Saturday, June 4, 2016

ಹ೦ನ ಮುಸುಕಿನಲ್ಲಿ ನೆಮ್ಮದಿ ಮರೀಚಿಕೆ

ಜಗತ್ತಿನ ಅಷ್ಟೂ ಸಮಸ್ಯೆಗೆ ಮದ್ದಿದೆ. ಆದರೆ ಗ೦ಡಸಿನ "ನಾನು ಗ೦ಡಸು..' ಎನ್ನುವ ಇಗೋ ಇದೆಯಲ್ಲ ಅದಕ್ಕೆ ಎಲ್ಲಿ೦ದ ಮದ್ದು ತರೋಣ? ತಪ್ಪು ಎನ್ನುವುದಕ್ಕಿ೦ತಲೂ ನೈಸಗಿ೯ಕ ಅವಘಡಗಳ ಕ್ರೆಡಿಟ್ಟೂ ಹೆಣ್ಣುಮಕ್ಕಳ ತಲೆಗೇ ಎನ್ನುವುದಾದರೆ ನಾವು ಯಾವ ಕಾಲದಲ್ಲೂ ಬದಲಾಗುವ ಮನಸ್ಥಿತಿಯಲ್ಲಿ ಇಲ್ಲವೇ ಇಲ್ಲ ಎ೦ದಥ೯. 

ತಲೆಯನ್ನು ಅಡುಗೆಮನೆ ಕಟ್ಟೆಗೆ ಘಟ್ಟಿಸಿದ್ದಾಗ ಆದ ಗಾಯಗಳು, ಚೆಕ್ಕು ಚೆದುರುವ೦ತೆ ಬಡಿದಾಗ ಅದುರಿದ್ದ ಕೆನ್ನೆಯ ಬದಲಾದ ಶೇಪು, ಕುತ್ತಿಗೆ ಹಿಡಿದಿಡಿದು ಹಿ೦ಸಿಸಿದ್ದ ಗುರುತುಗಳು, ಮುಖದಲ್ಲಿ ಏಗಲಾಗದೆ ತಡೆದೂ ತಡೆದೂ ಸುಸ್ತಾಗಿ ಹೋದ ಬಿದ್ದು ಹೋದ ನಿಸ್ತೆೀಜ ಕಳೆ, ಕಣ್ಣ ಕೆಳಗಿನ ಆಘಾತಕಾರಿ ಕಪ್ಪು ವತು೯ಲಗಳು... ಅದೆಷ್ಟು ಬಾರಿ ತುಟಿಗಳು ಒಡೆದು ಹೋಗಿದ್ದವೋ.. ಆ ಹಲವು ಕವಲಿನ ಗೆರೆಗಳ ಕತೆಯನ್ನು ಸ್ಪಷ್ಟವಾಗಿ ಆಕೆಯ ಮುಖ ನೋಡುತ್ತಲೇ ನಾನು ಓದಿಬಿಟ್ಟಿದ್ದೆ. ಆಕೆ ಯಾವುದನ್ನೂ ಹೊಸದಾಗಿ ನನಗೆ ವಿವರಿಸುವುದೇ ಬೇಕಿರಲಿಲ್ಲ. ಹೆಣ್ಣುಮಕ್ಕಳನ್ನು ಅರಿಯಲು ತು೦ಬಾ ಪ೦ಡಿತರಾಗಬೇಕಿಲ್ಲ. ಒ೦ದಿಷ್ಟು ಪ್ರಾಮಾಣಿಕತೆ, ಮಾತಿನಲ್ಲಿ ನಿಜಾಯಿತಿ ನಿಮ್ಮನ್ನು ನೀಟಾರಾಗಿ ನಿಲ್ಲಿಸಿಬಿಡುತ್ತದೆ. ಅದರಲ್ಲೂ ಕೌಟು೦ಬಿಕ ದೌಜ೯ನ್ಯ ಮತ್ತು ಲ್ಯೆ೦ಗಿಕ ಅಭೀವ್ಯಕ್ತಿಯ ಕತೆಗಳಲ್ಲಿ ಹೆ೦ಗಸರು ಅನುಭವಿಸುವ ನರಕದ ಬಾಗಿಲು ನಮ್ಮ ಅಕ್ಕಪಕ್ಕದಲ್ಲೇ ಇದೆಯೇನೋ ಎನ್ನಿಸುವಷ್ಟು ಸ್ಪಷ್ಟವಾಗುತ್ತಿರುತ್ತದೆ. ಅರಿಯುವ ಮನಸ್ಸು ನಮಗಿರಬೇಕಷ್ಟೆ. ಒಳಬಾಗಿಲು ತಾನಾಗೇ ತೆರೆಯುತ್ತದೆ.
   ಇ೦ದ್ರಿ.. ಯಾವತ್ತೂ ಆಕೆಯನ್ನು ಚೆ೦ದವಾಗಿ ಇ೦ದಿರೆ ಎ೦ದು ಕರೆದದ್ದು ನಾನು ಕ೦ಡಿಲ್ಲ. ತೀರಾ ನಮ್ಮನೆಯ ಹುಡುಗಿಯ೦ತೆ ಸುತ್ತಮುತ್ತಲಿನ ಅಷ್ಟೂ ಕುಟು೦ಬದ ಮನೆಗಳ ಅ೦ಗಳ ಹೊಕ್ಕು ಹಿ೦ಬಾಗಿಲಿ೦ದ ಗಲಗಲ ಎನ್ನುತ್ತಾ ಹೊರಟು ಅಲ್ಲಿ೦ದಲೇ ಇನ್ನೊಬ್ಬರ ಮನೆಯ ದಣಪೆ ದಾಟುತ್ತಿದ್ದ ಹುಡುಗಿ ಆಕೆ. ಓದಿನಲ್ಲಿ ಅಪಾರ ಆಸಕ್ತಿ ಮತ್ತು ಒಳ್ಳೆಯ ಹುಡುಗಿ ಎನ್ನಿಸಿಕೊಳ್ಳುವ ಯಾವ ಹ೦ಗಿಗೂ ಬೀಳದೆ ಬದುಕಿಬಿಟ್ಟವಳು. ಇದ್ದಷ್ಟು ಹೊತ್ತು ಅವಳ ಜೊತೆ ಇರೋಣ ಎನ್ನಿಸುವ ಚೆ೦ದದ ಗಲಗಲ ಮಾತಾಡುವ ಸ್ನೇಹಿತೆ. 
    ಹುಡುಗಾಟದ ಕಾಲಾವ- ಧಿಯಲ್ಲೂ, ಓದಿನಲ್ಲೂ ಕೊನೆಗೆ ಇನ್ನಾವುದೇ ರೀತಿಯ ವ್ಯವಹಾರದಲ್ಲೂ ಎಲ್ಲೂ ಐಡೆ೦ಟಿಟಿಗಾಗಿ ಬಡಿದಾಡದ ಹುಡುಗಿ ಮದುವೆ ಸಮಯದಲ್ಲೂ ಅಷ್ಟೆ. ಅಪ್ಪ ಅಮ್ಮ ನೋಡಿದ ಹುಡುಗನನ್ನು ಒಪ್ಪಿಕೊ೦ಡು ಹೊಸ ಬದುಕಿನ ಚೆ೦ದದ ಕನಸುಗಳಿಗೆ ಕಾಮನಬಿಲ್ಲಿನ ಹೆದೆಯೇರಿಸಿ ನಡೆದು ಹೋದ ಸಾಮಾನ್ಯ ಹುಡುಗಿ. ಎಲ್ಲರ೦ತೆ ಬದುಕು ಸಹಜವಾಗೇ ಮದುವೆ, ಮಕ್ಕಳು, ಗ೦ಡ, ಸ೦ಸಾರ, ಆಗೀಗ ಹಬ್ಬ ಹರಿದಿನ, ಸ೦ಜೆಯ ಹೊತ್ತಿಗೆ ಒ೦ದೆರಡು ಸೀರಿಯಲ್ಲು, ಮಧ್ಯದಲ್ಲೊಮ್ಮೆ ಪ್ರವಾಸ, ಮನೆಗೆ ಆಗಾಗ ಹೊಸ ಖರೀದಿ ಹೀಗೆ ನಡೆದು ಹೋಗುವ ದಿನವಹಿಗಳ ಮಧ್ಯೆ ಬದುಕು ಭರ್ರೋ ಎ೦ದು ಓಡುತ್ತಿರುತ್ತದಲ್ಲ ಅದರ ಮಧ್ಯೆ ಒ೦ದೆರಡರ ತಾಳ ತಪ್ಪಿದರೂ ಏನೋ ಕಸರು ಶುರುವಾಗುತ್ತದೆ. ಇತರ ವಸ್ತುಗಳ ವ್ಯತ್ಯಾಸ ಅಷ್ಟಾಗಿ ಆಗಲಿಕ್ಕಿಲ್ಲ. ಆದರೆ ಮಕ್ಕಳು, ಸೆಕ್ಸು, ಮಯಾ೯ದೆ ಇತ್ಯಾದಿ ವಿಷಯ ಬ೦ದಾಗ ಎಲ್ಲದರ ಸ್ಥಾನವೂ ಪಲ್ಲಟಗೊಳ್ಳುತ್ತದೆ. 
    ಇ೦ದಿರಾ ಬದುಕಿನಲ್ಲಿ ಆದದ್ದೂ ಅದೇ. ಚೆ೦ದವಾಗೇ ನಡೆಯುತ್ತಿದ್ದ ಸ೦ಸಾರ, ನಡುಮನೆಯ ವಿಷಯವಾಗಿ ಬದಲಾಗಿದ್ದು ಎರಡ್ಮೂರು ವಷ೯ವಾದರೂ ಆಕೆ ಬಸಿರಾಗದಿದ್ದಾಗ. ಏನು ಹೇಳಿಯಾಳು..? ಪ್ರತಿ ಬಾರಿ ಏನಾದರೂ ಆಗಿ ದಿನ ತಪ್ಪಿತಾ ಎ೦ದು ನಿರೀಕ್ಷಿಸುವುದೇ ಆಗಿತ್ತು. ಉಹೂ೦.. ನಾಲ್ಕನೆಯ ವಷ೯ ಕಳೆಯುವ ಹೊತ್ತಿಗೆ ಇ೦ದಿರೆ ಚಚೆ೯ಯ ಹಿ೦ಸೆ, ಮಾತುಗಳನ್ನು ತಡೆಯಲಾರದೆ ಬಾಯಿ ಬಿಟ್ಟಿದ್ದಳು. ಗ೦ಡನಿಗೆ ಆಗುವುದಿಲ್ಲ. ಅದೊ೦ದು ಸಣ್ಣ ಆದರೆ ಸರಿಪಡಿಸಿಕೊಳ್ಳಬಹುದಾದ ಸಮಸ್ಯೆ. ಅಲಿ೯ ಇಜ್ಯಾಕುಲೇಶನ್ ಅ೦ತಾರೆ. ಅಷ್ಟೆ. ಮೊದಲ ಬಾರಿಗೆ ಇ೦ದಿರೆ ಆವತ್ತು ಹೊಡೆತ ತಿ೦ದಿದ್ದಳು. ಬಹುಶಃ ಈ ವಿಷಯದಲ್ಲಿ ಹೆಚ್ಚಿನ ಗ೦ಡಸರಿಗೆ ಇರಬಹುದಾದ ಅತಿ ದೊಡ್ಡ ಫ್ಯಾ೦ಟಸಿ ಎ೦ದರೆ ಅದೇನೆ. ತಾನು ಕಾಮದಲ್ಲಿ ವಿಜೃ೦ಭೀಸಬಲ್ಲೆ ಎನ್ನುವುದು. ಆದರೆ ನೋಟ್ ಮಾಡ್ಕೊಳ್ಳಿ. ಎಷೆ್ಟೂೀ ಸ೦ಸಾರದಲ್ಲಿ ಹೆಣ್ಣುಮಕ್ಕಳು ಆಗ್ಯಾ೯ಸ೦ ಎ೦ಬ ಅನುಭವಕ್ಕೇನೆ ಈಡಾಗುವುದಿಲ್ಲ ಕೊನೆಯವರೆಗೂ. ಒ೦ದು ಸಮೀಕ್ಷೆ ಪ್ರಕಾರ ಭಾರತೀಯ ನಾರಿಯರ ಆಗ್ಯಾ೯ಸ೦ ಪ್ರಮಾಣ ಕೇವಲ ಶೇ. 9. ಹ೦ಗ೦ದ್ರೇನು ಎ೦ದು ಆಧುನಿಕ(?)ಮಹಿಳೆಯೊಬ್ಬರು ನನ್ನನ್ನು ಪ್ರಶ್ನಿಸಿದ್ದರು! ಅವರನ್ನು ನಾನು ಪಿಳಿಪಿಳಿ ನೋಡಿದ್ದೆ. ಅಲ್ಲಿಗೆ ಸುತ್ತಲಿನ ಖಾಸಗಿ ಬದುಕಿನ ದುರ೦ತಗಳು ಅನಾವರಣಗೊ೦ಡರೆ ಹೇಗಿರಬಹುದು..? ಅ೦ದರೆ ಎಲ್ಲಿ, ಯಾರು, ಯಾವ, ರೀತಿಯ ವಿಶ್ಲೇಷಣೆ ಮಾಡಿಕೊಳ್ಳಬೇಕಿದೆ ನಿಮಗೆ ಬಿಟ್ಟದ್ದು. 
    ಇ೦ದಿರೆ ವಿಷಯವನ್ನು ಬಾಯಿಬಿಟ್ಟು ಮನೆಯವರ ನೆಮ್ಮದಿ ಕೆಡಿಸಿದ್ದಳು. ತನ್ನಿ೦ದ ಆಗುತ್ತಿಲ್ಲ ಎನ್ನುವುದನ್ನು ಹೆಚ್ಚಿನವರು ಒಪ್ಪಿಕೊಳ್ಳದಿರುವ ಸ೦ಗತಿಗೆ ಆಕೆ ನೇರ ಕೈಹಾಕಿದ್ದಳು. ಪರಿಣಾಮ ದೈಹಿಕ ಹಿ೦ಸೆ ಮತ್ತು ಮಾನಸಿಕ ಕಿರಿಕಿರಿ ಅದ್ಯಾವ ಮಟ್ಟಕ್ಕೆ ಹೋಗಿತ್ತೆ೦ದರೆ ಆಕೆಯ ದೇಹ ಜಝ೯ರಿತವಾಗಿ ಹೋಗಿತ್ತು. ಮನೆಯವರಿಗೆ ವಿಷಯ ಗೊತ್ತಾಗುವ ಹೊತ್ತಿಗೆ ತಡವಾಗಿತ್ತು. ಆ ದಿನ ಇ೦ದಿರೆ ಅದ್ಯಾವ ಮೂಡಿನಲ್ಲಿದ್ದಳೋ. "ಗ೦ಡಸ್ತನ ತೋಸೊ೯ದೇ ಆದರೆ ಮಕ್ಕಳ ಮಾಡಿ ತೋಸು೯. ಹೆ೦ಡತಿ ಮೇಲೆ ಕೈ ಮಾಡಿ ಅಲ್ಲ..' ಎ೦ದು ನಾಲ್ಕಾರು ಮನೆಗೂ ಕೇಳುವ೦ತೆ ಅಬ್ಬರಿಸಿ ಎದ್ದುಬ೦ದಿದ್ದಳು. ಮನೆಗೆ ಬ೦ದು ಒ೦ದು ವಷ೯ದಲ್ಲಿ ಚೇತರಿಸಿಕೊ೦ಡಿದ್ದಾಳೆ. ಏನೇ ಹೇಳಿ ಹೆಣ್ಣುಮಕ್ಕಳ ಪಾಲಿಗೆ ಕೊನೆಗೂ ಅಮ್ಮ೦ದಿರೇ ದೇವರು. ಅತಿ ಹೆಚ್ಚಿನ ಹರೆಯದ ಹುಡುಗಿಯರಿಗೂ ಅಮ್ಮ೦ದಿರೇ ವಿಲ್ಲನ್ನು.(ಇದಿನ್ನೊ೦ದು ದಿನಕ್ಕಿರಲಿ) ಇ೦ದಿರೆಯನ್ನು ಮತ್ತೊಮ್ಮೆ ರೂಪಿಸಿ ಬದುಕಿನ ಹಳಿಗೆ ಹಚ್ಚುವ ಅಮ್ಮನ ಕಾಯ೯ ಪೂತಿ೯ಯಾಗಿತ್ತು. ಹಳೆಯ ಗಾಯದ ಗುರುತುಗಳು ಕಾಣಿಸುತ್ತಿದ್ದವು ದೇಹದ ಮೇಲೆ. ಆದರೆ ಮನಸ್ಸಿನದು..? ಉಹೂ೦... ಅದನ್ನಾಕೆಯೇ ಹೇಳಬೇಕಿತ್ತು. ಇ೦ದಿರೆ ಎ೦ಬ ಸಾಮಾನ್ಯ ಹೆಣ್ಣುಮಗಳು ನಮ್ಮ ಸಮಾಜದ ಹಲವು ಮುಖಗಳ ಅನಾವರಣವಾಗಿ ನಿ೦ತಿದ್ದಳು. ಹೆಚ್ಚು ಕಡಿಮೆ ಎರಡು ದಶಕಗಳ ನ೦ತರದ ಭೇಟಿ ಅದು. ಅದಕ್ಕೂ ಮೊದಲು ಕರೆ ಮಾಡಿ ಮಾತಾಡಿದ್ದೆ. ಇದ್ದಕ್ಕಿದ್ದ೦ತೆ, "ನಿ೦ಗೆ ಗೊತ್ತಾ.. ಐ ಆ್ಯಮ್ ಸ್ಟಿಲ್ ವಜಿ೯ನ್..!'. ಎ೦ದಿದ್ದಳು. ಅತ್ತಲಿ೦ದ ಮಾತು ಬಾಣಕ್ಕಿ೦ತಲೂ ಬಿರುಸಾಗಿ ತೂರಿಬ೦ದಾಗ ಉದ್ಗಾರವನ್ನೂ ತೆಗೆಯದಷ್ಟು ನಿಶ್ಯಬ್ದವಾಗಿ ಬಿಟ್ಟಿದ್ದೆ ನಾನು. ಇ೦ದಿರಾಳ ಮಾತುಗಳಿಗೀಗ ವೇಗ ಬೇಕಿರಲಿಲ್ಲ. ನನಗೂ. ನಿನ್ನೆಯಷ್ಟೆ ಆಕೆಯನ್ನು ನೋಡುತ್ತಲೇ ಆದ ಅನಾಹುತದ ಅರಿವು ಒ೦ದಿಷ್ಟಾಗಿತ್ತಾದರೂ ನಿಜವಾದುದೇನು ಆಕೆಯೇ ವಿವರಿಸಬೇಕಿತ್ತು. 
    ಆಕೆಯ ಬದುಕೂ ದಿವಿನಾಗಬಹುದಿತ್ತು. ಒ೦ದು ಸಣ್ಣ ಹೆಜ್ಜೆ ಅವನಿ೦ದ ಬ೦ದಿದ್ದರೆ ಆಗಿಹೋಗುತ್ತಿತ್ತು. ಆದರೆ ಗ೦ಡನ ದೌಬ೯ಲ್ಯಕ್ಕೆ ಹುಡುಗಿ ವಿನಾಕಾರಣವಾಗಿ ಬಲಿಯಾಗಿದ್ದಳು. ಜಾಹೀರು ಮಾಡಲಾಗದ ವಿಷಯ ಎ೦ದೇ ಇವತ್ತಿಗೂ ಪರಿಗಣಿಸಲ್ಪಡುವ ಗ೦ಡಸಿನ ಲ್ಯೆ೦ಗಿಕ ಅಸಾಮಥ್ಯ೯ವನ್ನು ಹೆಣ್ಣಿನ ಬ೦ಜೆತನಕ್ಕೆ ಸುಲಭವಾಗಿ ಬಲಿಗೊಡುತ್ತಿರುವುದರ ಹಿ೦ದಿನ ಮಾಮಿ೯ಕತೆ, ದದು೯ ನನಗಿವತ್ತಿಗೂ ಅಥ೯ವಾಗಿಲ್ಲ. ಇದನ್ನು ಮನೆಯ ಹೆಣ್ಣುಮಕ್ಕಳೂ ಬೆ೦ಬಲಿಸುತ್ತಾರಲ್ಲ ಏನು ಮಾಡೋಣ..? 
   ಇದೊ೦ದು ಗೊತ್ತಿರಲಿ. ತು೦ಬ ಪುರುಷರು ಇವತ್ತಿಗೂ ಅಲಿ೯ ಇಜ್ಯಾಕುಲೇಶನ್, ಎರಕ್ಟೈಲ್ ಡಿಸ್‍ಫ೦ಕ್ಷನ್ ಎ೦ಬೆಲ್ಲ ಸಾಮಾನ್ಯ ಕಾರಣಗಳಿಗೆ, ಅವಮಾನದ ಮುಸುಗಿನಲ್ಲಿಟ್ಟು ಬದುಕು ದುಭ೯ರಗೊಳಿಸಿಕೊ೦ಡಿದ್ದಾರೆಯೇ ವಿನಾ ಅದನ್ನು ವೈದ್ಯಕೀಯ ಸಲಹೆ, ಚಿಕಿತ್ಸೆಯಿ೦ದ ಸರಿಪಡಿಸಿಕೊಳ್ಳುವ ಗೋಜಿಗೇ ಹೋಗಿಲ್ಲ. ಕಾರಣ ತಮ್ಮ ಲ್ಯೆ೦ಗಿಕ ಅಸಾಮಥ್ಯ೯ವನ್ನು ವೈದ್ಯರ ಎದುರಾದರೂ ಹೌದೆನ್ನಬೇಕಾಗುತ್ತಲ್ಲ. ಆ ಸ೦ಕಟ ಮತ್ತು ಅವಮಾನಕ್ಕಿ೦ತ (ಹಾಗೇಕೆ೦ದುಕೊಳ್ಳುತ್ತಾರೋ ನನಗೆ ತಿಳಿದಿಲ್ಲ) ತೆಪ್ಪಗೆ ಉಳಿದುಬಿಡೋದು. ಹೆ೦ಡತಿ ತಿರುಗಿ ಬಿದ್ದರೆ ಸುಲಭ ಉಪಾಯ ಬಡಿದು ಬಾಯಿ ಮುಚ್ಚಿಸುವುದು. ಹೆ೦ಡತಿಯನ್ನು ಬಡಿಯುವುದು ಬಹುಶಃ ಗ೦ಡಸಿನ ಕೊನೆಯ ಹರಾಮಿತನವೇ...? ಉತ್ತರ ನನಗೂ ಸಿಕ್ಕಿಲ್ಲ. ಇ೦ದಿರೆಯ ವಿಷಯದಲ್ಲಿ ಆದದ್ದೂ ಅದೇ. ಆದರೆ ಅವನು ಅದನ್ನು ತನ್ನ ಅಸಾಮಥ್ಯ೯ ಎನ್ನುವುದಕ್ಕಿ೦ತ ಸ್ವಾಭಾವಿಕ ನ್ಯೂನತೆ ಎನ್ನುವುದನ್ನು ಒಪ್ಪಿಕೊಳ್ಳದೆ ಇಗೋವಾಗಿ ಪರಿವತಿ೯ಸಿಕೊ೦ಡು ಸೋತಿದ್ದ. ಬದುಕಿನಲ್ಲೂ, ಸುಖದಲ್ಲೂ ಕೊನೆಗೆ ಎಲ್ಲದರಲ್ಲೂ. ಸೋತು ಗೆಲ್ಲುವ ಕಲೆಯ ಮೊದಲ ಮೆಟ್ಟಿಲಲ್ಲೇ ಮುಗ್ಗರಿಸಿದ್ದ. ಬದಲಾದ ವೈದ್ಯಕೀಯ ವ್ಯವಸ್ಥೆಯಲ್ಲಿ ಇವತ್ತು ಪುರುಷರ ದೈಹಿಕ ಅಸಾಮಥ್ಯ೯ದ ಹೊರತಾಗಿಯೂ ಅವನದ್ದೇ ಅ೦ಶದಿ೦ದ ಸ್ವ೦ತದ ಮಕ್ಕಳನ್ನು ಪಡೆಯುವ ಸುಲಭ ಉಪಾಯ (ಅಐಏ) ಕೈಗೆಟುಕುವ ದರದಲ್ಲಿವೆ. ಆದರೆ ಅವಮಾನ ಮತ್ತು ಇಗೋ ಎಲ್ಲವನ್ನೂ ಆಚೆಗಿಡುತ್ತಿದೆ. 
    "ಏನು ಮಾಡಲಿ. ಎರಡು ವಷ೯ ಹಗಲು ಮನೆ ಮ೦ದಿ ಎದುರಿಗೆ ವನವಾಸ. ರಾತ್ರಿ ಆದರೆ ಕೈಲಾಗದ ಸ೦ಕಟಕ್ಕೆ ನನ್ನನ್ನು ಗುರಿಪಡಿಸುತ್ತಾ, ಪ್ರಯತ್ನ ಎನ್ನುವ ನರಕ.. ಬದುಕು ಹ್ಯೆರಾಣಾಗಿ ಹೋಗಿತ್ತು. ಅವನ ಸಮಸ್ಯೆಗೆ ಮದ್ದು ಇತ್ತು ಮಾರಾಯ. ಆದರೆ "ತಾನು ಗ೦ಡಸು..' ಅನ್ನೋದೊ೦ದಿದೆ ನೋಡು.. ಅದಕ್ಕೆ ಮದ್ದಿಲ್ಲ. ಮಕ್ಕಳಾಗಲಿಲ್ಲ ಅದಕ್ಕೆ ಆಕೆಯನ್ನು ಡಿವೋಸ್‍೯ ಮಾಡಿದ ಎ೦ದು ಈಗ ಸಮಾಜದಲ್ಲಿ ನನ್ನನ್ನು ಬರಗೆಟ್ಟ ಭೂಮಿ ಅನ್ನೋ ತರಹ ಬಿ೦ಬಿಸ್ತಾ ಇದ್ದಾರಲ್ಲ, ನಾನು ಹೆ೦ಗೋ ಎಲ್ಲರೆದುರಿಗೆ ನನ್ನ ಗ೦ಡನಿಗೆ ಆಗಲ್ಲ ಅ೦ತಾ ಹೇಳಲಿ..? ಯಾವ ಹೆಣ್ಣು ಹೇಳಿಯಾಳು..? ಅಸಲಿಗೆ ಅ೦ಥಾ ಸುಖಾನಾದರೂ ಯಾವನಿಗೆ ಬೇಕಿತ್ತು..? ಮಕ್ಕಳಿಲ್ಲದಿದ್ರೂ ಪರವಾಗಿಲ್ಲ ಚೆನ್ನಾಗಿದ್ರೆ ಸಾಕು ಅ೦ತಾಳೆಯೇ ಹೊರತಾಗಿ ಯಾವ ಹೆಣ್ಣೂ, ತನ್ನ ಗ೦ಡ ಏನೂ ಮಾಡಲಾಗದವ ಅದಕ್ಕೆ ಬಿಟ್ಟು ಬ೦ದೆ ಎ೦ದು ಎಲ್ಲಾದರೂ ಇತಿಹಾಸದಲ್ಲಿ ಹೇಳಿದ್ದಿದೆಯಾ..?'. ಇ೦ದಿರೆ ಜಗತ್ತಿನ ಅಷ್ಟೂ ಗ೦ಡಸರನ್ನು ಭರಭರನೆ ಬೆತ್ತಲೆ ಮಾಡುತ್ತಿದ್ದರೆ ನಾನೂ ತಲೆ ತಗ್ಗಿಸಿ ಕೂತುಬಿಟ್ಟಿದ್ದೆ. 
ಕಾರಣ ಅವಳು ಎ೦ದರೆ...

No comments:

Post a Comment