Saturday, July 23, 2016


ಕದಡಿದಷ್ಟೂ ಕಲಕುವುದು ಮನಸ್ಸು ಮಾತ್ರ...

ಹೆಣ್ಣಿಗೆ ಹೆಣ್ಣೇ ಶತ್ರು ಎನ್ನುವುದನ್ನು ಸಾಬೀತು ಮಾಡುವಂತೆ, ಮನೆಗಳಲ್ಲೂ, ಕಚೇರಿಯ ವ್ಯಾಪ್ತಿಯಲ್ಲೂ, ಹೆಸರು ದುಡ್ಡು ದುಗ್ಗಾಣಿ ಬರುತ್ತೇ ಅಂದಾಗಲೂ ತೀರಾ ಬರಗೆಟ್ಟವರಂತೆ ಆಡುವುದೇಕೋ ಅರ್ಥವಾಗುತ್ತಿಲ್ಲ.


ಅಮ್ಮನ ಕಿರಿಕ್ಕು, ಇತ್ತ ಅತ್ತೆಯ ಅಸಹನೆ, ಕೈಗೆ ಹತ್ತಿಯೂ ಹತ್ತದ ನೌಕರಿಗಳು, ಎಡೆಯೂ ಅನಿವಾರ್ಯತೆಯ ಕೊಂಚ ಸುಳಿವು ಸಿಗುತ್ತಿದ್ದಂತೆ ಹರಿದು ತಿನ್ನಲೆತ್ನಿಸುವ ಕಾಮುಕ ಅಧಿಕಾರಿ ವರ್ಗಫಹೀಗೆ ಬದುಕು ಯಾವ ರೀತಿಯಲ್ಲೂ ಹಳಿಗೆ ಹತ್ತದೆ ತೇಲುತ್ತಲೇ ಇರುವಾಗಲೂ ವಾಣಿ ಮಾತ್ರ ಛಲ ಬೀಡದೆ ಛಲಾಂಗು ಹಾಕುತ್ತಲೇ ಇದ್ದಳು. ಮೊದಮೊದಲು ಮದುವೆ ಇಷ್ಟ ಇರದಿದ್ದಾಗ್ಯೂ ಒಂದು ಗಂಡು ಮಗು ಆಗಿದೆ. ಕೆಲಸ, ಮಗು ಜತೆಗೆ ಓದು ಮುಂದುವರಿಸಿ ಅತ್ಯುತ್ತಮ ಎನ್ನಿಸುವಂತೆ ಮತ್ತೆರಡು ಕಂಪ್ಯೂಟರ್ ಡಿಗ್ರಿಗಳು ತೆಕ್ಕೆಗೆ ಬಂದಿವೆ. ಕೆಲವು ಕಡೆಗಳಲ್ಲಿ ಅಮ್ಮಂದಿರೇ ಬದುಕಿಗೆ ಉರುಳಾಗಿ ಕಾಡಿಬಿಡುತ್ತಾರೆ. ತೀರಾ ಅದ್ಯಾವುದೋ ಅವರವರದ್ದೇ ಅನಿವಾರ್ಯತೆಗೆ ಸಿಲುಕಿ ಬಿದ್ದಿರುತ್ತಾರೋ ಗೊತ್ತಿಲ್ಲ. ಆದರೆ, ಮಕ್ಕಳಿಗೆ ಯಾಕಾದರೂ ಅಮ್ಮ ಹಿಂಗೆ ಅನ್ನಿಸಿಬಿಡುವುದೂ ಇದೆ.
ಇತ್ತ ಅತ್ತೆ ಯಾವ ಮಾತಿಗೆ ಮಗನ ತಲೆ ತಿರುಗಿಸುವಲ್ಲಿ ಶಕ್ತಳಾಗಿದ್ದಳೋ ಗೊತ್ತಿಲ್ಲ. ಸ್ನೇಹಿತನಾಗಿದ್ದವ ಅಮ್ಮ ಮಾಡಿದ್ದ ಹಳವಂಡದಿಂದಾಗಿ ಗಂಡನಾಗಿಬಿಟ್ಟಿದ್ದನಲ್ಲ. ಅವನೂ ಅಂದಿಂದು ಕೆಲಸ ಮಾಡಿಕೊಂಡು ಬೆಂಗಳೂರಿನ ಬದುಕಿನಲ್ಲಿ ಹಾಯಾಗಿ ಉಸಿರಾಡುತ್ತಿದ್ದ. ‘ಜಮೀನು ನೋಡಿಕೊಳ್ಳಲು ಜನಬೇಕು’ ಎಂದು ತನ್ನ ಗಂಡನನ್ನೇ ಕರೆದೊಯ್ದು ಬಿಡುವುದರೊಂದಿಗೆ ವಾಣಿ ಮತ್ತೊಮ್ಮೆ ಅತಂತ್ರಳಾಗಿದ್ದಳು. ಹಾಗೆ ಹೋದ ಹುಡುಗನಿಗೆ ನಯಾಪೈಸೆಯ ಕಿಮ್ಮತ್ತು ಮತ್ತು ಆದಾಯ ಎರಡೂ ಇರಲಿಲ್ಲ. ಆದರೆ, ಅಪ್ಪಫಅಮ್ಮಂದಿರ ಮಾತು ಮುಖ್ಯವಾಗಿ, ಭವಿಷ್ಯದ ಅಸುರಕ್ಷತೆಯಿಂದಾಗಿ ಸುಲಭಕ್ಕೆ ಲಭ್ಯವಾದ ಆಶ್ರಯದ ಮನೆಯಲ್ಲಿ ಉಳಿದುಬಿಟ್ಟಿದ್ದಾನೆ. ಜತೆಗೆ ಅಮ್ಮನ ಚೀತಾವಣಿಯಿಂದ ವಾಣಿಗೂ ಕೆಲಸ ಬಿಟ್ಟು ಮನೆಗೆ ಬರುವಂತೆ ಕಿರಿಕಿರಿ ಆರಂಭಿಸಿದ್ದಾನೆ. ಗಂಡನನ್ನು ನಂಬಿಕೊಂಡು ಬದುಕು ಮಾಡೊಣ, ಅಲ್ಲಿಗೇ ಹೋಗೋಣ ಎಂದರೆ ತೋಟ ಗದ್ದಾ ಎಂದರೆ ಸುಲಭವೇ.
ಹೋಗಲಿ ಆ ಆಸ್ತಿನಾದರೂ ಇವನಿಗಿದೆಯಾ? ಇನ್ಯಾರದ್ದಾ ಹೆಸರು ಅದರೊಂದಿಗೆ ತಳುಕು ಹಾಕಿಕೊಂಡಿದೆ. ಈಗ ಮನೆಯಲ್ಲೂ ಇನ್ನೊಬ್ಬ ಹೆಣ್ಣಾಳು ಬೇಕಿರುವುದರಿಂದ ವಾಣಿಯನ್ನೂ ಅಲ್ಲಿಗೆ ಕರೆದೊಯ್ಯಲು ನೋಡುತ್ತಿದ್ದಾರೆ. ಈ ಹಂತದಲ್ಲಿ ಇದೆಲ್ಲ ಅಂದಾಜು ಮಾಡುತ್ತಲೇ ವಾಣಿ ಸೆಟೆದು ನಿಂತಿದ್ದಾಳೆ.
ವಾಣಿಯನ್ನು ಮಣಿಸಲು ಆಗದಿದ್ದಾಗಫ‘ನಿನಗೆ ಮಗುವನ್ನು ನೋಡಿಕೊಳ್ಳಲು ಆಗುವುದಿಲ್ಲ ಕೆಲಸ, ಮಗುವಿನ ಆರೈಕೆ ಎರಡೂ ಕಷ್ಟ. ಹಾಗಾಗಿ ಮಗುವನ್ನು ಊರಿಗೆ ಕರೆದೊಯ್ಯುತ್ತೇನೆ’ ಎಂದು ಇನ್ನೊಂದು ಕ್ಯಾತೆ ತೆಗೆದಿದ್ದಾರೆ. ಅತಿ ಹೆಚ್ಚಿನ ಪ್ರಕರಣಗಳಲ್ಲಿ ಆಗುವ ಮತ್ತು ಸುಲಭಕ್ಕೆ ಸಿಕ್ಕುವ ತಂತ್ರವೇ ಇದು. ಅಮ್ಮನ ಕೈಯಿಂದ ಮಗುವನ್ನು ಕಿತ್ತುಕೊಳ್ಳುವ ಹುನ್ನಾರ. ಆಗ ಸುಲಭವಾಗಿ ಮಗುವಿನ ಜತೆಯಲ್ಲಿ ಅಮ್ಮನೂ ಬಗ್ಗುತ್ತಾಳೆ ಎನ್ನುವ ಲೆಕ್ಕಾಚಾರ. ಅದು ಆಕೆಯ ಮಗು ಇರಬಹುದು, ಆದರೆ ಹುಟ್ಟಿದ್ದು ತಮ್ಮ ಮಗನಿಗೆ ಎನ್ನುವ ವಾದವಿದೆಯಲ್ಲ, ಇದು ನಾನು ಕಂಡ ಹಲವು ಪ್ರಕರಣಗಳಲ್ಲಿ ಅಮ್ಮನ ಪಾತ್ರವನ್ನು ಹಳ್ಳಹಿಡಿಸುವ ತಂತ್ರಗಾರಿಕೆ. ಮಗು ಯಾವತ್ತಿಗೂ ಅಮ್ಮನ ಪಾಲು. ಅದರಲ್ಲೂ ಅಮ್ಮನೊಂದಿಗೆ ಅದು ಇದ್ದಷ್ಟು ಚೆಂದವಾಗಿ ಇನ್ನಾವುದೇ ಕಡೆಯಲ್ಲೂ ಇರಲಾರದು. ಆದರೆ, ಪ್ರತಿ ಬಾರಿಯೂ ಗಂಡನ ಕಡೆಯವರು, ಮೊದಲು ಮಾಡುವ ಕೆಲಸವೇ ‘ನಮ್ಮ ಮಗುವನ್ನು ಕೊಡು’ ಎನ್ನುವುದು. ಆಕೆಯ ಕೈಯಿಂದ ಮಗು ಕಿತ್ತುಕೊಳ್ಳುವ ಬೆದರಿಕೆ ಬರುತ್ತಿದ್ದಂತೆ ಹೆಚ್ಚಿನ ಹೆಣ್ಣುಮಕ್ಕಳು ಕಂಗಾಲಾಗುತ್ತಾರೆ.
ಏನಾದರೂ ಸಹಾಯವಾದೀತಾ ಎಂದರೆ, ನಮ್ಮ ವ್ಯವಸ್ಥೆಯ ದರಿದ್ರತನಕ್ಕೆ ಯಾವ ಸಹಾಯವಾಣಿ ಸುಡುಗಾಡು ಯಾವುದೂ ಧನಾತ್ಮಕ ಚಿಂತನೆ ಮಾಡದೆ ನೇರವಾಗಿ, ‘ಒಂದಿಷ್ಟು ಅಡ್ಜಸ್ಟ್ ಮಾಡಿಕೊಂಡು ಹೋಗಮ್ಮ’ ಎನ್ನುವುದೇ ಮಹಿಳಾ ಅಧಿಕಾರಿಗಳ ಮೊದಲ ಮಾತು. ಇವತ್ತು ಹೆಚ್ಚಿನ ಸರ್ಕಾರಿ ವ್ಯವಸ್ಥೆಗಳಲ್ಲಿ ಆಕೆಯ ಪರವಾಗಿ ಸಮಸ್ಯೆಯ ಮೂಲಕ್ಕೆ ಕೈ ಹಾಕುವ ಯಾವ ಪ್ರಯತ್ನಗಳೂ ನಡೆದಿದ್ದು ನನಗೆ ಕಾಣಿಸುತ್ತಿಲ್ಲ. ಏನಿದ್ದರೂ ಇಬ್ಬರನ್ನೂ ಕರೆಸಿ ಒಂದಷ್ಟು ಮಾತಾಡುತ್ತಾರೆ ಹೊರತಾಗಿ ಇನ್ನೇನೂ ಆಗುತ್ತಲೇ ಇಲ್ಲ. ಹಾಗಾಗಿ ಸರ್ಕಾರದಿಂದ ಸಿಗಬೇಕಾದ ನ್ಯಾಯಯುತ ಬೆಂಬಲ ಕೂಡ ಮಾತಿನ ತಿವಿತದ, ವ್ಯಂಗ್ಯದ ಮುಕ್ತಾಯವಾಗುತ್ತಿದೆ. ಅಲ್ಲಿಗೆ ಏನೂ ಮಾಡಲೂ ತೋರದೆ ಹೆಣ್ಣುಮಕ್ಕಳು ಪರಿಸ್ಥಿತಿಯ ವಶಕ್ಕೆ ಸಿಕ್ಕು ಕಂಗಾಲಾಗಿ ಹೋಗುತ್ತಾರೆ. ಇಲ್ಲದಿದ್ದರೆ ಇತ್ತ ಮಗು, ಅತ್ತ ಪರಿಸ್ಥಿತಿ ಎರಡೂ ಗಂಭೀರ.
ಇತ್ತ ಗಂಡನಾದವ ಮಗುವನ್ನು ಅಲ್ಲಿಗೆ ಕಳುಹಿಸುವಂತೆ ಒತ್ತಡ ಹೇರುತ್ತಾ ಕೂತಿದ್ದರೆ, ಕನಿಷ್ಠ ಅಮ್ಮನಾದರೂ ಜೊತೆಗಿದ್ದು ಪರಿಸ್ಥಿತಿ ಸುಧಾರಿಸಿಯಾಳೆ ಅದೂ ಇಲ್ಲ. ಅದರ ಬದಲಿಗೆ ‘ನಿನ್ನದೇ ತಪ್ಪು’ ಎನ್ನುವಂತೆ ವಾಣಿಯನ್ನೇ ಮೂದಲಿಸುವಲ್ಲಿಗೆ ವಸ್ತುಸ್ಥಿತಿ ಬಂದುನಿಂತಿದೆ. ಹೀಗೆ ಎಲ್ಲ ಕಡೆಯಿಂದಲೂ ಒತ್ತಡ ಸೃಷ್ಟಿಯಾದರೆ ಎಲ್ಲಿ ಹೋಗಬೇಕು?
‘ಈ ಜಂಜಡಗಳ ಮಧ್ಯೆ ಹೆಚ್ಚಿನ ಓದು ಇದ್ದರೆ ಒಳ್ಳೆಯ ಕೆಲಸ ಹಿಡಿಯಬಹುದು’ ಎನ್ನುವ ಆಶಾವಾದವನ್ನು ಬೆನ್ನುಹತ್ತಿರುವ ವಾಣಿ ಸ್ನಾತಕೋತ್ತರ ಪದವಿಯನ್ನೂ ಪೂರೈಸಿಕೊಂಡಿದ್ದಾಳೆ. ನಿರಂತರ ಕೆಲಸ, ಓದು, ಮಗುವಿನ ಆರೈಕೆ, ಅಲ್ಲಲ್ಲಿ ಕಿರಿಕಿರಿಗಳುಫಹೀಗೆ ಯಾವ ಆಯಾಮದಲ್ಲೂ ಆಕೆ ಹಿಂದೆ ಸರಿಯದೇ ಜೀವನದ ಬಂಡಿ ಎಳೆಯುತ್ತಿದ್ದಾಳೆ. ಕಾರಣ, ಮಗುವನ್ನು ಊರಿಗೂ ಗಂಡನೊಂದಿಗೂ ಕಳುಹಿಸಿದರೆ ಅದಕ್ಕೆ ಯಾವುದೇ ರೀತಿಯ ಭವಿಷ್ಯವಿಲ್ಲ ಎಂಬುದು ಆಕೆಗೆ ಚೆನ್ನಾಗಿ ಗೊತ್ತು. ಕೆಲಸ ಬಿಡುವ ಪ್ರಶ್ನೆಯೇ ಇಲ್ಲ. ಕೆಲಸ ಬಿಟ್ಟರೆ ಬದುಕು ಇನ್ನಷ್ಟು ಅಧ್ವಾನ್ನಗೊಳ್ಳುತ್ತದೆ.
ಈ ಮಧ್ಯೆ, ತಾನು ದುಡಿದು ಕಷ್ಟಪಟ್ಟು ಕಲಿಸಿ ಬೆಳೆಸಿದ ತಂಗಿಗೆ ಇವತ್ತು ಸರ್ಕಾರಿ ನೌಕರಿ ಸಿಕ್ಕಿದೆ. ಒಂದಿಷ್ಟು ಸಹಾಯ, ಸಾಂತ್ವನಕ್ಕಾದರೂ ಆದಾಳಾ? ಅದೂ ಇಲ್ಲ. ಮಾತೆತ್ತಿದರೆ ನೌಕರಿಯ ಹೆಮ್ಮೆ ಈಗ ಆಕೆಯ ಹೆಗಲೇರಿದೆ. ಓದಿಸಿದ, ಪೊರೆದ ತಾನು ಯಾವ ಲೆಕ್ಕದಲ್ಲೂ ಇಲ್ಲ. ಅತ್ತ ಸರ್ಕಾರಿ ನೌಕರಿ ಎನ್ನುವ ತುರಾಯಿಗೀಡಾಗಿರುವುದರಿಂದ ಅಮ್ಮನಾದವಳ ಆದರ ಮತ್ತು ನಡವಳಿಕೆ ಎರಡೂ ಆಕೆಯೆಡೆಗೆ ಸಲ್ಲುತ್ತಿದ್ದರೆ ತಾನು ಇದ್ದೂ ಇಲ್ಲದ ಪರಿಸ್ಥಿತಿ. ತವರುಮನೆಯೆಂದು ಎರಡ್ಮೂರು ದಿನದ ಮಟ್ಟಿಗೆ ಕಾಲಿಟ್ಟರೂ ಬರುವಾಗ ಅತ್ತು ಕರೆದು ಸಂಕಟ ಪಡದೆ ಬಂದದ್ದೇ ಇಲ್ಲ. ಕಾರಣ ತನ್ನ ಮದುವೆಗೂ ಮೊದಲು ಪೂರ್ತಿ ಸಂಬಳ ಮನೆಗೆಂದೆ ತಂಗಿ ತಮ್ಮಂದಿರ ಓದಿಗೆ ಖರ್ಚು ಮಾಡುತ್ತಿದ್ದೇನಲ್ಲ. ತನಗೇ ಮದುವೆಯಂತಾದ ಮೇಲೆ ಅನಿವಾರ್ಯವಾಗಿ ಅಲ್ಲ ಕೈಕಟ್ಟುವುದೂ ಸಹಜವೇ. ಅದರಲ್ಲೂ ದುಡಿಯದೇ ಕೂತು ಬಿಡುವ ಗಂಡನಿದ್ದರಂತೂ ಎಷ್ಟಿದ್ದರೂ ಸಾಕು ಎನ್ನುವ ಮಾತೇ ಇಲ್ಲ. ತಮ್ಮನಂತೂ ಕಾಲೂರಿ ನಿಲ್ಲುತ್ತಿದ್ದಂತೆ ಈ ಯಾವ ಆಗುಹೋಗೂ ಅವನಿಗೆ ಬೇಕಿಲ್ಲವಾಗಿದೆ. ಎಲ್ಲಿ ಮನೆಯನಾದರೂ ಪಾಲು ಕೇಳಿಯೇನು ಎಂಬ ಅಪನಂಬಿಕೆಯಾ? ಹಾಗೇ ಕೇಳಿದರೆ ಕೊಡಲಾದರೂ ಏನಿದೆ ಅವರಲ್ಲಿ?
 “ಅಣ್ಣಾ, ಏನು ಮಾಡಲಿ ವರ್ಷ ಕಳೆಯುತ್ತಾ ಬಂತು ಗಂಡ ಅಂತ ಇದ್ದವನು ಬರದೆ. ಅವನು ಬೇಕೂಂತಾ ಮಗುವನ್ನು ಅವನ ಬಳಿಗೆ ಕಳಿಸೋಕಾಗುತ್ತಾ? ಹೇಗೋ ಏನೋ ಆದರೂ ಅಮ್ಮನಾದರೂ ಜತೆಗಿರಲಿ ಬಾ ಎಂದರೆ  ಇವೆ ರಗಳೆ ಎನ್ನಿಸುತ್ತಿದ್ದಂತೆ ಆಕೆಯೂ ಕಾಲಿಡುವುದನ್ನು ನಿಲ್ಲಿಸಿದ್ದಾಳೆ. ಹೇಗೋ ಸರಿ ಗಂಡನ ಜೊತೆಗೆ ಇರೋಣ ಎಂದರೆ ಅತ್ತೆಯ ಕಿರಿಕಿರಿಗೆ ಸಿಕ್ಕು ಎರಡು ಬಾರಿ ಭಯಾನಕವಾಗಿ ಆರೋಗ್ಯ ಕೆಡಿಸಿಕೊಂಡಿದ್ದೇನೆ. ಬಸರಿ ಬಾಣಂತಿ ಎಂದೇ ನೋಡದಿದ್ದವರು ಈಗ ನೋಡಿಯಾರೇ? ಇನ್ನು ಅವನು ಪ್ರೀತಿಯಿಂದ ಇರ್ತಾನೆ ಎನ್ನುವುದು ಯಾವ ಲೆಕ್ಕದಲ್ಲೂ ಗ್ಯಾರಂಟಿಯಾಗುತ್ತಿಲ್ಲ. ಹೇಗೆ ಯೋಚಿಸಿದರೂ ಏನೂ ಹೊಳೆಯುತ್ತಿಲ್ಲ. ಏನ್ಮಾಡ್ಲಿ ಅಣ್ಣಾ" ಎನ್ನುತ್ತಿದ್ದರೆ ಕೆಲವೊಮ್ಮೆ ಈ ಹೆಂಗಸರು ಯಾಕಿಂಗಾಗುತ್ತಿದ್ದಾರೆ ಎನ್ನಿಸಿದ್ದು ಸುಳ್ಳಲ್ಲ.
ಮಗನ ಕುಡಿ ಬೇಕು. ಆದರೆ ಅದರ ಹಡೆದವಳು ಬೇಡ ಎನ್ನುವ ಅತ್ತೆ, ತನ್ನ ನೆತ್ತಿಯ ಮೇಲೆ ಮಾಸು ಹಾರುವವರೆಗೂ ಕಾಯ್ದ ಅಕ್ಕನಿಗೆ ತಂಗಿಯೇ ತಿರುಗಿ ನೋಡುತ್ತಿಲ್ಲ. ಸ್ವಂತ ಅಮ್ಮನೇ ಕಿಂಚಿತ್ತೂ ಕಾಳಜಿ ತೋರುತ್ತಿಲ್ಲ. ಏನಾಗಿದೆ ಇವರಿಗೆಲ್ಲ? ಇವರೂ ಹೆಣ್ಣೆ ಅಲ್ಲವಾ? ಕನಿಷ್ಠ ಆ ಕೋನದದರೂ ವಾಣಿಯೊಂದಿಗೆ ಜೀವ ಬೆಸೆಯುವ ಕಾರ್ಯ ಮಾಡಬೇಕಿತ್ತು. ಆದರೆ, ‘ಹೆಣ್ಣಿಗೆ ಹೆಣ್ಣೇ ಶತ್ರು’ ಎನ್ನುವುದನ್ನು ಯಾವಾಗಲೂ ಇಂಥ ಮನೆಗಳಲ್ಲೂ, ಕಚೇರಿಯ ವ್ಯಾಪ್ತಿಯಲ್ಲೂ, ಹೆಸರು ದುಡ್ಡು ದುಗ್ಗಾಣಿ ಬರುತ್ತೇ ಅಂದಾಗಲೂ ತೀರಾ ಬರಗೆಟ್ಟವರಂತೆ ಆಡುವುದೇಕೋ ಅರ್ಥವಾಗಲಿಲ್ಲ.
‘ಏನ್ಮಾಡ್ಲಿ’ ಎನ್ನುವ ವಾಣಿಯ ಕಣ್ಣಲ್ಲಿನ ಪ್ರಶ್ನೆಯ ಅಲಗು ನನ್ನನ್ನು ಇರಿಯುತ್ತಲೇ ಇದೆ. ಕೂತಿದ್ದ ಮಾಸಿದ ಸೋಫಾದಿಂದ ಎದ್ದು ಈಚೆಗೆ ಬರುವಾಗ ಯಾಕೋ ಎಲ್ಲ ಬಸಿದು ಹೋದಂತೆನ್ನಿಸುತ್ತಿತ್ತು. ನನಗೇ ಹಿಗನ್ನಿಸುವುದಾದರೆ ಅದನ್ನು ಅನುಭವಿಸುತ್ತಲೇ ಕಾಲೂರಿ ಹೋರಾಡುತ್ತಿರುವ ಆಕೆಯ ಮನಸ್ಸು ದೇಹ ಪರಿಸ್ಥಿತಿ ಹೇಗೆ ಇದನ್ನೆ ಎದುರಿಸುತ್ತಿದೆ. ಹಿಂದಿರುಗಿ ನಿಂತು ಒಮ್ಮೆ ಕೈ ಮುಗಿಯೋಣ ಅನ್ನಿಸಿತು. ನೋಡಿದರೆ ಅದೇ ಚಿಕ್ಕ ಬಣ್ಣಗೆಟ್ಟ ಪರದೆಯ ಮೂಲೆಯಲ್ಲಿ ನಿಂತು ಮಗುವಿಗೆ ತೋರಿಸುತ್ತಾ ‘ಟಾ..ಟಾ.. ಮಾಡು’ ಎನ್ನುತ್ತಿದ್ದಾಳೆ. ನನ್ನಲ್ಲಿ ಮಾತುಗಳಿರಲಿಲ್ಲ.
ಕಾರಣ
 ಅವಳು ಎಂದರೆ...

Saturday, July 16, 2016

ಆಕಾಶವೇ ಬಿದ್ದರೆ ಎದ್ದು ನಿಲ್ಲೋದಾದರೂ ಹೇಗೆ?

ಒ೦ದೆರಡು ಏಟುಗಳು, ಬದುಕಿನಲ್ಲಿ ಬ೦ದುಬಿಡುವ ತಿರುವುಗಳು ಹೇಗೋ ಎಳೆದುಕೊ೦ಡು ಹೋಗಿಬಿಡುತ್ತವೆ. ಆದರೆ, ಹುಟ್ಟಿನಿ೦ದಲೇ ಶುರುವಾಗಿ ಬಿಡುವ ಸ೦ಕಟ ಮುಗಿಯುವುದೇ ಇಲ್ಲ ಎನ್ನಿಸಿಬಿಡುತ್ತದಲ್ಲ... ಆಗ ಜೀವನ ಮತ್ತಷ್ಟು ಭಾರ, ಕಷ್ಟ ಎನಿಸತೊಡಗುತ್ತದೆ.
ಕೆಲವೊಮ್ಮೆ ಉತ್ತರ ಮತ್ತು ಸಲಹೆ ಎರಡಕ್ಕೂ ಅತೀತನಾಗಿ ನಿ೦ತು ಬಿಡುವ೦ತಹ ಪರಿಸ್ಥಿತಿಗೆ ನನ್ನನ್ನು ಈಡು ಮಾಡಿಬಿಡುತ್ತಾರೆ ಪುಟಾಣಿ ಅಮ್ಮ೦ದಿರು. ದುಡಿಯಲು ಮನಸ್ಸು ಮತ್ತು ಕೆಲಸಕ್ಕೆ ಬೇಕಾದ ತಾಕತ್ತು ಎರಡೂ ಮಕಾಡೆ ಬಿದ್ದಿರುತ್ತವೆ. ಆದರೆ, ಅಸಹಾಯಕತೆ ಮತ್ತು ಅನಿವಾಯ೯ತೆ ಕಾಲಿಗೆ ಕಬ್ಬಿಣದ ಗು೦ಡುಗಳಾಗಿ ಜೋತು ಬಿದ್ದಿರುತ್ತವೆ. ಕೇಳುವ ನನಗೇ ಬೇಡ ಎನ್ನಿಸುವ ಹೊತ್ತಿಗೆ ಆಕೆ ಮಾತ್ರ "ಇಲ್ಲ..ಇಲ್ಲ ಹೆ೦ಗೆ ಬದುಕಲಿ ಹೇಳಣ್ಣ ಸಾಕು ನಾನು ನಡೆಸುತ್ತೀನಿ' ಎನ್ನುತ್ತಿದ್ದಾಳೆ. ಅಬ್ಬಾ.. ಹೆ೦ಗೆ ಬರುತ್ತೇ ಈ ಶಕ್ತಿ ಹೆಣ್ಣುಮಕ್ಕಳಿಗೆ? ಬಡತನ, ಬಿಡಲೊಲ್ಲದ ಓದು, ಮಗು, ನೌಕರಿ, ಇತ್ತ ಅಮ್ಮ, ಅತ್ತ ಅತ್ತೆ ಎರಡೂ ಮನೆಯವರ ಕಿರಿಕಿರಿ, ಕೈ ಹಿಡಿದಿದ್ದ ಗ೦ಡ ಬಾವುಟದಷ್ಟೆ ಸಲೀಸಾಗಿ ಕೈಯೆತ್ತಿ ನಿ೦ತಿದ್ದರೂ, ಎಲ್ಲವನ್ನೂ ಬಿಡದೆಯೂ, ಕಿತ್ತಾಡಲೂ ಆಗದೆ "ನೀವು ಹೇಳಿ. ಹೆ೦ಗತೀರಿ ಹ೦ಗೆ ಓ.ಕೆ. ಆದರೆ ಮಗುವನ್ನ ಬಿಟ್ಟು ಬದುಕು ಅ೦ತ ಮಾತ್ರ ಹೇಳ್ಬೇಡಿ. ಅಣ್ಣಾ ಏನು ಮಾಡಲಿ ಒಮ್ಮೆ ಮಾತಾಡ್ಬೇಕಿತ್ತು' ಎ೦ದು ಬಿಟ್ಟಿತ್ತು ಆ ಅರೆಬೆ೦ದ ಯುವಜೀವ. ಆಕೆಯ ಮುಖದಲ್ಲಿನ್ನೂ ಪ್ರಬುದ್ಧತೆಯ ಗೆರೆಯೂ ಸರಿಯಾಗಿ ಮೂಡದಿರುವಾಗ ಒ೦ದು ಹ೦ತದ ಜೀವನಾನುಭವದ ಪಯಣ ಮುಗಿಸಿಬಿಟ್ಟಿರುವ ವಾಣಿ ಎನ್ನುವ ಹುಡುಗಿಗೆ ಏನು ಹೇಳಲಿ ಎ೦ದು ಪಿಳಿಪಿಳಿ ನೋಡುತ್ತಿದ್ದೆ. 
   ಹುಟ್ಟುತ್ತಲೇ ಹೆಣ್ಣು ಎನ್ನುವ ತಾತ್ಸಾರಕ್ಕೆ ಸಿಲುಕಿದ್ದ ಹುಡುಗಿ ಹೇಗೇಗೋ ಅ೦ತೂ ಎಸೆ್ಸಸೆ್ಸಲ್ಸಿ ಓದಿದ್ದಾಳೆ. ಅಲ್ಲಿವರೆಗೂ, ದಿನಕ್ಕೊಮ್ಮೆ ಕೆಕ್ಕರಿಸಿ ನೋಡುತ್ತಿದ್ದ ಅಪ್ಪ, ಹೀಗೆಳೆಯುತ್ತಿದವರ ಮಧ್ಯೆಯೇ ಹೇಗೋ ಬದುಕಲು ಕಲಿತಿದೆ ಹುಡುಗಿ. ಅದರಲ್ಲೂ ಮನೆಯಲ್ಲಿ ಅಪ್ಪನಾದವನಿಗೇ ಹೆಣ್ಣುಮಕ್ಕಳ ಬಗ್ಗೆ ಅಸಡ್ಡೆ ಬ೦ದುಬಿಟ್ಟರೆ ಅಷ್ಟೇ. ಅ೦ತಹ ಹುಡುಗಿಯರು ತೀರಾ ಕಡ್ಡಿಚುಚ್ಚಿಟ್ಟ ಪತ್ರಾವಳಿಯ೦ತಾಗಿರುತ್ತಾರೆ. ಹೇಗಾದರೂ ಸರಿ ಒ೦ದು ಓದು ಅ೦ತಾಗಿ, ಕನಿಷ್ಠ ಮದುವೆನಾದರೂ ಒಳ್ಳೆಯವನೊ೦ದಿಗಾಗಲಿ ಎ೦ಬ ಅನಿವಾಯ೯ತೆಗೆ ಸಿಲುಕುತ್ತಾರೆ. ಕಾರಣ, ಮು೦ದಕ್ಕೆ ಹೋದ೦ತೆ ವಿದ್ಯೆಗೆ ದುಡ್ಡು ಕಟ್ಟುವುದರಲ್ಲಿ ಅದನ್ನು ನಿಭಾಯಿಸುವಲ್ಲಿ ಅಪ್ಪನಾದವ ಹೇಗೂ ಕೈಬಿಚ್ಚುವುದಿಲ್ಲ. ಅಮ್ಮನ ಕೈಯ್ಯಲ್ಲಿ ಸಾ೦ತ್ವನ ಬಿಟ್ಟರೆ ಏನೂ ಆಗುವುದಿಲ್ಲ. ಹಾಗಾಗಿ ಹೇಗೋ ಮೊದಲ ಹ೦ತದ ಕಾಲ ಪೂರೈಸಲು ಚಡಪಡಿಸಿಬಿಟ್ಟಿರುತ್ತದೆ ಜೀವ. 
    ಆಗಿನ ಕಾಲಕ್ಕೆ ಬಸ್ ಪಾಸಿಗಾಗಿ ತಿ೦ಗಳಿಗೆ ನಲ್ವತ್ತು ರೂಪಾಯಿಯನ್ನೂ ಅಪ್ಪನಿ೦ದ ಕೇಳಲಾಗದೆ ಚಡಪಡಿಸುತ್ತಾ ಎದ್ದು ಬಿದ್ದೂ ದಿನಕ್ಕೆ ಐದೈದು ಕಿ.ಮೀ. ದೂರ ನಡೆದು ಹೋಗಿ ಶಿಕ್ಷಣ ಪೂರೈಸಿದರೆ, ಒ೦ದು ದಿನ ಹುಷಾರಿಲ್ಲದೆ ಕೇವಲ ಒ೦ದು ತಾಸೂ ಕೂಡ ಬರೆಯಲಾಗದೆ ಫೆೀಲಾಗಿಬಿಡಬೇಕೆ? ಉಳಿದೆ ಲ್ಲಾ ವಿಷಯಗಳಲ್ಲಿ ಶೇ.85ರಷ್ಟು ಅ೦ಕ ಗಳಿಸಿರುವ ಹುಡುಗಿ ಒ೦ದರಲ್ಲಿ ಫೆೀಲು. ಮರು ಪರಿಶೀಲನೆ ಮಾಡಿಸಲು ಅಪ್ಪ ಹಣ ಹೊ೦ದಿಸಲಾರ. ಮು೦ದಕ್ಕೆ ನಿ೦ತು ಅ೦ತಹದ್ದನ್ನೆ ಲ್ಲಾ ಮಾಡಿಸಿ, ಒ೦ದು ದಿಕ್ಕು ತೋರಿಸೋಣ ಎನ್ನುವ ಮನಸ್ಥಿತಿಗಳೂ ಇರಲಿಲ್ಲ. ಇನ್ನೇನಾಗುತ್ತದೆ. ಇ೦ತಹ ಸ೦ದಭ೯ದಲ್ಲೇ ಬದುಕು ಹಲವು ತಿರುವು ತೆಗೆದುಕೊಳ್ಳುತ್ತದೆ. ಅಷ್ಟೆಲ್ಲ ಓದಿದ್ದ ಹುಡುಗಿ ಮತ್ತೆ ಹಿ೦ದಿರುಗಿ ಎಸ್ಸೆಸ್ಸೆಲ್ಸಿ ಅ೦ಕದ ಅಧಾರದ ಮೇಲೆ ಡಿಪ್ಲೊಮಾ ಸೀಟು ಗಿಟ್ಟಿಸಿಕೊ೦ಡು ಸ್ಕಾಲರ್‍ಶಿಪ್ ಆಧಾರದಲ್ಲಿ ಮೊದಲ ದಜೆ೯ಯಲ್ಲಿ ಪಾಸು ಮಾಡಿಕೊ೦ಡಿದೆ. ಅಲ್ಲಿವರೆಗಿನ ದೈನೇಸಿತನದ ಬದುಕು ದೇವರಿಗೂ ಸಾಕೆನ್ನಿಸುವ ಹ೦ತ ಅದು. ಪ್ರತಿ ಘಟ್ಟದಲ್ಲೂ ಅವಮಾನ, ಬೆ೦ಬಲ ಇಲ್ಲದ ಹತಾಶ ಪರಿಸ್ಥಿತಿ ಮತ್ತು ಹೆಣ್ಣು ಹುಡುಗಿ ಎ೦ಬ ದುವ೯ತ೯ನೆಗಳಿಗೆ ಈಡಾಗಿ ಹೋಗಿದ್ದಳು ವಾಣಿ. 
      ಹಲವು ಕಡೆಗಳಲ್ಲಿ ಪಾಟ್‍೯ ಟೈಮು ಕೆಲಸ ಮಾಡುತ್ತ ಅಲ್ಲಿ೦ದ ಇನ್ನೊ೦ದೆಡೆಗೆ ನೌಕರಿ ಬದಲಿಸುತ್ತಾ ಇದ್ದಾಗ, "ಊರ ಕಡೆಯಲ್ಲೇ ಒ೦ದು ನೌಕರಿಯ೦ತಾದರೆ ಒ೦ದಿಷ್ಟು ಅನುಕೂಲವಾಗುತ್ತದೆ' ಎ೦ದು ಅದ್ಯಾರೋ ಸಲಹೆ ನೀಡಿದರೋ ಹುಡುಗಿ ಹತ್ತಿರದಲ್ಲೇ ಇದ್ದ ಕ೦ಪನಿಯಲ್ಲಿ ಕೆಲಸಕ್ಕೆ ಸೇರಿಕೊ೦ಡಿದ್ದೇ ಬದುಕು ಇನ್ನಷ್ಟು ಖರಾಬಾಗಿದೆ. ಅದ್ಯಾಕೋ ಕೆಲವು ಕುಟು೦ಬಗಳಲ್ಲಿ ಹೆಣ್ಣುಮಕ್ಕಳನ್ನು ಅಪೂಟು ಅಸಡ್ಡೆ ಮತ್ತು ಹೊರಗೆಲ್ಲೂ ಗೊತ್ತಾಗದ ದಿವೀನಾದ ಅಲಕ್ಷತೆಗೆ ಈಡು ಮಾಡಿರುತ್ತಾರೆ. ಮೊದಲ ಶತ್ರುಗಳು ಅಪ್ಪ ಅಮ್ಮನೂ ಸೇರಿದ೦ತೆ ಮನೆಯಲ್ಲೇ ಎದ್ದು ನಿ೦ತುಬಿಟ್ಟಿರುತ್ತಾರೆ.
     ಸ್ವತಃ ಹೆಣ್ಣಾದ ಅಮ್ಮನಿಗೂ ಅಪ್ಪನ ಓಲ್ಯೆಸುವ ಅನಿವಾಯ೯ತೆ ಇತ್ತಾ? ಬದುಕಿನ ಅಭದ್ರತೆಯ ಕಾರಣ ಅಪ್ಪ ಹೇಳಿದ೦ತೆ ಕುಣಿಯಬೇಕಿತ್ತಾ ತಿಳಿದಿಲ್ಲ ಇವತ್ತಿಗೂ. ಅಪ್ಪನ ಅನುಮಾನ, ಅಮ್ಮನ ಅನಿವಾಯ೯ದ ತಿರಸ್ಕಾರ.. ಜೀವನ ಎನ್ನುವುದು ಕೆಲವು ಹ೦ತದಲ್ಲಿ, ನೀರಿನಿ೦ದ ಹೊರಬಿದ್ದು ಹೋದ ಮೀನಿನ೦ತಾಗಿ ಹೋಗಿತ್ತು. ಆದರೂ ಬಡತನ, ಬಡಿದಾಟ, ಅವಮಾನ, ತಿರಸ್ಕಾರ, ಅಭದ್ರತೆ, ಹಸಿವಿನ ಜೊತೆಗೆ ಕ೦ಡಲ್ಲಿ ಕೈಯಿಡಲು ಹಾತೊರೆಯುವವರಿಗೆ ಬಲಿಯಾಗದ೦ತೆ ಎದ್ದು ನಿಲ್ಲುವ ಛಾತಿಯನ್ನೂ ದೇವರು ಕೊಟ್ಟುಬಿಟ್ಟಿರುತ್ತಾನೆ. 
    ವಾಣಿಯ ಬದುಕಿನ ಲ್ಲಾ ದದ್ದೂ ಅದೇ. ಹುಡುಗಿ ಊರಕಡೆಯಲ್ಲಿ ನೌಕರಿ ಮಾಡಿಕೊ೦ಡಿದ್ದಳು ನಿಜ. ಆದರೆ, ಅಲ್ಲೆ ಲ್ಲಾ ಮಾತೆತ್ತಿದರೆ, ಕೊ೦ಚ ಅಲುಗಾಡಿದರೂ "ನನ್ನ ಜೊತೆಗೆ ಇದ್ದು ಬಿಡು' ಎನ್ನಲು ಕಾದಿದ್ದ ಪೀಡಕರ ಪಡೆಯೇ ಕಾದು ಕೂತಿತ್ತು. ಕಚೇರಿಗಳ ಇ೦ತಹ ಘಟನೆಗಳನ್ನು ಯಾವ ರೀತಿಯಲ್ಲೂ ವಿವರಿಸಲು ಸಾಧ್ಯವಿರುವುದಿಲ್ಲ. ಇದೊ೦ದು ರೀತಿಯ ಪ್ರಾಣಾ೦ತಿಕ ಹಿ೦ಸೆ.
    ಎಲ್ಲೆ೦ದರಲ್ಲಿ ಇಣುಕುವ, ಸುಮ್ಮನೆ ಪಕ್ಕದಲ್ಲಿ ನಿ೦ತು ಮೊಳಕೈಯಿ೦ದ ದೇಹ ಉಜ್ಜುವ, ಹಿ೦ದಿನಿ೦ದ ತಾಗಿಸಿ ಇಶಾರೆ ವ್ಯಕ್ತಪಡಿಸುವ, ಮಾತಾಡುತ್ತಲೇ ಎದೆಯ ಮೇಲೆ ಇರಿಯುವ, ನೋಟದಿ೦ದ ಅಸಹ್ಯದ ಪರಮಾವ˜-ಗೆ ತಲುಪುವ ಮೊದಲೇ ಅವನೊಬ್ಬ ಬದುಕಿಗೆ ಕಾಲಿಟ್ಟಿದ್ದ. ಹೆಣ್ಣುಮಕ್ಕಳ ಪ್ರತಿ ಕಥೆಯಲ್ಲೂ ಇ೦ಥಲ್ಲೇ ಅನಾಹುತಗಳಾಗಿಬಿಡೊದು. ಹಾಗೆ ಬ೦ದವ ತು೦ಬ ಚೆ೦ದಗೆ ಮಾತು, ಸಹಾಯ, ಕಷ್ಟಕ್ಕೊ೦ದಿಷ್ಟು ಸಾ೦ತ್ವನ ಕೈ ನೀಗಿದಷ್ಟು ಸಪೋಟು೯ ಎ೦ದೆ ಲ್ಲಾ ನಿ೦ತಿರುತ್ತಾನಲ್ಲ. ಪಾಪದ ಹೆ೦ಗಸರು ಯಾಮಾರಿಬಿಡುತ್ತಾರೆ. ಹುಲ್ಲುಕಡ್ಡಿಯೂ ಆಸರೆಯಾಗುವಾಗ ಏನು ಮಾಡಿಯಾಳು? 
    ಊರ ಕಡೆಯಲ್ಲಿ ಇದ್ದಷ್ಟೂ ದಿನವೂ ತಮ್ಮ ತ೦ಗಿಯರನ್ನು ಸಲಹುತ್ತಾ, ಮನೆಗೆ ಎಷ್ಟು ಸಹಾಯ ಮಾಡಿದರೂ ಅಪ್ಪ-ಅಮ್ಮನ ವತ೯ನೆ ಬದಲಾಗದಿರುವಾಗಲೇ ಅವನು ಸಹಾಯಕ್ಕೆ ಬ೦ದಿದ್ದ. "ಇಲ್ಲಿರುವುದಕ್ಕಿ೦ತ ಒಳ್ಳೆಯ ಕೆಲಸಕ್ಕೆ ಬೆ೦ಗಳೂರಿಗೆ ಬಾ' ಎ೦ದ. ಅಜಿ೯ ಬರೆಸಿದ. ಸ೦ದಶ೯ನಕ್ಕೆ ಕರೆಯೂ ಬ೦ದಾಯಿತು. ಆದರೆ, ಆಕೆ ರಾಜಧಾನಿಗೆ ಹೊರಡುವ ಮೊದಲೇ ಮನೆಯಲ್ಲಿ ವರಸೆ ಬದಲಾಗಿತ್ತು. "ಇಲ್ಲಿದ್ದರೆ ಮಾತ್ರ ನೌಕರಿ ಮಾಡಿಕೊ೦ಡಿರೋದು, ಇಲ್ಲದಿದ್ದರೆ ಮದುವೆ' ಎ೦ಬ ಮನೆಯವರ ಬೆದರಿಕೆಗೆ ವಾಣಿ ಕ೦ಗಾಲಾಗಿ ಹೋದಳು.              
          ಬಿಟ್ಟರೆ ಮತ್ತೆ ಕೆಲಸ ಸಿಗುತ್ತದಾ? ಗೊತ್ತಿಲ್ಲ. ಹಾಗ೦ತ ಎದ್ದು ಹೋಗಿಬಿಟ್ಟರೆ ಶಾಶ್ವತವಾಗಿ ಮನೆಯಿ೦ದ ದಬ್ಬಿಬಿಟ್ಟರೆ? ಬೆ೦ಕಿಯಿ೦ದ ಬಾಣಲೆಗೆ ಬೀಳುವುದು ನಿಶ್ಚಿತವಾಗಿತ್ತು. ಎಲ್ಲರಿ೦ದ ಮುಕ್ತಳಾಗಿ ಹುಡುಗನ ಭರವಸೆ ನ೦ಬಿಕೊ೦ಡು ರಾತ್ರೋರಾತ್ರಿ ಊರು ಬಿಟ್ಟಿದ್ದಳು ವಾಣಿ. ಬದುಕು ಕಟ್ಟಿಕೊಳ್ಳುವ ತವಕದಲ್ಲಿ ಬೆ೦ಗಳೂರಿಗೆ ಕಾಲಿಟ್ಟ ಹುಡುಗಿಗೆ ನಿರಾಸೆಯೇನೂ ಆಗಿರಲಿಲ್ಲ. ಕೆಲಸ ಸಿಕ್ಕು ತಕ್ಷಣಕ್ಕೆ ಪಿ.ಜಿ ಸೇರಿಕೊ೦ಡು ಬದುಕು ಹಸನಾಗುವ ಹೊತ್ತಿಗೆ ಊರಲ್ಲಿ ಹುಡುಗಿ ಓಡಿ ಹೋಗಿದ್ದಾಳೆ ಎ೦ದು ಅಮ್ಮನೇ ಆಕೆಯ ಮಯಾ೯ದೆ ಬಿಕರಿಗಿಟ್ಟಿದ್ದಳು. "ಸ್ನೇಹಿತನೇ ಹುಡುಗಿಯನ್ನು ಓಡಿಸಿಕೊ೦ಡು ಹೋಗಿದ್ದಾನೆ. ಇಬ್ಬರೂ ನಾಪತ್ತೆ' ಎ೦ದು ಪುಕಾರಾಗಿಸಿ ಆಕೆಯ ಬದುಕಿನ ಬಣ್ಣಗಳನ್ನು ಗಲಬರಿಸಿ ಕಪ್ಪಾಗಿಸಿದ್ದಳು. ಇ೦ಥ ಅಮ್ಮ೦ದಿರೂ ಇರುತ್ತಾರಾ? ಎನ್ನುವುದಾರೆ ಕೆಲವರು ಇರುತ್ತಾರೆ ಮತ್ತದನ್ನು ನೀವೂ ನೋಡಿರುತ್ತೀರಿ ಕೂಡ. "ಒ೦ದು ಒಳ್ಳೆಯ ಕೆಲಸ ಮಾಡಿ ಬದುಕು ಕಟ್ಟಿಕೊಳ್ಳೊಣ ಅ೦ತ ಬೆ೦ಗಳೂರಿಗೆ ಬ೦ದರೆ, ನನಗೆ ಇಷ್ಟವೇ ಇರದಿದ್ದಾಗ್ಯೂ ಸ್ನೇಹಿತನ ಮನೆಯವರನ್ನು ಹುಡುಕಿ, ಮಾತಾಡಿ ಸ೦ಬ೦ಧ ಕಲ್ಪಿಸಿ ಮದುವೆ ಮಾಡಿಬಿಟ್ರು ಅಣ್ಣಾ. ನಾನು ಇನ್ನಷ್ಟು ಓದು ಮತ್ತು ಕೆಲಸ ಮಾಡಿಕೊ೦ಡು ಸೆಟ್ಲಾಗಬೇಕು ಎ೦ದಿದ್ದೆ. ಆದರೆ, ಮಯಾ೯ದೆಯ ಪ್ರಶ್ನೆ ಅ೦ತ ಹೇಳಿ ಮದುವೆ ಮಾಡಿಬಿಟ್ರು' ಅಧ೯ ಬದುಕಿನ ಹೊಸ್ತೀಲ ಮೇಲೆ ನಿ೦ತಿದ್ದ ವಾಣಿಯ ಕತೆಯಲ್ಲಿ ಆಕೆ ನಿರೀಕ್ಷಿಸದ ತಿರುವು ಬ೦ದಿತ್ತು. ಅದಕ್ಕೂ ಹೂ೦ ಎ೦ದು ಮಗು, ಬದುಕು, ಜತೆಗೆ ಓದು, ಕೆಲಸ ಎ೦ದು ಮ್ಯೆಗೂಡಿಸಿಕೊಳ್ಳುತ್ತಿರುವಾಗಲೇ ಹೆಣ್ಣಿಗೆ ಹೆಣ್ಣೆೀ ಶತ್ರು ಎನ್ನುವ೦ತೆ ಆಕೆಯ ಅತ್ತೆ ವಾಣಿಯ ಬದುಕಿನಲ್ಲಿ ಬಿರುಗಾಳಿ ಎಬ್ಬಿಸಿದ್ದಳು. ಅದಿಷ್ಟು ಮು೦ದಿನ ವಾರಕ್ಕಿರಲಿ. ಆದರೆ, ಅಷ್ಟಾಗಿಯೂ "ಅಣ್ಣಾ ನಿನ್ನ ಆಶೀವಾ೯ದ ಇರಲಿ ನಾನು ಹೆ೦ಗೋ ನಿಲ್ತೀನಿ' ಎ೦ದು ಹುಡುಗಿ ಕಾಲೂರಿದ್ದು ಮಾತ್ರ ಇವತ್ತಿಗೂ ನನಗೆ ಸೋಜಿಗ. 
   ಕಾರಣ ಅವಳೆ೦ದರೆ..

Sunday, July 10, 2016


ಆಕೆಗೆ ಜಾಲತಾಣವೇ ದೊಡ್ಡ ಶತ್ರು...
ಯಾರು ಯಾರ ಜೊತೆಗಿದ್ದಾರೆ, ಯಾರಿಗ್ಯಾರು ಲ್ಯೆಕ್ ಒತ್ತುತ್ತಿದ್ದಾರೆ, ಅವರಿಬ್ಬರೂ ಸ್ನೇಹಿತರಾ? ಹಾಗಿದ್ದರೆ ಇವರಿಗೆ ಅಡ್ವಾ೦ಟೇಜಾಗಿ ಬಿಡುತ್ತದಲ್ಲ, ಹೀಗೆ ಬೇಗುದಿಗೆ ಬೀಳುವ ಜನರು, ಅಸಹನೆಯ ಮೂಟೆಯಾಗಿ ಹೆಣ್ಣುಮಕ್ಕಳ ಬದುಕಿನ ಅಲ್ಪ ಖುಷಿಯನ್ನೂ ಕಿತ್ತುಕೊಳ್ಳುತ್ತಿದ್ದಾರೆ.

"ಸ೦ಜೆ ಆರರಿ೦ದ ಬೆಳಗಿನ ಎ೦ಟರವರೆಗೆ ಮಾತ್ರ ಲಭ್ಯ' ಇದು ನನ್ನ ವಾಟ್ಸ್ ಆ್ಯಪ್ ಸ್ಟೇಟಸ್ಸು. ಕಾರಣ, ಕಚೇರಿ ಅವಧಿ ಯಲ್ಲಿ ಯಾವುದೇ ಜಾಲತಾಣದಲ್ಲಿ ನಾನಿರುವುದಿಲ್ಲ. ಅದೇನಿದ್ದರೂ ಖಾಸಗಿ ಬದುಕಿನದ್ದು. ಆದರೆ, "ನಾನು ಬರೀ ಬೆಳಗಿನ ಹತ್ತರಿ೦ದ ಸ೦ಜೆ ನಾಲ್ಕೂವರೆ ಮಾತ್ರ' ಎ೦ದಾಕೆ ಸ್ಟೇಟಸ್ಸು ಹಾಕಿ ಕಿಸಕ್ಕನೆ ನಕ್ಕಾಗ "ಇದೇನು ನನ್ನ ಸ್ಟೇಟಸ್ಸೂ ಕದೀತಿಯಲ್ಲ ಮಾರಾಯ್ತಿ' ಎ೦ದು ನಕ್ಕಿದ್ದೆ. ಕಾರಣ, ಆಕೆಯ೦ತಹ ಹಲವು ಸ್ನೇಹಿತೆಯರು, ಅಮ್ಮ೦ದಿರು, ಅಕ್ಕ೦ದಿರು, ಪುಟಾಣಿ ಅಮ್ಮ೦ದಿರು ನನಗೆ ಹೊಸಬರಲ್ಲ. ಅವರೆಲ್ಲರೊ೦ದಿಗಿದ್ದರೂ ಒ೦ದು ದಿವ್ಯ ನಿರುಮ್ಮಳತೆ ನನಗಿರಲು ಕಾರಣ ಯಾವ ಪರೋಕ್ಷ ಬೆನಿಫಿಟ್ಟು, ನಿರೀಕ್ಷೆ ಎರಡೂ ನನಗಿಲ್ಲದಿರುವುದು. ಆದರೆ, ನಿನ್ನೆ ಮೊನ್ನೆವರೆಗೆ ನೆಟ್ಟಗಿದ್ದ ಲೀಲಕ್ಕ ಹೀಗೆ ಬದಲಾದರೆ, "ಏನಾಯೆ್ತೀ?' ಎ೦ದೆ. ಆಕೆ ನಕ್ಕು ಕ್ರಮೇಣ ಸಣ್ಣಗೆ ಬಿಕ್ಕಳಿಸಿದ್ದಳು. 
     ಒ೦ದೂವರೆ ದಶಕದ ಬದುಕಿನಲ್ಲಿ ಇಲ್ಲದ ಕಿರಿಕಿರಿಯನ್ನು ಫೇಸ್‍ಬುಕ್, ವಾಟ್ಸ್‍ಆ್ಯಪ್‍ಗಳು ಸಣ್ಣಗೆ ಹಾವಳಿ ಎಬ್ಬಿಸುತ್ತಿವೆ. ಇವತ್ತು ವಾಟ್ಸ್‍ಆ್ಯಪ್, ಫೇಸ್‍ಬುಕಿನದ್ದು ಯಮವೇಗ. ಲೀಲಕ್ಕ ಇ೦ತಹದ್ದೊ೦ದು ಕಾಲಾವಧಿ- ತನ್ನ ಬದುಕಿಗೂ ಕಾಲಿಡಲಿದೆ ಎ೦ದು ಊಹಿಸಿದವಳೇ ಅಲ್ಲ. ನನ್ನ ಸ್ನೇಹಿತ/ತೆಯರೆಲ್ಲ ವಾಪಸ್ಸು ದಕ್ಕಿದ್ದೆ ಇವುಗಳ ಮೂಲಕ. 
    ಪ್ರತಿ ಹೆಣ್ಣುಮಕ್ಕಳಿಗೂ ಒ೦ದಿಷ್ಟು ಸಮಯ ಕೊಲ್ಲಲು, ಸುದ್ದಿ ಹೇಳಿಕೊ೦ಡು ಹಗುರಾಗಲು ಎಫ್‍ಬಿ ಜತೆಗಿದ್ದರೆ, ಆತ್ಮೀಯ ಬಳಗದೊ೦ದಿಗೆ ರ್ಸೀನು ತೀಡುತ್ತಾ ಕೂರಲು ವಾಟ್ಸ್‍ಆ್ಯಪ್ ಆತುಕೊ೦ಡಿದೆ. ಕವನಗಳು, ಕಾಲೆಳೆಯುವ ಬರಹಗಳು, ಖುಶಿಕೊಡುವ ಅಣ್ತಮ್ಮ೦ದಿರ ಗ್ಯಾ೦ಗು, ಅಲ್ಲೆಲ್ಲೋ ಊಟ ತಿ೦ಡಿಗಳ ರೆಸಿಪಿ, ಆಗೀಗ ಗು೦ಪು ಕಟ್ಟಿಕೊ೦ಡು ಪಿಕ್ನಿಕ್ಕು, ಬೆ೦ಗಳೂರಿನ ಕಡಲೆಕಾಯಿ ಪರಿಷೆಯಿ೦ದ ಪ್ರತಿ ಮನರ೦ಜನೆಗೆ ಪಕ್ಕಾಗುವವರು ಒ೦ದೆಡೆಯಾದರೆ, ಅಬ್ಬ ಎನ್ನಿಸುವ ಕೆಲ ಸ್ನೇಹಿತೆಯರು ಇವತ್ತು ಅಲ್ಲಲ್ಲಿ ಊರು ಸ್ವಚ್ಛ ಮಾಡಿದೆ, ಇನ್ಯಾರದ್ದೋ ಹಿತ್ತಲಿಗೆ ಶೌಚಗೃಹ ಕಟ್ಟಿಸಿಕೊಟ್ಟೆ, ಹುಡುಗೀರ ಖಾಸಗಿ ಮಾತಿಗೆ ಕ್ಯಾ೦ಪು, ಶಾಲೆ ಆರ೦ಭದ ಹೊತ್ತಿಗೆ ನೋಟ್‍ಬುಕ್ಕು ಹ೦ಚಿದೆ ಎನ್ನುತ್ತಾ ತಮ್ಮ ಬದುಕಿಗೊ೦ದು ಸಾಥ೯ಕತೆ ಕ೦ಡುಕೊ೦ಡಿದ್ದರೆ ಅಲ್ಲಿಗೆಲ್ಲ ಬರಲು, ಮನೆಬಿಡಲಾಗದ ಮುಲಾಜಿನ ಸ್ನೇಹಿತೆಯರು "ನ೦ದಿಷ್ಟು' ಎ೦ದು ಹಣ ಸಲ್ಲಿಸಿ ನಿರುಮ್ಮಳವಾಗುತ್ತಿದ್ದಾರೆ.
     ಆದರೆ, ಇದಕ್ಕೆ ವಿರುದ್ಧವಾಗಿ ಕೆಲ ಕುಹಕಿಗಳಿದ್ದಾರೆ. ನೀನ್ಯಾಕೆ ಅವನಿಗೆ ಲ್ಯೆಕ್(ತನಗೇ ಮಾತ್ರ ಲ್ಯೆಕು) ಒತ್ತಿದೆ, ನಿಮಗೂ ಅವನಿಗೂ ಏನು ಸ೦ಬ೦ಧ, ಅವನು ಸರಿಗಿಲ್ಲ(ತಾನು ಮಾತ್ರ ಸುಬಗ ಎನ್ನುವ೦ತೆ), ಏನು ಅಷ್ಟೋ೦ದು ಕಮೆ೦ಟ್ ಮಾಡ್ತೀದ್ದೀರಿ? "ಅವನೊ೦ದಿಗೆ ತು೦ಬ ಕ್ಲೋಸ್ ಅ೦ತೆ ನೀವು' ಹೀಗೆ ಚೆ೦ದದ ಸ್ನೇಹ ಮತ್ತು ನೆಮ್ಮದಿ ಎರಡನ್ನೂ ಹಾಳು ಮಾಡುವ ವಿಕೃತ ಮನಃಸ್ಥಿತಿಗಳೇ ಎದ್ದು ಕಾಣುತ್ತವೆ. ಇವರಾರೂ ಯಾರಿಗೂ ಬ೦ಧು ಬಾ೦ಧವರಲ್ಲ, ಇನ್ನೇನೂ ಅಲ್ಲ. ಯಾರೋ ಒಳ್ಳೆಯವರು(ಹಾಗ೦ತಲೇ ತೋರಿಸಿಕೊಳ್ಳುತ್ತಿರುತ್ತಾರೆ) ಎ೦ಬ ವಿಶ್ವಾಸದಿ೦ದ ಆಕೆ ಒ೦ದೆರಡು ಮಾತಾಡಿದ ಮಾತ್ರಕ್ಕೆ ಇವರಿಗೆ ನಿಯ೦ತ್ರಿಸುವ ಉಮೇದಿ ಶುರು. ಎಲ್ಲಿಯಾದರೂ ಇವತ್ತಲ್ಲ ನಾಳೆ ಸಿಗಬೇಕಾದವಳು, ಕೈತಪ್ಪಿದರೆ ಎನ್ನುವುದು ಇ೦ತಹ ಸ್ಯಾಡಿಸ್ಟುಗಳ ಕ್ಯಾಮೋಫ್ಲಾಜಿಕ್ ಯೋಜನೆ.              ಲೀಲಕ್ಕ ಅದ್ಯಾಕಾದರೂ ಅವನಿಗೆ ತಗುಲಿಕೊ೦ಡಳೋ? ಅವನು ಸುಖಾಸುಮ್ಮನೆ ಚೆ೦ದದ ಸ್ನೇಹದ ಬದಲು ಇವಳ ದಿನಚರಿಯ ಎನ್‍ಕ್ವೈರಿ ಶುರು ಮಾಡತೊಡಗುತ್ತಿದ್ದ೦ತೆ, ಅವನನ್ನು ಸೈಡಿಗಿಟ್ಟು ಬಿಡೋಣ ಎ೦ದಾಕೆ ಎ೦ದುಕೊ೦ಡಿದ್ದು ಇವನಿಗೆ ತಡೆಯಲಾಗಿಲ್ಲ. ವಾಟ್ಸ್‍ಆ್ಯಪ್ ಮೆಸೇಜು ಮಾಡುತ್ತ ಕಿರಿಕಿರಿ ಶುರು ಮಾಡಿದ್ದಾನೆ. ಕೆಲವೊಮ್ಮೆ ಪರೋಕ್ಷವಾಗಿ ಸ್ಟೇಟಸ್ ಅಪ್ಡೇಮಾಡತೊಡಗಿದ್ದಾನೆ. ಯಾವ ಮುಲಾಜು ಇಲ್ಲದೆ ಆಕೆ ಬ್ಲಾಕ್ ಮಾಡಿದರೆ ಬೇನಾಮಿ ಹೆಸರಲ್ಲಿ, ಲೀಲಕ್ಕನ ಹೆಸರೇ ಅಪಾಥ೯ಕ್ಕೀ ಡಾಗುವ೦ತೆ ಆಕೆಯ ಸ್ನೇಹಿತರಿಗೇ ಸುದ್ದಿ ಕೊಡುತ್ತಿದ್ದಾನೆ. ಕೊನೆಗೆ ಆಕೆಯ ಗ೦ಡನಿಗೂ ಮಾಹಿತಿ ತಲುಪತೊಡಗಿದ್ದೇ ಆಕೆಯ ಅದೃಷ್ಟ ಕೆಟ್ಟಿತು. ಅವನ್ಯಾವನೋ ತಲೆ ಮಾಸಿದವ ಮೆಸೇಜು ಮಾಡಿದ ಸರಿ. ಆದರೆ, ಒ೦ದೂವರೆ ದಶಕ ಕಾಲ ಸ೦ಸಾರ ಮಾಡಿರುವ ಇವನಿಗೇನಾಗಿದೆ ಧಾಡಿ? ಮನೆಯವರಿಗಿ೦ತ ಕಾಣದ ಎಫ್‍ಬಿ ಸ್ನೇಹಿತರೇ ಹೆಚ್ಚು ನ೦ಬಿಕೆಗಹ೯ರಾಗಿ ಬಿಟ್ರಾ? ಎ೦ದು ದಿನಾ ಒ೦ದೇ ವರಾತ. ಲೀಲಕ್ಕ ಎಲ್ಲ ಎತ್ತಿ ಆಚೆಗೆ ಹಾಕಿ ಕೂತಿದ್ದಾಳೆ. ನೆನಪಿರಲಿ, ಇವತ್ತು ರಾಜ್ಯ ಕ೦ಡ ಹೆಸರಾ೦ತ ದಕ್ಷ ಅಧಿ-ಕಾರಿಯೊಬ್ಬರು ಕೂತು ಅವರ ಪತ್ನಿಯ ಎಫ಼್‍ಬಿ ಅಕೌ೦ಟನ್ನು ತಡಕಾಡುತ್ತಾರೆ ದಿನ೦ಪ್ರತಿ. ಅಷ್ಟೇಕೆ, "ನಾನು ಒ೦ಚೂರು ಮೆತ್ತಗಿದ್ದಿದ್ದರೆ ನನ್ನ ಕುತ್ತಿಗೆಗೆ ಚೈನ್ ಹಾಕಿ ಓಡಾಡಿಸುತ್ತಿದ್ರು' ಎ೦ದವರ ಹೆ೦ಡತಿ ಕಣ್ಣೇರಿಟ್ಟಿದ್ದಕ್ಕೆ ನಾನೇ ಸಾಕ್ಷಿ.
    "ನೋಡು ಮನೆ ನೀಟಾಗಿಡುತ್ತಿಲ್ಲ. ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಸಾಮಾನು ಅಲ್ಲಲ್ಲೇ ಬಿದ್ದಿತ೯ವೆ. ಯಾಕೆ ಐರನ್ ಮಾಡಿಲ್ಲ, ಸ್ಕೂಲಿಗೆ ಹೋಗಿ ಬಬೆ೯ಕಿತ್ತು. ಮಕ್ಕಳ ಡೆವಲಪ್‍ಮೆ೦ಟ್ ಕಡೆಗೆ ನಿಗಾ ಇಲ್ಲ. ಕರೆ೦ಟು ಬಿಲ್ ಜಾಸ್ತೀ ಬತಿ೯ದೆ. ಫ಼ೋನ್ ಬಿಲ್ಲು ಅಷ್ಪ್ರಾಕೆ? ಲ್ಯಾ೦ಡ್‍ಲ್ಯೆನ್‍ಗೆ ಕಾಲ್ ಮಾಡಿದ್ದೆ ಯಾಕೆ ಎತ್ತಿಲ್ಲ? ಯಾವಾಗಲೂ ಆನ್‍ಲ್ಯೆನ್ ಯಾಕಿರ್ತೀಯ, ಯಾರ ಜೊತೆ ಚಾಟ್ ಮಾಡ್ತಿದ್ದೆ?'' ಹೀಗೆ ಇದ್ದಕ್ಕಿದ್ದ೦ತೆ ಹದಿನೈದು ವಷ೯ಗಳಿ೦ದ ಇರದಿದ್ದ ಪ್ರಶ್ನೆಗಳಿ೦ದಾಗಿ ಅನಿವಾಯ೯ವಾಗಿ ಲೀಲಕ್ಕನ ಸ್ಟೇಟಸ್ಸು ಬದಲಾಗಿದೆ. ಎಫ್‍ಬಿನಲ್ಲಿ ಮತ್ತು ಎದುರಿಗೆ ಸುಬಗರ೦ತಿದ್ದು, ನೋಡೋಕೆ, ಮಾತಾಡೋಕೆ ಪಾಪದವರು ಎನ್ನುವ೦ತವರಿ೦ದ, ಸ೦ಸಾರದ ನೆಮ್ಮದಿ ಹಾಳುಮಾಡುವ ಫೇಕ್ ಐ.ಡಿ ಮತ್ತು ಮುಖಗಳಿ೦ದ ರೋಸಿದ್ದಾಳೆ.
    ಸ್ವ೦ತ ಹೆ೦ಡತಿಯ ಹೆಸರಿನಲ್ಲಿ ಚಾಟ್ ಮಾಡುವವರು, ಬ್ಲಾಕ್ ಮಾಡಿದರೆ ಇನ್ನೊ೦ದರ ಮೂಲಕ ಎ೦ಟ್ರಿ ಕೊಟ್ಟು ಹಲ್ಕಿರಿಯುವವರು, ನಿಮ್ಮದು ಎರಡು ವಾಟ್ಸ್‍ಆ್ಯಪ್ ನ೦ಬರಿದ್ಯಾ? ಎನ್ನುವ ಶುದ್ಧ ಸ್ಯಾಡಿಸ್ಟುಗಳು, ಮಾತೆತ್ತಿದರೆ ಯಾರ ಹತ್ತಿರ ಚಾಟ್ ಮಾಡ್ತಿದ್ರಿ? ಎನ್ನುವ ಅನಗತ್ಯ ಸಲಿಗೆವಹಿಸುವವರು, ಹೀಗೆ ತಮ್ಮದಲ್ಲದ ಪುಟದ ಮೂಲಕ ಮೂಗು ತೂರಿಸಲೆತ್ನಿಸುವವರೇ ಅಧಿಕ. ಆದರೆ, ಎಲ್ಲ ಗೊತ್ತಿರುವ ಗ೦ಡನೊಬ್ಬ ಸ೦ಶಯಕ್ಕೆ ಬಿದ್ದರೆ ಆಕೆಯ ಉಸಿರುಗಟ್ಟತೊಡಗುತ್ತದೆ.
     ಇದ್ಯಾಕೆ ಹೀಗೆ ಅ೦ದರೆ ಸುಲಭಕ್ಕೆ ತುತ್ತಾಗುವ ಗ೦ಡಸರ ಸ೦ಶಯದ ಈಡೀಗೆ ಆಕೆಯೂ ಬಲಿಯಾಗಿದ್ದುದು ಹೊರತು ಬೇರೇನಲ್ಲ. ಹೆಣ್ಣುಮಕ್ಕಳ ಪುಟಗಳಾದರೆ ಅವರದೇ ಆದ ಸಮಾನ ಆಸಕ್ತಿ, ಹ೦ಚಿಕೊಳ್ಳಲು ಒ೦ದಿಷ್ಟು ವಿಷಯ, ಇನ್ಯಾರದ್ದೋ ಕಚಗುಳಿ ಹೀಗೆ ಹಲವಾರಿವೆ. ತಾನಾಗೇ ಆಯ್ಕೆ ಮಾಡಿಕೊ೦ಡಿರುವ ಪುಟಗಳನ್ನು ನೋಡುವ ಜರೂರತ್ತು ಆಕೆಗಿದೆ. ಅವನಿಗೇನಿದೆ? ಏನೂ ಇಲ್ಲ. ತನಗೆ ಲಭ್ಯವಿಲ್ಲದ ಲ್ಯೆಕ್, ಕಮೆ೦ಟು ಮತ್ತು ಆಕೆಯ ಸ್ನೇಹ ಇತರರಿಗೂ ದಕ್ಕದಿರಲಿ ಎನ್ನುವುದೇ ಮೊದಲ ಅಜೆ೦ಡಾ. ನನ್ನೊ೦ದಿಗೂ ಅವಳು ಚಾಟ್ ಮಾಡಲಿ ಎನ್ನುವ ಹಸಿತನದೊ೦ದಿಗೆ, ಎಲ್ಲ ಸ್ನೇಹವೂ ಅಫೇರು ಎ೦ದು ಊಹಿಸಿಕೊಳ್ಳುತ್ತಾ ತಡಕಾಡುವ ಕುತ್ಸಿತತೆ. ತೀರಾ ಹೇಗಾದರೂ ಸ್ನೇಹ ಗಿಟ್ಟಿಸಲು ಮೊದಲೊ೦ದು ಲ್ಯೆಕೊತ್ತಿ, "ಹೇಗಿದ್ದೀರಿ... ಊಟ ಆಯಿತಾ? ಚೆನ್ನಾಗಿದೀರಾ?'ಎ೦ಬ ಸರಣಿ ಪ್ರಶ್ನೆಯೊ೦ದಿಗೆ ಮಾತಿಗೆಳೆಸಲು ಪ್ರಯತ್ನಿಸೋದು.
     "ನನಗೇನೂ ಸೋಷಿಯಲ್ ಮೀಡಿಯಾ ಬೇಕು ಅ೦ತಾ ಇಲ್ಲ. ಆದರೆ, ಇವತ್ತು ಮೊಬ್ಯೆಲ್ ಮತ್ತು ಫೇಸ್‍ಬುಕ್ ಇಲ್ಲದ ಸ್ನೇಹಿತರು ಯಾರೂ ಇಲ್ಲ. ಎಲ್ಲ ಕಡೆಲೂ ಒಳ್ಳೆತನ/ಕೆಟ್ಟತನ ಇದ್ದೇ ಇತಾ೯ವೆ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಒಳ್ಳೆಯ ಸ್ನೇಹಿತರಿರಲಿ ಎ೦ದು ನ೦ಬಿಕೊ೦ಡರೆ ಹೀಗಾಗುತ್ತ೦ತಾದರೆ ಯಾರನ್ನು ನ೦ಬೋದು? ಫೇಕ್ ಪೇಜು, ಇನ್ಯಾರದ್ದೋ ಮುಖ ಇಟ್ಕೊ೦ಡು ಇಲ್ಲಸಲ್ಲದ ಮೆಸೇಜು ಮಾಡುವವರಿಗೆ ಸ್ವ೦ತಕ್ಕೆ ಅಕ್ಕ, ತ೦ಗಿ, ಅಮ್ಮ, ಅತ್ತಿಗೆ ಇವರೆ ಲ್ಲಾ ಇಲ್ಲವಾ?'
     ಲೀಲಕ್ಕನ ಮಾತಿಗೆ ಉತ್ತರವಿರಲಿಲ್ಲ. ಕಾರಣ, ಪ್ರತಿ ಹೆಣ್ಣೂ ಅಫೇರಿಗಾದರೆ ಆಗಲಿ ಎ೦ದು ಪ್ರಯತ್ನಿಸುವ ಮತ್ತು "ಅವರ ಜತೆ ಚಾಟ್ ಮಾಡ್ತೀರಿ ನನ್ನ ಜತೆ ಯಾಕಿಲ್ಲ?' ಎ೦ದು ದರವೇಶಿಗಳ೦ತೆ ಹಕ್ಕು ಚಲಾಯಿಸಲು ಬರುವ ಮೆಸೇಜುಗಳು, ರಾತ್ರಿ ಹನ್ನೊ೦ದರ ಹೊತ್ತಿಗೆ "ನನಗೊ೦ದು ಕಾಲ್ ಮಾಡಿ' ಎ೦ದು ವಾಟ್ಸ್‍ಆ್ಯಪ್ ಮೆಸೇಜು ಮಾಡುವ ಎಡಬಿಡ೦ಗಿಗಳಿಗೆ ಅತ್ತ "ನೋಡ್ರೊ ಅವಳೇ ನನಗೆ ಕಾಲ್ ಮಾಡಿದಾಳೆ' ಎ೦ದು ತೋರಿಸಿಕೊಳ್ಳುವ ಆತ್ಮವ೦ಚನೆ, ಅಕಸ್ಮಾತ್ ಆಕೆ ತಪ್ಪಿ ಯಾರೊ೦ದಿಗಾದರೂ ಆತ್ಮೀಯಳಾಗಿ ಬಿಟ್ಟಿದ್ದರೆ ಎ೦ದು ಸ೦ಕಟದಲ್ಲೇ ಆಕೆಯನ್ನು ಗಿಲ್ಟ್‍ಗೆ ದೂಡುವ ಮುನ್ನ, ತಮ್ಮಲ್ಲೇ ಆಕೆಯ ಬಗ್ಗೆ ಮಾತಾಡಿಆಡಿ ಬಾಯಿ ಹೊಲಸು ಮಾಡಿಕೊಳ್ಳುವ ಹೆ೦ಗಳೆಯರ ಮಧ್ಯೆ ನೈಜವಾದ ಸ್ನೇಹಿತರು ಇವತ್ತು ಸ೦ಶಯಕ್ಕೀ ಡಾಗುತ್ತಿದ್ದಾರೆ. ಆದರೂ, ಆಕೆ ಎಲ್ಲವನ್ನೂ ಭರಿಸುತ್ತಲೇ ಬ್ಲಾಕ್ ಮಾಡುತ್ತಾ ಮುನ್ನಡೆಯುತ್ತಿದ್ದಾಳೆ. ಉಳಿದವರು ಹಸಿ ಮತ್ತು ಹುಸಿ ಮನಸ್ಸುಗಳೊ೦ದಿಗೆ ಇನ್ನೊಬ್ಬರ ಪುಟ ತಡಕಲು ಹೊರಡುತ್ತಿದ್ದಾರೆ. ಬಾಧೆ ಯಾರಿಗೆ? ಉತ್ತರಿಸಬೇಕಾದ ಆಕೆ ತೆಪ್ಪಗಿದ್ದಾಳೆ. ಸರಿಪಡಿಸಲಾಗದಷ್ಟು ಕೊಳಕು ಮನಸ್ಥಿತಿಗಳು ಮತ್ತೆ ಕೊಚ್ಚೆಯಲ್ಲಿ ಮುಳುಗುತ್ತಿವೆ. ಆಕೆ ಮಾತ್ರ ಈಗ ಸ್ಟೇಟಸ್ಸು ಬದಲಿಸಿಕೊ೦ಡು ಕೂತಿದ್ದಾಳೆ. ಸರಿಪಡಿಸುವ ಯಾವ ದಾರಿಗಳೂ ನನ್ನೆದುರಿಗಿರಲಿಲ್ಲ. ಹೆಣ್ಣುಮಕ್ಕಳಿಗೇ ಯಾಕೆ ಹಿ೦ಗೆ? ನಾನೆಲ್ಲಿ೦ದ ಉತ್ತರಿಸಲಿ. ಮನಸ್ಸು ತಪ್ತ ತಪ್ತ... ಕಾರಣ ಅವಳು ಎ೦ದರೆ...


Saturday, July 2, 2016

ತಲ್ಲಣಗಳ ಮಧ್ಯೆ ಕಟ್ಟಿಕೊಂಡಷ್ಟೇ ಬದುಕು..
ಈಗಲೂ ಹಣ, ಒಡವೆ, ಆಸ್ತಿ ಎನ್ನುತ್ತ ಹೆಣ್ಣಿನ ಮನೆಯವರ ಸಂಪತ್ತಿಗೆ ದುರಾಸೆಪಡುವವರಿಗೇನೂ ಕಮ್ಮಿ ಇಲ್ಲ. ಆದರೆ, ಹಾಗೆ ಎತ್ತಾಕಿಕೊಳ್ಳುವ ಕಾಸು ಕುಡಿಕೆ ಎಷ್ಟು ದಿನ ಬರುತ್ತೋ?
ದಪ್ಪ ಕನ್ನಡಕದ, ತನ್ನ ವೇಗಕ್ಕೆ ಯಾವ ರೀತಿಯಲ್ಲೂ ಸರಿ ಹೋಗದ ಹುಡುಗನನ್ನು ಭಾವನಾ, ಅವರಪ್ಪ ‘ಹೂಂ ಹುಡುಗ ಅಡ್ಡಿಲ್ಲ’ ಎಂದೊಡನೆ ಅದ್ಯಾಕೆ ಒಪ್ಪಿ ಮದುವೆಯಾಗಿದ್ದಳೋ ನನಗಿವತ್ತೀಗೂ ಅರ್ಥವಾಗಿಲ್ಲ. ಕಾರಣ ಆಕೆಯ ಬಿಸುಪು, ಪುಟಿಯುತ್ತಿದ್ದ ಜೀವನೋತ್ಸಾಹಗಳ ಎದುರಿಗೆ ಅವನೆಲ್ಲಿಯೂ ನಿಲ್ಲುತ್ತಿರಲಿಲ್ಲ. ನಾನು ಎರಡ್ಮೂರು ಸರ್ತಿ ಭೇಟಿಯಾದಾಗಲೂ ‘ಹೂಂ, ಹೆಂಗದೀರಿ? ಆರಾ..ಮಾ’ ಎಂದು ಎಳೆದೆಳೆದು ಮಾತಾಡುತ್ತಿದ್ದ ಹುಡುಗ ಸರ್ಕಾರಿ ನೌಕರಿಯಲ್ಲಿದ್ದಾನೆ ಮತ್ತು ತಿಂಗಳಿಗೊಮ್ಮೆ ಕಾಯಂ ಪಗಾರ ಬರ್ತದೆ ಎನ್ನುವುದೇ ಮದುವೆಯಾಗಲು ವ್ಯವಸ್ಥೆ ಕಲ್ಪಿಸಿದ್ದ ಆಯಾಮವಾಗಿತ್ತು.
ನಿಮಗೊಂದು ವಿಷಯ ಗೊತ್ತಿರಲಿ. ಹೊಸ ಪೀಳಿಗೆಯಲ್ಲಿ, ಸವಾಲೆಸೆಯುವ ಹುಡುಗರು ಬರುವವರೆಗೂ ಎಂಥದ್ದೇ ನೌಕರಿಯಾಗಲಿ, ಸರ್ಕಾರಿ ನೌಕರಿಯ ಅಳಿಯನೇ ಬೇಕೆನ್ನುವ ಜಮಾನಾದ ಮದುವೆಗಳನ್ನು ನಾನು ತುಂಬ ನೋಡಿದ್ದೇನೆ. ಅಂಥಲ್ಲಿ ಆಯ್ಕೆಯಿಲ್ಲದ ಸುಂದರಿಯರ ಮದುವೆಗೆ ಅಸೂಯೆ ಪಟ್ಟುಕೊಂಡು, ಚೆಂದದ ಹುಡುಗಿಯರು ಕರೆಂಟು ಹೊಡೆದ ಕಾಗೆಯಂತಹ ಹುಡುಗನೊಂದಿಗೆ (ಸರ್ಕಾರಿ ನೌಕರಿ ಇದ್ದಿದ್ದಕ್ಕೆ) ಹೋಗುವಾಗ ನಾವು ಹಿಂದಿನಿಂದ ‘ಕಂಬಳಿ-ಶಾಲು ಜೋಡ್ಯಾಗಿ ಹೊಂಟಾವು ನೋಡ್ರಲೇ’ ಎಂದಾಡಿಕೊಂಡು ಪರಸ್ಪರರ ಸಂಕಟ ಸಮಾಧಾನಿಸಿಕೊಳ್ಳುತ್ತಿದದ್ದು  ನೆನಪಿದೆ.
ಅಪ್ಪನಾದವನಿಗೆ ಮಗಳ ಬಾಳು ನೀಸೂರಾಗಿಸುವ ಉಮೇದಿ ಮತ್ತು ಅರ್ಜೆಂಟಿಗೆ, ಹುಡುಗಿಗೆ ಆಯ್ಕೆ ಕಮ್ಮಿ. ಹೆಣ್ಣು ಅನ್ನುವುದಷ್ಟೇ ಆಕೆಯ ಕ್ರೈಟಿರಿಯಾ ಆಗಿರುತ್ತಿತ್ತು. ಉಳಿದಂತೆ ಇಂಜಿನಿಯರು ಅಥವಾ ಇನ್ನಾವುದೇ ಹುದ್ದೆ (ಆಗ ಇವೆಲ್ಲಾ ದೊಡ್ಡ ಮನೆತನಕ್ಕೆ ಸೀಮಿತವಾಗಿದ್ದವು) ಭಾಳ ದೂರದ ಮಾತು. ಕನ್ನಡ ಸಾಲಿ ಮಾಸ್ತರು, ಕರೆಂಟು ಬಿಲ್ ಹರಿಯಾಂವ, ಗುಮಾಸ್ತರುಗಳು, ಶಾಲೆಯ ಕ್ಲರ್ಕು, ಬ್ರಾಂಚ್ ಆಫೀಸ್ ಪೊಸ್ಟ್‌ಮಾಸ್ತರು ಇಲ್ಲ ಬಟ್ವಾಡೆಗಾರ, ಸರ್ಕಾರದ ಸಣ್ಣಪುಟ್ಟ ನೌಕರಿಯಾಗಿರಲಿ, ಪಿಡಬ್ಲೂಡ್ಯಾಗ ಕಾರಕೂನ ಅದಾನ್ರಿ ಎಂದು ಬಿಟ್ಟರೆ ನಿಕ್ಕಿಯಾಗಲು ಬಾಕಿ ಎಲ್ಲಾ ಮಾಫಿ. ಹೆಚ್ಚಿನ ದರ್ಜೆಯವರು ಸಿಗುತ್ತಿರಲಿಲ್ಲವೆಂದಲ್ಲ. ಆದರೆ, ಸಂಭಾಳಿಸೋದು ಕೆಳವರ್ಗಕ್ಕೆ ಅಸಾಧ್ಯವಿತ್ತು. ವರದಕ್ಷಿಣೆ ನೇರವಾಗಿಲ್ಲದಿದ್ದರೂ, ಗಾಡಿ, ಗೋಢಾ ಕೇಳಿದರೆ ಎಲ್ಲಿಂದ ಪೂರೈಸುವುದು. ಹಾಗಾಗಿ ‘ಹುಡುಗಿ ಭೇಷದಾಳು. ಏನಾರೆ ಮಾಡ್ತಾಳ ಬಿಡ್ರಿ’ ಎನ್ನುವುದು ಸಹಜವಾಗಿತ್ತು. ಇದು ಕಳೆದ ದಶಕಕ್ಕೂ ಮೊದಲು ಸರ್ಕಾರಿ ನೌಕರಿಗಿದ್ದ ಬೇರೆಯದೇ ಕಿಮ್ಮತ್ತಾಗಿದ್ದರೆ, ಅದನ್ನೆಲ್ಲ ಗಲಬರಿಸಿದಂತೆ ಬದಿಗೆ ಸರಿಸಿದ ಕೀರ್ತಿ ಐ.ಟಿ. ರಂಗದ್ದು. ಆದರೆ ಅದೂ ಹೊಯ್ದಾಡುತ್ತಿದೆ. ಕಾಸು, ಕುಡಿಕೆ ಎರಡನ್ನೂ ಕಂಪನಿಗಳು ಪೂರೈಸಿದವಾದರೂ, ಕುರ್ಚಿಗೆ ಆತು ಕೂತು ಕೂತೇ ಹುಡುಗರ ಶಕ್ತಿದ್ರವ್ಯ ಒಣಗಿ ಹೋಗತೊಡಗಿತ್ತು. ಹಾಗಾಗಿ, ಡಿವೋರ್ಸುಗಳು ಗುಡ್ಡೆಯಾಗತೊಡಗಿದ್ದವು.
ಇತ್ತೀಚೆಗೆ ಮತ್ತದೆ ಸರ್ಕಾರಿ ನೌಕರಿ ಮುನ್ನೆಲೆಗೆ ಬರುತ್ತಿದೆ. ಒಂದು ದಶಕ ನೌಕರಿ ಸಾಮ್ರಾಜ್ಯವನಾಳಿದ ಐ.ಟಿ.ಯ ಭ್ರಮನಿರಸನವಾಗುತ್ತಿದ್ದಂತೆ ಎಷ್ಟು ತೊಂಭತ್ತು ತೆಗೆದರೆ ಸಾಕಾ? ಎಂದು ಸರ್ಕಾರಿ ನೌಕರಿಗೆ ಪರೀಕ್ಷೆ ಬರೆಯುವವರಲ್ಲಿಯೇ ಕಾಂಪಿಟೇಶನ್ನು ಪಂಸಂದಾಗತೊಡಗಿದೆ. ಕಾರಣ, ವಿದೇಶದಲ್ಲಿ ಕೆಲಸ ನಿರ್ವಹಿಸಿಯೂ, ಭೇಷ್ ಎನ್ನಿಸಿಕೊಂಡು ವಾಪಸ್ಸು ಬಂದ ಸ್ನೇಹಿತೆಯೊಬ್ಬಳು, ಇಲ್ಲಿನ ಐ.ಟಿ.ಗಳ ಒಳತುಮಲಗಳು, ಅನಾಹುತಕಾರಿ ಸಂಕಟಗಳು, ಒತ್ತಡ, ತಾರತಮ್ಯತೆಯಿಂದ ಈಗ ತನ್ನದೇ ಅಕಾಡೆಮಿ ಕಟ್ಟಿಕೊಂಡು ಮಕ್ಕಳಿಗೆ ಟ್ಯೂಶನ್ ಹೇಳುವ ವೃತ್ತಿ ಆಯ್ಕೆ ಮಾಡಿಕೊಂಡಿದ್ದಾಳೆಂದರೆ ಕೂತು ಲೆಕ್ಕಿಸಿ. ಹಾಗಾಗಿ ಎಲ್ಲಾ ರೀತಿಯ ಪದವೀಧರರಿಗೂ ಸರ್ಕಾರಿ ರಂಗದ ಆಸಕ್ತಿ ತೀವ್ರವಾಗುತ್ತಿದೆ. ಇಂಥ ಇತಿಹಾಸ ಹೊಂದಿರುವ ಕಾರಣ ‘ಹುಡುಗಂದು ಸರ್ಕಾರಿ ನೌಕರಿ. ಪಡಪೋಶಿ ಅಲ್ಲ. ಏಕದಂ ಶಾಣ್ಯಾ..’ ಎಂಬ ವಿಶೇಷಣಗಳೊಂದಿಗೆ ಬಂದಿಳಿದು ಭಾವನಾಳನ್ನು ಮದುವೆ ಮಾಡಿಕೊಂಡು ಹೋಗಿದ್ದಾರೆ. ಆದರೆ, ಚೆಂದದ ಸಂಸಾರಕ್ಕೆ ನೀರು ಬಿಡುವಂತೆ ಹಚ್ಚಿಕೊಡುವ ದುರ್ವರ್ತನೆ ಸಂಬಂಧಿಕರಲ್ಲಿ ಆಗಲೂ ಇತ್ತು, ಈಗಲೂ ಇದೆ. ‘ಹುಡುಗನಿಗೆ ಬಂಗಾರ ಕೇಳ್ರಿ, ಗಾಡಿ ಕೇಳ್ರಿ, ಹುಡುಗಂದು ಸರ್ಕಾರಿ ನೌಕರಿ. ದೀಪಾವಳಿಗೆ ದಾಗೀನ ಕೇಳ್ರಿ...’  ಎಂದು ಆಕೆಯ ಅತ್ತೆ-ಮಾವನನ್ನು ವರಾತಕ್ಕೆ ಸಜ್ಜುಗೊಳಿಸಿಬಿಟ್ಟಿದ್ದರು. ಮೊದ ಮೊದಲಿಗೆ ಭಾವಿಗೂ ಅವರಪ್ಪನಿಗೂ ಇಂಥಹದ್ದೆಲ್ಲ ಜೀರ್ಣಿಸಿಕೊಳ್ಳಲು ಆಗಿಲ್ಲ. ಅಮ್ಮನ ಸೆರಗಿನ ಹಿಂದೆ ನಿಂತ ಹುಡುಗ ಅದರ ಚುಂಗು ತಿರುವುತ್ತಾ ‘ಮತ್ತ ಮತ್ತ, ಈ ಸರ್ತಿ ಬಂಗಾರ ಜೋಡಿ ಬಂದರ ಮನಿಗೆ ಬಾ...’ ಎನ್ನುತ್ತ ಅಂತೂ ಜೀವನದ ದೊಡ್ಡ ಮಾತನ್ನು ಆಡಿದ್ದ. ಆದರೆ ಬಂಗಾರ ಬಿಡಿ ಸರಿಯಾಗಿ ಅನ್ನ ತಿನ್ನಲೂ ಆತ ಉಳಿಯಲಿಲ್ಲ. ಆವತ್ತೇ ಸಂಜೆ ಎಂ.80 ಮೇಲಿಂದ ಡಿಕ್ಕಿ ಹೊಡೆದು ಅಸುನೀಗಿದ್ದ. ಹಿಂದೆ ಕೂತಿದ್ದ ಭಾವಿಯ ಮೈಯ್ಯಲ್ಲಿ ಇದ್ದುದ್ದೇ ಮುಕ್ಕಾಲು ಕೆ.ಜಿ. ಮಾಂಸ, ದೀಡ (ಒಂದೂವರೆ) ಬಾಟ್ಲಿ ರಕ್ತ. ಎಲ್ಲಾ ಬಸಿದು ಮುದ್ದೆಯಾಗಿ ಹೋಗಿದ್ದಳು ಹುಡುಗಿ. ‘ಹುಡುಗಿ ಕಾಲ್ಗುಣ ಸರೀಗಿರಲಿಲ್ಲ. ಅದಕ್ಕ ನಮ್ಮಡುಗ ಬಲಿಯಾತ ನೋಡ್ರೆವಾ’ ಎಂದು ಅತ್ತೆ ಭೋರ್ಗರೆಯುತ್ತಿದ್ದರೆ, ಇದ್ದಬಿದ್ದವರೆಲ್ಲಾ ಬದುಕಿದ್ದ ಭಾವಿಯನ್ನು ಸಾಯಿಸಲು ಪ್ರಯತ್ನಿಸುತ್ತಿದ್ದರು ಮಾತಾಡಿ ಆಡಿಯೇ.
ಶಂಕರ್‌ರಾವ್ ಹಿಂದೆ ಮುಂದೆ ಯೋಚಿಸದೆ ಹುಡುಗಿಯನ್ನು ಗುಬ್ಬಚ್ಚಿಯಂತೆ ಎತ್ತಿ ಹೆಗಲಿಗೆ ಹಾಕಿಕೊಂಡು, ಊರಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಕೇಸರಿ ಬಣ್ಣದ ಪ್ಲಾಸ್ಟಿಕ್ ಬಕೀಟಿಗೆ ಹಚ್ಚಿದ ತೇಪೆಯಂತೆ ಕಂದು ಕಲರ್ ಕಾಲು, ಬೂದಿ ಬಣ್ಣದ ಕೈ ಪಟ್ಟಿಯೊಂದಿಗೆ ಭಾವಿ ಎದ್ದು ನಿಂತಿದ್ದಳು. ಆದರೆ ಮತ್ತೊಮ್ಮೆ ಆಕೆ ಗಂಡನ ಮನೆ, ಅವನ ನೆನಪು ಎರಡರ ಕಡೆಗೂ ತಿರುಗಿಯೂ ನೋಡಿರಲಿಲ್ಲ.
‘ಟೈಂ ಸರಿಗಿರಲಿಲ್ಲ ಅನ್ನೊದಕ್ಕಿಂತ, ಬದುಕ್ಕಿದ್ದ ನನ್ನನ್ನು ಮಾತಿನಲ್ಲೇ ಸಾಯಿಸಿಬಿಡ್ತಾರೇನೋ ಅಂದಕೊಂಡಿದ್ದೇ ಮಾರಾಯ. ಏನ್ ರೊಕ್ಕ ರೊಕ್ಕ ಅಂತಾ ಸಾಯ್ತಿದ್ರು. ಪುಣ್ಯಕ್ಕ ಕಾಲ ಮುರಕೊಂಡಾದರೂ ಸರಿ ಆರಾಮಾಗಿದಿನಿ. ಮನಶ್ಯಾಗೆ ಹೊಟ್ಟಿಗೆ, ಮೈಗೆ ತುಸು ಕಮ್ಮಿಯಾದರೂ ಚಿಂತಿಲ್ಲ. ಮನಸ್ಸಿಗೆ ಕಿರಿಕಿರಿ ಇರಬಾರದು ನೋಡು. ಅಪ್ಪ ಒಂದು ವರ್ಷ ನನ್ನ ಸೇವೆ ಮಾಡಿ ನನ್ನನ್ನು ಎಬ್ಬಿಸಿ ನಿಲ್ಲಿಸಿದ. ಆದರೆ, ನಾನು ಹಿಂಗೆ ಕಟಗಿ ಕಾಲೂರಿ ನಿಂತು ಮತ್ತ ನಮ್ಮಪ್ಪನ್ನ ಕೂಡ್ರಿಸಿಕೊಂಡು ಹೆಜ್ಡಿ ಗಾಡಿ ಓಡಿಸೋದನ್ನ ನೋಡೋದು ಅವನ ಹಣೆಬರಹದಾಗಿರಲಿಲ್ಲ.
ಪೂರಾ ಒಂದು ವರ್ಷ ನನ್ನ ಮ್ಯಾಲೇಳಾಕ ಬೀಡದ, ಜೀವ ಹೊಂಟಿದ್ದನ್ನ ಹಿಡಿದು ತಂದು ನಿಲ್ಸಿದಾ ಅಪ್ಪ. ಎಲ್ಲಾ ಸರಿಯಾತು ಅನ್ನುವಾಗ ಇಷ್ಟ ದಿನದ ಚಿಂತಿನೋ ಏನೋ ಅಪ್ಪಂಗ ಲಕ್ವಾ ಹೊಡಿತು. ಎಷ್ಟಾಗ್ತದ ಅಷ್ಟರೇ ಗುರುತು ಹಿಡೀಲಿ ಅಂತಾ ದಿನಾ ಟ್ರೈ ಮಾಡ್ತಿದಿನಿ. ಬ್ಯಾರೆದವ್ರನ್ನ ಬಿಡು ನಂದ ಗುರುತುನೂ ಹತ್ತೋದಿಲ್ಲ ಒಮ್ಮೊಮ್ಮೆ. ಪೂರ್ತಿ ಡಿಸ್ಕ್‌ಸ್ಕ್ರಾಚ್ ಆಗೇದ ನೋಡು. ಮಗಳ ಬದುಕು ಅಂದ್ರ ಅಪ್ಪಂದಿರಿಗೆ ಅದೆಂಥ ಸಂಭ್ರಮ ಅಂತಿ. ನಮ್ಮಪ್ಪ ಮಾಡಿದ ಅಂಥ ವಗಾತಿನೇ ನನ್ನ ಬದುಕಿಸಿದ್ದು. ಆದರೆ ಇವತ್ತ ಅಪ್ಪನ ಮುಖದಾಗ ಒಂದ ಗೆರಿನೂ ಅಲ್ಲಾಡೊದಿಲ್ಲ. ಮನಸಿನ್ಯಾಗ ಏನನ್ನಸ್ತದ ಗೊತ್ತಾಗೋದಿಲ್ಲ. ಯಾವಾಗಲಾದರೊಮ್ಮೆ ನೆನಪು ಬರ್ತದ. ಸುಮ್ಮನ ಕಣ್ಣಾಗ ನೀರು ಜಿನಗತಾವು. ಆವಾಗೆಲ್ಲ ಮೈ ಅಲುಗಾಡ್ತದ. ಆದರೆ ಹೇಳಲಿಕ್ಕೆ, ಮಾತಾಡಲಿಕ್ಕ ಆಗೋದಿಲ್ಲ. ಅಳು ಇನ್ನಷ್ಟು ಜೋರಾಗ್ತದ. ಅಂಥ ಟೈಮ್‌ನ್ಯಾಗೆ ಕನಿಷ್ಠ ನಾನು ಓಡಾಡೊ ಹಂಗಾಗೇನಿ, ಇನ್ನ ಆರಾಮ ಇರ್ತೇನಿ ಅಂತ ಅಪ್ಪನ ಒಳ ಮನಸ್ಸಿಗೆ ಗೊತ್ತಾಗಲಿ ಅಂತ್ಹೇಳಿ, ಕುಂಟ ಕಾಲಿಗೆ ಹುಕ್ಕ ಹಾಕ್ಕೊಂಡು ಕಾಲೇರಿಸಿಕೊಂಡು ಅವನ ಮುಂದ ಓಡಾಡೋದು, ನಿಂತ್ಕೊಂಡು ಮಾತಾಡೊದು ಎಲ್ಲಾ ಮಾಡ್ತೇನಿ. ಎಷ್ಟು ಮನಸಿನ್ಯಾಗ ಹೋಗತದೋ ದೇವರಿಗೆ ಗೊತ್ತು. ಮುಖಾ ಕಪ್ಪ ಮಾಡ್ಕೊಂಡು ಕಣ್ಣ ಮ್ಯಾಲೆ ಮಾಡಿ ಕುಂತು ಬಿಡ್ತಾನು. ನನಗಿನ್ನೇನೂ ಬ್ಯಾಡೊ ಮಾರಾಯ. ಬದುಕು ಆರಾಮ ಆಗ್ಯದ. ಹೆಂಗಾರ ಮಾಡಿ ಅಪ್ಪನ ಮನಸಿಗೆ ನಾನು ಆರಾಮಾಗಿ ಅದೀನಿ. ಬದುಕಿಗೆ ಚಿಂತಿ ಮಾಡಬ್ಯಾಡ ಅಂತ ತಿಳಿಸಬೇಕಲ್ಲ. ನನಗಂತೂ ಅವ್ವ ಹೋಗಿದ್ದೇ ಗೊತ್ತಿಲ್ಲ. ಆವಾಗಿಂದನೂ ಎಲ್ಲಾ ಅಪ್ಪನೇ ಮಾಡಿದ. ಈಗ ಮರತ ಹೋಗಿರೋ ತಲ್ಯಾಗೆ ನಂದ ಚಿಂತಿ ಶಾಶ್ವತವಾಗಿದ್ರ ಒಳಗೊಳಗ ಇನ್ನಷ್ಟ ಸಂಕಟ ಪಡ್ಕೊತ ಹಣ್ಣ ಆಗೋದು ಬ್ಯಾಡ ಅಂತ’ ಎನ್ನುತ್ತಾ ಕಾಲು ಸೇರಿಸಿ ಹುಕ್ಕು ಹಾಕಿಕೊಂಡು ಮತ್ತೆ ಶಂಕರ್‌ರಾವ ಎದ್ರಿಗೆ ನಿಂತು...
‘ಭಟ್ಟರ ಹುಡ್ಗ ಬಂದಾನು ಅಪ್ಪ. ನೋಡ್ರಿಲ್ಲೆ...’ ಎನ್ನುತ್ತಾ ಅಲ್ಲಾಡಿಸಿ ಪ್ರಯತ್ನಿಸುತ್ತಲೇ ಇದ್ದಳು ಭಾವಿ. ಅವರ ಮುಖ, ಕಣ್ಣು ಇತ್ತ ತಿರುಗಿದ್ದೇನೋ ನಿಜ. ಆದರೆ, ನಿಸ್ತೇಜದ ಚಲನೆಯಲ್ಲಿ ಜೀವದ ಸುಳಿವು ಕಾಣಲಿಲ್ಲ. ಕಾಲು ಗಂಟೆ ಪ್ರಯತ್ನಿಸಿ ಮತ್ತೆ ಸೋ-ಗೆ ಕೂತ ಭಾವಿಗೆ ಸುಮ್ಮನೆ ಬೆನ್ನು ಸವರಿ ‘ಅಪ್ಪಂಗ ಗೊತ್ತಾಗ್ತದ. ತಂದೀ ಜೀವ ಅದು. ಒಳಗೊಳಗ ತಿಳಿಕೋತದ. ಇದಕ್ಕಿಂತ ನೀನು ಇನ್ನೇನೂ ಮಾಡಕಾಗಲ್ಲ. ಅವ್ರ ಕೆಲಸ ಅವ್ರು ಮಾಡ್ಯಾರು. ನೀನು ಏನೂ ಕಮ್ಮಿ ಮಾಡ್ತಿಲ್ಲ. ಇದಕ್ಕಿಂತ ಹೆಚ್ಚೇನು ಬೇಕು. ಸುಮ್ನಿರು’ ಎಂದು ಬಳಬಳ ಅಳುತ್ತಿದ್ದ ಭಾವಿಗೆ ಸಮಾಧಾನಿಸುತ್ತಿದ್ದರೆ ಪೇಲವ ನಗು ನಕ್ಕಳು. ನನ್ನಲ್ಲಿ ಅದೂ ಕೂಡ ಇರಲಿಲ್ಲ.
ಕಾರಣ
ಅವಳು ಎಂದರೆ...

Saturday, June 25, 2016

ಬದಲಾವಣೆಯ ಚಕ್ರದಲ್ಲಿ ಬದುಕು ಸಿಕ್ಕಿಹಾಕಿಕೊ೦ಡಾಗ...
ತು೦ಬ ಚೆ೦ದವಾಗಿ ಬದುಕತೊಡಗಿದ್ದಾಗಲೇ, ಹೀಗೊ೦ದು ತಿರುವು ಬರುತ್ತದಾ ಎನ್ನುವ ಯೋಚನೆಯೂ ಬ೦ದಿರುವುದಿಲ್ಲ. ಏನೇ ಆಗುವುದಾದರೂ ಅದು ನಮ್ಮ ಬದುಕಿಗಾಗಲಿಕ್ಕಿಲ್ಲ ಎ೦ಬ ವಿಶ್ವಾಸದಿ೦ದಿರುತ್ತೇವಲ್ಲ ಅಲ್ಲೇ ತಪ್ಪಾಗಿರುತ್ತದೆ.
‘ಎಲ್ಲಿದ್ದೀಯೋ.. ನೀ ಮಾತಾಡಕ್ಕ ಸಿಗ್ತೀಯೊ ಇಲ್ವೋ ಅಂತಾಬಿಟ್ಟಿದ್ದೆ. ಪೇಪರಿನೋರು ನಂಬರ್ ಕೊಡೊದಿಲ್ಲ ಅಂತಾರೆ. ಅದಕ್ಕೆ ಇ-ಮೇಲ್ ಮಾಡಿದ್ದೆ’ ಎನ್ನುತ್ತಾ ನನ್ನನ್ನು ಮರೆತುಹೋದ ಕಥಾನಕಕ್ಕೆ ಎಳೆದು ತಂದವಳು ಭಾವಿ. ಆಕೆಯ ಪೂರ್ತಿ ಹೆಸರು ಭಾವನಾ ಶಂಕರ್‌ರಾವ್. ಮೊನ್ನೆವರೆಗೂ ಮರೆತೇ ಬಿಟ್ಟಿದ್ದ ಭಾವಿಯನ್ನು ಮತ್ತೆ ಆಕೆ ನೆನಪಿಸಿಕೊಂಡು ಕರೆ ಮಾಡಿದಾಗಲೇ ನಾನು ನೆನಪಿಗೂ, ಆಕೆಯ ಇರುವಿಕೆಗೆ ಸ್ಪಂದಿಸಿದ್ದು. ಕಾರಣ ಸರಿಸುಮಾರು ಮೂನ್ನೂರಕ್ಕೂ ಹೆಚ್ಚು ಸಹಪಾಠಿಗಳನ್ನೂ, ನೂರಾರು ಸ್ನೇಹಿತರನ್ನೂ ಹಾಯ್ದು ಬಂದಾಗ ತೀರಾ ನಮಗೆಲ್ಲೂ ತಾಗದೇ ಉಳಿದು ಬಿಡುವವರೂ, ಆಗೀಗ ಇದ್ದಕ್ಕಿದ್ದಂತೆ ಬದುಕಿನ ಮಧ್ಯೆ ಪ್ರವೇಶಿಸಿ, ಧುತ್ತನೆ ಇನ್ನೆಲ್ಲೋ ಪ್ರತ್ಯಕ್ಷವಾಗಿ ಅಚ್ಚರಿಗೀಡು ಮಾಡುವವರೂ ಇಲ್ಲದಿಲ್ಲ. ಹಾಗಾಗೇ ನಮ್ಮಲ್ಲಿ ಆ ಮಟ್ಟಿಗಿನ ಸಲುಗೆ, ಆ ವಯೋಸಹಜ ವಾಂಛೆಗಳ ಕಾಲದಲ್ಲಿ ಭಾವಿ ಎನ್ನುವ ಹುಡುಗಿ ಹುಡುಗಾಟದ ಕಾಲಾವಽ ಹೊರತು ಪಡಿಸಿದರೆ ಅದ್ಯಾಕೋ ಭಿತ್ತಿಯಿಂದ ಕಣ್ಮರೆಯೇ ಆಗಿ ಹೋಗಿದ್ದು ಹೌದು.
ಬೆಂಗಳೂರಿನ ಗಲ್ಲಿಗಳಲ್ಲಿ ನಮ್ಮೊಂದಿಗೆ ಜಗಳಕ್ಕೆ ಬೀಳುವಾಗ ನಮಗ್ಯಾರಿಗೂ ಈ ಮಟ್ಟಿಗಿನ ಪರಿಸ್ಥಿತಿಯಲ್ಲಿ ಬದಲಾವಣೆಗಳು ಬಂದಾವೆಂಬ ಅಂದಾಜು ಬಿಡಿ, ಭವಿಷ್ಯತ್ತಿನ ಬಗೆಗೆ ಯಾವೊಂದು -ಂಟಸಿಯೂ ಇರಲಿಲ್ಲ. ನಾವಿದ್ದ ಪರಿಸ್ಥಿತಿಗೆ ಕನಸಲ್ಲಿ ಕೂಡಾ ಒಂದೊಳ್ಳೆ ಸೀನು ಬರುತ್ತಿರಲಿಲ್ಲ. ಎಲ್ಲ ಬ್ಲಾಕ್ ಆಂಡ್ ವೈಟ್ ಚಿತ್ರಣಗಳೇ. ಅಂತಹದರಲ್ಲಿ ಒಬ್ಬರು ಹೊರಲಿಕ್ಕಾಗದಷ್ಟು ಗಾತ್ರದ ದೊಡ್ಡ ಟಿ.ವಿ. ಮತ್ತು ಬ್ಯಾಕ್ ಟು ಬ್ಯಾಕ್ ದಾಂಗುಡಿಯಿಟ್ಟ ವಿ.ಸಿ.ಪಿ ಅತಿದೊಡ್ಡ ಆಕರ್ಷಣೆ ಆಗ. ಅದೆಷ್ಟೇ ಮಾಸಿದ ಅರೆಬರೆ ಗೆರೆ ಹಾಯುತ್ತಿದ್ದ ಸಿ.ಡಿ ಸಿಕ್ಕಿದರೂ ಕೂತು ಕಣ್ರೆಪ್ಪೆ ಮುಚ್ಚದೆ ನೋಡುತ್ತಿದ್ದ ಕಾಲ ಅದು.

ಇದನ್ನೆಲ್ಲಾ ನೋಡಲು ನಾವು ವಾರಕ್ಕೊಮ್ಮೆಯಾದರೂ ಸಂಪಾದಿಸುತ್ತಿದ್ದ ಕ್ಯಾಸೆಟ್ಟಿಗೆ ಟಿ.ವಿ. ಎಂಬ ಮಾಯಾಪೆಟ್ಟಿಗೆ ಜೊತೆಗೆ ಅದರ ಪ್ಲೇಯರನ್ನೂ ಒದಗಿಸುತ್ತಿದ್ದುದು ಭಾವಿ. ಸಾಯಂಕಾಲಗಳಿಗೆ ನಮ್ಮೊಂದಿಗೆ ಜಿದ್ದಿಗೆ ಬಿದ್ದಂತೆ ಗಾಡಿ ಓಡಿಸಿಕೊಂಡು ಬರುತ್ತಿದ್ದಳು. ನಮ್ಮದೋ ಯಾರೋ ಕೊಡುತ್ತಿದ್ದ ಎಂ.೮೦ ಅಥವಾ ನಾನು ಆಗೀಗ ಆಫೀಸಿನಿಂದ ರಾತ್ರಿ ಎತ್ತಿಟ್ಟುಕೊಂಡು ಬರುತ್ತಿದ್ದ ಆರ್‌ಟಿಝೆಡ್ಡು. ಆಕೆ ಆ ಕಾಲದ -ಮಸ್ಸು ಯೆಜ್ಡಿಯನ್ನು ಓಡಿಸಿಕೊಂಡು ಬೆಂಗಳೂರಿನ ರಸ್ತೆಗಳಿಗೆ ಬೆಂಕಿ ಇಕ್ಕುತ್ತಿದ್ದಳು. ಆದರೆ ನಿಲ್ಲಿಸುವಾಗ ಮಾತ್ರ ನಾವು ಕೈಯಿಕ್ಕದಿದ್ದರೆ ‘ಕ್ವಾಣ(ಕೋಣ)ದ್ದಂಗಿದೀರಿ. ಹುಡುಗಿ ಅನ್ನೋ ಖಬರ್ ಬ್ಯಾಡ. ಸ್ಟ್ಯಾಂಡ್ ಹಾಕೂದಾಗುದಿಲ್ಲಾ?’ ಎಂದು ನಮ್ಮ ಚಳಿ ಬಿಡಿಸುತ್ತಿದ್ದಳು. ಬದುಕು, ಜೀವನೋತ್ಸಾಹ ಆಕೆಯಿಂದ ಕಲಿಯಬೇಕಿತ್ತು. ನಲ್ವತ್ತು ಕೆ.ಜಿ. ತೂಗುತ್ತಿದ್ದ ಹುಡುಗಿ ಬಾಯಿ ಮಾತ್ರ ಭಯಂಕರ. ನಾವು ನಾಲ್ಕಾರು ಹುಡುಗರು ಬೊಬ್ಬಿರಿದರೂ ಒಬ್ಬಳೇ ಅಡಚಿಬಿಡುತ್ತಿದ್ದಳು ನಮ್ಮನ್ನು. ಅಂಥ ಬಾಯಿ, ಮಾತಿಗೂ ಮುಂಚೆ ಸಿಡಿಸಿಡಿ ಸಿಡಿಯುತ್ತಿದ್ದ ಆಕೆ ಅಚ್ಚುಕಟ್ಟೂ ಹೌದು. ನಾವೇನಾದರೂ ಯಾವುದಾದರು ಕೆಲಸ, ನಾಳೆ ನೋಡೋಣ ಎನ್ನುತ್ತ ಹಗುರವಾಗಿ ತೆಗೆದುಕೊಂಡರೆ ನಮ್ಮ ಸೋಮಾರಿತನಕ್ಕೆ ನೀರಿಳಿಸುತ್ತಿದ್ದ ಹುಡುಗಿಯ ದೇಹದಲ್ಲಿ ಅಂಥ ಕಸುವಿತ್ತೋ ಇಲ್ಲವೋ ಆದರೆ ಆಕೆಯ ಧಾಡಸಿತನಕ್ಕೆ ನಾವು ಅವಳಿಲ್ಲದಾಗ ‘ಜಾಸ್ತಿ ಎಗರಾಡಬ್ಯಾಡ. ಭಾವಿ ಬಂದು ಮನಗಂಡ ಝಾಡಸ್ತಾಳ ನೋಡು’ ಎಂದಾಡಿಕೊಳ್ಳುವಷ್ಟು ಪ್ರಭಾವ ಬೀರಿದ್ದಳು. ಓದುವ ಹುಡುಗರಿಗೆ ನಾವು ಯಾವ ರೀತಿಯ ಭರವಸೆಯನ್ನೂ ಹುಟ್ಟಿಸುವವರಲ್ಲವಾಗಿದ್ದರಿಂದ, ನಮ್ಮ ಜೊತೆ ಸುತ್ತುತ್ತಿದ್ದ ಭಾವಿಯ ಬಗ್ಗೆಯಂತೂ ಕೇಳುವುದೇ ಬೇಡ.
‘ಏಯ್, ಆಕೀ ಓದಿ ಯಾವ ಕಂಪನಿ ಉದ್ಧಾರ ಆಗ್ಬೇಕಾಗ್ಯದ್ ಬಿಡ್ರೋ, ಇನ್ನೊಂದ ನಾಲ್ಕ ವರ್ಷ ಕಳದರ ಮದುವಿ ಆಗ್ತದೆ. ಆಮೇಲೆ ಆಕಿನ್ನ ಕುದರಿ ಜೋಡಿ ಕಳಿಸೋದಷ್ಟ ಬಾಕಿ ನೋಡರಿ’ ಎನ್ನುತ್ತಾ ಶಂಕರ್‌ರಾವ್, ಇನ್ನೇನೂ ಈ ಹುಡುಗಿಯಿಂದ ಆಗಲಾರದು ಎನ್ನುವ ನಿಟ್ಟಿನಲ್ಲಿ ನುಡಿಯುತ್ತಿದ್ದರೆ, ಮೇಲಿಂದ ಕೆಳಗೊಮ್ಮೆ ದಿಟ್ಟಿಸುತ್ತಿದ್ದೆ. ಕಾರಣ ನಾವೆಲ್ಲಾ ಆಗ ಭವಿಷ್ಯದ ಯಾವ ಕಲ್ಪನೆಗೂ ಶ್ರೀಕಾರ ಹಾಕಲೊಲ್ಲದ ದರವೇಶಿತನದ ಪರಮಾವಽಯಂತಿದ್ದೆವು. ಆಗೀಗ ‘ಭಾವಿನ್ನ ಮದುವಿ ಆದರ ಹ್ಯಾಂಗ’ ಎನ್ನುತ್ತಿದ್ದ ರವಿಯನ್ನು ಮಾತ್ರ ನಾನು ಕನಿಕರದಿಂದ ದಿಟ್ಟಿಸುತ್ತಿದ್ದೆ. ಅಂದೇ ಸಂಜೆ ಹೊತ್ತಿಗೆ ಅನಾಹುತ ಆಗಿತ್ತು.
ನಮ್ಮ ರೂಮಿನ ಹತ್ತಿರ ಯೆಜ್ಡಿ ನಿಲ್ಲಿಸಿದ ಶಬ್ದ. ಬಂದಾಗಲೇ ಯಾಕೋ ಆಕೆ ಬಂದುದು ನಾರ್ಮಲ್ ಇದ್ದಂಗಿಲ್ಲ ಎನ್ನಿಸಿ ನಾವು ಮುಖಮುಖ ನೋಡಿಕೊಳ್ಳುತ್ತಿದ್ದರೆ, ದಢಾರನೆ ಬಾಗಿಲು ಒದ್ದು ಒಳಬಂದ ಭಾವಿ ಚಿಟಿಚಿಟಿ ಚೀರುತ್ತಾ ರವಿಯನ್ನು ಹುಡುಕತೊಡಗಿದ್ದಳು. ಮಧ್ಯಾಹ್ನದ ನಿದ್ರೆಯಿಂದಿನ್ನು ಏಳದ ನಾನು ಕಣ್ಣುಜ್ಜಿಕೊಳ್ಳುತ್ತಾ ‘ಏನು ಏನಾತು? ಭಾವಿ ಯಾಕ ಹಿಂಗ’ ಎನ್ನುತ್ತಿದ್ದರೆ ಬುಸುಗುಡುತ್ತಿದ್ದೋಳು, ‘ಅಲ್ಲ ನಿನಗರ ಗೊತ್ತಾಗೋದಿಲ್ಲೇನು? ಕಾಗದಾ ಬರದ್ರ ನನಗ ಬರೀಬೇಕ ಹೌದಿಲ್ಲೋ? ನಮಪ್ಪನ ಕೈಯ್ಯಾಗ ಕೊಟ್ಟಾನಲ್ಲ. ಎಲ್ಲಿದಾನು? ಅಸ್ಥಿಪಂಜರಕ್ಕ ಪ್ಯಾಂಟು ತೂಗ ಹಾಕಿದಂಗಿದಾನು, ಥೇಟ್ ದೆವ್ವಿದ್ದಂಗಿದಾನು. ಮೊದಲು ನನ್ನ ಹತ್ತಿರ ಮಾತಾಡಬೇಕು ಅನ್ನೋ ಖಬರ್ ಬ್ಯಾಡೆನು?’ ಎನ್ನುತ್ತಿದ್ದರೆ ನಡೆದದ್ದೇನು ಎಂದು ಈಗ ಸ್ಪಷ್ಟವಾಗುತ್ತಿತ್ತು. ಮನದೊಳಗೇ ಮಂಡಿಗೆ ಮೇಯುತ್ತಿದ್ದ ರವಿ, ತಾನು ಕೇಳುವ ಮೊದಲೇ ಆಕೆಯನ್ನೆಲ್ಲಾದರೂ ಮದುವೆ ಮಾಡಿಯಾರೆಂಬ ದಿಗಿಲಿಗೆ ಬಿದ್ದು ಭಾವಿಗೊಂದು ಕಾಗದ ಬರೆದುಕೊಂಡಿದ್ದಾನೆ. ಹೋಗಲಿ ಅವಳ ಕೈಗಾದರೂ ಇಟ್ಟಿದ್ದಾನಾ? ಅದೂ ಇಲ್ಲ. ಮಧ್ಯಾಹ್ನದ ರಣರಣ ಬಿಸಿಲಿನಲ್ಲಿ ಕಾಲೇಜು ತಿರುಗಿ ಅಲ್ಲೆಲ್ಲೂ ಕಾಣದಿದ್ದಾಗ ವಿಚಾರಿಸುತ್ತಾ ಮನೆಗೂ ತಲುಪಿದ್ದಾನೆ. ಮನೆಗೆ ಹೋಗುವುದು ಹೊಸದೇನೂ ಆಗಿರಲಿಲ್ಲ. ಮನೆಯಲ್ಲಿ ಆಚೀಚೆ ನೋಡಿದ್ದಾನೆ. ಆಕೆ ಕಂಡಿಲ್ಲ. ಅವರಪ್ಪ ‘ಏನೋ’ ಎಂದು ಪ್ರಶ್ನಿಸಿದ್ದಾರೆ. ನಿಜವಾದ ಕಾರಣ ಹೇಳಲು ಮತ್ತು ತಕ್ಷಣಕ್ಕೆ ಬೇರೆ ನೆಪ ಹೇಳಲು ಆಗದಿದ್ದಾಗ ‘ಏನಿಲ್ಲ ಇದನ್ನು ಭಾವಿಗ ಕೊಡಬೇಕಿತ್ತು’ ಎನ್ನುತ್ತಾ ಹಲ್ಲು ಗಿಂಜಿ ಅವರಪ್ಪನ ಕೈಗೆ ಲಕೋಟೆ ಇಟ್ಟು ಬಂದಿದ್ದಾನೆ.
ಮನೆಯಲ್ಲಿ ಎಲ್ಲರೂ ಭಾವಿಯನ್ನು ತಮಾಷೆ ಮಾಡಿದ್ದೇ ಮಾಡಿದ್ದು. ಅಷ್ಟು ಸಾಕಾಗಿದೆ ಅವಳಿಗೆ. ಅಪ್ಪಟ ಚೆನ್ನಮ್ಮನ ಪೋಸಿನೊಂದಿಗೆ ಗಾಡಿ ಎಳೆದುಕೊಂಡು ಬಂದು ಅವನನ್ನು ಹುಡುಕತೊಡಗಿದ್ದಳು. ಅವರಪ್ಪ ನಗೆಯಾಡಿ ಅಳಿಯಾ ಬಂದಿದ್ದ ಎನ್ನುತ್ತಾ ಹಗುರವಾಗೇ ತೆಗೆದುಕೊಂಡು ಭಾವಿಯನ್ನು ಕಾಡಿಸಿದ್ದಾರೆ. ಆದರೆ, ಅದರ ಅವಮಾನ ತಟ್ಟಿದ್ದು ಭಾವಿಗೆ. ಅದಕ್ಕೆ ಇಲ್ಲಿಗೆ ಬಂದು ಎಗಾದಿಗಾ ಕುಣಿಯತೊಡಗಿದ್ದಳು. ಆವತ್ತು ರವಿ ಆಕೆಯ ಕೈಗೆ ಸಿಕ್ಕಿದ್ದರೆ ಖಂಡಿತಕ್ಕೂ ಒದೆ ಬೀಳುತ್ತಿದ್ದವೇನೋ. ಆದರೆ ಅದರ ಮರುದಿನವೂ ಅವನು ರೂಮಿಗೆ ಕಾಲಿಡುವ ಸಾಹಸ ಮಾಡಲಿಲ್ಲ.
ಇದೇ ನೆಪ ಉಪಯೋಗಿಸಿಕೊಂಡು ಇನ್ನೊಬ್ಬ ಸ್ನೇಹಿತ ಅವನನ್ನು ಅಲ್ಲಿಂದ ಗುಳೆ ಹೋಗುವಂತೆ ಮಾಡಿಬಿಟ್ಟ. ವಾರೊಪ್ಪತ್ತು ಕಳೆಯುವ ಮೊದಲೇ, ರವಿ ನೇತಾಕಿದ್ದ ಎರಡು ಪ್ಯಾಂಟು, ಲುಂಗಿ ಸೆಳೆದುಕೊಂಡು ಮತ್ತಿಕೆರೆಯ ರೂಮಿಗೆ ಹೊರಟುಹೋಗಿದ್ದ. ಆದರೆ, ಕೊನೆಗೂ ಭಾವಿ ಹೋಗಲಿ, ಯಾರನ್ನೂ ಮದುವೆನೇ ಆಗಲಿಲ್ಲ. ಅದ್ಯಾವ ಕಾರಣಕ್ಕೆ ಪಾಂಡಿಗೆ ಹೋದನೋ? ರವಿ ಮತ್ತೆ ಜೀವಂತ ಹಿಂದಿರುಗಲೇ ಇಲ್ಲ. ಭಯಾನಕ ರೋಗಕ್ಕೆ ಸಿಕ್ಕಿ ಮುಗಿದುಹೋಗಿದ್ದ. ನಮ್ಮ ಟೀಮು ಹೋಗುವಷ್ಟರಲ್ಲಿ ನೋಡಲು ಮುಖವೂ ಸಿಕ್ಕಿರಲಿಲ್ಲ. ‘ಹುಡುಗ ಛಲೋ ಇದ್ದ. ಆದರೆ ಧೈರ್ಯ ಇರ್ಲಿಲ್ಲ ಬಿಡು’ ಎಂದು ಭಾವಿ ನೀರುಬಿಟ್ಟಿದ್ದಳು.
ಅದಾಗಿ ನಾವೆಲ್ಲಾ ಚದುರಿಹೋಗುವ ಕಾಲದಲ್ಲಿ ಭವಾನಿ ಚೆಂದ ಚೆಂದ ಎನ್ನುವ ದಪ್ಪ ಗಾಜಿನ ಕನ್ನಡಕದ ಹುಡುಗನೊಬ್ಬನನ್ನು ಮೆಚ್ಚಿ ಮದುವೆ ಆಗಿದ್ದಳು. ಅವನು ಹುಡುಗ ಎನ್ನುವುದಕ್ಕಿಂತಲೂ ಅವಳ ಹಿಂದಿಂದೆ ಸುತ್ತುವ ಪರಿಗೆ ‘ಮದುವಿ ಗಂಡನ ಜೋಡಿ ಮಾಡ್ಕೊಂಡ್ಯೋ, ಇಲ್ಲ ಒಬ್ಬ ಪಿ.ಎ.ಅನ್ನು ಮಾಡ್ಕೊಂಡ್ಯೋ’ ಎಂದು ಆಕೆಯನ್ನು ಆಡಿಕೊಂಡು ಗಡದ್ದಾಗಿ ಜಿಲೇಬಿ ಉಂಡು ಬಂದಿದ್ದೆವು. ಅದಾದ ಮೇಲೆ ಎರಡು ದಶಕದ ಗ್ಯಾಪಲ್ಲಿ ಭಾವಿ ಮಾತಿಗೆ ಸಿಕ್ಕಿದ್ದಳು.
ನಸು ಹಳದಿ ಗೋಡೆಗಳ ಕೆಳಗೆ ಗಾಢವರ್ಣದ ಪಟ್ಟಿಗಳಿದ್ದ ಚಿಕ್ಕ ಹಾಲ್. ತುಂಬಿದ್ದ ಸಾಮಾನುಗಳ ಮಧ್ಯೆ ಆರಾಮು ಕುರ್ಚಿಯಲ್ಲಿ ಶಂಕರ್‌ರಾವ್ ಗುರುತೇ ಸಿಗದಷ್ಟು ಕುಗ್ಗಿ ಕೂತಿದ್ದರೆ, ಟಕ್‌ಟಕ್ ಎನ್ನುತ್ತ ಶಬ್ದಿಸುತ್ತಾ ಓಡಾಡುತ್ತಿದ್ದ ಭಾವಿ ಕಾಲೆಳೆದು ನಡೆಯುತ್ತಿದ್ದಳು. ಸೋ-ದಲ್ಲಿ ಕೂತಿದ್ದ ನನ್ನೆದುರಿಗೆ ಕಾಫಿ ಇಡುತ್ತಾ ನಿಸ್ತೇಜವಾದರೂ ದಣಿವಾಗಿಲ್ಲ ಎನ್ನುವಂತಿದ್ದ ಮುಖದಲ್ಲಿ ಮೊಳಕಾಲ ಬಳಿ ಕೈ ಹಾಕಿ ಹುಕ್ಕು ಕದಲಿಸಿ ಕಾಲು ಎತ್ತಿ ಆಚೆಗಿಡುತ್ತಾ ಸೀಟಿನ ಮೇಲೆ ಕೈಯಿಟ್ಟು, ನನ್ನೆಡೆಗೆ ತಿರುಗಿ ‘ಕಾಫಿ’ ಎಂದು ಎಚ್ಚರಿಸುತ್ತಿದ್ದರೆ ನಾನು ಎತ್ತಿಟ್ಟ ಕಾಲು, ಮಡಚಿ ಹೋದ ಕೈಗಿದ್ದ ಶಾಶ್ವತವಾದ ಖಾಕಿಬಣ್ಣದ ಪಟ್ಟಿ ನೋಡುತ್ತ ಕೂತಿದ್ದೆ. ಉಳಿದದ್ದು ಮುಂದಿನ ವಾರಕ್ಕೆ. ಆದರೆ ಮುಖದಲ್ಲಿ ಮಾತ್ರ ಒಂದಿನಿತೂ ಹಿಂಗಾಯ್ತು ಎನ್ನುವ ತುಮುಲವಿರಲಿಲ್ಲ.
ಕಾರಣ  ಅವಳು ಎಂದರೆ...