ಹಾಟ್ ಎ೦ಬ ಇನ್‍ಬಾಕ್ಸ್ ಸುಪ್ರಭಾತ
‘ಸುಮಾರು ಅರ್ಧ ಸಾವಿರ ರಿಕ್ವೆಸ್ಟು ಬಿದ್ದಿದ್ವು. ನೋಡಿ ನೋಡಿ ಒಂದೈವತ್ತು ಹೂಂ ಅಂದೆ. ಅದೇ ತಪ್ಪಾಯ್ತು. ಅವರ - ಮತ್ತವರ ಕಾಮನ್ ಡ್ ಅಂತಾ ಮತ್ತಷ್ಟೇ ರಿಕ್ವೆಷ್ಟು ಏರಿ ಕೂತಿವೆ.’ (ಒಳ್ಳೆಯ ಸ್ನೇಹಿತರೂ ಆಗಬಹುದು ಎಂದು ನಿರೀಕ್ಷಿಸಿದ ಸ್ನೇಹಿತೆಯ ಸಂಕಟ)‘..-ಟೋನೆ ಹಿಂಗಿದೆ, ಇನ್ನು ವಾಯ್ಸ್ ಹೆಂಗಿರಬಹುದು.. ವಾಟ್ಸಾಪ್‌ಲಿ ವಾಯ್ಸ್ ಮೆಸೇಜ್ ಕಳ್ಸಿ...’ (ಇದು ಹೇಗಾದರೂ ನಂಬರು ಪಡೆಯೋಕೆ ಮಾಡುವ ಚೀಪ್ ಟ್ರಿಕ್ಕು). -ಸ್‌ಬುಕ್ಕಿನ ಹಾವಳಿಗಳ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಅದರಲ್ಲೂ ಹೆಣ್ಣು ಎನ್ನುವ ಕಾರಣಕ್ಕೆ ಸುಖಾಸುಮ್ಮನೆ ಲೈಕು/ಕಮೆಂಟು ಒತ್ತುವ ಜನರಿಗೆ ಆಕೆ ಸ್ನೇಹದ ವಿನಾ ಇನ್ನಾವುದೇ ಭಾವನಾತ್ಮಕ ಸಂಬಂಧಕ್ಕೆ ಈಡಾಗಬಯಸುವುದಿಲ್ಲ ಎನ್ನುವುದನ್ನು ಹೇಗೆ ಅರ್ಥೈಸುವುದೋ ಸದ್ಯದ ಪ್ರಶ್ನೆ.ಮೊನ್ನೆ ಆಕೆ ಇನ್‌ಬಾಕ್ಸ್ ತೆರೆದದ್ದೇ ತಡ, ಮೆಸೇಜುಗಳು ದಾಳಿ. ಅದರಲ್ಲಿ ಅರ್ಧಕ್ಕೂ ಹೆಚ್ಚು ‘..ಯೂ ಆರ್ ಹಾಟ್..’ ಅಯ್ಯೋ ರಾಮಾ! ಇದೇನು ಎನ್ನುತ್ತಾ ಸೀದಾ ಆಕೆ ಬ್ಲಾಕ್ ಮಾಡತೊಡಗಿದ್ದಾಳೆ. -ಸ್‌ಬುಕ್ ಎಂಬ ಸಾಮಾಜಿಕ ಜಾಲತಾಣದಲ್ಲಿ ವಯಸ್ಸಿನ ಪರಿವೆ ಇಲ್ಲದೆ ನಡೆಯುತ್ತಿರುವ ಈ ಇನ್‌ಬಾಕ್ಸ್ ದಾಳಿಗೆ ಹೆಣ್ಣು ಎನ್ನುವ ಏಕೈಕ ಕ್ರೈಟೀರಿಯಾ ಹೊರತುಪಡಿಸಿದರೆ, ಆಕೆಯ ವಯಸ್ಸು, ಆಸಕ್ತಿ, ಸ್ವಭಾವ, ಆಕೆಗೆ ಬೇಕಾ ಬೇಡ್ವಾ ಇತ್ಯಾದಿಗಳ ಯಾವ ಲಾಜಿಕ್ಕೂ ಬೇಕಾಗೇ ಇಲ್ಲ.ಆಕೆ ಸ್ಪಂದಿಸದೆ ಇದ್ದಾಗಲೂ ‘..ಗಣೇಶ ಹಬ್ಬದ ಸೀರೆಯಲ್ಲಿ ನಿಮ್ಮನ್ನು ನೋಡುವ ಭಾಗ್ಯ ನನಗಿರಲಿ. ನೀವು ವಾಲ್ ಮೇಲಂತೂ ಹಾಕೋಲ್ಲ’ ಎಂದು ಎಮೋಷನ್ಸ್ ಜತೆಗೆ ರಿಲಿಜಿಯಸ್ ಒತ್ತಾಯ. ಇದ್ಯಾವುದೂ ಅರ್ಥವಾಗದಷ್ಟು ಆಕೆ ಪೆದ್ದಳೇನಲ್ಲ. ಆದರೆ ಇಂತಹದನ್ನೂ ಎಂಜಾಯ್ ಮಾಡುವ, ಎಲ್ಲದಕ್ಕೂ ಸ್ಪಂದಿಸುವ, ಯಾರಾದರೂ ಸರಿ ಬಗಲಿಗೆ ಕೈ ಹೂಡುವ ಧಾರ್ಷ್ಟ್ಯದ ಹೆಣ್ಣುಗಳಿಗೂ ಬರ ಇಲ್ಲ. ಅವರಿಗೆ ಸ್ನೇಹದ ಪರಿಭಾಷೆಯ ಚೆಂದದ ಮುದ ಕೊಡುವ ಫೀಲಿಂಗೇ ಇರುವುದಿಲ್ಲ. ಇವತ್ತಿಗೆ ಇವನು, ಇನ್ನಾರು ತಿಂಗಳಿಗೆ ಅವನ ಸ್ನೇಹಿತ, ಅವನೂ ಬೋರಾದರೆ ಅವನ ಗೆಳೆಯ - ಹೀಗೆ ಸಾಗುವ ಮಹಿಳೆಯರು ಈ ವಿಷಯದಾಚೆಗಿರಲಿ. ಆದರೆ ಇಂತಹವರಿಂದಲೇ ಉಳಿದ ಹೆಣ್ಣುಮಕ್ಕಳ ಮೇಲೂ ಸಾಮಾಜಿಕ ತಾಣದಲ್ಲಿ ಪರೋಕ್ಷ ಪ್ರಭಾವ ಬೀಳುತ್ತಿದೆಯಾ?ಇಂತಹ ಯಾವುದೇ ಇನ್‌ಬಾಕ್ಸ್ ಮೆಸೇಜು ನಮ್ಮ ವ್ಯಕ್ತಿತ್ವವನ್ನೇ ಡ್ಯಾಮೇಜ್ ಮಾಡುತ್ತವೆ ಎನ್ನುವುದನ್ನು ಮೆಸೇಜಿಸುವ ಮೊದಲು ಅರಿಯಬೇಕು. ಜತೆಗೆ ಹೆಚ್ಚಿನ ಗಂಡಸರಿಗೆ ಒಂದು ವಿಷಯ ಅರಿವಾಗುತ್ತಿಲ್ಲ. ಸ್ನೇಹ ಎನ್ನುವ ಚೆಂದದ ಸಂಬಂಧಕ್ಕೆ -ಸ್‌ಬುಕ್ಕಿನ ಪರಿಭಾಷೆಯಲ್ಲಿ ಅರ್ಥವೇ ಬದಲಾಗುತ್ತಿದೆ. ಏನಿದ್ದರೂ ವಿರುದ್ಧ ಲಿಂಗಿ ಇದ್ದರೆ ಕಾಳು ಹಾಕುವುದಕ್ಕೇ ಪ್ರಾಶಸ್ತ್ಯ ಎನ್ನುವ ಹಲವುಇನ್‌ಬಾಕ್ಸ್‌ಗಳ ಹಪಾಹಪಿತನವೇ ಎಂಥವರನ್ನೂ ಸಂಶಯಿಸುವಂತೆ ಮಾಡುತ್ತಿದೆ.ಅಕ್ಸಪ್ಟ್ ಮಾಡುತ್ತಿದ್ದಂತೆ ಮಾಹಿತಿ ಸಂಗ್ರಹ ಆರಂಭವಾಗುತ್ತದೆ. ಮನೆಯಲ್ಲಿ ಒಬ್ಬಳೇ ಇರುತ್ತಾಳೆ ಎಂದಾದರೆ ಹೇಗಾದರೂ ಸಂಪರ್ಕ ಮಾಡಲು ಬಯಸುವವರು, ಅತ್ತೆ-ಮಾವ ಇದಾರೆ/ಅಮ್ಮ ಇರ್ತಾರೆ/ಮನೇಲಿ ಇನ್ಯಾರಾದರೂ ಇದ್ದಾರೆ ಎನ್ನುವದು ದೃಢವಾಗುತ್ತಿದ್ದಂತೆ ಹೆಚ್ಚಿನ ಇನ್‌ಬಾಕ್ಸ್ ಚರ್ಚೆಗಳು ಅಲ್ಲಲ್ಲೇ ನಿಂತುಹೋಗುವುದು ಏನನ್ನು ಸೂಚಿಸುತ್ತದೆ? ಚಿಕ್ಕ ಕುಟುಂಬದ ಹೆಣ್ಣಿದ್ದರೆ ಸಂಪರ್ಕ ಸಲೀಸು. ಏನಾದರೂ ನೆಪದಲ್ಲಿ ಮನೆಯವರೆಗೂ ಪಾದ ಬೆಳೆಸಬಹುದೆನ್ನುವ ಹುನ್ನಾರ.‘ನಾನು ಇಂತಹ ಅಸಭ್ಯ ಮಾತು ಇಷ್ಟಪಡುವುದಿಲ್ಲ’ ಎಂದಾಕೆ ಮುಲಾಜಿಲ್ಲದೆ ತಿರಸ್ಕರಿಸಿದಾಗಲೂ, ‘..ಬರೀ ಚಾಟ್ ಬಾಕ್ಸ್ ಎಂಜಾಯ್‌ಮೆಂಟ್. ನಾವೇನೂ ಭೇಟಿಯಾಗಬೇಕಿಲ್ಲ..’ಎಂದು ಒತ್ತಾಯಿಸುವವರಿಂದ ಹಿಡಿದು, ಬ್ಲಾಕ್ ಮಾಡಿದರೂ ಕೂಡಲೇ ಇನ್ನೊಂದು ಐ.ಡಿ. ಮೂಲಕ ಇಣುಕಿ, ‘ಸಾರಿ...ನಾನು ಯಾವ ಮೆಸೇಜೂ ಮಾಡಲ್ಲ. ಸುಮ್ನೆ ನಿಮ್ಮ ವಾಲ್ ಮೇಲಿರ್ತೀನಿ’ ಎಂದು ಹಲ್ಲು ಗಿಂಜುತ್ತಾ ಹಿಡಿಯಾಗಿ ನಿಂತುಕೊಳ್ಳುವ ಇವರಿಗೆ ಅದರಿಂದ ಸಿಗುವುದಾದರೂ ಏನು? ಆಕೆಯ ಪ್ರಶ್ನೆಗೆ ಉತ್ತರಿಸುವವರಾರು?ಕಾಫಿ ಆಯ್ತಾ..? ತಿಂಡಿ..? ಜಿಎಮ್, ಜಿಈವ್, ಜಿಏನ್ ಹೀಗೆ ಅವಽಗೊಂದಾವರ್ತಿ ಮೆಸೇಜಿಸುತ್ತಲೇ ಇದ್ದರೆ, ಆಕೆ ಈ ಹಾವಳಿಗೆ ತಲೆ ಕೆಟ್ಟು ಬ್ಲಾಕ್ ಮಾಡಿದರೆ, ಆವತ್ತೇ ಸಂಜೆಯಿಂದ ಯಾವ ಮುಲಾಜೂ ಇಲ್ದೇ ಆಕೆಯ ಚಾರಿತ್ರ್ಯಹರಣ ಆರಂಭವಾಗುತ್ತದೆ.‘ಆಕೆ ಯಾರ್ಯಾರಿಗೆ ಲೈಕ್ ಒತ್ತುತ್ತಾಳೆ, ಅವನಿಗೆ ಮಾತ್ರ ಕಮೆಂಟ್ ಮಾಡ್ತಾಳೆ, ಅಲ್ಲಿ ನೋಡು ಆ ವಾಲ್ ಮೇಲೆ ಮೇಸೇಜ್ ಹಾಕಿದಾಳೆ, ಇಲ್ಲಿ ನೋಡ್ರಿ ಇವನ ಜತೆ -ಟೋನೂ ಇದೆ. ಹೋಟೆಲ್‌ನಲ್ಲಿ ಊಟ ಮಾಡಿ ಪಾರ್ಟಿ ಮಾಡಿದಾರೆ. ನಾ ಹೇಳಿರಲಿಲ್ವಾ ಆಕೆ ಸರಿ ಇಲ್ಲ ಅಂತ’ ಎಂದು ಸರ್ಟಿಫೀಕೇಟ್ ಕೊಟ್ಟು ಕುತ್ಸಿತ ಖುಶಿ ಅನುಭವಿಸಿ, ಹೊಸ ವಾಲ್ ಮೇಲೆ ಕಾಳು ಹಾಕಲು ಹೊರಡುತ್ತಾರೆ.ಅಸಲಿಗೆ ಆಕೆಗೆ ಬೇಕಿರುವುದು ನಿಮ್ಮ ಉಪಚಾರವಲ್ಲ. ಒಂದು ಚೆಂದದ ಬರಹ, ಇನ್ಯಾರದ್ದೋ ಕಮೆಂಟು, ಕಾಲೆಳೆಯುವ ಚರ್ಚೆ, ಪ್ರಧಾನಿಯ ಬಗ್ಗೆ ಗಂಭೀರ ಚಿಂತನೆ, ಇನ್ಯಾವುದೋ ದೇಶದ ಪೇಂಟಿಂಗು, ಆ ತುದಿಯ ದೇಶದ ಪುಟ್ಟ ಮಗುವಿನ ಗಲೀಜು ಕೆನ್ನೆಯ ಮುಗ್ಧತೆ, ಇನ್ನಾವುದೋ ಮೂಲೆಯ -ಟೊಗ್ರಾ-ರ್‌ನ ವಾಹ್.. ಎನ್ನುವ ಚಿತ್ರ - ಹೀಗೆ ಆಕೆಯ ಆದ್ಯತೆಗಳು. ಅದಕ್ಕೆ ತಕ್ಕಂತೆ ಚೆಂದದ ಸ್ನೇಹಿತರ ಹುಡುಕಾಟ. ಆಕೆಗೆ ಒಂದು ನಂಬಿಕೆ ಬರುವವರೆಗೂ ಹುಡುಕಾಟ ಮುಂದುವರಿದೇ ಇರುತ್ತದೆ. ಅಂತಹ ನಂಬಿಗೆಗೆ ಅರ್ಹರಾದಲ್ಲಿ ಅವಳನ್ನು ದಿನಕ್ಕೆ ಮೂರಾವರ್ತಿ ವಿಚಾರಿಸಿಕೊಳ್ಳಲೇ ಬೇಕಿಲ್ಲ. ಆಕೆಯೇ ಮುಂದಾಗಿ ‘..ಗಣಪತಿ ಹಬ್ಬದ ದಿನ ಚಂದ್ರನ ನೋಡಕಂಡು ತಿರುಗಬ್ಯಾಡವೋ ಗುಂಡುಗೋವಿ..’ಎಂದು ಆಪ್ತವಾಗಿ ಎಚ್ಚರಿಸುತ್ತಾಳೆ.ಅದರೆ ಆ ಸಹನೆ-ನಂಬಿಕೆಯಿಂದ ವರ್ತಿಸುವ, ಉಳಿಸಿಕೊಳ್ಳುವ ಅಗತ್ಯ ಎರಡೂ ಇಲ್ಲದೇ ಬರೀ ಕಾಳು ಹಾಕಲೆಂದೇ ನಿಂತುಬಿಡುವವರಿಗೇನು ಅರ್ಥವಾದೀತು ಸ್ನೇಹದ ಮಹತ್ವ? ಕೊನೆಗೆ ಲಭ್ಯವಾಗೋದು ಬ್ಲಾಕ್ ಭಾಗ್ಯ ಅಷ್ಟೇ.
No comments:
Post a Comment