Friday, March 7, 2014

" ಗುಜರಾತಿನ ಬಗ್ಗೆ ಯಾಕೆ..ಪೂರ್ವಾಗ್ರಹ ...? "


ನಿಮ್ಮ ಲೇಖನ ಅದಕ್ಕೆ ಸಂಭಂದಿಸಿದ ಅನಿಸಿಕೆಗಳನ್ನು ಓದಿದೆ. ಅದವರವರ ಅಭಿಪ್ರಾಯ ಹಾಗೆಯೇ ನಿಮ್ಮದೂ ಕೂಡಾ. ಆದರೆ ನೀವಂದುಕೊಂಡಂತೆ ಅಲ್ಲಿ ಬದಲಾಗಿಲ್ಲ ಎನ್ನುವ ಅಭಿಪ್ರಾಯದ ಬದಲಿಗೆ ನಿಮಗೆ ರಸ್ತೆಯ ಬದಿಯಲ್ಲಿ ಕಂಡದ್ದನ್ನು ಮಾತ್ರ ಬರೆದಿರಿ. ನಾನು ಹಲವು ವರ್ಷದಿಂದ ಇಲ್ಲಿಯೇ ಇದ್ದೇನೆ. ನೀವು ಸಂದರ್ಶಿಸಿದ "ಸೂರತ" ನಗರ ನನಗೆ ಅಂಗೈ ರೇಖೆಯಷ್ಟೇ ಪರಿಚಯ.
( ನೀವು ನಿಜಕ್ಕೂ ಕೂಲಂಕುಶವಾಗಿ ಸೂರತ್ ನಗರ ಗಮನಿಸಿದ್ದರೆ ಎಂಥವರೂ ಪ್ರಸ್ತಾಪಿಸುವ ಒಂದು ವಿಷಯ ಮಾಧ್ಯಮದವರಾಗಿ ಪ್ರಸ್ತಾಪಿಸಲೇ ಬೇಕಿತ್ತು. ಅದನ್ನು ನೀವು ಬರೆದೆ ಇಲ್ಲ. ಸಾಧ್ಯವಾದರೆ ಯೋಚಿಸಿ ಉತ್ತರಿಸಿ. ಇಲ್ಲವಾದರೆ ಮತ್ತೆ ನಾನೇ ಬರೆಯುತ್ತೇನೆ. ಪೂರ್ತಿ ಗುಜರಾತಿನಲ್ಲೆ ಒಂದು ವ್ಯವಸ್ಥೆಯನ್ನು ಇದುವರೆಗೂ ಸ್ಥಾಪಿಸಲಾಗಿಲ್ಲ. ತೀರ ಒಂದೆರಡು ಸ್ಥಳಗಳನ್ನು ಹೊರತು ಪಡಿಸಿ. ಆದರೂ ಆ ವಿಷಯದಲ್ಲಿ ನಂಬಲಾರದ ಶಿಸ್ತು ಇಲ್ಲಿನ ನಾಗರಿಕರಲ್ಲಿ ಇದೆ. ಅದೇನು ಗೊತ್ತೇ.. ? )
ಮಧ್ಯರಾತ್ರಿ ಮೊದಲ ದಿನ ಸೂರತ್ತಿನಿಂದ ಎಂಭತ್ತು ಕಿ.ಮಿ. ದೂರದ ಆದಿವಾಸಿಗಳ ಪ್ರದೇಶಕ್ಕೆ ಯಾವುದೇ ಭಯವಿಲ್ಲದೆ ಪರಿಚಯವಿಲ್ಲದ ಸ್ತ್ರೀಯರೂ ಪಯಣಿಸುತ್ತಿದ್ದ ಅನುಭವ.. ತೀರ ಹಿಂದುಳಿದ ಡಾ೦ಗ್ ಜಿಲ್ಲೆ ಇವತ್ತು ಪಶ್ಚಿಮ ಘಟ್ಟಕ್ಕೆ ಸೆಡ್ಡು ಹೊಡೆಯುತ್ತಿದೆ. ಹೌದು ಮಧ್ಯ/ಸರಾಯಿ ಎಲ್ಲಾ ಕಡೆಯಲ್ಲೂ ಸಿಗುತ್ತದೆ. ಆದರೆ ಅದಕ್ಕೆ ಹೆಚ್ಚಿನ ಕುಮ್ಮಕ್ಕು ನೀಡಿ ಅಭ್ಯಾಸ ಮಾಡಿಸಿದವರು ನಮ್ಮಂತೆ ಹೊರಗಿನಿಂದ ಬಂದವರೇ. (ಸ್ಥಳಿಯರು ಅಧಿಕೃತವಾದ ಸಂತರಾ ಕುಡಿಯುತ್ತಾರೆ.) ನರ್ಮದೆಯ ದಂಡೆಗುಂಟ ಸಾವಿರ ಕಿ.ಮಿ. ಚಲಿಸಿ ವಸ್ತುಸ್ಥಿತಿ ಅಭ್ಯಸಿಸಿದವನು ನಾನು. ನಿಮ್ಮ ಅನಿಸಿಕೆಯನ್ನು ತೆಗಳುತ್ತಿಲ್ಲ. 
ಆದರೆ ಬಹುಶ: ಗುಜರಾತಿನ ಅಭಿವೃದ್ಧಿಯ ಬಗ್ಗೆ ನಿಮಗಷ್ಟೇ ಅಲ್ಲ, ಎರಡು ಮೂರು ದಿನ ಅಂತ ಪ್ರವಾಸಕ್ಕೆ ಬಂದವರಿಗೆ ಯಾವತ್ತೂ ಅರ್ಥವಾಗುವುದಿಲ್ಲ. ಸಾಧ್ಯವಿದ್ದರೆ ನಿಜಕ್ಕೂ ವಸ್ತು ಸ್ಥಿತಿ ಅರಿಯಬೇಕಿದ್ದರೆ ಸಮಯವಿದ್ದರೆ ಬನ್ನಿ. ಕಾಡಂಚಿನ ಹಿಂದುಳಿದ ವರ್ಗಗಳಿಗೆ ನೀರು/ನೆರಳು ಒದಗಿಸಿರುವ, ಒಬ್ಬೊಂಟಿ ಮನೆಗಳಿಗೂ ಡಾಂಬರು ರಸ್ತೆ ತಲುಪಿಸಿರುವ... ತಾವೂ ತಿನ್ನುವುದಿಲ್ಲ, ನಮ್ಮನ್ನು ತಿನ್ನಲೂ ಬಿಡುತ್ತಿಲ್ಲ ಎಂದು ಗೊಣಗುವ ಅಧಿಕಾರಷಾಹಿ ವರ್ಗವನ್ನು... ಇಪ್ಪತ್ನಾಲ್ಕು ಗಂಟೆ ಪಂಪಸೆಟ್ಟುಗಳಿಗೆ ಕರೆಂಟು ಹರಿಸುವ ಪಧ್ಧತಿಯನ್ನ.. ( ನಾನು ಇಂಥಾದ್ದೇ ಬುಡಕಟ್ಟು ಜನಾಂಗ ವಾಸಿಸುವ ಸುತ್ತ ಮುತ್ತಲೆಲ್ಲಾ ತೀರ ಹಿಂದುಳಿದ ವರ್ಗಗಳ ಸಮುದಾಯವೇ ಇರುವ ಟ್ರೈಬಲ್ ಏರಿಯಾ(ಆದಿವಾಸಿಗಳ)ಎಂದು ಕರೆಸಿಕೊಳ್ಳುವ ಪ್ರದೇಶದಲ್ಲೇ ವಾಸಿಸುತ್ತಿದ್ದೆನೆ. ) ಇನ್ನು ನಿಮ್ಮ ರೂಮಿನ ಕತೆ ಇತ್ಯಾದಿಗಳೆಲ್ಲಾ ಸತ್ಯವಿದ್ದರೂ, ಈಗಿನ ಸೊ ಕಾಲ್ಡ್ ಸಾಹಿತಿಗಳು ಬರಹದ ಜಿಗುಟು ಕಡಿಮೆಯಾದಾಗ ಅಪದ್ದ ಹೇಳಿಕೆ ನೀಡಿ ತೀವ್ರ ಪ್ರಸಿದ್ಧಿಯನ್ನು ಬಯಸುವ ಪ್ರಕರಣದಂತೆ ಅನ್ನಿಸುತ್ತದೆ. (ಕ್ಷಮೆ ಇರಲಿ. ನೀವು ಅದನ್ನು ಬರೆಯಬಾರದಿತ್ತು) ಬರೆಯುವ ಮುನ್ನ ಒಮ್ಮೆ ಯೋಚಿಸಬೇಕಿತ್ತು. ಕಾರಣ ಕನಿಷ್ಠ ಐವತ್ತು ಬಾರಿ ನಾನು ಇಲ್ಲಿನ ಹೋಟೆಲ್ ಗಳಲ್ಲಿ ತಂಗಿದ್ದೇನೆ. ಎಲ್ಲಿಯೂ ಯಾವತ್ತೂ ಹಾಗೆ ವಿಚಾರಿಸಿಲ್ಲ. ನನಗೆ ಗೊತ್ತಿದ್ದ ಮಟ್ಟಿಗೆ ಇಲ್ಲಿನ ಆತಿಥ್ಯದ ಅನುಭವದೆದುರಿಗೆ ಹಾಗೆ ವಿಚಾರಿಸುವ ಸಂಭವ ತುಂಬಾ ಕಡಿಮೆ. ದಯವಿಟ್ಟು ಅದು ಯಾವ ಹೋಟೆಲ್ ತಿಳಿಸುವಿರಾ..?
ಕಾರಣ ನೀವು ಹೇಳಿದ ದ್ವಾರಕೆ, ಸೋಮನಾಥದ ಸಮುದ್ರ ತೀರದಿಂದ ಹಿಡಿದು ಕೊಟ್ಟ ಕೊನೆಯ ಜಿಲ್ಲೆ ಡಾ೦ಗ್ ವರೆಗೂ ನಿರಂತರ ಪ್ರವಾಸದಲ್ಲಿದ್ದೇನೆ. ಬಹುಶ: ಹೀಗೆ ಅಪರಾತ್ರಿಗಳಲ್ಲಿ, ಅನಿವಾರ್ಯ ಪ್ರವಾಸವನ್ನು ನಾನು ಖಂಡಿತಕ್ಕೂ ಇತರ ರಾಜ್ಯದಲ್ಲಿ ಇಷ್ಟು ಸುರಕ್ಷಿತವಾಗಿ ಕೈಗೊಳ್ಳಲು ಸಾಧ್ಯವೆ ಇರಲಿಲ್ಲ. (ಇಷಾನ್ಯ ರಾಜ್ಯದ ಒಂದೆರಡು ರಾಜ್ಯ ಹೊರತು ಪಡಿಸಿದರೆ ಇ ದೇಶದ ಕೊಟ್ಟ ಕೊನೆಯ ರಾಜ್ಯದ ಕೊನೆಯ ಹಳ್ಳಿಗಳವರೆಗೂ ಪ್ರವಾಸಿಸಿರುವ ನನ್ನ ಅನುಭವವನ್ನು ಸೇರಿಸಿ ಇದನ್ನು ಬರೆದಿದ್ದೇನೆ. ) ಅಂದ ಹಾಗೆ ಸೂರತ್ ಈಗ ನೇಕಾರಿಕೆಯ ಪ್ರದೇಶವೆಂದು ಗುರುತಿಸಿಕೊಳ್ಳುವುದಕ್ಕಿಂತಲೂ ಮೊದಲು ವಜ್ರದ ಕೈಗಾರಿಕೆಗೆ ಹೆಸರುವಾಸಿ. (ವಜ್ರದ ಕಾರ್ಮಿಕರ ದಿನವಹಿ ಸಂಖ್ಯೆ (ಫ್ಲೋಟಿಂಗ್ ವರ್ಕರ್ಸ್) ಎರಡು ಲಕ್ಷದ ಹತ್ತಿರ.) ನಿಮ್ಮ ಅಭಿಪ್ರಾಯವನ್ನು ಸಾರ್ವಜನಿಕವಾಗಿ ಇಡುವುದಕ್ಕೂ ಮುನ್ನ ಕೆಲವು ವಿಷಯವನ್ನಾದರೂ ತಾವು ಗಮನಿಸಬೇಕಿತ್ತು ಎಂದು ನನ್ನ ಪ್ರಾಮಾಣಿಕ ಅನಿಸಿಕೆ. 
ಇನ್ನು ನೀವು ಚಿತ್ರದಲ್ಲಿ ಪ್ರಕಟಿಸಿರುವ (ಅದನ್ನು ನಾನು ಮೂಲ ರಸ್ತೆಗಳ ಚಿತ್ರದೊಂದಿಗೆ ಸಮೀಕರಿಸಿ ಹಾಕಿದ್ದೇನೆ) ಬರೆದಂತೆ ಅದು ಮುಂಬೈ ಮಹಾನಗರಕ್ಕೆ ಜೋಡಿಸುವ ಹೆದ್ದಾರಿ ಅಲ್ಲವೇ ಅಲ್ಲ. ಅದು ತಾಪಿ ನಗರಕ್ಕೆ ಹೋಗುವ ಹೋಟೆಲ್ ಸಹಯೋಗ ( ಹಿಂದೆ ಕಾಣಿಸುತ್ತಿರುವ ಬಿಳಿ ಬಣ್ಣದ ಬಿಲ್ಡಿಂಗು ) ರಸ್ತೆ. ಸಂಪೂರ್ಣ ಮುಂಬೈನಿಂದ ಅಹಮದಾಬಾದ್ ಅಷ್ಟೇ ಅಲ್ಲ ದ್ವಾರಕೆವರೆಗೂ ( ರಾಜ ಕೋಟ , ಜಾಮನಗರ್ ಮಾರ್ಗವಾಗಿ ಆನಂದ, ಮೆಹಸಾನ ಸೇರಿದಂತೆ) ನಾನು ಚಿತ್ರದಲ್ಲಿ ಹಾಕಿರುವ ಅಚ್ಚ ನುಣುಪು ರಸ್ತೆಗಳೇ ಇವೆ ಹೊರತಾಗಿ ನೀವು ವಿವರಿಸಿರುವ ಒಳ ರಸ್ತೆಯಂತೆ ಅಲ್ಲ. ಕನಿಷ್ಠ ೧೨೦ ಕಿ.ಮಿ. ವೇಗದಲ್ಲಿ ಸತತವಾಗಿ ಚಲಿಸುವ ಹೆದ್ದಾರಿ ಇಷ್ಟು ಸುರಕ್ಷಿತವಾಗಿ ಭಾರತದಲ್ಲಿ ಕೆಲವೇ ಕೆಲವು ರಾಜ್ಯಗಳಲ್ಲಿ ಲಭ್ಯ ಇವೆ. ಇದಕ್ಕೆ ಸ್ವತಹ: ಚಾಲಕನಾಗಿ ಇದೆ ಗುಜರಾತಿನ ಹೆಧ್ದಾರಿಯ ಮೇಲೆ ಸಾವಿರಾರು ಕಿ.ಮಿ ಕ್ರಮಿಸಿರುವ ನನ್ನ ಅನುಭವ ಸಾಕ್ಷಿ. 
ನಾನು ಬರೆದ ವಿಷಯದಲ್ಲಿ ಯಾವುದಾದರೂ ನಿಮಗೆ ಸ೦ಶಯವಿದ್ದರೆ ಅಥವಾ ಉತ್ಪ್ರೆಕ್ಷೆ ಮಾಡುತ್ತಿದ್ದನೆ ಎನ್ನಿಸಿದ್ದರೆ (ಯಾವುದೇ ಓದುಗರು) ದಯವಿಟ್ಟು ಯಾರೂ ಬೇಕಿದ್ದರೂ ಬನ್ನಿ.ಗುಜರಾತಿನ ಅಭಿವೃದ್ಧಿ ಎಲ್ಲಿ ಹೇಗೆ ಮುಟ್ಟಿದೆ ಕಾಣಿಸುತ್ತೇನೆ. ಕಾರಣ ಇದು ನನ್ನ ಹಲವು ವರ್ಷಗಳ ಅನುಭವ. ಸತತವಾಗಿ ಇಪ್ಪತ್ನಾಲ್ಕು ಗಂಟೆಯೂ ಬಸ್ ಸೌಲಭ್ಯ ಸಾಮಾನ್ಯವಾಗಿ ಎಲ್ಲಾ ಹಳ್ಳಿಗಳೂ ಇದರ ಫಲಾನುಭವಿಗಳು. ಅಲ್ಲಲ್ಲಿ ಲಂಚಕ್ಕಾಗಿ ಕೈಯೊಡ್ಡುವ ಪೋಲಿಸರಿದ್ದರೂ ಇತರ ರಾಜ್ಯಗಳಷ್ಟು ಖರಾಬಾಗಿ ಹೋಗಿಲ್ಲ. ಇವತ್ತಿಗೂ ನಾನು ಕೆ.ಎ.(ಕರ್ನಾಟಕ) ಎಂದಿರುವ ನನ್ನ ಕಾರನ್ನೇ ಓಡಿಸುತ್ತಿದ್ದೇನೆ. ಪರ ರಾಜ್ಯದವರೆಂದು ಎಲ್ಲಿಯೂ ಒಮ್ಮೆಯೂ ಕಿರಿಕ್ ಮಾಡಿಲ್ಲ. ನರ್ಮದೆಯ ಕಾಲುವೆಯಲ್ಲಿ ನೀರು ನಿಂತದ್ದೇ ಇಲ್ಲ. ಬರೆದಲ್ಲಿ ಮುಗಿಯುವುದಿಲ್ಲ. ಕಾರಣ ಅಪ್ಪಟ ಗಾಮಿತರು ಮಾತಾಡುವ ಆದಿವಾಸಿಗಳ ಮಧ್ಯೆ ಭಾಷೆ ಬಾರದ ನಾನು ನನ್ನ ತವರು ಜಿಲ್ಲೆಗಿಂತಲೂ ಮಿಗಿಲಾಗಿ ಸ್ವಚ್ಚಂದವಾಗಿ ವಿಹರಿಸಿದ್ದೇನೆ. ವೈರುದ್ಯಗಳೂ ಇವೆ. ಆದರೆ ತಕ್ಷಣಕ್ಕೆ ರಾಜ್ಯದಲ್ಲಿ ಅಸಹಾಯಕನಾಗಿ ನಿಲ್ಲುವಷ್ಟು ಅಲ್ಲ. ಇತರ ರಾಜ್ಯಗಳಲ್ಲಿ ಗಬ್ಬೆದ್ದಿರುವಷ್ಟ೦ತೂ ಖಂಡಿತಕ್ಕೂ ಅಲ್ಲ. ಇನ್ನು ಬೇಕಿದ್ದರೆ ನಾನು ಮಾಹಿತಿ ನೀಡಬಲ್ಲೆ. ಅಕಸ್ಮಾತ ನನ್ನ ಗ್ರಹಿಕೆ ತಪ್ಪಿದ್ದಲ್ಲಿ ತಾವು ನನಗೆ ತಿಳಿಸಬಹುದು. 
ಗ್ರಹಿಕೆ ತಪ್ಪಿದ್ದಲ್ಲಿ ತಾವು ನನಗೆ ತಿಳಿಸಬಹುದು. 
https://www.facebook.com/media/set/...Road of gujarat..
Photos: 6

7 comments:

 1. Sooooper. Neevu allige istondu sala yaake hoguttirutteeri.?
  Nanage tilidante neevu uttama vaijnanika barahagaararu.

  ReplyDelete
  Replies
  1. raghavendra hegde : ನಾನು ಕರ್ತವ್ಯ ನಿಮ್ಮಿತ್ತ ಕಳೆದೆರದೂವರೆ ವರ್ಷದಿಂದ ಗುಜರಾತಿನಲ್ಲೆ ಕಾರ್ಯನಿರ್ವಹಿಸುತ್ತಿದ್ದೆ. ಇತ್ತೀಚಿಗಷ್ಟೇ ಮತ್ತೆ ಕರ್ನಾಟಕಕ್ಕೇ ಹಿಂದಕ್ಕೆ ಬಂದಿದ್ದೇನೆ.ಆದರೆ ಅವಧಿ ಚಿಕ್ಕದಾದರೂ ಗುಜರಾತು ನನ್ನ ಮೇಲೆ ಬೀರಿದ ಪರಿಣಾಮ ದೊಡ್ಡದು.. ಬಹುಕಾಲದ ಬಿಡಿಸಲಾಗದ ಸ್ನೇಹ ವೃಂದ ಮತ್ತು ಆತ್ಮೀಯರು ಅಲ್ಲಿ ನನಗಿದ್ದಾರೆ. ಜೊತೆಗೆ ಯಾವತ್ತೂ ನನ್ನ ತಿರುಗಾಟದ ಹುಚ್ಚಿಗೆ ಉತ್ತಮ ಬೆಂಬಲ ಮತ್ತು ಇಂಬು ನೀಡಿದ ರಾಜ್ಯ ಗುಜರಾತು. ಅದಕ್ಕೆ ಕಾರಣ ಅಲ್ಲಿನ ಪರಿಸರ.. ಜನರು ಇರುವ ರೀತಿ ಮತ್ತು ಕಿರೀರಿಯಾಗದ ಸಾಮಾಜಿಕ ವರ್ತನೆ ಮತ್ತು ಸೌಲಭ್ಯಗಳ ಲಭ್ಯತೆ.. ( ಇನ್ನು ನಾನು ವೈಜ್ಞಾನಿಕ ಬರಹಗಾರನಾದರೂ ಇತರೆ ವಿಷಯಗಳ ಬಗೆಗಿನ ನನ್ನ ಹಸಿವು ಯಾವತ್ತೂ ತನಿದದ್ದಿಲ್ಲ.. ಧನ್ಯವಾದಗಳು )

   Delete
 2. Super...nimminda innastu maahitiyannu nireekShisutteve.kaarana alliye vaasavaagiddavaru neevu. haagaagi..

  ReplyDelete
  Replies
  1. ಖಂಡಿತಾ...ನೋಡದಿರುವುದನ್ನು ನಾನು ಬರಿಯುವುದಿಲ್ಲಾ. ಕಾಣದೆ ವಾದಕ್ಕಿಲಿಯುವುದಿಲ್ಲ.. ನಿಮ್ಮೊಂದಿಗೆ ಚರ್ಚೆ ಸ್ವಾರಸ್ಯಕರವಾಗಿತ್ತು.. ಒಮ್ಮೆ ನನ್ನೆಲ್ಲಾ ನೆನಪುಗಳನ್ನು ತಾಜಾಗೊಲಿಸಿದವು... ಧನ್ಯವಾದಗಳು.. ಖಂಡಿತಾ ಮಾಹಿತಿ ಮತ್ತೆ ತುಂಬುತ್ತೇನೆ... :)

   Delete