ ದಣಿದಿದ್ದರೂ ಮಾನಸಿಕವಾಗಿಯೂ ಪ್ರಫುಲ್ಲವಾಗಿರಲು ಕೊ೦ಚವೂ ಸಹಕರಿಸದ ಗ೦ಡನೊಡನೆ ವಷ೯ಗಟ್ಟಲೇ ಏಗಬೇಕೆ೦ದರೆ ಅದೆಲ್ಲಿ೦ದ ಆಕೆ ಸ್ವಯ೦ ಒದ್ದೆಯಾದಾಳು..?ಹಾಸಿಗೆಗೆ ಮಾತ್ರ ಯಾವ ರಿಸವೇ೯ಶನ್ನೂ ಇಲ್ಲದೆ ತೊಡಗಬೇಕು, ಉಳಿದೆಲ್ಲದಕ್ಕೂ "ಹೆ೦ಗಸರಿಗೇನು..?' ಎನ್ನೋ ಉಡಾಫೆ ಇದೆಯಲ್ಲ ಅದು ಬಹುಶಃ ಬದುಕಿನ ಅಷ್ಟೂ ತೇವವನ್ನು ಒಣಗಿಸಿಬಿಡುತ್ತಿದೆ. ಇದು ಅಥ೯ವಾದ ದಿನದಿ೦ದ ಗ೦ಡಸರ ರಾತ್ರಿಗಳು ಕನಸಿನಾಚೆಗೂ ವಿಸ್ತರಿಸಿಯಾವು. ಆದರೆ ಅದನ್ನು ಅಥ೯ ಮಾಡಿಸೋಕೆ ಯಾವ "ಆ್ಯಪ್' ಡèನ್‍ಲೋಡ್ ಮಾಡಿಸೋಣ..?' ಹೆಚ್ಚಿನ೦ಶ ಎಲ್ಲ ಹೆಣ್ಣುಗಳ ಪ್ರತೀಕದ೦ತಿದ್ದ ರಾಜಿಯ ಮಾತಿಗೆ ನನ್ನಲ್ಲಿ ಉತ್ತರವಿರಲಿಲ್ಲ. ಸುಮ್ಮನೆ ಕೈಯೊತ್ತಿದೆ.
       ಕಾರಣ ಅವಳು ಎ೦ದರೆ...

ನಾಕೋ - ಒಂದು ಹಳ್ಳಿಯ ಕಥೆ  (ಪ್ರಜಾವಾಣಿ - ಫೆ.೧೪.೨೦೧೬ )

ಇಲ್ಲಿಂದ ಎಡಕ್ಕೆ ಉಸುರುಗಟ್ಟಿ ಓಡಿದರೆ ಚೀನಾದ ಗಡಿ. ಬಲಕ್ಕೆ ತಿರುಗಿದರೆ ಮುಗಿಲೆತ್ತರದ ಬೆಟ್ಟ. ಇದು ಸಾಧಾರಣ ಬೆಟ್ಟವಲ್ಲ. ಪದ್ಮಸಾಂಬಶಿವ ಧ್ಯಾನ ಮಾಡಿ ಗಿಡ ಮೂಲಿಕೆಗಳಿಂದ ಜನಜೀವನಕ್ಕೆ ಅಗತ್ಯದ ಔಷಧಿಯನ್ನು ಅವಿಷ್ಕಾರ ಮಾಡಿದ ಎನ್ನಲಾಗುವ ಪವಿತ್ರ ಔಷಧಿ ಬೆಟ್ಟ. ಇದುವರೆಗೂ ಯಾರೂ ಏರಿಲ್ಲ ಎಂದು ಹೇಳಲಾಗುವ, 22 ಸಾವಿರ ಅಡಿ ಎತ್ತರದ ಅಪರೂಪದ ಬೆಟ್ಟ. ಉತ್ತರಕ್ಕೆ ಲಡಾಕ್ಲೇಹ್ ವ್ಯಾಲಿಯ ಸರಹದ್ದು ಅರ್ಧ ಆವರಿಸಿದ್ದರೆ, ದಕ್ಷಿಣಕ್ಕೆ ಬಂದರೆ ಹಿಮಾಚಲದ ಸೆರಗಿನಲ್ಲಿ ಕಾಲಿಡುತ್ತೀರಿ.
ಇಂಥ ವಿಚಿತ್ರ ಭೌಗೋಳಿಕ ಪರಿಸರದಲ್ಲಿ, 13 ಸಾವಿರ ಅಡಿ ಎತ್ತರದಲ್ಲಿ ಹೆಚ್ಚಿನಂಶ ತಣ್ಣಗೆ ಮಲಗಿದಂತಿರುವ, ಆದರೆ ವಿದೇಶಿಯರಿಗೆ ಹೇಳಿ ಮಾಡಿಸಿದ ತಾಣ ನಾಕೋ’. ರಸಿಕರ ಕಣ್ಣಿಗಿದು ಅಪ್ಪಟ ಸ್ವರ್ಗ ಸದೃಶ ಪ್ರದೇಶ. ಹಿಮಾಚಲದ ಅತ್ಯಂತ ಎತ್ತರದ ಪರ್ವತ ಪ್ರದೇಶ ಇದರ ಬೆನ್ನಿಗಿದೆಅದೇ ರಿಯೋ ಪುರೈಲ್. ಇದರ ಪಾದಕ್ಕಿರುವುದೇ ನಾಕೋ ಸರೋವರ.
ನಾಕೋ ಎನ್ನುವ ಈ ಊರಿಗೆ ಕಾಲಿಡುತ್ತಲೇ ಜನ ಜುಲೇ... ಜುಲೇ...ಎನ್ನುತ್ತ ಸ್ವಾಗತಿಸುತ್ತಾರೆ. ಈ ಸ್ವಾಗತಕ್ಕೆ ಪರಿಚಯದ ಹಂಗಿಲ್ಲ. ಅಪರಿಚಿತರೇ ಹೆಚ್ಚಿನಂಶ ಈ ಊರಿಗೆ ಕಾಲಿಡುವುದು. ಜುಲೇ ಎಂದರೆ ಪ್ರಿಯರೇ ನಮಸ್ತೆಎಂದರ್ಥ. ಈ ಸ್ವಾಗತದ ಶಬ್ದವೇ ಲಡಾಖ್‌ನಿಂದ ಹಿಮಾಚಲದವರೆಗೂ ಮನುಷ್ಯ ಸಂಬಂಧಗಳನ್ನು ಬೆಸೆಯುತ್ತಿದೆ.
ಚಾರಣ ಮತ್ತು ಪ್ರಕೃತಿ ಪ್ರಿಯರ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣ ಈ ನಾಕೋ. ಸರೋವರ ಮತ್ತು ಹಸಿರು ಹೊದ್ದ ಬಟಾಣಿ ಗದ್ದೆಗಳು ಊರನ್ನು ಆವರಿಸಿವೆ. ಈ ಊರನ್ನು ನಡೆದುನೋಡುವುದೇ ಒಂದು ಸೊಗಸು. ದೂರದ ಗ್ರಾಂಫು ಮತ್ತು ಕಿಲಾಂಗ್‌ನಿಂದ ಇಲ್ಲಿಗೆ ನಡೆದು ಬರುವವರೂ ಇದ್ದಾರೆ. ಸೈಕಲ್ ಮತ್ತು ಬೈಕ್ ಸವಾರಿಗರೂ ಪೇಯಿಂಗ್ ಗೆಸ್ಟ್‌ಗಳಾಗುವುದು ಇಲ್ಲಿ ಸಹಜ. ಸುತ್ತ ಕಣ್ಣೆತ್ತರಕ್ಕೆ ಅಕ್ಕಪಕ್ಕದಲ್ಲೇ ಕೈಗೆ ತಾಕುವಂತಹ ಪರ್ವತದ ತುದಿಗಳು ಈ ಹಳ್ಳಿಯ ಪಕ್ಕೆಗಳಿಗೆ ತಗುಲಿ ನಿಂತಿರುವಂತೆ ಕಾಣಿಸುತ್ತವೆ. ಅಂದಹಾಗೆ, ಈ ನಾಕೋ ಯಾವಾಗಲೂ ಚಳಿಯಿಂದ ತತ್ತರಿಸುತ್ತಿರುತ್ತದೆ.
ಹದಿಮೂರು ಸಾವಿರ ಅಡಿ ಎತ್ತರದಲ್ಲಿರುವ ಪರ್ವತದ ತುದಿಯಲ್ಲಿ ಲಭ್ಯವಿರುವ ನಾಲ್ಕೈದು ಚ.ಕೀ.ಮೀ. ನೆಲದ ಮೇಲೆ ಹರಡಿಕೊಂಡ ಹಳ್ಳಿಯಲ್ಲಿ ಎಲ್ಲಿ ನಿಂತರೂ ಅದ್ಭುತ ನೋಟಗಳು ಎದುರಾಗುತ್ತವೆ. 1025ರ ಕಾಲದ ನಾಕೋ ಮಾನೆಸ್ಟ್ರಿಇಂದಿಗೂ ಚಟುವಟಿಕೆಗಳಿಂದ ಕೂಡಿದೆ. ಬೌದ್ಧ ಸನ್ಯಾಸಿಗಳು ಇಲ್ಲಿಂದ ಹೊರಟು ದೇಶದುದ್ದಗಲಕ್ಕೂ ಸಂಚರಿಸಿ ವಾಪಸ್ಸು ಇಲ್ಲಿಗೇ ಬರುತ್ತಾರೆ. ಟಾಬೋ ಮಾನೆಸ್ಟ್ರಿಎಂದೂ ಇದು ಪ್ರಸಿದ್ಧಿ ಪಡೆದಿದೆ. 1975ರಲ್ಲಿ ಸಂಭವಿಸಿದ ಭೂಕಂಪಕ್ಕೆ ಸಿಲುಕಿ ಇದು ಧರಾಶಾಯಿಯಾಗಿತ್ತು. ಅದಕ್ಕೆ ಮೊದಲು ಕೂಡಾ ಟಾಬೋನೆಲಕ್ಕುರುಳಿದೆ. ಪ್ರತಿಸಲವೂ, ಮೂಲ ವಾಸ್ತುಶೈಲಿ ಉಳಿಸಿಕೊಂಡು, ಆ ಕಟ್ಟಡದ ಸಾಮಗ್ರಿಗಳನ್ನು ಬಳಸಿಯೇ ಟಾಬೋವನ್ನು ಪುನರ್‌ ರೂಪಿಸಲಾಗಿದೆ ಎನ್ನುವುದು ವಿಶೇಷ.
ಇಲ್ಲಿಂದ ಮೂರೂವರೆ ಕಿ.ಮೀ. ದೂರದ ಚಾಂಗೊಗೊಂಪಾಇನ್ನೊಂದು ಪರ್ವತದ ಸೆರಗಿನಲ್ಲಿ ನಡೆದು ಪೂರೈಸಬಹುದಾದ ಕಾಲ್ದಾರಿ. ಹೆಚ್ಚಿನಂಶ ನಾಕೋದ ಪ್ರವಾಸಿಗರು ಮರುದಿನದ ಬೆಳಿಗ್ಗೆ ಈ ದಾರಿಯನ್ನು ಚಾರಣಕ್ಕಾಗಿ ಆರಿಸಿಕೊಳ್ಳುತ್ತಾರೆ. ಬೆಳಗಿನ ಮೋಡಗಳು ಇಲ್ಲಿ ನಮ್ಮನ್ನು ಸುತ್ತುವರೆದು ಉಸಿರುಗಟ್ಟಿಸುತ್ತವೆ. ಚಳಿಗಾಲದಲ್ಲಿ ಈ ಸರೋವರ ಸಂಪೂರ್ಣ ಹೆಪ್ಪುಗಟ್ಟುತ್ತದೆ. ಇದರ ಮೇಲೆ ಐಸ್ ಸ್ಕೇಟಿಂಗ್ ಆಟ ನಡೆಯುತ್ತದೆ.
ನವೆಂಬರ್‌ನಿಂದ ಫೆಬ್ರುವರಿಯವರೆಗೆ ಹೊರ ಜಗತ್ತಿನಿಂದ ಸಂಪೂರ್ಣವಾಗಿ ಸಂಪರ್ಕ ಕಡಿದುಕೊಳ್ಳುವ ಹಳ್ಳಿಯ ಜನರು ಬದುಕುವ ಪರಿ ಅನನ್ಯ. ಮಾರ್ಚ್ ಕೊನೆಯ ವಾರದಿಂದ ಸೆಪ್ಟಂಬರ್ ಕೊನೆಯವರೆಗೆ ಪ್ರವಾಸಿಗರಿಗೂ ಚಾರಣಿಗರಿಗೂ ಸಕಾಲ. ನಾಕೋದಲ್ಲಿನ ಜನರ ಸಂಖ್ಯೆ ಒಂದು ಸಾವಿರವನ್ನೂ ದಾಟುವುದಿಲ್ಲ. ಆದರೆ, ಹೆಚ್ಚಿನವರ ಮನೆಗಳೆಲ್ಲ ಪೇಯಿಂಗ್ ಗೆಸ್ಟ್ ಹೌಸುಗಳಾಗಿ ಅತಿಥಿಗಳ ನಿರೀಕ್ಷೆಯಲ್ಲಿರುತ್ತವೆ. ಅಪ್ಪಟ ಸಾಂಪ್ರದಾಯಿಕ ಶೈಲಿಯ ಕಲ್ಲಿನ ಮನೆಗಳು ಇಲ್ಲಿ ಹೆಚ್ಚು.
ಹೆಚ್ಚಾಗಿ ಇಸ್ರೇಲ್ ಮತ್ತು ಇಟಲಿ ಪ್ರವಾಸಿಗರಿಗೆ ಮನೆಗಳಲ್ಲಿ ಆಶ್ರಯ ಕಲ್ಪಿಸಿ ವೃತ್ತಿ ಮತ್ತು ಬದುಕು ಎರಡನ್ನೂ ನಡೆಸುತ್ತಿರುವ ನಾಕೋ ನಾಗರಿಕರಿಗೆ ಹಸಿರು ಬಟಾಣಿ ಮತ್ತು ಬಟಾಟೆ ಪ್ರಮುಖ ಬೆಳೆಗಳು. ಎರಡು ವರ್ಷದ ಹಿಂದೆ ಬಂದ ಮೊದಲ ಪೆಟ್ರೋಲ್ ಬಂಕ್ ಇಲ್ಲಿನ ಅತಿ ದೊಡ್ಡ ಸುಧಾರಣೆ. ಉಳಿದಂತೆ ದೂರದ ಕಾಝಾ ಪಟ್ಟಣವನ್ನು ಇಲ್ಲಿನ ಜನರು ಪ್ರತಿಯೊಂದಕ್ಕೂ ಅವಲಂಬಿಸಬೇಕು.
ಹಿಮಾಚಲದ ಕಾಝಾದಿಂದ ಸ್ವಂತ ವಾಹನದ ಬಲವಿಲ್ಲದಿದ್ದರೆ ನಾಲೋ ತಲುಪಲೇ ದಿನಗಟ್ಟಲೇ ವ್ಯಯಿಸಬೇಕಾಗುತ್ತದೆ. ಆಗೀಗ ಮಾತ್ರ ಸಿಕ್ಕುವ ಹಿಮಾಚಲ ಪರಿವಾಹನನಂಬಿಕೊಂಡರೆ ಸಮಯ ಸರಿದುಹೋಗುತ್ತಿರುತ್ತದೆ. ಅತ್ಯಂತ ಶಾಂತ ಮತ್ತು ಚಿಕ್ಕ ಊರಾದ ನಾಕೋಗೆ ಭೇಟಿ ಕೊಡುವುದು ಜೀವನದ ಒಂದು ಅವಿಸ್ಮರಣೀಯ ಅನುಭವ.
 

Friday, February 12, 2016

ತರ್ಸರ್ ಮರ್ಸರ್.
ಸಂತೋಷಕುಮಾರ ಮೆಹೆಂದಳೆ.
ಅಲ್ಲಿ ಅಗಾಧ ಎತ್ತರದ ಪರ್ವತದ ಏರು ದಾರಿಯಿದೆ, ವ್ಯಾಲಿ ಆಫ್ ಪ್ಲಾವರ್‍ಗೆ ಸೆಡ್ಡು ಹೊಡೆಯುವ ಹೂ ಕಣಿವೆಗಳಿವೆ. ಜೀವನದಲ್ಲೊಮ್ಮೆಯಾದರೂ ಅನುಭವಿಸಬೇಕೆನ್ನುವ ಮೈಲುಗಟ್ಟಲೆ ಮಂಜಿನ ಹುಡಿಯ ಹಿಮ ಅಲ್ಲಿ ಸುರಿಯುತ್ತಿರುತ್ತದೆ. ನಡೆದಷ್ಟೂ ದೂರದಲ್ಲಿ ದೇವತೆಗಳ ಸ್ನಾನಕ್ಕೆ ಒಂದೆರಡಲ್ಲ ಸಾಲು ಸಾಲು ಸರೋವರಗಳು ತಿಳಿಯಾಗಿ ಸಾಲು ಸಾಲಾಗಿ ಕಾದಿವೆ. ಅದೆಲ್ಲಕ್ಕೂ ಮಿಗಿಲಾಗಿ ಒಂಚೂರೇ ಚೂರು ಬೇಕೆಂದರೂ ಗಲೀಜು, ಮಾಲಿನ್ಯ, ಪ್ಲಾಸ್ಟಿಕ್ಕು ಅಲ್ಲಿ ಸಿಕ್ಕುವುದಿಲ್ಲ. ಹಾಗಂತ ಸುಲಭಕ್ಕೆ ಬಾಟಲಿ ಒಯ್ದಿಟ್ಟುಕೊಂಡು ಪಾರ್ಟಿಗೆ ಕೂರಲೂ ಸಾಧ್ಯವಿಲ್ಲ. ಕಾರಣ ಹೀಗೆ ಹೋಗಿ ಹಾಗೆ ಬಂದೆನ್ನಲಾಗುವುದಿಲ್ಲ. ಹಾಗಂತ ಹೋಗದೆ ಉಳಿದರೆ ಬಹುಶ: ಪ್ರವಾಸಿಯೊಬ್ಬನ ಜೀವಮಾನದ ನಷ್ಟವೂ ಹೌದು ಅದು.
ಅದು ತರ್ಸರ್ ಮರ್ಸರ್ ..
ಕಾಶ್ಮಿರ ಕಣಿವೆಯ ತುತ್ತ ತುದಿಯಲ್ಲಿ ಇವತ್ತಿಗೂ ಅನಾಮಧೇಯವಾಗಿ ಕೇವಲ ಚಾರಣಿಗರ ಮತ್ತು ಆಸಕ್ತಿಯಿಂದ ಹುಡುಕಿ ಹೋಗುವವರಿಗೆ ಮಾತ್ರ ಲಭ್ಯವಾಗುತ್ತಲಿದೆ. ಸಾಮಾನ್ಯವಾಗಿ ಶ್ರೀನಗರದಿಂದ ಪೆಹಲ್ಗಾಂವ್ ಮಾರ್ಗವಾಗಿ ಈ ಸ್ಥಳವನ್ನು ಹುಡುಕಿ ಹೋಗುವವರು ಜಾಸ್ತಿ. ಆದರೆ ನಾನು ಶ್ರೀನಗರದಿಂದ ಭಿಜ್‍ಬೇರ್ ಮಾರ್ಗವಾಗಿ ತಲುಪಲು ಸಲಹೆ ಕೊಡುತ್ತೇನೆ. ಕಾರಣ ಈ ಮಾರ್ಗದಲ್ಲಿ ಕ್ರಮಿಸುವಾಗ ಸಿಕ್ಕುವ ನೈಜ ಕಾಶ್ಮೀರ ಮತ್ತು ಅತ್ಯಂತ ಸ್ವಚ್ಚ ಭಾರತದ ಹಸಿರು ಪರಿಸರ, ಬಹುಶ: ಇದಕ್ಕಿಂತ ಶುದ್ಧ ಸರೋವರ ಜಾಲ ತಾಣ ಇನ್ನೊಂದೆಡೆಯಲ್ಲಿ ಸಿಗಲಿಕ್ಕಿಲ್ಲ ಎನ್ನುವುದು ನನ್ನ ಹಲವು ಚಾರಣದ ಅನುಭವದ ಮಾತು.
ಬೇಸ್‍ಕ್ಯಾಂಪ್ ಆಗಿ ಅರು(ಪೆಹೆಲ್ ಗಾಂವ್‍ನಿಂದ ಹನ್ನೆರಡು ಕಿ.ಮೀ.)ವಿನಲ್ಲಿ ಉಳಿದುಕೊಂಡು ಹೊರಡುವ ಮುನ್ನ ಪಾಸ್‍ಪೆÇೀರ್ಟ್ ಪ್ರತಿ, ಅಗತ್ಯದ ಔಷಧಿ ಇತ್ಯಾದಿಗಳನ್ನು ಒಬ್ಬ ಪಕ್ಕಾ ಚಾರಣಿಗನಿಗೆ ಇರಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳಲೇಬೇಕು. ನಂತರದಲ್ಲಿ ಯಾವ ರೀತಿಯ ಸಂಪರ್ಕದ ಸಾಧ್ಯತೆ ಅಲ್ಲಿರುವುದಿಲ್ಲ. ಯಾವುದೇ ಮೊಬೈಲ್ ಅಥವಾ ಸಂಪರ್ಕ ಸಾಧನದ ಬೆಂಬಲ ಇಲ್ಲಿಲ್ಲ.
ಅರುವಿನಿಂದ "ಲಿದ್ಢರ್ ವಾಟ್" ಮೂಲಕ ಸುಮಾರು ಆರು ತಾಸುಗಳನ್ನು ಕ್ರಮಿಸಿದರೆ ಅಧ್ಬುತವಾದ ಹಂತ ಪೂರೈಸಿದಂತಾಗುತ್ತದೆ. ಈ ಲಿದ್ದರ್‍ವಾಟ್ ಒಂದು ಚೆಂದದ ಹಳ್ಳಿ. ಅರುವಿನಿಂದ ಹೊರಟು ಇಲ್ಲಿಗೆ ತಲುಪುವವರೆಗೂ ಈ ಲಿದ್ದರ್ ನದಿಯ ಎಡದಂಡೆಯ ಮೇಲೆ ನಮ್ಮ ಪಯಣ ಸಾಗುತ್ತಿರುತ್ತದೆ.
 ಮರುದಿನ "ಲಿದ್ದರ್ ವಾಟ್"ನಿಂದ "ಶೇಕ್ವಾ" ಹಳ್ಳಿಗೆ ಸುಮಾರು 12000 ಅಡಿ ಎತ್ತರಕ್ಕೆ ಏರು ಮುಖದ ಚಲನೆ. ಇದಕ್ಕಾಗಿ 6 ಕಿ.ಮೀ. ಅಂತರಕ್ಕಾಗಿ ನಾಲ್ಕು ತಾಸು ತಗಲುತ್ತದೆ. ಮಧ್ಯದಲ್ಲಿ ಯಾವುದೇ ಸೌಕರ್ಯವೂ ಇಲ. ಅಲ್ಲಲ್ಲಿ ಚಹ ಮತ್ತು ರೋಟಿದಾಲ್‍ನ್ನು ಪೂರೈಸುವ ಚಿಕ್ಕ ಗುಡಿಸಲುಗಳಿವೆ. ಇಂಥಾ ತಂಗುದಾಣಗಳನ್ನು ಅವುಗಳನ್ನು "ಗುಜ್ಜರ್ ಹಟ್" ಎಂದು ಕರೆಯುತ್ತಾರೆ. ಇಲ್ಲಿ ಚಹ ಮತ್ತು ಬಿಸ್ಕೆಟು ಲಭ್ಯ.
ಶೇಕ್ವಾದಿಂದ ಚಾರಣದಾರಿ ಅನಾಮತ್ತು ಐದು ತಾಸಿನದು. ಅದಾದ ಮರುಕ್ಷಣ ಅಧ್ಬುತ ತರ್ಸರ್ ಕಣ್ಣೆದುರಿಗೆ ಇರುತ್ತದೆ ಯಾವ ಜಾಗದಲ್ಲಿ ನಿಂತರೂ ಚಿತ್ರ ತೆಗೆಯಲು ಸೆಲ್ಫಿಗೆ ಕೊರತೆಯಿಲ್ಲ. ಅದಕ್ಕಾಗೇ ಚಿಕ್ಕ ಅಂತರ ಕೂಡಾ ಅಗಾಧ ಸಮಯ ಬೇಡುತ್ತದೆ. 14000 ಅಡಿ ಎತ್ತರದಲ್ಲಿ ಸರ್ವವೂ ಹಿಮಗಟ್ಟುತ್ತಿರುವಾಗ ಈ ಸರೋವರ ಮಾತ್ರ ನೀರಾಗಿ ನೀಲಿ ಅಗಸ ಪ್ರತಿಫಲಿಸುತ್ತಾ ನಿಂತಿರುತ್ತದೆ. ಅಧ್ಬುತ ಮತ್ತು ಪ್ರಕೃತಿಯ ಒಂದು ಸುಂದರ ಕಲ್ಪನೆಗೆ ಸಾಕ್ಷಿಯಾಗಲು ಇಲ್ಲಿ ಮಾತ್ರ ಸಾಧ್ಯ. ತರ್ಸರ್ ಪ್ರಕೃತಿಯ ವಿಸ್ಮಯವೂ ಹೌದು. ಈ ಎತ್ತರಕ್ಕೇ ಏರಿ ನಿಲ್ಲುವ ವೇಳೆಗಾಗಲೇ ಪ್ರವಾಸಿಯೊಬ್ಬನ ಉಸಿರು ನೆತ್ತಿಗೇರಿರುತ್ತದೆ.
ತರ್ಸರ್ ಹಿಂದೇಯೆ ಮರ್ಸರ್ ಇದ್ದು ಅದನ್ನು ಮತ್ತೆ ಮರುದಿನದ ಐದು ತಾಸಿನ ಏರು ಮುಖ ಚಾರಣದ ದಾರಿ ಕ್ರಮಿಸಲೇಬೇಕು. ಆದರೆ ಅಧ್ಬುತ ಹಸಿರಿನ ಚಳಿಯ ಮಧ್ಯೆ ಒಳಗೊಳಗೇ ಬೆವರುತ್ತಾ ಸಾಗುವಾಗ ಯಾವ ಎತ್ತರವೂ ಎದುರಿಗೆ ನಿಲ್ಲುವುದಿಲ್ಲ. ಅದಕ್ಕಿಂತಲೂ ಮಿಗಿಲು ಮರ್ಸರ್‍ನ ದಾರಿಯಲ್ಲಿ ಸಿಕ್ಕುವ "ಸುಂದರ್‍ಸರ್" ಇನ್ನೊಂದು ಭೂ ಮುಖದ ಅಧ್ಬುತ. ಇಲ್ಲಿಂದ ಮುಂದಿನ ದಾರಿಯೆಲ್ಲಾ ಭೂ ಸ್ವರ್ಗ ಎಂದರೂ ತಪ್ಪೇನಿಲ್ಲ. ಅಗಾಧ ಇಳಿಜಾರಿನ ಹಿಮದ ಜಾರು ಹಾದಿ ಹೆಚ್ಚಿನಂಶ ಕೆಲವೊಮ್ಮೆ ಹಗ್ಗದ ಸಹಾಯ ಹಾಗು ರ್ಯಾಪ್ಪೆಲಿಂಗ್ ಸಹಾಯವನ್ನೂ ಬೇಡುತ್ತದೆ. ಕಾರಣ ಈ ಅಂತರವನ್ನು ರಾಪೇಲಿಂಗ್ ಮೂಲಕ ಇಳಿಯುವದಾದಲ್ಲಿ ತಾಸುಗಟ್ಟಲೇ ನಡಿಗೆಯ ಮೂಲಕ ಕ್ರಮಿಸುವುದನ್ನು ತಪ್ಪಿಸಬಹುದು. ಇದೆಲ್ಲದರ ಸಾಹಸಕಾರಿ ಯಾತ್ರೆ ಮಾಡಿಸುವ ಸುಂದರ್‍ಸರ್‍ನಿಂದ ಮರ್ಸರ್‍ದ ದಾರಿ ನಿಸರ್ಗದ ರಹಸ್ಯಗಳಲ್ಲಿ ಒಂದು.
ಹಾಗೆ ವಾಪಸ್ಸು ಹೊರಟು ಹೊರಳು ಹಾದಿಯಲ್ಲಿ ಮರ್ಸರ್‍ನಿಂದ ಸುಂದರ್‍ಸರ್ ತಲುಪಿ ಒಂದು ಕಷ್ಟಕರವಾದ ಅಡ್ಡದಾರಿಯ ಮೂಲಕ ಕೆಳಕ್ಕಿಳಿಯತೊಡಗಿದರೆ ಒಂದೇ ದಿನದಲ್ಲಿ ಸೋನಾಮಾತಿ ತಲುಪುತ್ತೇವೆ. ಆದರೆ ಕಿ.ಮಿ.ಗಟ್ಟಲೇ ಹಿಮದ ಹಾದಿಯನ್ನು ಜರಿದು ಕ್ರಮಿಸುವಾಗ ಆಯ ತಪ್ಪುವ, ಆ ಮೂಲಕ ಕಣಿವೆಯ ಆಳಗಳಿಗೆ ಬಿದ್ದು ಹೋಗುವ ಅಪಾಯವಿದ್ದೇ ಇದೆ. ಸ್ಥಳೀಯರು ಅಥವಾ ನುರಿತ ನಾಯಕನ ಅಗತ್ಯತೆ ಈ ಚಾರಣಕ್ಕೆ ಆಗತ್ಯ. ಹಿಮದ ಅಪಾಯಕಾರಿ ಕುಳಿಗಳ ಆಳ ಅಗಲದ ಅರಿವು ಸಾಮಾನ್ಯ ಪ್ರವಾಸಿಗಾಗುವುದಿಲ್ಲ.
ಅದಾಗ್ಯೂ ಪ್ರಕೃತಿಯ ಅಪರೂಪದ ಸೃಷ್ಠಿ ಸೌಂದರ್ಯವನ್ನು ಅನುಭವಿಸಲೇಬೇಕೆನ್ನುವ ಮತ್ತು ಅಂತಹ ಅನುಭೂತಿಗೆ ಈಡಾಗುವ ದಾರಿಯಲ್ಲಿ ಸಣ್ಣ ಪುಟ್ಟ ಸಾಹಸಗಳು ಅನಿವಾರ್ಯವೂ ಹೌದು. ಕಾರಣ ತರ್ಸರ್ ಮರ್ಸರ್ ಪ್ರವಾಸದ ಒಂದು ವರ್ಷದ ನಂತರವೂ ಅದರ ನಡಿಗೆಯ ಅನುಭವ ನಿನ್ನೆಯಷ್ಠೆ ಹೋಗಿದ್ದೆನ್ನಿಸುವಷ್ಟು ಹಸಿರಾಗಿಸಿರುತ್ತದೆ.


Saturday, February 6, 2016

ಸುಖದ ಸೋನೆಯಲ್ಲಿ ಹಿಮದ ಹನಿಗಳು...
ಅರಿವಾಗದ ಕಳೆದುಹೋಗುವ ಮತ್ತು ಜೀವನದ ಬಹುಪಾಲನ್ನು ಸೇವೆಯಲ್ಲಿ ಅಥವಾ ಇನ್ನಾವುದೋ ಹುಸಿತೃಪ್ತಿಗೆ ತಮ್ಮ ಅಮೂಲ್ಯ ಘಳಿಗೆಗಳನ್ನು ಕಳೆದುಕೊಂಡವರೇ ಹೆಚ್ಚು. ಆದರೆ ಹೀಗಾ ಎಂದು ವಾಸ್ತವಕ್ಕೆ ತೆರೆದುಕೊಳ್ಳುವ ಹೊತ್ತಿಗೆ ತುಂಬ ತಡವಾಗಿರುತ್ತದೆ. ವಿಪರ್ಯಾಸವೆಂದರೆ ಇವೆಲ್ಲ ಯಾವ ಡೊಮೆಸ್ಟಿಕ್ ವಯಲೆನ್ಸಿನ ಡೆಫಿನಿಶನ್ನಿಗೂ ದೊರಕುವುದಿಲ್ಲ.


‘ನೀನು ಬರಿತಿಯ, ಅಂಥಾ ದೊಡ್ಡ ಹೊಡೆತಗಳಿಗೂ, ಸಲ್ಲದ ಸಂಕಟಗಳಿಗೆ ಈಡಾಗೋದೇನೂ ದೊಡ್ಡದಲ್ಲ. ಆದರೆ ಕಲಿತು, ದುಡ್ಡು ದುಗ್ಗಾಣಿ ಎಲ್ಲ ಇದ್ದರೂ ನೆಮ್ಮದಿ ಅನ್ನೋದು ಅಂದ್ರೆ ಏನು ಎನ್ನುವುದನ್ನೇ ಗೊತ್ತಿಲ್ಲದಿರೋರೂ ಇದಾರೆ. ಅದು ಗೊತ್ತಾಗುವ ಹೊತ್ತಿಗಾಗಲೇ ಬದುಕೇ ಕಳೆದುಹೋಗಿರುತ್ತೆ ಗೊತ್ತಾ..?’ ಎಂದಾಕೆ ಹೇಳಿದಾಗ ಒಮ್ಮೆ ಯೋಚಿಸುವಂತಾಗಿದ್ದು ಹೌದು.
ಕಾರಣ ಶಾಂತಕ್ಕ ಪ್ರಥಮ ದಿನದಿಂದಲೂ ‘ಅವಳು..’ ಅಂಕಣವನ್ನು ಹಿಂಬಾಲಿಸಿದ್ದೇ ಅಲ್ಲದೇ ಒಂದು ಹಂತದಲ್ಲಿ ಪರಿಚಯಕ್ಕೀಡಾದರೂ ಯಾವತ್ತೂ ಹೀಗೂ ಇರುತ್ತದೆ, ಸಂಸಾರದ ಒಳಸುಳಿಗಳಲ್ಲಿ ಹೀಗೂ, ಗೊತ್ತೇ ಆಗದ ಮೌನಸಂಕಟಗಳಿರುತ್ತವೆನ್ನುವ ಸುಳಿವೂ ಕೊಡದ ಗಟ್ಟಿಗಿತ್ತಿ. ಅಸಲಿಗೆ ಅವೆಲ್ಲವೂ ಆಕೆಗೂ ಅರ್ಥವಾಗತೊಡಗಿದ್ದೇ ಇತ್ತೀಚೆಗೆ. ನನ್ನ ಲೇಖನದ ಹಲವು ನಾಯಕಿಯರನ್ನು ತಾನೇ ಪತ್ತೆ ಹಚ್ಚಿ ‘ಇದು ಇವರೇನಾ.. ನಂಗೆ ಗೊತ್ತು..’ ಎಂದು ಅಚ್ಚರಿಗೀಡು ಮಾಡುತ್ತಿದ್ದ ಅಪ್ಪಟ ಚಿಕ್ಕಮ್ಮನಂತಹ ಹೆಣ್ಣುಮಗಳು ಶಾಂತಕ್ಕ. ‘ಹೌದು ಇದು ಅವಳದ್ದೇ. ಆದ್ರೆ ಪಂಚಾಯ್ತಿಕೆ ಎಲ್ಲ ಯಾಕೆ ಮಾಡ್ತಿ ಸುಮ್ನಿರು ಮಾರಾಯ್ತಿ’ ಎನ್ನುತ್ತಿದ್ದ. ಅದರೆ ಅದ್ಯಾಕೊ ಶೈಲತ್ತೆಯ ಕಥೆಯನ್ನು ಓದುತ್ತಿದ್ದಂತೆ, ಶಾಂತಕ್ಕ ತಡೆಯಲಾರದೆ ಅನ್ನಿಸಿದ್ದನ್ನು ಹೇಳಿಕೊಂಡಿದ್ದಳು. ಇದೇನೂ ಹೊಸದಲ್ಲ ಆದರೂ ಇಂಥದ್ದಲ್ಲ ಡೊಮೆಸ್ಟಿಕ್ ವಯಲೆನ್ಸ್‌ನ ಡೆಫಿನಿಶನ್ನಿಗೂ ಸಿಕ್ಕುವುದಿಲ್ಲ. ಇಂಥಾ ಕೇಸುಗಳಲ್ಲಿ ಯಾವ ರೀತಿಯ ಆರೋಪಕ್ಕೂ, ದೌರ್ಜ್ಯನಕ್ಕೂ ಬೆರಳು ಮಾಡಲು ಅವಕಾಶವೇ ಇರುವುದಿಲ್ಲ.
ಕಾರಣ ಗಂಡ, ಮಾವ, ಸಂಭಾವಿತ ಅತ್ತೆ ಎಲ್ಲರೂ ಯಾವತ್ತೂ ಜಗಳವಾಡುವುದಿಲ್ಲ. ಬೈಯ್ಯುವುದಿಲ್ಲ. ದೈಹಿಕ ಹಿಂಸೆ ಇಲ್ಲವೇ ಇಲ್ಲ. ಅನಾವಶ್ಯಕ ಹೀಗಳೆಯುವುದಿಲ್ಲ ಕಡೆಗೆ ಉಪವಾಸ ಕೆಡುವುತ್ತಾರೆ ಎಂದಾದರೂ ಹೇಳೋಣ ಎಂದರೆ ಯಾವತ್ತೂ ಇಷ್ಟ್ಯಾಕೆ ತಿಂದೆ ಎಂದೂ ಪ್ರಶ್ನಿಸಿದ್ದಿಲ್ಲ. ಆಯ್ತಲ್ಲ ಇನ್ನೇನು ಪ್ರಾಬ್ಲಮು..? ನೀನೆ ಒಂಚೂರು ಹೊಂದ್ಕೊಂಡು ಹೋಗಮ್ಮ ಎಂದು ಬಿಡುತ್ತಾರೆ ಮಧ್ಯದಲ್ಲಿ ಇದ್ದವರು. ಅಲ್ಲಿಗೆ ಬದುಕು ಅಪೂಟು ಬಂಧಿಖಾನೆಯಂತಾಗಿ ಬಿಡುತ್ತದೆ. ಹೊರಗಡೆಗೆ ಯಾವುದೂ, ಯಾರಿಗೂ ಇದು ಸಂಕಟ ಎನ್ನಿಸುವುದೇ ಇಲ್ಲ. ಮನೆ.. ಮಕ್ಕಳು.. ಹೊಟ್ಟೆ ಬಟ್ಟೆಗೆ.. ಆಗೀಗ ದೇಹಕ್ಕೂ ಅಡುಗೆ ಮನೆಗೆ ಸಾಮಾನು ಒದಗಿಸಿದಂತೆ ನಿಮಿಷಗಳ ಕಾಲ ಪೂರೈಸಿಬಿಡಬಹುದಾದ ಸಾಂಗತ್ಯದ ನಿರಂತರತೆಯ ಮಧ್ಯದಲ್ಲಿ ತುಂಬ ಸೂಕ್ಷ್ಮ ಅನುಭವಗಳಿಗೂ, ಶಾಂತಕ್ಕನ ಜಾಗದಲ್ಲಿ ನಿಂತಾಗಲೇ ಗೊತ್ತಾಗೋದು ನಿರುಮ್ಮಳ ನೆಮ್ಮದಿಗೂ, ಸಹಜ ಸುಖಕ್ಕೂ ಇರುವ ವ್ಯತ್ಯಾಸ.
ಶಾಂತಕ್ಕನದು ತೀರ ದೊಡ್ಡದಲ್ಲದಿದ್ದರೂ ಅತ್ತೆ, ಮಾವ ಮತ್ತು ನಾದಿನಿಯರ ನಡುವಿನ ಕೂಡು ಕುಟುಂಬ ಆಕೆಗೆ ಹೊಸದೇನೂ ಆಗಿರಲಿಲ್ಲ. ಮೊದಮೊದಲು ಹೊಸ ಹುಡುಗಿ ಮತ್ತು ಓಡಾಟದಲ್ಲಿ ಮಕ್ಕಳು ಎಂದೆಲ್ಲ ಅಷ್ಟಾಗಿ ಯಾವಾಗಲೂ ವೈಯಕ್ತಿಕ ಹಿತಾಸಕ್ತಿಯ ಮತ್ತು ಬದುಕಿನ ಬದಲಾವಣೆಗಳು, ಬೇಕು ಬೇಡಗಳ ಚಿಂತನೆ ಅವಗಾಹನೆಗೆ ಬಂದಿದ್ದೇ ಇಲ್ಲ.
ತೀರ ಬೆಳಗ್ಗೆ ಎದ್ದಗಿಂದಲೂ ಎಲ್ಲರಿಂದಲೂ ಏನಾದರೊಂದು ಕಮೆಂಟ್ ಕೇಳಿಸಿಕೊಳುತ್ತಲೇ ಇರುವುದಿದೆಯಲ್ಲ. ಅದು ಎಂಥಾ ಕಿರಿಕಿರಿ ಮಾಡಿಬಿಡುತ್ತದೆಂದರೆ ಉಣ್ಣಲಾರೆ ಉಗಿಯಲಾರೆ ಎಂಬಂತೆ, ಚಪಾತಿ ಹಿಟ್ಟು ಕಲೆಸಿದರೆ ಜಾಸ್ತಿ ಬ್ಯಾಡ ಸಂಜೆಗೆ ಬೇರೆ ಕಲಿಸಿಕೊಂಡರಾಗಿತ್ತು ಗಟ್ಟಿಯಾಗಿ ಬಿಡುತ್ತಮ್ಮ.. ಎನ್ನುವ ಅತ್ತೆಯ ಮಾತಿಗೆ ಎದುರಾಡುವುದಾರೂ ಹೇಗೆ..? ಅದರಲ್ಲಿ ದೂರುವಂತಹದ್ದೇನೂ ಇಲ್ಲವೇ ಇಲ್ಲ. ಸರಿ ಬೆಳಗ್ಗೆಗೆ ಸಾಕು ಸಂಜೆಗೆ ಬೇರೆ ಕಲಿಸಿಡೋಣ ಎಂದುಕೊಂಡ ದಿನ ‘ಹೆಚ್ಚೇ ಕಲಿಸಿಬಿಡಬೇಕಿತ್ತಮ್ಮ.. ಸಂಜೆ ನೀನು ಹೊರಗೆದರೂ ಹೋದರೆ ನಾನೇ ನಾಲ್ಕು ಬೇಯಿಸುತ್ತಿದ್ದ..’ ಎನ್ನುವ ಮಾತಿಗೆ ಹೇಗೆ ಸಮಜಾಯಿಷಿ ಕೊಡುತ್ತೀರಿ..?
ಬಟ್ಟೆ ಮಡಚಿಡುವುದು ಬೇಡಾಗಿತ್ತು ಅವರವರ ಅಭ್ಯಾಸ ಅವರವರೇ ಕಲಿತುಕೊಳ್ಳಬೇಕು. ಎಂದಿದ್ದಕ್ಕೆ ಎರಡ್ಮೂರು ದಿನದಿಂದ ಬಟ್ಟೆಗಳನ್ನು ಅಲ್ಲಿಯೇ ಬಿಟ್ಟರೆ, ‘ಅವರವರ ಜಾಗಕ್ಕೆ ಒಯ್ದು ಕೊಟ್ಟು ಬಿಡಮ್ಮ. ಇಟ್ಟುಕೊಳ್ಳೊದನ್ನು ಕಲಿಯಲಿ..’ ಎಂದರೆ ಮಡಚಿಡುವುದಕ್ಕೂ ಕೊಡುವುದಕ್ಕೂ ಏನು ವ್ಯತ್ಯಾಸವೋ..? ಸತತ ಅಡುಗೆ ಮನೆ ಹಾಲ್..ಅಲ್ಲಿಂದ ಟೇರಸ್ ಹೀಗೆ ಎಡೆಯೂ ಹಿಂದಿದೆ ಅಲೆಯುತ್ತಾ ಕೆಲಸದಲ್ಲಿ ಕಸರನ್ನೂ, ಸಹಾನುಭೂತಿಯನ್ನೂ ಒಟ್ಟೊಟ್ಟಿಗೆ ವ್ಯಕ್ತಿಪಡಿಸಿದರೆ ಅದನ್ನು ಪರಿಗಣಿಸುವ ಬಗೆಯಾದರೂ ಯಾವ ತರಹದ್ದು..? ಉತ್ತರ ಯಾವ ಹೆಣ್ಣೂ ಕೊಡಲಾರಳು. ಯಾವ ಕರೆ ಬಂದರೂ ‘ಯಾರದಮ್ಮ..? ಫೋನ್’ ಎಂದು ಮುಗುಮ್ಮಾಗಿ ಪ್ರಶ್ನೆಯನ್ನು ಎದುರಿಸುವ, ಹಿಂದೆಯೇ...‘ಯಾಕಂತೆ..?’ ಎಂದೆಲ್ಲ ಸಂದೇಹಗಳಿಗೆ, ಆಗೆಲ್ಲ ಉಂಟಾಗುವ ಸಣ್ಣ ಅಸಹನೆಗೆ ಯಾವ ಕೌನ್ಸೆಲ್ಲಿಂಗ್ ಉತ್ತರ ಕೊಡುತ್ತೆ..?
ಗಂಡನೊಡನೆ ಒಂದಿಷ್ಟು ಮಾತುಕತೆ ಆಡುವ ಹೊತ್ತಿಗೆ ‘ಇದೊಂಚುರು ಓದಿ ಹೇಳಮ್ಮ. ಸಂಜೆ ಹೊತ್ತಿಗೆ ಸರಿಯಾಗಿ ಕಾಣ್ತಿಲ್ಲ..’ ಎಂದು ಆತ್ಮೀಯತೆಯಿಂದ ಎದುರಿಗೆ ಕೂರಿಸಿಕೊಂಡರೇ ಯಾವ ಮಾನಸಿಕ ಹಿಂಸೆ ಕಾಣಿಸಲು ಸಾಧ್ಯ..? ತರಕಾರಿ ಇತ್ಯಾದಿಗೆ ಹೊರಗಡೆ ಹೋಗುವಾಗ ಗಂಡನೊಡನೆ ಹೋದದ್ದೇ ಆದಲ್ಲಿ ಅದೇ ಹೊತ್ತಿಗೆ ಮುಂದಿನ ಬಾರಿ ಹೋಗುವಾಗ ಮನೆಯಲ್ಲಿದ್ದವರಿಗೂ ಏನೋ ಖರೀದಿ ಮಾಡಲೇ ಬೇಕಿರುತ್ತೆ.
‘ಅರುಣ.. ನಾನೂ ಬರ್ತೀನೋ. ಎರ್ಡ್ಮೂರು ಸರ್ತಿ ನೀನು ಕಾರು ಓಡಿಸೋದೇನೂ ಬೇಡ. ಸುಮ್ಮನೆ ಪೆಟ್ರೋಲ್ ವೇಸ್ಟು. ಮೇನ್‌ರೋಡ್ ಹತ್ತಿರ ಇರೋ ಅಂಗಡಿಯಿಂದ ಮುಂದಿನ ವಾರದ ಪೂಜೆ ಸಾಮಾನು ತಂದು ಬಿಡೋಣ.. ಬರೋ ಹಬ್ಬಕ್ಕೆ ಹತ್ತಿ ತರ್ಬೇಕು.. ಬ್ಲೌಸ್ ಪೀಸು ಹೊಲೆಯೊಕೆ ಕೊಟ್ಟಿದ್ದೆ. ಏನಾಯಿತು ವಿಚಾರಿಸ್ತೀನಿ.’ ಎನ್ನುತ್ತಾ ಕೊನೆಗೊಮ್ಮೆ ‘ಹೊರಗೆಲ್ಲ ತುಂಬಾ ಚಳಿ ಗಾಳಿ ಶಾಂತ. ಬರೀ ಕೊತಂಬ್ರಿ ತರೋಕೆ ನೀನ್ಯಾಕಮ್ಮ ಬರಬೇಕು..? ನಾನೇ ಹೋಗ್ತಿದಿನಲ್ಲ ತರ್ತೀನಿ..’ ಎಂದಾಗ ನನ್ನೆಡೆಗಿದ್ದುದು ಕಾಳಜಿ ಅಥವಾ ಕಾರಸ್ಥಾನ ಎಂದು ಹೇಗೆ ಖಚಿತಪಡಿಸುವದು..?
ಯಾರಾದರೂ ಬಂದಾಗ ಹೋದಾಗ, ಯಾವ ಕೆಲಸವನ್ನೂ ಮಾಡಲು ಕೊಡದೇ, ಅಡುಗೆಯ ಅಷ್ಟೂ ಜವಾಬ್ದಾರಿ ವಹಿಸಿಕೊಳುವ ಅತ್ತೆ, ಮಾತಿಗೊಮ್ಮೆ ನನ್ನನ್ನು ನಮ್ಮಪ್ಪನೆದುರಿಗೆ ಕೂರಿಸಿ ‘ಶಾಂತ.. ದಿನಾ ನೀನೇ ಮಾಡ್ತಿಯಮ್ಮ. ಇವತ್ತು ಅಪ್ಪ, ಅಮ್ಮನ ಜೊತೆ ಮಾತಾಡಿಕೊಂಡಿರು ನಾನೇ ಏನೋ ಕೈಲಾದ್ದು ಮಾಡ್ತೀನಿ..’ ಎನ್ನುತ್ತ ‘ಹಾಗೇ ಕೂತ ಇದೊಂದು ನಾಲ್ಕು ಈರುಳ್ಳಿ ಹೆಚ್ಚಿ, ಕೊತಂಬ್ರಿ ಬಿಡಿಸಿ, ಎರಡು ಕಾಯ್‌ಪಲ್ಯೆ ಮಾತಾಡ್ತಾನೆ ಹೆಚ್ಚಿಡು, ಸಮಯ ಮಿಗುತ್ತಲ್ವಾ ಇದಿಷ್ಟು ಪೂರಿ ಲಟ್ಟಿಸಿಡು. ಉಳಿದದ್ದು ನಾನೇ ಮಾಡಿಕೊಳ್ತಿನಿ..’ ಎಂದರೆ ಇದು ಯಾವ ಲೆಕ್ಕದಲ್ಲಿ ನನಗೆ ಬಿಡುಗಡೆಯೋ ಗೊತ್ತೇ ಆಗಿರಲಿಲ್ಲ.
ಸ್ನೇಹಿತೆಯರು ಬಂದಾಗ ಅಥವಾ ಊರಲ್ಲಿಯೇ ಆಗೀಗ ಏನಾದರೂ ಒಂದಷ್ಟು ಮಾಡೋಣ ತೀರಾ ಬದುಕು ಯಾಂತ್ರೀಕೃತ ಆಗುತ್ತಿದೆ ಎಂದು ಒಂದೆರಡು ದಿನ ಸ್ನೇಹಿತೆಯರ ಮನೆಗೂ ಅಲ್ಲಿಲ್ಲಿ ಓಡಾಡುತ್ತಿದ್ದರೆ ಮೂರನೆಯ ದಿನವೇ, ‘ಹೊರಗಡೆ ಹೋಗುವಾಗ ನನಗೂ ಅಂಚೂರು ಬಿಡು, ಇಂಚೂರು ಕರ್ಕೊಂಡು ಹೋಗು, ಯಾಕೋ ಹುಷಾರಿಲ್ಲದಂಗಿದೆ ಒಂದಿಷ್ಟು ಕುಕ್ಕರ್ ಇಟ್ಟು ಹೋಗಿಬಿಡಮ್ಮ.. ಡಬ್ಬಿ ಅವನಿಗೆ ಕಳಿಸುವಾಗ ಮಾಡಿದ್ದೇ ಯಾಕಮ್ಮ ನೀನು ತಂಗಳಾಗಿಸಿ ತಿನ್ನಬೇಕು. ಸುಮನೆ ಮಧ್ಯಾಹ್ನಕ್ಕೆ ಬಿಸಿ ಬಿಸಿ ಮಾಡ್ಕೋಬಾರದಾ’ ಎನ್ನುತ್ತಿದ್ದರೆ, ಅದು ಹೊಸದಾಗಿ -ಶ್ ಅಡುಗೆ ಮಾಡಿಸಲು ನನ್ನನ್ನು ಅಡುಗೆ ಮನೆಗೆ ಕಟ್ಟಿಹಾಕಿಸಿದ್ದ..? ಎಂದು ನನಗರಿವಾಗುವ ಹೊತ್ತಿಗೆ ಕಳೆದದ್ದು ದಶಕಗಳು.
ಮಕ್ಕಳು ಅಪೂಟು ಅಜ್ಜ-ಅಜ್ಜಿಯರ ಮಡಿಲಿಗೆ ಬಿದ್ದು ಹೊರಳಾಡುತ್ತಾ ಇರಬೇಕಿತ್ತು. ಅಪರೂಪಕ್ಕೆ ಮಕ್ಕಳೊಂದಿಗೆ ಅಂಗಳಕ್ಕಿಳಿದರೆ ಮರುದಿನ ಅದೇ ಹೊತ್ತಿಗೆ ಸರಿಯಾಗಿ ನನಗ್ಯಾವುದೋ ಹೊಸದಾಗಿ ಕೆಲಸವೊಂದು ಕಾಯಲಿದೆ ಎನ್ನುವುದ್ಯಾಕೆ ಆವತ್ತಿಗೆ ಹೊಳೀತಿರಲಿಲ್ಲ..? ಅದೇ ಈಗ ಮೊಮ್ಮಗಳಿಗೆ, ತನ್ನನ್ನು ಬಿಡು ಅಲ್ಲಿಗೆ ಡ್ರಾಪ್ ಮಾಡು ಎನ್ನುತ್ತಿದ್ದಂತೆ, ‘ಅಜ್ಜಿ... ಡ್ರಾಪ್ ಮಾಡ್ತೀನಿ ಅದರೆ ಪಿಕ್ ಅಪ್ ಆಗಲ್ಲ. ನಿಮ್ಮ ಪಾಡಿಗೆ ವಾಪಸ್ಸು ಬನ್ನಿ. ನನ್ನ ಫ್ರೇಂಡ್ಸ್ ಮನೆ ಹತ್ತಿರ ಬರೋದು ಬೇಡ..’ ಎಂದು ಮುಖಕ್ಕೆ ಹೊಡೆದಂತೆ ಹೇಳಿ ಬದುಕು ರೂಪಿಸಿಕೊಳ್ಳುವುದೂ, ಸಂಜೆಗೆ ಇನ್ನೆ ಹೊರಟಾಗ ‘ಎಷ್ಟೊತ್ತಾಗುತ್ತಮ್ಮ ಊಟಾ..’ ಎಂದೇನೋ ರಾಗ ಎಳೆಯುವಾಗ ‘ಅಜ್ಜಿ. ಕ್ಲಾಸು ಪ್ರಾಕ್ಟಿಕಲ್ಸು ಎಲ್ಲ ಲೆಕ್ಕಾ ಹಾಕಿ ಆಗೋದಿಲ್ಲ. ಅವುಗಳಿಗೆ ಅದರದ್ದೇ ಟೈಂ ಇರುತ್ತೆ. ನನ್ನ ಬಗ್ಗೆ ಚಿಂತೆ ಬೇಡಾ. ಏನೂ ಇಲ್ಲದಿದ್ರೆ ನಾನು ಬ್ರೆಡ್ ತಿಂತೀನಿ. ಸುಮ್ನೆ ತಲೆ ತಿನ್ಬೇಡಾ..’ ಎಂದು ತನ್ನ ಅಂತರ ಮತ್ತು ಸ್ವಾತಂತ್ರ್ಯ ಎರಡೂ ಕಾಯ್ದುಕೊಳ್ಳುತ್ತಲೇ ಯಾವ ರೀತಿಯಲ್ಲೂ ಸಂಬಂಧವೂ ಹಾಳಾಗದಂತೆ ನಿಷ್ಠುರತೆಯನ್ನು ವ್ಯಕ್ತಪಡಿಸಿದ್ದದರೂ ಹೇಗೆ..?
‘ಎಲ್ಲರೂ ನನ್ನನ್ನು ಕಾಳಜಿ ಮಾಡ್ತಾರೆ ಅಂದುಕೊಂಡೆ ಒಳ್ಳೆಯತನಕ್ಕೂ ಮಿತಿ ಇಲ್ಲದ ಪರಿಧಿಯಲ್ಲಿ ಬದುಕಿ ಬಿಟ್ಟಿದ್ದ ನೋಡು. ಚೆಂದದ ಸಂಸಾರದ ಹೀಗೆ ಬದುಕು ಬಂಧಿಯಾಗಿರುತ್ತೆ ಅಂತಾ ಪ್ರಾಕ್ಟಿಕಲ್ ಆಗಿ ಗೊತ್ತಾಗೋಕೆ ಇನ್ನೊಂದು ತಲೆಮಾರು ಬರ್ಬೇಕಾಯ್ತು. ಆದ್ರೆ ಕಳೆದ ಸಮಯ ಮತ್ತು ಜೀವನ ಎರಡೂ ಹಿಂದಕ್ಕೆ ತಿರುಗೋದಿಲ್ವಲ್ಲ..’ಎನ್ನುತ್ತಾ ಶಾಂತಕ್ಕ ‘ಇದೆಂಥಾ ಕತೆ ಅಂತಿಯೇನೋ’ ಎನ್ನುತ್ತಿದ್ದರೆ ‘ಇಲ್ಲ ಶಾಂತಕ್ಕ ನಿಜವಾಗಿಯೂ ಬದುಕಿಗೂ ಮತ್ತು ಚೆಂದದ ನೆಮ್ಮದಿಗೂ ವ್ಯತ್ಯಾಸ ತೋರ್ಸ್ತಿರೋದೇ ನೀನು. ಬರೀ ಅದ್ಭುತ ಅಥವಾ ಗಂಭೀರ ಸಮಸ್ಯೆಯ ಮಧ್ಯದಿಂದ ಎದ್ದು ಬಂದು ಅದನ್ನೇ ಡಂಗೂರವಾಗಿಸಿಕೊಳ್ಳುತ್ತಾ ಬದುಕು ಕಟ್ಟಿಕೊಳ್ಳುವುದಷ್ಟೆ ಜೀವನವಲ್ಲ. ಎಲ್ಲ ಇದ್ದೂ ಏನೂ ಇಲ್ಲದಂತೆ ಗೊತ್ತಾಗದ ಲುಕ್ಷಾನಿಗೆ ಈಡಾಗಿಯೂ ಸಹಿಸಿಕೊಂಡೂ ಜೀವನ ಮಾಡೋದಿದೆಯಲ್ಲ ಅದು ನಿನ್ನಂಥವರಿಂದ ಮಾತ್ರ ಸಾಧ್ಯ ಸುಮ್ನಿರು..’ಎಂದೆ. ಹನಿಗಟ್ಟಿದ ಕಣ್ಣು ಪಿಳಿಪಿಳಿ ಮಾಡುತ್ತಾ ನಿರುಮ್ಮಳ ನಗೆ ನಕ್ಕಳು ಶಾಂತಕ್ಕ.
ಕಾರಣ
ಅವಳು ಎಂದರೆ..

Monday, February 1, 2016

ಕಪ್ಪುಬಿಳುಪಿನ ವರ್ಣ ಸಾಂಗತ್ಯ...
ಬಹುಶಃ ಚೆಂದ ಮತ್ತು ಬಣ್ಣ ಎನ್ನುವುದು ಸಾರ್ವತ್ರಿಕವಾಗಿ ಆವರಿಸಿಕೊಂಡಿರುವ ಪಿಡುಗು. ಬದುಕಿನಲ್ಲಿ ಬಣ್ಣ ಮತ್ತು ರೂಪ ವಹಿಸಿದಷ್ಟು ದೊಡ್ಡಪಾತ್ರ ಇನ್ನಾವುದೂ ವಹಿಸಿರಲಿಕ್ಕಿಲ್ಲ. ಆದರೆ ಜೀವನದ ಐನ್‌ಟೈಮಿನಲ್ಲಿ, ದುರ್ಬರ ಘಳಿಗೆಗಳಲ್ಲಿ ಆರ್ದ್ರತೆ ಹೊರತಾದ ವಾಸ್ತವ ಇನ್ನೊಂದಿಲ್ಲ.

ಚೆಂದ ಇದ್ದವರು ಮೆರೆದಾಡುವುದು ಸಹಜವೇ ಆಗಿರುವ ಕಾಲದಲ್ಲಿ, ಏನೂ ಇಲ್ಲದಿರುವವರೂ ಇವತ್ತು ಸೆಲಿಗೆ, ಪ್ರೊಫೈಲ್ ಪಿಕ್‌ಗೆ ಇಂತಿಷ್ಟು ಲೈಕು, ಪೋಸುಗಳಲ್ಲಿ ಮೈಮರೆಯುವಾಗ, ಮಿಲಿಟರಿಗೊಂದು ಸೆಲ್ಯೂಟು, ನಾಯಿಗೊಂದು ಮುದ್ದು ಎನ್ನುವ ಹಲ್ಕಿರಿತದ ಅಪಸವ್ಯಗಳಲ್ಲಿ, ಬಾಡಿಗೆ ಬೂಟಿನೊಂದಿಗೆ ಬೊಗಳೆ ಬದುಕಿನ ಸೌಂದರ್ಯ ಪ್ರದರ್ಶಿಸುವವರು, ತೀರಾ ವಯಸ್ಸಿನ ಪರಿವೆಯೇ ಇಲ್ಲದೆ ಬೆಡ್‌ರೂಮ್ ನಿಲುಮೆಗಳೊಂದಿಗೆ ಐಡೆಂಟಿಟಿ ಕಂಡುಕೊಳ್ಳುತ್ತ, ಮನಸ್ಸಿನ ಕತ್ತಲೆಗಳ ಬೆತ್ತಲೆತನಗಳನ್ನೂ ಒಬ್ಬೊಂಟಿ ಬದುಕಿನಲ್ಲಿ ಕಳೆದುಕೊಳ್ಳುವಾಗ ವಾಸಂತಿಯಂಥವರು ವಾಸ್ತವದಲ್ಲಿ ಜೀವನದ ಅವಗಾಹನೆಯನ್ನೇ ಬದಲಿಸಿಬಿಡುತ್ತಾರೆ. ಕಾರಣ ಸೌಂದರ್ಯ, ಥಳಕು, ವರ್ಷಕ್ಕೊಮ್ಮೆ ಬದಲಿಸುವ ಸಾಂಗತ್ಯಗಳ ಹೊರತಾಗಿಯೂ ಬದುಕಿನೆಡೆಗೂ, ಅದು ಕದಲಿಸುವ ಪಥದಲ್ಲಿ ಮೂಡಿಸುವ ಹೆಜ್ಜೆಗಳೂ ಇವೆಯಲ್ಲ ಅವು ಇವತ್ತಿಗೂ ನಮ್ಮನ್ನು ಧನಾತ್ಮಕದೆಡೆಗೆ ಪ್ರೇರೇಪಿಸುತ್ತಿವೆ.
ಏನೆಲ್ಲ ಇದ್ದರೂ ಸೌಂದರ್ಯ ಎನ್ನುವುದು ಇಷ್ಟೂ ಮುಖ್ಯವಾಗುತ್ತದಾ ಎನ್ನಿಸಿದ್ದು ವಾಸಂತಿಯನ್ನು ಮಗದೊಮ್ಮೆ ಎರಡು ದಶಕಗಳ ನಂತರ ಭೇಟಿಯಾದಾಗಲೇ. ಆದರೆ ಆಕೆ ಅದೆಲ್ಲವನ್ನೂ ಮೀರಿ ಬದುಕಿನಲ್ಲಿ ಕಾಲೂರಿ ನಿಂತ ತಾಕತ್ತಿದೆಯಲ್ಲ ಅದು ಬಹುಶಃ ಬದುಕಿನ ಬಣ್ಣಗಳನ್ನೂ ಚೆಂದಗಳನ್ನೂ ಅನಾವರಣಗೊಳಿದ್ದು ಎಂದರೂ ತಪ್ಪಿಲ್ಲ.
ಮನೆಯಲ್ಲಿ ನಾಲ್ಕು ಜನರ ತುಂಬು ಮಕ್ಕಳಿನ ಕುಟುಂಬದಲ್ಲಿ ಮೂರನೆಯ ಹುಡುಗಿಯಾಗಿ ಬೆಳೆದ ವಾಸಂತಿ ಅದ್ಯಾಕೋ ಹುಟ್ಟುತ್ತಲೇ ಡಾಂಬರು ಕುಡಿದಂತಿದ್ದಳು. ಅದರಲ್ಲೂ ಮೂರನೆಯದ್ದೂ ಹೆಣ್ಣೇ ಎಂದು ಮಾತು ಅರಿಯುವ ಮೊದಲೇ ಮೂದಲಿಕೆಗಳನ್ನು ಆಲಿಸಬೇಕಾಗಿ ಬಂದಿದ್ದು ಆಘಾತಕಾರಿ. ಮೊದಲಿನವೆರಡು ಅಪ್ಪಟ ಅವರಮ್ಮನ ಪಡಿಯಚ್ಚಾಗಿದ್ದರೆ ಈ ಹುಡುಗಿ ಮಾತ್ರ ಅದ್ಯಾಕೋ ಅವರ ವಂಶಸ್ಥರಲ್ಲಿಯ ಯಾವುದೋ ನಿರ್ದಿಷ್ಟ ಜೀನಿನ ತೆಕ್ಕೆಗೆ ಸಿಕ್ಕು ಬಣ್ಣ ಮತ್ತು ಬದುಕು ಎರಡಕ್ಕೂ ಕಪ್ಪು ಪರದೆ ಎಳೆದುಕೊಂಡುಬಿಟ್ಟಿದ್ದಳು. ಇವಳ ಹಿಂದೇನೇ ಅದರಲ್ಲೂ ಕೆಂಪು ಕೆಂಪು ಗಂಡು ಮಗು ಹುಟ್ಟಿದ ಮೇಲಂತೂ ವಾಸಂತಿ ಹುಟ್ಟಾ ಅನಾದರಕ್ಕೊಳಗಾಗಿದ್ದು, ಸಮಾಜದ ರೋಗಗ್ರಸ್ಥ ಮನಸ್ಥಿತಿಗೆ ಹಿಡಿದ ಕನ್ನಡಿಯಂತಾಗಿ ಹೋಗಿತ್ತು. ತೀರಾ ಚಿಕ್ಕಂದಿನಿಂದಲೇ ಇಂಥದ್ದಕ್ಕೆಲ್ಲ ತಲೆಕೆಡಿಸಿಕೊಳ್ಳುವುದರಿಂದ ಹೊರಬಂದಿದ್ದ ಹುಡುಗಿ ಅಪ್ಪಟ ಗಂಡು ಬೀರಿಯಾಗುವಾಗ, ಹುಡುಗಿ ‘ಧಡ ಇಲ್ಲ..ಬಿಡ್ರಿ’ ಎನ್ನುವ ಅನ್ವರ್ಥಕ್ಕೆ ಪಕ್ಕಾಗಿದ್ದು ಖರೇ ಎನ್ನಿಸತೊಡಗಿತ್ತು.
ಅದಕ್ಕೆ ಸರಿಯಾಗಿ ವಾಸಂತಿ ಹೆಸರಿನ ಕೃಷ್ಣಸುಂದರಿಗೆ ಅದ್ಯಾಕೋ ಸರಸ್ವತಿಯೂ ಕೈಕೊಟ್ಟಿದ್ದರಿಂದ ಆಕೆ ಇನ್ನಷ್ಟು ರಾವಾಗತೊಡಗಿದ್ದಳು. ಓದು ತಲೆಗೇರುವುದಿಲ್ಲ. ಬೇರಾವ ಚಟುವಟಿಕೆಯಲ್ಲೂ ಸಣ್ಣದಾದ ಮನಸ್ಸಿನ ಒಳಗುದಿ ಆಕೆಯನ್ನು ಸೇರದಂತೆ ಮಾಡಿದ್ದು, ಎಲ್ಲ ಕಡೆಯಲ್ಲೂ ಈ ಸಮಾಜವನ್ನು ಕಾಡುತ್ತಿರುವ ಬಣ್ಣದ ಸಮಸ್ಯೆ ಆಕೆಗೂ ಅರಿವಿಲ್ಲದೆ ತಟ್ಟತೊಡಗಿದ್ದು, ಸರಿಬಿಡು ಹೆಂಗಾದರೂ ಬದುಕು ಸಾಗುತ್ತದೆ. ಅಪ್ಪ ಎ ಒಂದು ಕಡೆಯಲ್ಲಿ ಮದುವೆ ಮಾಡಿಕೊಟ್ಟಾಗ ಎದ್ದು ಹೋದರಾಯಿತು ಎಂದು ತೆಪ್ಪಗಿದ್ದುಬಿಟ್ಟಿದ್ದಳು.ಆದರೆ ಅದಕ್ಕೂ ಬರಕತ್ತಾಗಲಿಲ್ಲ ಬದುಕು. ಮೊದಲಿನ ಹುಡುಗಿಯರಿಬ್ಬರೂ ಸೇರಿದಂತೆ ಕೊನೆಯಲ್ಲಿ ಚೆಂದಗೆ ಕುಟುಂಬದ ಸಂಪೂರ್ಣ ಪ್ರೀತಿ ಸ್ವೇಚ್ಛೆ ಅನುಭವಿಸಿ ಬೆಳೆದಿದ್ದ ತಮ್ಮನೂ ತನಗಿಷ್ಟದವಳನ್ನು ಕಟ್ಟಿಕೊಂಡು ಎದ್ದು ಹೋದರೆ ವಾಸಂತಿ ಮಾತ್ರ ಆಡಲಾರದೇ ಅನುಭವಿಸಲಾರದೆ ಅಮ್ಮನ ಕಣ್ಣಿನ ದೀನದೃಷ್ಟಿಯನ್ನೇ ದುರಿಸುತ್ತಾ, ಯಾವ ಮಾತಿಗೂ ದೂಸರಾ ಆಡದೆ ಬದುಕಿನ ಕಾಲಕ್ಕೆ ತನ್ನ ಸಮಯ ಸೇರಿಸುತ್ತಾ ಉಳಿದುಬಿಟ್ಟಿದ್ದಳು. ವಯಸ್ಸು ಮೂವತ್ತೆರಡಾಗುತ್ತಿದ್ದರೂ ಆಗದ ಮದುವೆ, ಅಪ್ಪ ಅಮ್ಮನಿಗೂ ಇದ್ಯಾಕೊ ಮಗಳು ಭಾರವಾಗುತ್ತಿದ್ದಾಳೆ ಎನ್ನಿಸುತ್ತಿದ್ದ ಘಳಿಗೆಗಳು, ಎಲ್ಲ ಕಡೆ ಅಪ್ಪ ‘ನಮ್ಮ ವಾಸಿಗೂ ಒಂದು ವರ ನೋಡ್ರೆಲಾ..?’ ಎನ್ನುತ್ತಲೇ ‘ಹುಡುಗಿ ಏನ್ ಮಾಡ್ತಾಳು.. ಯಾಕ ಮೂವತ್ತೆರಡಾದ್ವು..?’ ಎನ್ನುತ್ತಾ ಒಂದೊಂದು ತೀಡಿ ಇಟ್ಟಂತಹ ಪ್ರಶ್ನೆ ಎದುರಿಸಿ ಮತ್ತೆ ಅಲ್ಲಿಗೇ ಬಂದು ನಿಲ್ಲುತ್ತಿದ್ದ ಪರಿಸ್ಥಿತಿಗೆ ಕುಟುಂಬ ರೋಸಿಹೋಗಿತ್ತು. ಆದರೂ ಅಪ್ಪಂದಿರಿಗೆ ಹೆಣ್ಣುಮಕ್ಕಳು ಹೆಂಗಿದ್ದರೂ ಒಂದಿಷ್ಟು ಮಮತೆ ಹೆಚ್ಚೇ. ಹಾಗಾಗೇ ಇದೆಲ್ಲದರಾಚೆಗೂ ಅವಳಪ್ಪ ‘ನಮ್ಮ ವಾಸಿ, ಒಂದೀಟು ಕಪ್ಪಗ ಆದರೆ ಕೆಲಸಾ ಬಗಸಿ ಛಲೋ ಮಾಡ್ತಾಳು..’ ಎಂದು ಶಿ-ರಸಿಗೆ ನಿಂತು ಗಂಡು ಕೇಳುತ್ತಿದ್ದ. ಆಗೆಲ್ಲ ಅವನ ಮುಖದ ಮುದುರುಗಳಲ್ಲಿ ಅಡಗಿರುತ್ತಿದ್ದ ದೈನೇಸಿತನ ನೋಡಲಾಗದೆ ವಾಸಿ ಒಂದು ದಿನ,
‘ಅಪ್ಪ ನಿನಗೆ ಮಗಳು ಬ್ಯಾಡ, ಮನಿಯಿಂದ ಒಮ್ಮೆ ಹೋಗಲಿ ಅನ್ನಿಸಿದ್ದರೆ ಹೇಳು.. ನಾ ಏನಾರ ವ್ಯವಸ್ಥಾ ಮಾಡಿಕೊಳ್ತೇನಿ. ಹಿಂಗ ಮಂದಿ ಮುಂದ ಮೈ ಹಿಡಿ ಮಾಡ್ಕೊಂಡು ನಿಲ್ಲಬ್ಯಾಡ..’ ಎಂದು ಜಬರಿಸಿದ್ದಳು. ಉಳಿದ ಅಕ್ಕಂದಿರಿಗೂ ಈ ವಾಸಿಯದ್ದು ಏನೂ ಆಗದ ಬದುಕಾಗಿ, ಚಿಂತೆ ಕಾಳಜಿ ಎರಡೂ ಇಲ್ಲದಾಗಿ ಆಕೆಯ ಪ್ರಿಯಾರಿಟಿ ಕಡಿಮೆಯಾಗತೊಡಗಿತ್ತು. ಕಾಲ ಬದಲಾಗಿತ್ತು. ಬ್ರಹ್ಮ ಆಕೆಗೂ ಒಂದು ಗಂಡು ಬರೆದಿದ್ದ. ವಾಸಿಗೂ ಧಿಡೀರನೇ ಮದುವೆಯಾಗಿ ಊರು ಬಿಟ್ಟಿದ್ದಳು. ಒಂದಕ್ಷರವೂ ಸರಿಯಾಗಿ ತಲೆಗೆ ಹತ್ತದಿದ್ದ ವಾಸಂತಿಗೆ ವ್ಯಾಪಾರ, ವ್ಯವಹಾರ ಎಷ್ಟು ಸಲೀಸು ಎನ್ನುವುದು ಗೊತ್ತಾಗಿದ್ದೇ ಮದುವೆಯಾದ ಮೇಲೆ.
ಗಂಡನ ಮನೆಯ ಚಿಕ್ಕ ಕಿರಾಣಿ ಅಂಗಡಿಯನ್ನು ತುಂಬ ಮುತುವರ್ಜಿಯಿಂದ ಬೆಳೆಸಿದ ಹುಡುಗಿ ಎರಡ್ಮೂರು ವರ್ಷದಲ್ಲಿ ಹುಬ್ಬೇರುವಂತೆ ವ್ಯವಹಾರ ಬೆಳೆಸಿದ್ದಳು. ವಾಸಿಯ ಅಪ್ಪ ಆಗೀಗ ಬಂದು ಆಕೆಯ ಜೊತೆ ಕೂತೆದ್ದು, ತಲೆ ಸವರಿ ‘ಕಡಿಗೂ ದೇವ್ರುಕಣ್ಣಬಿಟ್ಟ ಬಿಡವಾ..’ ಎಂದು ಹರಸಿ, ಮನತುಂಬಿಕೊಂಡು ಹೋಗುತ್ತಿದ್ದ. ಆದರೆ ಆ ಖುಷಿ ಬಹಳ ದಿನ ಉಳಿಯಲಿಲ್ಲ. ಸುಲಭಕ್ಕೆ ತನ್ನನ್ಯಾಕೆ ಇಂಥವನು ಮದುವೆಯಾಗಿದ್ದ ಎನ್ನುವ ಅಸಲಿಯತ್ತು ವಾಸಿಗೆ ಗೊತ್ತಾಗಿಬಿಟ್ಟಿತ್ತು.
ಆಕೆಯ ಗಂಡ ಆಗಲೇ ಇನ್ಯಾವಳನ್ನೋ ವ್ಯವಸ್ಥಿತವಾಗಿ ಕೂಡಿಕೆಯಲ್ಲಿರಿಸಿಕೊಂಡಿದ್ದ. ಮನೆಯವರು ಕುಟುಂಬದ ಮರ್ಯಾದೆ, ಸಮಾಜ, ಆರ್ಥಿಕತೆ ಇತ್ಯಾದಿ ಕಾರಣಗಳಿಗೆ ವಾಸಿಯನ್ನೂ ಹೂಂ ಎಂದು ಪುಕ್ಕಟೆ ಮನೆ ಕೆಲಸದ ಲೆಕ್ಕದಲ್ಲಿ ಒಪ್ಪಿಕೊಂಡಿದ್ದಾರೆ. ಆಕೆ ಮನೆಯ ವ್ಯಾಪಾರಕ್ಕೂ ಉಪಯೋಗವಾಗಿದ್ದು ಅವರ ಬೋನಸ್. ಅಸಲು ಲುಕ್ಷಾನಿಗೆ ಈಡಾಗಿದ್ದು ಮತ್ತೆ ವಾಸಂತಿ ಮಾತ್ರ. ಆಕೆ ಸುಮ್ಮನೆ ಕೂರಲ್ಲೂ ಇಲ್ಲ ಹಾಗಂತ ವಿಷಯ ಗೊತ್ತಾಗುತ್ತಿದ್ದಂತೆ ಎಲ್ಲ ಹೆಣ್ಣುಗಳಂತೆ ಗದರಲಿಲ್ಲ. ಅಳಲೂ ಇಲ್ಲ. ಪೂರ್ತಿ ವಿಷಯ ಅರಿತುಕೊಂಡು ಒಂದಾರು ತಿಂಗಳು ಕಳೆಯುತ್ತಿದ್ದಂತೆ ಬೆಳಬೆಳಗ್ಗೆನೆ ಮನೆಯ ಹೆಬ್ಬಾಗಲಿಗೆ ನೀರು ಬಿಟ್ಟು ಹೊರಬಿದ್ದವಳು. ಮೊದಲೇ ನಿರ್ಧರಿಸಿಕೊಂಡಿದ್ದ ಜಾಗದಲ್ಲಿ ಪುಟ್ಟ ಮನೆ ಮತ್ತು ಈಗಾಗಲೇ ಒಳ ಹೊರ ಎರಡೂ ಗೊತ್ತಾಗಿದ್ದ ಮಹಿಳೆಯರ ವಸ್ತುಗಳ ಬಾಟಿಕ್ ತರಹದ ವ್ಯಾಪಾರ ಆರಂಭಿಸಿ ಬದುಕು ಕಟ್ಟಿಕೊಂಡಿದ್ದಳು.ಇತ್ತ ವಿಷಯ ತಿಳಿದ ಗಂಡ ಮನೆಯ ವ್ಯಾಪಾರ ಸೊಗಸಾಗಿ ನಿರ್ವಹಿಸುತ್ತಿದ್ದ ಹೆಂಡತಿ ಕಮ್ ಕೆಲಸದ ವಾಸಂತಿ ಕೈಬಿಡುತ್ತಿದ್ದಂತೆ ದಿಗಿಲಿಗೆ ಬಿದ್ದ. ಆಗಿದ್ದ ಅನಾಹುತ ಸರಿಯಾಗಿಸುವ ಆತುರದಲ್ಲಿ ಗಲಾಟೆಗೆ ಬಂದ. ಆದರೆ ವಾಸಿ ಹೇಗೆ ಬದುಕಬೇಕೆನ್ನುವುದನ್ನು ಕಲಿತು ಬಿಟ್ಟಿದ್ದಳು. ಅವನಿಗೆ ಉಸಿರಾಡಲೂ ಕೊಡದೆ ಆಚೆಗೆ ಗದುಮಿದವಳು. ಹೆಂಗಸರನ್ನೇ ಕೇಂದ್ರೀಕರಿಸಿ ವ್ಯವಹಾರಕ್ಕಿಳಿದವಳು ಅಕ್ಷರಶಃ ಹುಬ್ಬೇರುವಂತೆ ಬೆಳೆದಿದ್ದಾಳೆ.
‘ಛಲೋ ಆತು ಬಿಡ. ಹೋದರ ಹೋಗಲಿ. ಈಗ ಎಲ್ಲ ನಿಂದ ಆಗೇದಲ್ಲ. ಅಪ್ಪ- ಅವ್ವ ಎದಾರು? ಮಕ್ಕಳು..’ ಎಂದು ನಾನು ವಿಚಾರಿಸಿಕೊಳ್ಳುತ್ತಿದ್ದರೆ ‘ನಡೀ ಮನೀಗೆ ಹೋಗಿ ಮಾತಾಡೋಣು..’ ಎಂದು ಕರೆದೊಯ್ದಳು. ಮನೆ ತುಂಬ ಮಕ್ಕಳು. ಸುಮಾರು ನಾಲ್ಕೈದು ಇವೆ. ವಯಸ್ಸಾಗಿರುವ ನಿಂಗಪ್ಪಜ್ಜ ಗುರುತು ಹಿಡಿಯದಿದ್ದರೂ ಊರ ಕಡಿಯಿಂದ ಯಾರೋ ಬಂದಾರು ಎನ್ನುತ್ತಿದ್ದಂತೆ ಎದ್ದು ನಿಂತು ಕೈಹಿಡಿದು ಕಕ್ಕುಲಾತಿ ತೋರಿದ್ದರು.‘ನಾವಾಗೇ ಕಾಲೂರೋ ತನಕ ಎಲ್ಲ ಒಂದ ನಮೂನಿಯಾದರ ಆಮ್ಯಾಲಿಂದೇ ಒಂದು ನೋಡು. ಇದರಾಗ ಎರಡು ಮಕ್ಕಳು ನನ್ನ ತಮ್ಮಂದು. ಅವನ ಹೆಣ್ತಿ ನಾಲ್ಕು ವರ್ಷಾನೂ ದಢ್ ಆಗಿ ಸಂಸಾರ ಮಾಡ್ಲಿಲ್ಲ. ಅದಕ್ಕ ಮಕ್ಕಳನ್ನು ಕರಕೊಂಡು ಬಂದೆ. ಇನ್ನೆರಡು ನನಗಿರಲಿ ಅಂತ ಆಶ್ರಮದಿಂದ ಮೊದಲೇ ತಂದಿದ್ದಾ.
ಇವತ್ತು ಎನೂ ಚಂದ, ಬಣ್ಣ ಇದ್ದರ ಆತು. ಆದರ ಬದುಕು ಬಣ್ಣ ಹಚ್ಕೊಳ್ಳೋದರಿಂದ, ಚಂದ ಇರೋದರಿಂದ ನಡೆಯೋದಿಲ್ಲ ಅನ್ನೋದು ದಡ ಬಿಟ್ಟಾಗೇನ ಗೊತ್ತಾಗೋದು ನೋಡು. ತಾತ್ಪೂರ್ತಿಕ ಆಗಿ ಎಲ್ಲರ್ಗೂ ಹಲ್ಕಿರಿಯೋದರಿಂದ, ಮುಖ ನೋಡಿ ಕೆಲಸ ಸುಲಭಾಗತದಾದರೂ ಅದು ಭಾಳ ದಿನಾ ನಡೆಯೋದಿಲ್ಲ. ನನ್ನದು ಹೆಂಗರಾ ಆತು ಅಂತ ಅಪ್ಪ-ಅವ್ವನ ಕೈಬಿಡ್ಲಿಕ್ಕೆ ಆಗ್ತದನೂ. ತಮ್ಮ ಹೆಣ್ತಿ ಸಂಗಕ್ಕ ಬಿದ್ದು ಅವರನ್ನ ರಸ್ತೆಗೆ ದಬ್ಬಿದ ಅಂತಾ ನಾನೂ ಬಿಡ್ಲಿಕ್ಕ ಹೆಂಗಾಗ್ತದ..? ನನಗೇನು ನಂದ ಮಕ್ಕಳಾಗಬೇಕೂಂತೇನಿಲ್ಲ. ಮತ್ತ ಅವೂ ನನ್ನಂಗೆ ಆಗಿದ್ದರ..? ಆದ್ರ ಬೆಳಸುವಾಗ ಬದುಕು ಕಟ್ಕೊಳ್ಳಾಕ ಒಂದು ದಮ್ ಬರೋಹಂಗ ಬೆಳೆಸಿದರ ಅದಕ್ಕಿಂತ ದೊಡ್ಡ ಬಣ್ಣ ಇಲ್ಲ ಅಂತಾ ಗೊತ್ತಾಗೇದ ನೋಡು. ಏನಂತಿ..?’ ವಾಸಿ ಮರುಪ್ರಶ್ನಿಸುತ್ತಿದ್ದರೆ ಸುಮ್ಮನೆ ಮುಖ ದಿಟ್ಟಿಸಿದೆ.ವಾಸಿ ದೃಷ್ಟಿಗೆ ನಿಲುಕದಷ್ಟು ಬೆಳೆದಿದ್ದರೂ ತಡುವಬಹುದಿತ್ತು. ಆದರೆ ವ್ಯವಸ್ಥೆಯಲ್ಲಿ ಬಣ್ಣದ ಹುಚ್ಚಿಗೂ, ಥಳುಕಿಗೂ ಬಿದ್ದವರನ್ನು ಹೇಗೆ ವಾಸಿ ಮಾಡುವುದೋ..? ಅದೆಲ್ಲ ವಾಸಿಗೆ ತಿಳಿದಿರದಿದ್ದರೂ ಆಕೆ ಬದುಕನ್ನು ಗೆದ್ದು ತೋರಿಸಿದ್ದಳು. ಬದುಕಿದ್ದ ಬಣ್ಣಗಳು ಆಕೆಯೆದುರಿಗೆ ಕಪ್ಪಾಗಿದ್ದವು.
ಕಾರಣ ಅವಳು ಎಂದರೆ..
(ಲೇಖಕರು ಕಥೆ-ಕಾದಂಬರಿಕಾರರು)