Monday, May 23, 2016

ಯಾವ ಪ್ರೀತಿಯೂ ಅನೈತಿಕವಲ್ಲ...
ಪ್ರೀತಿ ಎನ್ನುವ ಅನುಭೂತಿಗೆ ಇರುವ ಪಾವಿತ್ರéತೆಯೇ ಬೇರೆ. ತಾನಾಗೇ ಉದ್ಬವಿಸುವ ಪ್ರೀತಿಗೆ "ರೀಸನಿ೦ಗ್' ಇಲ್ಲವೇ ಇಲ್ಲ. ಅಸಲಿಗೆ ಅದು ಬದುಕಿನ ಅಪೂವ೯ ಗಳಿಗೆಗಳ ಆರ೦ಭೀಕ ಪ್ರಕ್ರಿಯೆ. ಅದು ನಮ್ಮ ಅರಿವಿಗೂ ಮೊದಲೇ ಘಟಿಸಿದರೆ ಅದಕ್ಕೆ ಅನೈತಿಕ ಎನ್ನುವುದಾದರೂ ಹೇಗೆ
ನಾನು ಹುಬ್ಬಳ್ಳಿಯ ಕಚೇರಿಯಲ್ಲಿ ನೌಕರಿಗೆ ರಿಪೋಟಾ೯ಗುವಾಗ ಅಕಸ್ಮಾತಾಗಿ ಬಾಸ್‍ನ ರೂಮ್‍ನ ಕದ ತೆರೆದಾಗ ಆಕೆಯ ದಶ೯ನವಾಗಿತ್ತು. ಕೊ೦ಚ ಕಪ್ಪಗಿದ್ದರೂ ರೂಪವ೦ತೆ. "ಮತ್ತ ಬಾಸ್ ಆಕೀನ್ಯಾಕ ಇಟ್ಕೊ೦ಡಾನ೦ತ ಮಾಡಿದಿ. ಪಿ.ಎ. ಅ೦ತ ಆಕಿ ಹೆಸರಿಗಷ್ಟ. ಯಾವತ್ತರ ಕೆಲಸ ಮಾಡಿದ್ದು ನೋಡಿದೀಯೇನು?' ನನ್ನ ಜೊತೆಗಿರುತ್ತಿದ್ದ ರವಿ ಸರಕ್ಕನೆ ಅಷ್ಟೇ ವೇಗದಲ್ಲಿ ಆಕೆಯ ಕತೆಗೆ ಶುರುವಿಟ್ಟುಕೊಳ್ಳುತ್ತಿದ್ದರೆ, "ನೀ ನೋಡಿದೇಯೇನು? ಅವರಿಬ್ಬರೂ ಏನೇನು ಮಾಡ್ತಾರ೦ತ?' ಎ೦ದಿದ್ದೆ ತೀಕ್ಷ$್ಣವಾಗಿ. ನಾಲ್ಕು ಗೋಡೆಯ ಮಧ್ಯದಲ್ಲಿ ಹೀಗೇ ಆಗುತ್ತದೆನ್ನುವ ಹೆಣ್ಣುಮಕ್ಕಳ ಬಗೆಗಿನ ಇ೦ಥ ಪಾರ೦ಪರಿಕ, ರಸವತ್ತಿನ ನ೦ಬುಗೆಗಳ ಬಗ್ಗೆ ನನಗ್ಯಾವತ್ತೂ ಹೇಸಿಗೆ ಇದೆ. ರವಿ ತೆಪ್ಪಗಾಗಿದ್ದ. ಅಸಲಿಗೆ ಒ೦ದು ಹೆಣ್ಣು ಗ೦ಡು ಸೇರಿದರೆ ಅವರಿಬ್ಬರ ಮಧ್ಯೆ ಕಾಮವೇ ಜರುಗಿಬಿಡುತ್ತದೆ, ಅಫೆೀರ್ ಆಗಿಯೇ ಬಿಟ್ಟಿರುತ್ತದೆ ಎ೦ದು ಯಾಕಾದರೂ ಅ೦ದುಕೊಳ್ಳಬೇಕು? ಕಾರಣ ಆಕೆಗೆ ಬೇಕಿದೆಯೋ ಇಲ್ಲವೋ ಅವನ೦ತೂ ಟೆù ಮಾಡೇ ಮಾಡುತ್ತಾನೆ ಎನ್ನುವ ನ೦ಬಿಕೆಗೆ ಪಕ್ಕಾಗಿರುವುದರಿ೦ದ ಇತರ ಗ೦ಡಸರಲ್ಲೂ ಸಹಜ ಎನ್ನಿಸಿಬಿಟ್ಟಿರುತ್ತದೆ. ಜತೆಗೆ ಹೀಗೆ ಭರಾಟೆಯ ಹುಡುಗೀಯರ ಬಗ್ಗೆ "ಸುಮಾರಿನವಳು' ಎ೦ದು ಅ೦ದುಕೊ೦ಡಿರೋದು. ಆ ಬಗ್ಗೆ ಆಕೆನೂ ತಲೆ ಕೆಡಿಸಿಕೊ೦ಡ೦ತಿರಲಿಲ್ಲ ಅಥವಾ ಆಕೆ ಬಿ೦ದಾಸ್ ಇರುತ್ತಿದ್ದ ರೀತಿಗೆ ಹಾಗನ್ನಿಸುತಿತ್ತಾ? ಗೊತ್ತಿಲ್ಲ. ಒಟ್ಟಿನಲ್ಲಿ, ನನ್ನ ಕೆಲವೇ ತಿ೦ಗಳ ಅರೆಉದ್ಯೋಗ ಕೊನೆಯಾಗುವವರೆಗೂ ಆಕೆಯ ಜೊತೆ ಮಾತು ಬಿಡಿ ಕ೦ಪನಿ ಕೆಲಸಗಾರ ಎನ್ನುವ ಪರಿಗಣನೆಗೂ ಬಾರದ೦ತಿದ್ದೆ. ಅದರಲ್ಲೂ ಹೀಗೆ ಸು೦ದರಿ, ಬಾಸ್‍ನ ಪಿ.ಎ... ಎ೦ಬೆ ಲ್ಲಾ ಇರುವ ಹೆಣ್ಣುಮಕ್ಕಳ ಖದರೆ್ರ ಬದಲಾಗಿರುತ್ತದೆ. ಅದೊ೦ದು ರೀತಿಯ ವಿನಾಕಾರಣ ಇಗ್ನೋರೆನ್ಸ್ ಬ೦ದುಬಿಟ್ಟಿರುತ್ತದೆ. ಸ್ತರಗಳ ವ್ಯತ್ಯಾಸದ ಪರಿಣಾಮ ಆಕೆಯನ್ನು ನೋಡಿದವರೆಲ್ಲರೂ ಸುಖಾಸುಮ್ಮನೆ ಸಿಡಿಸಿಡಿ ಎನ್ನುತ್ತಿದ್ದರು. ನಾನು ಕೆಲಸ ಕೈಬಿಟ್ಟು ಹೊರಬೀಳುವಾಗ ಆಕೆಯ ರೂಮಿಗೆ ನುಗ್ಗಿ, ಟೈಪು ಮಾಡಿದ್ದ ನನ್ನ ವಿಳಾಸ ಇರುವ ಚೀಟಿ ಇಡುತ್ತಾ ಜಗತ್ತಿನ ಅಷ್ಟೂ ದಪ೯ದಲ್ಲಿ ಅಧ೯ ನನ್ನದೇ ಎನ್ನುವ೦ತೆ "ಈ ಅಡೆ್ರಸ್ಸಿಗೆ ನನ್ನ ಪಗಾರ ಕಳಸಾಕ ಹೇಳ್ರಿ' ಎ೦ದು ರಾಚಿ ಬ೦ದಿದ್ದೆ. ಆಕೆಯ ಮುಖದ ಮೇಲೆ ಅದರ ಎರಡರಷ್ಟು ದಪ೯ವೂ, ಆ ಚೀಟಿಯೆಡೆಗೆ ಒ೦ದು ಸಣ್ಣ ವ್ಯ೦ಗ್ಯವೂ ಇದ್ದಿದ್ದು ಸ್ಪಷ್ಟವಾಗಿ ಕ೦ಡಿತ್ತು. ಆಕೆ ವಿಜಯಾ. ಕೆಲಸ ಹೋಗಿ, ಹುಬ್ಬಳ್ಳಿಯ ನನ್ನ ಚಾಳ್‍ನ ರೂಮು ಖಾಲಿ ಮಾಡಿ ಕಬೋಜಿಯಾಗಿದ್ದೇನಲ್ಲ, ಆರೆ೦ಟು ತಿ೦ಗಳು ನಿರುದ್ಯೋಗ ಪವ೯ ಮುಗಿದು ಬೆ೦ಗಳೂರು ಸೇರಿ ಬೆಳಗ್ಗೆ ಆಫೀಸು ತಲುಪಿದರೆ, ರಿಜಿಸ್ಟರ್‍ನಲ್ಲಿ ಲಿಸ್ಟು ಬರೆಯುತ್ತಾ ಕುಳಿತಿದ್ದಾಳೆ. ಹೇಯ್... ಎನ್ನುತ್ತಾ ನೋಡುವಷ್ಟರಲ್ಲಿ ಆಕೆ ಸಹಜವಾಗಿ "ನೀನು ಗೊತ್ತು' ಎನ್ನುವ೦ತೆ ನಗೆ ಬೀರಿದ್ದಳು. ಈಗ ಆ ಖದರ್ರು ಇರಲಿಲ್ಲ. ಸರಾಗ ಪರಿಚಯಕ್ಕೀ ಡಾಗಿದ್ದಳು. ನಾನ್ಯಾವತ್ತೂ ಆಕೆಯನ್ನು "ಹುಬ್ಬಳಿಯಲ್ಲಿ ಬಾಸ್‍ನ ಮಗನ ಜತೆಗೆ ಇದ್ಯಾ?' ಎ೦ದು ತಪ್ಪಿಯೂ ಕೇಳಲಿಲ್ಲ. ಆದರೆ ಆಗೀಗ ನಾನು ಬಿಸಾಕಿ ಬ೦ದಿದ್ದ ಚೀಟಿ ವಿಷಯ ಎತ್ತಿ "ಅದೇನು ವಿಸಿ೦ಟಿ೦ಗ್ ಕಾಡಾ೯? ಅದೇನು ವಜನ್ ತೋಸಿ೯ದ್ದಿ! ಏನ್ ಸೊಕ್ಕ ಇವ್ನಿಗೆ ಅನ್ಕೊ೦ಡಿದ್ದೆ ನೋಡು' ಎನ್ನುತ್ತಿದರೆ ನಾನು "ಇನ್ನೇನು ಮಾಡ್ಲಿ. ಪೇಮೆ೦ಟು ಸರೀಗಿಲಿ೯ಲ್ಲ. ಕಿರಕಿರಿ ಜಾಸ್ತೀ. ಎ ಲ್ಲಾ ಸೆಟ್ಲಾಗೋದು ಲಾಸ್ಟ್ ಸೀನ್ ಬ೦ದಾಗ್ಲೆ ತಾನೆ?'ಎನ್ನುತ್ತಿದ್ದೆ. ಎರಡೇ ವಷ೯. ವಿಜಯಾ ಮು೦ಬ್ಯೆಗೆ ಹೊರಟಿದ್ದಳು. ಅದ್ಯಾವಾಗ ಆ ಮಾವಾ೯ಡಿಯ ಹುಡುಗನ ಸ೦ಗಡ ಪ್ರೀತಿ ಮೂಡಿತ್ತೋ? ನಮ್ಮ ಹುಡುಗರ ಹಿ೦ಡಿಗೆ ಪಾಟಿ೯ ಕೊಟ್ಟಿದ್ದಳು. ನೋಡುತ್ತಿದ್ದ೦ತೆ ಕೆಲಸಕ್ಕೆ ರಾಜೀನಾಮೆ ಕೊಟ್ಟು ಮು೦ಬ್ಯೆ ಸೇರಿದ್ದಳು. ಅಲ್ಲಿ೦ದಾಚೆಗೆ ವಿಜಿ ಬರೀ ಇತಿಹಾಸ. ಸತತ ಒ೦ದು ದಶಕದ ಅವ˜-ಯಲ್ಲಿ ಮಾತಿಗೆ ನಿಲುಕಿದ್ದೇ ನಾಲ್ಕಾರು ಬಾರಿ ಇರಬೇಕು. "ನಾಳೆ ಆಫೀಸಿಗೆ ಬತೀ೯ದಿನಿ. ಇತೀ೯ಯಾ?' ಇದ್ದಕ್ಕಿದ್ದ೦ತೆ ಕರೆ ಮಾಡಿದ ವಿಜಿ, ಒ೦ದೆರಡು ಪಾಲಿಸಿಗಾಗಿ ವಿನ೦ತಿಸಿದ್ದಳು. ಮೊದಲೊಮ್ಮೆ ಯಾಮಾರಿದ್ದ ಹುಡುಗಿ ಮತ್ತೆ ಹಳ್ಳಕ್ಕೆ ಬಿದ್ದಿದ್ದಳಾ? ಇಲ್ಲ ಎನ್ನುವುದಾದರೂ ಹೇಗೆ? ಸೋತು ಹೋದ೦ತಿದ್ದ ಅವಳ ಮುಖ ನೋಡುತ್ತಿದ್ದರೆ ಮನಸ್ಸು ವಿಲವಿಲ ಎನ್ನುತ್ತಿತ್ತು. ಪ್ರೀತಿ ಎನ್ನುವ ನ೦ಬಿಕೆಯನ್ನು ಹೇಗೆ ಲ್ಲಾ ಬಳಸಿಕೊ೦ಡು ಬಿಡುತ್ತಾರಲ್ಲ ಎ೦ದು. ಕೊ೦ಚವೇ ಬಿಳಿಗಟ್ಟಿದ ಮು೦ಗೂದಲು, ಆದರೂ ಬಡಿದಾಡಬಲ್ಲ ಆತ್ಮವಿಶ್ವಾಸ ಇನ್ನು ಕಣ್ಣಲ್ಲಿ ನಿಗಿನಿಗಿ ಎನ್ನುತ್ತಿತ್ತಾದರೂ, ವಯಸ್ಸು ಸಾಥ ಕೊಡುತ್ತಿರಲಿಲ್ಲ. ಇ೦ಥ ಸನ್ನಿವೇಶ ತು೦ಬಾ ಹಿ೦ಸೆಗೀಡು ಮಾಡುತ್ತದೆ. ಸಹಾಯಕ್ಕಾಗಿ ಬರುವವರ ಮುಖದ ಮೇಲೆ "ಹೇಗೆ ಕೇಳಲಿ' ಎನ್ನಿಸುವ ಅವಮಾನದ ಎಳೆಗಳು ಮುಖದ ಮೇಲೆ ಕದಲುತ್ತಿರುತ್ತವೆ. ಇವನ ಹತ್ತಿರವೂ ಏನಾದರೂ ಆದೀತಾ, ಇಲ್ಲವಾ ಎನ್ನುವ ಆತ೦ಕಭರಿತ ಇನ್‍ಸೆಕ್ಯೂರಿಟಿ, ಒತ್ತಾಯದ ನಗೆಯ ಹಿ೦ದೆ ಅವಿತಿರುತ್ತದೆ. ಕೈ ಅವಳಿಗರಿವಿಲ್ಲದೆ ಒ೦ದರಲ್ಲೊ೦ದು ಹೊರಳುತ್ತಿರುತ್ತವೆ. ಆದರೂ ಹೆಣ್ಣುಮಗಳೊಬ್ಬಳು "ಏನೂ ಆಗಿಲ್ಲ ಬದುಕಿನ ಗುದ್ದಾಟದಲ್ಲಿ ಸ್ವಲ್ಪ ಕಷ್ಟಕ್ಕೀ ಡಾಗಿದ್ದೇನೆ' ಎನ್ನುವುದನ್ನು ನಗುನಗುತ್ತಲೇ ಪೇಲವವಾಗಿ "ಹಿ೦ಗಾಯ್ತು ನೋಡು..ಇಲಿ೯ ಬಿಡು..' ಎ೦ದು ಸಾವರಿಸಿಕೊಳ್ಳುತ್ತ, ಕುಚಿ೯ಯಲ್ಲಿ ಪೂತಿ೯ ಕೂರದೆ ಚಡಪಡಿಸುತ್ತಿದ್ದರೆ ನಾನು ಸ್ವತಃ ಮುಳ್ಳಿನ ಮೇಲೆ ಕೂತ೦ಗಾಗಿಬಿಡುತ್ತೇನೆ. ದುಡ್ಡು ಬೇಕಿತ್ತು ಎನ್ನುವವರ ಎದುರು ಬಿ೦ದಾಸ್ ಮಾತಾಡಿ ಬಿಡಬಹುದು. ಆದರೆ ಹೀಗೆ ಮುಲಾಜಿಗೂ, ಜೀವ ಸಣ್ಣದು ಮಾಡುತ್ತಾ ಕೂರುವ ಹೆಣ್ಣುಮಕ್ಕಳ ಫ್ರ ಸ್ಟ್ರೇ ಶನ್ನಿನ ಕದಲುವಿಕೆ ನೋಡುವುದಿದೆಯಲ್ಲ ಅತೀ ದೊಡ್ಡ ಹಿ೦ಸೆ. ಸುಮ್ಮನೆ ಎರಡೆರಡು ಬಾರಿ ಮೇಜಿನ ಮೇಲಿದ್ದ ಜಗ್ಗಿನಿ೦ದ ನೀರು ಬಗ್ಗಿಸಿ ಕುಡಿದ್ದಿದ್ದಳು. "ಎಲ್ಲ ಕಡೆ ಪಾಲಿಸಿ ಮಾಡ್ಸಿಕೊ೦ಡು ಬ೦ದೆ. ನೀನು ಇಲ್ಲೆ ಇದ್ದಿಯಲ್ಲ ಅ೦ತಾ ಗೊತ್ತಿತ್ತಲ್ಲ. ಅದಕ್ಕೆ ಫ಼ೋನ್ ಮಾಡಿದೆ. ಒ೦ದು ಸಣ್ಣ ಪಾಲಿಸಿ ಮಾಡ್ಸು. ಕೋಟಾ ಪೂತಿ೯ ಆದರೆ ಒಳ್ಳೆದು. ಇಯರ್ ಎ೦ಡು...' ಎನ್ನುತ್ತಿದ್ದರೆ ನಾನು ಸುಮ್ಮನಾಗಿಬಿಟ್ಟೆ. ಕಾರಣ ಹಿ೦ದೊಮ್ಮೆ ಮನೆಗೆ ಬ೦ದಿದ್ದ ಕವಿತ್ತಕ್ಕನ್ನ ಎದುರಿಸುವಾಗಲೂ ಹೀಗೆ ಅನುಭವಿಸಿದ್ದೆ. ಅದೊ೦ದು ರೀತಿಯ ಭರಿಸಲಾಗದ ಜೀವ ಚುರೆ್ರನ್ನುವ ಅನುಭವ. ಅದಾದ ಎರಡ್ಮೂರು ದಿನಗಳ ಕಾಲವೂ ಬೇಡದಿದ್ದರೂ ನೆನಪಾಗಿ ಕವಿತಕ್ಕ ಕಾಡುತ್ತಲೇ ಇದ್ದಳು. ಇ೦ಥ ವಯಸ್ಸಿನಲ್ಲಿ ಮತ್ತೊಮ್ಮೆ ಬದುಕು ಕಟ್ಟಿಕೊಳ್ಳಲು ಹೆಣ್ಣುಮಗಳೊಬ್ಬಳು ರಸ್ತೆಗೆ ಇಳಿಯೋದಿದೆಯಲ್ಲ ಅದಕ್ಕಿ೦ತ ಘೋರ ಇನ್ನೊ೦ದಿರಲಾರದು. ವಯಸ್ಸು ಮಾಗಿ ಬಿಟ್ಟಿರುತ್ತದೆ. ಮನಸ್ಸಿಗೂ ದೇಹಕ್ಕೂ ಬದುಕಿನ ಬಿಸಿ ತಾಗಿರುವುದೇ ಇಲ್ಲ. ಈಗ ಹೊಸ ಸ೦ಕಟಗಳಿಗೆ ತೆರೆದುಕೊಳ್ಳುತ್ತಾ ಶೂನ್ಯದಿ೦ದ ಆರ೦ಭೀಸಬೇಕಾಗುವ ಬೇಗುದಿ ಮತ್ತು ಅನಿವಾಯ೯ತೆ. ಆಗುತ್ತದೋ ಇಲ್ಲವೋ ಎನ್ನುವ ಒಳ ಆತ೦ಕವೇ ದಿನವೂ ಹಣಿಯುತ್ತಿರುತ್ತದೆ. ತು೦ಬ ಸಮಯವೂ ಇರುವುದಿಲ್ಲ. ತುತಾ೯ಗಿ ಬದುಕು ಮತ್ತೆ ಎತ್ತಿ ನಿಲ್ಲಿಸಿಕೊಳ್ಳುವ ಅಗತ್ಯತೆ ಇರುತ್ತದೆ. ಎಲ್ಲಕ್ಕಿ೦ತಲೂ ಹೆಚ್ಚಾಗಿ ನ೦ಬಿದ್ದ ಪ್ರೀತಿ ಕೈ ಕೊಟ್ಟು, ಮತ್ತೊಮ್ಮೆ ಬದುಕಿನಲ್ಲಿ ಹೊಸ ಕಾಮನಬಿಲ್ಲು ಝೇ೦ಕರಿಸಲಾರದು ಎನ್ನುವ ಮಾರಣಾ೦ತಿಕ ನೋವು ಹêದಯದ ಮೂಲೆಯಲ್ಲಿ ಅವಿತು ಕೂತ ಮುಳ್ಳಿನ೦ತೆ ಚುಚ್ಚುತ್ತಿರುತ್ತದೆ. "ಅಧ೯ ಗ೦ಟೆ ಕೂರು ಮನೆಗೇ ಹೋಗೋಣ' ಎ೦ದೆ. ನಿಶಬ್ದವಾದ ಕಾರಿನಲ್ಲಿ ಮ೦ದ್ರವಾಗಿ ವಿಜಿ ನುಡಿಯುತ್ತಿದ್ದರೆ ಪ್ರತಿಕ್ರಿಯಿಸಲು ನನ್ನಲ್ಲಿ ಯಾವ ಶಬ್ದಗಳೂ ಇರಲಿಲ್ಲ. "ನಾನು ಮು೦ಬ್ಯೆಗೆ ಹೋಗಿದ್ದು, ಹೋದ ಮೇಲೆ ಅವನಿಗೆ ಮದುವೆ ಆಗಿ ಬಿಟ್ಟಿದೆ ಎನ್ನುವುದೂ ಗೊತ್ತಾಗಿದ್ದೂ ಎಲ್ಲ ಸರಿನೆ. ಆದರೆ, ಆವತ್ತು ಪ್ರೀತಿಯನ್ನು ನ೦ಬಿ ಹೋದಾಗಿನ ವಿಜಯ೦ಗೂ ಈಗಿರೋ ನನಗೂ ಯಾವ ವ್ಯತ್ಯಾಸವೂ ಇಲ್ಲ. ಆದರೆ ಪ್ರೀತಿಸಿ ಹೋಗಿದ್ದನ್ನು, ಏನೋ ಎಡವಟ್ಟಾದ ತಕ್ಷಣ ನನ್ನ ಪ್ರಕ್ರಿಯೆ ನೋಡುಗರ ದೃಷ್ಟಿಯಲ್ಲಿ ಸುಮಾರಿನವಳು ಅ೦ತಾ ಯಾಕಾಗೆºೀಕು? ಹಾಗಿದ್ದರೆ ಅವನ ವತ೯ನೆಗೆ ಯಾಕೆ ಯಾರೂ ಏನೂ ಹೇಳ್ತಿಲ್ಲ? ಆವಾಗ ಗೊತ್ತಾಗಿದ್ದು ಸಮಾಜಕ್ಕೆ ಪ್ರೀತಿಗೂ, ಅನೈತಿಕಕ್ಕೂ ವ್ಯತ್ಯಾಸವೇ ಗೊತ್ತಿಲ್ಲ ಅ೦ತ. ಹೆಣ್ಣಿನ ಕ್ರಿಯೆ ಮಾತ್ರ ಅನೈತಿಕ ಅನ್ನೋ ವ್ಯವಸ್ಥೆ ನಮ್ಮ ಬಾಳಿನ ಅತಿದೊಡ್ಡ ದುರ೦ತ. ನಾನು ಮೋಸ ಹೋದ ಮಾತ್ರಕ್ಕೆ ನನ್ನ ಪ್ರೀತಿ ಅನೈತಿಕ ಯಾಕಾಗ್ತದೆ? ಅವನು ಮಾಡಿದ್ದಕ್ಕೆ ಏನೂ ಇಲ್ವಾ?' ವಿಜಿಯ ಮಾತುಗಳಿಗೆ ನನ್ನಲ್ಲಿ ಉತ್ತರವಿರಲಿಲ್ಲ. ವಿಜಿಯ ಕತೆ ಮು೦ದಿನ ವಾರಕ್ಕಿರಲಿ. ಆದರೆ, ಒ೦ದ೦ತೂ ನಿಜ. ಪ್ರೀತಿ ಯಾವತ್ತೂ ಅನೈತಿಕವಲ್ಲ, ಅದೇ ಬೇರೆ ಇದೇ ಬೇರೆ. ಪುರುಷನೋವ೯ನ ಇ೦ತಹ ಕ್ರಿಯೆಯನ್ನು ಮನ್ನಿಸಿಬಿಡುವ ನಮಗೆ, ಆಕೆಯ ಪ್ರೀತಿ ಯಾಕೆ ಸುಮಾರಿನದ್ದು ಅನ್ನಿಸಬೇಕು? ಆಕೆಯ ನಡತೆ ಸುಮಾರಿ೦ದು ಅನ್ನಿಸುವುದಾದರೆ ಅಷ್ಟೆ ಪಾಲುದಾರನಾದ ಅವನದ್ದು? ಆಕೆಯ ಪ್ರೀತಿ ಮಾತ್ರ ಅನೈತಿಕವಲ್ಲವಲ್ಲ. ಕಾರಣ ಅವಳು ಎ೦ದರೆ...

Sunday, May 15, 2016

ಬೇಗ ದೊಡ್ಡವಳಾದದ್ದು ನನ್ನ ತಪ್ಪಾ...?

ಕೆಲವೊಮ್ಮೆ ಬೇಕಿದ್ದಾ ಬೇಡದೆಯೋ ಅರಿವಿಲ್ಲದೆ ದ್ವೇಷ ಬೆಳೆಸಿಕೊಂಡು ಬಿಡುವ ಹೆಂಗಸರು ಕೊನೆಯವರೆಗೂ ಅದರಿಂದ ಹೊರಬರದೆ ಹೋಗುತ್ತಾರೆ. ಆದರೆ, ಅಂಥ ಯಾವುದೇ ಸಂಕಟಗಳಿದ್ದರೂ ಅವನ್ನೆಲ್ಲ ಮೀರಿ ಸಹ್ಯವಾಗುವಂತೆ, ಬದುಕೋದಿದೆಯಲ್ಲ ಅದನ್ನೂ ಬಹುಶಃ ಹೆಣ್ಣುಮಕ್ಕಳಷ್ಟು ಚೆನ್ನಾಗಿ ಇನ್ನಾರೂ ಮಾಡಲಿಕ್ಕಿಲ್ಲ.

 ತುಂಬಾ ಹೆಣ್ಣುಮಕ್ಕಳು ಕಾರಣವೇ ಇಲ್ಲದೆ ಅಸಹನೆ ಪ್ರಕಟಿಸುತ್ತಿರುತ್ತಾರೆ. ಕಾಮೆಂಟು, ರೇಗುವುದು ಕೊನೆಯಲ್ಲಿ ಮುಖ ದಪ್ಪಮಾಡಿ ಹೊರಡುವುದು. ಅದರಲ್ಲೂ ಕಿರಿಕಿರಿಯಾಗುವಂತೆ ಸಣ್ಣ ಸಣ್ಣದಕ್ಕೂ ರೇಗುತ್ತಿರುತ್ತಾರೆ. ಪದ್ದಿ ಚಿಕ್ಕಿ ಹೀಗೆ ಬೈದು ಬೈದೇ ಕೊನೆಯಲ್ಲಿ ತೀವ್ರ ಹೊಡೆದಾಟದವರೆಗೂ ಪ್ರಕರಣ ಬೆಳೆಯಲು ಕಾರಣವಾದದ್ದು ಲಕ್ಷ್ಮೀ ಬೇಗ ದೊಡ್ಡವಳಾದಳೆಂಬ ಕಾರಣಕ್ಕೆ ಆಕೆಯನ್ನು ನಿರಂತರವಾಗಿ ಹಂಗಿಸುತ್ತಿದ್ದುದು!ನಮ್ಮೆಲ್ಲ ಹುಡುಗರ ಗುಂಪಿನಲ್ಲಿ ಅಪರೂಪದ ದೈತ್ಯ ಹುಡುಗಿ ಲಕ್ಷ್ಮೀ. ನಮ್ಮೆಲ್ಲರನ್ನು ಹಿಂದಿಕ್ಕಿ ಮರ ಏರುವುದು, ನದಿಗೆ ಬೀಳುವುದು, ಗೇರಣ್ಣು, ಕ್ಯಾರಣ್ಣು ಸೇರಿದಂತೆ ಬ್ಯಾಣದಲ್ಲಿ ತಿರುಗುತ್ತಾ, ಕೊನೆಗೆ ಕಂಬಳಿಗೊಪ್ಪೆ ಹಾಕಿಕೊಂಡು ‘ಉಂಬಳ ಹಿಡಿತದೆ’ ಎಂದು ನಾವೆಲ್ಲ ನೀರಿಗೆ, ಗದ್ದಾಗೆ ಇಳಿಯಲು ಹಿಂದೇಟು ಹಾಕುತ್ತಿದ್ದರೆ ಗದ್ದಾಯಲ್ಲಿ ಆಕೆಯ ಗುದಮುರಿಗೆ ಶುರುವಾಗಿ ಆಗಲೇ ಒಂದು ಗಂಟೆಯಾಗಿರುತ್ತಿತ್ತು. ಅಷ್ಟಾಗಿ ಆಕೆಗೇನೂ ಇಂಥಾದ್ದೇ ಕೆಲಸ, ಆಟ, ಊಟ ಎಂದೇನೂ ನಿಯಮವೂ ಇರುತ್ತಿರಲಿಲ್ಲ. ಅನಾಮತ್ತಾಗಿ ಮರ ಹತ್ತುವುದೂ ಸೇರಿದಂತೆ ಎಲ್ಲ ರೀತಿಯ ಗೌಜಿಗೂ ಪಕ್ಕಾಗುತ್ತಿದ್ದಳು. ‘ಶೀ... ಹುಡ್ಗಿ ಎಂತಾ ನಮನೀ ಇದು’ ಎಂದು ರೇಗಿಸಿದರೆ, ‘ನಾನಿಲ್ದಿದ್ರೆ ಒಂದ್ ಸೌಂಡೂ ಇರದಿಲ್ಯೆ ತಿಳ್ಕಾ’ ಎಂದು ಕಣ್ಣು ಬೀಡುತ್ತಿದ್ದಳು. ಅದು ನಿಜವೂ ಆಗಿತ್ತು. ಲಕ್ಷ್ಮೀ ಇದ್ದಲ್ಲಿ ಜೀವಂತಿಕೆ ಇರುತ್ತಿತ್ತು.
ಆದರೆ, ಆಕೆ ತೀರಾ ಹತ್ತರ ಆಸುಪಾಸಿಗೆ ದೊಡ್ಡವಳಾದಳಲ್ಲ, ಆಗ ಶುರುವಾಯಿತು ನೋಡಿ ಜಟಾಪಟಿ! ಆಕೆ ಹುಡುಗರೊಂದಿಗೆ ಬೆರೆಯುವಂತಿಲ್ಲ. ಮರ ಹತ್ತುವಂತಿಲ್ಲ. ಈಸು ಬೀಳುವಂತಿಲ್ಲ. ‘ತಿಂಗಳಿಗೆ ಮೂರು ದಿನ ಕಟ್ಟುನಿಟ್ಟು ಹೊರಗೆ ಕೂತುಕೋ’ ‘ಅಲ್ಲಿ ಅದು ಮುಟ್ಬೇಡಾ, ಇಲ್ಲಿ ಹಾಯಬೇಡಾ ಮೈಲಿಗೆ’ ಎನ್ನುವುದೆಲ್ಲ ಹೇಗೋ ಸೈರಿಸಿಕೊಳ್ಳುತ್ತಿದ್ದಳೇನೋ ಆದರೆ ತಿನ್ನುವ ವಿಷಯದಲ್ಲಿ ಅತ್ತೆ ಪದ್ದಿ ಚಿಕ್ಕಿಗೂ ಆಕೆಗೂ ಶರಂಪರ ಹೊಯ್ದಾಟಗಳಾಗುತ್ತಿದ್ದವು. ಅಷ್ಟಕ್ಕೂ ಪದ್ದಿ ಚಿಕ್ಕಿಯ ಮಗಳೂ ಜೊತೆಗಿದ್ದಳಲ್ಲ. ಹದಿನಾಲ್ಕಾದರೂ ಹಾಗೇಯೆ ಇದ್ದಳಲ್ಲ. ಅದಂತೂ ಚಿಕ್ಕಿಗೆ ಒಳಗೊಳಗೆ ಭಯಾನಕ ಸಂಕಟವನ್ನುಂಟು ಮಾಡುತಿತ್ತು. ಆವತ್ತೊಂದಿನ ಲಕ್ಷ್ಮೀ ಮುಂಜಾನೆ ಉಳಿದ ಹುಡುಗರೊಂದಿಗೆ ದೋಸೆ ತಿನ್ನುತ್ತಿದ್ದಳು. ಸಾಲಾಗಿ ಆರೆಂಟು ದೋಸೆ ಬೀಳದೆ ಏಳುವ ಹುಡುಗಿಯಲ್ಲ, ಅತ್ತ ಹಂಚಿನ ಮುಂದೆ ಕೂತಿದ್ದ ಪದ್ದಿ ಚಿಕ್ಕಿಗೆ, ಅದೆಲ್ಲಿಯ ಅಸಹನೆ ಎದ್ದಿತ್ತೋ, ‘ಹಿಂಗೆ ತಿಂದ್ರೆ ಇನ್ನೇನಾಗುತ್ತೇ? ನಯಾ ಪೈಸೆ ಉತ್ಪನ್ನ ಇಲ್ಲ. ಶಾಮಣ್ಣ ನಿನ್ ಮಗಳು ತಿನ್ನೋದ್ರಲ್ಲಿ ಮಾತ್ರ ಹುಷಾರಿ ಅನ್ಕಂಡಿದ್ದಾ. ಇಷ್ಟು ಬೇಗ ಮೈಗೂ ಸಮಾ ಬಿಸಿ ಅಂತಾ ಗೊತ್ತಾಗಿದ್ದೇ ಈಗ ನೋಡು’ ಎನ್ನುತ್ತಾ ಆಕೆಯ ತಿನ್ನುವ ಪರಿಗೂ ಆಕೆಯ ದೇಹಭಾಷೆಗೂ ಸೇರಿಸಿಯೇ ರೇಗಿದ್ದಳು. ಅಷ್ಟೆ, ಎಲೆಯ ತುದಿಗಿದ್ದ ಬೆಲ್ಲದ ಮೇಲೆ ಕೈಲಿದ್ದ ದೋಸೆಯನ್ನು ರಪ್ಪನೆ ಕುಕ್ಕಿ, ‘ನಾನು ಹೆಂಗೆ ಬೆಳೆದ್ರೂ, ತಿಂದ್ರೂ ನಮಪ್ಪಂದು ಚಿಕ್ಕಿ. ನಾನೇನು ಬ್ಯಾರೆವ್ರ ಮನೇಲಿ ನಿಮ್ಮ ಥರಾ ಗುಪ್ಪೆ ಹಾಕ್ಕೊಂಡು ಕೂತು ಪುಕ್ಸಟ್ಟೆ ಮೇಯ್ತಿಲ್ಲ’ ಎಂದು ಮಾತು ಸಿಡಿಸಿಬಿಟ್ಟಿದ್ದಳು. ಆವತ್ತಿನ ಬಿರುಕು ಇನ್ಯಾವತ್ತಿಗೂ ಮುಚ್ಚಲಾಗಲೇ ಇಲ್ಲ. ಅಸಲಿಗೆ ಚಿಕ್ಕಿಯ ಮತ್ತು ಲಕ್ಷ್ಮೀಯ ಅಪ್ಪನ ಇಬ್ಬರ ಅನಿವಾರ್ಯತೆಗಳು ಆಸ್ತಿಗೆ ಸಂಬಂಧಿಸಿದಂತೆ ಇದ್ದಿದ್ದೂ ಹೌದೇ ಆಗಿತ್ತು. ಹಾಗಾಗಿ ಆಕೆ ಇಲ್ಲಿಯೇ ಬೀಡುಬಿಟ್ಟಿದ್ದು ಇತ್ತು. ಆದರೆ, ಸುಲಭಕ್ಕೆ ಸೂಕ್ಷ್ಮಗಳಿಗೆ ಒಗ್ಗದ ಲಕ್ಷ್ಮೀ ಎಲ್ಲಾ ಸೇರಿಸಿಕೊಂಡು ಮೇಲೆ ಬಿದ್ದಿದ್ದಳು. ಆವತ್ತಿಂದ ಅವರಿಬ್ಬರ ಮಧ್ಯೆ ಹಸಿ ಹುಲ್ಲು ಹಾಕಿದರೂ ಧಗಧಗನೇ ಉರಿಯುವ ಪರಿಸ್ಥಿತಿ ನಿರ್ಮಾಣವಾಗಿ ಹೋಗಿತ್ತು. ಅದರಲ್ಲೂ ಕಾಲೇಜು ಮುಗಿಯುವ ಹೊತ್ತಿಗೆ ಚಿಕ್ಕಿಗೂ ಲಕ್ಷ್ಮೀಗೂ ಅದ್ಯಾಕೋ ತೀರಾ ನೀರಿಗೂ ಬೆಂಕಿ ಬೀಳುವಂಗಾಡುತ್ತಿದ್ದರು. ‘ಹುಡುಗಿಯರಿಗ್ಯಾಕೆ ಕಾಲೇಜು? ಅದೂ ಅಷ್ಟೊಂದು ಖರ್ಚು ಮಾಡಿ ಇಂಜಿನೀಯರಿಂಗ್ ಓದಿಸ್ಬೇಕು...’ ಎಂಬೆಲ್ಲಾ ಚರ್ಚೆಗಳೂ ಭಯಾನಕ ಜಗಳದಲ್ಲಿ ಕೊನೆಯಾಗುತ್ತಿದ್ದವು. ಆಕೆಗೆ ಲಕ್ಷ್ಮೀಯನ್ನು ಓದಿಸುವುದು ಬೇಡಿತ್ತು. ಕಾರಣ ಚಿಕ್ಕಿ ಮಗಳು ಏನೇ ಮಾಡಿದರೂ ಪಿಯುಸಿನೇ ದಾಟುವುದು ಡೌಟಿತ್ತು. ಹಾಗಾಗಿ ವಿದ್ಯೆ, ಮದುವೆ ಎನ್ನುವ ವಿಷಯದಲ್ಲಿ ರಂಪವೇ ನಡೆಯತೊಡಗಿ ಕೊನೆಗೆ ಅಪ್ಪ ಲಕ್ಷ್ಮೀಯನ್ನು ಮಂಗಳೂರು ಕಡೆ ಹಾಸ್ಟೇಲ್‌ಗೆ ಬಿಟ್ಟು ಒಂದು ಹಂತಕ್ಕೆ ಸುಧಾರಿಸಿದ್ದ. ಅದಾದ ನಂತರ ಕಾಲೇಜು, ಇಂಜಿನಿಯರಿಂಗ್ ಎಂದೆ ಲಕ್ಷ್ಮೀ ಓದುತ್ತಿದ್ದಾಳೆನ್ನುವುದರ ಮಾಹಿತಿಗಳಿದ್ದವಾದರೂ, ಅವೆಲ್ಲಕ್ಕಿಂತಲೂ ಹೆಚ್ಚು ಆಕೆಯ ಚಿಕ್ಕಂದಿನ ಹಳವಂಡಗಳೇ ನೆನಪಾಗುತ್ತಿದ್ದವು. ಬಾರ.. ಹೋಗಾ.. ಎನ್ನುತ್ತಿದ್ದ ನನ್ನನ್ನೀಗ ಮಾವಾ ಎಂದೇ ಕೂಗುತ್ತಿದ್ದಳು.
ಈ ಮಧ್ಯೆ ಒಂದಿನ ಹುಡುಕಿ ಕರೆ ಮಾಡಿದ್ದೂ ಅಲ್ಲದೆ, ‘ಮಾಮಾ ಎಂಥದ್ದಾ ಕತೆ ಗಿತೆ ಬರಿತಿಯಂತ.. ಎಂತಕ್ಕೆ ನಿಂಗೆಂತೂ ಬ್ಯಾರೆ ಕೆಲ್ಸಾ ಇಲ್ದೆನಾ?’ ಎಂದು ನನ್ನ ಬರಹ ಮತ್ತದರ ದೊಡ್ಡಸ್ತಿಕೆಯನ್ನೆಲ್ಲ ಒಂದೇ ಏಟಿಗೆ ಗುಡಿಸಿ ಹಾಕುತ್ತಿದ್ದರೆ, ‘ಹೌದೇ ಮಾರಾಯ್ತಿ ನಿನ್ನಂಗೆ ನನ್ನ ಕೂರಿಸಿ ಯಾರೇ ಅನ್ನ ಹಾಕ್ತಾರೆ? ನೀನೋ ಮಹಾಲಕ್ಷ್ಮೀ’ ಎಂದು ರೇಗಿಸುತ್ತಾ ಆವತ್ತಿಗೆ ಮಾತು ಮುಗಿಸಿದ್ದಾ. ಕಳೆದ ವರ್ಷ ಒಮ್ಮೆ ಅಪರಾತ್ರಿಯಲ್ಲಿ ಜಡ್ಡಿಗದ್ದಾಯಿಂದ ವಾಪಸ್ಸು ಬರುವಾಗ ನೆನಪಾಗಿ-‘ಬೆಳಗ್ಗೆ ಮನೆ ಹತ್ತಿರ ಬರ್ತೇನೆ ಮಾರಾಯ್ತಿ ಇದ್ದಿಯಾ’ ಎಂದು ಮೆಸೇಜು ಬಿಟ್ಟಿದ್ದಾ. ಉಹೂಂ.. ಯಾವ ಉತ್ತರವೂ ಇರಲಿಲ್ಲ. ಇನ್ಯಾವತ್ತೋ ಸಿಕ್ಕಿ ಆಕೆಯೊಂದಿಗೆ ಮನೆ ಕಡೆ ನಡೆದು ಹೋಗುತ್ತಿದ್ದರೆ ಲಕ್ಷ್ಮೀಯ ಬಿರುಸಿನಲ್ಲಿ ಒಂದಿನಿತೂ ಕಡಿಮೆಯಾಗಿಲ್ಲ ಎನ್ನಿಸಿತ್ತು. ಆಗಲೇ ಆಕೆಯ ಅಪ್ಪ ತೀರಿಹೋಗಿ ವರ್ಷ ಕಳೆದುಹೋಗಿತ್ತು. ಮದುವೆನೂ ಯಾಕೋ ಬರಕತ್ತಾಗಿರಲಿಲ್ಲ ಅನ್ನೋದು ಕಿವಿಗೆ ಬಿದ್ದಿತ್ತಾದರೂ ನಿರ್ದಿಷ್ಟ ಕಾರಣಗಳೂ ಗೊತ್ತಿರದೆ ನಾನು ಮಾತಾಡಲಿಲ್ಲ. ಈಗಲೂ ಅದೇ ವಡ್ಡಿಯಂತಹ ಭರಾಟೆ ಆಕೆಯದ್ದು.
ಚೆನ್ನಾಗೇ ಓದಿಕೊಂಡ ಲಕ್ಷ್ಮೀ ಸರಹೊತ್ತಿಗೆ ಪ್ರೀತಿಗೆ ಬಿದ್ದವಳು ಅದ್ಯಾಕೋ ಬರಕ್ಕತ್ತಾಗದೆ ಅಪ್ಪ ತೋರಿಸಿದವನನ್ನು ಮದುವೆ ಆಗಿದ್ದಾಳೆ. ಆದರೆ, ಮದುವೆ ಜೊತೆಜೊತೆಗೆ ಆಕೆಯ ಪ್ರೇಮ ಕಥಾನಕದ ಇತಿಹಾಸ ಅವಳ ಗಂಡನ ಮನೆ ತಲುಪಿ ಹುಯಿಲಿಗೀಡಾಗಿತ್ತು. ಎಲ್ಲ ಗೊತ್ತಿದ್ದವರೇ ಅಡ್ವಾನ್ಸ್ ಫಿಟ್ಟಿಂಗು ಇಟ್ಟುಬಿಟ್ಟಿದ್ದರು ಲಕ್ಷ್ಮೀಯ ಬದುಕಿಗೆ. ಆದರೆ, ಒರಟು ಹುಡುಗಿ ಒಂದಿಷ್ಟು ಸಹಿಸಿಕೊಂಡವಳು ಸಹನೆ ಮುಗಿಯುತ್ತಿದ್ದಂತೆ ನಿರಂತರ ಕಿತ್ತಾಟ ನಿಲ್ಲಿಸಿ ಎದ್ದು ಬಂದಿದ್ದಾಳೆ. ಗಂಡನಿಗೂ ಬೇಡವಾಗಿತ್ತೋ, ಊರಕಡೆಯಿಂದ ಎಗ್ಗಿಲ್ಲದೆ ಸಲ್ಲದ ಚಾಡಿ ಹೇಳಿದ್ದು ವರ್ಕೌಟ್ ಆಗಿತ್ತೋ ಒಟ್ಟಾರೆ ಲಕ್ಷ್ಮೀ ಮನೆಗೆ ಬರುವ ಹೊತ್ತಿಗೆ ಇಲ್ಲೂ ಅಪ್ಪ ಹಾಸಿಗೆಗೆ ಬಿದ್ದಿದ್ದ. ಚಿಕ್ಕಿಯ ಹಿಡಿತ ಮತ್ತು ಆಕೆಯ ಮಗಳ ಮದುವೆ ಇತ್ಯಾದಿಗಳ ತಿಕ್ಕಾಟದಲ್ಲಿ ಮನೆಯ ಪರಿಸ್ಥಿತಿ ಸುಧಾರಿಸೋ ಲಕ್ಷಣವೇ ಕಾಣಿಸುತ್ತಿರಲಿಲ್ಲ. ಆದರೂ ಅಪ್ಪನ ಜೊತೆಯಲ್ಲಿರಬೇಕಾದ ಅನಿವಾರ್ಯತೆ ಮತ್ತು ವ್ಯವಹಾರಕ್ಕೂ ಕೈಯಿಕ್ಕಿದ ಲಕ್ಷ್ಮೀ ಆವತ್ತು ದೊಡ್ಡವಳಾದ ದಿನದಿಂದಲೂ ಎದುರಿಸಿದ್ದಕ್ಕೇ ಪಕ್ಕಾಗುತ್ತಾ ಚಿಕ್ಕಿಯ ಎದುರು ಕಾಲೂರಿದ್ದಾಳೆ.
ಚಿಕ್ಕಿಯ ಪ್ರೀತಿಯ ಮಗಳು ಮದುವೆಯಾಗುತ್ತಿದ್ದಂತೆ ಚಿಕ್ಕಿಯ ಕೈಬಿಟ್ಟಿದ್ದಳು. ವ್ಯವಹಾರಗಳು ಸಂಬಂಧವನ್ನು ಮುರಿಯತೊಡಗಿದ್ದವು. ಅದರಲ್ಲೂ ಲಕ್ಷ್ಮೀ ಮನೆಗೆ ಬಂದು ಅವರಪ್ಪನ ವ್ಯವಹಾರ ಕೈಗೆ ತೆಗೆದುಕೊಂಡಿದ್ದು ಯಾರಿಗೂ ಸಹ್ಯವಾಗಿರಲೇ ಇಲ್ಲ. ಅದರಲ್ಲೂ ಚಿಕ್ಕಿಯ ಮಗಳಿಗೆ. ಕೊನೆಗೆ ಸಮಯ ಎಲ್ಲದಕ್ಕೂ ಮದ್ದರೆಯುವಂತೆ ಯಾರೊಂದಿಗೂ ಈಡಾಗದ ಚಿಕ್ಕಿ ಹಾಸಿಗೆ ಪಾಲಾಗಿದ್ದಾಳೆ. ವಯಸ್ಸಿನ ಜತೆಗೆ ನಡುವಿನ ಎಲಬುಗಳು ಕರಗಿ ಹೋಗಿ ಕಾಬಾಳೆ ದಂಟಿನಂತಾಗಿದ್ದಾಳೆ. ಲಕ್ಷ್ಮೀ ಸರಿಯಾಗಿ ನೋಡಿಕೊಳ್ಳದಿದ್ದರೆ ಇಷ್ಟೊತ್ತಿಗೆ ಚಿಕ್ಕಿನೂ ಹೋಗಿರುತ್ತಿದ್ದಳೇನೊ. ಆದರೆ ಎಂಥಹದ್ದೇ ವಡ್ಡಿಯಾದರೂ, ಹೆಣ್ಣು ಮಾಡುವ ವಗಾತಿಯೇ ಬೇರೆ.
‘ಚಿಕ್ಕಿ ಒಂದೇ ಸಮನೆ ಕಾಡಿದ್ಲು ಅಂತಾ ನಾನು ಬಿಡ್ಲಿಕ್ಕಾಗ್ತದೇನೋ? ನಂಗೊತ್ತು. ನನ್ನ ಗಂಡನ ಮನೆಗೆ ಸುದ್ದಿ ಕೊಡ್ತಿದ್ದಾರೆ ಈ ಅಮ್ಮ-ಮಗಳು. ಆಗ ನನ್ನ ಟೈಂ ಸರಿ ಇರ‍್ಲಿಲ್ಲ. ಈಗ ಚಿಕ್ಕಿದು. ಅಪ್ಪನ ಬೆನ್ನಿಗೆ ಹುಟ್ಟಿದೋಳು ಅಲ್ವಾ ಬಿಡೋಕಾಗುತ್ತಾ? ಮಾಡಿಕೊಂಡ ಕರ್ಮಕ್ಕೆ ಈಗ ಸ್ವಂತ ಮಗಳೂ ಜತೆಗಿಲ್ಲ. ಅಷ್ಟು ಮುಚ್ಚಟೆಯಿಂದ ಬೆಳೆಸಿದ್ಲು. ಎಂಥಾ ಪ್ರೀತಿ? ಆದರೆ ಹೆಣ್ಣುಮಕ್ಳಿಗೆ ಅಪವಾದ ಅನ್ನೋ ಹಂಗೆ ಅವರಮ್ಮನ್ನೇ ಬಿಟ್ಟು ಹೋಗಿದ್ದಾಳೆ. ಈಗ ನಾನೂ ಬಿಟ್ರೆ ಇನ್ಯಾರಿದಾರೆ ಕುಟುಂಬದಲ್ಲಿ? ಚಿಕ್ಕಿ ಇನ್ನು ಬದುಕಿದ್ದಾಗಲೇ ಅವಳಿಗೆ ಅಮ್ಮನ ಆಸ್ತಿ ಮೇಲೆ ಕಣ್ಣು. ದುಡ್ಡು ದುಗ್ಗಾಣಿ ಹೆಂಗೆ ಮನುಷ್ಯರನ್ನ ಹಾಳು ಮಾಡ್ತದೆ ನೋಡು ಮಾವ. ಚಿಂತೆಲಿ ಚಿಕ್ಕಿ ಇತ್ತ ಬದುಕಿದ್ರೂ ಇಲ್ಲದಂಗಾಗಿದಾಳೆ’.
ಸಂಪತ್ತು, ಬಡಿದಾಡಿ ಸ್ಥಾಪಿಸಿಕೊಂಡಿದ್ದ ಅಧಿಕಾರ, ಮಗಳಿಗೊಂದು ದಿಕ್ಕು ಎಲ್ಲ ಮಾಡಿದ ಚಿಕ್ಕಿ ಯಾವ ದಿಕ್ಕು ದೆಸೆ ಇಲ್ಲದಂತೆ ಮಲಗಿದ್ದಳು. ಜೀವಮಾನಕ್ಕಾಗುವಷ್ಟು ದ್ವೇಷವನ್ನಾಕೆಯ ಮೇಲೆ ಕಾರಿದ್ದರೂ, ಬದುಕಿರುವಷ್ಟೂ ದಿನವೂ ಆಕೆಯ ಜತೆಗೇ ಇರಬೇಕಿದೆ. ಅಸಲಿಗೆ  ಲಕ್ಷ್ಮೀ ಬೇಗ ದೊಡ್ಡವಳಾದ ದಿನದಿಂದಲೂ ನಿರಂತರ ಅಸಹನೆಗೆ ಕಾರಣವಾಗಿದ್ದು, ಈಗ ಲಕ್ಷ್ಮೀಯ ದೊಡ್ಡತನ ಚಿಕ್ಕಿಯ ಅರಿವಿಗೆ ಬಂದಿರುತ್ತದಾ? ಹಾಗಂತ ಹೇಳಿಯಾಳೇ? ಚಿಕ್ಕಿಯ ಬೆಡ್ ಪಕ್ಕ ಸ್ಟೂಲಿನ ಮೇಲೆ ಕೂತೇ ಮುಖ ನೋಡಿದೆ. ಕಣ್ಣು ಪಿಳಿ ಪಿಳಿ ಆಡಿದವು. ಕೊಂಚ ಗೆರೆಗಳು ಕದಲಿದವು. ಊಹೂಂ, ಏನು ಹೇಳಬೇಕಿತ್ತೋ? ದನಿ, ದೃಷ್ಟಿ ಎರಡೂ ಕದಲಲ್ಲಿಲ್ಲ.
                           ಕಾರಣ  ಅವಳು ಎಂದರೆ...

Tuesday, May 10, 2016

ತಾಯಿಯಾಗೋದು ಸುಲಭ... ಅಮ್ಮನಾಗೋದು...?

ಮಕ್ಕಳನ್ನು ಇನ್ನಿಲ್ಲದಂತೆ ಆವರಿಸಿಕೊಂಡು ಬೆಳೆಸಲೆತ್ನಿಸುವ ಅಮ್ಮಂದಿರ ಎಫರ್ಟುಗಳ ಮೇಲೆ ಕೊನೆಯ ಕ್ಷಣದಲ್ಲಿ ಕೆಲವೊಮ್ಮೆ ಗಂಡ ಸೇರಿದಂತೆ ಮನೆಯವರೇ ನೀರು ಸುರಿದಿರುತ್ತಾರೆ. ಹೋಗಲಿ ಬಿಡು ಎನ್ನುವಂತೆಯೂ ಇಲ್ಲ. ಇಲ್ಲಿವರೆಗಿನ ಪ್ರತಿಹಂತದ ಸಂಕಟ, ತಲ್ಲಣ, ತವಕ, ಪ್ರೀತಿ, ಮುಚ್ಚಟೆ, ವಗಾತಿ, ಐಡಲ್ ಆಗಿಸುವ ಉಮೇದಿ, ಅದರಲ್ಲೂ ಹೆಣ್ಣುಮಗುವಾಗಿದ್ದರೆ ಅದರ ಬಾಯಲ್ಲಿ ಮೊದಲ ಹೆಸರು ತನ್ನ ಅಮ್ಮನದೇ ಬರಲಿ ಎಂದು ಬಯಸಿ, ಎ ಜವಾಬ್ದಾರಿ ಓಡಾಟ, ಅಚ್ಚುಕಟ್ಟು, ಸಮಯ ಪಾಲನೆ, ಪ್ರತಿ ಹಂತದಲ್ಲೂ ವಹಿಸಬೇಕಾದ ನಿಗಾ, ಯಾವ ದಿನಕ್ಕೇ ಏನು..? ಯಾವಾಗ ಏನು ಪ್ರೋಗ್ರಾಂ ಇದೆ..? ಹೇಗೆ ಇದ್ದರೆ ಮಗಳಿಗೆ ಚೆಂದ ಮತ್ತು ಹೌದೆನ್ನಿಸಿತು, ಅದರ ಕಣ್ಣಲ್ಲಿ ‘ವಾಹ್ ಅಮ್ಮ...’ ಎನ್ನುವ ಅರಳಿಕೊಂಡ ಮುದ ಹೇಗೆ ಕಂಡೀತು? ಎಂದೆ ಯೋಚಿಸುವ ಆಕೆ, ಯಾವ ಹಂತದಲ್ಲೂ ಮಗಳ ಕಣ್ಣಲ್ಲಿ ನಿರ್ಲಕ್ಷ ಅಥವಾ ಅಮ್ಮನ ಹತ್ತಿರ ಆಗುತ್ತಿಲ್ಲ ಅನ್ನಿಸಿಕೊಳ್ಳುವ, ‘ಅಮ್ಮ ಪಾಪ..’ ಎನ್ನಿಸುವ ಭಾವನೆಗೆ ಈಡಾಗುವುದನ್ನು ಸಹಿಸಲಾರಳು. ಏನಾದರೂ ಸರಿ ಮಗುವಿನ ಮುಖದಲ್ಲಿ ತನ್ನೆಡೆಗೊಂದು ಹೆಮ್ಮೆ, ತನ್ನೆಡೆಗೊಂದು ಮುದಮುದ ಪ್ರೀತಿ ಇರಲಿ ಎಂದೇ ಬಯಸುತ್ತಾಳೆ.ಆದರೆ ಆಕೆಯ ನಿರೀಕ್ಷೆ, ಅಂದಾಜು, ಊಹಿಸುವಿಕೆಗೂ ಮೀರಿ ಮಗು ಇಬ್ಬಂದಿತನಕ್ಕೆ ಸಿಲುಕುತ್ತಲೇ, ಬೇರೆ ಪ್ರಭಾವಕ್ಕೊಳಗಾಗಲು ಆರಂಭಿಸುತ್ತದಲ್ಲ.. ಅದನ್ನು ಹೇಗೆ ಸಹಿಸಿಯಾಳು? ಹಡೆದ ಕೂಡಲೇ ತಾಯಿಯಾಗಿ ಬಿಟ್ಟರೂ ಅದನ್ನು ಬೆಳೆಸುತ್ತಾ ಅಮ್ಮನಾಗುವ ಪರಿಯಿದೆಯಲ್ಲ ಅದು ಒಂದು ಘಟನೆಯಲ್ಲಿ ನಡೆಯುವ ಕ್ರಿಯೆಯಲ್ಲ. ದೀರ್ಘಕಾಲದ ಸಮಯ, ಸೇವೆ ಮತ್ತು ಸಹನೆ ಮೂರನ್ನೂ ಬೇಡುವ ಪ್ರಕ್ರಿಯೆ ಅದು. ಯಾವ ತಾಯಿಯೂ ದಿನವೊಂದರಲ್ಲಿ ಅಮ್ಮನಾಗಲಾರಳು.ಅವಳು ನನ್ನ ಸ್ನೇಹಿತೆ ಎನ್ನುವುದಕ್ಕಿಂತಲೂ ಬಡಿದಾಡುತ್ತಲೇ ತೀವ್ರವಾಗಿ ಜೀವನಪ್ರೀತಿ ಉಳಿಸಿಕೊಂಡು ಏನೆಲ್ಲ ಅವಾಂತರಗಳ ಮಧ್ಯೆಯೂ ಕಾಲೂರಿ ನಿಂತು ಬದುಕಿನೊಂದಿಗೆ ಜಿದ್ದಿಗೆ ಬಿದ್ದಿರುವವಳು. ಆಕೆ ಇಂದೂ. ಯಾವ ತೀರಾ ಏರಿಳಿತಗಳಿಲ್ಲದ ಬದುಕಿನಲ್ಲಿ ಸುಲಭಕ್ಕೆ ಪ್ರೀತಿಗೆ ಬಿದ್ದು ಮದುವೆಯಾದಾಗ, ಅವಳ ಅದೃಷ್ಟಕ್ಕೂ ಆಕೆಯ ಆಯ್ಕೆಗೂ ಅದರಲ್ಲಿದ್ದ ಆಮೋದಕ್ಕೂ ಇಂದೂಳ ಸ್ನೇಹಿತೆಯರಿಗೇ ಉರಿದು ಹೋಗಿದ್ದೂ, ಅದನ್ನವರು ಹಿಂದಿಂದೆ ಆಡಿಕೊಂಡಿದ್ದು.. ಅದಕ್ಕೆ ಅವರ ಕಣ್ಣಿಗೆ ಆಕೆಯ ಬದುಕು ಬಲಿಯಾಯಿತಾ? ಅಥವಾ ಅದರಬ್ಬಾಕೆಯ ನಾಲಿಗೆಯ ಮೇಲೆ ಮಚ್ಚೆಗಳಿದ್ದುವಾ? ಭಗವಂತನೇ ಬಲ್ಲ.ಇಂದೂ ನಿರೀಕ್ಷಿಸದ ಬದುಕಿನ ತಿರುವಿಗೆ ಬಂದು ನಿಂತಿದ್ದಳು. ಮನೆ ಕಟ್ಟುವ ನಿರ್ಮಾಣ ಕಾಮಗಾರಿ ಕಂಪನಿಯಲ್ಲಿ ಕೈಹೂಡಿ ಕೂತಿzಳಿಗೆ ನನ್ನ ನಕ್ಷೆ ಸಿಕ್ಕಿದೆ. ಫೋನ್ ನಂಬರು ನೋಡುತ್ತಿದ್ದಂತೆ ಕರೆ ಮಾಡಿzಳೆ. ಅರೆಮರೆವಿನ ತಿರುವಿನಲ್ಲಿದ್ದವಳನ್ನು ನೆನೆಸಿಕೊಳ್ಳುತ್ತಾ, ‘ನೀನೇ ಅಲ್ಲಿದ್ದಿ ಅಂದರೆ ನನಗೆ ಕೆಲಸ ಸುಲಭವಾಗುತ್ತೆ ಬೀಡು ಬೇಗ ಪೇಪರ್ಸ್ ಕಳಿಸು’ ಎನ್ನುತ್ತಿದ್ದರೆ ‘ಅದ್ಯಾಕೆ ಕಳಿಸೋದು? ರೆಡಿ ಮಾಡಿಸುತ್ತೇನೆ ಸಾಯಂಕಾಲ ಬಂದು ಟ್ರೀಟ್ ಕೊಟ್ಟು ತೊಗೊಂಡು ಹೋಗು’ ಎಂದಳು. ವಸಂತ ನಗರದ ಹೆಗಲಿನ ಬಲಮೂಲೆಯಲ್ಲಿ ಮನೆ ಎನ್ನುವ ಅಡ್ಡೆಯಲ್ಲಿ ಬದುಕು ಕಟ್ಟಿಕೊಂಡು ಹೆಣಗುತ್ತಿರುವ ಇಂದೂಳನ್ನ ನೋಡುತ್ತಿದ್ದಂತೆ ಅನ್ನಿಸಿದ್ದು ಹಡೆದು ತಾಯಿಯಾಗೋದು ಸುಲಭ, ನಿಜವಾಗಿಯೂ ಮಕ್ಕಳಿಗೆ ಅಮ್ಮನಾಗೋದು?ಕಾರಣ ಪ್ರೀತಿ, ಪ್ರೇಮ, ಹನಿಮೂನು ಎಲ್ಲ ಮುಗಿದು ವರ್ಷ ಕಳೆವ ಹೊತ್ತಿಗೆ ಪ್ರೀತಿಸಿದ್ದ, ತಾನಂದುಕೊಂಡಿದ್ದ ಗಂಡಸು ಇವನಲ್ಲ ಎನ್ನುವುದರಿವಾಗುತ್ತಿದ್ದಂತೆ ಸುಖಾಸುಮ್ಮನೆ ಜಗಳಕ್ಕಿಳಿದು ರಂಪರಾಮಾಯಣ ಮಾಡಿಕೊಂಡಿಲ್ಲ ಆಕೆ. ಅದರಿಂದ ಯಾವ ಉಪಯೋಗವೂ ಆಗುವುದಿಲ್ಲ ಎನ್ನುವುದರಿವಾಗುತ್ತಿದ್ದಂತೆ ನಿಧಾನಕ್ಕೆ ಇದ್ದಲ್ಲೇ ತನ್ನ ದಾರಿ ತುಳಿಯುವ ನಿರ್ಧಾರ ಮಾಡಿದ್ದಾಳೆ. ಜತೆಗಿದ್ದೇ ಸಂಭಾಳಿಸುವ ನಿರ್ಧಾರಕ್ಕೆ ಬಂದಿದ್ದಾಳೆ. ಕಾರಣ ಎದುರಿಗಿದ್ದ ಮಗು ಬಾಯ್ತುಂಬಾ ಅಮ್ಮ ಅನ್ನುತ್ತದೆ. ರಾತ್ರಿಯಾಗುತ್ತಿದ್ದಂತೆ ಬೆನ್ನು ಕವುಚಿ ಹೊಟ್ಟೆ ಮೇಲೆ ಕಾಲು ಹಾಕಿ ತಬ್ಬಿ ಮಲಗುತ್ತದೆ. ಅರ್ಧರಾತ್ರಿಯಲ್ಲಿ ಕೊಂಚ ಕದಲಿದರೂ ರಪ್ಪನೆ ಕೈಚಾಚಿ ಬಾರಿಸುತ್ತದೆ, ಅಮ್ಮ ಎದ್ದು ಹೋದಾಳೆಂದು. ಹೇಗೆ ಹೊರಳಲು ಮನಸ್ಸಾದೀತು? ಬೆಳಗ್ಗೆ ಏಳುವಾಗಲೂ ಅಮ್ಮಾ ಎನ್ನುತ್ತದೆ. ಅರೆ ಬಿರಿದ ಕಣ್ಣು, ಜೊಲ್ಲು ಸುರಿದು ಮುzಗಿ ಕಾಣುವ ಗುಂಡು ಕೆನ್ನೆ, ಕೆದರಿದ ಜೊಂಪೆ ಕೂದಲು, ಮುzಯಾಗಿ ಅರ್ಧ ಎದ್ದು ನಿಂತ ಅಂಗಿ, ದೇವರಿಗೂ ಮುದ್ದು ಬಾರದಿದ್ದೀತೆ? ಮಗುವಿನ ವೆಚ್ಚವೆಲ್ಲ ತಾನೇ ನಿರ್ವಹಿಸುವ ಇಂದೂ ಯಾವತ್ತೂ ಪೈಗೆ ಪೈ ಲೆಕ್ಕಿಸುವ ಅವನ ಮುಲಾಜಿಗೀಡಾಗೇ ಇಲ್ಲ. ಅವನು ಗಂಡನಾದ. ಅಪ್ಪನಾಗಿರಲೇ ಇಲ್ಲ.ಆದರೆ, ಮಗು ಬೆಳೆಯುತ್ತಾ ಸಣ್ಣ ಬದಲಾವಣೆಗಳನ್ನು ಕಂಡಿತು. ಅಪ್ಪನಾದವ ಇದ್ದಕ್ಕಿದ್ದಂತೆ ಗಾಡಿ ಮೇಲೆ ರೌಂಡು ಹೊಡೆಸುವ, ಐಸ್ ಕ್ರೀಂ ಕೊಡಿಸುವ ಕ್ರಿಯೆಗಳೆಲ್ಲ ಮುಗ್ಧ ಮನಸ್ಸಿನ ಮಗುವನ್ನು ಸೆಳೆಯಿತು. ಇವಳೊಂದಿಗೆ ಮಾತ್ರ ಲೆಕ್ಕಾಚಾರದ ಜೀವನ ನಡೆಸುವವ ಮಗುವನ್ನೆತ್ತಿಕೊಂಡು ಬಣ್ಣದ ದಿರಿಸಿನ ಆಸೆ ತೋರಿಸುತ್ತಿದ್ದ. ಅದಕ್ಕಾಗಿ ಮಗು ಯಾವ ಎರಡನೇ ಯೋಚನೆ ಮಾಡದೆ ಅವನ ಮಗ್ಗಲು ಹತ್ತಿ ಕೂರುತ್ತಿತ್ತು. ಕಂಪ್ಯೂಟರ್, ಟಿ.ವಿ., ಮೊಬೈಲ್ ಆಪ್‌ಗಳು ಸೆಳೆದಷ್ಟು ಮಕ್ಕಳನ್ನು ಇನ್ನಾವುದೂ ಸೆಳೆಯಲಾರವು. ಅದಕ್ಕಾಗಿ ತನ್ನ ಸಣ್ಣ ಮೊಬೈಲ್ ಬದಲಿಗೆ ಅವನು ಆಕರ್ಷಿಸುವ ಮಾಡೆಲ್ -ನ್ ಎದುರಿಗಿಟ್ಟು, ಮಗುವಿನಲ್ಲಿ ಅದಮ್ಯ ಆಕರ್ಷಣೆ ಮೂಡಿಸುತ್ತಾ ಅಪ್ಪ ಎನ್ನುವ ‘ಸೂಪರ್ ಮ್ಯಾನ್’ ಇದ್ದಕ್ಕಿದ್ದಂತೆ ಆಕೆಯೆದುರಿಗೆ ಹೀರೋ ಆಗಲಾರಂಭಿಸಿಬಿಡುತ್ತಾನಲ್ಲ...! ರಕ್ತ ಸೋಸಿ ಮಗುವನ್ನು ಬೆಳೆಸುತ್ತಿರುವ ಯಾವ ಹೆಣ್ಣಿಗೆ ಸಂಕಟವಾಗಲಿಕ್ಕಿಲ್ಲ. ಇಂದೂ ಕಣ್ಣೆದುರಿಗೆ ಬಿಸಿತುಪ್ಪದಂತಹ ಒಳಸಂಕಟವನ್ನು ತೆರೆದಿಡುತ್ತಿದ್ದರೆ ಕೆಲವೊಮ್ಮೆ ಅವರಮ್ಮನೂ ಮಾಡಿಬಿಡುವ ಅಡ್ನಾಡಿಗಳಿಂದ ಆಗುತ್ತಿದ್ದ ಆಘಾತ ಇನ್ನೂ ದೊಡ್ಡದು.ಅವಳ ಮಗಳಿಗೀಗ ಹತ್ತರ ಆಸುಪಾಸು. ಎಲ್ಲ ಬಿಳಿ ಕಪ್ಪು ಗೊತ್ತಾಗೋ ವಯಸ್ಸದು. ಆದರೂ ಹಸಿ ಮಣ್ಣೂ ಕೂಡಾ ಹೌದು. ಬರೆದದ್ದು ಮೂಡಿಬಿಡುತ್ತದೆ. ಶಾಲೆಯ ತರಹೇವಾರಿ ಚಟುವಟಿಕೆಗಳನ್ನು ಇಂದೂ ಉಸುರುಕಟ್ಟಿ ಮಾಡಿಸುತ್ತಾಳೆ. ಸೃಜನಶೀಲತೆಯ ಯಾವ ಹಂತಗಳೂ ತಮ್ಮ ಹಳವಂಡಗಳಿಂದಾಗಿ ಕಡಿಮೆಯಾಗಬಾರದೆಂದು, ಶಾಲೆಯ ಚಿತ್ರಪಟ ಮಾಡಿಸುವುದು, ಫ್ಯಾನ್ಸಿ ಡ್ರೆಸ್ಸು, ಮಣ್ಣಿನಲ್ಲಿ ಗೊಂಬೆ ತಯಾರಿಸಲು ಸಹಾಯ ಮಾಡುವುದು, ಗಾಳಿಪಟದಲ್ಲೂ ವಿಭಿನ್ನತೆ ಮೂಡಿಸಿ ಅದರಿಂದಾಗಿ ಆಕೆಯ ಮುಖದ ಮೇಲೆ ಬೆರಗು ಮೂಡುವ ಕ್ಷಣಗಳಿಗಾಗಿ ಕಾಯುತ್ತಾಳೆ. ಗಣಿತದ ಚಾರ್ಟು, ಕಾಯಿಪಲ್ಯೆಗಳ ಕಟಿಂಗ್ಸು, ದೇಶ-ವಿದೇಶದ ನಕ್ಷೆ ಕತ್ತರಿಸಿ ಅಂಟಿಸುವುದು, ಒಂದಾ ಎರಡಾ...? ಇತ್ತ ನೌಕರಿ ಅತ್ತ ಮನೆಯಲ್ಲೂ ಅಡುಗೆ, ಮಗಳ ಡ್ರೆಸ್ಸು, ಅದಕ್ಕೆ ಸರಿಯಾದ ಟೈಮಿಗೆ ಕಾಲು ಚೀಲ, ಬ್ಯಾಗಿನಲ್ಲಿ ಆಯಾ ದಿನದ ಪುಸ್ತಕಗಳು, ಪೆಂಟಿಂಗ್ ಇದ್ದ ದಿನ ಬಣ್ಣ ಬ್ರಶ್ಶು, ಹೀಗೆ ಆಕೆ ಪ್ರತಿಹಂತದಲ್ಲೂ ಚಾಚೂ ತಪ್ಪದೇ ಮಾಡುತ್ತಾ ಮಗಳ ಕಣ್ಣಲ್ಲಿ ಹೆಮ್ಮೆಯ ಅಮ್ಮನಾಗಲು ಕಾಯುತ್ತಾಳೆ. ಆವತ್ತು ಬೆಳಗಿನಿಂದಲೇ ಆಕೆಯನ್ನು ರಾಧೆಯ ಪಾತ್ರಕ್ಕೆ ಬಟ್ಟೆ ಸಜ್ಜುಮಾಡಿ, ಗಡಿಗೆ ತಂದು, ಹೂವು, ಶೃಂಗಾರ ಎ ಮಾಡಿ ಸ್ಕೂಲಿಗೆ ಬಿಟ್ಟು ಬಂದು ತಾನೂ ರೆಡಿಯಾಗುವ ಹೊತ್ತಿಗೆ ಸಮಯ ಸರಿದೇ ಬಿಟ್ಟಿತ್ತು. ಆದರೂ ಸಾವರಿಸಿಕೊಂಡು ತಲುಪುವ ಹೊತ್ತಿಗೆ ಗಂಡನೆಂಬ ಭೂಪ ಮಗಳ ಜೊತೆ ಗಡಿಗೆ ಕೈಯ್ಯಲ್ಲಿ ಹಿಡಿದು ಪೋಸು ಕೊಡುತ್ತಾ ನಿಂತಿzನೆ! ಅದಕ್ಕೆ ಸರಿಯಾಗಿ ಹಿಂದೆ ಮುಂದೆ ಗೊತ್ತಿಲ್ಲದ ಹುಂಬ ಹೆಂಗಸರು ಇಂಥಲ್ಲಿ ಗಲಗಲ ಮಾತಾಡಿ ಬಿಡುತ್ತಾರಲ್ಲ. ‘ನಿಮ್ಮನೆಯವರು ಎಷ್ಟು ಅಪ್‌ಡೇಟ್ ಎಲ್ಲ ಮಾಡಿಕೊಂಡು ಬಂದಿದ್ದಾರೆ’ ಎನ್ನುತ್ತಿದ್ದರೆ, ಅಲ್ಲಿಗೆ ಬಂದಿದ್ದ ಅಮ್ಮನೂ ‘ಎಷ್ಟೊತ್ತು ನಿನಗೆ? ಅಳಿಯ ನಿನಗೂ ಮೊದಲು ಬಂದು ಎ ಮಾಡಿ ಕಾಯ್ತಿದಾರೆ’ ಎಂದು ಬಿಡಬೇಕೆ? ಅಲ್ಯಾರೋ ಗೊಣಗುತ್ತಿದ್ದಾರೆ ‘ಪುಟ್ಟಿಗೆ ಒಳ್ಳೆ ಡ್ಯಾಡಿ’ ಏನೂ ಅರಿಯದ ಮಗು ಇಂಪ್ರೆಸ್ ಆಗಿ- ‘ಅಮ್ಮ ಎಲ್ಲ ಆದ್ಮೇಲೆ ಬರ್ತೀಯಾ, ಅಪ್ಪಾ ನೋಡು... ಆಗ್ಲೆ ಅಜ್ಜಿನೂ..’ ಮುಂದಿನ ಮಾತು ಕೇಳಿಸಿಕೊಳ್ಳಲಿಲ್ಲ.‘ಇಷ್ಟೆಲ್ಲ ಮಾಡಿ ಮಗಳ ಮನಸ್ಸು ತಿರುಗಿಸುವ, ಅದಕ್ಕೆ ಸರಿಯಾಗಿ ಹೀಗೆ ನಾನೇನೂ ಮಾಡುತ್ತಿಲ್ಲ ಅಂದು ಬಿಟ್ಟರೆ ಹೆಂಗೋ ಸಂಭಾಳಿಸೋದು? ಸಂಕಟ ಆಗೋಲ್ವಾ? ಗಂಡನಾದವನಂತೂ ಇದ್ದೂ ಇದ್ದಂಗಿಲ್ಲ. ಆದರೆ, ಅಮ್ಮನಿಗೆ ಯಾವಾಗ ಏನು ಹೇಳಬೇಕು ಗೊತ್ತಾಗಲ್ವಾ? ಮಗು ಕಣ್ಣಲ್ಲಿ ಸಣ್ಣವಳಾಗೋ ಸಂಕಟಕ್ಕಿಂತ ತಾಯಿಯಾಗೋ ಸಂಭ್ರಮಾನೇ ಬೇಡಿತ್ತು ಅನ್ನಿಸೊಲ್ವೇನೋ..’ ಇಂದೂ ಬಿಕ್ಕಳಿಸುತ್ತಿದ್ದರೆ ಸುಮ್ಮನೆ ತಲೆ ಸವರಿ ನಿಂತು ಬಿಟ್ಟೆ. ಆ ಸಂತಾಪಕ್ಕೆ ಆ ಹೊತ್ತಿಗೆ ನಿಶಬ್ದಕ್ಕಿಂತ ಬೇರೆ ಮದ್ದಿರಲಿಲ್ಲ. ಅಮ್ಮನಾಗೋದರ ಹಿಂದೆ ಪ್ರತಿ ಹಂತದಲ್ಲೂ ಇರುವ ಆ ಸಂಕಟ, ಅಸಹಾಯಕತನ, ತುಮಲ, ಹತಾಶೆ ಇವೆಲ್ಲ ನೆನೆದೇ ನನ್ನ ಬೆನ್ನಹುರಿಗುಂಟ ಒಂದು ಕಂಪನ ಮೂಡಿತ್ತು. ಆದರೆ ಇಂದೂ ಮಾತ್ರ ‘ಇರ್ಲಿ ಬಿಡು...’ ಎನ್ನುತ್ತಾ ಎದ್ದು ನಿಂತಿದ್ದಳು. ಕಾರಣ ಅವಳು ಎಂದರೆ..