Saturday, August 2, 2014

ಕನಿಷ್ಠ ಬೆರಳೆಣಿಕೆಯಶ್ತಾದರೂ ಜನರಿಗೆ ...

" ನೆನಪಾದಾಗೆಲ್ಲ ಇಂಥವನೊಬ್ಬ ಬೇಕಿತ್ತು ಎನ್ನಿಸುತ್ತಲೇ.. ಒಂದು ಸಣ್ಣ ಜಾಜಿಯಂತಹ ನಗು ನಿಮ್ಮ ತುಟಿ ಮೇಲೆ ಅರಳಿದಲ್ಲಿ ಅದಕ್ಕಿಂತ ದೊಡ್ಡ ಸಾರ್ಥಕತೆ ನನ್ನ ಬದುಕಿಗೆ ಬೇಕಿಲ್ಲ.. " ....................... - ಸ್ಯಾಮ್ .....
   ಸ್ನೇಹಿತರ ದಿನ... ಯಾರ್ಯಾರನ್ನು ನೆನೆಯಲಿ... ಆದರೆ ಅವರನ್ನು ನೆನಪಿಸಿಕೊಳ್ಳುವುದಕ್ಕಿಂತ ಬೆರಳ ಸಂದಿನಲ್ಲಿ ಮರಳಿನಂತೆ ಜಾರಿ ಹೋಗುವ ಬದುಕಿನಲ್ಲಿ.. ದಿನವೂ ಬದುಕಿ ನನ್ನಿಷ್ಟದಂತೆ ಬಿಡಬೇಕೆನ್ನುವ ಆದಮ್ಯ ಉತ್ಸಾಹ ತುಂಬುವ ದೂರ ದೂರದೂರಿನ ಗೆಳೆಯರು ಬಹುಷ: ಈ ಜಗತ್ತಿನ ಅತಿ ದೊಡ್ಡ ವಿಸ್ಮಯ .. ನನ್ನ ಬದುಕಿನಲ್ಲೂ...ಭೂಮಿಯ ಮೇಲೂ  
ನಾನು ಏನಾಗುತ್ತೇನೋ... ಏನು ಮಾಡುತ್ತೇನೋ ಗೊತ್ತಿಲ್ಲ. ಆದರೆ ಯಾರೊಂದಿಗೆ ಕೆಲವು ಘಳಿಗೆಗಳನ್ನು ಕಳೆದರೂ ಅಷ್ಟೇ ಹೊತ್ತಿನಲ್ಲೊಂದು ಚೆಂದನೆಯ ಸಮಯ ಸೃಷ್ಟಿಯಾಗಬೇಕೆನುವವನು ನಾನು ... 
ನಾವು ಬಹುಶ: ಯಾರ ಬದುಕಿನಲ್ಲೀ ಏನೂ ಆಗಲಾರೆವು.. ಆದರೆ ಯಾವತ್ತು ನನ್ನನ್ನು ನೆನೆಸಿಕೊಂಡರೂ ಅವರ ಮುಖದಲ್ಲೊಂದು ಸಣ್ಣನೆಯ ನಗುವರಳಿ ಹೋದರೆ ಈ ಭೂಮಿ ಕಂಡ ಅಧ್ಬುತ ಜಗತ್ತಿನ ಜೀವಿತದ ಸಾರಥಕತೆ ನನ್ನದು.. 
ಕಾರಣ ನಾವು ಸಾವಿರ ಜನರಿಗೆ ಉತ್ತರ ದಾಯಿತ್ವ ಗಳಾಗಬೇಕಿಲ್ಲ.. 
ಬೆರಳಣಿಕೆಯಷ್ಟು ಜನರಿಗೆ ಪ್ರತಿ ಸಂತೋಷದ ಸಂದರ್ಬದಲ್ಲೂ ..".. ಅವನಿರಬೇಕಿತ್ತು " ಅನ್ನಿಸುವಂತೆ..  ಕುಟುಂಬದ ಸದಸ್ಯರು ಕೊನೆಯ ತುತ್ತು ಬಾಯಿಗಿಡುವಾಗ ಚಕ್ಕನೆ "..ಇವತ್ತು ಅವನಿರಬೇಕಿತ್ತು ನಮ್ಮೊಂದಿಗೆ ಈ ತುತ್ತಿಗೆ..." ಎನಿಸುವಂತೆ.. ಎಲ್ಲೋ ಸ್ನೇಹಿತನೊಬ್ಬ ಕೊನೆಯ ಗುಕ್ಕು ಬಾಯಿಗೆ ಸುರಿದುಕೊಳ್ಳುವ ಮುಂಚೆ ನೆಲಕ್ಕೆ ನಾಲ್ಕು ಹನಿ ಚಿಮ್ಮಿಸಿ .. " ಅರೆ ತು ನಹಿ ಹೈ ರೆ ಸ್ಯಾಮ್ .... ಮಗರ್ ಏ ತೋ ತೆರೆ ನಾಮ ಸೆ.." ಎಂದು ನೆನೆಸಿಕೊಂಡು ಬಿಡುವುದಿದೆಯಲ್ಲ.. ಮನೆಯಲ್ಲೊಮ್ಮೆ ಅಪರೂಪಕ್ಕೆ ಖುಷಿ ಚಿಮ್ಮಿ ಅವಗಾಹನೆಗೂ ನಿಲುಕದ ಅಚಿವ್ ಮೆಂಟು ಅಂತಾ ಆಗಿ ಬಿಟ್ಟಾಗ ನನಗೂ ..ಒಂದು ಕರೆ ಮಾಡಿ " ಏ ಹಿಂಗಾತೋ .. ಮಾರಾಯ ನಿನ್ನ ನೆನಸಿಕೊಂಡವಿ ನೋಡ... " ಎನ್ನುತ್ತಾ ಅಲ್ಲೀಂದಲೇ " ನೀ ಇಲ್ಲ ಬಿಡಲೇ ಎಂಥಾ ಚಲೋ ಹೋಳಿಗ ಮಾಡಿದ್ವಿ.... " ಎಂದು ಬಿಡುವುದಿದೆಯಲ್ಲ.. " ತಪ್ಪಿ ಘಟಿಸಿ ಬಿಡುವ ಅವಘಡದ ಸಂದರ್ಭದಲ್ಲೂ - ಅವನಿದ್ದರೆ ಏನಾದರೂ ಒಂಥರಾ ಜೊತೆಗೆ ನಿಲ್ತಿದ್ದ .. " ಎಂದು ನಾನೇನು ಮಾಡದಿದ್ದರೂ ಜೊತೆಗಿರುವ ಸಾಂತ್ವನಕ್ಕಾಗಿ ನನ್ನ ಪ್ರಸ್ತುತಿ ಬಯಸಿದರೆನ್ನುವ ಕಾರಣಕ್ಕೆ....ಆಗೆಲ್ಲಾ ಒಂದು ಸಣ್ಣ ನಗುವರಳಿ ಸಂಬ್ರಮಿಸುವುದಿದೆಯಲ್ಲ ಇದಕ್ಕಿಂತ ದೊಡ್ಡ ಸಾರ್ಥಕತೆ ನನ್ನ ಬದುಕಿನಲ್ಲಿ ಬೇಕಾಗಿಲ್ಲ. ಅಷ್ಟೇ .. ಇದಕ್ಕಿಂತ ಬದುಕಿನ ಸಾರ್ಥಕತೆ ಬೇರೆ...ಬೇಕಾಗೆ ಇಲ್ಲ.. 
ಅಷ್ಟೇ .. ಬದುಕು ಮರಳಿನಂತೆ ಜಾರುವ ಮುನ್ನ ಅಲ್ಲಲ್ಲೇ.. ನಿಂತು ಬಿಡುವ ಸಣ್ಣ ಬಂಗಾರದ ಕಣದಂತೆ ಎಲ್ಲೆಲ್ಲೋ ಇರುವ ನನ್ನೆಲ್ಲಾ ಸ್ನೇಹಿತ / ಸ್ನೇಹಿತೆಯರಿಗೆ ಇವತ್ತು .. ಅದೇ ಒಂದು ಜಾಜಿ ನಗೆಯ ...ಸ್ಮೈಲಿ ... :) ಅವರೆಲ್ಲರ ಬದುಕೂ ತಣ್ಣಗಿರಲಿ .. ನಾನೂ ಅವರೊಂದಿಗೆ ಸುಖಿಸಿಯೇನು .... ಕಾರಣ ನಾವು ಏನೂ ಕೊಡಲಾರೆವು ..ಆದರೆ ಬೇಕಿದ್ದ ಕ್ಷಣದಲ್ಲಿ ಯಾರಿಲ್ಲದಿದ್ದರೂ ತಬ್ಬಿ ಅಳಲಿಕ್ಕೊಂದು ಹೆಗಲು... ಖುಶಿಯಲ್ಲಿ ಹಾಡಿ ಕೊಳ್ಳಲ್ಲಿಕ್ಕೊಂದು ಕಂಠವಾಗುವ ಭರವಸೆ ಹುಟ್ಟಿಸುವುದಿದೆಯಲ್ಲ.. ಬದುಕು ಏನೇ ಆದರೂ ಜೋತೆಗೊಬ್ಬನಿದ್ದಾನೆ ಎನ್ನಿಸಲು ಮನಸ್ಸಲ್ಲೇ ಹುಟ್ಟಿಸುವ ಕಾನ್ಫಿ ಡೆನ್ಸು ಬಹುಶ:  ಅದು ದೇವರೂ ಕೊಡಲಾರದ ವರ... ಅಂಥಾ ಸ್ನೇಹಿತ ನಾನಾಗಬೇಕು.. ಕನಿಷ್ಠ ಬೆರಳೆಣಿಕೆಯಶ್ತಾದರೂ ಜನರಿಗೆ ...
ಅಷ್ಟು ಸಾಕು ಈ ಬದುಕಿಗೆ...  (ಸಂಜೆ...)

No comments:

Post a Comment