Thursday, July 31, 2014

" ಮೂಡಿಗೆರೆ-ಸಖಲೇಶ ಪುರ - ಚಾರ್ಮಾಡಿ ಟ್ರಿಪ್ ".

" ಯಾರಿಗೆ ಯಾಕೆ ನಾವು ಉತ್ತರಿಸಬೇಕು ...? " 
ಒಂದಷ್ಟು ಫೋನ್ ಕಾಲ್ .. ಸಹಜ ಮಾತಿನ ಮಧ್ಯೆ ಎದ್ದ.. ಚಿಂತನೆ .. ಹಾಗೆ ಹುಟ್ಟಿಕೊಂಡ ಯೋಜನೆ " ಮೂಡಿಗೆರೆ-ಸಖಲೇಶ ಪುರ - ಚಾರ್ಮಾಡಿ ಟ್ರಿಪ್ ". 
ವಿಚಿತ್ರ ಎಂದರೆ ಹಾಗೆ ಹೋರಟ ಎಲ್ಲರಿಗೂ ಇದ್ದ ಏಕೈಕ ಕಾಮನ್ ಸ್ನೇಹಿತ ಎಂದರೆ ನಾನೊಬ್ಬನೇ .... ಜೊತೆಗೆ ಯಾವ ಭರವಸೆ.. ನಂಬಿಕೆ.. ಇತ್ಯಾದಿ ಪ್ರಶ್ನೆ ಇಲ್ಲದೆ ತಂಡ ಎಲ್ಲ ನಿರ್ಧಾರಗಳನ್ನು ಕೈಗೊಳ್ಳಲು ನನ್ನನ್ನು ಆರಿಸಿಕೊಂಡಿದ್ದು ಸ್ನೇಹಿತನಾಗಿ ನನ್ನೊಂದಿಗೆ ಅವರಿಗಿದ್ದ ವಿಶ್ವಾಸ ಅಷ್ಟೇ.. ಅದರಲ್ಲಿ ಯಾರು ಯಾಕೆ ಯಾವ ಕೆಲಸ ಮಾಡಬೇಕು ಎನ್ನುವುದನ್ನೂ ಯಾರೂ ಯಾಕೆ ಎಂದು ಇವತ್ತಿಗೂ ನನ್ನ ಪ್ರಶ್ನಿಸಲಿಲ್ಲ.. ನಾನು ನಿರ್ಧರಿಸಿದಂತೆ... ಸ್ವತ: ನಾನು ವಾಹನ ಚಲಾಯಿಸುವ ನಿರ್ಧಾರದಿಂದ.. ಎಲ್ಲಿಗೆ ಹೇಗೆ ಹೋಗಬೇಕು.. ಎಲ್ಲಿ ಸ್ಟೇ ಮಾಡಬೇಕು ಎನ್ನುವ ಸರ್ವ ನಿರ್ಧಾರಗಳನ್ನು ಯಾರೊಬ್ಬರೂ ಇದ್ಯಾಕೆ ಎಂದು ಕೆಳದಂತಹ ನಂಬಿಕೆ ನಮ್ಮಲ್ಲಿ ಮೂಡಿದ್ದು ಹೇಗೆ ..? ಅದೇ ಸ್ನೇಹಿತರ ಜಗತ್ತಾ..?
ಕೊನೆಗೆ ಮುಕ್ತಾಯದ ದಿನ ವಾಪಸ್ಸು ಹೊರಟಾಗ ಎಲ್ಲರ ಮುಖದಲ್ಲಿದ್ದುದು ಮತ್ತೆ ಯಾವಾಗ ಈ ರೀತಿಯ ಜಗತ್ತು..? ಯಾವತ್ತು ಆದೀತು ಹೀಗೊಂದು ಬದುಕು ಎನ್ನುವ ತವಕ. ಅದಕ್ಕಾಗಿ ಇದ್ದ ತುಡಿತ..
"..ನಾನು ಇಂಥದ್ದೇ ವಾಹನ ಬೇಕು (ಡ್ರೈವರ್ ಬೇಕಿಲ್ಲ ) ಎಂದಾಗ ಯಾಕೆ.. ಹೇಗೆ ..ಎಂದು ಕೇಳದೆ.. ಬರುತ್ತಿದ್ದಂತೆ ಬೆಳಿಗ್ಗೆ ೬-೪೫ ಕ್ಕೆ ನನ್ನ ಕೈಗೇ ಕೀ ಕೊಟ್ಟ ಕಮಲೇಶ ಸರ್ ( ಆವತ್ತೇ ಮೊದಲ ಭೇಟಿ ) ಯಾವ ಭರವಸೆ ಮೇಲೆ ನನ್ನ ಕೈಗೇ ವಾಹನ ತಂದಿತ್ತರು ..? ... " Kamaleshagowda Raamakrishnappa ( ಇವತ್ತು ಮತ್ತೊಮ್ಮೆ ಭೇಟಿಗೆ ಕಾದಿರುವ ಸ್ನೇಹಿತ ಅವರು )
" ಹಣಕಾಸಿನ ವ್ಯವಹಾರ ನಿಮ್ಮದು " ಎನ್ನುತ್ತಿದ್ದಂತೆ.. ಬೇರೇನೂ ವಿಚಾರಿಸದೆ ಎಲ್ಲವನ್ನೂ ನಾನು ಹೇಳಿದಂತೆ ನಿರ್ವಹಿಸಿದ ಸುದೀರ್ ಗೆ ಹಾಗೆ ಒಪ್ಪಿಕೊಳ್ಳಲು ಯಾವ ದರ್ದಿತ್ತು ... ? " Sudheer Sagar ( ಮಾತೆ ಆಡದೆ ಕೆಲಸ ನಿರ್ವಹಿಸಿದ ರೀತಿ ಅಧ್ಬುತ )
" ಇಲೆಲ್ಲ ಇಂಥಿಂಥಾ ಮಾಹಿತಿ ಬೇಕು .. ಹೀಗ್ಹಗೀಗೆ ಮಾಡಬೇಕು .. ಎನ್ನುತ್ತಿದ್ದರೆ ಪ್ರತಿಯೊಂದಕ್ಕೂ ಒಪ್ಪಿಕೊಂಡು ಪ್ರತಿ ವಿವರ ಸಂಗ್ರಹಿಸುತ್ತಿದ್ದ ರೂಪಾ ಶ್ರೀನಿವಾಸ " Roopa Srinivas (ಬರುತ್ತಿದ್ದಂತೆ ಪ್ರಿಂಟ್ ಔಟ್ ಕೈಗಿಡುತ್ತಿದ್ದರು )
" ಒಂದಿನ ದಿನವೀಡಿ ನಿಂತು ಅಡುಗೆ ಮನೆಯಲಿ ಕೆಲಸ ಮಾಡಿಕೊಂಡು - ರುಚಿ ರುಚಿ ತಿಂಡಿ ಪೂರೈಸಿದ ಜ್ಯೋತಿ ಮೇಡಂ .. ನಮ್ಮನ್ನೆಲ್ಲ ನೋಡುತ್ತಿದ್ದುದೆ ಆವತ್ತು - ಆದರೆ ಸುಮ್ಮನೆ ಒಮ್ಮೆ ಆಡಿದ ಮಾತಿಗೆ ಬಾಕ್ಸು ಗಟ್ಟಲೆ ತಿಂಡಿ ತಂದು ಖಾಲಿ ಮಾಡುವಂತೆ ಒತಾಯಿಸಿದವರಿಗೆ ನಮ್ಮ ಬಗ್ಗೆ ಯಾಕೆ ವಿಶ್ವಾಸ ಹುಟ್ಟಿ ಬಿಟ್ಟಿತ್ತು .. ? " Jyothi Umesh ( ನನ್ನೊಬ್ಬನ ಹೊರತು ಪಡಿಸಿದರೆ ಎಲ್ಲರೂ ಹೊಸಬರೇ ಅವರಿಗೆ - ಹಾಗೆ ಉಳಿದವರಿಗೂ ಕೂಡಾ )
" ಮೈಸೂರಿನ ವಿಶೇಷ ತಿಂಡಿ.. ಚೀಲದ ತುಂಬಾ ಮಾತು ತುಂಬಿಕೊಂಡು ನನ್ನ ಒಂದು ಮಾತಿನ ಮೇಲೆ ಬಸ್ ಹಿಡಿದು ಚನ್ನರಾಯ ಪಟ್ಟಣ ದಲ್ಲಿ ಕಾಯ್ದ ಸ್ನೇಹಿತೆ " ಪ್ರಾರ್ಥನಾಗೆ " ಯಾವ ಭರವಸೆ ಇನ್ನಾವುದೋ ಊರಿನ ರಸ್ತೆಯ ಮೇಲೆ ನನಗಾಗಿ ಕಾಯಲು ..? ನಮ್ಮ ತಂಡ ಬಂದೆ ಬರುತ್ತದೆಂದು ಏನು ಗ್ಯಾರಂಟಿ .. ? ಆದರೂ ಬಂದಿದ್ದರು ಸಮಯಕ್ಕೆ ಸರಿಯಾಗಿ ತಿಂಡಿ ಬ್ಯಾಗ್ ಹೊತ್ತುಕೊಂಡು " Prarthana Gowda ( ಆಕೆ ಬಂದಿದ್ದೆ ಗಾಡಿಯ ಗಮ್ಮತ್ತೆ ಬದಲಾಯಿಸಿದರು )
" ನಾನು ಇಂಥಾ ದಿನ ಬರುತ್ತೇನೆ - ಹೋಂ ಸ್ಟೇ ಅಡ್ವಾನ್ಸ್ ಮಾಡಿ " ಎಂದ ಕೊಡಲೇ ಹತ್ತು ಸಾವಿರಕ್ಕೂ ಹೆಚ್ಚಿನ ಹಣ ತನ್ನ ಜೋಬಿನಿಂದ ಭರಿಸಿದ (ನನಗೆ ಯಾವತೂ ಕೊಡುತ್ತೀರಾ ಎಂದೇನೂ ಕೇಳದೆ.. ) ಮೂಡಿಗೆರೆಯ ಮಿತ್ರ ಕಾರ್ತಿಕ್ ಬೆಳಗೋದರನ್ನು ನಾನು ಯಾವತೂ ಜೀವನದಲ್ಲೇ ಭೇಟಿಯಾಗಿರಲಿಲ್ಲ - ಅದೂ ಮೂಡಿಗೆರೆ ತಲುಪಿದ ಮೇಲೇನೆ - ಸಂಜೆಯಿಂದ ಕಾಯ್ದು... ರಾತ್ರಿ ನಮ್ಮ ರೂಂ ತಲುಪಿಸಿ ಎರಡು ದಿನ ತನ್ನ ಸಮಯ ನನಗಾಗಿ ಮಿಸಲಿಟ್ಟು "ಗುರೂಜಿ " ಎನ್ನುತ್ತಾ ಕೊನೆಯವರೆಗೂ ಇದ್ದು ನನ್ನ ತಬ್ಬಿ ಬೀಳ್ಕೊಟ್ಟ ಹುಡುಗ ನನ್ನ ಮೇಲಿನ ಯಾವ ಭರವಸೆ ಮೇಲೆ ಹಣ ಎಣಿಸಿದ್ದ.. ? " Kartik Gowda Belgodu ( ಕೊನೆಯ ದಿನ ನಮ್ಮೊಡನೆ ಉಳಿದು ಬಿಟ್ಟಿದ್ದ ಹುಡುಗ )
" ತನಗೋಪ್ಪಿಸಿದ ಎಲ್ಲ ಕೆಲಸಗಳೊಂದಿಗೆ ಎಲ್ಲರೊಂದಿಗೆ ಇದ್ದೂ ಇಲ್ಲದಂತಿದ್ದ ತಂಡದ ಪುಟ್ಟ "ಮರಿ " ಯಾವತ್ತೂ ಪ್ರಶ್ನೆ ಹೋಗಲಿ ಮಾತೆ ಆಡಲಿಲ್ಲ - ಸುಮ್ಮನುಳಿದು ಬಿಟ್ಟ ಗಿರಿಜಾ ನಮ್ಮನ್ನು ಅಗಲುವಾಗ ಯಾಕೆ ಕೊನೆಯಲ್ಲಿ ಯಾಕೆ ಅಳುವ ಹಂತಕ್ಕೆ ತಲುಪಿದ್ದರು.. " ಗಿರಿಜ ಕೆ.ಎಂ
ಹೀಗೆ ಯಾರೂ ಮೊದಲಿಗೆ ಭೇಟಿಯಾಗುತ್ತಿದ್ದೇವೆ ಎನ್ನುವ ಯಾವ ಮುಜುಗರವೂ ಇಲ್ಲದೆ ನನ್ನೊಂದಿಗೆ ಬೆರೆಯುತ್ತಲೇ ಪ್ರತಿಯೊಬ್ಬರನ್ನು ಆವರಿಸಿಕೊಂಡ ರೀತಿ ಅದ್ಭುತ ಮತ್ತು ವಿವರಣೆಗೆ ನಿಲುಕದ ವಾಸ್ತವ. ಇದೆಲ್ಲಾ ಸಾಧ್ಯವಾದದ್ದು ಪ್ರತಿಯೋಬ್ಬರೂ ನನ್ನ ಮೇಲಿಟ್ಟ ವಿಶ್ವಾಸ ಮತ್ತು ಪ್ರೀತಿಯಿಂದ ಮಾತ್ರ..ಅಷ್ಟೇ ವಿಶ್ವಾಸದಿಂದ ಟ್ರಿಪ್ಪು ಮುಗಿಸಿ ಹೋಗುವಾಗ ಹೇಳಿದ್ದು ಒಂದೇ...........
" ಬದುಕು ಮತ್ತೊಮ್ಮೆ ಅರಳಿದ್ದು ಇವತ್ತು ಸ್ಯಾಮ್....ನಿನ್ನೊಂದಿಗೆ ಇನ್ನೊಮ್ಮೆ ಹೀಗೆ ಮಕ್ಕಳಂತೆ ಬದುಕಿ ಬಿಡಬೇಕು .. ಹೀಗೂ ಆಗುವುದಿತ್ತಾ ಬದುಕಿನಲಿ ಎನ್ನುವುದನ್ನು ನನಸಾಗಿಸಿದಿರಿ..ಮತ್ಯಾವಾಗ ಹೀಗೆ...?" ಎಂದು ಕೇಳುತ್ತಿದ್ದರೆ ಏನು ಹೇಳಲಿ ಇವರೆಲ್ಲರ ಸ್ನೇಹಕ್ಕೆ.. ಪ್ರೀತಿಗೆ ... ಅವರ್ಯಾರು ಯಾಕೆ ಎಂದು ಕೇಳುತ್ತಿಲ್ಲ ...? ಏನೂ ಕೇಳಿಲ್ಲ ..? ಕೇವಲ ಪ್ರೀತಿಯ ...ನಂಬಿಕೆಯ ಮಳೆಯಲಿ ನನ್ನ ತೊಯಿಸಿ ನನ್ನ ಹೃದಯ ಒದ್ದೆ ಮಾಡಿ ಎದ್ದು ಹೋದರು ...
ಆದರೆ ಅದು ಆರಿ ಹಚ್ಚೆಯಾಗುವ ಮೊದಲೇ ನಾನು ಉತ್ತರಿಸಬೇಕಾಗಿದೆಯಂತೆ.. ನನ್ನ ಹಿಂದಿನ ಮಾತುಗಳಿಗೆ ....? ಬೆನ್ನ ಹಿಂದಿನ ಕುಹುಕಿಗಳಿಗೆ ... ಯಾಕೆ ಉತ್ತರಿಸಲಿ.. ನನ್ನೊಂದಿಗಿಲ್ಲದವರು ಯಾವತ್ತೂ ನನ್ನ ಹಿಂದೆಯೇ .. ಅವರು ಯಾವತ್ತೂ ನಮ್ಮ ಸಮರಲ್ಲ .. ಹಿಂದಿರುವವರಿಗೆ ಉತ್ತರಿಸುವ ದರ್ದು ನನಗಿಲ್ಲ. ನನ್ನದೇನಿದ್ದರೂ ನೇರಾ ನೇರ.. ಇದ್ಯಾವ ರಗಳೆ.. ನನಗಿಷ್ಟ ಬಂದ ರೀತಿ ಇವತ್ತು ಇದ್ದೇನೆ.. ನಾಳೆ ಇನ್ನಾರೋ ಕರೆದರೆ ಅವರೊಂದಿಗೆ.. ವಿಶ್ವಾಸ ನಂಬಿಕೆ ಇದ್ದಲ್ಲಿ ನಾನಿದ್ದೇನೆ ಅಷ್ಟೇ. ಕೊಟ್ಟರೆ ಜವಾಬ್ದಾರಿ.. ಇಲ್ವಾದರೆ ಉಳಿದವರೊಂದಿಗೆ ವಿಧೇಯ ವಿಧ್ಯಾರ್ಥಿ. ಇದು ನನ್ನ ಶೈಲಿ. ನನ್ನೊಂದಿಗೆ ಎಲ್ಲಾ ಜವಾಬ್ದಾರಿ ಹಂಚಿಕೊಂಡು ..ಲಿಂಗ ಬೇಧವಿಲ್ಲದೆ ಸ್ನೇಹಕ್ಕೊಂದು ಅರ್ಥ ಪೂರ್ಣ ರೂಪ ಕೊಟ್ಟ ಸ್ನೇಹಿತರಿಗಷ್ಟೇ ನಾನು ಜವಾಬ್ದಾರ ... ಇನ್ನುಳಿದವರಿಗಲ್ಲ ................. ಎಂದಿನಂತೆ ಸಿಂಪಲ್ " ಸ್ಯಾಮ್ " ....

No comments:

Post a Comment