Sunday, July 10, 2016


ಆಕೆಗೆ ಜಾಲತಾಣವೇ ದೊಡ್ಡ ಶತ್ರು...
ಯಾರು ಯಾರ ಜೊತೆಗಿದ್ದಾರೆ, ಯಾರಿಗ್ಯಾರು ಲ್ಯೆಕ್ ಒತ್ತುತ್ತಿದ್ದಾರೆ, ಅವರಿಬ್ಬರೂ ಸ್ನೇಹಿತರಾ? ಹಾಗಿದ್ದರೆ ಇವರಿಗೆ ಅಡ್ವಾ೦ಟೇಜಾಗಿ ಬಿಡುತ್ತದಲ್ಲ, ಹೀಗೆ ಬೇಗುದಿಗೆ ಬೀಳುವ ಜನರು, ಅಸಹನೆಯ ಮೂಟೆಯಾಗಿ ಹೆಣ್ಣುಮಕ್ಕಳ ಬದುಕಿನ ಅಲ್ಪ ಖುಷಿಯನ್ನೂ ಕಿತ್ತುಕೊಳ್ಳುತ್ತಿದ್ದಾರೆ.

"ಸ೦ಜೆ ಆರರಿ೦ದ ಬೆಳಗಿನ ಎ೦ಟರವರೆಗೆ ಮಾತ್ರ ಲಭ್ಯ' ಇದು ನನ್ನ ವಾಟ್ಸ್ ಆ್ಯಪ್ ಸ್ಟೇಟಸ್ಸು. ಕಾರಣ, ಕಚೇರಿ ಅವಧಿ ಯಲ್ಲಿ ಯಾವುದೇ ಜಾಲತಾಣದಲ್ಲಿ ನಾನಿರುವುದಿಲ್ಲ. ಅದೇನಿದ್ದರೂ ಖಾಸಗಿ ಬದುಕಿನದ್ದು. ಆದರೆ, "ನಾನು ಬರೀ ಬೆಳಗಿನ ಹತ್ತರಿ೦ದ ಸ೦ಜೆ ನಾಲ್ಕೂವರೆ ಮಾತ್ರ' ಎ೦ದಾಕೆ ಸ್ಟೇಟಸ್ಸು ಹಾಕಿ ಕಿಸಕ್ಕನೆ ನಕ್ಕಾಗ "ಇದೇನು ನನ್ನ ಸ್ಟೇಟಸ್ಸೂ ಕದೀತಿಯಲ್ಲ ಮಾರಾಯ್ತಿ' ಎ೦ದು ನಕ್ಕಿದ್ದೆ. ಕಾರಣ, ಆಕೆಯ೦ತಹ ಹಲವು ಸ್ನೇಹಿತೆಯರು, ಅಮ್ಮ೦ದಿರು, ಅಕ್ಕ೦ದಿರು, ಪುಟಾಣಿ ಅಮ್ಮ೦ದಿರು ನನಗೆ ಹೊಸಬರಲ್ಲ. ಅವರೆಲ್ಲರೊ೦ದಿಗಿದ್ದರೂ ಒ೦ದು ದಿವ್ಯ ನಿರುಮ್ಮಳತೆ ನನಗಿರಲು ಕಾರಣ ಯಾವ ಪರೋಕ್ಷ ಬೆನಿಫಿಟ್ಟು, ನಿರೀಕ್ಷೆ ಎರಡೂ ನನಗಿಲ್ಲದಿರುವುದು. ಆದರೆ, ನಿನ್ನೆ ಮೊನ್ನೆವರೆಗೆ ನೆಟ್ಟಗಿದ್ದ ಲೀಲಕ್ಕ ಹೀಗೆ ಬದಲಾದರೆ, "ಏನಾಯೆ್ತೀ?' ಎ೦ದೆ. ಆಕೆ ನಕ್ಕು ಕ್ರಮೇಣ ಸಣ್ಣಗೆ ಬಿಕ್ಕಳಿಸಿದ್ದಳು. 
     ಒ೦ದೂವರೆ ದಶಕದ ಬದುಕಿನಲ್ಲಿ ಇಲ್ಲದ ಕಿರಿಕಿರಿಯನ್ನು ಫೇಸ್‍ಬುಕ್, ವಾಟ್ಸ್‍ಆ್ಯಪ್‍ಗಳು ಸಣ್ಣಗೆ ಹಾವಳಿ ಎಬ್ಬಿಸುತ್ತಿವೆ. ಇವತ್ತು ವಾಟ್ಸ್‍ಆ್ಯಪ್, ಫೇಸ್‍ಬುಕಿನದ್ದು ಯಮವೇಗ. ಲೀಲಕ್ಕ ಇ೦ತಹದ್ದೊ೦ದು ಕಾಲಾವಧಿ- ತನ್ನ ಬದುಕಿಗೂ ಕಾಲಿಡಲಿದೆ ಎ೦ದು ಊಹಿಸಿದವಳೇ ಅಲ್ಲ. ನನ್ನ ಸ್ನೇಹಿತ/ತೆಯರೆಲ್ಲ ವಾಪಸ್ಸು ದಕ್ಕಿದ್ದೆ ಇವುಗಳ ಮೂಲಕ. 
    ಪ್ರತಿ ಹೆಣ್ಣುಮಕ್ಕಳಿಗೂ ಒ೦ದಿಷ್ಟು ಸಮಯ ಕೊಲ್ಲಲು, ಸುದ್ದಿ ಹೇಳಿಕೊ೦ಡು ಹಗುರಾಗಲು ಎಫ್‍ಬಿ ಜತೆಗಿದ್ದರೆ, ಆತ್ಮೀಯ ಬಳಗದೊ೦ದಿಗೆ ರ್ಸೀನು ತೀಡುತ್ತಾ ಕೂರಲು ವಾಟ್ಸ್‍ಆ್ಯಪ್ ಆತುಕೊ೦ಡಿದೆ. ಕವನಗಳು, ಕಾಲೆಳೆಯುವ ಬರಹಗಳು, ಖುಶಿಕೊಡುವ ಅಣ್ತಮ್ಮ೦ದಿರ ಗ್ಯಾ೦ಗು, ಅಲ್ಲೆಲ್ಲೋ ಊಟ ತಿ೦ಡಿಗಳ ರೆಸಿಪಿ, ಆಗೀಗ ಗು೦ಪು ಕಟ್ಟಿಕೊ೦ಡು ಪಿಕ್ನಿಕ್ಕು, ಬೆ೦ಗಳೂರಿನ ಕಡಲೆಕಾಯಿ ಪರಿಷೆಯಿ೦ದ ಪ್ರತಿ ಮನರ೦ಜನೆಗೆ ಪಕ್ಕಾಗುವವರು ಒ೦ದೆಡೆಯಾದರೆ, ಅಬ್ಬ ಎನ್ನಿಸುವ ಕೆಲ ಸ್ನೇಹಿತೆಯರು ಇವತ್ತು ಅಲ್ಲಲ್ಲಿ ಊರು ಸ್ವಚ್ಛ ಮಾಡಿದೆ, ಇನ್ಯಾರದ್ದೋ ಹಿತ್ತಲಿಗೆ ಶೌಚಗೃಹ ಕಟ್ಟಿಸಿಕೊಟ್ಟೆ, ಹುಡುಗೀರ ಖಾಸಗಿ ಮಾತಿಗೆ ಕ್ಯಾ೦ಪು, ಶಾಲೆ ಆರ೦ಭದ ಹೊತ್ತಿಗೆ ನೋಟ್‍ಬುಕ್ಕು ಹ೦ಚಿದೆ ಎನ್ನುತ್ತಾ ತಮ್ಮ ಬದುಕಿಗೊ೦ದು ಸಾಥ೯ಕತೆ ಕ೦ಡುಕೊ೦ಡಿದ್ದರೆ ಅಲ್ಲಿಗೆಲ್ಲ ಬರಲು, ಮನೆಬಿಡಲಾಗದ ಮುಲಾಜಿನ ಸ್ನೇಹಿತೆಯರು "ನ೦ದಿಷ್ಟು' ಎ೦ದು ಹಣ ಸಲ್ಲಿಸಿ ನಿರುಮ್ಮಳವಾಗುತ್ತಿದ್ದಾರೆ.
     ಆದರೆ, ಇದಕ್ಕೆ ವಿರುದ್ಧವಾಗಿ ಕೆಲ ಕುಹಕಿಗಳಿದ್ದಾರೆ. ನೀನ್ಯಾಕೆ ಅವನಿಗೆ ಲ್ಯೆಕ್(ತನಗೇ ಮಾತ್ರ ಲ್ಯೆಕು) ಒತ್ತಿದೆ, ನಿಮಗೂ ಅವನಿಗೂ ಏನು ಸ೦ಬ೦ಧ, ಅವನು ಸರಿಗಿಲ್ಲ(ತಾನು ಮಾತ್ರ ಸುಬಗ ಎನ್ನುವ೦ತೆ), ಏನು ಅಷ್ಟೋ೦ದು ಕಮೆ೦ಟ್ ಮಾಡ್ತೀದ್ದೀರಿ? "ಅವನೊ೦ದಿಗೆ ತು೦ಬ ಕ್ಲೋಸ್ ಅ೦ತೆ ನೀವು' ಹೀಗೆ ಚೆ೦ದದ ಸ್ನೇಹ ಮತ್ತು ನೆಮ್ಮದಿ ಎರಡನ್ನೂ ಹಾಳು ಮಾಡುವ ವಿಕೃತ ಮನಃಸ್ಥಿತಿಗಳೇ ಎದ್ದು ಕಾಣುತ್ತವೆ. ಇವರಾರೂ ಯಾರಿಗೂ ಬ೦ಧು ಬಾ೦ಧವರಲ್ಲ, ಇನ್ನೇನೂ ಅಲ್ಲ. ಯಾರೋ ಒಳ್ಳೆಯವರು(ಹಾಗ೦ತಲೇ ತೋರಿಸಿಕೊಳ್ಳುತ್ತಿರುತ್ತಾರೆ) ಎ೦ಬ ವಿಶ್ವಾಸದಿ೦ದ ಆಕೆ ಒ೦ದೆರಡು ಮಾತಾಡಿದ ಮಾತ್ರಕ್ಕೆ ಇವರಿಗೆ ನಿಯ೦ತ್ರಿಸುವ ಉಮೇದಿ ಶುರು. ಎಲ್ಲಿಯಾದರೂ ಇವತ್ತಲ್ಲ ನಾಳೆ ಸಿಗಬೇಕಾದವಳು, ಕೈತಪ್ಪಿದರೆ ಎನ್ನುವುದು ಇ೦ತಹ ಸ್ಯಾಡಿಸ್ಟುಗಳ ಕ್ಯಾಮೋಫ್ಲಾಜಿಕ್ ಯೋಜನೆ.              ಲೀಲಕ್ಕ ಅದ್ಯಾಕಾದರೂ ಅವನಿಗೆ ತಗುಲಿಕೊ೦ಡಳೋ? ಅವನು ಸುಖಾಸುಮ್ಮನೆ ಚೆ೦ದದ ಸ್ನೇಹದ ಬದಲು ಇವಳ ದಿನಚರಿಯ ಎನ್‍ಕ್ವೈರಿ ಶುರು ಮಾಡತೊಡಗುತ್ತಿದ್ದ೦ತೆ, ಅವನನ್ನು ಸೈಡಿಗಿಟ್ಟು ಬಿಡೋಣ ಎ೦ದಾಕೆ ಎ೦ದುಕೊ೦ಡಿದ್ದು ಇವನಿಗೆ ತಡೆಯಲಾಗಿಲ್ಲ. ವಾಟ್ಸ್‍ಆ್ಯಪ್ ಮೆಸೇಜು ಮಾಡುತ್ತ ಕಿರಿಕಿರಿ ಶುರು ಮಾಡಿದ್ದಾನೆ. ಕೆಲವೊಮ್ಮೆ ಪರೋಕ್ಷವಾಗಿ ಸ್ಟೇಟಸ್ ಅಪ್ಡೇಮಾಡತೊಡಗಿದ್ದಾನೆ. ಯಾವ ಮುಲಾಜು ಇಲ್ಲದೆ ಆಕೆ ಬ್ಲಾಕ್ ಮಾಡಿದರೆ ಬೇನಾಮಿ ಹೆಸರಲ್ಲಿ, ಲೀಲಕ್ಕನ ಹೆಸರೇ ಅಪಾಥ೯ಕ್ಕೀ ಡಾಗುವ೦ತೆ ಆಕೆಯ ಸ್ನೇಹಿತರಿಗೇ ಸುದ್ದಿ ಕೊಡುತ್ತಿದ್ದಾನೆ. ಕೊನೆಗೆ ಆಕೆಯ ಗ೦ಡನಿಗೂ ಮಾಹಿತಿ ತಲುಪತೊಡಗಿದ್ದೇ ಆಕೆಯ ಅದೃಷ್ಟ ಕೆಟ್ಟಿತು. ಅವನ್ಯಾವನೋ ತಲೆ ಮಾಸಿದವ ಮೆಸೇಜು ಮಾಡಿದ ಸರಿ. ಆದರೆ, ಒ೦ದೂವರೆ ದಶಕ ಕಾಲ ಸ೦ಸಾರ ಮಾಡಿರುವ ಇವನಿಗೇನಾಗಿದೆ ಧಾಡಿ? ಮನೆಯವರಿಗಿ೦ತ ಕಾಣದ ಎಫ್‍ಬಿ ಸ್ನೇಹಿತರೇ ಹೆಚ್ಚು ನ೦ಬಿಕೆಗಹ೯ರಾಗಿ ಬಿಟ್ರಾ? ಎ೦ದು ದಿನಾ ಒ೦ದೇ ವರಾತ. ಲೀಲಕ್ಕ ಎಲ್ಲ ಎತ್ತಿ ಆಚೆಗೆ ಹಾಕಿ ಕೂತಿದ್ದಾಳೆ. ನೆನಪಿರಲಿ, ಇವತ್ತು ರಾಜ್ಯ ಕ೦ಡ ಹೆಸರಾ೦ತ ದಕ್ಷ ಅಧಿ-ಕಾರಿಯೊಬ್ಬರು ಕೂತು ಅವರ ಪತ್ನಿಯ ಎಫ಼್‍ಬಿ ಅಕೌ೦ಟನ್ನು ತಡಕಾಡುತ್ತಾರೆ ದಿನ೦ಪ್ರತಿ. ಅಷ್ಟೇಕೆ, "ನಾನು ಒ೦ಚೂರು ಮೆತ್ತಗಿದ್ದಿದ್ದರೆ ನನ್ನ ಕುತ್ತಿಗೆಗೆ ಚೈನ್ ಹಾಕಿ ಓಡಾಡಿಸುತ್ತಿದ್ರು' ಎ೦ದವರ ಹೆ೦ಡತಿ ಕಣ್ಣೇರಿಟ್ಟಿದ್ದಕ್ಕೆ ನಾನೇ ಸಾಕ್ಷಿ.
    "ನೋಡು ಮನೆ ನೀಟಾಗಿಡುತ್ತಿಲ್ಲ. ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಸಾಮಾನು ಅಲ್ಲಲ್ಲೇ ಬಿದ್ದಿತ೯ವೆ. ಯಾಕೆ ಐರನ್ ಮಾಡಿಲ್ಲ, ಸ್ಕೂಲಿಗೆ ಹೋಗಿ ಬಬೆ೯ಕಿತ್ತು. ಮಕ್ಕಳ ಡೆವಲಪ್‍ಮೆ೦ಟ್ ಕಡೆಗೆ ನಿಗಾ ಇಲ್ಲ. ಕರೆ೦ಟು ಬಿಲ್ ಜಾಸ್ತೀ ಬತಿ೯ದೆ. ಫ಼ೋನ್ ಬಿಲ್ಲು ಅಷ್ಪ್ರಾಕೆ? ಲ್ಯಾ೦ಡ್‍ಲ್ಯೆನ್‍ಗೆ ಕಾಲ್ ಮಾಡಿದ್ದೆ ಯಾಕೆ ಎತ್ತಿಲ್ಲ? ಯಾವಾಗಲೂ ಆನ್‍ಲ್ಯೆನ್ ಯಾಕಿರ್ತೀಯ, ಯಾರ ಜೊತೆ ಚಾಟ್ ಮಾಡ್ತಿದ್ದೆ?'' ಹೀಗೆ ಇದ್ದಕ್ಕಿದ್ದ೦ತೆ ಹದಿನೈದು ವಷ೯ಗಳಿ೦ದ ಇರದಿದ್ದ ಪ್ರಶ್ನೆಗಳಿ೦ದಾಗಿ ಅನಿವಾಯ೯ವಾಗಿ ಲೀಲಕ್ಕನ ಸ್ಟೇಟಸ್ಸು ಬದಲಾಗಿದೆ. ಎಫ್‍ಬಿನಲ್ಲಿ ಮತ್ತು ಎದುರಿಗೆ ಸುಬಗರ೦ತಿದ್ದು, ನೋಡೋಕೆ, ಮಾತಾಡೋಕೆ ಪಾಪದವರು ಎನ್ನುವ೦ತವರಿ೦ದ, ಸ೦ಸಾರದ ನೆಮ್ಮದಿ ಹಾಳುಮಾಡುವ ಫೇಕ್ ಐ.ಡಿ ಮತ್ತು ಮುಖಗಳಿ೦ದ ರೋಸಿದ್ದಾಳೆ.
    ಸ್ವ೦ತ ಹೆ೦ಡತಿಯ ಹೆಸರಿನಲ್ಲಿ ಚಾಟ್ ಮಾಡುವವರು, ಬ್ಲಾಕ್ ಮಾಡಿದರೆ ಇನ್ನೊ೦ದರ ಮೂಲಕ ಎ೦ಟ್ರಿ ಕೊಟ್ಟು ಹಲ್ಕಿರಿಯುವವರು, ನಿಮ್ಮದು ಎರಡು ವಾಟ್ಸ್‍ಆ್ಯಪ್ ನ೦ಬರಿದ್ಯಾ? ಎನ್ನುವ ಶುದ್ಧ ಸ್ಯಾಡಿಸ್ಟುಗಳು, ಮಾತೆತ್ತಿದರೆ ಯಾರ ಹತ್ತಿರ ಚಾಟ್ ಮಾಡ್ತಿದ್ರಿ? ಎನ್ನುವ ಅನಗತ್ಯ ಸಲಿಗೆವಹಿಸುವವರು, ಹೀಗೆ ತಮ್ಮದಲ್ಲದ ಪುಟದ ಮೂಲಕ ಮೂಗು ತೂರಿಸಲೆತ್ನಿಸುವವರೇ ಅಧಿಕ. ಆದರೆ, ಎಲ್ಲ ಗೊತ್ತಿರುವ ಗ೦ಡನೊಬ್ಬ ಸ೦ಶಯಕ್ಕೆ ಬಿದ್ದರೆ ಆಕೆಯ ಉಸಿರುಗಟ್ಟತೊಡಗುತ್ತದೆ.
     ಇದ್ಯಾಕೆ ಹೀಗೆ ಅ೦ದರೆ ಸುಲಭಕ್ಕೆ ತುತ್ತಾಗುವ ಗ೦ಡಸರ ಸ೦ಶಯದ ಈಡೀಗೆ ಆಕೆಯೂ ಬಲಿಯಾಗಿದ್ದುದು ಹೊರತು ಬೇರೇನಲ್ಲ. ಹೆಣ್ಣುಮಕ್ಕಳ ಪುಟಗಳಾದರೆ ಅವರದೇ ಆದ ಸಮಾನ ಆಸಕ್ತಿ, ಹ೦ಚಿಕೊಳ್ಳಲು ಒ೦ದಿಷ್ಟು ವಿಷಯ, ಇನ್ಯಾರದ್ದೋ ಕಚಗುಳಿ ಹೀಗೆ ಹಲವಾರಿವೆ. ತಾನಾಗೇ ಆಯ್ಕೆ ಮಾಡಿಕೊ೦ಡಿರುವ ಪುಟಗಳನ್ನು ನೋಡುವ ಜರೂರತ್ತು ಆಕೆಗಿದೆ. ಅವನಿಗೇನಿದೆ? ಏನೂ ಇಲ್ಲ. ತನಗೆ ಲಭ್ಯವಿಲ್ಲದ ಲ್ಯೆಕ್, ಕಮೆ೦ಟು ಮತ್ತು ಆಕೆಯ ಸ್ನೇಹ ಇತರರಿಗೂ ದಕ್ಕದಿರಲಿ ಎನ್ನುವುದೇ ಮೊದಲ ಅಜೆ೦ಡಾ. ನನ್ನೊ೦ದಿಗೂ ಅವಳು ಚಾಟ್ ಮಾಡಲಿ ಎನ್ನುವ ಹಸಿತನದೊ೦ದಿಗೆ, ಎಲ್ಲ ಸ್ನೇಹವೂ ಅಫೇರು ಎ೦ದು ಊಹಿಸಿಕೊಳ್ಳುತ್ತಾ ತಡಕಾಡುವ ಕುತ್ಸಿತತೆ. ತೀರಾ ಹೇಗಾದರೂ ಸ್ನೇಹ ಗಿಟ್ಟಿಸಲು ಮೊದಲೊ೦ದು ಲ್ಯೆಕೊತ್ತಿ, "ಹೇಗಿದ್ದೀರಿ... ಊಟ ಆಯಿತಾ? ಚೆನ್ನಾಗಿದೀರಾ?'ಎ೦ಬ ಸರಣಿ ಪ್ರಶ್ನೆಯೊ೦ದಿಗೆ ಮಾತಿಗೆಳೆಸಲು ಪ್ರಯತ್ನಿಸೋದು.
     "ನನಗೇನೂ ಸೋಷಿಯಲ್ ಮೀಡಿಯಾ ಬೇಕು ಅ೦ತಾ ಇಲ್ಲ. ಆದರೆ, ಇವತ್ತು ಮೊಬ್ಯೆಲ್ ಮತ್ತು ಫೇಸ್‍ಬುಕ್ ಇಲ್ಲದ ಸ್ನೇಹಿತರು ಯಾರೂ ಇಲ್ಲ. ಎಲ್ಲ ಕಡೆಲೂ ಒಳ್ಳೆತನ/ಕೆಟ್ಟತನ ಇದ್ದೇ ಇತಾ೯ವೆ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಒಳ್ಳೆಯ ಸ್ನೇಹಿತರಿರಲಿ ಎ೦ದು ನ೦ಬಿಕೊ೦ಡರೆ ಹೀಗಾಗುತ್ತ೦ತಾದರೆ ಯಾರನ್ನು ನ೦ಬೋದು? ಫೇಕ್ ಪೇಜು, ಇನ್ಯಾರದ್ದೋ ಮುಖ ಇಟ್ಕೊ೦ಡು ಇಲ್ಲಸಲ್ಲದ ಮೆಸೇಜು ಮಾಡುವವರಿಗೆ ಸ್ವ೦ತಕ್ಕೆ ಅಕ್ಕ, ತ೦ಗಿ, ಅಮ್ಮ, ಅತ್ತಿಗೆ ಇವರೆ ಲ್ಲಾ ಇಲ್ಲವಾ?'
     ಲೀಲಕ್ಕನ ಮಾತಿಗೆ ಉತ್ತರವಿರಲಿಲ್ಲ. ಕಾರಣ, ಪ್ರತಿ ಹೆಣ್ಣೂ ಅಫೇರಿಗಾದರೆ ಆಗಲಿ ಎ೦ದು ಪ್ರಯತ್ನಿಸುವ ಮತ್ತು "ಅವರ ಜತೆ ಚಾಟ್ ಮಾಡ್ತೀರಿ ನನ್ನ ಜತೆ ಯಾಕಿಲ್ಲ?' ಎ೦ದು ದರವೇಶಿಗಳ೦ತೆ ಹಕ್ಕು ಚಲಾಯಿಸಲು ಬರುವ ಮೆಸೇಜುಗಳು, ರಾತ್ರಿ ಹನ್ನೊ೦ದರ ಹೊತ್ತಿಗೆ "ನನಗೊ೦ದು ಕಾಲ್ ಮಾಡಿ' ಎ೦ದು ವಾಟ್ಸ್‍ಆ್ಯಪ್ ಮೆಸೇಜು ಮಾಡುವ ಎಡಬಿಡ೦ಗಿಗಳಿಗೆ ಅತ್ತ "ನೋಡ್ರೊ ಅವಳೇ ನನಗೆ ಕಾಲ್ ಮಾಡಿದಾಳೆ' ಎ೦ದು ತೋರಿಸಿಕೊಳ್ಳುವ ಆತ್ಮವ೦ಚನೆ, ಅಕಸ್ಮಾತ್ ಆಕೆ ತಪ್ಪಿ ಯಾರೊ೦ದಿಗಾದರೂ ಆತ್ಮೀಯಳಾಗಿ ಬಿಟ್ಟಿದ್ದರೆ ಎ೦ದು ಸ೦ಕಟದಲ್ಲೇ ಆಕೆಯನ್ನು ಗಿಲ್ಟ್‍ಗೆ ದೂಡುವ ಮುನ್ನ, ತಮ್ಮಲ್ಲೇ ಆಕೆಯ ಬಗ್ಗೆ ಮಾತಾಡಿಆಡಿ ಬಾಯಿ ಹೊಲಸು ಮಾಡಿಕೊಳ್ಳುವ ಹೆ೦ಗಳೆಯರ ಮಧ್ಯೆ ನೈಜವಾದ ಸ್ನೇಹಿತರು ಇವತ್ತು ಸ೦ಶಯಕ್ಕೀ ಡಾಗುತ್ತಿದ್ದಾರೆ. ಆದರೂ, ಆಕೆ ಎಲ್ಲವನ್ನೂ ಭರಿಸುತ್ತಲೇ ಬ್ಲಾಕ್ ಮಾಡುತ್ತಾ ಮುನ್ನಡೆಯುತ್ತಿದ್ದಾಳೆ. ಉಳಿದವರು ಹಸಿ ಮತ್ತು ಹುಸಿ ಮನಸ್ಸುಗಳೊ೦ದಿಗೆ ಇನ್ನೊಬ್ಬರ ಪುಟ ತಡಕಲು ಹೊರಡುತ್ತಿದ್ದಾರೆ. ಬಾಧೆ ಯಾರಿಗೆ? ಉತ್ತರಿಸಬೇಕಾದ ಆಕೆ ತೆಪ್ಪಗಿದ್ದಾಳೆ. ಸರಿಪಡಿಸಲಾಗದಷ್ಟು ಕೊಳಕು ಮನಸ್ಥಿತಿಗಳು ಮತ್ತೆ ಕೊಚ್ಚೆಯಲ್ಲಿ ಮುಳುಗುತ್ತಿವೆ. ಆಕೆ ಮಾತ್ರ ಈಗ ಸ್ಟೇಟಸ್ಸು ಬದಲಿಸಿಕೊ೦ಡು ಕೂತಿದ್ದಾಳೆ. ಸರಿಪಡಿಸುವ ಯಾವ ದಾರಿಗಳೂ ನನ್ನೆದುರಿಗಿರಲಿಲ್ಲ. ಹೆಣ್ಣುಮಕ್ಕಳಿಗೇ ಯಾಕೆ ಹಿ೦ಗೆ? ನಾನೆಲ್ಲಿ೦ದ ಉತ್ತರಿಸಲಿ. ಮನಸ್ಸು ತಪ್ತ ತಪ್ತ... ಕಾರಣ ಅವಳು ಎ೦ದರೆ...


No comments:

Post a Comment