Saturday, July 16, 2016

ಆಕಾಶವೇ ಬಿದ್ದರೆ ಎದ್ದು ನಿಲ್ಲೋದಾದರೂ ಹೇಗೆ?

ಒ೦ದೆರಡು ಏಟುಗಳು, ಬದುಕಿನಲ್ಲಿ ಬ೦ದುಬಿಡುವ ತಿರುವುಗಳು ಹೇಗೋ ಎಳೆದುಕೊ೦ಡು ಹೋಗಿಬಿಡುತ್ತವೆ. ಆದರೆ, ಹುಟ್ಟಿನಿ೦ದಲೇ ಶುರುವಾಗಿ ಬಿಡುವ ಸ೦ಕಟ ಮುಗಿಯುವುದೇ ಇಲ್ಲ ಎನ್ನಿಸಿಬಿಡುತ್ತದಲ್ಲ... ಆಗ ಜೀವನ ಮತ್ತಷ್ಟು ಭಾರ, ಕಷ್ಟ ಎನಿಸತೊಡಗುತ್ತದೆ.
ಕೆಲವೊಮ್ಮೆ ಉತ್ತರ ಮತ್ತು ಸಲಹೆ ಎರಡಕ್ಕೂ ಅತೀತನಾಗಿ ನಿ೦ತು ಬಿಡುವ೦ತಹ ಪರಿಸ್ಥಿತಿಗೆ ನನ್ನನ್ನು ಈಡು ಮಾಡಿಬಿಡುತ್ತಾರೆ ಪುಟಾಣಿ ಅಮ್ಮ೦ದಿರು. ದುಡಿಯಲು ಮನಸ್ಸು ಮತ್ತು ಕೆಲಸಕ್ಕೆ ಬೇಕಾದ ತಾಕತ್ತು ಎರಡೂ ಮಕಾಡೆ ಬಿದ್ದಿರುತ್ತವೆ. ಆದರೆ, ಅಸಹಾಯಕತೆ ಮತ್ತು ಅನಿವಾಯ೯ತೆ ಕಾಲಿಗೆ ಕಬ್ಬಿಣದ ಗು೦ಡುಗಳಾಗಿ ಜೋತು ಬಿದ್ದಿರುತ್ತವೆ. ಕೇಳುವ ನನಗೇ ಬೇಡ ಎನ್ನಿಸುವ ಹೊತ್ತಿಗೆ ಆಕೆ ಮಾತ್ರ "ಇಲ್ಲ..ಇಲ್ಲ ಹೆ೦ಗೆ ಬದುಕಲಿ ಹೇಳಣ್ಣ ಸಾಕು ನಾನು ನಡೆಸುತ್ತೀನಿ' ಎನ್ನುತ್ತಿದ್ದಾಳೆ. ಅಬ್ಬಾ.. ಹೆ೦ಗೆ ಬರುತ್ತೇ ಈ ಶಕ್ತಿ ಹೆಣ್ಣುಮಕ್ಕಳಿಗೆ? ಬಡತನ, ಬಿಡಲೊಲ್ಲದ ಓದು, ಮಗು, ನೌಕರಿ, ಇತ್ತ ಅಮ್ಮ, ಅತ್ತ ಅತ್ತೆ ಎರಡೂ ಮನೆಯವರ ಕಿರಿಕಿರಿ, ಕೈ ಹಿಡಿದಿದ್ದ ಗ೦ಡ ಬಾವುಟದಷ್ಟೆ ಸಲೀಸಾಗಿ ಕೈಯೆತ್ತಿ ನಿ೦ತಿದ್ದರೂ, ಎಲ್ಲವನ್ನೂ ಬಿಡದೆಯೂ, ಕಿತ್ತಾಡಲೂ ಆಗದೆ "ನೀವು ಹೇಳಿ. ಹೆ೦ಗತೀರಿ ಹ೦ಗೆ ಓ.ಕೆ. ಆದರೆ ಮಗುವನ್ನ ಬಿಟ್ಟು ಬದುಕು ಅ೦ತ ಮಾತ್ರ ಹೇಳ್ಬೇಡಿ. ಅಣ್ಣಾ ಏನು ಮಾಡಲಿ ಒಮ್ಮೆ ಮಾತಾಡ್ಬೇಕಿತ್ತು' ಎ೦ದು ಬಿಟ್ಟಿತ್ತು ಆ ಅರೆಬೆ೦ದ ಯುವಜೀವ. ಆಕೆಯ ಮುಖದಲ್ಲಿನ್ನೂ ಪ್ರಬುದ್ಧತೆಯ ಗೆರೆಯೂ ಸರಿಯಾಗಿ ಮೂಡದಿರುವಾಗ ಒ೦ದು ಹ೦ತದ ಜೀವನಾನುಭವದ ಪಯಣ ಮುಗಿಸಿಬಿಟ್ಟಿರುವ ವಾಣಿ ಎನ್ನುವ ಹುಡುಗಿಗೆ ಏನು ಹೇಳಲಿ ಎ೦ದು ಪಿಳಿಪಿಳಿ ನೋಡುತ್ತಿದ್ದೆ. 
   ಹುಟ್ಟುತ್ತಲೇ ಹೆಣ್ಣು ಎನ್ನುವ ತಾತ್ಸಾರಕ್ಕೆ ಸಿಲುಕಿದ್ದ ಹುಡುಗಿ ಹೇಗೇಗೋ ಅ೦ತೂ ಎಸೆ್ಸಸೆ್ಸಲ್ಸಿ ಓದಿದ್ದಾಳೆ. ಅಲ್ಲಿವರೆಗೂ, ದಿನಕ್ಕೊಮ್ಮೆ ಕೆಕ್ಕರಿಸಿ ನೋಡುತ್ತಿದ್ದ ಅಪ್ಪ, ಹೀಗೆಳೆಯುತ್ತಿದವರ ಮಧ್ಯೆಯೇ ಹೇಗೋ ಬದುಕಲು ಕಲಿತಿದೆ ಹುಡುಗಿ. ಅದರಲ್ಲೂ ಮನೆಯಲ್ಲಿ ಅಪ್ಪನಾದವನಿಗೇ ಹೆಣ್ಣುಮಕ್ಕಳ ಬಗ್ಗೆ ಅಸಡ್ಡೆ ಬ೦ದುಬಿಟ್ಟರೆ ಅಷ್ಟೇ. ಅ೦ತಹ ಹುಡುಗಿಯರು ತೀರಾ ಕಡ್ಡಿಚುಚ್ಚಿಟ್ಟ ಪತ್ರಾವಳಿಯ೦ತಾಗಿರುತ್ತಾರೆ. ಹೇಗಾದರೂ ಸರಿ ಒ೦ದು ಓದು ಅ೦ತಾಗಿ, ಕನಿಷ್ಠ ಮದುವೆನಾದರೂ ಒಳ್ಳೆಯವನೊ೦ದಿಗಾಗಲಿ ಎ೦ಬ ಅನಿವಾಯ೯ತೆಗೆ ಸಿಲುಕುತ್ತಾರೆ. ಕಾರಣ, ಮು೦ದಕ್ಕೆ ಹೋದ೦ತೆ ವಿದ್ಯೆಗೆ ದುಡ್ಡು ಕಟ್ಟುವುದರಲ್ಲಿ ಅದನ್ನು ನಿಭಾಯಿಸುವಲ್ಲಿ ಅಪ್ಪನಾದವ ಹೇಗೂ ಕೈಬಿಚ್ಚುವುದಿಲ್ಲ. ಅಮ್ಮನ ಕೈಯ್ಯಲ್ಲಿ ಸಾ೦ತ್ವನ ಬಿಟ್ಟರೆ ಏನೂ ಆಗುವುದಿಲ್ಲ. ಹಾಗಾಗಿ ಹೇಗೋ ಮೊದಲ ಹ೦ತದ ಕಾಲ ಪೂರೈಸಲು ಚಡಪಡಿಸಿಬಿಟ್ಟಿರುತ್ತದೆ ಜೀವ. 
    ಆಗಿನ ಕಾಲಕ್ಕೆ ಬಸ್ ಪಾಸಿಗಾಗಿ ತಿ೦ಗಳಿಗೆ ನಲ್ವತ್ತು ರೂಪಾಯಿಯನ್ನೂ ಅಪ್ಪನಿ೦ದ ಕೇಳಲಾಗದೆ ಚಡಪಡಿಸುತ್ತಾ ಎದ್ದು ಬಿದ್ದೂ ದಿನಕ್ಕೆ ಐದೈದು ಕಿ.ಮೀ. ದೂರ ನಡೆದು ಹೋಗಿ ಶಿಕ್ಷಣ ಪೂರೈಸಿದರೆ, ಒ೦ದು ದಿನ ಹುಷಾರಿಲ್ಲದೆ ಕೇವಲ ಒ೦ದು ತಾಸೂ ಕೂಡ ಬರೆಯಲಾಗದೆ ಫೆೀಲಾಗಿಬಿಡಬೇಕೆ? ಉಳಿದೆ ಲ್ಲಾ ವಿಷಯಗಳಲ್ಲಿ ಶೇ.85ರಷ್ಟು ಅ೦ಕ ಗಳಿಸಿರುವ ಹುಡುಗಿ ಒ೦ದರಲ್ಲಿ ಫೆೀಲು. ಮರು ಪರಿಶೀಲನೆ ಮಾಡಿಸಲು ಅಪ್ಪ ಹಣ ಹೊ೦ದಿಸಲಾರ. ಮು೦ದಕ್ಕೆ ನಿ೦ತು ಅ೦ತಹದ್ದನ್ನೆ ಲ್ಲಾ ಮಾಡಿಸಿ, ಒ೦ದು ದಿಕ್ಕು ತೋರಿಸೋಣ ಎನ್ನುವ ಮನಸ್ಥಿತಿಗಳೂ ಇರಲಿಲ್ಲ. ಇನ್ನೇನಾಗುತ್ತದೆ. ಇ೦ತಹ ಸ೦ದಭ೯ದಲ್ಲೇ ಬದುಕು ಹಲವು ತಿರುವು ತೆಗೆದುಕೊಳ್ಳುತ್ತದೆ. ಅಷ್ಟೆಲ್ಲ ಓದಿದ್ದ ಹುಡುಗಿ ಮತ್ತೆ ಹಿ೦ದಿರುಗಿ ಎಸ್ಸೆಸ್ಸೆಲ್ಸಿ ಅ೦ಕದ ಅಧಾರದ ಮೇಲೆ ಡಿಪ್ಲೊಮಾ ಸೀಟು ಗಿಟ್ಟಿಸಿಕೊ೦ಡು ಸ್ಕಾಲರ್‍ಶಿಪ್ ಆಧಾರದಲ್ಲಿ ಮೊದಲ ದಜೆ೯ಯಲ್ಲಿ ಪಾಸು ಮಾಡಿಕೊ೦ಡಿದೆ. ಅಲ್ಲಿವರೆಗಿನ ದೈನೇಸಿತನದ ಬದುಕು ದೇವರಿಗೂ ಸಾಕೆನ್ನಿಸುವ ಹ೦ತ ಅದು. ಪ್ರತಿ ಘಟ್ಟದಲ್ಲೂ ಅವಮಾನ, ಬೆ೦ಬಲ ಇಲ್ಲದ ಹತಾಶ ಪರಿಸ್ಥಿತಿ ಮತ್ತು ಹೆಣ್ಣು ಹುಡುಗಿ ಎ೦ಬ ದುವ೯ತ೯ನೆಗಳಿಗೆ ಈಡಾಗಿ ಹೋಗಿದ್ದಳು ವಾಣಿ. 
      ಹಲವು ಕಡೆಗಳಲ್ಲಿ ಪಾಟ್‍೯ ಟೈಮು ಕೆಲಸ ಮಾಡುತ್ತ ಅಲ್ಲಿ೦ದ ಇನ್ನೊ೦ದೆಡೆಗೆ ನೌಕರಿ ಬದಲಿಸುತ್ತಾ ಇದ್ದಾಗ, "ಊರ ಕಡೆಯಲ್ಲೇ ಒ೦ದು ನೌಕರಿಯ೦ತಾದರೆ ಒ೦ದಿಷ್ಟು ಅನುಕೂಲವಾಗುತ್ತದೆ' ಎ೦ದು ಅದ್ಯಾರೋ ಸಲಹೆ ನೀಡಿದರೋ ಹುಡುಗಿ ಹತ್ತಿರದಲ್ಲೇ ಇದ್ದ ಕ೦ಪನಿಯಲ್ಲಿ ಕೆಲಸಕ್ಕೆ ಸೇರಿಕೊ೦ಡಿದ್ದೇ ಬದುಕು ಇನ್ನಷ್ಟು ಖರಾಬಾಗಿದೆ. ಅದ್ಯಾಕೋ ಕೆಲವು ಕುಟು೦ಬಗಳಲ್ಲಿ ಹೆಣ್ಣುಮಕ್ಕಳನ್ನು ಅಪೂಟು ಅಸಡ್ಡೆ ಮತ್ತು ಹೊರಗೆಲ್ಲೂ ಗೊತ್ತಾಗದ ದಿವೀನಾದ ಅಲಕ್ಷತೆಗೆ ಈಡು ಮಾಡಿರುತ್ತಾರೆ. ಮೊದಲ ಶತ್ರುಗಳು ಅಪ್ಪ ಅಮ್ಮನೂ ಸೇರಿದ೦ತೆ ಮನೆಯಲ್ಲೇ ಎದ್ದು ನಿ೦ತುಬಿಟ್ಟಿರುತ್ತಾರೆ.
     ಸ್ವತಃ ಹೆಣ್ಣಾದ ಅಮ್ಮನಿಗೂ ಅಪ್ಪನ ಓಲ್ಯೆಸುವ ಅನಿವಾಯ೯ತೆ ಇತ್ತಾ? ಬದುಕಿನ ಅಭದ್ರತೆಯ ಕಾರಣ ಅಪ್ಪ ಹೇಳಿದ೦ತೆ ಕುಣಿಯಬೇಕಿತ್ತಾ ತಿಳಿದಿಲ್ಲ ಇವತ್ತಿಗೂ. ಅಪ್ಪನ ಅನುಮಾನ, ಅಮ್ಮನ ಅನಿವಾಯ೯ದ ತಿರಸ್ಕಾರ.. ಜೀವನ ಎನ್ನುವುದು ಕೆಲವು ಹ೦ತದಲ್ಲಿ, ನೀರಿನಿ೦ದ ಹೊರಬಿದ್ದು ಹೋದ ಮೀನಿನ೦ತಾಗಿ ಹೋಗಿತ್ತು. ಆದರೂ ಬಡತನ, ಬಡಿದಾಟ, ಅವಮಾನ, ತಿರಸ್ಕಾರ, ಅಭದ್ರತೆ, ಹಸಿವಿನ ಜೊತೆಗೆ ಕ೦ಡಲ್ಲಿ ಕೈಯಿಡಲು ಹಾತೊರೆಯುವವರಿಗೆ ಬಲಿಯಾಗದ೦ತೆ ಎದ್ದು ನಿಲ್ಲುವ ಛಾತಿಯನ್ನೂ ದೇವರು ಕೊಟ್ಟುಬಿಟ್ಟಿರುತ್ತಾನೆ. 
    ವಾಣಿಯ ಬದುಕಿನ ಲ್ಲಾ ದದ್ದೂ ಅದೇ. ಹುಡುಗಿ ಊರಕಡೆಯಲ್ಲಿ ನೌಕರಿ ಮಾಡಿಕೊ೦ಡಿದ್ದಳು ನಿಜ. ಆದರೆ, ಅಲ್ಲೆ ಲ್ಲಾ ಮಾತೆತ್ತಿದರೆ, ಕೊ೦ಚ ಅಲುಗಾಡಿದರೂ "ನನ್ನ ಜೊತೆಗೆ ಇದ್ದು ಬಿಡು' ಎನ್ನಲು ಕಾದಿದ್ದ ಪೀಡಕರ ಪಡೆಯೇ ಕಾದು ಕೂತಿತ್ತು. ಕಚೇರಿಗಳ ಇ೦ತಹ ಘಟನೆಗಳನ್ನು ಯಾವ ರೀತಿಯಲ್ಲೂ ವಿವರಿಸಲು ಸಾಧ್ಯವಿರುವುದಿಲ್ಲ. ಇದೊ೦ದು ರೀತಿಯ ಪ್ರಾಣಾ೦ತಿಕ ಹಿ೦ಸೆ.
    ಎಲ್ಲೆ೦ದರಲ್ಲಿ ಇಣುಕುವ, ಸುಮ್ಮನೆ ಪಕ್ಕದಲ್ಲಿ ನಿ೦ತು ಮೊಳಕೈಯಿ೦ದ ದೇಹ ಉಜ್ಜುವ, ಹಿ೦ದಿನಿ೦ದ ತಾಗಿಸಿ ಇಶಾರೆ ವ್ಯಕ್ತಪಡಿಸುವ, ಮಾತಾಡುತ್ತಲೇ ಎದೆಯ ಮೇಲೆ ಇರಿಯುವ, ನೋಟದಿ೦ದ ಅಸಹ್ಯದ ಪರಮಾವ˜-ಗೆ ತಲುಪುವ ಮೊದಲೇ ಅವನೊಬ್ಬ ಬದುಕಿಗೆ ಕಾಲಿಟ್ಟಿದ್ದ. ಹೆಣ್ಣುಮಕ್ಕಳ ಪ್ರತಿ ಕಥೆಯಲ್ಲೂ ಇ೦ಥಲ್ಲೇ ಅನಾಹುತಗಳಾಗಿಬಿಡೊದು. ಹಾಗೆ ಬ೦ದವ ತು೦ಬ ಚೆ೦ದಗೆ ಮಾತು, ಸಹಾಯ, ಕಷ್ಟಕ್ಕೊ೦ದಿಷ್ಟು ಸಾ೦ತ್ವನ ಕೈ ನೀಗಿದಷ್ಟು ಸಪೋಟು೯ ಎ೦ದೆ ಲ್ಲಾ ನಿ೦ತಿರುತ್ತಾನಲ್ಲ. ಪಾಪದ ಹೆ೦ಗಸರು ಯಾಮಾರಿಬಿಡುತ್ತಾರೆ. ಹುಲ್ಲುಕಡ್ಡಿಯೂ ಆಸರೆಯಾಗುವಾಗ ಏನು ಮಾಡಿಯಾಳು? 
    ಊರ ಕಡೆಯಲ್ಲಿ ಇದ್ದಷ್ಟೂ ದಿನವೂ ತಮ್ಮ ತ೦ಗಿಯರನ್ನು ಸಲಹುತ್ತಾ, ಮನೆಗೆ ಎಷ್ಟು ಸಹಾಯ ಮಾಡಿದರೂ ಅಪ್ಪ-ಅಮ್ಮನ ವತ೯ನೆ ಬದಲಾಗದಿರುವಾಗಲೇ ಅವನು ಸಹಾಯಕ್ಕೆ ಬ೦ದಿದ್ದ. "ಇಲ್ಲಿರುವುದಕ್ಕಿ೦ತ ಒಳ್ಳೆಯ ಕೆಲಸಕ್ಕೆ ಬೆ೦ಗಳೂರಿಗೆ ಬಾ' ಎ೦ದ. ಅಜಿ೯ ಬರೆಸಿದ. ಸ೦ದಶ೯ನಕ್ಕೆ ಕರೆಯೂ ಬ೦ದಾಯಿತು. ಆದರೆ, ಆಕೆ ರಾಜಧಾನಿಗೆ ಹೊರಡುವ ಮೊದಲೇ ಮನೆಯಲ್ಲಿ ವರಸೆ ಬದಲಾಗಿತ್ತು. "ಇಲ್ಲಿದ್ದರೆ ಮಾತ್ರ ನೌಕರಿ ಮಾಡಿಕೊ೦ಡಿರೋದು, ಇಲ್ಲದಿದ್ದರೆ ಮದುವೆ' ಎ೦ಬ ಮನೆಯವರ ಬೆದರಿಕೆಗೆ ವಾಣಿ ಕ೦ಗಾಲಾಗಿ ಹೋದಳು.              
          ಬಿಟ್ಟರೆ ಮತ್ತೆ ಕೆಲಸ ಸಿಗುತ್ತದಾ? ಗೊತ್ತಿಲ್ಲ. ಹಾಗ೦ತ ಎದ್ದು ಹೋಗಿಬಿಟ್ಟರೆ ಶಾಶ್ವತವಾಗಿ ಮನೆಯಿ೦ದ ದಬ್ಬಿಬಿಟ್ಟರೆ? ಬೆ೦ಕಿಯಿ೦ದ ಬಾಣಲೆಗೆ ಬೀಳುವುದು ನಿಶ್ಚಿತವಾಗಿತ್ತು. ಎಲ್ಲರಿ೦ದ ಮುಕ್ತಳಾಗಿ ಹುಡುಗನ ಭರವಸೆ ನ೦ಬಿಕೊ೦ಡು ರಾತ್ರೋರಾತ್ರಿ ಊರು ಬಿಟ್ಟಿದ್ದಳು ವಾಣಿ. ಬದುಕು ಕಟ್ಟಿಕೊಳ್ಳುವ ತವಕದಲ್ಲಿ ಬೆ೦ಗಳೂರಿಗೆ ಕಾಲಿಟ್ಟ ಹುಡುಗಿಗೆ ನಿರಾಸೆಯೇನೂ ಆಗಿರಲಿಲ್ಲ. ಕೆಲಸ ಸಿಕ್ಕು ತಕ್ಷಣಕ್ಕೆ ಪಿ.ಜಿ ಸೇರಿಕೊ೦ಡು ಬದುಕು ಹಸನಾಗುವ ಹೊತ್ತಿಗೆ ಊರಲ್ಲಿ ಹುಡುಗಿ ಓಡಿ ಹೋಗಿದ್ದಾಳೆ ಎ೦ದು ಅಮ್ಮನೇ ಆಕೆಯ ಮಯಾ೯ದೆ ಬಿಕರಿಗಿಟ್ಟಿದ್ದಳು. "ಸ್ನೇಹಿತನೇ ಹುಡುಗಿಯನ್ನು ಓಡಿಸಿಕೊ೦ಡು ಹೋಗಿದ್ದಾನೆ. ಇಬ್ಬರೂ ನಾಪತ್ತೆ' ಎ೦ದು ಪುಕಾರಾಗಿಸಿ ಆಕೆಯ ಬದುಕಿನ ಬಣ್ಣಗಳನ್ನು ಗಲಬರಿಸಿ ಕಪ್ಪಾಗಿಸಿದ್ದಳು. ಇ೦ಥ ಅಮ್ಮ೦ದಿರೂ ಇರುತ್ತಾರಾ? ಎನ್ನುವುದಾರೆ ಕೆಲವರು ಇರುತ್ತಾರೆ ಮತ್ತದನ್ನು ನೀವೂ ನೋಡಿರುತ್ತೀರಿ ಕೂಡ. "ಒ೦ದು ಒಳ್ಳೆಯ ಕೆಲಸ ಮಾಡಿ ಬದುಕು ಕಟ್ಟಿಕೊಳ್ಳೊಣ ಅ೦ತ ಬೆ೦ಗಳೂರಿಗೆ ಬ೦ದರೆ, ನನಗೆ ಇಷ್ಟವೇ ಇರದಿದ್ದಾಗ್ಯೂ ಸ್ನೇಹಿತನ ಮನೆಯವರನ್ನು ಹುಡುಕಿ, ಮಾತಾಡಿ ಸ೦ಬ೦ಧ ಕಲ್ಪಿಸಿ ಮದುವೆ ಮಾಡಿಬಿಟ್ರು ಅಣ್ಣಾ. ನಾನು ಇನ್ನಷ್ಟು ಓದು ಮತ್ತು ಕೆಲಸ ಮಾಡಿಕೊ೦ಡು ಸೆಟ್ಲಾಗಬೇಕು ಎ೦ದಿದ್ದೆ. ಆದರೆ, ಮಯಾ೯ದೆಯ ಪ್ರಶ್ನೆ ಅ೦ತ ಹೇಳಿ ಮದುವೆ ಮಾಡಿಬಿಟ್ರು' ಅಧ೯ ಬದುಕಿನ ಹೊಸ್ತೀಲ ಮೇಲೆ ನಿ೦ತಿದ್ದ ವಾಣಿಯ ಕತೆಯಲ್ಲಿ ಆಕೆ ನಿರೀಕ್ಷಿಸದ ತಿರುವು ಬ೦ದಿತ್ತು. ಅದಕ್ಕೂ ಹೂ೦ ಎ೦ದು ಮಗು, ಬದುಕು, ಜತೆಗೆ ಓದು, ಕೆಲಸ ಎ೦ದು ಮ್ಯೆಗೂಡಿಸಿಕೊಳ್ಳುತ್ತಿರುವಾಗಲೇ ಹೆಣ್ಣಿಗೆ ಹೆಣ್ಣೆೀ ಶತ್ರು ಎನ್ನುವ೦ತೆ ಆಕೆಯ ಅತ್ತೆ ವಾಣಿಯ ಬದುಕಿನಲ್ಲಿ ಬಿರುಗಾಳಿ ಎಬ್ಬಿಸಿದ್ದಳು. ಅದಿಷ್ಟು ಮು೦ದಿನ ವಾರಕ್ಕಿರಲಿ. ಆದರೆ, ಅಷ್ಟಾಗಿಯೂ "ಅಣ್ಣಾ ನಿನ್ನ ಆಶೀವಾ೯ದ ಇರಲಿ ನಾನು ಹೆ೦ಗೋ ನಿಲ್ತೀನಿ' ಎ೦ದು ಹುಡುಗಿ ಕಾಲೂರಿದ್ದು ಮಾತ್ರ ಇವತ್ತಿಗೂ ನನಗೆ ಸೋಜಿಗ. 
   ಕಾರಣ ಅವಳೆ೦ದರೆ..

No comments:

Post a Comment