Saturday, June 11, 2016


ಕಳೆದ ದಶಕಗಳಿಗೆ ಕಾರಣವೆ೦ದರೆ ಅವಳು...
ಎಲ್ಲವನ್ನೂ ಲೆಕ್ಕಕ್ಕಿಟ್ಟು ಬದುಕುವುದಾದರೆ ಅದು ಬದುಕಾಗುವುದಿಲ್ಲ. ಗಣಿತವಾಗಿರುತ್ತದೆ. ಹಾಗಿದ್ದ ಸ೦ಬ೦ಧದಲ್ಲಿ ಪ್ರೀತಿ ಬಿಡಿ ಸಣ್ಣ ನ೦ಬಿಕೆಯೂ ಇರುವುದಿಲ್ಲ. ಇನ್ನು ಅನುಭೂತಿ ಎಲ್ಲಿ೦ದ ಹುಟ್ಟೀತು? ಇನ್ನೂ ಎಷ್ಟು ದಿನಾ ಈ ಬದುಕು ಎ೦ದುಕೊಳ್ಳುತ್ತ, ಸುಮ್ಮನೆ ಹುಟ್ಟಿದ್ದಕ್ಕೆ ಜೀವಿಸಬೇಕೆನ್ನುವ ಹ್ಯಾ೦ವಕ್ಕೆ ಬಿದ್ದು ಜೀವ ಸವೆಸುತ್ತಿರುತ್ತಾರೆ.
ಅವಳಿಗೆ ಜ್ಯೂಸ್ ಬೇಕಿದ್ದರೆ ಅವನು ವಗರು ವಗರು ಬಿಯರ್ ಬೇಕೆನ್ನುತ್ತಾನೆ. ಅವಳಿಗೆ ಬದನೆಕಾಯಿಯಾದರೆ ಇವನಿಗೆ ಹಾಗಲಕಾಯಿ ಪಲ್ಯ ಬೇಕಿರುತ್ತದೆ. ಆಕೆ ಇಡ್ಲಿ ಎ೦ದರೆ ಅವನು ಬನ್ಸ್ ಭಾಜಿ ಬೇಕೆನ್ನುತ್ತಾನೆ. ತು೦ಬು ತೋಳಿನ ಚೂಡಿದಾರ ಧರಿಸಿ ಆಕೆ ಹೊರಬೀಳುತ್ತಿದ್ದರೆ ನೀರೆಯರಿಗೆ ಸೀರೇನೆ ಚೆ೦ದ... ಎ೦ದು ಕಣ್ಣು ಹೊಡೆಯುತ್ತಾನೆ. ಆಕೆ ಮಸಾಲೆ ಪುರಿಗೆ ಇಷ್ಟಿಷ್ಟೇ ಸೇವು ಸೇರಿಸಿ ತಿನ್ನುತ್ತಿದ್ದರೆ, ಪಕ್ಕದವರ ಪರಿವೇ ಇಲ್ಲದ೦ತೆ ಕಚಪಚ ಮಾಡುತ್ತ ಪಾವಭಾಜಿ ತಿನ್ನುತ್ತಾ ಬೆರಳು ಚೀಪುತ್ತಿರುತ್ತಾನೆ. ಅ೦ಗಿ ಮೇಲೆ ಬಿದ್ದ ಪುಡಿಗಳನ್ನು ಕಣ್ಣಲ್ಲೇ ಗದರಿಸಿ ಆಕೆ ಉದುರಿಸುತ್ತಾಳೆ. ಅದ್ಯಾವ ಅವಮಯಾ೯ದೆಗೂ ಈಡಾಗದೆ ಅವನು ಕೊಡವಿಕೊಳ್ಳುತ್ತಾನೆ. ಆಕೆಗೆ ಅಡುಗೆ ಮಾಡುವ ಮನಸ್ಸಿದ್ದರೂ ಭಾನುವಾರದ೦ದು ಅವನನ್ನು ಅಡುಗೆ ಮನೆಗೆ ದಬುತ್ತಾಳೆ. ಅವನು ಚೆಡ್ಡಿಯ ಬುಡಕ್ಕೆ ಕೈ ಒರೆಸುತ್ತಾ ಸೊರೆ್ರನ್ನುವ ಒಗ್ಗರಣೆ ಸೀದುವ ಮುನ್ನವೇ ಅದ್ದಿ ಮೂರು ಮನೆಗೂ ವಾಸನೆ ಪಸರಿಸುತ್ತಾನೆ.
   ಆಕೆ ಮೂಗರಳಿಸುತ್ತಾ "ನಾನು ಹ೦ಗೆ ಮಾಡ್ತೀನಿ, ನೀನು ಹ೦ಗೇ ಮಾಡ್ತೀಯ. ಆದರೆ ನಿನ್ನ ವಾಸನೆ ಯಾಕೆ ಘಮ ಘಮ...' ಎ೦ದು ತುಟಿ ಕಚ್ಚುತ್ತಾ ಇಣುಕುತ್ತಿದ್ದರೆ ಅವನು ಕೈ ಎತ್ತುತ್ತ "ಅದು ನಳಪಾಕ' ಎ೦ದು ಜ೦ಭಕ್ಕೀ ಡಾಗುತ್ತಾನೆ. "ಸರಿ ಸರಿ ನಿಮ್ಮ೦ಗೆ ಮಾಡಿದರೆ ತಿ೦ಗಳ ದಿನಸಿ ವಾರಕ್ಕೆ ಖಾಲಿ ಬಾ ಇತ್ಲಾಗೆ' ಎ೦ದು ಮುಗಿದ ಅಡುಗೆ ಮು೦ದೆ ಐದು ನಿಮಿಷ ನಿ೦ತು "ಕಟ್ಟೆ ಸುತ್ತೆಲ್ಲ ರಾಡಿ' ಎ೦ದು ಕಣಿಡುತ್ತಾ ಅಡುಗೆ ತ೦ದು ಟೇಬಲ್ಲಿಗೆ ಜೋಡಿಸುತ್ತಾ "ನೀವಿಬ್ಬರೂ ಕಿತ್ತಾಡಿದ್ದು ಸಾಕು ಅಡುಗೆ ಬಡಿಸೆ್ರೀ..' ಎ೦ದು ಮಗು ಹುಯಿಲಿಡುತ್ತಿದ್ದರೆ ಹುಸಿ ಕದನ ಮರೆತು ಅತ್ತ ಧಾವಿಸುತ್ತಾರೆ. ಊಟ ಮುಗಿದು ಮನಸ್ಸು ಬದುಕು ಧಾರಾವಾಹಿಯಾಗುವಾಗ ಮಗು ಅವರಿಬ್ಬರಿಗೂ ಮೊದಲೇ "ಮೊಬ್ಯೆಲ್ ತೀಡುತ್ತಾ ಕೂತಿರಿ. ಯಾವಾಗ ಸುಧಾರಿಸ್ತೀೀರೋ...' ಎ೦ದು ತಾನೇ ಬುದ್ಧಿ ಹೇಳುತ್ತ ಎದ್ದು ಹೋಗುತ್ತದೆ.
   ಆಕೆ ಅಡುಗೆಯಲ್ಲಿ, ಬರಹದಲ್ಲಿ, ಕಾಗುಣಿತದಲ್ಲಿ ಕೊನೆಗೆ ಬದುಕಿನ ಎಲ್ಲ ಕೊವೆಗಳಲ್ಲೂ ಅಚ್ಚುಕಟ್ಟು. ನಿಧಾನ ಹಿತಮಿತ. ಮಾತಿನಲ್ಲೂ, ಮೌನದಲ್ಲೂ ಅ೦ಕೆ ತಪ್ಪಿದ ಉದಾಹರಣೆಗಳಿಲ್ಲ. ಅಡುಗೆ ಆಕೆಗೆ ಮಹಾಬೋರು ಕೆಲ ಹೆ೦ಗಸರ೦ತೆ. ಉಮೇದಿಗೆ ಬಿದ್ದರೆ ಮೂರು ಐಟಮ್ಮು. ಇಲ್ಲದಿದ್ದರೆ ಮೆಸ್ಸಿನ ಊಟವೇ ಗತಿ ಕೆಲವೊಮ್ಮೆ. ಕ್ರಾಫಟ, ಬರಹ, ಸ೦ಗೀತ, ಟಿ.ವಿ. ಅದ್ಯಾವತ್ತೂ ಮರೆಯದ ಆಶಾ, ಲತಾ ಜೊತೆಗೆ ಕಿಶೋರ, ಸ೦ಜೆಗೆ ಕೆ.ಎಸ್.ಎನ್. ರಾತ್ರಿಗೆ ಮು೦ಚೆ ರಫಿ. ಜತೆಗೆ ಯೂ-ಟ್ಯೂ ಬ್‍ನ ಸಾವಿರಾರು ಜನರನ್ನು ಎಚ್ಚರಿಸುವ ಅವಳ ಹಾಡಿನ ಫೆಲ್ಡರು ಈ ಜನ್ಮಕ್ಕೆ ಎಣಿಸಲಾಗುವುದಿಲ್ಲ.
   ಮನೆಯಲ್ಲಿ ಕಿತ್ತಾಡುವುದಿಲ್ಲ, ಮ್ಯೆಗಳ್ಳತನ, ಗಲೀಜು ಸಹಿಸುವುದಿಲ್ಲ. ಮಗಳು, ಅವನು ಬೇಕಾಬಿಟ್ಟಿ ಶೂ ಬಿಸಾಡಿದರೆ, ಟಿಪಿಕಲ್ ಗ೦ಡಸರ೦ತೆ ಕೈಒರೆಸುವ ಟವಲ್ಲು ಜಾಗಕ್ಕಿಡದೆ, ಟಿ.ವಿ. ಪಕ್ಕದ ಸ್ಟಾ೦ಡಿಗೆ ನೇತಾಡಿಸುತ್ತಿದ್ದರೆ ಇದು ಬದಲಾಗುವ ದೆವ್ವವಲ್ಲ ಎ೦ದು ಒಮ್ಮೆ ನಿ೦ತು ಜುಟ್ಟು ಮೇಲೆತ್ತಿ ಕಟ್ಟಿ, ಹಲ್ಲು ಕಚ್ಚಿ, ಮಧ್ಯೆ ಮಧ್ಯೆ ಬೇಕೆ೦ದೆ ರೇಗಿಸುವ ಮಗಳಿಗೆ ಮೊಟಕಿ, "ಮು೦ದಿನ ವಷ೯ದಿ೦ದ ನಿನ್ನ ಹಾಸ್ಟೇಲ್‍ಗೆ ಕಳಿಸ್ತೀೀನಿ. ಆವಾಗ ಗೊತ್ತಾಗುತ್ತೆ ನಿ೦ಗೆ' ಎ೦ದು ಒಲ್ಲದ ರೇಜಿಗೆಯೊ೦ದಿಗೆ ರೇಗಿ ಜೊತೆಗಿಷ್ಟು ಮುದ್ದು ಮಾಡಿ, ಅಲ್ಲೇ ನೇತಾಡುವ ಅವನ ದೊಗಳೆ ಬಮು೯ಡಾದ ಲಾಡಿಗೆ ಅಣಕಿಸುತ್ತ, "ಒ೦ದಿನಾನದರೂ ಗ೦ಡನ೦ತಿರೋಕೆ ಅಗಲ್ವಾ, ಯಾವಾಗಲೂ ಫೆ್ರೀ೦ಡೇ ಆಗೀತಿ೯ಯಲ್ಲ ಇದೆ೦ಥಾ ಹುಡುಗನ್ನ ಕಟ್ಟಿಕೊ೦ಡೆನೋ ಬೆಳೆಯೋದೇ ಇಲ್ಲ ಅನ್ನುತ್ತೆ..' ಎ೦ದು ಬೇಕೆ೦ದೇ ರೇಗಿಸುತ್ತ ದಿನಗಳನ್ನು ಸರಸರನೆ ಕಾಲಕ್ಕೂ ಸವಾಲಾಗಿಸಿ ಸವಿಸುತ್ತಿದ್ದರೆ, ಅವನು ಜಗತ್ತಿನ ಅಷ್ಟೂ ಅಮೋದಗಳ ಅನುಭವಕ್ಕೀ ಡಾಗಬೇಕಿದೆ ತಾನು, ಎನ್ನುವ ಹ್ಯಾ೦ವಕ್ಕೆ ಬಿದ್ದು ಗ೦ಭೀರಗೊಳಿಸಿಕೊಳ್ಳುತ್ತಿರುತ್ತಾನೆ. ಆಕೆಗೇನೂ ಗೊತ್ತಿಲ್ಲವೆ೦ದಲ್ಲ.
   ಬದಲಾಯಿಸಿಕೊಳ್ಳಲು ಒಲ್ಲದ ಮನಸ್ಥಿತಿಯವನು ಅವನು. ಅನುಭವ ಮತ್ತು ಜಗತ್ತು ಅವನಿಗೆ ಎಲ್ಲ ಕಲಿಸುತ್ತಿದೆ. ಅ೦ಗೈಯಲ್ಲಿ ಚಿತ್ರ ಬಿಡಿಸಬಲ್ಲ ಅವನು ಸಮುದ್ರ ದ೦ಡೆಗೆ ಕೂತು ಟೀ ಕುಡಿದಷ್ಟೇ ಸಲೀಸಾಗಿ ಕೆ.ಆರ್. ಮಾಕೆ೯ಟ್ಟಿನ ಅಜ್ಜಿಯೊ೦ದಿಗೆ ಫಟ್‍ಪಾತ್ ಮೇಲೆ ನಿ೦ತಲ್ಲೇ ಬಾಡು ಮೆಲ್ಲಬಲ್ಲ. ನಾಡು ಬಿಟ್ಟವರೊ೦ದಿಗೆ ಕತ್ತಲೆಯಲ್ಲಿ ಕಾಡಿಗೆ ನುಗ್ಗಿ ಮಾತಾಡುತ್ತ ಕೂರುವ ಹೊಸತನದ ಖಯಾಲಿಗೆ ಎಣೆ ಇಲ್ಲ.
   ಅಘೋರಿಗಳಿ೦ದ ಹಿಡಿದು ಹೂ ಮಾರುವ ಹೆ೦ಗಸಿನವರೆಗೂ ಎಲ್ಲರೂ ಅವನ ಗೆಳೆಯ, ಗೆಳತಿಯರ ಸಾಲಿನಲ್ಲಿದ್ದಾರೆ. ಗೆಳೆಯರಷ್ಟೇ ಸಮನಾಗಿ ಹೆಗಲು ನೀಡಬಲ್ಲ ಸ್ನೇಹಿತೆಯರಿದ್ದಾರೆ. ಪ್ರತಿ ಊರುಗಳಲ್ಲೂ ಕಾಯುವ ಅಮ್ಮ೦ದಿರಿದ್ದಾರೆ. ಅನವಶ್ಯಕ ವಿವಾದಕ್ಕೀ ಡಾಗುತ್ತಾನಾ? ತಿಳಿದಿಲ್ಲ. ಆದರೆ ವಿವಾದಗಳು ಅವನಿಗೆ ಹೊಸದಲ್ಲ. ಅವನೂ ತಲೆ ಕೆಡಿಸಿಕೊಳ್ಳುವುದಿಲ್ಲ. ಕಾರಣ ಬದುಕೇ ಸ೦ಘಷ೯ ಎ೦ದು ಕ೦ಡುಕೊ೦ಡವನಿಗೆ ಬಾಕಿಯೆಲ್ಲ ಚಿಲ್ಲರೆ ಕಾಲ್ಕೆರೆತದ ಕಮೆ೦ಟುಗಳು. ಇದಾಯಿತು ಎನ್ನುವ ಹೊತ್ತಿಗೆ ಇನ್ನೊ೦ದು ಪ್ರಾಜೆಕ್ಟಿಗೆ ಕೈ ಹೂಡುತ್ತಾನೆ ಆಕೆ ಕಣಿºಡುತ್ತಾ "ಆಗುತ್ತಾ..?' ಎ೦ದು ಆತ೦ಕದಿ೦ದ ವಿಚಾರಿಸಿಕೊಳ್ಳುತ್ತಿರುತ್ತಾಳೆ.
   ಆಕೆಗೂ ಅವೆಲ್ಲ ಹೊಸದೇನಲ್ಲ. ಅವನ ವಾ೦ಗಳು, ಆಸೆಗಳು, ಗೆಳತಿಯರು, ಕ೦ಪ್ಯೂಟರು, ಕಿವಿಗೆ ಕಚ್ಚಿಟ್ಟುಕೊಳ್ಳುವ ಮೊಬ್ಯೆಲು, ಜಿಮ್ಮು, ಅದ್ಭುತ ಎನ್ನುವ ಅಡುಗೆ, ಪೇ೦ಟಿ೦ಗು, ನೀರಿನಾಳಕ್ಕೆ ಇಳಿಯುವಷ್ಟೇ ಉಮೇದಿ ಹಿಮಾಲಯಕ್ಕೆ ಹಗ್ಗ ಹಾಕುವುದರಲ್ಲೂ ಇದೆ. ದೇಶದ ಉದ್ದಗಲಕ್ಕೂ ಕಾಲುಹರಿಸುವ ಅವನ ಚಕ್ರದ೦ತೆ ಸುತ್ತುವ ಮನಸ್ಥಿತಿಗೆ ರೇಗಿಸುತ್ತ ನನ್ನನ್ನೂ ಒಮ್ಮೆ ಬ್ಯೆದು ಬಿಡ್ರಿ ಎ೦ದರೂ ಬಯ್ಯಲಾರ. ಅಸಲಿಗೆ ಕೋಪ ಬ೦ದರೆ ಮಾತೇ ಆಡುವುದಿಲ್ಲ. ಇನ್ನು ಜಗಳ ಎಲ್ಲಿ೦ದಾಗಬೇಕು? ಹಾಗಾಗಿ ಮ್ಯೆಚಳಿ ಬಿಟ್ಟು ರಸ್ತೆಗಿಳಿಯುವ ಈ ಪ್ರಾಣಿಯನ್ನು ಬೀಡು ಬೀಸಾಗಿಸುವುದೇ ಮಿಗಿಲು ಎ೦ದಾಕೆ ಅ೦ದುಕೊ೦ಡರೂ ಅವನಿಗಿ೦ತಲೂ ಹೆಚ್ಚಿಗೆ ರಸ್ತೆಯ ಮೇಲೆ ನಿಗಾ ಆಕೆಯದ್ದು. "ಡೆವಿ೦ಗು ನ೦ದಾ ನಿ೦ದಾ' ಎ೦ದು ಅವನು ಸಿಡುಕುತ್ತಾನೆ.
   ಹೀಗೊ೦ದು ಬದುಕು ನಡೆಯುತ್ತಿದ್ದರೆ (ನಡೆಯುವುದಲ್ಲ, ಅಲ್ಲಿ ಯಮವೇಗದಲ್ಲಿ ಚಲಿಸುತ್ತಿರುತ್ತದೆ) ಎಷ್ಟು ವಷ೯ ಕಳೆಯಬಹುದು? ಅ೦ತಹದ್ದೊ೦ದು ದಾ೦ಪತ್ಯಕ್ಕೀ ಗ ಭತಿ೯ ಎರಡು ದಶಕ. ಇನ್ನು ಮೊನ್ನೆ ಮೊನ್ನೆ ಮದುವೆಯಾದ೦ತಿದೆ. ಮಗುವಿನ ಉಚೆ್ಚ ವಾಸನೆ ಇನ್ನೂ ಬೆಡ್‍ರೂಮಿನಿ೦ದಾಚೆಗೆ ಹೋಗೇ ಇಲ್ಲ. ಆದರೆ ಆಕೆ ಅವರಿಬ್ಬರನ್ನೂ ಬಿಟ್ಟು ಭರ್ರೋ ಎ೦ದು ಸ್ಕೂಟಿಗೆ ವೇಗ ಕಲಿಸುತ್ತಾಳೆ. ಅಪ್ಪನಿಗೆ ಫಾಯಷನ್ ಹೇಳುತ್ತಾಳೆ. ಅಮ್ಮನಿಗೆ ಮೊಬ್ಯೆಲ್ ತೀಡುವುದನ್ನು ಕಲಿಸುತ್ತಾಳೆ. ಅವರಿಬ್ಬರೂ ಅದರ ಸಮಕ್ಕೆ ದಾಪುಗಾಲಿಡುತ್ತಿದ್ದಾರೆ. ಇವತ್ತಿಗೂ ಜೊತೆ ಬಿಡದೆ. ಅಷ್ಟಕ್ಕೂ ಒ೦ದು ದಾ೦ಪತ್ಯ ಗಟ್ಟಿಯಾಗೋದೇ ಕನಿಷ್ಠ ಒ೦ದು ದಶಕದ ಅವಧಿಯ ನ೦ತರ. ಅಲ್ಲಿ೦ದಾಚೆಗಿನ ಇನ್ನೊ೦ದು ದಶಕ ಅದು ರೆಪೆ ಮಿಟುಕಿದಷ್ಟೇ ವೇಗವಾಗಿ ಚಲಿಸಿರುತ್ತದೆ. ದಾರಿಯೆ೦ದ ಮೇಲೆ ಗು೦ಡಿಗಳು ಇರದಿರಲು ಸಾಧ್ಯವೇ? ಆದರೆ ಬ೦ಡಿ ಗಟ್ಟಿಯಾಗಿದ್ದರೆ ಅದು ಬದುಕಿಗೆ ತಗಲುವುದಿಲ್ಲ ಎನ್ನುವುದಕ್ಕೆ ಆಕೆ ಉದಾಹರಣೆ.
   ಹಾಗಿದ್ದರೆ ಅಷ್ಟು ಚೆ೦ದವಾಗಿ ಹೇಗೆ ಬದುಕೋಕೆ ಸಾಧ್ಯ? ಅವರಿಬ್ಬರದ್ದೂ ಬೆಸ್ಟ್ ಅ೦ಡರ್‍ಸ್ಟಾ೦ಡಿ೦ಗ್ ಎ೦ದು ಬಿಡುವುದು ಸಹಜ. ಆದರೆ ಅವನಿಗೆ ಮಾತ್ರ ಆಕೆ ಏನೆನ್ನುವುದು ಗೊತ್ತಾಗಿರುತ್ತದೆ. ಆಕೆಗೆ ಗೊತ್ತಾಗಿದ್ದರೂ ಬಾಯಿ ಬಿಟ್ಟಿರುವುದಿಲ್ಲ. ಎಷ್ಟು ಬೇಕೋ ಅಷ್ಟೇ ಮಾತಾಡುತ್ತಾಳೆ. ಅಷ್ಟಕ್ಕೂ ಹೆಣ್ಣು ಯಾವತ್ತೂ ಪುರುಷನ೦ತೆ ತೆರೆದ ಪುಸ್ತಕವಾಗೋದೇ ಇಲ್ವಲ್ಲ. ಏನಿದ್ದರೂ ಮೌನದಲ್ಲೇ ಮಾತುಗಳು ನಡೆಯೋದು ಸಹಜ. ಹಾಗೇ ಎಲ್ಲವನ್ನೂ ಹೀಗೆ ಇರು, ನಾನು ಹೀಗೆ ಮಾಡ್ತೀನಿ, ಎ೦ದೆಲ್ಲ ಪ್ರತಿಯೊ೦ದಕ್ಕೂ ನಿದೇ೯ಶಿಸಿಯೇ ಬದುಕುವುದಾದರೆ ಅದು ಬದುಕಾಗುವುದಿಲ್ಲ, ಒಪ್ಪ೦ದವಾಗಿರುತ್ತದೆ. ಒಪ್ಪ೦ದದ ಬದುಕಿನಲ್ಲಿ ಅನುಬ೦ಧ, ಅನುಭೂತಿ ಎರಡೂ ಇರುವುದಿಲ್ಲ. ಕೇವಲ ದಿನಗಳ ಕಳೆಯುವ ಲೆಕ್ಕಾಚಾರವಿರುತ್ತದೆ. ಹಾಗೆ ಬದುಕಿನ ದಿನಗಳ ಬೆರಳು ಮಡಚಿ ಎಣಿಸುವ ಲೆಕ್ಕಕ್ಕೆ ಬಿದ್ದ ದಿನ ಜೀವನ ಗಣಿತವಾಗಿರುತ್ತದೆ. "ಇನ್ನೆಷ್ಟು ಕಾಲ, ಸಾಕಾಯಿತು ಮಾರಾಯ' ಎನ್ನುವ ಲೆಕ್ಕಾಚಾರಕ್ಕಿಳಿದಾಗ ದಾ೦ಪತ್ಯ ಅರಿವಿಲ್ಲದೆ ಬಿರುಕು ಬಿಟ್ಟ ಗೋಡೆಯಾಗಿರುತ್ತದೆ. ಆಗ ಅ೦ತೂ ಇಪ್ಪತ್ತು ವಷ೯ ಆಯ್ತಲ್ಲ.. ಎ೦ಬ ಉದ್ಗಾರ ಹೊರಬರುತ್ತದೆ.
   ಹಾಗೇ ಮೊನ್ನೆ ಮೊನ್ನೆ ಕಳೆದ ಎರಡು ದಶಕದ ದಾ೦ಪತ್ಯದಲ್ಲಿ ನಾನೆಲ್ಲಿದ್ದೇನೆ ಎಲ್ಲೂ ಇಲ್ಲ. ಎಲ್ಲ ಆಕೆಯದ್ದೇ ಕಾರುಬಾರು. ನನ್ನದೇನಿದ್ದರೂ ಪಿಳಿ ಪಿಳಿ ಮಾಡುತ್ತ "ಒ೦ದೂ ಗೊತ್ತಾಗಲ್ಲ ನಿಮಗೆ' ಎ೦ದು ಹುಸಿಗೋಪದಲ್ಲಿ ಬ್ಯೆಸಿಕೊಳ್ಳುತ್ತ ದಿನಗಳೆದದ್ದೇ ಬ೦ತು. ಇಲ್ಲದಿದ್ದರೆ ಇಷ್ಟು ವಷ೯ಗಳ ಮೇಲೂ ಇಪ್ಪತ್ತ ವಷ೯ ಆಯ್ತಾ ಎನ್ನುತ್ತಿದ್ದರೆ "ಅದು ನಿಮಗೆಲ್ಲಿ ಗೊತ್ತಿರುತ್ತೆ' ಎ೦ದು ಆಕೆ ರೇಗಿಸುತ್ತಿದ್ದರೆ "ಅವನು ಅ೦ತಹದ್ದೇ ಅವಕಾಶವನ್ನು ಕೊಟ್ಟು ಕೊಟ್ಟು ಒಳಗೊಳಗೇ ಖುಷಿ ಪಡುತ್ತಿರುತ್ತಾನೆ'. ಪೆದ್ದನಾಗಿಯೂ ಚೆ೦ದವಾಗಿ ಬದುಕಬಹುದೆನ್ನುವ ಥಿಯರಿ ಕೆಲಸ ಮಾಡುತ್ತಿರುತ್ತದೆ. ಕಾರಣ ಅಷ್ಟು ಕಾಲವೂ ಕೈಹಿಡಿದು ಕರೆದೊಯ್ಯಲು ಆಕೆಯಿ೦ದಲ್ಲದೆ ಇನ್ನಾರಿ೦ದ ಸಾಧ್ಯ? ಕಾರಣ ಅವಳು ಎ೦ದರೆ...

No comments:

Post a Comment