ತಾಯಿಯಾಗೋದು ಸುಲಭ... ಅಮ್ಮನಾಗೋದು...?
ಮಕ್ಕಳನ್ನು ಇನ್ನಿಲ್ಲದಂತೆ ಆವರಿಸಿಕೊಂಡು ಬೆಳೆಸಲೆತ್ನಿಸುವ ಅಮ್ಮಂದಿರ ಎಫರ್ಟುಗಳ ಮೇಲೆ ಕೊನೆಯ ಕ್ಷಣದಲ್ಲಿ ಕೆಲವೊಮ್ಮೆ ಗಂಡ ಸೇರಿದಂತೆ ಮನೆಯವರೇ ನೀರು ಸುರಿದಿರುತ್ತಾರೆ. ಹೋಗಲಿ ಬಿಡು ಎನ್ನುವಂತೆಯೂ ಇಲ್ಲ. ಇಲ್ಲಿವರೆಗಿನ ಪ್ರತಿಹಂತದ ಸಂಕಟ, ತಲ್ಲಣ, ತವಕ, ಪ್ರೀತಿ, ಮುಚ್ಚಟೆ, ವಗಾತಿ, ಐಡಲ್ ಆಗಿಸುವ ಉಮೇದಿ, ಅದರಲ್ಲೂ ಹೆಣ್ಣುಮಗುವಾಗಿದ್ದರೆ ಅದರ ಬಾಯಲ್ಲಿ ಮೊದಲ ಹೆಸರು ತನ್ನ ಅಮ್ಮನದೇ ಬರಲಿ ಎಂದು ಬಯಸಿ, ಎ ಜವಾಬ್ದಾರಿ ಓಡಾಟ, ಅಚ್ಚುಕಟ್ಟು, ಸಮಯ ಪಾಲನೆ, ಪ್ರತಿ ಹಂತದಲ್ಲೂ ವಹಿಸಬೇಕಾದ ನಿಗಾ, ಯಾವ ದಿನಕ್ಕೇ ಏನು..? ಯಾವಾಗ ಏನು ಪ್ರೋಗ್ರಾಂ ಇದೆ..? ಹೇಗೆ ಇದ್ದರೆ ಮಗಳಿಗೆ ಚೆಂದ ಮತ್ತು ಹೌದೆನ್ನಿಸಿತು, ಅದರ ಕಣ್ಣಲ್ಲಿ ‘ವಾಹ್ ಅಮ್ಮ...’ ಎನ್ನುವ ಅರಳಿಕೊಂಡ ಮುದ ಹೇಗೆ ಕಂಡೀತು? ಎಂದೆ ಯೋಚಿಸುವ ಆಕೆ, ಯಾವ ಹಂತದಲ್ಲೂ ಮಗಳ ಕಣ್ಣಲ್ಲಿ ನಿರ್ಲಕ್ಷ ಅಥವಾ ಅಮ್ಮನ ಹತ್ತಿರ ಆಗುತ್ತಿಲ್ಲ ಅನ್ನಿಸಿಕೊಳ್ಳುವ, ‘ಅಮ್ಮ ಪಾಪ..’ ಎನ್ನಿಸುವ ಭಾವನೆಗೆ ಈಡಾಗುವುದನ್ನು ಸಹಿಸಲಾರಳು. ಏನಾದರೂ ಸರಿ ಮಗುವಿನ ಮುಖದಲ್ಲಿ ತನ್ನೆಡೆಗೊಂದು ಹೆಮ್ಮೆ, ತನ್ನೆಡೆಗೊಂದು ಮುದಮುದ ಪ್ರೀತಿ ಇರಲಿ ಎಂದೇ ಬಯಸುತ್ತಾಳೆ.ಆದರೆ ಆಕೆಯ ನಿರೀಕ್ಷೆ, ಅಂದಾಜು, ಊಹಿಸುವಿಕೆಗೂ ಮೀರಿ ಮಗು ಇಬ್ಬಂದಿತನಕ್ಕೆ ಸಿಲುಕುತ್ತಲೇ, ಬೇರೆ ಪ್ರಭಾವಕ್ಕೊಳಗಾಗಲು ಆರಂಭಿಸುತ್ತದಲ್ಲ.. ಅದನ್ನು ಹೇಗೆ ಸಹಿಸಿಯಾಳು? ಹಡೆದ ಕೂಡಲೇ ತಾಯಿಯಾಗಿ ಬಿಟ್ಟರೂ ಅದನ್ನು ಬೆಳೆಸುತ್ತಾ ಅಮ್ಮನಾಗುವ ಪರಿಯಿದೆಯಲ್ಲ ಅದು ಒಂದು ಘಟನೆಯಲ್ಲಿ ನಡೆಯುವ ಕ್ರಿಯೆಯಲ್ಲ. ದೀರ್ಘಕಾಲದ ಸಮಯ, ಸೇವೆ ಮತ್ತು ಸಹನೆ ಮೂರನ್ನೂ ಬೇಡುವ ಪ್ರಕ್ರಿಯೆ ಅದು. ಯಾವ ತಾಯಿಯೂ ದಿನವೊಂದರಲ್ಲಿ ಅಮ್ಮನಾಗಲಾರಳು.ಅವಳು ನನ್ನ ಸ್ನೇಹಿತೆ ಎನ್ನುವುದಕ್ಕಿಂತಲೂ ಬಡಿದಾಡುತ್ತಲೇ ತೀವ್ರವಾಗಿ ಜೀವನಪ್ರೀತಿ ಉಳಿಸಿಕೊಂಡು ಏನೆಲ್ಲ ಅವಾಂತರಗಳ ಮಧ್ಯೆಯೂ ಕಾಲೂರಿ ನಿಂತು ಬದುಕಿನೊಂದಿಗೆ ಜಿದ್ದಿಗೆ ಬಿದ್ದಿರುವವಳು. ಆಕೆ ಇಂದೂ. ಯಾವ ತೀರಾ ಏರಿಳಿತಗಳಿಲ್ಲದ ಬದುಕಿನಲ್ಲಿ ಸುಲಭಕ್ಕೆ ಪ್ರೀತಿಗೆ ಬಿದ್ದು ಮದುವೆಯಾದಾಗ, ಅವಳ ಅದೃಷ್ಟಕ್ಕೂ ಆಕೆಯ ಆಯ್ಕೆಗೂ ಅದರಲ್ಲಿದ್ದ ಆಮೋದಕ್ಕೂ ಇಂದೂಳ ಸ್ನೇಹಿತೆಯರಿಗೇ ಉರಿದು ಹೋಗಿದ್ದೂ, ಅದನ್ನವರು ಹಿಂದಿಂದೆ ಆಡಿಕೊಂಡಿದ್ದು.. ಅದಕ್ಕೆ ಅವರ ಕಣ್ಣಿಗೆ ಆಕೆಯ ಬದುಕು ಬಲಿಯಾಯಿತಾ? ಅಥವಾ ಅದರಬ್ಬಾಕೆಯ ನಾಲಿಗೆಯ ಮೇಲೆ ಮಚ್ಚೆಗಳಿದ್ದುವಾ? ಭಗವಂತನೇ ಬಲ್ಲ.ಇಂದೂ ನಿರೀಕ್ಷಿಸದ ಬದುಕಿನ ತಿರುವಿಗೆ ಬಂದು ನಿಂತಿದ್ದಳು. ಮನೆ ಕಟ್ಟುವ ನಿರ್ಮಾಣ ಕಾಮಗಾರಿ ಕಂಪನಿಯಲ್ಲಿ ಕೈಹೂಡಿ ಕೂತಿzಳಿಗೆ ನನ್ನ ನಕ್ಷೆ ಸಿಕ್ಕಿದೆ. ಫೋನ್ ನಂಬರು ನೋಡುತ್ತಿದ್ದಂತೆ ಕರೆ ಮಾಡಿzಳೆ. ಅರೆಮರೆವಿನ ತಿರುವಿನಲ್ಲಿದ್ದವಳನ್ನು ನೆನೆಸಿಕೊಳ್ಳುತ್ತಾ, ‘ನೀನೇ ಅಲ್ಲಿದ್ದಿ ಅಂದರೆ ನನಗೆ ಕೆಲಸ ಸುಲಭವಾಗುತ್ತೆ ಬೀಡು ಬೇಗ ಪೇಪರ್ಸ್ ಕಳಿಸು’ ಎನ್ನುತ್ತಿದ್ದರೆ ‘ಅದ್ಯಾಕೆ ಕಳಿಸೋದು? ರೆಡಿ ಮಾಡಿಸುತ್ತೇನೆ ಸಾಯಂಕಾಲ ಬಂದು ಟ್ರೀಟ್ ಕೊಟ್ಟು ತೊಗೊಂಡು ಹೋಗು’ ಎಂದಳು. ವಸಂತ ನಗರದ ಹೆಗಲಿನ ಬಲಮೂಲೆಯಲ್ಲಿ ಮನೆ ಎನ್ನುವ ಅಡ್ಡೆಯಲ್ಲಿ ಬದುಕು ಕಟ್ಟಿಕೊಂಡು ಹೆಣಗುತ್ತಿರುವ ಇಂದೂಳನ್ನ ನೋಡುತ್ತಿದ್ದಂತೆ ಅನ್ನಿಸಿದ್ದು ಹಡೆದು ತಾಯಿಯಾಗೋದು ಸುಲಭ, ನಿಜವಾಗಿಯೂ ಮಕ್ಕಳಿಗೆ ಅಮ್ಮನಾಗೋದು?ಕಾರಣ ಪ್ರೀತಿ, ಪ್ರೇಮ, ಹನಿಮೂನು ಎಲ್ಲ ಮುಗಿದು ವರ್ಷ ಕಳೆವ ಹೊತ್ತಿಗೆ ಪ್ರೀತಿಸಿದ್ದ, ತಾನಂದುಕೊಂಡಿದ್ದ ಗಂಡಸು ಇವನಲ್ಲ ಎನ್ನುವುದರಿವಾಗುತ್ತಿದ್ದಂತೆ ಸುಖಾಸುಮ್ಮನೆ ಜಗಳಕ್ಕಿಳಿದು ರಂಪರಾಮಾಯಣ ಮಾಡಿಕೊಂಡಿಲ್ಲ ಆಕೆ. ಅದರಿಂದ ಯಾವ ಉಪಯೋಗವೂ ಆಗುವುದಿಲ್ಲ ಎನ್ನುವುದರಿವಾಗುತ್ತಿದ್ದಂತೆ ನಿಧಾನಕ್ಕೆ ಇದ್ದಲ್ಲೇ ತನ್ನ ದಾರಿ ತುಳಿಯುವ ನಿರ್ಧಾರ ಮಾಡಿದ್ದಾಳೆ. ಜತೆಗಿದ್ದೇ ಸಂಭಾಳಿಸುವ ನಿರ್ಧಾರಕ್ಕೆ ಬಂದಿದ್ದಾಳೆ. ಕಾರಣ ಎದುರಿಗಿದ್ದ ಮಗು ಬಾಯ್ತುಂಬಾ ಅಮ್ಮ ಅನ್ನುತ್ತದೆ. ರಾತ್ರಿಯಾಗುತ್ತಿದ್ದಂತೆ ಬೆನ್ನು ಕವುಚಿ ಹೊಟ್ಟೆ ಮೇಲೆ ಕಾಲು ಹಾಕಿ ತಬ್ಬಿ ಮಲಗುತ್ತದೆ. ಅರ್ಧರಾತ್ರಿಯಲ್ಲಿ ಕೊಂಚ ಕದಲಿದರೂ ರಪ್ಪನೆ ಕೈಚಾಚಿ ಬಾರಿಸುತ್ತದೆ, ಅಮ್ಮ ಎದ್ದು ಹೋದಾಳೆಂದು. ಹೇಗೆ ಹೊರಳಲು ಮನಸ್ಸಾದೀತು? ಬೆಳಗ್ಗೆ ಏಳುವಾಗಲೂ ಅಮ್ಮಾ ಎನ್ನುತ್ತದೆ. ಅರೆ ಬಿರಿದ ಕಣ್ಣು, ಜೊಲ್ಲು ಸುರಿದು ಮುzಗಿ ಕಾಣುವ ಗುಂಡು ಕೆನ್ನೆ, ಕೆದರಿದ ಜೊಂಪೆ ಕೂದಲು, ಮುzಯಾಗಿ ಅರ್ಧ ಎದ್ದು ನಿಂತ ಅಂಗಿ, ದೇವರಿಗೂ ಮುದ್ದು ಬಾರದಿದ್ದೀತೆ? ಮಗುವಿನ ವೆಚ್ಚವೆಲ್ಲ ತಾನೇ ನಿರ್ವಹಿಸುವ ಇಂದೂ ಯಾವತ್ತೂ ಪೈಗೆ ಪೈ ಲೆಕ್ಕಿಸುವ ಅವನ ಮುಲಾಜಿಗೀಡಾಗೇ ಇಲ್ಲ. ಅವನು ಗಂಡನಾದ. ಅಪ್ಪನಾಗಿರಲೇ ಇಲ್ಲ.ಆದರೆ, ಮಗು ಬೆಳೆಯುತ್ತಾ ಸಣ್ಣ ಬದಲಾವಣೆಗಳನ್ನು ಕಂಡಿತು. ಅಪ್ಪನಾದವ ಇದ್ದಕ್ಕಿದ್ದಂತೆ ಗಾಡಿ ಮೇಲೆ ರೌಂಡು ಹೊಡೆಸುವ, ಐಸ್ ಕ್ರೀಂ ಕೊಡಿಸುವ ಕ್ರಿಯೆಗಳೆಲ್ಲ ಮುಗ್ಧ ಮನಸ್ಸಿನ ಮಗುವನ್ನು ಸೆಳೆಯಿತು. ಇವಳೊಂದಿಗೆ ಮಾತ್ರ ಲೆಕ್ಕಾಚಾರದ ಜೀವನ ನಡೆಸುವವ ಮಗುವನ್ನೆತ್ತಿಕೊಂಡು ಬಣ್ಣದ ದಿರಿಸಿನ ಆಸೆ ತೋರಿಸುತ್ತಿದ್ದ. ಅದಕ್ಕಾಗಿ ಮಗು ಯಾವ ಎರಡನೇ ಯೋಚನೆ ಮಾಡದೆ ಅವನ ಮಗ್ಗಲು ಹತ್ತಿ ಕೂರುತ್ತಿತ್ತು. ಕಂಪ್ಯೂಟರ್, ಟಿ.ವಿ., ಮೊಬೈಲ್ ಆಪ್‌ಗಳು ಸೆಳೆದಷ್ಟು ಮಕ್ಕಳನ್ನು ಇನ್ನಾವುದೂ ಸೆಳೆಯಲಾರವು. ಅದಕ್ಕಾಗಿ ತನ್ನ ಸಣ್ಣ ಮೊಬೈಲ್ ಬದಲಿಗೆ ಅವನು ಆಕರ್ಷಿಸುವ ಮಾಡೆಲ್ -ನ್ ಎದುರಿಗಿಟ್ಟು, ಮಗುವಿನಲ್ಲಿ ಅದಮ್ಯ ಆಕರ್ಷಣೆ ಮೂಡಿಸುತ್ತಾ ಅಪ್ಪ ಎನ್ನುವ ‘ಸೂಪರ್ ಮ್ಯಾನ್’ ಇದ್ದಕ್ಕಿದ್ದಂತೆ ಆಕೆಯೆದುರಿಗೆ ಹೀರೋ ಆಗಲಾರಂಭಿಸಿಬಿಡುತ್ತಾನಲ್ಲ...! ರಕ್ತ ಸೋಸಿ ಮಗುವನ್ನು ಬೆಳೆಸುತ್ತಿರುವ ಯಾವ ಹೆಣ್ಣಿಗೆ ಸಂಕಟವಾಗಲಿಕ್ಕಿಲ್ಲ. ಇಂದೂ ಕಣ್ಣೆದುರಿಗೆ ಬಿಸಿತುಪ್ಪದಂತಹ ಒಳಸಂಕಟವನ್ನು ತೆರೆದಿಡುತ್ತಿದ್ದರೆ ಕೆಲವೊಮ್ಮೆ ಅವರಮ್ಮನೂ ಮಾಡಿಬಿಡುವ ಅಡ್ನಾಡಿಗಳಿಂದ ಆಗುತ್ತಿದ್ದ ಆಘಾತ ಇನ್ನೂ ದೊಡ್ಡದು.ಅವಳ ಮಗಳಿಗೀಗ ಹತ್ತರ ಆಸುಪಾಸು. ಎಲ್ಲ ಬಿಳಿ ಕಪ್ಪು ಗೊತ್ತಾಗೋ ವಯಸ್ಸದು. ಆದರೂ ಹಸಿ ಮಣ್ಣೂ ಕೂಡಾ ಹೌದು. ಬರೆದದ್ದು ಮೂಡಿಬಿಡುತ್ತದೆ. ಶಾಲೆಯ ತರಹೇವಾರಿ ಚಟುವಟಿಕೆಗಳನ್ನು ಇಂದೂ ಉಸುರುಕಟ್ಟಿ ಮಾಡಿಸುತ್ತಾಳೆ. ಸೃಜನಶೀಲತೆಯ ಯಾವ ಹಂತಗಳೂ ತಮ್ಮ ಹಳವಂಡಗಳಿಂದಾಗಿ ಕಡಿಮೆಯಾಗಬಾರದೆಂದು, ಶಾಲೆಯ ಚಿತ್ರಪಟ ಮಾಡಿಸುವುದು, ಫ್ಯಾನ್ಸಿ ಡ್ರೆಸ್ಸು, ಮಣ್ಣಿನಲ್ಲಿ ಗೊಂಬೆ ತಯಾರಿಸಲು ಸಹಾಯ ಮಾಡುವುದು, ಗಾಳಿಪಟದಲ್ಲೂ ವಿಭಿನ್ನತೆ ಮೂಡಿಸಿ ಅದರಿಂದಾಗಿ ಆಕೆಯ ಮುಖದ ಮೇಲೆ ಬೆರಗು ಮೂಡುವ ಕ್ಷಣಗಳಿಗಾಗಿ ಕಾಯುತ್ತಾಳೆ. ಗಣಿತದ ಚಾರ್ಟು, ಕಾಯಿಪಲ್ಯೆಗಳ ಕಟಿಂಗ್ಸು, ದೇಶ-ವಿದೇಶದ ನಕ್ಷೆ ಕತ್ತರಿಸಿ ಅಂಟಿಸುವುದು, ಒಂದಾ ಎರಡಾ...? ಇತ್ತ ನೌಕರಿ ಅತ್ತ ಮನೆಯಲ್ಲೂ ಅಡುಗೆ, ಮಗಳ ಡ್ರೆಸ್ಸು, ಅದಕ್ಕೆ ಸರಿಯಾದ ಟೈಮಿಗೆ ಕಾಲು ಚೀಲ, ಬ್ಯಾಗಿನಲ್ಲಿ ಆಯಾ ದಿನದ ಪುಸ್ತಕಗಳು, ಪೆಂಟಿಂಗ್ ಇದ್ದ ದಿನ ಬಣ್ಣ ಬ್ರಶ್ಶು, ಹೀಗೆ ಆಕೆ ಪ್ರತಿಹಂತದಲ್ಲೂ ಚಾಚೂ ತಪ್ಪದೇ ಮಾಡುತ್ತಾ ಮಗಳ ಕಣ್ಣಲ್ಲಿ ಹೆಮ್ಮೆಯ ಅಮ್ಮನಾಗಲು ಕಾಯುತ್ತಾಳೆ. ಆವತ್ತು ಬೆಳಗಿನಿಂದಲೇ ಆಕೆಯನ್ನು ರಾಧೆಯ ಪಾತ್ರಕ್ಕೆ ಬಟ್ಟೆ ಸಜ್ಜುಮಾಡಿ, ಗಡಿಗೆ ತಂದು, ಹೂವು, ಶೃಂಗಾರ ಎ ಮಾಡಿ ಸ್ಕೂಲಿಗೆ ಬಿಟ್ಟು ಬಂದು ತಾನೂ ರೆಡಿಯಾಗುವ ಹೊತ್ತಿಗೆ ಸಮಯ ಸರಿದೇ ಬಿಟ್ಟಿತ್ತು. ಆದರೂ ಸಾವರಿಸಿಕೊಂಡು ತಲುಪುವ ಹೊತ್ತಿಗೆ ಗಂಡನೆಂಬ ಭೂಪ ಮಗಳ ಜೊತೆ ಗಡಿಗೆ ಕೈಯ್ಯಲ್ಲಿ ಹಿಡಿದು ಪೋಸು ಕೊಡುತ್ತಾ ನಿಂತಿzನೆ! ಅದಕ್ಕೆ ಸರಿಯಾಗಿ ಹಿಂದೆ ಮುಂದೆ ಗೊತ್ತಿಲ್ಲದ ಹುಂಬ ಹೆಂಗಸರು ಇಂಥಲ್ಲಿ ಗಲಗಲ ಮಾತಾಡಿ ಬಿಡುತ್ತಾರಲ್ಲ. ‘ನಿಮ್ಮನೆಯವರು ಎಷ್ಟು ಅಪ್‌ಡೇಟ್ ಎಲ್ಲ ಮಾಡಿಕೊಂಡು ಬಂದಿದ್ದಾರೆ’ ಎನ್ನುತ್ತಿದ್ದರೆ, ಅಲ್ಲಿಗೆ ಬಂದಿದ್ದ ಅಮ್ಮನೂ ‘ಎಷ್ಟೊತ್ತು ನಿನಗೆ? ಅಳಿಯ ನಿನಗೂ ಮೊದಲು ಬಂದು ಎ ಮಾಡಿ ಕಾಯ್ತಿದಾರೆ’ ಎಂದು ಬಿಡಬೇಕೆ? ಅಲ್ಯಾರೋ ಗೊಣಗುತ್ತಿದ್ದಾರೆ ‘ಪುಟ್ಟಿಗೆ ಒಳ್ಳೆ ಡ್ಯಾಡಿ’ ಏನೂ ಅರಿಯದ ಮಗು ಇಂಪ್ರೆಸ್ ಆಗಿ- ‘ಅಮ್ಮ ಎಲ್ಲ ಆದ್ಮೇಲೆ ಬರ್ತೀಯಾ, ಅಪ್ಪಾ ನೋಡು... ಆಗ್ಲೆ ಅಜ್ಜಿನೂ..’ ಮುಂದಿನ ಮಾತು ಕೇಳಿಸಿಕೊಳ್ಳಲಿಲ್ಲ.‘ಇಷ್ಟೆಲ್ಲ ಮಾಡಿ ಮಗಳ ಮನಸ್ಸು ತಿರುಗಿಸುವ, ಅದಕ್ಕೆ ಸರಿಯಾಗಿ ಹೀಗೆ ನಾನೇನೂ ಮಾಡುತ್ತಿಲ್ಲ ಅಂದು ಬಿಟ್ಟರೆ ಹೆಂಗೋ ಸಂಭಾಳಿಸೋದು? ಸಂಕಟ ಆಗೋಲ್ವಾ? ಗಂಡನಾದವನಂತೂ ಇದ್ದೂ ಇದ್ದಂಗಿಲ್ಲ. ಆದರೆ, ಅಮ್ಮನಿಗೆ ಯಾವಾಗ ಏನು ಹೇಳಬೇಕು ಗೊತ್ತಾಗಲ್ವಾ? ಮಗು ಕಣ್ಣಲ್ಲಿ ಸಣ್ಣವಳಾಗೋ ಸಂಕಟಕ್ಕಿಂತ ತಾಯಿಯಾಗೋ ಸಂಭ್ರಮಾನೇ ಬೇಡಿತ್ತು ಅನ್ನಿಸೊಲ್ವೇನೋ..’ ಇಂದೂ ಬಿಕ್ಕಳಿಸುತ್ತಿದ್ದರೆ ಸುಮ್ಮನೆ ತಲೆ ಸವರಿ ನಿಂತು ಬಿಟ್ಟೆ. ಆ ಸಂತಾಪಕ್ಕೆ ಆ ಹೊತ್ತಿಗೆ ನಿಶಬ್ದಕ್ಕಿಂತ ಬೇರೆ ಮದ್ದಿರಲಿಲ್ಲ. ಅಮ್ಮನಾಗೋದರ ಹಿಂದೆ ಪ್ರತಿ ಹಂತದಲ್ಲೂ ಇರುವ ಆ ಸಂಕಟ, ಅಸಹಾಯಕತನ, ತುಮಲ, ಹತಾಶೆ ಇವೆಲ್ಲ ನೆನೆದೇ ನನ್ನ ಬೆನ್ನಹುರಿಗುಂಟ ಒಂದು ಕಂಪನ ಮೂಡಿತ್ತು. ಆದರೆ ಇಂದೂ ಮಾತ್ರ ‘ಇರ್ಲಿ ಬಿಡು...’ ಎನ್ನುತ್ತಾ ಎದ್ದು ನಿಂತಿದ್ದಳು. ಕಾರಣ ಅವಳು ಎಂದರೆ..
ಲೇಖನ ತುಂಬಾ ಹಿಡಿಸಿತು
ReplyDelete