ಗಂಡಸರು ಯಾಕೆ ಸುಮಾರಾಗಿಬಿಡುತ್ತಾರೆ
ಹೊರ ಜಗತ್ತಿಗೆ ಮನೆಯೊಳಗಿನದನ್ನು ಕಾಣಿಸದಂತೆ ಬಾಗಿಲಿಕ್ಕಿಕೊಳ್ಳುವುದು ಸುಲಭ. ಆದರೆ ಮನಕ್ಕೆ ಬಿದ್ದ ಕನ್ನದ ಕಿಟಕಿಗೆ ಅಗುಳಿಹಾಕುವುದಾದರೂ ಹೇಗೆ..?ಅದೂ ಹಾರುಹೊಡೆತಕ್ಕೆ. ಅಂಥ ಶಾಶ್ವತ ತೇಪೆ ಇದೆಯಾದರೂ ಎಲ್ಲಿ..?
ಬಹುಶಃ ಅನಿವಾರ್ಯತೆ ಮತ್ತು ಬಡತನ ಮಾತ್ರ ಇಂಥ ಸಹಿಸುವಿಕೆಗೆ ಕಾರಣವಾಗುತ್ತದಾ ಅಥವಾ ಅದಿನ್ಯಾವ ಒತ್ತಡಕ್ಕೆ ಬಿದ್ದು ಹೆಣ್ಣುಮಕ್ಕಳು ಹೀಗೆ ಬದುಕು ಕಳೆದುಕೊಳ್ಳುತ್ತಾರೋ ನನಗಂತೂ ಗೊತ್ತಿಲ್ಲ. ಆದರೆ ಇವತ್ತಿಗೂ ಸಮಾಜದಲ್ಲಿ ಹೆಣ್ಣಿನ ಬಳಸಿಕೊಳ್ಳುವಿಕೆಯ ಸ್ಥಿತಿಗತಿಯಲ್ಲಿ ಯಾವ ಬದಲಾವಣೆಯೂ ಕಾಣುತ್ತಿಲ್ಲ. ಅದರಲ್ಲೂ -ಮಿನಿಸ್ಟುಗಳು ಬೆಂಗಳೂರಿನಾಚೆಗೂ ಕೊಂಚ ಕಣ್ಬಿಟ್ಟರೆ ಹೆಣ್ಣುಮಕ್ಕಳ ಪರಿಸ್ಥಿತಿ ಬದಲಾಗೇ ಇಲ್ಲ ಎನ್ನುವ ಅನಾಹುತಕಾರಿ ದುರಂತ ರಾಚೀತು.
ಆದರೆ ಗಂಡಸಿನ ಹಿನ್ನೆಲೆಯ ವಿವೇಚನೆ ಇಲ್ಲದೆ ಪುಕ್ಕಟೆ ಬೋರ್ಡಿಂಗ್/ಲಾಡ್ಜಿಂಗ್ ವ್ಯವಸ್ಥೆ ಕಲ್ಪಿಸುತ್ತಾ, ಹಗಲು ಕಚೇರಿ ಮತ್ತು ರಾತ್ರಿ ಕಂಡವನ ಬಗಲಿಗೆ ಕೈ ಸೇರಿಸಿ ಬಾರು, ಬುಲೆಟ್ಟು ಎನ್ನುತ್ತ ಹೊರಟುಬಿಡುವ, ವರ್ಷಕ್ಕೊಬ್ಬ ಸಂಗಾತಿ ಜತೆಗೆ ಗಂಡಸರು ಬದಲಾದಂತೆ ಮನೆಗಳನ್ನು ಬದಲಿಸುವ, ಬುಲೆಟ್ ಬೆಡಗಿಯರು ಇವತ್ತು ಹೆಣ್ಣುಮಕ್ಕಳ ಬಗೆಗಿನ ಗೌರವವನ್ನು ಸುಮಾರಾಗಿಸುತ್ತಿದ್ದಾರೆ, ಅದರಲ್ಲೂ -ಸ್‌ಬುಕ್‌ನಂತಹ ಸಾಮಾಜಿಕ ತಾಣದಲ್ಲಿ. ಅಂಥವರು ಬದುಕಿನಲ್ಲಿ ಬಟ್ಟೆ, ಗಂಡಸು ವ್ಯತ್ಯಾಸ ಇರದವರು. ಇಂಥವರಿಂದಾಗಿ ತುಂಬ ಕಷ್ಟದಿಂದ ಮರ್ಯಾದೆಯುತ ಜೀವನ ನಡೆಸುವ ಹೆಣ್ಣುಮಕ್ಕಳ ಬಗ್ಗೆಯೂ ಹಗುರ ಭಾವನೆ ಮೂಡುತ್ತಿದೆ.
ಗೀತಾ.. ಮದುವೆ ಎನ್ನುವ ಸಮಯಕ್ಕೆ ಬಂದಾಗ ಅದ್ಭುತ ಎನ್ನುವ ಮೇಲ್ವರ್ಗದ ಕುಟುಂಬಕ್ಕೇನೂ ಸೊಸೆಯಾಗಿ ಹೋದವಳಲ್ಲ. ಆದರೆ ಖಂಡಿತಕ್ಕೂ ‘ಬೇಷಾತು ಬಿಡ, ಚಲೋ ಮನತನಾ..’ ಎಂದು ಹೇಳುವಷ್ಟು ಸ್ಥಿತಿವಂತರು. ‘ಎರ್ಡೂ ಕಡೀಗಿನ ಖರ್ಚು ನಮದ..’ ಎಂದು ಮದುವೆ ಮಾಡಿಕೊಂಡಿದ್ದರು ಬೀಗರು. ‘..ಪುರಮಾಶಿ ಐಟಮ್.. ಊಟ ಮನಗಂಡ ಆತು ನೋಡು..’ ಎಂದು ಖುಶಿಯಿಂದ ಆಡಿಕೊಂಡು, ಆಕೆಯ ಮನೆಯ ಕಡೆಯವರು ಜುಲುಮೆಯಿಂದ ಊಟ ಬಡಿಸಿದ್ದು ನನಗೀಗಲೂ ಹಸಿರು. ಆವತ್ತಿಗೆ ಅಲ್ಲ ಮರೆತುಹೋಗಿದ್ದ ಗೀತ ಮೊನ್ನೆ ಆಕಸ್ಮಿಕವಾಗಿ ಸಂಪರ್ಕಕ್ಕೆ ಬಂದಾಗಲೇ ಗೊತ್ತಾಗಿದ್ದು ದಶಕಗಳ ಬದಲಾವಣೆಯಲ್ಲಿ ಬದುಕು ಹಲವು ದಿಸೆಯಲ್ಲಿ ಬದಲಾಗಿದೆ ಎಂದು. ‘ಬೆಂಗಳೂರಿನಿಂದ ಐವತ್ತೇ ಕಿ.ಮೀ. ಇ ಇದೀಯ. ಮುಂದಿನವಾರ ಬರ್ತೀನಿ’ ಎಂದೆ. ‘ಬೇಡ ಬೇಡ. ನಾ ಹೇಳಿದಾಗ ಬಾ ಸಾಕು.. ಅದಕೂ ಮದಲ ಬ್ಯಾಡ’ ಎಂದಿದ್ದಳು.
ಬರುತ್ತೇನೆಂದರೂ ಬೇಡ ಎನ್ನುವುದು, ಮೊಬೈಲ್‌ನಲ್ಲಿ ಮಾತಾಡುತ್ತಿzಗ ಆ ಕಡೆಯವರಿಗೆ ಹುಡುಗಿ ಎನ್ನಿಸುವಂತೆ ಮಾತಾಡಿಬಿಡುವುದು, ಮಾತಿಗೊಮ್ಮೆ ‘..ಏನೇ ಅಮ್ಮ ಹೆಂಗಿzಳೆ..’ ಎಂದು ಮಾತಿನ ವರಸೆಯನ್ನೇ ಬದಲಿಸಿಬಿಡುತ್ತಿzಳೆಂದರೆ ಹುಡುಗಿ ಖಂಡಿತಕ್ಕೂ ಆಚೆಬದಿಯಲ್ಲಿ ಸ್ವತಂತ್ರವಾಗಿಲ್ಲ ಎಂದೇ ಅರ್ಥ. ಇಂತಹ ಹಲವು ಸನ್ನಿವೇಶಗಳಿಗೆ ನಾನು ಇದಿರಾಗುತ್ತಲೇ ಇರುವುದರಿಂದ ‘..ಆಯ್ತ ಮೆಸೇಜ್ ಮಾಡು..’ ಎಂದು ಆವತ್ತಿಗೆ ಮಾತು ಮುಗಿಸಿದವನು ಮರೆತೂಬಿಟ್ಟಿದ್ದೆ.
ಗೀತ ನನಗೆ ತೀರಾ ಅಪರಿಚಿತಳೇನಲ್ಲ; ಆದರೂ ಅಷ್ಟಾಗಿ ಸಂಪರ್ಕದಲ್ಲೂ ಇರದಿದ್ದ ಹುಡುಗಿ. ಊರಕಡೆಯಲ್ಲಿzಗ ಆಗೀಗ ಪರಿಚಿತಳಾಗಿದ್ದರೂ ಯಾವ ಲೆಕ್ಕದಲ್ಲೂ ನಮ್ಮ ಹಿಂಡು ಸೇರದೆ ಉಳಿದಿದ್ದುದರಿಂದ ಸ್ವಾಭಾವಿಕ ಸಂಪರ್ಕಗಳೂ ಉಳಿದಿರಲಿಲ್ಲ. ಆದರೆ ಮೊಬೈಲು ಬಂದು ಎಲ್ಲವನ್ನೂ ಸಲೀಸು ಮಾಡತೊಡಗಿ ಗೀತ ಆಗೀಗ ಕರೆಗೆ ಸಿಗತೊಡಗಿದ್ದಳು. ಬನಶಂಕರಿ 2ನೆಯ ಹಂತದಲ್ಲಿನ ಮನೆಯ ಕರೆಗಂಟೆ ಒತ್ತಿ ಕಾಯುತ್ತಿz. ಕಿಟಕಿಯಿಂದ ಮಾತಾಡಿಸಿ ಕನ್ ಫಾರ್ಮ್ ಆದ ಮೇಲೆ ಗೀತ ಬಾಗಿಲು ತೆರೆದಿದ್ದು.ವಿಶಾಲ ಹಾಲಿನಲ್ಲಿ ಎದುರಿಗೇ ಟಿ.ವಿ., ಪಕ್ಕದಲ್ಲಿದ್ದ ಮಟ್ಟಸವಾದ ಸೋ-.ಎಲ್ಲೂ ಅಡ್ಡಾದಿಡ್ಡಿ ಪೇಪರು ಇತ್ಯಾದಿಗಳಿರಲಿಲ್ಲ.
‘ಹೆಂಗಿದ್ದಿ.. ನಾನು ಕಾಫಿ ಮನುಷ್ಯಾ ಅಲ್ಲ. ಚಹನೇ ಮಾಡಿಬಿಡು ..’ ಎನ್ನುತ್ತಾ ಒಂದಿಷ್ಟು ತಿಳಿಯಾಗಲು ಪ್ರಯತ್ನಿಸುತ್ತಿದ್ದರೆ ತಲ್ಲಣಗಳ ಮಧ್ಯದಲ್ಲಿ ಸಿಲುಕಿದ್ದ ಗೀತ ಅರೆಬರೆ ಮಾತಾಡುತ್ತಿದ್ದಳು.
ತೀರಾ ವೈಯಕ್ತಿಕ, ಆಕೆಯ ಬದುಕಿನಲ್ಲಿ ಆಕೆ ಮಾತ್ರ ಇಣುಕಿಕೊಂಡು ನೋಡಬಹುದಾಗಿದ್ದ ಖಾಸಗಿ ಸಮಸ್ಯೆಗಳಿಗೆ ಯಾವ ರೀತಿಯಲ್ಲೂ ನಾನು ಸಾಂತ್ವನ ಕೊಡುವ ಸ್ಥಿತಿಯಲ್ಲಿ ಇರಲಿಲ್ಲ. ಕಾರಣ ಕೆಲವೊಮ್ಮೆ ಹೆಣ್ಣುಮಕ್ಕಳು ನುಂಗಲೂ, ಉಗುಳಲೂ ಆಗದ ಸ್ಥಿತಿಯಲ್ಲಿರುತ್ತಾರೆ. ಅದರಲ್ಲೂ ಹೆಣ್ಣನ್ನು ಪ್ರತಿ ಹಂತದಲ್ಲೂ ದೈಹಿಕವಾಗಿ ಬಳಸಿಕೊಳ್ಳುವವರ ಎದುರಿಗೇ ಬದುಕು ಕಟ್ಟಿಕೊಳ್ಳಲು ಯತ್ನಿಸುವುದಿದೆಯಲ್ಲ ಅದಂತೂ ಘೋರ ನರಕ. ಇಂತಹ ಏನೂ ಮಾಡಲಾಗದ ಆಂತರಿಕ ಸಮಸ್ಯೆಗಳಿಗೆ ಯಾವ ಡೊಮೆಸ್ಟಿಕ್ ವಯಲೆನ್ಸು ಉತ್ತರ ಕೊಡುತ್ತದೋ ಗೊತ್ತಿಲ್ಲ. ಗೀತಳ ಮೈ ಮನಸ್ಸು ಎರಡೂ ಲೂಟಿಯಾಗುತ್ತಾ ಬದುಕಿದ್ದು ಸ್ಪಷ್ಟ.
ಹೆಣ್ಣುಮಕ್ಕಳ ಸಮಸ್ಯೆಗಳಿಗೆ ಸಂಘಗಳು, ವೇದಿಕೆಗಳು, ಸರ್ಕಾರಿ ಪ್ರಾಯೋಜಿತ ಕಲ್ಯಾಣ ಕಾರ್ಯಕ್ರಮ ಸಾವಿರವಿದ್ದರೂ, ಕೌಟುಂಬಿಕ ದೌರ್ಜನ್ಯದಲ್ಲಿ ಬಲಿಯಾಗುತ್ತಲೇ ಇರುವವರನ್ನು ರಕ್ಷಿಸುವುದು ಮಾತ್ರ ಸಾಧ್ಯವಾಗುತ್ತಿಲ್ಲ. ಮದುವೆಯಾದ ಮೊದಲ ದಿನವೇ ಆಘಾತ ಎದುರಿಸಿದ್ದಳು ಗೀತ. ಎಷ್ಟು ಖುಶಿಯಿಂದ ಮದುವೆ ಆಗಿದ್ದಳೊ ಅಷ್ಟೇ ವೇಗದಲ್ಲಿ ಭವಿಷ್ಯ ಕಪ್ಪಿಟ್ಟಿತ್ತು. ಇಷ್ಟೊಂದು ಮುತುವರ್ಜಿ ವಹಿಸಿ, ಖರ್ಚು ಹಾಕಿಕೊಂಡು, ಕಕ್ಕುಲಾತಿ ತೋರಿದ ಹಕೀಕತ್ತು ಒಂದೆರಡು ವಾರದ ಗೀತಳಿಗೆ ಗೊತ್ತಾಗಿತ್ತು. ಗಂಡನ ಬದಲಿಗೆ ಕೋಣೆ ಪ್ರವೇಶಿಸುತ್ತಿದ್ದುದು ಸ್ವತಃ ಮಾವ. ‘ಹುಡುಗ ಗಂಡಸಲ್ಲ. ಹಂಗಂತ ನೀನಗೇನೂ ತ್ರಾಸ ಕೊಡೋದಿಲ್ಲ. ನಾನ ನೋಡ್ಕೋತಿನಿ ಸುಮ್ಕಿರು...’ ಎಂದಿದ್ದ. ಅಷ್ಟಕ್ಕೂ ಹುಡುಗನಿಗೆ ಗಂಡಸುತನವೇ ಇಲ್ಲದ ಮೇಲೆ ಮದುವೆ ಯಾಕೆ ಮಾಡಬೇಕಿತ್ತು..? ಕುಟುಂಬದ ನಿರ್ಲಜ್ಜ ಮರ್ಯಾದೆಗೆ ಗೀತ ಬಲಿಯಾಗಿದ್ದಳು. ಹುಡುಗ ಆ ಕಡೆಗೆ ತಿರುಗಿ ಮಲಗೆದ್ದು ಹೋಗಿದ್ದ ಬೆಳಗಾದ ಕೂಡಲೇ. ‘ಮನಿತನಾ ಇಲ್ಲಿಗೆ ನಿಂತುಹೋಗಬಾರದು. ಅದಕ್ಕ ನಾನೇ ನಿನ್ನ ಗಂಡನಂಗಿರ್ತೆನಿ..’ ಎನ್ನುತ್ತಾ ಮಾವ ಗೀತಳನ್ನು ಬಳಸಿಕೊಂಡು ಬಿಟ್ಟಿದ್ದ. ಅಲ್ಲಿಂದ ನಿರಂತರ ಮೂರು ವರ್ಷ ಕಳೆದರೂ ಮಕ್ಕಳೂ ಆಗಲಿಲ್ಲ, ಮಾವನ ಹಿಂಸೆಯಿಂದ ಮುಕ್ತಳೂ ಆಗಲಿಲ್ಲ. ಬದುಕು ಹೊರಗಡೆಯಿಂದ ತುಂಬ ಚೆಂದ, ಕೊರತೆ ಇಲ್ಲದೆ ನಡೆಯುತ್ತಿತ್ತು. ಮಗಳು ನೆಮ್ಮದಿಯಾಗಿzಳೆಂದು ಅವಳ ಅಪ್ಪ-ಅಮ್ಮ ತುಂಬ ನಿರುಮ್ಮಳವಾಗಿದ್ದರು. ತವರುಮನೆಯ ನೆಮ್ಮದಿ ಕದಡುವ ಯಾವ ಪ್ರಯತ್ನವನ್ನೂ ಗೀತ ಮಾಡುವಂತೆಯೇ ಇರಲಿಲ್ಲ. ‘ಮಕ್ಕಳು ಆಗಿಲ್ವಂತೆ’ ಎನ್ನುವ ಸುತ್ತಮುತ್ತಲಿನ ಕೊಂಕಿಗೆ ಬಲಿಯಾಗುವ ಬದಲಿಗೆ ಮನೆಯಿಂದಾಚೆಗೆ ಬರುವ ಪ್ರಯತ್ನವನ್ನೂ ಗೀತ ಬಿಟ್ಟುಬಿಟ್ಟಿದ್ದಳು.
ಗಂಡನ ವೀಕ್‌ನೆಸ್ ಅನ್ನು ಬಳಸಿಕೊಂಡು ಮಾವ ಪೀಡಿಸುತ್ತಿದ್ದ. ಹೋಗಲಿ ಅವನಿಂದಾದರೂ ಮಕ್ಕಳು ಅಂತಾದುವಾ? ಇಲ್ಲ. ಮಾವ ದೈಹಿಕ ಸುಖ ಪಡೆಯುವಾಗ ಮಾತ್ರ ಗಂಡಸಾಗುತ್ತಿದ್ದ. ವಯಸ್ಸಿಗನುಗುಣವಾಗಿ ಮೊಳೆಯಿಸುವ ಶಕ್ತಿ ಮುರುಟಿಹೋಗಿತ್ತು. ಆದರೆ ಆಘಾತಕಾರಿ ಮತ್ತು ಘೋರವಾಗಿದ್ದುದು ಎಂದರೆ, ಇಂತಹ ಅಪಸವ್ಯಗಳ ಮಧ್ಯೆ ಇನ್ನೊಂದು ಹಿಂಸೆಗೆ ಬಲಿಯಾಗಿದ್ದುದು; ಅದೂ ಬಾಯ್ಬಿಡಲಾಗದ ವರಸೆಯಲ್ಲಿ.
ಎ ಗೊತ್ತಾಗಿದ್ದ, ಹುಡುಗನ ಪರಿಸ್ಥಿತಿಯ ಅರಿವೂ ವೈದ್ಯರಿಗಿತ್ತು. ಆದರೂ ಗೀತ ನಾಲ್ಕನೆ ವರ್ಷ ಬಸುರಿಯಾಗಿದ್ದಳು. ಮುಖ-ಮನಸ್ಸು ಎರಡೂ ಎದ್ದು ನಿಲ್ಲುವ ಸ್ಥಿತಿಯಲ್ಲಿರಲೇ ಇಲ್ಲ. ಕಾರಣ ಮಾವನ ತಮ್ಮನ ಮಗನೊಬ್ಬ ಇದನ್ನೆ ಪತ್ತೆಮಾಡಿ ಗೀತಳನ್ನು ಬಳಸಿಕೊಂಡಿದ್ದ. ಗಂಡನ ಮನೆಯ ಇಬ್ಬಿಬ್ಬರು ವಿಟರು ಆಕೆಯನ್ನು ಹಣಿಯತೊಡಗಿದ್ದರು. ಏನೂ ಮಾಡಲಾಗದ ಗಂಡನೊಂದಿಗಿನ ವಿಚಿತ್ರ ದಾಂಪತ್ಯದಲ್ಲಿ ಅಸಹಾಯಕತೆ, ಅನಿವಾರ್ಯದ ಬದುಕು; ತವರುಮನೆಯ ಅಪ್ಪ-ಅಮ್ಮ, ಇತರರನ್ನು ಬೇಗುದಿಗೆ ತಳ್ಳಲಾಗದ ಗೀತ ತುಂಬ ಹಸಿಹಸಿಯಾಗಿ ನುಡಿದಿದ್ದಳು- ‘ನನ್ನ ಬದುಕು ಒಂದು ರೀತೀಲಿ ಬಿಟ್ಟಿಸೂಳೆ ತರಹ ಆಗ್ಬಿಟ್ಟಿದೆ ಮಾರಾಯ. ಅವರಾದರೂ ‘ಹೌದು..ದಂಧೇ..’ ಅಂತ ಮುಖ ಎತ್ತಿ ಬದುಕ್ತಾರೆ.. ನಾನು..? ಆತ್ಮಹತ್ಯೆ ಅಂತ ಎಷ್ಟು ಸಲ ಸ್ಟೂಲ ಹತ್ತಿ ಇಳ್ದೀನಿ ಗೊತ್ತಿಲ್ಲ. ಮನ್ಯಾಗಿನ ಗಂಡಸರು ಮಾಡಿರೋ ಹೊಲಸು ಕರ್ಮಕ್ಕೆ ಏನೂ ಗೊತ್ತಿಲ್ಲದ ಮಗು ಯಾಕೆ ಬಲಿಯಾಗ್ಬೇಕು ಅಂತ ಸುಮ್ನಿದೀನಿ..’.
ಮುಂದಿನ ಮಾತು ಕೇಳಿಸಿಕೊಳ್ಳುವ, ಜೀರ್ಣಿಸಿಕೊಳ್ಳುವ ಎರಡೂ ಶಕ್ತಿ ನನಗಿರಲಿಲ್ಲ. ಆದರೆ ಅದಕ್ಕೆ ಪಕ್ಕಾಗಿಯೂ ಬದುಕುತ್ತಿರುವ ಗೀತ ಅದೆಲ್ಲಿಂದಲೋ ಮೈಗೂ ಮನಸ್ಸಿಗೂ ತಾಕತ್ತು ಒಗ್ಗೂಡಿಸಿಕೊಂಡು ಈಗ ತಿರುಗಿಬಿದ್ದಿzಳೆ. ಇಲ್ಲಿವರೆಗಿನ ನಿರಂತರ ಅತ್ಯಾಚಾರದ ವಿರುದ್ಧ ಸೆಟೆದು ನಿಂತಿzಳೆ. ಮೈ ‘ಜುಂ’ ಎಂದುಬಿಟ್ಟಿತ್ತು. ಸುಮ್ಮನೆ ತಲೆಸವರಿ.. ಏನೋ ಒಂದಷ್ಟು ಸಮಾಧಾನ ಹೇಳಿದೆ. ಮುಂದೆ ಮಾತನಾಡಲೂ ಆಗದೆ ಹೊರಬೀಳುತ್ತಿದ್ದರೆ, ಸೊಂಟದಲ್ಲಿದ್ದ ಮಗುವಿಗೆ ಮುದ್ದುಮಾಡುತ್ತಾ ಕಿಟಕಿಯಿಂದ ‘ಬೈ ಬೈ’ ಅನಿಸುತ್ತಿzಳೆ. ನಾನು ಹಿಂದಿರುಗಿ ನೋಡುವ ಮೊದಲೇ ಬಾಗಿಲು ಹಾಕಿಕೊಂಡಾಗಿತ್ತು ಆಕೆ. ಜಗತ್ತಿನ ದೃಷ್ಟಿಗೆ ಬಾಗಿಲು ಮುಚ್ಚಿತ್ತು; ಆದರೆ ಆಕೆಯ ಮನಸ್ಸಿನ ಕದಕ್ಕೆ ಹೊಡೆದ ಹಾರು ಮುಚ್ಚುವರಾರು..?
ಗೀತ ಆಡಿದ್ದ ಮಾತೊಂದು ಕಿವಿಯಲ್ಲಿನ್ನೂ ಕೊರೆಯುತ್ತಲೇ ಇತ್ತು- ‘ಯಾಕ ಗಂಡಸರು ಅಂದರ ಎ ಕಡೆಲೂ ಸುಮಾರು ಅನ್ಸಿಬಿಡ್ತದ ಅಂತ ಗೊತಾಯ್ತ. ಮೊದಲೇ ಬರಗೆಟ್ಟವರು ಅನ್ನಿಸಿಬಿಡುವಾಗ ಹಿಂಗೂ ಆದರ ಎಂಥವರೂ ಸುಮಾರು ಅನ್ಸೋದರಾಗ ತಪ್ಪೇನದ..?’. ಏನು ಹೇಳಲಿ. ಅತ್ತ ಹೊಸ ಚೆಟಕ್ಕೇ ನಿಂತ ಹೆಣ್ಣುಗಳು, ಮರ್ಯಾದಸ್ಥ ಮಹಿಳೆಯರನ್ನೂ ಸುಮಾರಾಗಿಸುತ್ತಿದ್ದರೆ, ಇತ್ತ ಗೀತಳ ಅನುಭವದೆದುರಿಗೆ ಇದಕ್ಕಿಂತ ಒಳ್ಳೆಯ ಭಾವನೆ ಬರುವುದಾದರೂ ಹೇಗೆ ಸಾಧ್ಯವಿತ್ತು..?
No comments:
Post a Comment