" ಎತ್ತಿನ ಹೊಳೆ ಮುಸುಕಿನಲ್ಲಿ ನೇತ್ರಾವತಿ ರೋದನ.. "
ನಾಲ್ಕು ದಶಕಗಳಿಂದ ದ.ಕ.ದಲ್ಲಿ ಜನರಿಗೆ ಸಂಕಟದ ನೀರಿಳಿಸುತ್ತಿರುವ ನೇತ್ರಾವತಿ ನದಿ ಯೋಜನೆ ಈಗ ಎತ್ತಿನ ಹೊಳೆ ಮುಸುಕಿನಡಿಯಲ್ಲಿ ಮತ್ತೆ ಕಣ್ಣೀರಿಳಿಸಲು ಬರುತ್ತಿದೆ. ಅಸಲಿಗೆ ಕನ್ನಡದಲ್ಲಿ ವೈಜ್ಣಾನಿಕವಾಗಿ ಮತ್ತು ವಿಜ್ಞಾನ ಸಾಹಿತ್ಯ ಬರೆಯುತ್ತಿರುವ ಹೆಚ್ಚಿನ ಲೇಖಕರು ವಿಜ್ಞಾನಿಗಳು, ವಿಜ್ಞಾನ ಪದವಿಧರರು ಅಥವಾ ಯಾವ ರೀತಿಯಲ್ಲೂ ವಿಜ್ಞಾನದ ಕೋವೆಗಳಿಗೆ ಸಲ್ಲುವವರೇ ಅಲ್ಲ. ಆದರೆ ಫಿಕ್ಶನ್‍ನಂತೆ ಪ್ರಸ್ತುತ ಪಡಿಸಿ ಬಿಡುವ ವಿಷಯದ ತಾಕತ್ತು ಯೋಜನೆಗಳ ಇರಾದೆಯನ್ನೇ ಬದಲಿಸಿಬಿಡುತ್ತಿದೆ. ಪ್ರಸ್ತುತ ಎತ್ತಿನ ಹೊಳೆಯ ಯೋಜನೆಯಲ್ಲೂ ಆಗುತ್ತಿರುವುದೂ ಅದೆ. ಇವತ್ತಿಗೂ ದ.ಕ ದಿಂದ ಹಿಡಿದು, ಫಲಾನುಭವಿ ಕೋಲಾರದ ತುದಿಯವರೆಗೆ ಯಾರನ್ನಾದರೂ ಏನಿದು ಯೋಜನೆ ಎಂದು ಕೇಳಿ ನೋಡಿ. ಯಾರ ಎದೆ ಸೀಳಿದರೂ ಇದರ ಬಗ್ಗೆ ವೈಜ್ಞಾನಿಕ ಮಾಹಿತಿಯೇ ಇಲ್ಲ, ಹೋರಾಟಗಾರರನ್ನು ಹೊರತು ಪಡಿಸಿದರೆ. ಆದರೆ ಅವರ ಧ್ವನಿ ಮುಟ್ಟಬೇಕಾದಲ್ಲಿ ಸಲ್ಲುತ್ತಿಲ್ಲ. ಕಾರಣ ಸಾಕ್ಷಿ ಸಮೇತ ಮಾತನಾಡುವ, ಸ್ಪಷ್ಟತೆ ಇರುವವರನ್ನು ಮಾಧ್ಯಮಗಳೂ ಮಂಚೂಣಿಗೆ ತರುತ್ತಿಲ್ಲ.
ನಾಲ್ಕು ದಶಕಗಳಿಂದ ದ.ಕ.ದಲ್ಲಿ ಜನರಿಗೆ ಸಂಕಟದ ನೀರಿಳಿಸುತ್ತಿರುವ ನೇತ್ರಾವತಿ ನದಿ ಯೋಜನೆ ಈಗ ಎತ್ತಿನ ಹೊಳೆ ಮುಸುಕಿನಡಿಯಲ್ಲಿ ಮತ್ತೆ ಕಣ್ಣೀರಿಳಿಸಲು ಬರುತ್ತಿದೆ. ಅಸಲಿಗೆ ಕನ್ನಡದಲ್ಲಿ ವೈಜ್ಣಾನಿಕವಾಗಿ ಮತ್ತು ವಿಜ್ಞಾನ ಸಾಹಿತ್ಯ ಬರೆಯುತ್ತಿರುವ ಹೆಚ್ಚಿನ ಲೇಖಕರು ವಿಜ್ಞಾನಿಗಳು, ವಿಜ್ಞಾನ ಪದವಿಧರರು ಅಥವಾ ಯಾವ ರೀತಿಯಲ್ಲೂ ವಿಜ್ಞಾನದ ಕೋವೆಗಳಿಗೆ ಸಲ್ಲುವವರೇ ಅಲ್ಲ. ಆದರೆ ಫಿಕ್ಶನ್‍ನಂತೆ ಪ್ರಸ್ತುತ ಪಡಿಸಿ ಬಿಡುವ ವಿಷಯದ ತಾಕತ್ತು ಯೋಜನೆಗಳ ಇರಾದೆಯನ್ನೇ ಬದಲಿಸಿಬಿಡುತ್ತಿದೆ. ಪ್ರಸ್ತುತ ಎತ್ತಿನ ಹೊಳೆಯ ಯೋಜನೆಯಲ್ಲೂ ಆಗುತ್ತಿರುವುದೂ ಅದೆ. ಇವತ್ತಿಗೂ ದ.ಕ ದಿಂದ ಹಿಡಿದು, ಫಲಾನುಭವಿ ಕೋಲಾರದ ತುದಿಯವರೆಗೆ ಯಾರನ್ನಾದರೂ ಏನಿದು ಯೋಜನೆ ಎಂದು ಕೇಳಿ ನೋಡಿ. ಯಾರ ಎದೆ ಸೀಳಿದರೂ ಇದರ ಬಗ್ಗೆ ವೈಜ್ಞಾನಿಕ ಮಾಹಿತಿಯೇ ಇಲ್ಲ, ಹೋರಾಟಗಾರರನ್ನು ಹೊರತು ಪಡಿಸಿದರೆ. ಆದರೆ ಅವರ ಧ್ವನಿ ಮುಟ್ಟಬೇಕಾದಲ್ಲಿ ಸಲ್ಲುತ್ತಿಲ್ಲ. ಕಾರಣ ಸಾಕ್ಷಿ ಸಮೇತ ಮಾತನಾಡುವ, ಸ್ಪಷ್ಟತೆ ಇರುವವರನ್ನು ಮಾಧ್ಯಮಗಳೂ ಮಂಚೂಣಿಗೆ ತರುತ್ತಿಲ್ಲ.
ಈ ವರದಿಯನ್ನು ಮಾಜಿ ಮು.ಮ ಧರ್ಮಸಿಂಗ್ ಕಾಲದಲ್ಲಿ ಮಂಡಿಸಿದ ಪರಮಶಿವಯ್ಯನವರ ಪ್ರಕಾರ ಇದರಿ0ದಾಗಿ ಘಟ್ಟದ ಮೇಲಿನ ಜಿಲ್ಲೆಗಳಾದ ಹಾಸನ, ತುಮಕೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಕೋಲಾರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿಗೆ ಕುಡಿಯುವ ನೀರು, ಅಂತರ್ಜಲ ಅಭಿವೃದ್ಧಿ ಸೇರಿದಂತೆ ಕೆರೆ ಸಮೃದ್ಧಿಯನ್ನು ಗುರುತ್ವಾಕರ್ಷಣೆಯ ಸಿದ್ಧಾಂತ ಅಧಾರದಲ್ಲಿ ಅನುಷ್ಠಾನಗೊಳಿಸಲಾಗುತ್ತದೆ. ಆದರೆ ಮೂಲವಾಗಿ ಅಲ್ಲಿ ಬೀಳುತ್ತಿರುವ ಮಳೆಯ ಪ್ರಮಾಣ, ಅದರಲ್ಲಿ ಎಷ್ಟು ಪಾಲು ನೀರು ನಮಗೆ ಲಭ್ಯವಾಗುತ್ತದೆ, ನದಿ ತಿರುಗಿಸಿ ಅದನ್ನು ಸಾಗಿಸುವ ಕಾರ್ಯಾಚರಣೆಯಲ್ಲಿ ವೆಚ್ಚವಾಗುವ ನೈಜ ನಷ್ಟ, ಕೊನೆಯ ತುದಿಯಲ್ಲಿ ಕಾಲುವೆ ಹರಿಸಿದ ನಂತರವೂ ಸಿಗುವ ನಿವ್ವಳ ಪ್ರಮಾಣ, ಅಗಾಧ ಕಾಮಗಾರಿಯ ಫಲವಾಗಿ ಬದಲಾಗುವ ಸಹಜ ಭೂಮಿಯ ವೈಪರಿತ್ಯ, ಬದಲಾಗುವ ಭೂ ಮೇಲ್ಪದರ ಸವಕಳಿಯಿಂದ ಉಂಟಾಗುವ ನೀರಿನ ಸಹಜ ಹರಿವಿನ ಧಾರಕತೆ (ಪಕ್ರ್ಯೂಲೇಶನ್ ಇಫೇಕ್ಟ್), ಅಷ್ಟುದ್ದದ ಭೂ ಕಾಲುವೆಯ ದಾರಿಯಲ್ಲಿ ಬದಲಾಯಿಸಬೇಕಾದ ಭೂ ಮುಖದ ಸರ್ವೇ... ಇವೆಲ್ಲಾ ವಿವರಣೆ ವರದಿಯಲ್ಲಾದರೂ ಇದೆಯಾ..? ಛೇ...
ಇದಕ್ಕಿಂತಲೂ ಮುಖ್ಯವಾಗಿ 1901-02 ರಲ್ಲಿ ಬ್ರಿಟಿಷ್ ನೀರಾವರಿ ಇಲಾಖೆ ಪ್ರಕಾರ ಬೆಂಗಳೂರಿನ ಆಸುಪಾಸು ನಾಲ್ಕಡಿಯ ಕೆಳಗಿದ್ದ ಅಂತರ್ಜಲ ಇವತ್ತು ಸರಾಸರಿ ಎಂಟನೂರು ಚಿಲ್ರೆ ಅಡಿಗೆ ಹೋಗಿದೆ. (ಇದಕ್ಕೆ ಮೊನೆಯಷ್ಟೆ ಕೊಳವೆ ತೋಡಿಸಿದ ನಾನೂ ಉದಾ..) ಇದನ್ನು ಕಾರ್ಯಗತಗೊಳಿಸಲು ಜವಾಬ್ದಾರಿ ಹೊತ್ತಿರುವ ಕರ್ನಾಟಕ ನಿರಾವರಿ ನಿಗಮ ನಿಯಮಿತ (ಕ.ನಿ.ನಿ.ನಿ) ತಾನು ಮಾಡಬೇಕಾದ ಸರ್ವೆ ವರದಿಯನ್ನು ಈ.ಐ. ಟೆಕ್ನಾಲಜೀಸ್ ಸಂಸ್ಥೆಯಿಂದ ಮಾಡಿಸಿದ್ದು ಧೃಢೀಕರಣ ಯಾರು ಮಾಡುತ್ತಾರೆ..? ಗೊತ್ತಿಲ್ಲ. ಇವೆಲ್ಲವುಕ್ಕಿಂತಲೂ ಸಲ್ಲಿಸಿರುವ ವರದಿ ಮತ್ತು ಕೈಗೊಳುತ್ತಿರುವ ಯೋಜನೆ ಸಂಪೂರ್ಣ ಅವೈಜ್ಞಾನಿಕ ಮತ್ತು ನಿಸರ್ಗ ಪರ ಅಲ್ಲ ಅನ್ನುವುದಕ್ಕೆ ಈ ಕೆಳಗಿನ ಸಂಗತಿಗಳು ಎಂಥಾ ನಿರಕುಕ್ಷಿಗಾದರೂ ಗೊತ್ತಾಗುತ್ತದೆ. ಆದರೆ ಅದು ಅಧಿಕೃತ ಅಭಿಯಂತರುಗಳಿಗೆ ಅರ್ಥವಾಗುತ್ತಿಲ್ಲ. ಗಮನಿಸಿ.
• ನದಿ ಪಾತ್ರದಲ್ಲಿ ನೀರು ಸಂಗ್ರಹವಾಗುವುದರ ಮೇಲೆ ಅಲ್ಲಿನ ನಿವ್ವಳ ಬಳಕೆಯ ಬಗ್ಗೆ ಯೋಜನೆ ರೂಪಿಸಬೇಕು. ಆದರೆ ಎತ್ತಿನ ಹೊಳೆ/ನೇತ್ರಾವತಿಯ ಮಳೆ ಪ್ರಮಾಣ ವರ್ಷಕ್ಕೆ ಹೇಗೆ ಮಾಡಿದರೂ 4 ಮಿ. ಮೀರುವುದಿಲ್ಲ. ಇದಕ್ಕೆ ಕ.ನಿ.ನಿ.ನಿ ಒದಗಿಸಿರುವ ದಾಖಲೆಗಳು ಇನ್ನೂ ಅಧ್ವಾನಕಾರಿ. ಇದರ ಪ್ರಕಾರ ಅಲ್ಲಿನ ಮಳೆಯ ಸರಾಸರಿ 6280 ಮಿ.ಮಿ. ವಿಚಿತ್ರ ಎಂದರೆ ಕರ್ನಾಟಕದ ಚಿರಾಪುಂಜಿಯಾದ ಆಗುಂಬೆಯಲ್ಲೆ ಮಳೆಯ ಪ್ರಮಾಣ 7000 ಮಿ.ಮಿ ಆಸುಪಾಸಿನಲ್ಲಿದೆ.(hಣಣಠಿ://eಟಿ.ತಿiಞiಠಿeಜiಚಿ.oಡಿg/ತಿiಞi/ಂgumbe) ಇಲ್ಲಿ ಬಿಟ್ಟರೆ ಕರ್ನಾಟಕದ ಯಾವ ಭಾಗದಲ್ಲೂ 6 ಮಿಟರ್ ಮಳೆ ಪ್ರಮಾಣ ಸರಸರಿಯಲ್ಲಿ ದಾಟಿದ ಉದಾ. ಗಳೆ ಇಲ್ಲ. ಯೋಜನೆಯ ಭೂ ಮುಖವಾದ ದ.ಕ.ಒಟ್ಟು ಸರಾಸರಿಯೇ 3900 ಮಿ.ಮಿ ದಾಟುವುದಿಲ್ಲ. (ಮಳೆಯ ಕಾಲದ ಪ್ರವಾಹವನ್ನು ಹಿಡಿದರೂ ಅದು ಶೇ. 3 ದಾಟುವುದಿಲ್ಲ. ) (hಣಣಠಿ://eಟಿ.ತಿiಞiಠಿeಜiಚಿ.oಡಿg/ತಿiಞi/ಖಚಿiಟಿಜಿಚಿಟಟ_iಟಿ_ಏಚಿಡಿಟಿಚಿಣಚಿಞಚಿ)
• ಇನ್ನು ಇದಕ್ಕೆ ಆಧರಿಸಿರುವ ( Sಛಿheme ಜಿoಡಿ ಜiveಡಿsioಟಿ oಜಿ ಓeಣಡಿಚಿvಚಿಣi ಡಿiveಡಿ ತಿಚಿಣeಡಿ ಣo eಚಿsಣ – 2001)ಲ್ಲಿ ಜಿ.ಎಸ್.ಪರಮಶಿವಯ್ಯ ಸಲ್ಲಿಸಿರುವ ವರದಿಯಲ್ಲಿ ಯಥಾವತ್ತು ನಕಲುಗಳಿದ್ದು ಒಂದು ಹೊಸ ಪ್ರಸ್ತಾಪವಿದೆ. ಇಲ್ಲಿ ಆಸಕ್ತಿದಾಯಕ ಎಂದರೆ ಮೊದಲ ಮೂರು ಖಾಸಗಿ ಮಳೆಯ ಮಾಪಕ ಕೇಂದ್ರಗಳು ಸಿದ್ದೇಗೌಡರ ಹೊಂಗಡಿ ಹಳ್ಳ-6065, ಕಾಡು ಮನೆ ಕಾಫಿ ಎಸ್ಟೇಟ್-6530 ಮತ್ತು ಕಲ್ಲಪ್ಪನವರ ಕೊಟ್ಟಾನ ಹಳ್ಳಿ ಮಾಪಕ – 6050 ಮಿ.ಮಿ. ನಲಿರುವ ಖಾಸಗಿ ಮಾಪಕಗಳ ಮೂಲಕ ದಾಖಲಿಸಿದ್ದರೆ, ನಾಲ್ಕನೆಯ ಖಾಸಗಿ ಮಾಪಕವಾಗಿರುವ ಹೆಗ್ಗದ್ದೆ ಎಸ್ಟೇಟ್‍ನ ಜಾನ್.ಪಿ.ಪಿ ಯವರ ಸರಾಸರಿ ಮಾತ್ರ 4100 ಮಿ.ಮಿ. ಇದ್ದು ಇವೆಲ್ಲವೂ ಒಂದೆ ವ್ಯಾಪ್ತಿ ಪ್ರದೇಶದಲ್ಲಿವೆ. ಮಳೆಯ ಪ್ರಮಾಣ ಜಾನ್ ಅವರ ಮಾಪಕದಲ್ಲಿ ವ್ಯತ್ಯಾಸವಾಗಲು ಅವರೂ ಹೆಚ್ಚಿನ ಅಂತರದಲ್ಲೇನೂ ಇಲ್ಲ. ಹೀಗಿದ್ದಾಗ ಉಳಿದ ಮೂರು ಮಾಪಕ ಮಾತ್ರ ಯಾಕೆ ಹೆಚ್ಚಿನ ಪ್ರಮಾಣ ಅದೂ ಇಲ್ಲಿಯವರೆಗೆ ಎಚಿದೂ ಬೀಳದಷ್ಟು ಇದರಲ್ಲಿ ಹೆಚ್ಚಿನ ಸರಾಸರಿ ತೋರಿಸುವ ದರ್ದು ಯಾಕಿದ್ದೀತು..? ಈ ಕೆಳಗಿನ ಲಿಂಕ್ ಜಗತ್ತಿನ ಯಾವ ಭಾಗದಲ್ಲಿ ಎಷ್ಟು ಮಳೆಯಾಗುತ್ತದೆ ಎನ್ನುವುದನ್ನು ತೋರಿಸುತ್ತದೆ.
(hಣಣಠಿ://ತಿತಿತಿ.sಚಿmsಚಿmತಿಚಿಣeಡಿ.ಛಿom/ಛಿಟimಚಿಣe/ಛಿಟimಚಿಣeಜಚಿಣಚಿ.ಠಿhಠಿ?ಟಚಿಣ=12.89690&ಟಟಿg=75.03546&ಟoಛಿ=ಂmಣಚಿಜಥಿ%2ಅ+ಏಚಿಡಿಟಿಚಿಣಚಿಞಚಿ%2ಅ+Iಟಿಜiಚಿ)
• ಇನ್ನು ಈ ಖಾಸಗಿ ಮಾಪಕಗಳ ಸತ್ಯತೆ ಬಗ್ಗೆ ಯಾರು ಧೃಢಿಕರೀಸುತ್ತಾರೆ..? ಕಾರಣ ಒಂದಿಬ್ಬರು 1980 ರಿಂದ 90 ವರೆಗಿನ ಪ್ರಮಾಣ ನೀಡಿದ್ದರೆ ಇನ್ನೊಬ್ಬರದ್ದು 1985 ರಿಂದ 2000 ವರೆಗಿನ ಪ್ರಮಾಣದ ದಾಖಲೆಯಂತೆ. ಇವೆಲ್ಲವನ್ನು ಹೊರತು ಪಡಿಸಿದರೆ ಅಧಿಕೃತ ಸಂಸ್ಥೆಯಾದ ಜಲ ಸಂಪನ್ಮೂಲ ಇಲಾಖೆಯಲ್ಲಿ ಕಳೆದ ಸುಮಾರು ಇಪ್ಪತೈದು ವರ್ಶಗಳ ದಾಖಲೆ ಲಭ್ಯ ( ಸರಾಸರಿ 3072 ಮಿ.ಮಿ.) ಇದ್ದರೂ ಖಾಸಗಿಯವರ ಮಾಪಕ ಬಳಸಿಕೊಳ್ಳುತ್ತಿರುವ ಉದ್ದೇಶವೇನು..?
• ಇನ್ನು ಇಲ್ಲಿನ ನೈಜ ಮಳೆಯ ಪ್ರಮಾಣವನ್ನು ಮರೆಸಿ ಇದನ್ನು 6500 ಎಂದು ಕೇಂದ್ರಕ್ಕೆ ಮನವರಿಕೆ ಮಾಡಿಕೊಡಲು ನಡೆಸಿದ ಕಸರತ್ತುಗಳು ಕೂಡಾ ಸಾಕಷ್ಟು. ಇದಕ್ಕಾಗಿ ಇನ್ನು ಮುಂದೆ ಹೋದ ಚಿತ್ರದುರ್ಗ ಭದ್ರಾ ಮೇಲ್ದಂಡೆ ಚೀಫ್ ಎಂಜಿನಿಯರ್ ಅವರ ಪ್ರಕಾರ ಇಲ್ಲಿನ ಮಳೆ ಪ್ರಮಾಣ 6500 ಮಿ.ಮಿ. ( ಇIಂ ಓoಣiಜಿiಛಿಚಿಣioಟಿ-2006 ಚಿಟಿಜ iಣs ಚಿmeಟಿಜmeಟಿಣs. 18.10.12 ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಗೆ ಬರೆದ ಪತ್ರ ) ಬೇಕಾಗಿರುವ ಎತ್ತಿನ ಹೊಳೆ ಅಥವಾ ನೇತ್ರಾವತಿಯ ಬದಲಿಗೆ ಪೂರ್ತಿ ಪ.ಘಟ್ಟದ ಮಳೆಯ ಪ್ರಮಾಣವನ್ನು ನೀಡುವ ಮೂಲಕ ದಾರಿ ತಪ್ಪಿಸುವ ಕೆಲಸಕ್ಕೆ ಕೈಹಾಕಿದರೂ ಅದು ಅಸಮರ್ಪಕ ಸಂಖ್ಯೆ.
• ಜಲ ಸಂಪನ್ಮೂಲ ಇಲಾಖೆ 21.6.2012 ರಂದು ಸಲ್ಲಿಸಿದ ವರದಿಯ ಪ್ರಕಾರ ಈ ಪ್ರದೇಶದ ಮಳೆಯ ಪ್ರಮಾಣ ಕೇವಲ 3070.ಮಿ.ಮಿ. ಅಂದರೆ ಸರಿ ಸುಮಾರು 15 ಟಿ.ಎಂ.ಸಿ.
• ಇನ್ನು ಕೇಂದ್ರ ಜಲ ಆಯೋಗದ ದಾಖಲೆ ( 40 ವರ್ಷದ್ದು ) ನೇತ್ರಾವತಿ ನದಿ ಪಾತ್ರದ ಬಂಟ್ವಾಳದಲ್ಲಿದೆ. ಅದರ ಸರಾಸರಿ 21 ಟಿ.ಏಮ್.ಸಿ. ಇನ್ನು ಕಾಡು ಮನೆ ನದಿ ತೀರ ಮತ್ತು ಹಾರ್ಲೆ ಎಸ್ಟೇಟ್ ಹತ್ತಿರ ಮಳೆಯ ಮಾಪಕಗಳ 1976-77 ರಿಂದ ಇರುವ ದಾಖಲೆಗಳನ್ನು ಎಲ್ಲಿಯೂ ನಮೂದಿಸಿಯೇ ಇಲ್ಲ.
• ಅಲ್ಲಿಂದ ದೂರದ ಬಳ್ಳಾರಿಗೆ, ಚಿತ್ರದುರ್ಗ, ಹಾಸನ, ಕೋಲಾರಗಳಿಗೆ ನೀರು ತಿರುಗಿಸುವ ಹರಿವು ಹಾದಿಯ ಸರ್ವೇ ರಿಪೆÇೀರ್ಟು, ಅದಕ್ಕೆ ಬೇಕಾಗುವ ಭೂ ಒತ್ತುವರಿ, ಕಾಲುವೆ ಬೇಕಾದ ಸರ್ವೆ ಎಲ್ಲಿದೆ..? ಸಧ್ಯ ಯಾರಿಗೂ ಗೊತ್ತಿಲ್ಲ.
• ಇನ್ನು ಕೇ.ಜ.ಆ. ವೂ ಕೂಡಾ ಕೊನೆಯದಾಗಿ ಆಗಸ್ಟ್ 2012 ರಲ್ಲಿ " ಅಲ್ಲಿ ಮಾಪನ ಕೇಂದ್ರಕ್ಕಿಂತಲೂ ಎತ್ತಿನ ಹೊಳೆ ನದಿ ಪಾತ್ರ ಸಾಕಷ್ಟು ಮೇಲಿರುವುದರಿಂದ ಇನ್ನು ಶೇ.15 ಮಳೆ ಹೆಚ್ಚಾಗುತ್ತದೆ " ಎನ್ನುವ ಮೂಲಕ ಈ ವರೆಗೂ ಒಟ್ಟಾರೆ ಮಳೆಯ ಸರಾಸರಿಯನ್ನೇ ಗುಣಿಸುತ್ತಿಲ್ಲ. ಮಳೆಯ ಪ್ರಮಾಣದ ಲೆಕ್ಕಾಚಾರವೇ ಸರಿ ಇರದ ಈ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ 13 ಜುಲೈ 2012 ರಲ್ಲಿ ಆಡಳಿತಾತ್ಮಕ ಒಪ್ಪಿಗೆ ನೀಡಿರುವುದು ಅತಿ ದೊಡ್ಡ ಆವಾಂತರ.
• ಈಗಾಗಲೆ 150 ಕ್ಕೂ ಹೆಚ್ಚು ಸಭೆಗಳು ಇದಕ್ಕಾಗಿ ಅಧಿಕಾರಿಗಳ ಮಟ್ಟದಲ್ಲಿ ನಡೆದಿದ್ದರೂ ಒಮ್ಮತ ಮತ್ತು ಸಮನ್ವಯ ಸಾಧಿಸುವಲ್ಲಿ ವಿಫಲವಾಗಿದ್ದು ದಿ.27.7.2012 ರಲ್ಲಿ ಚೀಫ್ ಎಂಜಿನಿಯರ್ ಅವರ ಕಾಗದ ಇದಕ್ಕೆ ಪುಸ್ಥಿ ನೀಡುತ್ತದೆ.
ಅಸಲಿಗೆ ನೇತ್ರಾವತಿಗೆ ಬಂದ ವಿರೋಧದಿಂದಾಗೇ ಇದನ್ನು ಎತ್ತಿನ ಹೊಳೆ ಯೋಜನೆ ಎಂದು ಬದಲಾಯಿಸಿದಂತೆ ಕಾಣುತ್ತಿದೆಯೆ ಹೊರತಾಗಿ ಹೊಸ ಯಾವ ವಿನ್ಯಾಸಗಳು ವರದಿಯಲ್ಲಿ ಕಾಣಿಸುತ್ತಿಲ್ಲ. ಕಾರಣ ಅದು ಹೋಂಗಡಿ ಹಳ್ಳವೆ ಇರಲಿ, ಕುಮಾರಧಾರ, ಕಾಡು ಮನೆ, ಕೇರಿ ತೊರೆ, ಕೆಂಪು ಹೊಳೆ, ಎತ್ತಿನ ಹೊಳೆ ಅಥವಾ ಗುಂಡ್ಯವೇ ಇರಲಿ.. ಎಲ್ಲವೂ ಕೊನೆಯಲ್ಲಿ ಆಗುವುದು ನೇತ್ರಾವತಿಯೇ. ಸುಮ್ಮನೆ ಹೆಸರಿನಲ್ಲಿ ವ್ಯತ್ಯಾಸವಾಗುವುದರಿಂದ ಭೂ ಮುಖದ ಚಿತ್ರಣಗಳು ಬದಲಾಗಲಾರವು. ಇದು ಭೂ ಮೇಲ್ಮೈ ಊಹಿಸಬಲ್ಲ ಎಂಥಾ ಅಶಿಕ್ಷಿತನೂ ಅರಿತುಬಿಡುತ್ತಾನೆ. ಆದರೆ ದ.ಕ.ಘಟ್ಟದ ನೇತ್ರಾವತಿ ಮತ್ತು ಎತ್ತಿನ ಹೊಳೆಯ ಪಾತ್ರದಲ್ಲಿ ಬೀಳುತ್ತಿರುವ ನೀರು ಸಮುದ್ರ ಸೇರಿ ಹಾಳಾಗುತ್ತದೆಂದು ವಾದಿಸುತ್ತಿರುವ ಮುಖ್ಯ ಅಭಿಯಂತರು ಮಾತ್ರ ಒಪ್ಪಿಕೊಳ್ಳು ತ್ತಿಲ್ಲ. ಕಾರಣ ಅವರುಗಳು ದ.ಕ.ಜಿಲ್ಲೆಯ ನೆಲದ ಗುಣ ಲಕ್ಷಣವನ್ನೆ ಇದರಲ್ಲಿ ಪರಿಗಣಿಸಿಲ್ಲ.
ಅಸಲಿಗೆ ದ.ಕ ದ ಕೆಳಗಿನಿಂದ ಘಟ್ಟ ಮೇಲ್ಭಾಗದ ತುದಿಯ ವರೆಗೂ ಯಾವ ಭಾಗವೂ ಜಿಗುಟು ರಾಡಿಯ ನಾರು ಸಹಿತದ ಮಣ್ಣಲ್ಲ. ತುಂಬಾ ಸವಕಳಿಯಾದ ಸುಲಭಕ್ಕೆ ಕೊರೆದು ನೀರಿನೊಂದಿಗೆ ಬೆರೆತು ಸರಿದು ಭೂಮುಖವನ್ನೆ ಬದಲಿಸಬಲ್ಲ ಬರೀ ಹಗುರ ಮಣ್ಣು. ಇದರಿಂದಾಗಿ ಇಲ್ಲಿನ ಭೂಮಿಯ ಆಳಕ್ಕಿಳಿಯಲು ವರ್ಷದುದ್ದಕ್ಕೂ ಸತತವಾಗಿ ಸುರಿಯುವ ನೀರಿನ ಹರಿವು ಮತ್ತು ನಿರಂತರತೆ ಅಗತ್ಯ ಬೇಕೆ ಬೇಕು. ಅದಿಲ್ಲದಿದ್ದರೆ.. ನೀರಿನ ನೈಜ ಆಳಕ್ಕಿಳಿಯುವ ಪ್ರಕ್ರಿಯೆ ಆಗುವುದೇ ಇಲ್ಲ. ಕಾರಣ ಇಂಥಾ ಮಣ್ಣಿನ ಭೂಮಿಯಲ್ಲಿ ನೀರು ಆಳಕ್ಕಿಳಿದು ಅಲ್ಲಿನ ಅಂತರ್ಜಲ ಮುಟ್ಟಲು ಬೇಕಾಗುವಷ್ಟು ಕಾಲಾವಧಿಯಲ್ಲಿ ನೀರಿನ ಹರಿವು ಸತತವಾಗಿ ಲಭ್ಯವಿಲ್ಲದಿದ್ದರೆ ಶಿಲಾಪದರದ ಮಧ್ಯದಲ್ಲಿ ನೀರಿಳಿದು ಭೂ ಒಳಾವರಣವನ್ನು ಸೇರುವ ಮೊದಲೆ ಅಲ್ಲಲ್ಲೆ ಒಣಗಿ ಅರೆಬರೆಯಾಗಿ ಉಳಿದು ಬಿಡುತ್ತದೆ. ಅದಕ್ಕಾಗಿ ಅದರ ಮೇಲೆ ಮೇಲಿನಿಂದ ಸುರಿಯುವ ನಿರಂತರ ನೀರಿನ ಒತ್ತಡ ಇದ್ದಲ್ಲಿ ಮಾತ್ರ ಅಂತರ್ಜಲ ಮಟ್ಟ ಹೆಚ್ಚಲು ಸಾಧ್ಯ ಇಲ್ಲಿನ ಭೂ ಲಕ್ಷಣಕ್ಕೆ. ಇದು ಅಂತರ್ಜಲ ಮಟ್ಟ ಮತ್ತು ಭೂ ಪದರದಲ್ಲಿ ಆಗುವ ಅತ್ಯಂತ ಸೂಕ್ಷ್ಮವಾದ ಪರಿಸರ ವಿದ್ಯಮಾನ. ಇದನ್ನು ಯಾವ ರೀತಿಯಲ್ಲೂ ಕೃತಕವಾಗಿ ನಿರ್ವಹಿಸಲು ಸಾಧ್ಯವೇ ಇಲ್ಲ. ಅದೇ ಕಾರಣಕ್ಕೆ ತಿಂಗಳಾನುಗಟ್ಟಲೆ ನೀರು ನಿಲ್ಲಿಸಿಡುವ ಇಂಗುಗುಂಡಿಯ ಯೋಜನೆಗಳು ರೂಪಿತವಾಗಿರುವುದು.
ಆದರೆ ಲಕ್ಷಗಟ್ಟಲೇ ಕೊಳವೆ ಬಾವಿ ಕೊರೆದು(ಇದರಿಂದಾಗಿ ಸಾವಿರಾರು ಸಂಖ್ಯೆಯಲ್ಲಿ ಕೆರೆಗಳು ಬತ್ತಿ ಹೋದವು) ಅರಣ್ಯದ ಹಸಿರು ಪಟ್ಟಿಯನ್ನು ಕತ್ತರಿಸಿ(ಮಳೆಯ ತಗ್ಗುವಿಕೆ ಮತ್ತು ಸರಿದು ಹೋಗುವ ಪ್ರಕ್ರಿಯೆಗೆ ಕಾರಣ) ಬಣ್ಣದ ಶಿಲಾಪದರಗಳಿಗಾಗಿ ಭೂಗರ್ಭವನ್ನು ಕೊರೆದು (ಗ್ರಾನೈಟ್ ಎತ್ತಿ ನೀರಿಳಿಯುವ ಪದರಗಳ ನಾಶ ಪಡಿಸುವಿಕೆ. ಕಾರಣ ಸಹಜ ಬಂಡೆಯಲ್ಲಿ ನೀರಿಳಿದು ಒಳಸೇರಲಾರದು.. ಇಂಥಾ ಪದರು ಶಿಲೆಯ ಸಂದಿನಲ್ಲೆ ನೀರಿನ ಪಯಣ ಸಾಗುತ್ತದೆ ಅಂತರ್ಜಲಕ್ಕೆ), ಮಹಡಿಗ ಮಹಲುಗಳಿಗಾಗಿ ರಾಜಧಾನಿಗೆ ಸಾಗಿಸಲು ಎಗ್ಗಿಲ್ಲದೆ ನದಿ ಮುಖಜ ಭೂಮಿಯ ಮರಳಿನ ಆವರಣಗಳನ್ನು ಕೊರೆದು, ಅಲ್ಲಿಯೂ ಸರ್ವ ರೀತಿಯ ಆವಾಂತರಗಳನ್ನು ಮಾಡಿ ಈಗ ರಾಜಧಾನಿ ಮತ್ತು ಸುತ್ತ ಮುತ್ತಲ ಜನರಿಗೆ ಪೂರೈಸಲಸಾಧ್ಯವಾಗಿರುವ ನೀರ ಸಮಸ್ಯೆಯ ಮುಖ ತಪ್ಪಿಸಿಕೊಳ್ಳಲು ಅವೈಜ್ಞಾನಿಕ ಮತ್ತು ಅಸಿಂಧೂವಾದ ಎತ್ತಿನ ಹೊಳೆಯ ಯೋಜನೆಗೆ ರಾಜ್ಯ ಸರ್ಕಾರ ಕೈ ಇಟ್ಟಿದೆ.
ಅಸಲಿಗೆ ಇಂಥಾ ಸಾಧ್ಯತೆಯ ಮೊದಲು ಇಲ್ಲಿಯವರೆಗಿನ ನೈಜ ತಿರುವನ್ನು ಹೊರತು ಪಡಿಸಿ ಕೃತಕ ನದಿ ತಿರುವಿನ ಯೋಜನೆಯ ಸಫಲತೆಯ ಅಧ್ಯಯನ ಮತ್ತು ಪ್ರಾತ್ಯಕ್ಷಿಕತೆಯ ಅಭ್ಯಾಸ ನಡೆಸಬೇಕಿತ್ತು. ದ.ಕ. ಜಿಲ್ಲೆಯ ಪರಿಸರದಿಂದ ಹೊರಡಿಸಬಹುದಾದ ನೀರಿಗೆ ಗುರುತ್ವಾಕರ್ಶಣೆಯ ಸಹಜ ಸಿದ್ಧಾಂತ ಅನ್ವಯಿಸುವ ಮೊದಲು ಭೂ ಹಂತ( ಎಲಿವೇಶನ್ಸ್) ಗಳ ಲೆಕ್ಕಾಚಾರ ಮಾಡಬೇಕಿತ್ತು. ಅದರೆ ಪ್ರಿಯಾರಿಟಿ ಸಿಕ್ಕಿದ್ದು ಇದರಲ್ಲಿ ಆಗಬಹುದಾದ ಗುತ್ತಿಗೆದಾರಿಕೆ, ಭೂ ಕಾಮಗಾರಿಯ ಲೆಕ್ಕಾಚಾರವೇ ನಡೆದಿರುವ ವಾಸನೆ ಸ್ಪಷ್ಟವಾಗಿ ಕಂಡು ಬರುತ್ತಿದೆ. ಅದಕ್ಕಾಗೆ ಬೀಳದ 6000 ಚಿಲ್ರೆ ಮಿ.ಮಿ ಮಳೆಯ ಪ್ರಮಾಣವನ್ನು ನಮೂದಿಸಿರುವ ಇವರ ವರದಿಯನ್ನು ಹೂ0.. ಅನ್ನುವ ಮೊದಲು ಯೋಚಿಸಬೇಕಿತ್ತು.. ಉಹೂ.. ವರದಿ ತಯಾರಿಸುವ ಬುದ್ಧಿವಂತರೆ ಸಂಖ್ಯೆಯ ತಾಳ ತಪ್ಪತೊಡಗಿದರೆ, ಹೆಚ್ಚಿನಂಶ ಅಂಥಾ ಪಧವಿಧರರಲ್ಲದ ಪ್ರಭುಗಳೆನು ಮಾಡಿಯಾರು...? ನೇತ್ರಾವತಿಯ ಕಣ್ಣಿರನ್ನು ಓರೆಸುವ ಮಾಹಿತಿ ನೀಡಬೇಕಿದ್ದ ವಿಜ್ಞಾನ ಲೇಖಕರುಗಳು ವಾರ ವಾರ ಫಿಕ್ಶನ್ ಬರೆದು ರಂಜನೆಯ ಮಟ್ಟಕ್ಕಿಳಿದು ಬಿಟ್ಟಿದ್ದಾರೆ. ಎಲ್ಲಿಂದ ಹುಡುಕೋಣ ಬುದ್ಧಿ ಜೀವಿಗಳಿಗಾಗಿ..?
ಸಂತೋಷ ಕುಮಾರ ಮೆಹೆಂದಳೆ.
ನಂ. ಸಿ-160.
ಕೈಗಾ ವಸತಿ ಸಂಕೀರ್ಣ
ಉ.ಕ. ಜಿಲ್ಲೆ. 581400
ದೂ.ಸಂ. 09448996165
Very good research and well written !!!
ReplyDelete