Thursday, July 31, 2014

" ಮೂಡಿಗೆರೆ-ಸಖಲೇಶ ಪುರ - ಚಾರ್ಮಾಡಿ ಟ್ರಿಪ್ ".

" ಯಾರಿಗೆ ಯಾಕೆ ನಾವು ಉತ್ತರಿಸಬೇಕು ...? " 
ಒಂದಷ್ಟು ಫೋನ್ ಕಾಲ್ .. ಸಹಜ ಮಾತಿನ ಮಧ್ಯೆ ಎದ್ದ.. ಚಿಂತನೆ .. ಹಾಗೆ ಹುಟ್ಟಿಕೊಂಡ ಯೋಜನೆ " ಮೂಡಿಗೆರೆ-ಸಖಲೇಶ ಪುರ - ಚಾರ್ಮಾಡಿ ಟ್ರಿಪ್ ". 
ವಿಚಿತ್ರ ಎಂದರೆ ಹಾಗೆ ಹೋರಟ ಎಲ್ಲರಿಗೂ ಇದ್ದ ಏಕೈಕ ಕಾಮನ್ ಸ್ನೇಹಿತ ಎಂದರೆ ನಾನೊಬ್ಬನೇ .... ಜೊತೆಗೆ ಯಾವ ಭರವಸೆ.. ನಂಬಿಕೆ.. ಇತ್ಯಾದಿ ಪ್ರಶ್ನೆ ಇಲ್ಲದೆ ತಂಡ ಎಲ್ಲ ನಿರ್ಧಾರಗಳನ್ನು ಕೈಗೊಳ್ಳಲು ನನ್ನನ್ನು ಆರಿಸಿಕೊಂಡಿದ್ದು ಸ್ನೇಹಿತನಾಗಿ ನನ್ನೊಂದಿಗೆ ಅವರಿಗಿದ್ದ ವಿಶ್ವಾಸ ಅಷ್ಟೇ.. ಅದರಲ್ಲಿ ಯಾರು ಯಾಕೆ ಯಾವ ಕೆಲಸ ಮಾಡಬೇಕು ಎನ್ನುವುದನ್ನೂ ಯಾರೂ ಯಾಕೆ ಎಂದು ಇವತ್ತಿಗೂ ನನ್ನ ಪ್ರಶ್ನಿಸಲಿಲ್ಲ.. ನಾನು ನಿರ್ಧರಿಸಿದಂತೆ... ಸ್ವತ: ನಾನು ವಾಹನ ಚಲಾಯಿಸುವ ನಿರ್ಧಾರದಿಂದ.. ಎಲ್ಲಿಗೆ ಹೇಗೆ ಹೋಗಬೇಕು.. ಎಲ್ಲಿ ಸ್ಟೇ ಮಾಡಬೇಕು ಎನ್ನುವ ಸರ್ವ ನಿರ್ಧಾರಗಳನ್ನು ಯಾರೊಬ್ಬರೂ ಇದ್ಯಾಕೆ ಎಂದು ಕೆಳದಂತಹ ನಂಬಿಕೆ ನಮ್ಮಲ್ಲಿ ಮೂಡಿದ್ದು ಹೇಗೆ ..? ಅದೇ ಸ್ನೇಹಿತರ ಜಗತ್ತಾ..?
ಕೊನೆಗೆ ಮುಕ್ತಾಯದ ದಿನ ವಾಪಸ್ಸು ಹೊರಟಾಗ ಎಲ್ಲರ ಮುಖದಲ್ಲಿದ್ದುದು ಮತ್ತೆ ಯಾವಾಗ ಈ ರೀತಿಯ ಜಗತ್ತು..? ಯಾವತ್ತು ಆದೀತು ಹೀಗೊಂದು ಬದುಕು ಎನ್ನುವ ತವಕ. ಅದಕ್ಕಾಗಿ ಇದ್ದ ತುಡಿತ..
"..ನಾನು ಇಂಥದ್ದೇ ವಾಹನ ಬೇಕು (ಡ್ರೈವರ್ ಬೇಕಿಲ್ಲ ) ಎಂದಾಗ ಯಾಕೆ.. ಹೇಗೆ ..ಎಂದು ಕೇಳದೆ.. ಬರುತ್ತಿದ್ದಂತೆ ಬೆಳಿಗ್ಗೆ ೬-೪೫ ಕ್ಕೆ ನನ್ನ ಕೈಗೇ ಕೀ ಕೊಟ್ಟ ಕಮಲೇಶ ಸರ್ ( ಆವತ್ತೇ ಮೊದಲ ಭೇಟಿ ) ಯಾವ ಭರವಸೆ ಮೇಲೆ ನನ್ನ ಕೈಗೇ ವಾಹನ ತಂದಿತ್ತರು ..? ... " Kamaleshagowda Raamakrishnappa ( ಇವತ್ತು ಮತ್ತೊಮ್ಮೆ ಭೇಟಿಗೆ ಕಾದಿರುವ ಸ್ನೇಹಿತ ಅವರು )
" ಹಣಕಾಸಿನ ವ್ಯವಹಾರ ನಿಮ್ಮದು " ಎನ್ನುತ್ತಿದ್ದಂತೆ.. ಬೇರೇನೂ ವಿಚಾರಿಸದೆ ಎಲ್ಲವನ್ನೂ ನಾನು ಹೇಳಿದಂತೆ ನಿರ್ವಹಿಸಿದ ಸುದೀರ್ ಗೆ ಹಾಗೆ ಒಪ್ಪಿಕೊಳ್ಳಲು ಯಾವ ದರ್ದಿತ್ತು ... ? " Sudheer Sagar ( ಮಾತೆ ಆಡದೆ ಕೆಲಸ ನಿರ್ವಹಿಸಿದ ರೀತಿ ಅಧ್ಬುತ )
" ಇಲೆಲ್ಲ ಇಂಥಿಂಥಾ ಮಾಹಿತಿ ಬೇಕು .. ಹೀಗ್ಹಗೀಗೆ ಮಾಡಬೇಕು .. ಎನ್ನುತ್ತಿದ್ದರೆ ಪ್ರತಿಯೊಂದಕ್ಕೂ ಒಪ್ಪಿಕೊಂಡು ಪ್ರತಿ ವಿವರ ಸಂಗ್ರಹಿಸುತ್ತಿದ್ದ ರೂಪಾ ಶ್ರೀನಿವಾಸ " Roopa Srinivas (ಬರುತ್ತಿದ್ದಂತೆ ಪ್ರಿಂಟ್ ಔಟ್ ಕೈಗಿಡುತ್ತಿದ್ದರು )
" ಒಂದಿನ ದಿನವೀಡಿ ನಿಂತು ಅಡುಗೆ ಮನೆಯಲಿ ಕೆಲಸ ಮಾಡಿಕೊಂಡು - ರುಚಿ ರುಚಿ ತಿಂಡಿ ಪೂರೈಸಿದ ಜ್ಯೋತಿ ಮೇಡಂ .. ನಮ್ಮನ್ನೆಲ್ಲ ನೋಡುತ್ತಿದ್ದುದೆ ಆವತ್ತು - ಆದರೆ ಸುಮ್ಮನೆ ಒಮ್ಮೆ ಆಡಿದ ಮಾತಿಗೆ ಬಾಕ್ಸು ಗಟ್ಟಲೆ ತಿಂಡಿ ತಂದು ಖಾಲಿ ಮಾಡುವಂತೆ ಒತಾಯಿಸಿದವರಿಗೆ ನಮ್ಮ ಬಗ್ಗೆ ಯಾಕೆ ವಿಶ್ವಾಸ ಹುಟ್ಟಿ ಬಿಟ್ಟಿತ್ತು .. ? " Jyothi Umesh ( ನನ್ನೊಬ್ಬನ ಹೊರತು ಪಡಿಸಿದರೆ ಎಲ್ಲರೂ ಹೊಸಬರೇ ಅವರಿಗೆ - ಹಾಗೆ ಉಳಿದವರಿಗೂ ಕೂಡಾ )
" ಮೈಸೂರಿನ ವಿಶೇಷ ತಿಂಡಿ.. ಚೀಲದ ತುಂಬಾ ಮಾತು ತುಂಬಿಕೊಂಡು ನನ್ನ ಒಂದು ಮಾತಿನ ಮೇಲೆ ಬಸ್ ಹಿಡಿದು ಚನ್ನರಾಯ ಪಟ್ಟಣ ದಲ್ಲಿ ಕಾಯ್ದ ಸ್ನೇಹಿತೆ " ಪ್ರಾರ್ಥನಾಗೆ " ಯಾವ ಭರವಸೆ ಇನ್ನಾವುದೋ ಊರಿನ ರಸ್ತೆಯ ಮೇಲೆ ನನಗಾಗಿ ಕಾಯಲು ..? ನಮ್ಮ ತಂಡ ಬಂದೆ ಬರುತ್ತದೆಂದು ಏನು ಗ್ಯಾರಂಟಿ .. ? ಆದರೂ ಬಂದಿದ್ದರು ಸಮಯಕ್ಕೆ ಸರಿಯಾಗಿ ತಿಂಡಿ ಬ್ಯಾಗ್ ಹೊತ್ತುಕೊಂಡು " Prarthana Gowda ( ಆಕೆ ಬಂದಿದ್ದೆ ಗಾಡಿಯ ಗಮ್ಮತ್ತೆ ಬದಲಾಯಿಸಿದರು )
" ನಾನು ಇಂಥಾ ದಿನ ಬರುತ್ತೇನೆ - ಹೋಂ ಸ್ಟೇ ಅಡ್ವಾನ್ಸ್ ಮಾಡಿ " ಎಂದ ಕೊಡಲೇ ಹತ್ತು ಸಾವಿರಕ್ಕೂ ಹೆಚ್ಚಿನ ಹಣ ತನ್ನ ಜೋಬಿನಿಂದ ಭರಿಸಿದ (ನನಗೆ ಯಾವತೂ ಕೊಡುತ್ತೀರಾ ಎಂದೇನೂ ಕೇಳದೆ.. ) ಮೂಡಿಗೆರೆಯ ಮಿತ್ರ ಕಾರ್ತಿಕ್ ಬೆಳಗೋದರನ್ನು ನಾನು ಯಾವತೂ ಜೀವನದಲ್ಲೇ ಭೇಟಿಯಾಗಿರಲಿಲ್ಲ - ಅದೂ ಮೂಡಿಗೆರೆ ತಲುಪಿದ ಮೇಲೇನೆ - ಸಂಜೆಯಿಂದ ಕಾಯ್ದು... ರಾತ್ರಿ ನಮ್ಮ ರೂಂ ತಲುಪಿಸಿ ಎರಡು ದಿನ ತನ್ನ ಸಮಯ ನನಗಾಗಿ ಮಿಸಲಿಟ್ಟು "ಗುರೂಜಿ " ಎನ್ನುತ್ತಾ ಕೊನೆಯವರೆಗೂ ಇದ್ದು ನನ್ನ ತಬ್ಬಿ ಬೀಳ್ಕೊಟ್ಟ ಹುಡುಗ ನನ್ನ ಮೇಲಿನ ಯಾವ ಭರವಸೆ ಮೇಲೆ ಹಣ ಎಣಿಸಿದ್ದ.. ? " Kartik Gowda Belgodu ( ಕೊನೆಯ ದಿನ ನಮ್ಮೊಡನೆ ಉಳಿದು ಬಿಟ್ಟಿದ್ದ ಹುಡುಗ )
" ತನಗೋಪ್ಪಿಸಿದ ಎಲ್ಲ ಕೆಲಸಗಳೊಂದಿಗೆ ಎಲ್ಲರೊಂದಿಗೆ ಇದ್ದೂ ಇಲ್ಲದಂತಿದ್ದ ತಂಡದ ಪುಟ್ಟ "ಮರಿ " ಯಾವತ್ತೂ ಪ್ರಶ್ನೆ ಹೋಗಲಿ ಮಾತೆ ಆಡಲಿಲ್ಲ - ಸುಮ್ಮನುಳಿದು ಬಿಟ್ಟ ಗಿರಿಜಾ ನಮ್ಮನ್ನು ಅಗಲುವಾಗ ಯಾಕೆ ಕೊನೆಯಲ್ಲಿ ಯಾಕೆ ಅಳುವ ಹಂತಕ್ಕೆ ತಲುಪಿದ್ದರು.. " ಗಿರಿಜ ಕೆ.ಎಂ
ಹೀಗೆ ಯಾರೂ ಮೊದಲಿಗೆ ಭೇಟಿಯಾಗುತ್ತಿದ್ದೇವೆ ಎನ್ನುವ ಯಾವ ಮುಜುಗರವೂ ಇಲ್ಲದೆ ನನ್ನೊಂದಿಗೆ ಬೆರೆಯುತ್ತಲೇ ಪ್ರತಿಯೊಬ್ಬರನ್ನು ಆವರಿಸಿಕೊಂಡ ರೀತಿ ಅದ್ಭುತ ಮತ್ತು ವಿವರಣೆಗೆ ನಿಲುಕದ ವಾಸ್ತವ. ಇದೆಲ್ಲಾ ಸಾಧ್ಯವಾದದ್ದು ಪ್ರತಿಯೋಬ್ಬರೂ ನನ್ನ ಮೇಲಿಟ್ಟ ವಿಶ್ವಾಸ ಮತ್ತು ಪ್ರೀತಿಯಿಂದ ಮಾತ್ರ..ಅಷ್ಟೇ ವಿಶ್ವಾಸದಿಂದ ಟ್ರಿಪ್ಪು ಮುಗಿಸಿ ಹೋಗುವಾಗ ಹೇಳಿದ್ದು ಒಂದೇ...........
" ಬದುಕು ಮತ್ತೊಮ್ಮೆ ಅರಳಿದ್ದು ಇವತ್ತು ಸ್ಯಾಮ್....ನಿನ್ನೊಂದಿಗೆ ಇನ್ನೊಮ್ಮೆ ಹೀಗೆ ಮಕ್ಕಳಂತೆ ಬದುಕಿ ಬಿಡಬೇಕು .. ಹೀಗೂ ಆಗುವುದಿತ್ತಾ ಬದುಕಿನಲಿ ಎನ್ನುವುದನ್ನು ನನಸಾಗಿಸಿದಿರಿ..ಮತ್ಯಾವಾಗ ಹೀಗೆ...?" ಎಂದು ಕೇಳುತ್ತಿದ್ದರೆ ಏನು ಹೇಳಲಿ ಇವರೆಲ್ಲರ ಸ್ನೇಹಕ್ಕೆ.. ಪ್ರೀತಿಗೆ ... ಅವರ್ಯಾರು ಯಾಕೆ ಎಂದು ಕೇಳುತ್ತಿಲ್ಲ ...? ಏನೂ ಕೇಳಿಲ್ಲ ..? ಕೇವಲ ಪ್ರೀತಿಯ ...ನಂಬಿಕೆಯ ಮಳೆಯಲಿ ನನ್ನ ತೊಯಿಸಿ ನನ್ನ ಹೃದಯ ಒದ್ದೆ ಮಾಡಿ ಎದ್ದು ಹೋದರು ...
ಆದರೆ ಅದು ಆರಿ ಹಚ್ಚೆಯಾಗುವ ಮೊದಲೇ ನಾನು ಉತ್ತರಿಸಬೇಕಾಗಿದೆಯಂತೆ.. ನನ್ನ ಹಿಂದಿನ ಮಾತುಗಳಿಗೆ ....? ಬೆನ್ನ ಹಿಂದಿನ ಕುಹುಕಿಗಳಿಗೆ ... ಯಾಕೆ ಉತ್ತರಿಸಲಿ.. ನನ್ನೊಂದಿಗಿಲ್ಲದವರು ಯಾವತ್ತೂ ನನ್ನ ಹಿಂದೆಯೇ .. ಅವರು ಯಾವತ್ತೂ ನಮ್ಮ ಸಮರಲ್ಲ .. ಹಿಂದಿರುವವರಿಗೆ ಉತ್ತರಿಸುವ ದರ್ದು ನನಗಿಲ್ಲ. ನನ್ನದೇನಿದ್ದರೂ ನೇರಾ ನೇರ.. ಇದ್ಯಾವ ರಗಳೆ.. ನನಗಿಷ್ಟ ಬಂದ ರೀತಿ ಇವತ್ತು ಇದ್ದೇನೆ.. ನಾಳೆ ಇನ್ನಾರೋ ಕರೆದರೆ ಅವರೊಂದಿಗೆ.. ವಿಶ್ವಾಸ ನಂಬಿಕೆ ಇದ್ದಲ್ಲಿ ನಾನಿದ್ದೇನೆ ಅಷ್ಟೇ. ಕೊಟ್ಟರೆ ಜವಾಬ್ದಾರಿ.. ಇಲ್ವಾದರೆ ಉಳಿದವರೊಂದಿಗೆ ವಿಧೇಯ ವಿಧ್ಯಾರ್ಥಿ. ಇದು ನನ್ನ ಶೈಲಿ. ನನ್ನೊಂದಿಗೆ ಎಲ್ಲಾ ಜವಾಬ್ದಾರಿ ಹಂಚಿಕೊಂಡು ..ಲಿಂಗ ಬೇಧವಿಲ್ಲದೆ ಸ್ನೇಹಕ್ಕೊಂದು ಅರ್ಥ ಪೂರ್ಣ ರೂಪ ಕೊಟ್ಟ ಸ್ನೇಹಿತರಿಗಷ್ಟೇ ನಾನು ಜವಾಬ್ದಾರ ... ಇನ್ನುಳಿದವರಿಗಲ್ಲ ................. ಎಂದಿನಂತೆ ಸಿಂಪಲ್ " ಸ್ಯಾಮ್ " ....

Friday, March 7, 2014

" ಗುಜರಾತಿನ ಬಗ್ಗೆ ಯಾಕೆ..ಪೂರ್ವಾಗ್ರಹ ...? "


ನಿಮ್ಮ ಲೇಖನ ಅದಕ್ಕೆ ಸಂಭಂದಿಸಿದ ಅನಿಸಿಕೆಗಳನ್ನು ಓದಿದೆ. ಅದವರವರ ಅಭಿಪ್ರಾಯ ಹಾಗೆಯೇ ನಿಮ್ಮದೂ ಕೂಡಾ. ಆದರೆ ನೀವಂದುಕೊಂಡಂತೆ ಅಲ್ಲಿ ಬದಲಾಗಿಲ್ಲ ಎನ್ನುವ ಅಭಿಪ್ರಾಯದ ಬದಲಿಗೆ ನಿಮಗೆ ರಸ್ತೆಯ ಬದಿಯಲ್ಲಿ ಕಂಡದ್ದನ್ನು ಮಾತ್ರ ಬರೆದಿರಿ. ನಾನು ಹಲವು ವರ್ಷದಿಂದ ಇಲ್ಲಿಯೇ ಇದ್ದೇನೆ. ನೀವು ಸಂದರ್ಶಿಸಿದ "ಸೂರತ" ನಗರ ನನಗೆ ಅಂಗೈ ರೇಖೆಯಷ್ಟೇ ಪರಿಚಯ.
( ನೀವು ನಿಜಕ್ಕೂ ಕೂಲಂಕುಶವಾಗಿ ಸೂರತ್ ನಗರ ಗಮನಿಸಿದ್ದರೆ ಎಂಥವರೂ ಪ್ರಸ್ತಾಪಿಸುವ ಒಂದು ವಿಷಯ ಮಾಧ್ಯಮದವರಾಗಿ ಪ್ರಸ್ತಾಪಿಸಲೇ ಬೇಕಿತ್ತು. ಅದನ್ನು ನೀವು ಬರೆದೆ ಇಲ್ಲ. ಸಾಧ್ಯವಾದರೆ ಯೋಚಿಸಿ ಉತ್ತರಿಸಿ. ಇಲ್ಲವಾದರೆ ಮತ್ತೆ ನಾನೇ ಬರೆಯುತ್ತೇನೆ. ಪೂರ್ತಿ ಗುಜರಾತಿನಲ್ಲೆ ಒಂದು ವ್ಯವಸ್ಥೆಯನ್ನು ಇದುವರೆಗೂ ಸ್ಥಾಪಿಸಲಾಗಿಲ್ಲ. ತೀರ ಒಂದೆರಡು ಸ್ಥಳಗಳನ್ನು ಹೊರತು ಪಡಿಸಿ. ಆದರೂ ಆ ವಿಷಯದಲ್ಲಿ ನಂಬಲಾರದ ಶಿಸ್ತು ಇಲ್ಲಿನ ನಾಗರಿಕರಲ್ಲಿ ಇದೆ. ಅದೇನು ಗೊತ್ತೇ.. ? )
ಮಧ್ಯರಾತ್ರಿ ಮೊದಲ ದಿನ ಸೂರತ್ತಿನಿಂದ ಎಂಭತ್ತು ಕಿ.ಮಿ. ದೂರದ ಆದಿವಾಸಿಗಳ ಪ್ರದೇಶಕ್ಕೆ ಯಾವುದೇ ಭಯವಿಲ್ಲದೆ ಪರಿಚಯವಿಲ್ಲದ ಸ್ತ್ರೀಯರೂ ಪಯಣಿಸುತ್ತಿದ್ದ ಅನುಭವ.. ತೀರ ಹಿಂದುಳಿದ ಡಾ೦ಗ್ ಜಿಲ್ಲೆ ಇವತ್ತು ಪಶ್ಚಿಮ ಘಟ್ಟಕ್ಕೆ ಸೆಡ್ಡು ಹೊಡೆಯುತ್ತಿದೆ. ಹೌದು ಮಧ್ಯ/ಸರಾಯಿ ಎಲ್ಲಾ ಕಡೆಯಲ್ಲೂ ಸಿಗುತ್ತದೆ. ಆದರೆ ಅದಕ್ಕೆ ಹೆಚ್ಚಿನ ಕುಮ್ಮಕ್ಕು ನೀಡಿ ಅಭ್ಯಾಸ ಮಾಡಿಸಿದವರು ನಮ್ಮಂತೆ ಹೊರಗಿನಿಂದ ಬಂದವರೇ. (ಸ್ಥಳಿಯರು ಅಧಿಕೃತವಾದ ಸಂತರಾ ಕುಡಿಯುತ್ತಾರೆ.) ನರ್ಮದೆಯ ದಂಡೆಗುಂಟ ಸಾವಿರ ಕಿ.ಮಿ. ಚಲಿಸಿ ವಸ್ತುಸ್ಥಿತಿ ಅಭ್ಯಸಿಸಿದವನು ನಾನು. ನಿಮ್ಮ ಅನಿಸಿಕೆಯನ್ನು ತೆಗಳುತ್ತಿಲ್ಲ. 
ಆದರೆ ಬಹುಶ: ಗುಜರಾತಿನ ಅಭಿವೃದ್ಧಿಯ ಬಗ್ಗೆ ನಿಮಗಷ್ಟೇ ಅಲ್ಲ, ಎರಡು ಮೂರು ದಿನ ಅಂತ ಪ್ರವಾಸಕ್ಕೆ ಬಂದವರಿಗೆ ಯಾವತ್ತೂ ಅರ್ಥವಾಗುವುದಿಲ್ಲ. ಸಾಧ್ಯವಿದ್ದರೆ ನಿಜಕ್ಕೂ ವಸ್ತು ಸ್ಥಿತಿ ಅರಿಯಬೇಕಿದ್ದರೆ ಸಮಯವಿದ್ದರೆ ಬನ್ನಿ. ಕಾಡಂಚಿನ ಹಿಂದುಳಿದ ವರ್ಗಗಳಿಗೆ ನೀರು/ನೆರಳು ಒದಗಿಸಿರುವ, ಒಬ್ಬೊಂಟಿ ಮನೆಗಳಿಗೂ ಡಾಂಬರು ರಸ್ತೆ ತಲುಪಿಸಿರುವ... ತಾವೂ ತಿನ್ನುವುದಿಲ್ಲ, ನಮ್ಮನ್ನು ತಿನ್ನಲೂ ಬಿಡುತ್ತಿಲ್ಲ ಎಂದು ಗೊಣಗುವ ಅಧಿಕಾರಷಾಹಿ ವರ್ಗವನ್ನು... ಇಪ್ಪತ್ನಾಲ್ಕು ಗಂಟೆ ಪಂಪಸೆಟ್ಟುಗಳಿಗೆ ಕರೆಂಟು ಹರಿಸುವ ಪಧ್ಧತಿಯನ್ನ.. ( ನಾನು ಇಂಥಾದ್ದೇ ಬುಡಕಟ್ಟು ಜನಾಂಗ ವಾಸಿಸುವ ಸುತ್ತ ಮುತ್ತಲೆಲ್ಲಾ ತೀರ ಹಿಂದುಳಿದ ವರ್ಗಗಳ ಸಮುದಾಯವೇ ಇರುವ ಟ್ರೈಬಲ್ ಏರಿಯಾ(ಆದಿವಾಸಿಗಳ)ಎಂದು ಕರೆಸಿಕೊಳ್ಳುವ ಪ್ರದೇಶದಲ್ಲೇ ವಾಸಿಸುತ್ತಿದ್ದೆನೆ. ) ಇನ್ನು ನಿಮ್ಮ ರೂಮಿನ ಕತೆ ಇತ್ಯಾದಿಗಳೆಲ್ಲಾ ಸತ್ಯವಿದ್ದರೂ, ಈಗಿನ ಸೊ ಕಾಲ್ಡ್ ಸಾಹಿತಿಗಳು ಬರಹದ ಜಿಗುಟು ಕಡಿಮೆಯಾದಾಗ ಅಪದ್ದ ಹೇಳಿಕೆ ನೀಡಿ ತೀವ್ರ ಪ್ರಸಿದ್ಧಿಯನ್ನು ಬಯಸುವ ಪ್ರಕರಣದಂತೆ ಅನ್ನಿಸುತ್ತದೆ. (ಕ್ಷಮೆ ಇರಲಿ. ನೀವು ಅದನ್ನು ಬರೆಯಬಾರದಿತ್ತು) ಬರೆಯುವ ಮುನ್ನ ಒಮ್ಮೆ ಯೋಚಿಸಬೇಕಿತ್ತು. ಕಾರಣ ಕನಿಷ್ಠ ಐವತ್ತು ಬಾರಿ ನಾನು ಇಲ್ಲಿನ ಹೋಟೆಲ್ ಗಳಲ್ಲಿ ತಂಗಿದ್ದೇನೆ. ಎಲ್ಲಿಯೂ ಯಾವತ್ತೂ ಹಾಗೆ ವಿಚಾರಿಸಿಲ್ಲ. ನನಗೆ ಗೊತ್ತಿದ್ದ ಮಟ್ಟಿಗೆ ಇಲ್ಲಿನ ಆತಿಥ್ಯದ ಅನುಭವದೆದುರಿಗೆ ಹಾಗೆ ವಿಚಾರಿಸುವ ಸಂಭವ ತುಂಬಾ ಕಡಿಮೆ. ದಯವಿಟ್ಟು ಅದು ಯಾವ ಹೋಟೆಲ್ ತಿಳಿಸುವಿರಾ..?
ಕಾರಣ ನೀವು ಹೇಳಿದ ದ್ವಾರಕೆ, ಸೋಮನಾಥದ ಸಮುದ್ರ ತೀರದಿಂದ ಹಿಡಿದು ಕೊಟ್ಟ ಕೊನೆಯ ಜಿಲ್ಲೆ ಡಾ೦ಗ್ ವರೆಗೂ ನಿರಂತರ ಪ್ರವಾಸದಲ್ಲಿದ್ದೇನೆ. ಬಹುಶ: ಹೀಗೆ ಅಪರಾತ್ರಿಗಳಲ್ಲಿ, ಅನಿವಾರ್ಯ ಪ್ರವಾಸವನ್ನು ನಾನು ಖಂಡಿತಕ್ಕೂ ಇತರ ರಾಜ್ಯದಲ್ಲಿ ಇಷ್ಟು ಸುರಕ್ಷಿತವಾಗಿ ಕೈಗೊಳ್ಳಲು ಸಾಧ್ಯವೆ ಇರಲಿಲ್ಲ. (ಇಷಾನ್ಯ ರಾಜ್ಯದ ಒಂದೆರಡು ರಾಜ್ಯ ಹೊರತು ಪಡಿಸಿದರೆ ಇ ದೇಶದ ಕೊಟ್ಟ ಕೊನೆಯ ರಾಜ್ಯದ ಕೊನೆಯ ಹಳ್ಳಿಗಳವರೆಗೂ ಪ್ರವಾಸಿಸಿರುವ ನನ್ನ ಅನುಭವವನ್ನು ಸೇರಿಸಿ ಇದನ್ನು ಬರೆದಿದ್ದೇನೆ. ) ಅಂದ ಹಾಗೆ ಸೂರತ್ ಈಗ ನೇಕಾರಿಕೆಯ ಪ್ರದೇಶವೆಂದು ಗುರುತಿಸಿಕೊಳ್ಳುವುದಕ್ಕಿಂತಲೂ ಮೊದಲು ವಜ್ರದ ಕೈಗಾರಿಕೆಗೆ ಹೆಸರುವಾಸಿ. (ವಜ್ರದ ಕಾರ್ಮಿಕರ ದಿನವಹಿ ಸಂಖ್ಯೆ (ಫ್ಲೋಟಿಂಗ್ ವರ್ಕರ್ಸ್) ಎರಡು ಲಕ್ಷದ ಹತ್ತಿರ.) ನಿಮ್ಮ ಅಭಿಪ್ರಾಯವನ್ನು ಸಾರ್ವಜನಿಕವಾಗಿ ಇಡುವುದಕ್ಕೂ ಮುನ್ನ ಕೆಲವು ವಿಷಯವನ್ನಾದರೂ ತಾವು ಗಮನಿಸಬೇಕಿತ್ತು ಎಂದು ನನ್ನ ಪ್ರಾಮಾಣಿಕ ಅನಿಸಿಕೆ. 
ಇನ್ನು ನೀವು ಚಿತ್ರದಲ್ಲಿ ಪ್ರಕಟಿಸಿರುವ (ಅದನ್ನು ನಾನು ಮೂಲ ರಸ್ತೆಗಳ ಚಿತ್ರದೊಂದಿಗೆ ಸಮೀಕರಿಸಿ ಹಾಕಿದ್ದೇನೆ) ಬರೆದಂತೆ ಅದು ಮುಂಬೈ ಮಹಾನಗರಕ್ಕೆ ಜೋಡಿಸುವ ಹೆದ್ದಾರಿ ಅಲ್ಲವೇ ಅಲ್ಲ. ಅದು ತಾಪಿ ನಗರಕ್ಕೆ ಹೋಗುವ ಹೋಟೆಲ್ ಸಹಯೋಗ ( ಹಿಂದೆ ಕಾಣಿಸುತ್ತಿರುವ ಬಿಳಿ ಬಣ್ಣದ ಬಿಲ್ಡಿಂಗು ) ರಸ್ತೆ. ಸಂಪೂರ್ಣ ಮುಂಬೈನಿಂದ ಅಹಮದಾಬಾದ್ ಅಷ್ಟೇ ಅಲ್ಲ ದ್ವಾರಕೆವರೆಗೂ ( ರಾಜ ಕೋಟ , ಜಾಮನಗರ್ ಮಾರ್ಗವಾಗಿ ಆನಂದ, ಮೆಹಸಾನ ಸೇರಿದಂತೆ) ನಾನು ಚಿತ್ರದಲ್ಲಿ ಹಾಕಿರುವ ಅಚ್ಚ ನುಣುಪು ರಸ್ತೆಗಳೇ ಇವೆ ಹೊರತಾಗಿ ನೀವು ವಿವರಿಸಿರುವ ಒಳ ರಸ್ತೆಯಂತೆ ಅಲ್ಲ. ಕನಿಷ್ಠ ೧೨೦ ಕಿ.ಮಿ. ವೇಗದಲ್ಲಿ ಸತತವಾಗಿ ಚಲಿಸುವ ಹೆದ್ದಾರಿ ಇಷ್ಟು ಸುರಕ್ಷಿತವಾಗಿ ಭಾರತದಲ್ಲಿ ಕೆಲವೇ ಕೆಲವು ರಾಜ್ಯಗಳಲ್ಲಿ ಲಭ್ಯ ಇವೆ. ಇದಕ್ಕೆ ಸ್ವತಹ: ಚಾಲಕನಾಗಿ ಇದೆ ಗುಜರಾತಿನ ಹೆಧ್ದಾರಿಯ ಮೇಲೆ ಸಾವಿರಾರು ಕಿ.ಮಿ ಕ್ರಮಿಸಿರುವ ನನ್ನ ಅನುಭವ ಸಾಕ್ಷಿ. 
ನಾನು ಬರೆದ ವಿಷಯದಲ್ಲಿ ಯಾವುದಾದರೂ ನಿಮಗೆ ಸ೦ಶಯವಿದ್ದರೆ ಅಥವಾ ಉತ್ಪ್ರೆಕ್ಷೆ ಮಾಡುತ್ತಿದ್ದನೆ ಎನ್ನಿಸಿದ್ದರೆ (ಯಾವುದೇ ಓದುಗರು) ದಯವಿಟ್ಟು ಯಾರೂ ಬೇಕಿದ್ದರೂ ಬನ್ನಿ.ಗುಜರಾತಿನ ಅಭಿವೃದ್ಧಿ ಎಲ್ಲಿ ಹೇಗೆ ಮುಟ್ಟಿದೆ ಕಾಣಿಸುತ್ತೇನೆ. ಕಾರಣ ಇದು ನನ್ನ ಹಲವು ವರ್ಷಗಳ ಅನುಭವ. ಸತತವಾಗಿ ಇಪ್ಪತ್ನಾಲ್ಕು ಗಂಟೆಯೂ ಬಸ್ ಸೌಲಭ್ಯ ಸಾಮಾನ್ಯವಾಗಿ ಎಲ್ಲಾ ಹಳ್ಳಿಗಳೂ ಇದರ ಫಲಾನುಭವಿಗಳು. ಅಲ್ಲಲ್ಲಿ ಲಂಚಕ್ಕಾಗಿ ಕೈಯೊಡ್ಡುವ ಪೋಲಿಸರಿದ್ದರೂ ಇತರ ರಾಜ್ಯಗಳಷ್ಟು ಖರಾಬಾಗಿ ಹೋಗಿಲ್ಲ. ಇವತ್ತಿಗೂ ನಾನು ಕೆ.ಎ.(ಕರ್ನಾಟಕ) ಎಂದಿರುವ ನನ್ನ ಕಾರನ್ನೇ ಓಡಿಸುತ್ತಿದ್ದೇನೆ. ಪರ ರಾಜ್ಯದವರೆಂದು ಎಲ್ಲಿಯೂ ಒಮ್ಮೆಯೂ ಕಿರಿಕ್ ಮಾಡಿಲ್ಲ. ನರ್ಮದೆಯ ಕಾಲುವೆಯಲ್ಲಿ ನೀರು ನಿಂತದ್ದೇ ಇಲ್ಲ. ಬರೆದಲ್ಲಿ ಮುಗಿಯುವುದಿಲ್ಲ. ಕಾರಣ ಅಪ್ಪಟ ಗಾಮಿತರು ಮಾತಾಡುವ ಆದಿವಾಸಿಗಳ ಮಧ್ಯೆ ಭಾಷೆ ಬಾರದ ನಾನು ನನ್ನ ತವರು ಜಿಲ್ಲೆಗಿಂತಲೂ ಮಿಗಿಲಾಗಿ ಸ್ವಚ್ಚಂದವಾಗಿ ವಿಹರಿಸಿದ್ದೇನೆ. ವೈರುದ್ಯಗಳೂ ಇವೆ. ಆದರೆ ತಕ್ಷಣಕ್ಕೆ ರಾಜ್ಯದಲ್ಲಿ ಅಸಹಾಯಕನಾಗಿ ನಿಲ್ಲುವಷ್ಟು ಅಲ್ಲ. ಇತರ ರಾಜ್ಯಗಳಲ್ಲಿ ಗಬ್ಬೆದ್ದಿರುವಷ್ಟ೦ತೂ ಖಂಡಿತಕ್ಕೂ ಅಲ್ಲ. ಇನ್ನು ಬೇಕಿದ್ದರೆ ನಾನು ಮಾಹಿತಿ ನೀಡಬಲ್ಲೆ. ಅಕಸ್ಮಾತ ನನ್ನ ಗ್ರಹಿಕೆ ತಪ್ಪಿದ್ದಲ್ಲಿ ತಾವು ನನಗೆ ತಿಳಿಸಬಹುದು. 
ಗ್ರಹಿಕೆ ತಪ್ಪಿದ್ದಲ್ಲಿ ತಾವು ನನಗೆ ತಿಳಿಸಬಹುದು. 
https://www.facebook.com/media/set/...



Road of gujarat..
Photos: 6

Monday, March 3, 2014

" ಎತ್ತಿನ ಹೊಳೆ ಮುಸುಕಿನಲ್ಲಿ ನೇತ್ರಾವತಿ ರೋದನ.. "

ನಾಲ್ಕು ದಶಕಗಳಿಂದ ದ.ಕ.ದಲ್ಲಿ ಜನರಿಗೆ ಸಂಕಟದ ನೀರಿಳಿಸುತ್ತಿರುವ ನೇತ್ರಾವತಿ ನದಿ ಯೋಜನೆ ಈಗ ಎತ್ತಿನ ಹೊಳೆ ಮುಸುಕಿನಡಿಯಲ್ಲಿ ಮತ್ತೆ ಕಣ್ಣೀರಿಳಿಸಲು ಬರುತ್ತಿದೆ. ಅಸಲಿಗೆ ಕನ್ನಡದಲ್ಲಿ ವೈಜ್ಣಾನಿಕವಾಗಿ ಮತ್ತು ವಿಜ್ಞಾನ ಸಾಹಿತ್ಯ ಬರೆಯುತ್ತಿರುವ ಹೆಚ್ಚಿನ ಲೇಖಕರು ವಿಜ್ಞಾನಿಗಳು, ವಿಜ್ಞಾನ ಪದವಿಧರರು ಅಥವಾ ಯಾವ ರೀತಿಯಲ್ಲೂ ವಿಜ್ಞಾನದ ಕೋವೆಗಳಿಗೆ ಸಲ್ಲುವವರೇ ಅಲ್ಲ. ಆದರೆ ಫಿಕ್ಶನ್‍ನಂತೆ ಪ್ರಸ್ತುತ ಪಡಿಸಿ ಬಿಡುವ ವಿಷಯದ ತಾಕತ್ತು ಯೋಜನೆಗಳ ಇರಾದೆಯನ್ನೇ ಬದಲಿಸಿಬಿಡುತ್ತಿದೆ. ಪ್ರಸ್ತುತ ಎತ್ತಿನ ಹೊಳೆಯ ಯೋಜನೆಯಲ್ಲೂ ಆಗುತ್ತಿರುವುದೂ ಅದೆ. ಇವತ್ತಿಗೂ ದ.ಕ ದಿಂದ ಹಿಡಿದು, ಫಲಾನುಭವಿ ಕೋಲಾರದ ತುದಿಯವರೆಗೆ ಯಾರನ್ನಾದರೂ ಏನಿದು ಯೋಜನೆ ಎಂದು ಕೇಳಿ ನೋಡಿ. ಯಾರ ಎದೆ ಸೀಳಿದರೂ ಇದರ ಬಗ್ಗೆ ವೈಜ್ಞಾನಿಕ ಮಾಹಿತಿಯೇ ಇಲ್ಲ, ಹೋರಾಟಗಾರರನ್ನು ಹೊರತು ಪಡಿಸಿದರೆ. ಆದರೆ ಅವರ ಧ್ವನಿ ಮುಟ್ಟಬೇಕಾದಲ್ಲಿ ಸಲ್ಲುತ್ತಿಲ್ಲ. ಕಾರಣ ಸಾಕ್ಷಿ ಸಮೇತ ಮಾತನಾಡುವ, ಸ್ಪಷ್ಟತೆ ಇರುವವರನ್ನು ಮಾಧ್ಯಮಗಳೂ ಮಂಚೂಣಿಗೆ ತರುತ್ತಿಲ್ಲ.
 ಈ ವರದಿಯನ್ನು ಮಾಜಿ ಮು.ಮ ಧರ್ಮಸಿಂಗ್ ಕಾಲದಲ್ಲಿ ಮಂಡಿಸಿದ ಪರಮಶಿವಯ್ಯನವರ ಪ್ರಕಾರ ಇದರಿ0ದಾಗಿ ಘಟ್ಟದ ಮೇಲಿನ ಜಿಲ್ಲೆಗಳಾದ ಹಾಸನ, ತುಮಕೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಕೋಲಾರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿಗೆ ಕುಡಿಯುವ ನೀರು, ಅಂತರ್ಜಲ ಅಭಿವೃದ್ಧಿ ಸೇರಿದಂತೆ ಕೆರೆ ಸಮೃದ್ಧಿಯನ್ನು ಗುರುತ್ವಾಕರ್ಷಣೆಯ ಸಿದ್ಧಾಂತ ಅಧಾರದಲ್ಲಿ ಅನುಷ್ಠಾನಗೊಳಿಸಲಾಗುತ್ತದೆ. ಆದರೆ ಮೂಲವಾಗಿ ಅಲ್ಲಿ ಬೀಳುತ್ತಿರುವ ಮಳೆಯ ಪ್ರಮಾಣ, ಅದರಲ್ಲಿ ಎಷ್ಟು ಪಾಲು ನೀರು ನಮಗೆ ಲಭ್ಯವಾಗುತ್ತದೆ, ನದಿ ತಿರುಗಿಸಿ ಅದನ್ನು ಸಾಗಿಸುವ ಕಾರ್ಯಾಚರಣೆಯಲ್ಲಿ ವೆಚ್ಚವಾಗುವ ನೈಜ ನಷ್ಟ, ಕೊನೆಯ ತುದಿಯಲ್ಲಿ ಕಾಲುವೆ ಹರಿಸಿದ ನಂತರವೂ ಸಿಗುವ ನಿವ್ವಳ ಪ್ರಮಾಣ, ಅಗಾಧ ಕಾಮಗಾರಿಯ ಫಲವಾಗಿ ಬದಲಾಗುವ ಸಹಜ ಭೂಮಿಯ ವೈಪರಿತ್ಯ, ಬದಲಾಗುವ ಭೂ ಮೇಲ್ಪದರ ಸವಕಳಿಯಿಂದ ಉಂಟಾಗುವ ನೀರಿನ ಸಹಜ ಹರಿವಿನ ಧಾರಕತೆ (ಪಕ್ರ್ಯೂಲೇಶನ್ ಇಫೇಕ್ಟ್), ಅಷ್ಟುದ್ದದ ಭೂ ಕಾಲುವೆಯ ದಾರಿಯಲ್ಲಿ ಬದಲಾಯಿಸಬೇಕಾದ ಭೂ ಮುಖದ ಸರ್ವೇ... ಇವೆಲ್ಲಾ ವಿವರಣೆ ವರದಿಯಲ್ಲಾದರೂ ಇದೆಯಾ..? ಛೇ...  
ಇದಕ್ಕಿಂತಲೂ ಮುಖ್ಯವಾಗಿ 1901-02 ರಲ್ಲಿ ಬ್ರಿಟಿಷ್ ನೀರಾವರಿ ಇಲಾಖೆ ಪ್ರಕಾರ ಬೆಂಗಳೂರಿನ ಆಸುಪಾಸು ನಾಲ್ಕಡಿಯ ಕೆಳಗಿದ್ದ ಅಂತರ್ಜಲ ಇವತ್ತು ಸರಾಸರಿ ಎಂಟನೂರು ಚಿಲ್ರೆ ಅಡಿಗೆ ಹೋಗಿದೆ. (ಇದಕ್ಕೆ ಮೊನೆಯಷ್ಟೆ ಕೊಳವೆ ತೋಡಿಸಿದ ನಾನೂ ಉದಾ..) ಇದನ್ನು ಕಾರ್ಯಗತಗೊಳಿಸಲು ಜವಾಬ್ದಾರಿ ಹೊತ್ತಿರುವ ಕರ್ನಾಟಕ ನಿರಾವರಿ ನಿಗಮ ನಿಯಮಿತ (ಕ.ನಿ.ನಿ.ನಿ) ತಾನು ಮಾಡಬೇಕಾದ ಸರ್ವೆ ವರದಿಯನ್ನು ಈ.ಐ. ಟೆಕ್ನಾಲಜೀಸ್ ಸಂಸ್ಥೆಯಿಂದ ಮಾಡಿಸಿದ್ದು ಧೃಢೀಕರಣ ಯಾರು ಮಾಡುತ್ತಾರೆ..? ಗೊತ್ತಿಲ್ಲ. ಇವೆಲ್ಲವುಕ್ಕಿಂತಲೂ ಸಲ್ಲಿಸಿರುವ ವರದಿ ಮತ್ತು ಕೈಗೊಳುತ್ತಿರುವ ಯೋಜನೆ ಸಂಪೂರ್ಣ ಅವೈಜ್ಞಾನಿಕ ಮತ್ತು ನಿಸರ್ಗ ಪರ ಅಲ್ಲ ಅನ್ನುವುದಕ್ಕೆ ಈ ಕೆಳಗಿನ ಸಂಗತಿಗಳು ಎಂಥಾ ನಿರಕುಕ್ಷಿಗಾದರೂ ಗೊತ್ತಾಗುತ್ತದೆ. ಆದರೆ ಅದು ಅಧಿಕೃತ ಅಭಿಯಂತರುಗಳಿಗೆ ಅರ್ಥವಾಗುತ್ತಿಲ್ಲ. ಗಮನಿಸಿ. 
ನದಿ ಪಾತ್ರದಲ್ಲಿ ನೀರು ಸಂಗ್ರಹವಾಗುವುದರ ಮೇಲೆ ಅಲ್ಲಿನ ನಿವ್ವಳ ಬಳಕೆಯ ಬಗ್ಗೆ ಯೋಜನೆ ರೂಪಿಸಬೇಕು. ಆದರೆ ಎತ್ತಿನ ಹೊಳೆ/ನೇತ್ರಾವತಿಯ ಮಳೆ ಪ್ರಮಾಣ ವರ್ಷಕ್ಕೆ ಹೇಗೆ ಮಾಡಿದರೂ 4 ಮಿ. ಮೀರುವುದಿಲ್ಲ. ಇದಕ್ಕೆ ಕ.ನಿ.ನಿ.ನಿ ಒದಗಿಸಿರುವ ದಾಖಲೆಗಳು ಇನ್ನೂ ಅಧ್ವಾನಕಾರಿ. ಇದರ ಪ್ರಕಾರ ಅಲ್ಲಿನ ಮಳೆಯ ಸರಾಸರಿ 6280 ಮಿ.ಮಿ. ವಿಚಿತ್ರ ಎಂದರೆ ಕರ್ನಾಟಕದ ಚಿರಾಪುಂಜಿಯಾದ ಆಗುಂಬೆಯಲ್ಲೆ ಮಳೆಯ ಪ್ರಮಾಣ 7000 ಮಿ.ಮಿ ಆಸುಪಾಸಿನಲ್ಲಿದೆ.(hಣಣಠಿ://eಟಿ.ತಿiಞiಠಿeಜiಚಿ.oಡಿg/ತಿiಞi/ಂgumbe) ಇಲ್ಲಿ ಬಿಟ್ಟರೆ ಕರ್ನಾಟಕದ ಯಾವ ಭಾಗದಲ್ಲೂ 6 ಮಿಟರ್ ಮಳೆ ಪ್ರಮಾಣ ಸರಸರಿಯಲ್ಲಿ ದಾಟಿದ ಉದಾ. ಗಳೆ ಇಲ್ಲ. ಯೋಜನೆಯ ಭೂ ಮುಖವಾದ ದ.ಕ.ಒಟ್ಟು ಸರಾಸರಿಯೇ 3900 ಮಿ.ಮಿ ದಾಟುವುದಿಲ್ಲ. (ಮಳೆಯ ಕಾಲದ ಪ್ರವಾಹವನ್ನು ಹಿಡಿದರೂ ಅದು ಶೇ. 3 ದಾಟುವುದಿಲ್ಲ. ) (hಣಣಠಿ://eಟಿ.ತಿiಞiಠಿeಜiಚಿ.oಡಿg/ತಿiಞi/ಖಚಿiಟಿಜಿಚಿಟಟ_iಟಿ_ಏಚಿಡಿಟಿಚಿಣಚಿಞಚಿ)
ಇನ್ನು ಇದಕ್ಕೆ ಆಧರಿಸಿರುವ ( Sಛಿheme ಜಿoಡಿ ಜiveಡಿsioಟಿ oಜಿ ಓeಣಡಿಚಿvಚಿಣi ಡಿiveಡಿ ತಿಚಿಣeಡಿ ಣo eಚಿsಣ – 2001)ಲ್ಲಿ ಜಿ.ಎಸ್.ಪರಮಶಿವಯ್ಯ ಸಲ್ಲಿಸಿರುವ ವರದಿಯಲ್ಲಿ ಯಥಾವತ್ತು ನಕಲುಗಳಿದ್ದು ಒಂದು ಹೊಸ ಪ್ರಸ್ತಾಪವಿದೆ. ಇಲ್ಲಿ ಆಸಕ್ತಿದಾಯಕ ಎಂದರೆ ಮೊದಲ ಮೂರು ಖಾಸಗಿ ಮಳೆಯ ಮಾಪಕ ಕೇಂದ್ರಗಳು ಸಿದ್ದೇಗೌಡರ ಹೊಂಗಡಿ ಹಳ್ಳ-6065, ಕಾಡು ಮನೆ ಕಾಫಿ ಎಸ್ಟೇಟ್-6530 ಮತ್ತು ಕಲ್ಲಪ್ಪನವರ ಕೊಟ್ಟಾನ ಹಳ್ಳಿ ಮಾಪಕ – 6050 ಮಿ.ಮಿ. ನಲಿರುವ ಖಾಸಗಿ ಮಾಪಕಗಳ ಮೂಲಕ ದಾಖಲಿಸಿದ್ದರೆ, ನಾಲ್ಕನೆಯ ಖಾಸಗಿ ಮಾಪಕವಾಗಿರುವ ಹೆಗ್ಗದ್ದೆ ಎಸ್ಟೇಟ್‍ನ ಜಾನ್.ಪಿ.ಪಿ ಯವರ ಸರಾಸರಿ ಮಾತ್ರ 4100 ಮಿ.ಮಿ. ಇದ್ದು ಇವೆಲ್ಲವೂ ಒಂದೆ ವ್ಯಾಪ್ತಿ ಪ್ರದೇಶದಲ್ಲಿವೆ. ಮಳೆಯ ಪ್ರಮಾಣ ಜಾನ್ ಅವರ ಮಾಪಕದಲ್ಲಿ ವ್ಯತ್ಯಾಸವಾಗಲು ಅವರೂ ಹೆಚ್ಚಿನ ಅಂತರದಲ್ಲೇನೂ ಇಲ್ಲ. ಹೀಗಿದ್ದಾಗ ಉಳಿದ ಮೂರು ಮಾಪಕ ಮಾತ್ರ ಯಾಕೆ ಹೆಚ್ಚಿನ ಪ್ರಮಾಣ ಅದೂ ಇಲ್ಲಿಯವರೆಗೆ ಎಚಿದೂ ಬೀಳದಷ್ಟು ಇದರಲ್ಲಿ ಹೆಚ್ಚಿನ ಸರಾಸರಿ ತೋರಿಸುವ ದರ್ದು ಯಾಕಿದ್ದೀತು..? ಈ ಕೆಳಗಿನ ಲಿಂಕ್ ಜಗತ್ತಿನ ಯಾವ ಭಾಗದಲ್ಲಿ ಎಷ್ಟು ಮಳೆಯಾಗುತ್ತದೆ ಎನ್ನುವುದನ್ನು ತೋರಿಸುತ್ತದೆ. 
(hಣಣಠಿ://ತಿತಿತಿ.sಚಿmsಚಿmತಿಚಿಣeಡಿ.ಛಿom/ಛಿಟimಚಿಣe/ಛಿಟimಚಿಣeಜಚಿಣಚಿ.ಠಿhಠಿ?ಟಚಿಣ=12.89690&ಟಟಿg=75.03546&ಟoಛಿ=ಂmಣಚಿಜಥಿ%2ಅ+ಏಚಿಡಿಟಿಚಿಣಚಿಞಚಿ%2ಅ+Iಟಿಜiಚಿ)
ಇನ್ನು ಈ ಖಾಸಗಿ ಮಾಪಕಗಳ ಸತ್ಯತೆ ಬಗ್ಗೆ ಯಾರು ಧೃಢಿಕರೀಸುತ್ತಾರೆ..? ಕಾರಣ ಒಂದಿಬ್ಬರು 1980 ರಿಂದ 90 ವರೆಗಿನ ಪ್ರಮಾಣ ನೀಡಿದ್ದರೆ ಇನ್ನೊಬ್ಬರದ್ದು 1985 ರಿಂದ 2000 ವರೆಗಿನ ಪ್ರಮಾಣದ ದಾಖಲೆಯಂತೆ. ಇವೆಲ್ಲವನ್ನು ಹೊರತು ಪಡಿಸಿದರೆ ಅಧಿಕೃತ ಸಂಸ್ಥೆಯಾದ ಜಲ ಸಂಪನ್ಮೂಲ ಇಲಾಖೆಯಲ್ಲಿ ಕಳೆದ ಸುಮಾರು ಇಪ್ಪತೈದು ವರ್ಶಗಳ ದಾಖಲೆ ಲಭ್ಯ ( ಸರಾಸರಿ 3072 ಮಿ.ಮಿ.) ಇದ್ದರೂ ಖಾಸಗಿಯವರ ಮಾಪಕ ಬಳಸಿಕೊಳ್ಳುತ್ತಿರುವ ಉದ್ದೇಶವೇನು..? 
ಇನ್ನು ಇಲ್ಲಿನ ನೈಜ ಮಳೆಯ ಪ್ರಮಾಣವನ್ನು ಮರೆಸಿ ಇದನ್ನು 6500 ಎಂದು ಕೇಂದ್ರಕ್ಕೆ ಮನವರಿಕೆ ಮಾಡಿಕೊಡಲು ನಡೆಸಿದ ಕಸರತ್ತುಗಳು ಕೂಡಾ ಸಾಕಷ್ಟು. ಇದಕ್ಕಾಗಿ ಇನ್ನು ಮುಂದೆ ಹೋದ ಚಿತ್ರದುರ್ಗ ಭದ್ರಾ ಮೇಲ್ದಂಡೆ ಚೀಫ್ ಎಂಜಿನಿಯರ್ ಅವರ ಪ್ರಕಾರ ಇಲ್ಲಿನ ಮಳೆ ಪ್ರಮಾಣ 6500 ಮಿ.ಮಿ. ( ಇIಂ ಓoಣiಜಿiಛಿಚಿಣioಟಿ-2006 ಚಿಟಿಜ iಣs ಚಿmeಟಿಜmeಟಿಣs. 18.10.12 ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಗೆ ಬರೆದ ಪತ್ರ ) ಬೇಕಾಗಿರುವ ಎತ್ತಿನ ಹೊಳೆ ಅಥವಾ ನೇತ್ರಾವತಿಯ ಬದಲಿಗೆ ಪೂರ್ತಿ ಪ.ಘಟ್ಟದ ಮಳೆಯ ಪ್ರಮಾಣವನ್ನು ನೀಡುವ ಮೂಲಕ ದಾರಿ ತಪ್ಪಿಸುವ ಕೆಲಸಕ್ಕೆ ಕೈಹಾಕಿದರೂ ಅದು ಅಸಮರ್ಪಕ ಸಂಖ್ಯೆ.
ಜಲ ಸಂಪನ್ಮೂಲ ಇಲಾಖೆ 21.6.2012 ರಂದು ಸಲ್ಲಿಸಿದ ವರದಿಯ ಪ್ರಕಾರ ಈ ಪ್ರದೇಶದ ಮಳೆಯ ಪ್ರಮಾಣ ಕೇವಲ 3070.ಮಿ.ಮಿ. ಅಂದರೆ ಸರಿ ಸುಮಾರು 15 ಟಿ.ಎಂ.ಸಿ.
ಇನ್ನು ಕೇಂದ್ರ ಜಲ ಆಯೋಗದ ದಾಖಲೆ ( 40 ವರ್ಷದ್ದು ) ನೇತ್ರಾವತಿ ನದಿ ಪಾತ್ರದ ಬಂಟ್ವಾಳದಲ್ಲಿದೆ. ಅದರ ಸರಾಸರಿ 21 ಟಿ.ಏಮ್.ಸಿ. ಇನ್ನು ಕಾಡು ಮನೆ ನದಿ ತೀರ ಮತ್ತು ಹಾರ್ಲೆ ಎಸ್ಟೇಟ್ ಹತ್ತಿರ ಮಳೆಯ ಮಾಪಕಗಳ 1976-77 ರಿಂದ ಇರುವ ದಾಖಲೆಗಳನ್ನು ಎಲ್ಲಿಯೂ ನಮೂದಿಸಿಯೇ ಇಲ್ಲ. 
ಅಲ್ಲಿಂದ ದೂರದ ಬಳ್ಳಾರಿಗೆ, ಚಿತ್ರದುರ್ಗ, ಹಾಸನ, ಕೋಲಾರಗಳಿಗೆ ನೀರು ತಿರುಗಿಸುವ ಹರಿವು ಹಾದಿಯ ಸರ್ವೇ ರಿಪೆÇೀರ್ಟು, ಅದಕ್ಕೆ ಬೇಕಾಗುವ ಭೂ ಒತ್ತುವರಿ, ಕಾಲುವೆ ಬೇಕಾದ ಸರ್ವೆ ಎಲ್ಲಿದೆ..? ಸಧ್ಯ ಯಾರಿಗೂ ಗೊತ್ತಿಲ್ಲ
ಇನ್ನು ಕೇ.ಜ.ಆ. ವೂ ಕೂಡಾ ಕೊನೆಯದಾಗಿ ಆಗಸ್ಟ್ 2012 ರಲ್ಲಿ " ಅಲ್ಲಿ ಮಾಪನ ಕೇಂದ್ರಕ್ಕಿಂತಲೂ ಎತ್ತಿನ ಹೊಳೆ ನದಿ ಪಾತ್ರ ಸಾಕಷ್ಟು ಮೇಲಿರುವುದರಿಂದ ಇನ್ನು ಶೇ.15 ಮಳೆ ಹೆಚ್ಚಾಗುತ್ತದೆ " ಎನ್ನುವ ಮೂಲಕ ಈ ವರೆಗೂ ಒಟ್ಟಾರೆ ಮಳೆಯ ಸರಾಸರಿಯನ್ನೇ ಗುಣಿಸುತ್ತಿಲ್ಲ. ಮಳೆಯ ಪ್ರಮಾಣದ ಲೆಕ್ಕಾಚಾರವೇ ಸರಿ ಇರದ ಈ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ 13 ಜುಲೈ 2012 ರಲ್ಲಿ ಆಡಳಿತಾತ್ಮಕ ಒಪ್ಪಿಗೆ ನೀಡಿರುವುದು ಅತಿ ದೊಡ್ಡ ಆವಾಂತರ.
ಈಗಾಗಲೆ 150 ಕ್ಕೂ ಹೆಚ್ಚು ಸಭೆಗಳು ಇದಕ್ಕಾಗಿ ಅಧಿಕಾರಿಗಳ ಮಟ್ಟದಲ್ಲಿ ನಡೆದಿದ್ದರೂ ಒಮ್ಮತ ಮತ್ತು ಸಮನ್ವಯ ಸಾಧಿಸುವಲ್ಲಿ ವಿಫಲವಾಗಿದ್ದು ದಿ.27.7.2012 ರಲ್ಲಿ ಚೀಫ್ ಎಂಜಿನಿಯರ್ ಅವರ ಕಾಗದ ಇದಕ್ಕೆ ಪುಸ್ಥಿ ನೀಡುತ್ತದೆ.
ಅಸಲಿಗೆ ನೇತ್ರಾವತಿಗೆ ಬಂದ ವಿರೋಧದಿಂದಾಗೇ ಇದನ್ನು ಎತ್ತಿನ ಹೊಳೆ ಯೋಜನೆ ಎಂದು ಬದಲಾಯಿಸಿದಂತೆ ಕಾಣುತ್ತಿದೆಯೆ ಹೊರತಾಗಿ ಹೊಸ ಯಾವ ವಿನ್ಯಾಸಗಳು ವರದಿಯಲ್ಲಿ ಕಾಣಿಸುತ್ತಿಲ್ಲ. ಕಾರಣ ಅದು ಹೋಂಗಡಿ ಹಳ್ಳವೆ ಇರಲಿ, ಕುಮಾರಧಾರ, ಕಾಡು ಮನೆ, ಕೇರಿ ತೊರೆ, ಕೆಂಪು ಹೊಳೆ, ಎತ್ತಿನ ಹೊಳೆ ಅಥವಾ ಗುಂಡ್ಯವೇ ಇರಲಿ.. ಎಲ್ಲವೂ ಕೊನೆಯಲ್ಲಿ ಆಗುವುದು ನೇತ್ರಾವತಿಯೇ. ಸುಮ್ಮನೆ ಹೆಸರಿನಲ್ಲಿ ವ್ಯತ್ಯಾಸವಾಗುವುದರಿಂದ ಭೂ ಮುಖದ ಚಿತ್ರಣಗಳು ಬದಲಾಗಲಾರವು. ಇದು ಭೂ ಮೇಲ್ಮೈ ಊಹಿಸಬಲ್ಲ ಎಂಥಾ ಅಶಿಕ್ಷಿತನೂ ಅರಿತುಬಿಡುತ್ತಾನೆ. ಆದರೆ ದ.ಕ.ಘಟ್ಟದ ನೇತ್ರಾವತಿ ಮತ್ತು ಎತ್ತಿನ ಹೊಳೆಯ ಪಾತ್ರದಲ್ಲಿ ಬೀಳುತ್ತಿರುವ ನೀರು ಸಮುದ್ರ ಸೇರಿ ಹಾಳಾಗುತ್ತದೆಂದು ವಾದಿಸುತ್ತಿರುವ ಮುಖ್ಯ ಅಭಿಯಂತರು ಮಾತ್ರ ಒಪ್ಪಿಕೊಳ್ಳು ತ್ತಿಲ್ಲ. ಕಾರಣ ಅವರುಗಳು ದ.ಕ.ಜಿಲ್ಲೆಯ ನೆಲದ ಗುಣ ಲಕ್ಷಣವನ್ನೆ ಇದರಲ್ಲಿ ಪರಿಗಣಿಸಿಲ್ಲ.
ಅಸಲಿಗೆ ದ.ಕ ದ ಕೆಳಗಿನಿಂದ ಘಟ್ಟ ಮೇಲ್ಭಾಗದ ತುದಿಯ ವರೆಗೂ ಯಾವ ಭಾಗವೂ ಜಿಗುಟು ರಾಡಿಯ ನಾರು ಸಹಿತದ ಮಣ್ಣಲ್ಲ. ತುಂಬಾ ಸವಕಳಿಯಾದ ಸುಲಭಕ್ಕೆ ಕೊರೆದು ನೀರಿನೊಂದಿಗೆ ಬೆರೆತು ಸರಿದು ಭೂಮುಖವನ್ನೆ ಬದಲಿಸಬಲ್ಲ ಬರೀ ಹಗುರ ಮಣ್ಣು. ಇದರಿಂದಾಗಿ ಇಲ್ಲಿನ ಭೂಮಿಯ ಆಳಕ್ಕಿಳಿಯಲು ವರ್ಷದುದ್ದಕ್ಕೂ ಸತತವಾಗಿ ಸುರಿಯುವ ನೀರಿನ ಹರಿವು ಮತ್ತು ನಿರಂತರತೆ ಅಗತ್ಯ ಬೇಕೆ ಬೇಕು. ಅದಿಲ್ಲದಿದ್ದರೆ.. ನೀರಿನ ನೈಜ ಆಳಕ್ಕಿಳಿಯುವ ಪ್ರಕ್ರಿಯೆ ಆಗುವುದೇ ಇಲ್ಲ. ಕಾರಣ ಇಂಥಾ ಮಣ್ಣಿನ ಭೂಮಿಯಲ್ಲಿ ನೀರು ಆಳಕ್ಕಿಳಿದು ಅಲ್ಲಿನ ಅಂತರ್ಜಲ ಮುಟ್ಟಲು ಬೇಕಾಗುವಷ್ಟು ಕಾಲಾವಧಿಯಲ್ಲಿ ನೀರಿನ ಹರಿವು ಸತತವಾಗಿ ಲಭ್ಯವಿಲ್ಲದಿದ್ದರೆ ಶಿಲಾಪದರದ ಮಧ್ಯದಲ್ಲಿ ನೀರಿಳಿದು ಭೂ ಒಳಾವರಣವನ್ನು ಸೇರುವ ಮೊದಲೆ ಅಲ್ಲಲ್ಲೆ ಒಣಗಿ ಅರೆಬರೆಯಾಗಿ ಉಳಿದು ಬಿಡುತ್ತದೆ. ಅದಕ್ಕಾಗಿ ಅದರ ಮೇಲೆ ಮೇಲಿನಿಂದ ಸುರಿಯುವ ನಿರಂತರ ನೀರಿನ ಒತ್ತಡ ಇದ್ದಲ್ಲಿ ಮಾತ್ರ ಅಂತರ್ಜಲ ಮಟ್ಟ ಹೆಚ್ಚಲು ಸಾಧ್ಯ ಇಲ್ಲಿನ ಭೂ ಲಕ್ಷಣಕ್ಕೆ. ಇದು ಅಂತರ್ಜಲ ಮಟ್ಟ ಮತ್ತು ಭೂ ಪದರದಲ್ಲಿ ಆಗುವ ಅತ್ಯಂತ ಸೂಕ್ಷ್ಮವಾದ ಪರಿಸರ ವಿದ್ಯಮಾನ. ಇದನ್ನು ಯಾವ ರೀತಿಯಲ್ಲೂ ಕೃತಕವಾಗಿ ನಿರ್ವಹಿಸಲು ಸಾಧ್ಯವೇ ಇಲ್ಲ. ಅದೇ ಕಾರಣಕ್ಕೆ ತಿಂಗಳಾನುಗಟ್ಟಲೆ ನೀರು ನಿಲ್ಲಿಸಿಡುವ ಇಂಗುಗುಂಡಿಯ ಯೋಜನೆಗಳು ರೂಪಿತವಾಗಿರುವುದು.
ಆದರೆ ಲಕ್ಷಗಟ್ಟಲೇ ಕೊಳವೆ ಬಾವಿ ಕೊರೆದು(ಇದರಿಂದಾಗಿ ಸಾವಿರಾರು ಸಂಖ್ಯೆಯಲ್ಲಿ ಕೆರೆಗಳು ಬತ್ತಿ ಹೋದವು) ಅರಣ್ಯದ ಹಸಿರು ಪಟ್ಟಿಯನ್ನು ಕತ್ತರಿಸಿ(ಮಳೆಯ ತಗ್ಗುವಿಕೆ ಮತ್ತು ಸರಿದು ಹೋಗುವ ಪ್ರಕ್ರಿಯೆಗೆ ಕಾರಣ) ಬಣ್ಣದ ಶಿಲಾಪದರಗಳಿಗಾಗಿ ಭೂಗರ್ಭವನ್ನು ಕೊರೆದು (ಗ್ರಾನೈಟ್ ಎತ್ತಿ ನೀರಿಳಿಯುವ ಪದರಗಳ ನಾಶ ಪಡಿಸುವಿಕೆ. ಕಾರಣ ಸಹಜ ಬಂಡೆಯಲ್ಲಿ ನೀರಿಳಿದು ಒಳಸೇರಲಾರದು.. ಇಂಥಾ ಪದರು ಶಿಲೆಯ ಸಂದಿನಲ್ಲೆ ನೀರಿನ ಪಯಣ ಸಾಗುತ್ತದೆ ಅಂತರ್ಜಲಕ್ಕೆ), ಮಹಡಿಗ ಮಹಲುಗಳಿಗಾಗಿ ರಾಜಧಾನಿಗೆ ಸಾಗಿಸಲು ಎಗ್ಗಿಲ್ಲದೆ ನದಿ ಮುಖಜ ಭೂಮಿಯ ಮರಳಿನ ಆವರಣಗಳನ್ನು ಕೊರೆದು, ಅಲ್ಲಿಯೂ ಸರ್ವ ರೀತಿಯ ಆವಾಂತರಗಳನ್ನು ಮಾಡಿ ಈಗ ರಾಜಧಾನಿ ಮತ್ತು ಸುತ್ತ ಮುತ್ತಲ ಜನರಿಗೆ ಪೂರೈಸಲಸಾಧ್ಯವಾಗಿರುವ ನೀರ ಸಮಸ್ಯೆಯ ಮುಖ ತಪ್ಪಿಸಿಕೊಳ್ಳಲು ಅವೈಜ್ಞಾನಿಕ ಮತ್ತು ಅಸಿಂಧೂವಾದ ಎತ್ತಿನ ಹೊಳೆಯ ಯೋಜನೆಗೆ ರಾಜ್ಯ ಸರ್ಕಾರ ಕೈ ಇಟ್ಟಿದೆ. 
ಅಸಲಿಗೆ ಇಂಥಾ ಸಾಧ್ಯತೆಯ ಮೊದಲು ಇಲ್ಲಿಯವರೆಗಿನ ನೈಜ ತಿರುವನ್ನು ಹೊರತು ಪಡಿಸಿ ಕೃತಕ ನದಿ ತಿರುವಿನ ಯೋಜನೆಯ ಸಫಲತೆಯ ಅಧ್ಯಯನ ಮತ್ತು ಪ್ರಾತ್ಯಕ್ಷಿಕತೆಯ ಅಭ್ಯಾಸ ನಡೆಸಬೇಕಿತ್ತು. ದ.ಕ. ಜಿಲ್ಲೆಯ ಪರಿಸರದಿಂದ ಹೊರಡಿಸಬಹುದಾದ ನೀರಿಗೆ ಗುರುತ್ವಾಕರ್ಶಣೆಯ ಸಹಜ ಸಿದ್ಧಾಂತ ಅನ್ವಯಿಸುವ ಮೊದಲು ಭೂ ಹಂತ( ಎಲಿವೇಶನ್ಸ್) ಗಳ ಲೆಕ್ಕಾಚಾರ ಮಾಡಬೇಕಿತ್ತು. ಅದರೆ ಪ್ರಿಯಾರಿಟಿ ಸಿಕ್ಕಿದ್ದು ಇದರಲ್ಲಿ ಆಗಬಹುದಾದ ಗುತ್ತಿಗೆದಾರಿಕೆ, ಭೂ ಕಾಮಗಾರಿಯ ಲೆಕ್ಕಾಚಾರವೇ ನಡೆದಿರುವ ವಾಸನೆ ಸ್ಪಷ್ಟವಾಗಿ ಕಂಡು ಬರುತ್ತಿದೆ. ಅದಕ್ಕಾಗೆ ಬೀಳದ 6000 ಚಿಲ್ರೆ ಮಿ.ಮಿ ಮಳೆಯ ಪ್ರಮಾಣವನ್ನು ನಮೂದಿಸಿರುವ ಇವರ ವರದಿಯನ್ನು ಹೂ0.. ಅನ್ನುವ ಮೊದಲು ಯೋಚಿಸಬೇಕಿತ್ತು.. ಉಹೂ.. ವರದಿ ತಯಾರಿಸುವ ಬುದ್ಧಿವಂತರೆ ಸಂಖ್ಯೆಯ ತಾಳ ತಪ್ಪತೊಡಗಿದರೆ, ಹೆಚ್ಚಿನಂಶ ಅಂಥಾ ಪಧವಿಧರರಲ್ಲದ ಪ್ರಭುಗಳೆನು ಮಾಡಿಯಾರು...? ನೇತ್ರಾವತಿಯ ಕಣ್ಣಿರನ್ನು ಓರೆಸುವ ಮಾಹಿತಿ ನೀಡಬೇಕಿದ್ದ ವಿಜ್ಞಾನ ಲೇಖಕರುಗಳು ವಾರ ವಾರ ಫಿಕ್ಶನ್ ಬರೆದು ರಂಜನೆಯ ಮಟ್ಟಕ್ಕಿಳಿದು ಬಿಟ್ಟಿದ್ದಾರೆ. ಎಲ್ಲಿಂದ ಹುಡುಕೋಣ ಬುದ್ಧಿ ಜೀವಿಗಳಿಗಾಗಿ..? 

ಸಂತೋಷ ಕುಮಾರ ಮೆಹೆಂದಳೆ.
ನಂ. ಸಿ-160.
ಕೈಗಾ ವಸತಿ ಸಂಕೀರ್ಣ
ಉ.ಕ. ಜಿಲ್ಲೆ. 581400

ದೂ.ಸಂ. 09448996165

Monday, September 9, 2013

ಮಿಸ್ ಮಾಡಿಕೊಳ್ಳುವುದು ಎಂದರೇನು ..?

" ಐ ಮಿಸ್ ಯು ಟೂ ಮಚ್... " ಮೊನ್ನೆ ಒಂದು ಎಸ್ಸೆಮ್ಮೆಸ್ಸು ಇದ್ದಕ್ಕಿದ್ದಂತೆ ಮೂಡಿ ಬಂತು. ನಂಬರು ಕೊಂಚ ಪರಿಚಿತವೇ. ರಿಡೈಲ್ ತಿರುಗಿಸಿದೆ. " ಹೈ ಸ್ಯಾಂ... ಎಲ್ಲಿದ್ಡಿ. ಮಿಸ್ಸಿಂಗ್ ಯೂ ರಿಯಲಿ..." ದೂರದೂರಿನ ಗೆಳತಿ ವಿಹಾರದ ತಾಣವೊಂದರಿಂದ ಕರೆ ನೀಡಿದ್ದಳು. ಅಷ್ಟರ ಮಟ್ಟಿಗೆ ನಾನು ಪುಣ್ಯವಂತ. ತುಂಬ ಸಂತೋಷದ ಸಮಯದಲ್ಲಿ ನೆನಪಾಗಿದೆ. " ಹ್ಯಾವ್ ಎ ನೈಸ್ ಡೇ... ನೀರಿಗಿಳಿಯುತ್ತಾ ನಿನ್ನ ಗಂಡನ್ನ ತುಂಬಾ ಗೋಳು ಹೊಯ್ಕೋಬೇಡಾ. " ಎನ್ನುತ್ತಾ ಮೇಲ್ ಕೀ ಹಿಂಡಿದೆ. ನಿಜಕ್ಕೂ ಮಿಸ್ ಮಾಡಿಕೊಳ್ಳುತ್ತೇವಾ..? ಕೆಲವರಿಗಂತೂ ಈ ಮಿಸ್ ಮಾಡಿಕೊಳ್ಳೊ ಬಗ್ಗೆ ಒಂದು ಸ್ಪಷ್ಟತೆ ಇಲ್ಲದಿದ್ದಾಗಲೂ ರಾತ್ರಿ ಮಲಗುವಾಗಲೂ ಐ ಮಿಸ್ ಯು ಅಂತಾ ಒಂದು ಎಸ್ಸೆಮ್ಮೆಸ್ಸು ತೂರಿ ಬಿಟ್ಟು ಮಲಗಿ ಬಿಡೋದು.
      ಅರೇ ಮಲಗುವಾಗಲೂ ಬೇಕು ಅಂತಾದರೆ, ನೆನಪಾದರೆ ಅದು ಮಿಸ್ ಮಾಡಿಕೊಂಡಂತಲ್ಲ. ಅಥವಾ ನಿನಗೆ ಆಕೆಯ ನೆನಪಾದಾಗೆಲ್ಲ ಮಿಸ್ ಅಂತನ್ನಿಸುತ್ತೆ ಅಂತಾದರೆ ಅದೂ ಮಿಸ್ ಅಂತಲ್ಲಪ್ಪ ಎಂದು ವಿವರಿಸಿದರೆ ಸಧ್ಯಕ್ಕೆ ಅದ್ಯಾರಿಗೂ ಅರ್ಥ್ವಾಗುವ ಪರಿಸ್ಥಿತಿಯಲ್ಲಿ ಇಲ್ಲ. ಯಾಕೆಂದರೆ ನಮಗೆ ಬೇಕಾದಾಗೆಲ್ಲ ನೆನಪಾದಾಗೆಲ್ಲ ಆಕೆಯೋ ಅವನೋ ಇಲ್ಲದಿದ್ದರೆ ಅದು ಒಂದು ಮಿಸ್ಸೇ ಎನ್ನುವಂತಾಗಿಬಿಟ್ಟಿದೆ. ಅದೇ ಸಮಸ್ಯೆಯಾಗಿರೋದು. ತುಂಬಾ ಹೇಳ ಬೇಕಿಲ್ಲದಿದ್ಹರೂ " ಕೊನೆಯಲ್ಲಿ ಐ ಮಿಸ್ ಯು ಯಾರ್.." ಎಂದೋ ಅಥವಾ ಅಲ್ಲೆಲ್ಲಿಂದಲೋ ಒಮ್ಮೆ ಎಸ್ಸೆಮ್ಮೆಸ್ಸು ತೂರಿ ಬಿಟ್ಟು " ಮಿಸ್ಸಿಂಗ್ ಯು ರಿಯಲ್ಲಿ... ಲಾಸ್ಟಿಂಗ್ ಲಾಟ್ ಆಫ್ " ಎಂದು ಬಿಡೋದು ನಿಜಕ್ಕೂ ನಮ್ಮ ಮೇಲಿನ ಅಥವಾ ನಮಗೆ ಅವರ ಮೇಲಿನ ತುಂಬು ಪ್ರೀತಿಯನ್ನು ವ್ಯಕ್ತ ಪಡಿಸಿದಂತೆನ್ನಿಸುತ್ತಾ ? ಇಲ್ಲ ಅದೊಂದು ಗೀಳಾಗಿ ಬದಲಾಗುತ್ತಿದೆಯಾ...? ಸದ್ಯಕ್ಕೆ ಮಿಸ್ಸುಗಳು ಅಂತಾ ಮಿಸ್ ಮಾಡಿಕೊಳ್ಲುವವರೆ ಉತ್ತರಿಸಿಕೊಳ್ಳಬೇಕಾಗಿದೆ.
       ತುಂಬು ಆತ್ಮೀಯ ಹೃದಯಕ್ಕೆ ಮನಸ್ಸು ತೀವೃವಾಗಿ ಜೊತೆಗಾರರನ್ನು ಅಥವಾ ಜೊತೆಗಾತಿಯನ್ನು ತನ್ನ ಈ ಸಂತೋಷದ ಕ್ಷಣದಲ್ಲಿ ಪಾಲ್ಗೊಳ್ಳಬೇಕಿತ್ತು ಎಂದೆನ್ನಿಸುವಾಗ, ಮನಸ್ಸು ಇನ್ನಿಲ್ಲದಂತೆ ಅವರನ್ನು ನೆನೆದರೆ ಅದೊಂದು ರೀತಿಯಲ್ಲಿ ಮನಸ್ಸಿಗೆ ಮುದವನ್ನೂ, ಅರಿಯದೇ ಅಂತರಾಳದಲ್ಲಿ ಪ್ರೀತಿಯನ್ನು ಉಕ್ಕಿಸುತ್ತಾ ಮುದವನ್ನು ನೀಡುತ್ತಿದ್ದರೆ ಅದು ಯೆಸ್... ರಿಯಲಿ ಐ ಮಿಸ್ ಯು... ಅನ್ನಬಹುದೇನೋ. ಅಸಲಿಗೆ ಹೀಗೆ ಮಿಸ್ ಮಾಡಿಕೊಳ್ಳೋದ್ಯಾಕೆ ? ಅದೂ ಕೇವಲ ಫ್ರೆಂಡ್ಸನ್ನ ತುಂಬು ಸ್ನೇಹಿತೆಯನ್ನ ಪ್ರೀತಿಸುವವರನ್ನ ಮಾತ್ರ ಮಿಸ್ ಮಾಡ್ಕೋತಿವಲ್ಲ. ಉಳಿದವರೆಲ್ಲಾ ಯಾಕೆ  ಈ ಲಿಸ್ಟ್‌ನಲ್ಲಿ ಬರ್ತಿಲ್ಲ. ಪಕ್ಕದೂರಿನ ಅಂಕಲ್ಲು... ಹಳೆಯ ಮೇಸ್ಟ್ರೂ... ಹೋದ ವರ್ಷ ಟ್ರಾನ್ಸ್‌ಫರಾದ ಕ್ಲೋಸ್ ಅಧಿಕಾರಿ... ಇನ್ಯಾರೋ ಪೋಸ್ಟ್ ಮಾಸ್ತರು... ಆಚೆ ಕಡೆಯ ರಸ್ತೆಯ ಊರು ಬಿಟ್ಟು ಹೋದ ವಂದನಾ ಮಾಮಿ... ಆವತ್ತು ಇದ್ದಕ್ಕಿದ್ಡಂತೆ ಮನೆಯವರಿಗೆಲ್ಲ ಔತಣ ನೀಡಿ ನಿಜಕ್ಕೊ ಖುಷಿ ಪಡಿಸಿದ್ದ ಮಾವ... ಇವರೆಲ್ಲಾ ಯಾಕೆ ಒಂದು ಸಲವಾದರೂ ನಮಗೆ ಮಿಸ್ ಅನ್ನಿಸೋಲ್ಲ
           ಅಷ್ಟೇಕೆ ಜೊತೆ ಜೊತೆಯಲ್ಲೇ ಬೆಳೆದ ಕನಿಷ್ಟ ಇಪ್ಪತ್ತು ವಸಂತಗಳನ್ನಾದರೂ ಜೊತೆಯಲ್ಲೇ ಕಳೆದ ಅಣ್ಣ ತಮ್ಮ ಅಕ್ಕಂದಿರನ್ನು ಯಾಕೆ ಮಿಸ್ ಮಾಡ್ಕೋಳ್ಳಲ್ಲ... ಅದ್ಯಾಕೆ ಇಷ್ಟು ನಮ್ಮನ್ನು ಪ್ರೀತಿಯಿಂದ ಬೆಳೆಸಿ ಪಡಬಾರದ ಕಷ್ಟಪಟ್ಟು ಬೆಳೆಸಿದ ಅಮ್ಮನ್ನ .. ನಮಲ್ಲೊಂದು ನಮ್ಮ ಮನಸ್ಸು ದೇಹಕ್ಕೊಂದು ತುಂಬು ತಾಕತ್ತನ್ನು ಬೆಳೆಸಿದ ಅಪ್ಪನನ್ನು ಯಾಕೆ ಮಿಸ್ ಮಾಡಿಕೊಳ್ಳಲ್ಲ...? ಎಂದಾದರೂ ನಿಮ್ಮಮ್ಮನಿಗೋ ಅಪ್ಪನಿಗೋ... ತುಂಬಾ ಮನಸ್ಸಿನಿಂದ ಪುಟ್ಟ ತಂಗಿಗೋ " ಐ ಮಿಸ್ ಯು ರಿಯಲ್ಲಿ ..." ಎಂದು ಎಸ್ಸೆಮ್ಮೆಸ್ಸು ಕಳುಹಿಸಿದ್ದು ಇದೆಯಾ..? ಇದೆ ಎಂದಾದರೆ ನಿಜಕ್ಕೂ ಆ ಮೆಸೇಜು ಪಡೆದಾತ ತುಂಬಾ ಪುಣ್ಯವಂತ. ಅಪರೂಪಕ್ಕೊಮ್ಮೆ ಅಕ್ಕತಂಗಿಯರು ಫ್ರೆಂಡ್ಸ್ ತರಹದವರು " ಸೆಂಡ್ " ಎಂದು ಕೀ ಕುಟ್ಟಿರಬಹುದು ಅಷ್ಟೆ.
        ವಿಚಿತ್ರ ಅನ್ನಿಸಲ್ವಾ... ನಮ್ಮದೇ ರಕ್ತಗಳ ಜೊತೆಗೆ ನಮ್ಮದೇ ಸಂತೋಷವನ್ನು ಹಂಚಿಕೊಳ್ಳುವಾಗ ನಾವ್ಯಾವತ್ತೂ ಮಿಸ್ ಮಾಡಿಕೊಳ್ಳೊದೇ ಇಲ್ಲ. ಇವನಿಗೆ ಅದೇ ನಿನ್ನೆ ಮೊನ್ನೆ ಪರಿಚಯವಾದ ತುಂಡು ಮಿಡಿಯ ಹುಡುಗಿಯದೇ ಹಗಲೂ ರಾತ್ರಿ ಧ್ಯಾನ... ಮೊನ್ನೆಯಷ್ಟೆ ಪರಿಚಯವಾಗಿ ಕೈಗೊಂದಿಷ್ಟು ಹೂವಿನೆಸಳು ಸೇರಿಸಿದ ಬೊಕ್ಕೆ ಇಟ್ಟು, ಕೈಗೊಂದು ಗ್ರೀಟಿಂಗ್ಸು ಕೊಟ್ಟು " ಸೊ ನೈಸ್ ಆಫ್ ಯು " ಎಂದುಬಿಟ್ಟ ಆ ಪಡ್ಡೆಯ ಕೆದರಿದ ಕೂದಲಿನ ಹಳೆಯ ಜೀನ್ಸ್‌ನ ರಂಗೇ... ಮನದಲ್ಲಿ ಕ್ಯಾನ್ವಾಸ್ ಬರೆದು ತಾನೇ ತಾನಾಗಿ ಚಿತ್ರಿಸುತ್ತಿದೆ ಹುಡುಗಿಯ ಮನದಲ್ಲಿ. ಯಾಕ್ಹೀಗೆ...? ಮನಸ್ಸು ತನಗೆ ಇಷ್ಟವಾದಾಗ  ಇಷ್ಟವಾಗೋ ರೀತಿಯಲ್ಲಿ ಸ್ವೀಕರಿಸುತ್ತದೋ ಆಗ ಆಗೋದೇ ಹೀಗೆ.
          ಹದಿವಯಸ್ಸಿನ ರಂಗು ರಂಗೇರುವ ಕಾಲಕ್ಕೆ ನಡೆಯುವ ವಿದ್ಯಮಾನದಲ್ಲಿ ಹೃದಯಗಳಿಗೆ ಮನಸ್ಸಿನದೋ ಪ್ರೀತಿಯದ್ದೋ ಮೊರೆತ ಬಿಟ್ಟರೆ ಬೇರೆ ಕೇಳಿಸುವುದೇ ಇಲ್ಲ. ಯಾವಾಗಲೂ ಅದೇ ಧ್ಯಾನ. ಹೀಗಾಗುವುದರಿಂದಲೇ ಇದ್ಡಕ್ಕಿದ್ದಂತೆ ಇಬ್ಬರಿಗೂ " ಮಿಸ್ " ಎನ್ನಿಸಲಿಕ್ಕೆ ಶುರುವಾಗಿಬಿಡುತ್ತದೆ. " ಡು ಯು ರಿಯಲಿ ಮಿಸ್ ಮಿ... ? " ಎಂದು ಮೇಲಿಂದ ಕೇಳೋದು ಬೇರೆ. ಅಷ್ಟಕ್ಕೆ ಆ ಹುಡುಗ " ನಿಜವಾಗ್ಲೂ ಕಣೆ... ನಂಗೆ ನಿನ್ನ ನೆನಪಾದ್ರೆ ನಿದ್ರೆ ಊಟ ಯಾವುದೂ ಸೇರ್ತಾನೆ ಇಲ್ಲ... ಟಿ.ವಿ. ನೋಡ್ತಾನೂ ನಿನ್ನ ಮಿಸ್ ಮಾಡ್ಕೋಳ್ತಿನಿ ಗೊತ್ತಾ" ಎಂದು ಗೋಗರೆಯುತ್ತಾ ಹಲಬುತ್ತಾನೆ. ಮಾತುಗಳನ್ನು ಹರ್ಭಜನ್‌ಗಿಂತಲೂ ಕೊಂಚ ಜಾಸ್ತಿನೇ ಎನ್ನುವಂತೆ ಸ್ಪಿನ್ ಮಾಡುತ್ತಾನೆ. ಅಷ್ಟೆ ಸರಿಯಾಗಿ ನೆತ್ತಿ ಮಾಸು ಹಾರದ, ಬ್ರಾ ಸೈಜು ಅಳತೆ ಮಾಡಿಕೊಳ್ಳಕ್ಕೆ ಬರದ ಹುಡುಗಿ ಅಷ್ಟಕ್ಕೆ ಕ್ಲೀನ್ ಬೋಲ್ಡ್. ಆಚೀಚೆ ಸರಿಸಿ ನೋಡಿದರೆ ಆಕೆಗಿನ್ನೂ ತಿಂಗಳು ಯಾವಾಗ ಬರುತ್ತದೆ ಎಂದು ಲೆಕ್ಕ ಹಾಕಿಕೊಳ್ಳಲೇ ಬರುತ್ತಿರುವುದಿಲ್ಲ. ಕೊನೆ ಕ್ಷಣದಲ್ಲಿ ಪ್ಯಾಡ್ ತಂದುಕೊಳ್ಳುವ ಧಾವಂತದ ಕನ್ಪ್ಯೂಸ್ ಸ್ಟೇಟ್‌ನವಳು ಆಕೆ. ಅವಳೂ ಬೇರೆನೂ ಹುಡುಗನಷ್ಟು ನಾಚಿಕೆ ಬಿಟ್ಟು ಸಲೀಸಾಗಿ ಬೇರೇನೂ ಹೇಳಲು ಆಗದಿದ್ದರೂ ಅದಕ್ಕೊಂದು ಕೊನೆಯಲ್ಲಿ " ಐ ಟೂ " ಎಂದು ಉಸುರಿ ಸೇರಿ ಬಿಡುತ್ತಾಳೆ.
        ಅಲ್ಲಿಂದ ಶುರುವಾಗೋ ಮಿಸ್ಸಿಂಗು ಕೊನೆ ಕೊನೆಗೆ ಇಬ್ಬರೂ ಮಿಸ್ ಆಗುವವರೆಗೂ ನಡೆಯುತ್ತಲೇ ಇರುತ್ತದೆ. ಕೊಂಚ ಯೋಚಿಸಿ. ನಿದ್ರೆ ಊಟ ಬೇಡವಾದ ಹುಡುಗನಿಗೆ ಕಕ್ಕಸಿಗೆ ಅರ್ಜೆಂಟು ಆದ್ರೆ ತಡೆಯೋ ತಾಕತ್ತಿದೆಯಾ. " ನಿನ್ನ ನೆನಪಲ್ಲಿ ಕಕ್ಕಸಿಗೆ ಹೋಗೋದನ್ನೆ ಮರೆತು ಬಿಟ್ಟೆ ಕಣೆ... ಐ ಮಿಸ್ ಯು " ಎಂದ್ಯಾವನಾದ್ರೂ ಹೇಳಲಿ ನೋಡೋಣ... ಅಥವಾ ನಿನ್ನ ನೆನಪಲ್ಲಿ ಸ್ನಾನ ಮಾಡೋದು ಮರೆತು ಬಿಟ್ಟೆ ಹಲ್ಲುಜ್ಜೋದು ಮರೆತು ಬಿಟ್ಟೆ  ಆಗೆಲ್ಲ " ಐ ಮಿಸ್ ಯು " ಅನ್ನಲಿ ನೋಡೋಣ. ಅದು ಬಿಟ್ಟು ಕಾಸಿಗೊಮ್ಮೆ ಕೊಸರಿಗೊಮ್ಮೆ ಮನಸ್ಸಿಗೆ ಖುಷಿಯಾಗೋ ಅನ್ನಿಸೋ ಮೊಮೆ೦ಟಿಗೆ ಮಾತ್ರ ಮಿಸ್ಸಿಂಗು ಅಂತಾರಲ್ಲ ಈಗ ಹೇಳಿ ನಿಜವಾಗಿಯೂ ಅದು ಮಿಸ್ಸಿಂಗು ಅನ್ನಿಸುತ್ತಾ... ?
        ಅದೇ ಒಮ್ಮೆ ತಪ್ಪದೇ ನಿಮ್ಮ ರಿಸಲ್ಟ್ ಬಂದಾಗ್ಲೋ ಅಥವಾ ಯಾವುದಾದರು ಸಣ್ಣ ಪ್ರಶಸ್ತಿ ಬಂದಾಗಲಾದರೂ ಅಪ್ಪನಿಗೆ ಫೋನು ಮಾಡಿ " ನಿಜವಾಗಿಯೂ ನೀನಿರಬೇಕಿತ್ತು ಪಪ್ಪ. ನಾನು ಸ್ಟೇಜ್ ಮೇಲಿದ್ದಾಗ ರಿಯಲಿ ಐ ಮಿಸ್ಡ್ ಯು... " ಎಂದು ಬಿಡಿ. ಅಷ್ಟು ಸಾಕು ಆ ಹಿರಿಯ ಜೀವಕ್ಕೆ. ಜೀವನದಲ್ಲಿ ಅದಕ್ಕಿಂತಲೂ ದೊಡ್ಡ ಮಿಸ್ಸಿಂಗು ಆಗಿರಲು ಸಾಧ್ಯವೇ ಇಲ್ಲ ಅನ್ನಿಸಿಬಿಡುತ್ತೇ. ಪುಟ್ಟ ತಂಗಿಗೆ ಫೋನು ಮಾಡಿ " ಚಿಕ್ಕ ಪಾರ್ಟಿಲಿ ಫ್ರೆಂಡ್ಸ್ ಮನೇಲಿ ಇದೇನೆ... ನೀನಿರಬೇಕಿತ್ತಮ್ಮ. ಐಸ್ ಕ್ರೀ೦ ಅಂದ್ರೆ ನಿಂಗೆ ತುಂಬಾ ಇಷ್ಟ ಅನ್ನಿಸಿ ನೆನಪಾಯಿತು. ಮಿಸ್ಸಿಂಗ್ ಯು " ಅಂದು ನೋಡಿ.. ನಿಜಕ್ಕೂ ಮಿಸ್ ಆಗುತ್ತಿರುವುದೇನೆಂದು ಗೊತ್ತಾಗುತ್ತದೆ. ಇದರರ್ಥ ಪ್ರೀತಿಸುವವರೂ ಹುಡುಗರೂ ಹದಿ ವಯಸಿನವರೂ ಮಿಸ್ಸ್ ಮಾಡಿಕೋಬಾರದು ಅಂತಲ್ಲವಾದರೂ ನಿಜಕ್ಕೂ ನಾವು ಮಿಸ್ ಮಾಡಿಕೊಳ್ತಿರೋದಾದರೂ ಏನು ಗೊತ್ತಾಗಬೇಕಲ್ವಾ ?
      ನಿಜಕ್ಕೂ ನನಗೊಂದು ಎಸ್ಸೆಮ್ಮೆಸ್ಸೋ ಅಥವಾ ನೇರ ಕರೆಯೊ ಮಾತಾಡಿ ನಿಜಕ್ಕೂ ಮಿಸ್ ಮಾಡಿಕೊಂಡದ್ದನ್ನು ಖಚಿತಪಡಿಸಿದಾಗ ಮಾತ್ರ. ಈ ರೀತಿ ಮಾತಾಡಿದಾಗ ನಾನೂ ನಿಜಕ್ಕೂ ಕೆಲವಾದರೂ ಓದುಗರನ್ನ ಮಿಸ್ ಮಾಡಿಕೊಂಡಿದ್ದು ಸುಳ್ಲಲ್ಲ ಎನ್ನಿಸಿತು. ಎಷ್ಟೆ ಬರೆದರೂ ಎಷ್ಟೆ ಓದಿದರೂ ಇಂಥದ್ದೊಂದು ಇದೆ ಎಂದು ನೆನಪಿನಲ್ಲುಳಿಯುತ್ತದಲ್ಲ... ಬಾರದಿದ್ದಾಗ ಅರೇ ಬರಲಿಲ್ಲ. ಛೇ ಎನ್ನಿಸುತ್ತದಲ್ಲ... ಅದಕ್ಕಿಂತ ಮಿಸ್ ಬೇಕಾ ?


Saturday, September 7, 2013

ಏಕಾಂತ ಎನ್ನುವ ಪರಮ ಸುಖ .... !!!

      ನಿಜಕ್ಕೂ ಮನುಶ್ಯನೊಬ್ಬ ತನ್ನ ಬಗ್ಗೆ ಯೋಚಿಸಿಕೊಳ್ಳಲು ಸಿಗುವ ಪ್ರಶಸ್ತ ಏಕಾಂತ ಸ್ಥಳವೆಂದರೆ ಒಂದು ಬಾತ್ ರೂಮಿನಲ್ಲಿ... ಎರಡನೆಯದ್ದು ಟಾಯ್ಲೆಟ್ಟಿನಲ್ಲಿ... ಬೃಹತ್ ಯೋಚನೆಗಳು ಕೆಲವೊಮ್ಮೆ ಅದ್ಭುತ ಐಡಿಯಾಗಳು ಹೊಳೆಯುವುದೇ ಏಕಾಂತದಲ್ಲಿ ಅದೂ ಈ ಇರುಕಾದ ಟಾಯ್ಲೆಟ್ಟು ಎನ್ನುವ ಮೂರು ಬೈ ನಾಲ್ಕರ ರೂಮಿನಲ್ಲಿ ಎಂದರೆ ಆಶ್ಚರ್ಯ ಪಡಬೇಕಾಗಿಲ್ಲ. ದಿನದಲ್ಲಿ ಒಮ್ಮೆ ಅಥವಾ ಎರಡು ಬಾರಿ ಲಭ್ಯವಾಗುವ ಕೆಲವು ನಿಮಿಷಗಳು ಏನೇನೆಲ್ಲಾ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗುತ್ತವೆ ಎನ್ನೋದು ಅನುಭವಿಸಿದವರಿಗೇ ಗೊತ್ತು. ನಿಜಕ್ಕೂ ಮನೆಯಲ್ಲೊಂದು ಸಂಗೀತ ಸಾಧನ ಟೇಪ್.. ಸಿ.ಡಿ.ಪ್ಲೇಯರಿದ್ದು ಅದ್ಭುತವಾದ ಸಂಗೀತವನ್ನು ಕೇಳುವ ಮತ್ತು ಅಂತಹ ಹಾಡುಗಳ ಒಂದು ಸಂಗ್ರಹ ಬಳಿಯಲ್ಲಿದ್ದರೆ ಅದರ ಮಜವೇ ಬೇರೆ.
        ಅದರ ಜೊತೆಗೆ ಏಕಾಂತದಲ್ಲಿ ಸರಕ್ಕನೆ ಬಂದು ಅಡರಿಕೊಳ್ಳುವ ಕಾಮ... ಕುಡಿತ... ದೂರವಾಣಿಲಿ ಸಂಭಾಷಿಸುವಂತಹ ವ್ಯಸನಗಳು ಮನುಶ್ಯನಿಗಿಲ್ಲದಿದ್ದರೆ ಆ ಏಕಾಂತದ ಅನುಭವವೇ ಅದ್ಭುತ. ಎಷ್ಟೊಂದು ಕೆಲಸಗಳು... ಐಡಿಯಾಗಳು... ಅಛೀವ್‌ಮೆಂಟುಗಳಿಗೆ ಬೇಕಾಗುವ ಅಪರೂಪದ ಎಲಿಮೆಂಟುಗಳ ವಿವರಗಳು.. ಅಷ್ಟೇಕೆ ಕಟ್ಟಕಡೆಯಲ್ಲಿ ಸ್ನಾನ ಮಾಡಿ ಬರುವಾಗ ಹೇಗಿದ್ದರೂ ಯಾರೂ ಇಲ್ಲ.. ಹೇಗಿದ್ದರೇನು ಎಂದುಕೊಂಡು ನೇರಾ ನೇರ ನಗ್ನ ಮುನಿಯಂತೆ ಬಾತ್ ರೂಮಿನಿಂದ ಬೀಳುತ್ತಿರುವ ಟವಲ್ ಲೆಕ್ಕಿಸದೇ ಈಚೆಗೆ ಬಂದೂ ಬಿಡುವ ಖಯಾಲಿ ಬಹುಶ: ಏಕಾಂತದಲ್ಲಲ್ಲದೇ ಬೇರೆಯ ಹೊತ್ತಿನಲ್ಲಿ ಬರಲು ಸಾಧ್ಯವೇ ಇಲ್ಲವೇನೋ...? ಸುಖಾಸುಮ್ಮನೆ ಬಿದ್ದುಕೊಂಡಿರುವುದೂ ಅಲ್ಲದೇ... ಗಂಟೆಗಟ್ಟಲೇ ಮಾತೇ ಆಡದೇ ನಮ್ಮಷ್ಟಕ್ಕೆ ಗುನುಗುನಿಸಿಕೊಳ್ಳದೇ... ಸುಮ್ಮನೇ ಚಾಚಿದ ಕಾಲು ಸರಿಸದೆ.. ಉರಿಯುವ ಬಲ್ಬು... ಹೊಡೆದುಕೊಳ್ಳುತ್ತಿದ್ದ ಟಿ.ವಿ. ಉಹೂಂ.. ಯಾವೆಂದರೆ ಯಾವೂದೂ ಕೂಡಾ ಬದಲಿಸದೆ ಬಿದ್ದುಕೊಂಡು ಬಿಡುವ... ಇದ್ದ ಇಷ್ಟೆ ಹಳೆಯ ಸಾರು.. ಬ್ರೆಡ್ಡು.. ನಿನ್ನೆಯ ರೋಟಿ.. ಎಲ್ಲ ಓ..ಕೆ.. ಆದರೆ ಈ ಅದ್ಬುತ ಏಕಾಂತವನ್ನು ಅನುಭವಿಸುವ ಮತ್ತು ಅದನ್ನು ಉಪಯೋಗಿಸಿಕೊಳ್ಳುವ ಮನಸ್ಸು ನಮಗಿರಬೇಕು ಅಷ್ಟೆ. ಅಂತಹದ್ದೊಂದು ಏಕಾಂತಕ್ಕಾಗಿ ನಾನು ಯಾವಾಗ್ಲೂ ಹಾತೊರೆಯುತ್ತೇನೆ. ತೀರ ಟೆಲಿಫೋನ್ ಲೈನಗಳನ್ನು ತೆಗೆದಿಟ್ಟು ಕಂಪ್ಯೂಟರಿನಲ್ಲಿರುವ ಆಶಾಳಿಗೆ ಜೀವ ಕೊಟ್ಟು, ಸಣ್ಣಗೆ ಆಕೆ " ಲಗ ಜಾ ಗಲೇ ಕೆ ಫೀರ್ ಯೆ ಹಸಿ ರಾತ್ ಹೋನ ಹೋ..." ಹಾಡುತ್ತಿದ್ದರೆ ಕುಳಿತಲ್ಲೇ ಜೀವ ಕಂಪಿಸಿಬಿಡಬೇಕು. ಹಾಗೇ ಅನಾಮತ್ತು ಆರು ದಿನ ಒಂದೇ ಒಂದು ಹೊರಗಿನ ಜೀವಿಯ ಸಂಪರ್ಕವೂ ಇಲ್ಲದಂತೆ ಬದುಕಿಬಿಟ್ಟಿದ್ದೆ ಕೇವಲ ಎಕ್ಸ್‌ಫೆರಿಮೆಂಟು ಎಂದು.

         ಬಹುಶ: ೧೯೯೮ ನವೆಂಬರ್ ಮಧ್ಯಭಾಗವಿರಬೇಕು. ನಾನು ಬೆ೦ಗಳೂರಿನಿಂದ ಪಯಣಿಸುತ್ತಿದ್ದೆ. ಸರಿ ಸುಮಾರು ಮಧ್ಯರಾತ್ರಿ ಒಂದೂವರೆ ಹೊತ್ತಿಗೆ ಮಲಗಿದ್ದವರು ಅಲ್ಲೆ ಮಗುಚಿ ಬೀಳುವಂತೆ ಡ್ರೈವರು ಬ್ರೇಕಿಸಿದ. ಸರಿಯಾಗಿ ಹರಿಹರ ದಾಟಿ ರಾಣೆಬೆನ್ನೂರು ಕಡೆ ಹೋಗುವ ದಾರಿಯಲ್ಲಿ ನಡೆದ ಆಕ್ಸಿಡೆಂಟ್ ಅದು. ಮುಂದೆ ನಿಂತಿದ್ದ ಲಾರಿ ಮತ್ತು ಬೇರೊಂದು ಬಸ್ಸಿನ ನಡುವೆ ನುಜ್ಜುಗುಜ್ಜಾಗಿದ್ದ ಮಾರುತಿ ವ್ಯಾನಿನಿಂದ ಅರೆ ಜೀವಗಳು ಒದ್ದಾಡುತ್ತಿದ್ದವು. ತೀರ ಕತ್ತಲಿನ ಅಪರಾತ್ರಿ. ದೇಹವೊಂದು ಈಚೆಗೆ ಬಂದು, ಬರೀ ಕೈ ಮಾತ್ರ ಗಾಳಿಯಲ್ಲಿ ಅಲುಗಾಡುತ್ತಾ ರಸ್ತೆಯ ಮಧ್ಯದಲ್ಲಿ ಭೀಕರತೆಯನ್ನು ಸೃಷ್ಟಿಸಿತ್ತು. ಬಹುಶ: ಯಾರೆಂದರೆ ಯಾರೂ ಬದುಕಿರಲಿಲ್ಲ. ಡ್ರೈವರ್ ಸೀಟಿನಲ್ಲಿದ್ದ ವ್ಯಕ್ತಿಯ ತಲೆ ಹೊಟ್ಟೆಯ ಭಾಗದಲ್ಲಿತ್ತು. ಆ ಅಫಘಾತಕ್ಕೂ ನಮ್ಮ ಬಸ್ಸಿಗೂ ಏನೆಂದರೆ ಏನೂ ಸಂಬಂಧವಿರಲಿಲ್ಲ. ಆದರೆ ಅದನ್ನು ಕೊಟ್ಟಕೊನೆಯಲ್ಲಿ ನೋಡಿದ ಚಾಲಕ ಸರಕ್ಕನೇ ಬ್ರೇಕ್ ತುಳಿದಿದ್ದ. ಸೀಟಿನ ಕೆಳಗೆ ಕಾಲು ಚಾಚಿ ಹಿಂದಕ್ಕೆ ಒರಗಿಕೊಂಡಿದ್ದ ನಾನು ಆ ವೇಗಕ್ಕೆ ಸಿದ್ಧನಿರಲಿಲ್ಲ. ಕಾಲು ಅಲ್ಲೇ ಇತ್ತು ದೇಹ ಮುಂದಕ್ಕೆ ಸರಿಯಿತು. ಪಾದ ಕದಲಿಸಲಾಗದಂತೆ ಲಗೇಜು ಇದ್ದುದರಿಂದಾಗಿ ಅಲ್ಲಿ ಹೊರಳಿಕೊಂಡು ಬಿಟ್ಟಿತು.

     ಎಲ್ಲರಿಗೂ ಅಷ್ಟಿಷ್ಟು ಏಟಾಗಿದ್ದವು. ಅಂತಹ ದೊಡ್ಡ ಗಾಯಗಳೇನೂ ಆಗಿರಲಿಲ್ಲ. ಆದರೆ ನನಗೆ ಎಲ್ಲಿ ಫ್ರಾಕ್ಚರ್ ಆಗಿದೆಯಾ ಎಂದು ಅನುಮಾನ ಬರುತ್ತಿತ್ತು. ಯಾಕೆಂದರೆ ಅದು ಕ್ಷಣ ಕ್ಷಣಕ್ಕೂ ಊದಿಕೊಳ್ಳುತ್ತಿತ್ತು. ಕೂಡಲೇ ಶೂ ತೆಗೆದು ನೀಟಾಗಿ ಇನ್ನೊಂದು ಸಾಕ್ಸ್ ಹಾಕಿ ಕಟ್ಟಿ ಮತ್ತಷ್ಟು ಊದಿಕೊಳ್ಳದಂತೆಯೂ, ಅಲುಗಾಡದಂತೆಯೂ ಬಿಗಿದು ಬೆಳಗಿನವರೆಗೆ ಹಾಗೇ ಕುಳಿತು ಬಿಟ್ಟೆ. ಊರಿಗೆ ತಲುಪಿದವನೇ ಇಳಿದು ಅಲ್ಲೇ ಇದ್ದ ಲೈಟು ಕಂಭಕ್ಕೊರಗಿ ನಿಂತು ಆಟೋ ಕರೆದು ಅವನ ಸಹಾಯದಿಂದ ಮನೆ ಸೇರಿಕೊಂಡಾಗ ಆ ಆದ್ಭುತ ಐಡಿಯಾ ಹೊಳೆದಿದ್ದು. ಕೂಡಲೇ ಆಟೋದವನಿಗೆ ಹೇಳಿದೆ. ಒಂದು ಗಂಟೆಯ ನಂತರ ಹಿಂದಿರುಗಿ ಬರುವಂತೆ. ಮನೆಯಲ್ಲಿ ಒಂಟಿಗಾಲಲ್ಲಿ ಓಡಾಡುತ್ತಾ ಸ್ನಾನ ಮುಗಿಸಿ ಹಾಸ್ಪಿಟಲ್‌ಗೆ ಹೋಗಿ ಎಕ್ಸರೇ ತೆಗೆಸಿದರೆ, ಸದ್ಯ ಮೂಳೆ ಮೂರಿದಿರಲಿಲ್ಲ. ಬಿರುಕೂ ಇರಲಿಲ್ಲ.

          ಆದರೆ ಹೊರಳಿದ ರಭಸಕ್ಕೆ ನರಗಳು ತಿರುಚಿಕೊಂಡು ಬಿಟ್ಟಿದ್ದವು. ಹಾಗಾಗಿ ಒಂದು ವಾರ ಬೆಡ್ ರೆಸ್ಟ್ ಎಂದು ಬ್ಯಾಂಡೇಜು ಬಿಗಿದು ನನ್ನನ್ನು ಮೂಟೆಯಂತೆ ಆಟೋಗೆ ತುಂಬಿಸಿದರು. ಡ್ರೈವರ್ ಸಹಾಯ ಪಡೆದು ಆರು ದಿನಕ್ಕಾಗುವಷ್ಟು ಹಾಲಿನ ಪುಡಿ... ಮೊಟ್ಟೆ... ಬ್ರೆಡ್ಡು... ವೆಜಿಟೇಬಲ್ಸ್ ತೆಗೆದುಕೊಂಡು ಮನೆಯೊಳಕ್ಕೆ ನಡೆದು ಹೋದವನ ಮನೆಯ ಬಾಗಿಲು ತೆಗೆಯುತ್ತಿದ್ದುದು ಬೆಳಿಗ್ಗೆ ಎಚ್ಚರಾಗಿ ಪೇಪರು ತೆಗೆದುಕೊಳ್ಳುವಾಗ ಮಾತ್ರ. ಇಲ್ಲದಿದ್ದರೆ ಅನಾಮತ್ತು ಆರು ದಿನ ಬಾಗಿಲು ತೆಗೆಯದೆ ಹೊರಕ್ಕೆ ಹೋಗದೆ... ಸ್ನಾನ... ಟಾಯ್ಲೆಟ್ಟು. ತಿಂಡಿ.. ಪೇಪರು..ಟಿ.ವಿ. ಸಿ.ಡಿ.ಯಲ್ಲಿ ಕಿಶೋರನ ಹಾಡು... ಕಣ್ತುಂಬಾ ನಿದ್ದೆ. ರಾತ್ರಿಗೆ ಫ್ರಿಜ್ಜಿನಲ್ಲಿ ಇದ್ದೇ ಇರುತ್ತಿದ್ದ ಬಿಯರು....

       ಅಷ್ಟೆ... ಹಾಗೆ ಕಳೆದ ತೀರ ಆರನೆಯ ದಿನ ಸಂಜೆ ಬೆಲ್ ಆಯಿತು. ದಿನಾಲು ಲೈಟು ಉರಿಯುತ್ತಿತ್ತು. ಪೇಪರು ಕಾಣೆಯಾಗುತ್ತಿದೆ. ಆದರೆ ಈ ಮನುಶ್ಯ ಯಾಕೆ ಹೊರಗೆ ಬರುತ್ತಿಲ್ಲ ಎಂದು ಸ್ನೇಹಿತ ಬಂದು ಬೆಲ್ ಬಾರಿಸಿದ್ದ. ಅಲ್ಲಿಗೆ ನನ್ನ ಏಕಾಂತ ವಾಸ ಕೊನೆಗೊಂಡಿತ್ತು. ಕಾಲು ಸುಮಾರಾಗಿ ವಾಸಿಯಾಗಿತ್ತಾದರೂ ಇನ್ನೂ ಊರಲಾಗುತ್ತಿರಲಿಲ್ಲ. ಹಾಗಾಗಿ ಅವನೇ ಮುಂದೆ ನೋಡಿಕೊಂಡ. ಆದರೆ ಅದ್ಭುತವಾಗಿ ಕಳೆದು ಹೋದ ಆ ಆರು ದಿನಗಳು ನಿಜಕ್ಕೂ ಒಬ್ಬಂಟಿತನದ ಮುಕ್ತತೆಗೊಂದು ಅರ್ಥ ಕಲ್ಪಿಸಿದ್ದವೆಂದರೂ ಸರಿನೇ. ಯಾಕೆಂದರೆ ಮಾಮೂಲಿನಂತೆ ಬೆಳಗು... ರಾತ್ರಿ... ಮಧ್ಯೆ ಅನಾವಶ್ಯಕ ಕಿರಿಕಿರಿಗಳಿಲ್ಲ. ಇನ್ನೇನು ಬೇಕು.

      ತೀರ ನಿಜಕ್ಕೂ ಅನುಭವಿಸಬೇಕಾದಂತಹ ಶಾಂತತೆ ಇರುತ್ತಿತ್ತು. ಮಾತು ಅಸಲಿಗೆ ಇಲ್ಲವೇ ಇಲ್ಲ. ತೀರ ಯಾವಾಗಲಾದರೊಮ್ಮೆ ಸಣ್ಣದಾಗಿ ಮೊದಲೆರಡು ದಿನ ಹಾಡು ಗುನುಗಿಸಿದ್ದೆ ಅನ್ನೋದು ಬಿಟ್ಟರೆ ಕೊನೆಕೊನೆಗೆ ಮನಸ್ಸಿನಲ್ಲೂ ಯೋಚನೆಗಳೂ ಸ್ಥಗಿತಗೊಳ್ಳಲಾರಂಭಿಸಿದ್ದವು. ಮನಸ್ಸು ಮತ್ತು ದೇಹದೊಂದಿಗಿನ ಸಂಬಂಧವೇ ಕಡಿದು ಹೋಗುತ್ತಿರುವ ಫೀಲಿಂಗ್ ಆರ೦ಭಗೊಳ್ಳುವ ಅಪರೂಪದ ಕ್ಷಣ ಆಗ ಆರಂಭವಾಗಿತ್ತು. ಮಾತಂತೂ ನಿಂತು ಹೋಗಿತ್ತು. ಮನಸ್ಸು ತನ್ನಷ್ಟಕ್ಕೆ ಮೌನವಾಗಿ ಸ್ಥಮ್ಭಿಸಿಬಿದುತ್ತಿತ್ತು. ಯಾಕೆಂದರೆ ಎಲ್ಲ ಯೋಚನೆಗಳಿಂದ ಚಿಂತೆಗಳಿಂದ ಮುಕ್ತವಾಗಿ ಮನಸ್ಸನ್ನು ಹರಿಯಲು ಬಿಟ್ಟು ತುಂಬು ಏಕಾಗ್ರತೆಯಿಂದ ಕುಳಿತುಬಿಡೋದೇ ಧ್ಯಾನ ಅಲ್ಲವಾ... ? ಏನು ಮಾಡುತ್ತಿದ್ದೇನೆ ಎನ್ನುವ ಅರಿವೂ ಇಲ್ಲದ ಹಾಗೆ ಗಂಟೆಗಳು ಕಳೆದುಹೋಗುತ್ತಿದ್ದವು. ತೀರ ನಿಸರ್ಗ ಸಹಜ ಬಾಧೆಗಳನ್ನು ಹೊರತು ಪಡಿಸಿದರೆ ಮತ್ತಾವ ಸಂವೇದನೆಗಳೂ ಅರಿವಿಗೆ ಬರುವುದನ್ನು ಕಡಿಮೆ ಮಾದತೊದಗಿದ್ದವು. ನಿಶಬ್ದ.. ಸಂಗೀತ.. ಶಾಂತಿ... ಓದು.. ಮೌನದಲ್ಲೇ ನಿದ್ದೆ.. ನಿದ್ದೆಯಲ್ಲೂ ಮೌನ.... ಇನೇನು ಬೇಕು.. ಆದರೆ ಹಾಗೊಂದು ಅಪರೂಪದ ಕ್ಷಣಗಣನೆಯ ಹಂತವನ್ನು ನಾನು ತಲುಪುವ ಸಮಯಕ್ಕೆ ಆ ಏಕಾಂತ ಮುಗಿದಿತ್ತು. ಬಹುಶ: ಬೇರೆ ಬೇರೆ ರೀತಿಯ ಅನುಭವಗಳೂ ಆಗಬಹುದೇನೋ. ಆದರೆ ನಾವು ಯಾವ ಯಾವ ರೀತಿಯ ಪರಿಸರದಲ್ಲಿ ಏಕಾಂತ ಕಳೆಯುತ್ತೇವೆಯೋ ಅದರ ಮೇಲೆ ಅವಲಂಬಿಸುತ್ತದೆ ಎನ್ನುವುದೂ ಅಷ್ಟೆ ಸತ್ಯ.

ಯಾಕೆಂದರೆ ಒಮ್ಮೆ ಗಂಡ ಮನೆಯಿಂದ ಹೊರಟ ಮೇಲೆ ಎಷ್ಟೊ ಮಹಿಳೆಯರಿಗೆ ವಾಪಸ್ಸು ಮಗು ಬರುವವರೆಗೆ ಅದ್ಭುತ ಏಕಾಂತ ಬೇಡವೆಂದರೂ ಲಭ್ಯ. ನಮ್ಮಲ್ಲೊಂದು ಗಮ್ಯವಿದ್ದರೆ ಲಭ್ಯವಾಗುವ ಏಕಾಂತ ನಿಜಕ್ಕೂ ತುಂಬಾ ದಿವ್ಯ ಅನುಭವವೇ. ಆದರೆ ಏಕಾಂತ ಕೆಲವೊಬ್ಬರಿಗೆ ಹಿಂಸೆಯಾಗಿ ಪರಿವರ್ತಿತವಾಗುವುದೂ ಇದ್ದೇಇದೆ. ಯಾಕೆಂದರೆ ಯಾವಾಗಲೂ ಲಭ್ಯವಾಗುವ ಏಕಾಂತವೇ ಕೆಲವೊಮ್ಮೆ ಬೇಡ ಎನ್ನಿಸಿಬಿಡಲೂ ಬಹುದು. ನಮ್ಮ ಬಗೆಗೆ ನಾವೇನು ಎಂದು ಆತ್ಮ ವಿಮರ್ಶೆಗೆ ಬಹುಶ: ಏಕಾಂತದಷ್ಟು ಸೂಕ್ತ ಸಮಯ ಬೇರೊಂದಿಲ್ಲವೇನೋ...? ಆದರೆ ಮನಸ್ಸೆ ಗೊಬ್ಬರದ ಗುಂಡಿಯಂತೆ ಮಾಡಿಕೊಂಡವರಿಗೆ ಏಕಾಂತ ಖಂಡಿತಕ್ಕೂ ದೆವ್ವದ ಕಾರ್ಖಾನೆ ಎನ್ನುವುದರಲ್ಲಿ ಎರಡು ಮಾತಿಲ್ಲ.