Saturday, July 30, 2016


ನಂಬಿಕೆಗೆ ಒಗ್ಗದ ಹರೆಯದ ತಲ್ಲಣಗಳು
ಯಾವತ್ತೂ ಗಂಡನದ್ದು ಹೆಂಡತಿಗೆ, ಹೆಂಡತಿಯದ್ದು ಗಂಡನಿಗೆ, ಅಪ್ಪನದ್ದು ಮಕ್ಕಳಿಗೆ, ಮಕ್ಕಳದ್ದು ಅಪ್ಪನಿಗೆ ಯಾರೊಬ್ಬರ ಮಾತು ಯಾರಿಗೂ ಆಗಿಬರುತ್ತಿಲ್ಲ. ಇನ್ನು ಭಾವನೆಗೆ ವಿರುದ್ಧವಾದುದಕ್ಕೆ ಕೇಳಿಯಾರೇ?

“ನಾವೇನು ಹುಡುಗರ ಜತೆ ಓಡಿ ಹೋಗ್ತೀವಾ? ಹುಡುಗಿಯಾದ ತಕ್ಷಣ ಹಿಂಗೇ ಇರ್ಬೇಕು ಅಂತಿದೆಯಾ? ಏನೂ ನಡಿದೇ ಇದ್ರೂ ಯಾರು ಬಂದ್ರು? ಯಾರು ಹೋದ್ರು? ಆ ಹುಡುಗ್ರು ನಿನ್ನ ಯಾಕೆ ಹುಡುಕಿಕೊಂಡು ಬರ್ತಾರೆ? ಮೇಕಪ್ ಜಾಸ್ತಿ ಆಯ್ತು, ಇಂಥ ಡ್ರೆಸ್ಸು ಯಾಕೆ? ನಿನಗೇ ಯಾಕೆ -ನ್ ಬರ್ತಾವೆ? ಹೀಗೆ ಉತ್ತರಿಸೋಕೆ ಇರುಸಾಗೋ ಪ್ರಶ್ನೆಗೆ, ಮುಜುಗರಕ್ಕಿಂತ ಹುಟ್ಟಿಸಿದವರಿಗೆ ನಂಬಿಕೆಗೆ ಈಡಾಗದಂತಹ ಪ್ರಶ್ನೆಗಳು ಯಾವಾಗಲೂ ಕೇಳ್ತಾ ಎಲ್ಲದರ ಮೇಲೂ ಅನುಮಾನ ಪಡ್ತಾ ಇರ‍್ತಾರೆ. ಅದರರ್ಥ ನಾವೇನು ಓಡಿ ಹೋಗ್ತೀವಿ ಅಂತಾನಾ, ಇದನ್ನೆಲ್ಲ ಹೇಗೆ ನಿಭಾಯಿಸೋದು? ಜನರ ಜೊತೆ ಬದುಕೋದೇ ಕಷ್ಟ. ಇನ್ನು ಮನೆಯಲ್ಲೂ ಕೊಂಚ ಇಂತಹ ವರ್ತನೆಗಳು ಶುರು ಆಗಿ ಬಿಟ್ರೆ...?
 ಬೇರೆಯವರಂತೂ ಹಂಗೇ ನೋಡ್ತಾರೆ. ಕಣ್ಣು ಬಿಟ್ಟರೆ ಎದುರಿನವರ ಕಣ್ಣು ಎದೆಮ್ಯಾಲೇ ಇರ್ತದೆ, ಪಕ್ಕ ಹಾಯುವಾಗ ತೊಡೆ ಸವರದೆ ಮುಂದಕ್ಕೆ ಸರಿಯುವ ಗಂಡಸರು ಸಿಗುವುದೇ ಅಪರೂಪ ಆಗ್ತಿದೆ, ರಶ್ ಇದ್ದರಂತೂ ಹಿಂಭಾಗ ಮುಂಭಾಗ ಅಂತೆಲ್ಲ ರಕ್ಷಣೆ ಮಾಡ್ಕೊಳ್ಳೊದರಲ್ಲಿ ನಾವೇ ಕಳೆದು ಹೋಗಿರ್ತೀವಿ. ಸಂಜೆ ಹೊತ್ತಲ್ಲಂತೂ ಆಟೊ ಕಾಯುವುದರ ಅರ್ಥವೇ ಬೇರೆ ಆಗ್ಬಿಟ್ಟಿದೆ. ಅಗತ್ಯ ಇದ್ದವರು ಏನೋ ಪಾಪಕ್ಕೆ ಅವರ ಪಾಡು ಮಾಡ್ಕೊತಿರ್ತಾರೆ. ಬಸ್‌ಸ್ಟಾಪ್‌ಲಿ ಕಾಯೋ ಹುಡುಗಿರೆಲ್ಲ ಕಾಲ್‌ಗರ್ಲ್ಸ್ ಅಲ್ಲ ಅನ್ನೋದು ಗಂಡಸರಿಗೆ ಹೆಂಗೆ ಅರ್ಥ ಮಾಡಿಸೋದು? ಎಂತಹವನೂ ಸಿಕ್ಕಿದರೆ ನೋಡೋಣ ಅನ್ನೋ ಹಂಗಾಗಿದೆಯಲ್ಲ? ನಾವೂ ನಮ್ಮ ಪಾಡಿಗೆ ಎಂಜಾಯ್ ಮಾಡೊದು ಬೇಡ್ವಾ? ಎಲ್ಲಿ ಹೋದರೂ ಇದೊಂದು ರೀತಿ ಹಿಂಸೆ ಆಗಿಬಿಟ್ಟಿದೆ ಅಂಕಲ್. ಆದರೆ, ಮನೆಯಲ್ಲೂ ಸಂಶಯದ ದೃಷ್ಟಿ ಎದುರಿಸೋದು ಅಂದರೆ ಬದುಕು ದಿನಗಳ ಬದಲಿಗೆ ಗಂಟೆಗಳನ್ನು ಎದುರಿಸಬೇಕಾಗ್ತದೆ". ಎದುರಿಗೆ ಕೂತ ಹತ್ತೊಂಬತ್ತು-ಇಪ್ಪತ್ತರ ಆಸುಪಾಸಿನ ಹುಡುಗಿಯ ಕಣ್ಣಲ್ಲಿ ಅಸಹನೆ ಪುಟಿಯುತ್ತಿದ್ದರೆ, ಪದೇಪದೆ ಬ್ಲಿಂಕಾಗುತ್ತಿದ್ದ ಆಕೆಯ ಮೊಬೈಲ್ ಲೈಟ್ ಹಸಿರು ದೀಪ ಉರಿಸುತ್ತಿತ್ತು.
 ವೈದ್ಯೆಯಾಗಬೇಕು ಎಂದು ಕನಸು ಹೊತ್ತಿರುವ ಆ ಹುಡುಗಿಯ ಬದುಕಿನಲ್ಲಿ ಅರ್ಜೆಂಟಾಗಿ ಪ್ರೈವಸಿ ಬೇಕಿದೆ. ಆಕೆಯ ಮೊಬೈಲು ಎಷ್ಟೊತ್ತಿಗಾದರೂ ಗೊರಗುಟ್ಟಿದರೆ ಮುಲಾಜಿಲ್ಲದೆ ತೆಗೆದು ಮಾತಿಗೆ ಕೂಡಬೇಕಿದೆ. ಮನೆಗೆ ಹೋದರೆ ರೂಮು ಬಾಗಿಲು ಹಾಕಿಕೊಂಡು ಕೂತುಕೊಳ್ಳಬೇಕು. ಸರಿ ರಾತ್ರಿಯವರೆಗೂ ಚಾಟ್ ಮಾಡಬೇಕು. ಹನ್ನೆರಡರವರೆಗೂ ಕಾಯ್ದು ಬರ್ತಡೆ ವಿಶ್ ಮಾಡ್ಬೇಕು. ಆಮೇಲೆ ಮತ್ತೆ ಬೆಳಗ್ಗೆ ಎದ್ದು ಕ್ಲಾಸಿಗೆ ಓಡಲು ತಯಾರಾಗಬೇಕು. ಇವೆಲ್ಲದರ ಮಧ್ಯೆ ಮಗಳು ಡಾಕ್ಟರ್ ಆಗುತ್ತಿzಳೆ ಎಂದು ರಾತ್ರಿ ಊಟವಾದ ಮೇಲೂ ಹಾಲು, ಬಿಸ್ಕೇಟು ಅಂತೆಲ್ಲ ಅಮ್ಮ ಕಾಯುತ್ತಿದ್ದರೆ, ಆಚೆಗೆ ನಿದ್ರೆಗಣ್ಣಲ್ಲೂ ಮಗಳು ಸರಿ ರಾತ್ರಿಯವರೆಗೆ ಓದುತ್ತಿzಳಲ್ಲ ಎಂದು ಅರೆಬರೆ ಚಿಂತೆಯಲ್ಲಿ ಕಣ್ಣುಜ್ಜಿಕೊಳ್ಳುವ ಅಪ್ಪ ‘ಬೇಗ ಮಲಗಮ್ಮ..’ ಎಂದು ಕನವರಿಸುತ್ತಿzನೆ. ಆದರೆ, ತಂತಮ್ಮ ಪಾಡಿಗೆ ಇವತ್ತು -ಸ್‌ಬುಕ್ ಮತ್ತು ವಾಟ್ಸ್‌ಆಪ್‌ಗೆ ದಾಂಗುಡಿ ಇಟ್ಟಿರುವ ಹುಡುಗ/ಗಿಯರಿಗೆ ಈ ವರ್ತನೆಯ ಹಿಂದಿನ ತಳಮಳ ಅರ್ಥವಾಗುತ್ತಿಲ್ಲ. ಬಿಡಿಸಿ ಹೇಳುವವರು ಮೊದಲೇ ಇಲ್ಲ.
ಹೇಳಿದರೂ ಮನೆಯವರ ಮಾತು ಯಾರಿಗೂ ಪಥ್ಯವಾಗುವುದಿಲ್ಲ. ‘ನಾ ಹೇಳಿದ್ದು ನೀನು ಯಾವತ್ತು ಕೇಳಿದ್ದೀ?’ ಎನ್ನುವಲ್ಲಿಗೆ ಮಾತುಕತೆ ಕೊನೆಯಾಗಿ ಸರ್ವಸಮ್ಮತ ಅಭಿಪ್ರಾಯ ಮೂಡಿಸುವುದು ಅಸಾಧ್ಯದ ಪರಿಸ್ಥಿತಿಗೆ ಬಂದುನಿಂತಿರುವುದು ಹಲವು ಕುಟುಂಬದ ಕತೆಯಾಗುತ್ತಿದೆ. ಯಾವತ್ತೂ ಗಂಡನದ್ದು ಹೆಂಡತಿಗೆ, ಹೆಂಡತಿಯದ್ದು ಗಂಡನಿಗೆ, ಅಪ್ಪನದ್ದು ಮಕ್ಕಳಿಗೆ, ಮಕ್ಕಳದ್ದು ಅಪ್ಪನಿಗೆ ಯಾರೊಬ್ಬರ ಮಾತು ಯಾರೂ ಕೇಳುವುದಿಲ್ಲ. ಅಪವಾದಗಳನ್ನು ಆಚೆಗಿಡೋಣ. ನಾನು ಎಲ್ಲವನ್ನೂ, ಎಲ್ಲರನ್ನೂ ಜನರಲೈಸ್ ಮಾಡುತ್ತಿಲ್ಲ. ಆದರೆ, ಸಾಮಾನ್ಯವಾಗಿ ಸಾಮೂಹಿಕವಾಗಿ ತಲುಪಬಹುದಾದ ಸಮುದಾಯವನ್ನು ಗಮನದಲ್ಲಿರಿಸಿಕೊಂಡು ಮಾತಾಡುತ್ತೇನೆ. ಹಾಗಾಗಿ ಹೆಚ್ಚಿನ ಕುಟುಂಬಗಳ ಕತೆ ಇದು. ಇದು ಕೇವಲ ಅನಿತಾ ಎನ್ನುವ ವೈದ್ಯೆಯಾಗಲು ಹೊರಟ ಹೊಸ ಹರೆಯದ ಹುಡುಗಿಯ ತಲ್ಲಣಗಳ ತವಕದಲ್ಲಿ ನಿಂತಿರುವ ಕತೆಯಲ್ಲ. ತುಂಬ ಕುಟುಂಬದಲ್ಲಿ ಇದಕ್ಕೆ ಪಕ್ಕಾದವರಿದ್ದಾರೆ. ಅದರ ಜೊತೆಗೆ ಎದುರು ಎದುರೇ ನಡೆಯುತ್ತಿರುವ ಹಗರಣಗಳ ಬಗೆಗೆ ಮನೆ ಮತ್ತು ಕುಟುಂಬದ ನೆಮ್ಮದಿ ಎರಡೂ ಬೀದಿಪಾಲಾಗುತ್ತಿರುವುದು ವಾಸ್ತವ. ಹಾಗಾಗಿ ಭವಿಷ್ಯತ್ತಿನ ಬಗೆಗೆ ದಿಗಿಲು ಎರಡೂ ತಲೆಮಾರಿನಲ್ಲಿ ಕಾಣಿಸಿಕೊಳ್ಳುತ್ತಿರುವುದು ಸಹಜವೇ. 
ಮೊದಲೆಲ್ಲ ನೋಡಿ. ಮಾಹಿತಿಯ ಪ್ರಸರಣ ಇಷ್ಟು ವೇಗದಲ್ಲಿಲ್ಲದೇ ಇzಗ ಇಂತಹ ಹೆದರಿಕೆ ಅಥವಾ ಮಾನಸಿಕ ತುಮುಲ ಆಗಿನ ಎರಡು ತಲೆಮಾರಿಗೆ ಕಂಡದ್ದೇ ಇಲ್ಲ. ಏನಿದ್ದರೂ ಮಗ, ಮಗಳು ಓದಲು ಹೊರ ಊರಿಗೆ ಹೊರಟು ನಿಂತರೆ ಇರುತ್ತಿದ್ದ ಎಚ್ಚರಿಕೆಯ ಮಾತುಗಳಲ್ಲಿ ಮುಖ್ಯವಾಗಿರುತ್ತಿದ್ದುದು-‘ಹಣ ಹುಶಾರಾಗಿಟ್ಟುಕೊ, ಸರಿಯಾಗಿ ಓದು, ಊಟ ತಿಂಡಿ ಮಾಡು, ಅರೋಗ್ಯ ಕಾಯ್ದುಕೋ’ ಎಂಬುದು. ಹುಡುಗಿಯಾಗಿದ್ದರೆ-‘ಬೇಗ ಮನೆ ಸೇರು’ ಎನ್ನುವ ಕಿವಿಮಾತು ಬಿಟ್ಟರೆ ಬೇರೇನೂ ಇರತ್ತಲೇ ಇರಲಿಲ್ಲ. 
ಈಗ ನೋಡಿ, ಪ್ರತಿ ಗೃಹಿಣಿಯೂ ‘ಅಯ್ಯೋ ಮಕ್ಕಳು ಏನು ಮಾಡ್ತಾರೋರಿ. ತುಂಬ ಭಯವಾಗುತ್ತೆ ಒಮ್ಮೊಮ್ಮೆ’ ಎನ್ನುವಾಗ ಆಕೆಯ ಮುಖ ಮತ್ತು ಮನಸ್ಸಿಗಿಂತಲೂ ಅವರಿಗರಿವಾಗುವ ಮೊದಲೇ ಹೃದಯ ಹೊಡೆದುಕೊಳ್ಳುತ್ತಿರುತ್ತದೆ. ಕಾರಣ, ಪಾಪ ಎನ್ನುವ ಹುಡುಗಿಯರೂ, ಇವತ್ತು ತುಂಬ ಒಳ್ಳೆಯ ಕುಟುಂಬಗಳ ಮರ್ಯಾದೆಯನ್ನು ರಸ್ತೆಗಿಳಿಸಿರುವ ಕತೆಗಳು ದಿನವಹಿ ಸಾಮಾನ್ಯವಾಗುತ್ತಿರುವುದು. ಅದರಲ್ಲೂ ಹುಡುಗಿಯರ ಕೈಗೆ ಮೊಬೈಲು ಬರುತ್ತಿದ್ದಂತೆ, ಹಗಲು ಹನ್ನೆರಡು ತಾಸು ಕೆಲಸ ಬೊಗಸೆ ಬಿಟ್ಟು ಅವಳ ಹಿಂದೆ ಬಿದ್ದು ಆಯಾ ಕಾಲಕ್ಕೆ ಅಗತ್ಯದ ಸೂರ್ಯ, ಚಂದ್ರ, ಚುಕ್ಕಿಯ ಬದಲಿಗೆ, ಮಾಲ್, ಮ್ಯಾಕ್ ಡೊನಾಲ್ಡು, ಒಂಟೆಯಂತಹ ಬೈಕೂ, ಕಪ್ಪೆಯಂತಹ ಕಾರು ಬೇಕಾದಲ್ಲಿ ತಂದು ನಿಲ್ಲಿಸಿ ಹುಡುಗಿಯರು ಸಿನಿಮಾಗಳಲ್ಲಿ ಮಾತ್ರ ನೋಡಬಹುದಾದಂತಹ ಚಿತ್ರವನ್ನು ರಸ್ತೆಗಿಳಿಸಿ ಆಕೆಯನ್ನು ಕೆಡವಲು ಕಾದಿರುವ ಹುಡುಗರ ಪಡೆಯ ಅನಾಹುತಕಾರಿ ವಾಸ್ತವ ಹುಡುಗಿಯರಿಗೆ ಅರ್ಥವಾಗುತ್ತಲೇ ಇಲ್ಲ ಎನ್ನುವುದೂ ಸತ್ಯ.
ಇಲ್ಲಿ ಹೆಣ್ಣುಮಕ್ಕಳ ಬಗ್ಗೆ ಹೇಳಬೇಕಾಗಿರುವ ಕಾರಣ ಆಯಾ ಮನೆಗಳ ಹುಡುಗರ ಇಂತಹ ವರ್ತನೆಗೆ ಎಲ್ಲಿಯೂ ಯಾರ ಮರ್ಯಾದೆಯೂ ಹೋಗುತ್ತಿಲ್ಲ. ಬದುಕೂ ಹಾಳಾಗುತ್ತಿಲ್ಲ. ಹಾಗಾಗೇ ಮಗಳು ಎನ್ನುವ ಕಾರಣ ಅಮ್ಮನಿಗೆ-ಅಪ್ಪನಿಗೆ ಅದು ಬೇರೆಯದೆ ತೆರನಾದ ಚಿಂತೆ ಆರಂಭವಾಗಿರುತ್ತದೆ.
ಇಲ್ಲಿ ಅಷ್ಟಕ್ಕೂ ಹೀಗೇಕಾಗುತ್ತದೆ ಮತ್ತು ಹದಿವಯಸ್ಸಿನ ಮಗಳು ಜಿದ್ದಿಗೆ ಬಿದ್ದು ಅಷ್ಟು ವರ್ಷದ ಸಾಂಗತ್ಯದ ಅಪ್ಪ-ಅಮ್ಮನಿಗಿಂತ ನಿನ್ನೆ ಮೊನ್ನೆ ಬಂದ -ಂಡ್ಸು ಯಾಕೆ ಆ ಪಾಟಿ ಮಾತಿಗೆ, ಕೆಲಸಕ್ಕೆ, ಆಟಕ್ಕೆ, ಓಡಾಟಕ್ಕೆ ಪಕ್ಕಾಗಿ ಬಿಡುತ್ತಾರೆ. ಅಪ್ಪ-ಅಮ್ಮಂದಿರ ಪ್ರತೀ ಕ್ರಿಯೆಯೂ ಭವಿಷ್ಯದ ಕಾಳಜಿ ಮತ್ತು ಅಪಾಯದ ಅರಿವಿಗಾಗಿ ಮಾಡುವ ಆಕೆಯ ಯಾವುದೇ ಕೆಲಸವನ್ನು ಅರ್ಧಕ್ಕೆ ತಡೆಯುವ ಮತ್ತು ಎಚ್ಚರಿಕೆಯಿಂದಲೇ ಆರಂಭಿಸುವ ಮಾತಿನಿಂದ ಆರಂಭವಾದರೆ, ಆಯಾ ವಯಸ್ಸಿನ -ಂಡ್ಸು ಕೊಡುವ ಮೊದಲ ಕುಮ್ಮಕ್ಕೇ ‘ಯು ಆರ್ ಗುಡ್ ಎನ-’ ಎನ್ನುವುದು. ಯಾವ ಅಪಾಯ ಅಥವಾ ಪರಿಣಾಮದ ಯೋಚನೆಯಿಲ್ಲದೆ ಬೆಂಬಲಕ್ಕೆ ನಿಂತೂ ಬಿಡುತ್ತಾರೆ. ಮನಸ್ಸಿಗೆ ಇಷ್ಟವಾಗುವ ಆಸೆಗೆ ಯಾವ ಋಣಾತ್ಮಕ ಯೋಚನೆಯೂ ಇಲ್ಲದೆ ನೀರೆರೆಯುತ್ತಾರೆ. ಹಾಗಿzಗ ಸ್ನೇಹಿತರು ಆಪ್ಯಾಯಮಾನವಾಗದೇ ಇನ್ನೇನಾಗುತ್ತದೆ.
ಭವಿಷ್ಯದಲ್ಲಿ ಡಾಕ್ಟರಾಗಬೇಕಿದ್ದ ಹುಡುಗಿ ಕುರ್ಚಿಯಲ್ಲಿ ಕಾಲೆತ್ತಿಕೊಂಡು ಕೂತು ಕೆನ್ನೆಗೆ ಕೈ ಹೂಡಿ ಗಲ್ಲ ಉಬ್ಬಿಸಿಕೊಂಡು ಕಣ್ಣಲ್ಲಿ ಕಂಡೂ ಕಾಣದಂತೆ ನೀರು ಜಿನುಗಿಸುತ್ತಿದ್ದರೆ ಎರಡು ವಿಭಿನ್ನ ಕಾಲಾವಽಯ ತಲ್ಲಣಗಳಿಗೆ ನಾನು ಮುಖಾಮುಖಿಯಾಗುತ್ತಾ ಕೂತಿz.
ಇತ್ತ ಈಗಿನ ಹುಡುಗಿಯರ ತವಕ ಮತ್ತು ತಾರುಣ್ಯದ ಮಿತಿಗಳಿಗೂ ಅತ್ತ ಅವಳ ಅಪ್ಪ-ಅಮ್ಮಂದಿಗಿರಬಹುದಾದ ಕಾಳಜಿಯ ಮನಸ್ಸಿನ ಒಳಬೇಗುದಿಗೂ ಯಾವ ರೀತಿಯಲ್ಲೂ ಸಾಂತ್ವನ ಅಥವಾ ಪರ್ಯಾಯವೇ ಇಲ್ಲವಲ್ಲ. ಕಾರಣ, ಪ್ರಸ್ತುತದಲ್ಲಿ ಹೊಸ ಹರಯದ ಹುಡುಗಿಯರು ಮಾಡಿಕೊಳ್ಳುತ್ತಿರುವ ಅನಾಹುತಗಳ ಸರಮಾಲೆಯೇ ಕಣ್ಣೆದುರಿಗಿದೆ. ಬೇಡ ಎಂದರೂ ಮೊನ್ನೆ ಮೊನ್ನೆ ಪ್ರಾಣ ಕಳೆದುಕೊಂಡ ಹತ್ತೊಂಭತ್ತೂ ಮುಕ್ಕಾಲಿನ ಹಾಲು ಗೆನ್ನೆಯ ಹುಡುಗಿ ಚುಚ್ಚುತ್ತಿzಳೆ. ಇದನ್ನೆಲ್ಲ ನೋಡಿರುವ ಯಾವ ಅಪ್ಪ-ಅಮ್ಮ ನೆಮ್ಮದಿಯಾಗಿ ಮಲಗಿಯಾರು? ಅಂತಹzಂದು ಬೇಗುದಿಗೆ ತಳ್ಳಿದ ಸಹನಾಳ ಅರೆವಯಸ್ಸಿನ ಕಥೆ ಮುಂದಕ್ಕಿರಲಿ. ಬದುಕುಳಿದಿರೋ ಅಪ್ಪ-ಅಮ್ಮನ ಗೋಳು ಕೇಳುವರಾರು? ಯಥಾಪ್ರಕಾರ ಒಂದು ಚೆಂದದ ಬದುಕು ಹಾಳುಮಾಡಿದ ಹುಡುಗ ನೆಮ್ಮದಿಯಾಗಿ ಅದೇ ಗಬ್ಬು ಕೈಗಳಿಂದ ಸರ್ವೀಸ್ ಅಂಗಡಿಲಿ ನಟ್ಟು, ಬೋಲ್ಟು ತಿರುವುತ್ತಿzನೆ. ಇತ್ತ ಮನೆಯಲ್ಲಿ ಆವತ್ತು ಹರಡಿರುವ ಕತ್ತಲು ಮಾಸುತ್ತಿಲ್ಲ.
 ಕಾರಣ
ಅವಳು ಎಂದರೆ.

No comments:

Post a Comment